Jasminum arborescens
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ಆಸ್ಟರಿಡ್ಸ್
ಗಣ: ಲ್ಯಾಮಿಯೇಲ್ಸ್
ಕುಟುಂಬ: ಓಲಿಯೇಸೀ
ಕುಲ: ಜಾಸ್ಮಿನಮ್
ಪ್ರಜಾತಿ:
J. arborescens
Binomial name
Jasminum arborescens

ಹಂಬು ಮಲ್ಲಿಗೆ (ಟ್ರೀ ಜಾಸ್ಮಿನ್) ಜಾಸ್ಮಿನಮ್ ಆರ್ಬಾರೆಸೆನ್ಸ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿರುವ ಒಂದು ಹೂಬಿಡುವ ಸಸ್ಯ.[೧][೨] ಸುಮಾರು 1400 ಮೀ. ಎತ್ತರದವರೆಗಿನ ಬೆಟ್ಟಪ್ರದೇಶಗಳಲ್ಲಿ ಬೆಳೆಯುವ ಇದು ಉಪಹಿಮಾಲಯ ಶ್ರೇಣಿ, ಬಂಗಾಲ, ಒರಿಸ್ಸ, ಆಂಧ್ರದ ವಿಶಾಖಪಟ್ಟಣ ಜಿಲ್ಲೆ ಮುಂತಾದೆಡೆಗಳಲ್ಲಿ ಸಾಮಾನ್ಯ.

ಗುಣಲಕ್ಷಣಗಳು ಬದಲಾಯಿಸಿ

ಎಲೆಗಳು ಸರಳರೀತಿಯವು, ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿವೆ. ಹೂಮಂಜರಿ ಸೀಮಾಕ್ಷಿ ಮಾದರಿಯದು, ಒಂದೊಂದು ಮಂಜರಿಯಲ್ಲಿ 15-20 ಅಚ್ಚಬಿಳಿಯ ಹಾಗೂ ಅತ್ಯಂತ್ಯ ಸುವಾಸನೆಯುಳ್ಳ ಹೂಗಳಿರುವುವು.

ಉಪಯೋಗಗಳು ಬದಲಾಯಿಸಿ

ಇದರ ಎಲೆಯ ರಸವನ್ನು ಬೆಳ್ಳುಳ್ಳಿ, ಮೆಣಸು ಮುಂತಾದವುಗಳೊಂದಿಗೆ ಸೇರಿಸಿ ವಮನಕಾರಿಯಾಗಿ ಬಳಸುವುದಿದೆ. ಎಲೆಗಳು ಪ್ರತಿಬಂಧಕ ಹಾಗೂ ರೋಚಕವೆಂದು ಹೆಸರಾಗಿವೆ. ಬರಗಾಲದಲ್ಲಿ ಇದರ ಬೀಜಗಳನ್ನು ತಿನ್ನುವುದಿದೆ.

ಉಲ್ಲೇಖಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: