ಹ್ಯಾರಿ ಮಾರ್ಟಿನ್ ಸನ್

(೧೯೦೪-೧೯೭೮)

ಬಾಲ್ಯ ಬದಲಾಯಿಸಿ

'ಹ್ಯಾರಿ ಮಾರ್ಟಿನ್ ಸನ್,'(Harry Edmund Martinson),' ಬಹಳ ಕಷ್ಟದ ಬಾಲ್ಯದ ದಿನಗಳನ್ನು ಕಳೆದವರು. ಅವರು ಸ್ವೀಡನ್ ನ 'ಖ್ಯಾತ ಶ್ರಮಜೀವಿ ವರ್ಗದ ಲೇಖಕ' ರಾಗಿ ಬೆಳೆದುಬಂದ ಪರಿ ಅನನ್ಯ. 'ಹ್ಯಾರಿ ಮಾರ್ಟಿನ್ ಸನ್, ರವರನ್ನು 'ಅಮೆರಿಕದ ಜಾಕ್ ಲಂಡನ್', ಮತ್ತು 'ರಷ್ಯಾದ ಮಾಕ್ಸಿಮ್ ಗೋರ್ಕಿ' ಯವರೊಂದಿಗೆ ಹೋಲಿಸಲಾಗುತ್ತದೆ. ವಿವಿಧ ಶ್ರಮದಾಯಕ ಉದ್ಯೋಗಗಳನ್ನು ಮಾಡುತ್ತಿದ್ದರು. 'ಹ್ಯಾರಿ ಮಾರ್ಟಿನ್ ಸನ್' ರ ಕಾದಂಬರಿಯ ನಾಯಕರುಗಳು, ಅಲೆಮಾರಿಗಳು ಮತ್ತು ಕಷ್ಟಜೀವಿಗಳು. ತಮ್ಮ ಜೀವನದ ಅವಧಿಯಲ್ಲಿ ಕೆಲಕಾಲ 'ಹಡಗಿನ ಕಲಾಸಿ'ಯಾಗಿ ಅಲೆದಿದ್ದ 'ಹ್ಯಾರಿ ಮಾರ್ಟಿನ್ ಸನ್' ರು, ಸ್ವೀಡನ್ ಗೆ ಬಂದು ನೆಲೆನಿಂತಮೇಲೆ ಬರೆಯಲು ಆರಂಭಿಸಿದರು.

ಮದುವೆ ಬದಲಾಯಿಸಿ

'ಹ್ಯಾರಿ ಮಾರ್ಟಿನ್ ಸನ್,' ಗಿಂತ ೧೪ ವರ್ಷ ಹಿರಿಯಪ್ರಾಯದ 'ಮಹಿಳಾ-ಲೇಖಕಿ'ಯನ್ನು ಮದುವೆಯಾದರು. ಇದರಿಂದ ಅವರ ಬರವಣಿಗೆ ಪ್ರೇರಣೆ ದೊರೆಯಿತು. ಮುಂದೆ 'ಪದ್ಯ-ಗದ್ಯ' ಎರಡೂ ಪ್ರಕಾರಗಳಲ್ಲಿಬಹಳಷ್ಟು 'ಕೃತಿರಚನೆ'ಯನ್ನು ಮಾಡಿದರು. 'ಸ್ವೀಡಿಷ್ ಅಕಾಡೆಮಿಯ ಸದಸ್ಯ' ರೂ ಆಗಿದ್ದ 'ಮಾರ್ಟಿನ್ ಸನ್' ರವರಿಗೆ ಅದೇ ಕಾಲಘಟ್ಟದಲ್ಲಿ ದೊರೆತ 'ನೋಬೆಲ್ ಪಾರಿತೋಷಕ'ವನ್ನು ಮತ್ತೊಬ್ಬ ಸ್ವೀಡಿಷ್ ಬರಹಗಾರ, 'ಐವಿಂಡ್ ಜಾನ್ಸನ್' ರೊಡನೆ ಹಂಚಿಕೊಂಡರು.