ಅಂಟಣಿಕ (Agglutinin) ಆರೋಗ್ಯವಾಗಿರುವವರಲ್ಲೂ ಪ್ರಾಣಿಗಳಲ್ಲೂ ರೋಗದೆದುರು ಪ್ರತಿರಕ್ಷಣೆ (ಇಮ್ಯುನೈಸೇಷನ್) ಪಡೆದಿರುವವರಲ್ಲೂ ಇರುವ ರೋಧವಸ್ತುವಿನ (ಆಂಟಿಬಾಡಿ) ಮಾದರಿ (ಅಗ್ಲೂಟಿನಿನ್). ಇವುಗಳ ಎದುರು ವರ್ತಿಸುವ ಏಕಾಣುಜೀವಿಗಳು, ಮುಂಜೀವಿಗಳು (ಪ್ರೋಟೊಜೋವ), ಕೆಂಪು ರಕ್ತಕಣಗಳಂಥ ಮೇಲ್ಮೈಯಲ್ಲಿ ವಿಶಿಷ್ಟ ರೋಧಜನಕಗಳಿರುವ (ಆಂಟಿಜೆನ್), ಕಣಗಳ ಒಂದೇ ಸಮನಾಗಿರುವ ತೂಗಟ್ಟುಗಳೊಂದಿಗೆ (ಸಸ್ಪೆನ್ಷನ್) ಸೇರಿಸಿದಾಗ, ತೂಗಟ್ಟಿಸಿದ ವಸ್ತುಗಳು ಒಂದಕ್ಕೊಂದು ಅಂಟಿಕೊಂಡು ಗರಣೆಗಟ್ಟಿ ತಳಕ್ಕೆ ಬೀಳುವುದರಿಂದ ತೂಗಟ್ಟಿಸುವ ಸಾರಗುಂದಕ (ಡೈಲ್ಯುಯೆಂಟ್) ತಿಳಿದೇರುವುದು. ಅಂಟಣಿಕದ (ಅಗ್ಲೂಟಿನೇಷನ್) ಈ ವರ್ತನೆ ರೋಧಜನಕ ರೋಧವಸ್ತು ನಡುವಣ ಮಾದರಿಯಾದ ಪ್ರತಿಕ್ರಿಯೆ. ಇದು ಒಂದಕ್ಕೊಂದು ತೀರ ವಿಶಿಷ್ಟ. ಇದನ್ನು ಹಿಮ್ಮರಳಿಸಬಹುದು. ಎದುರು ವರ್ತಿಸುವ ಕಿರಿಯ ಗುಂಪುಗಳು ಒಂದೊಂದರ ಮೇಲ್ಮೈಯಲ್ಲೂ ಇರುತ್ತವೆ. ಇದರಿಂದಲೇ ಸರಿಯೆನ್ನಿಸುವ ಸಮಯಗಳಲ್ಲಿ ಒಂದು ಅಂಟಣಿಕಪಡಲಿ (ಪ್ರೆಸಿಪಿಟಿನ್) ಇಲ್ಲವೇ ಬೇರೆ ರೋಧವಸ್ತುವಾಗಿ ವರ್ತಿಸಬಹುದು.

ವೈದ್ಯಕೀಯ ಪ್ರಸ್ತುತತೆಸಂಪಾದಿಸಿ

ಸೋಂಕು ತಗುಲಿಯೋ ಬೇರೆ ಪ್ರತಿರಕ್ಷಣಾವಿಧಾನಗಳಿಂದಲೋ ರಕ್ಷಣೆ ಪಡೆದವರಲ್ಲಿ ಒಂದು ಗೊತ್ತಾದ ರೋಧವಸ್ತು ಹೆಚ್ಚಿರುವುದು. ಈ ಕಾರಣದಿಂದಲೇ ರಸಿಕೆಯಲ್ಲಿ ಅಂಟಣಿಕಗಳು ಇರುವುದನ್ನು ಗುರುತಿಸಲು ಅಂಟಣಿಕವನ್ನು ಬಳಸುವುದು. ಹೀಗೆ ವಿಶಿಷ್ಟ ರೋಧಜನಕದಿಂದಾದ ಪ್ರತಿರಕ್ಷಣೆಯನ್ನೋ ಇಂದಿನ ಇಲ್ಲವೇ ಹಿಂದಿದ್ದ ಸೋಂಕನ್ನು ಗುರುತಿಸಲೂ ಇದರಿಂದ ಅನುಕೂಲ. ಇದರ ತಿರುವುಮುರುವಾಗಿ, ಗೊತ್ತಾದ ರೋಧಜನಕಗಳ ಎದುರಿನ ಅಂಟಣಿಕೆಗಳಿರುವ ರಸಿಕೆಗಳನ್ನು ಕೂಡ, ಗೊತ್ತಾದ ರೋಧಜನಕವಿರುವ ಬೇರೆ ಬೇರೆ ಏಕಾಣುಜೀವಿಗಳು ಕೆಂಪು ರಕ್ತಕಣಗಳು ಮತ್ತಿತರ ವಸ್ತುಗಳನ್ನು ಗುರುತಿಸಲೂ ಬಳಸಬಹುದು.

