ಹೊಳೆತುಂಬೆ

ಸಸ್ಯಗಳ ಒಂದು ಪ್ರಭೇದ
ಹೊಳೆತುಂಬೆ
ಹೊಳೆತುಂಬೆ ಹೂ
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
C. religiosa
Binomial name
ಕ್ರಾಟೆವಾ ರೆಲಿಜಿಯೋಸ

ಹೊಳೆತುಂಬೆ(ಆದಿರಾಜ,ನೆರ್ವಾಳ,ಹೊಳೆನೆಕ್ಕಿ)ಮುಂತಾದ ಹೆಸರಿನಿಂದ ಕರೆಯಲ್ಪಡುತ್ತದೆ.ಜಪಾನ್,ಆಸ್ಟ್ರೇಲಿಯಹಾಗೂ ದಕ್ಷಿಣ ಏಷಿಯಾಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಸಸ್ಯಶಾಸ್ತ್ರೀಯ ವರ್ಗೀಕರಣ ಬದಲಾಯಿಸಿ

ಇದು ಕಪ್ಪರಾಸಿಕ(Capparaceae)ಕುಟುಂಬಕ್ಕೆ ಸೇರಿದ್ದು,ಕ್ರಾಟೆವಾ ರೆಲಿಜಿಯೋಸ (Crataeva Religiosa)ಎಂದು ಸಸ್ಯಶಾಸ್ತ್ರೀಯ ಹೆಸರಿದೆ. ತುಳು ಭಾಷೆಯಲ್ಲಿ ತುದೆಮದರಂಗಿಎಂದು ಹೆಸರು.

ಸಸ್ಯದ ಗುಣಲಕ್ಷಣಗಳು ಬದಲಾಯಿಸಿ

ಸಣ್ಣಪ್ರಮಾಣದ ಮರ.ಉದ್ದನೆಯ ತೊಟ್ಟಿನ ಎಲೆಗಳಿವೆ.ಬೂದು ಬಣ್ಣದ ತೊಗಟೆ.ಬಿಳಿ ಮಾಸಲು ಹಳದಿ ಬಣ್ಣದ ಹೂ ಗಳು ಎಪ್ರಿಲ್-ಮೇ ತಿಂಗಳಲ್ಲಿ ಕಂಡು ಬರುತ್ತದೆ.ಹೆಚ್ಚಾಗಿ ನದಿ,ತೊರೆ ಹಾಗೂಹಳ್ಳಗಳ ದಡಗಳಲ್ಲಿ ಬೆಳೆಯುತ್ತದೆ.

ಉಪಯೋಗಗಳು ಬದಲಾಯಿಸಿ

ದಾರುವು ಮೃದುವಾಗಿದ್ದು,ಸಮಾನ ಕಣರಚನೆ ಹೊಂದಿರುವುದರಿಂದ ಬಾಚಣಿಗೆ,ತಬಲಾ ಮುಂತಾದವುಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ತೊಗಟೆ,ಬೇರು,ಎಲೆ ಮೂತ್ರಾಂಗ ಸಂಬಂಧವಾದ ರೋಗಗಳಿಗೆ ಔಷಧಿಯಾಗಿ ಬಳಸಲ್ಪಡುತ್ತದೆ.

ಆಧಾರ ಗ್ರಂಥಗಳು ಬದಲಾಯಿಸಿ

  • 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.