ಸೂರಿ ವೆಂಕಟರಮಣ ಶಾಸ್ತ್ರಿ

ಸೂರಿ ವೆಂಕಟರಮಣ ಶಾಸ್ತ್ರಿಗಳು ೧೮೫೫ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿರುವ ಕರ್ಕಿ ಎನ್ನುವ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ವಿಘ್ನೇಶ್ವರ ಶಾಸ್ತ್ರಿಗಳು.


ಶಿಕ್ಷಣ ಬದಲಾಯಿಸಿ

ಸೂರಿಯವರು ಕರ್ಕಿಯಲ್ಲಿಯೆ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದರು. ತಂದೆಯಿಂದ ಸಂಸ್ಕೃತ ಭಾಷೆ ಹಾಗು ವೈದಿಕ ವಿದ್ಯೆ ಕಲಿತ ನಂತರ , ತಮ್ಮ ಗುರುಪೀಠವಾದ ಸಾಗರ ತಾಲೂಕಿನ ರಾಮಚಂದ್ರಾಪುರ ಮಠದಲ್ಲಿ ಕಾವ್ಯ, ವ್ಯಾಕರಣ, ಅಲಂಕಾರ ಹಾಗೂ ವೇದಾಂತಗಳನ್ನು ಅಭ್ಯಸಿಸಿದರು.


ನೌಕರಿ ಬದಲಾಯಿಸಿ

ಶಿಕ್ಷಣದ ನಂತರ ರಾಮಚಂದ್ರಾಪುರ ಮಠದಲ್ಲಿಯೆ ಪಾರುಪತ್ಯಗಾರರಾಗಿ ಸೂರಿಯವರು ಕೆಲಸ ಮಾಡಿದರು. ಆಬಳಿಕ ಇಂಗ್ಲಿಷ್ ಅಭ್ಯಾಸ ಮಾಡಿ, ಮೈಸೂರು ಸಂಸ್ಥಾನದಲ್ಲಿ ಫೌಜದಾರರಾಗಿ ಕೆಲಸ ಮಾಡಿದರು ಎಂದು ಹೇಳಲಾಗುತ್ತಿದೆ.


ಪತ್ರಿಕೋದ್ಯಮ ಬದಲಾಯಿಸಿ

ಈ ನೌಕರಿಗಳಲ್ಲಿ ಆತ್ಮತೃಪ್ತಿಯಿಲ್ಲದ ಸೂರಿ ವೆಂಕಟರಮಣ ಶಾಸ್ತ್ರಿಗಳು ಮುಂಬಯಿಗೆ ತೆರಳಿ ‘ಕರ್ಕಿ ವೆಂಕಟರಮಣ ಶಾಸ್ತ್ರಿ ಎಂಡ್ ಕಂಪನಿ’ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ೧೮೮೫ರಲ್ಲಿ “ ಹವ್ಯಕ ಸುಬೋಧ” ಎನ್ನುವ ರಾಷ್ಟ್ರೀಯ ಧೋರಣೆಯ ವಾರಪತ್ರಿಕೆ ಪ್ರಾರಂಭಿಸಿದರು. ೧೮೮೮ರಲ್ಲಿ ಕನ್ನಡ ಹುಡುಗರಿಗಾಗಿ “ ಹಿತೋಪದೇಶ” ಎನ್ನುವ ಮಾಸಪತ್ರಿಕೆಯನ್ನು ಆರಂಬಿಸಿದರು. ಈ ಪತ್ರಿಕೆಯಲ್ಲಿ ಶಾಸ್ತ್ರಿಗಳು ವ್ಯಂಗ್ಯ ಚಿತ್ರಗಳನ್ನು ಉಪಯೋಗಿಸಿದ್ದು,ಇದು ಕನ್ನಡದಲ್ಲಿ ಬಹುಶಃ ವ್ಯಂಗ್ಯಚಿತ್ರಗಳ ಬಳಕೆ ಮಾಡಿದ ಮೊದಲ ಪತ್ರಿಕೆ ಎಂದು ಶ್ರೀನಿವಾಸ ಹಾವನೂರ ಅಭಿಪ್ರಾಯ ಪಡುತ್ತಾರೆ. ಮುಂದುವರಿದು, “..ಭಾರತೀಯರ ಸಮಸ್ಯೆಗಳು,ಬ್ರಿಟಿಷರ ಕುಟಿಲ ನೀತಿ ಹಾಗು ದಬ್ಬಾಳಿಕೆ, ಕೆನರಾ ಜಿಲ್ಲೆಯ ಸಂಕಷ್ಟಗಳು, ವಿಶೇಷತ: ಅಧಿಕಾರಿಗಳ ದುರ್ವರ್ತನೆ ಇವನ್ನು ನಿರೂಪಿಸುವಲ್ಲಿ ಅವನು ತನ್ನ ಲೇಖನಿಯನ್ನು ಖಡ್ಗಕ್ಕಿಂತಲೂ ಹರಿತವಾಗಿ ಮಸೆದನು…..ರಾಜಕೀಯ ಕಾರಣಕ್ಕಾಗಿ ಶಿಕ್ಷೆಗೊಳಗಾದ ಕನ್ನಡ ಲೇಖಕರಲ್ಲಿ ವೆಂಕಟರಮಣ ಶಾಸ್ತ್ರಿಯೇ ಮೊದಲಿಗನು…” ಎಂದು ಶ್ರೀನಿವಾಸ ಹಾವನೂರ ಹೇಳಿದ್ದಾರೆ.


ಸಾಹಿತ್ಯ ಬದಲಾಯಿಸಿ

ಪತ್ರಕರ್ತರಲ್ಲದೆ, ಸೂರಿ ವೆಂಕಟರಮಣ ಶಾಸ್ತ್ರಿಗಳು ಗ್ರಂಥಕರ್ತರಾಗಿಯೂ ಮಹತ್ವ ಪಡೆದಿದ್ದಾರೆ. ಅವರು ಬರೆದ ನಾಟಕ “ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ೧೮೮೭ರಲ್ಲಿ ಪ್ರಕಟವಾಯಿತು. ಇದು ಬಹುಶಃ ಹೊಸಗನ್ನಡದ ಮೊದಲ ಸಾಮಾಜಿಕ ನಾಟಕವೆನ್ನಲಾಗಿದೆ.


ನಾಟಕ ಬದಲಾಯಿಸಿ

  • ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ (೧೮೮೭)

ಪ್ರವಾಸ ಸಾಹಿತ್ಯ ಬದಲಾಯಿಸಿ

  • ದಕ್ಷಿಣ ಯಾತ್ರಾ ಚರಿತ್ರೆ (೧೮೮೫)

ಸಂಶೋಧನೆ ಬದಲಾಯಿಸಿ

  • ಹವೀಕ ದ್ರವಿಡ ಬ್ರಾಹ್ಮಣರ ಉತ್ಪತ್ತಿಯ ಇತಿಹಾಸವು (೧೮೮೮)
  • ಅನಾರ್ಯರ ವಿವರ (೧೮೮೯)

ಗ್ರಂಥ ಪರಿಷ್ಕರಣ ಬದಲಾಯಿಸಿ

  • ಕೃಷ್ಣ ಸಂಧಾನ ಮತ್ತು ಭೀಷ್ಮ ಪರ್ವ (೧೮೮೬)
  • ರತಿ ಕಲ್ಯಾಣ ಕೌಂಡಲಕ ವಧೆಯು (೧೮೮೬)
  • ಘಟೋದ್ಗಜನ ಕಾಳಗವು ( ೧೮೮೯)
  • ಬಿಲ್ಲ ಹಬ್ಬ ಅಥವಾ ಕಂಸ ವಧೆಯು

ಸಂಪಾದನೆ ಬದಲಾಯಿಸಿ

  • ಮಹಾಕವಿ ಪರಮದೇವಾಂಕ ವಿರಚಿತ “ತುರಂಗ ಭಾರತ”


ಸೂರಿ ವೆಂಕಟರಮಣ ಶಾಸ್ತ್ರಿಗಳು ೧೯೨೫ರಲ್ಲಿ ನಿಧನರಾದರು.