ರಕ್ತದ ವರ್ಗೀಕರಣಸಂಪಾದಿಸಿ

ಕೆಂಪು ಕಣಗಳನ್ನು ಗರಣೆಗಟ್ಟಿಸುವ ಸರಿರಕ್ತಂಟಣಿಕೆಗಳು (ಐಸೊಹೀಮಗ್ಲೂಟಿನಿನ್) ಮಾನವನಲ್ಲಿವೆ. ಇವುಗಳಲ್ಲಿ ಎರಡು ರೋಧಜನಕಗಳ ಅನುಸಾರವಾಗಿ ರಕ್ತದ ನಾಲ್ಕು ಗುಂಪುಗಳು ವಿಂಗಡವಾಗಿವೆ : ಕೆಂಪು ರಕ್ತಕಣಗಳಲ್ಲಿರುವ A ಮತ್ತು B ; ರಕ್ತದ ರಸಿಕೆಯಲ್ಲಿರುವ ಎರಡು ಸರಿರಕ್ತಂಟಣಿಕಗಳಾದ A- ರೋಧಕ, B- ರೋಧಕ, ಇದರಂತೆ. ಮಾನವನಲ್ಲಿ ‘O’ ಗುಂಪಿನಲ್ಲಿ, ಇವೆರಡು ರೋಧಜನಕಗಳೂ ಇರದೆ, ಎರಡು ಅಂಟಣಿಕಗಳೂ ಇರುತ್ತವೆ ; A ಗುಂಪಿನಲ್ಲಿ, A - ರೋಧಜನಕ B-ರೋಧಕ ಅಂಟಣಿಕಗಳು ಇರುವುವು ; ಹಾಗೇ B ಗುಂಪಿನಲ್ಲಿ B-ರೋಧಜನಕವೂ B- ರೋಧಕ ಅಂಟಣಿಕವೂ ಇರುತ್ತವೆ; A B ಗುಂಪಿನಲ್ಲಾದರೋ ಎರಡು ರೋಧಜನಕಗಳೂ ಇದ್ದು ಯಾವ ಅಂಟಣಿಕವೂ ಇರದು. ಹುಟ್ಟುತ್ತಲೇ ಇವೆಲ್ಲ ಮೈಯಲ್ಲಿ ಇರುವುದರಿಂದ ಇವು ವಿಶಿಷ್ಟ ದರ್ಶಕಗಳು. ಇವೇ ಅಲ್ಲದೆ, ಮಾನವನ ರಕ್ತದ ಕೆಂಪು ಕಣಗಳಲ್ಲಿ ಆ,ಒಓ,ಖho ನಂಥ ಇನ್ನಷ್ಟು ರೋಧಜನಕಗಳಿರುವುದು ಗೊತ್ತಾಗಿದೆ. ಹಾಗೆ ನೋಡಿದರೆ, ಇಂದು ಗೊತ್ತಿರುವ ರೋಧಜನಕಗಳ ಬೇರೆ ಬೇರೆ ಜೋಡಿಗಳಿಂದ ಕೋಟಿಗಟ್ಟಳೆ ರಕ್ತದ ಗುಂಪುಗಳು ಆಗಬಹುದು.

ಉಪಯೋಗಗಳುಸಂಪಾದಿಸಿ

ಮಾನವತಳಿಶಾಸ್ತ್ರ, ನ್ಯಾಯ ವೈದ್ಯ, ರಕ್ತಪುರಣೆ, ಹಸುಗೂಸಿನ ರಕ್ತಕಣಲಯ (ಹೇಮೊಲಿಟಿಕ್) ರೋಗಗಳ ನಿಟ್ಟಿನಿಂದ ರಕ್ತದ ಗುಂಪುಗಳು ಮುಖ್ಯ. ಕೂಸು ಹೆತ್ತವರನ್ನು ಗುರುತಿಸಲೂ ಅಪರಾಧದಲ್ಲಿ ರಕ್ತಕಲೆ ಯಾರದೆಂದು ನಿರ್ಧರಿಸಲೂ ರಕ್ತದ ಗುಂಪುಗಳು ನೆರವಾಗುತ್ತವೆ. ಒಂದಕ್ಕೊಂದು ಹೊಂದಿಕೊಳ್ಳದ ರಕ್ತಗಳನ್ನು ಕೂಡಿಸುವುದರಿಂದ, ರಕ್ತನಾಳದೊಳಗೆ ಅಂಟಣಿಸುವುದರಿಂದಲೇ ಯಾರಿಗಾದರೂ ರಕ್ತ ಕೊಡಲು, ರಕ್ತದಾನಿಯ ಅಲ್ಲದೆ ಪಡೆದವನ ರಕ್ತದ ಗುಂಪುಗಳನ್ನೂ ಮೊದಲು ಕಂಡುಕೊಳ್ಳಲೇಬೇಕು. ಹಸುಗೂಸಿನಲ್ಲಿ ಕಾಣಬರುವ ರಕ್ತಕೊರೆಗೆ ಬಹುಮಟ್ಟಿನ ಕಾರಣ Rho ಇಲ್ಲವೇ D ಎಂಬ ರೋಧಜನಕವೇ. ಇದು ಬಲು ಅಪರೂಪವಾದರೂ ಮಾರಕ ರೋಗ. ತಂದೆಯಿಂದ ಬಂದು ಕೂಸಿನಲ್ಲಿರುವ ರೋಧಜನಕಗಳೊಂದಿಗೆ, ತಾಯಲ್ಲಿ ತಯಾರಾಗುವ ರೋಧವಸ್ತುಗಳು ಎದುರು ವರ್ತಿಸುವುದೇ ಈ ರೋಗದ ಕಾರಣ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅಂಟಣಿಕ&oldid=800926" ಇಂದ ಪಡೆಯಲ್ಪಟ್ಟಿದೆ