ಜೀಬ್ರಾಫಿಶ್ ಬದಲಾಯಿಸಿ

    ಜೀಬ್ರಾಫಿಶ್ ಎಂಬುದು ಸೈಪ್ರನಫಾರ್ಮ್ಸ್ ಆದೇಶದ ಮೀನಿನ ಕುಟುಂಬಕ್ಕೆ(ಸೈಪ್ರಿನಿಡೇ) ಸೇರಿರುವ ಉಷ್ಣವಲಯದ ತಾಜಾ ನೀರಿನ ಮೀನಾಗಿದೆ.ಇದು ಹಿಮಾಲಯ ಪ್ರದೇಶಕ್ಕೆ ಸ್ಥಳೀಯವಾಗಿದೆ.ಇದು ಜನಪ್ರಿಯ ಅಕ್ವೇರಿಯಂ ಮೀನಾಗಿದೆ.ಇದನ್ನು  ಜೀಬ್ರಾಡ್ಯಾನಿಯೊ ಎಂಬ ಹೆಸರಿನಲ್ಲಿ ಸಾಮಾನ್ಯವಾಗಿ ಮಾರಾಟ ಮಾಡಲಾಗುತ್ತದೆ.ಜೀಬ್ರಾಫಿಶ್ ವೈಜ್ನಾನಿಕ ಸಂಶೋಧನೆಯಲ್ಲಿ ಪ್ರಮುಖ ಮತ್ತು ವ್ಯಾಪಕವಾಗಿ ಬಳಸುವ ಕಶೇರುಕ ಮಾದರಿ ಜೀವಿಯಾಗಿದೆ.ಇದರ ಪುನರುಜ್ಜೀವನ ನಿರ್ದಿಷ್ಟವಾಗಿ ಗಮನಾರ್ಹವಾಗಿದೆ ಮತ್ತು ಅನೇಕ ಜೀವಾಂತರ ತಳಿಗಳನ್ನು ಉತ್ಪಾದಿಸಲು ಸಂಶೋಧಕರು ಇದನ್ನು ಮಾರ್ಪಡಿಸಿದ್ದಾರೆ.
 
ಜೀಬ್ರಾ ಮೀನು

ಟ್ಯಾಕ್ಸಾನಮಿ ಬದಲಾಯಿಸಿ

    ಜೀಬ್ರಾಫಿಶ್ ,ಡ್ಯಾನಿಯೊ ಕುಲದ ಸದಸ್ಯರಾಗಿದ್ದಾರೆ ಮತ್ತು ಸೈಪ್ರಿನಿಡೇ ಕುಟುಂಬಕ್ಕೆ ಸೇರುತ್ತದೆ.ಇದು ಡ್ಯಾನಿಯೊ ಅಸ್ಕುಲಪಿಯೊಂದಿಗೆ ಸಹೋದರಿ ಗುಂಪಿನ ಸಂಬಂಧವನ್ನು ಹೋಂದಿದೆ  ಜೀಬ್ರಾಫಿಶ್ ನನ್ನು ಡ್ಯಾನಿಯೊ ಎಂಬ ಹೆಸರಿನಿಂದ ಪುನರ್ನಾಮಕರಣ ಮಾಡುವವರೆಗೂ  ವೈಜ್ನಾನಿಕ ಸಾಹಿತ್ಯದಲ್ಲಿ ಅದನ್ನು ಬ್ರಾಕಿಡಾನಿಯೋ ರೇರಿಯೋ ಎಂದು ಅನೇಕ ವರ್ಷಗಳಿಂದ ಉಲ್ಲೇಖಿಸಲಾಗಿತ್ತು. 
 
ಬೆಳವಣಿಗೆ

ವಿತರಣೆ ಬದಲಾಯಿಸಿ

    ಜೀಬ್ರಾಫಿಶ್ ಆಗ್ನೇಯ ಹಿಮಾಲಯ ಪ್ರದೇಶದ ಹೊಳೆಗಳಲ್ಲಿ ನೆಲೆಯಾಗಿದೆ ಮತ್ತು ಇದು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಮಾಯನ್ಮಾರ್ ಭಾಗಗಳಲ್ಲಿ ಕಂಡು ಬರುತ್ತದೆ. ಪೂರ್ವ ಭಾರತದಲ್ಲಿ ಗಂಗಾ ಪ್ರದೇಶದಲ್ಲಿ ಈ ಪ್ರಭೇದಗಳು ಹುಟ್ಟಿಕೊಂಡಿವೆ ಮತ್ತು ಸಾಮಾನ್ಯವಾಗಿ ಹೊಳೆಗಳು , ಕಾಲುವೆಗಳು,ಹಳ್ಳಗಳು,ಕೊಳ್ಳಗಳು ಮತ್ತು ನಿಧಾನವಾಗಿ ಚಲಿಸುವ ಅಥವಾ ನಿಂತ ನೀರಿನ ಪ್ರದೇಶಗಳಲ್ಲಿ ವಾಸಿಸುತ್ತವೆ. ಯುನೈಟೆಡ್ ಸ್ಟೇಟ್ಸ್ ನ ಭಾಗಗಳಲ್ಲೂ ಸಹ ಜೀಬ್ರಾಫಿಶ್ ನನ್ನು ಕಾಣಬಹುದು. ಬಹುಶಃ ಉದ್ದೇಶ ಪೂರ್ವಕವಾಗಿ ಜೀಬ್ರಾಫಿಶ್ ನನ್ನು ಈ ಪ್ರದೇಶದಲ್ಲಿ ಬಿಡುಗಡೆ ಮಾಡಿರಬಹುದು ಅಥವ ಅವು ಮೀನುಗಾರಿಕೆ ಪ್ರದೇಶಗಳಿಂದ ತಪ್ಪಿಸಿಕೊಂಡಿರಬಹುದು.

ವಿವರಣೆ ಬದಲಾಯಿಸಿ

  ಜೀಬ್ರಾಫಿಶ್ ಗೆ ದೇಹದ ಏಕೈಕ,ಏಕರೂಪ,ವರ್ಣದ್ರವ್ಯ,ಸಮತಲ,ನೀಲಿ ಪಟ್ಟೆಗಳು ಇರುವುದರಿಂದ ಇದನ್ನು 'ಜೀಬ್ರಾಫಿಶ್' ಎಂದು ಹೆಸರಿಸಲಾಗಿದೆ.ಇದು  ಜೀಬ್ರಾದ ಪಟ್ಟೆಗಳನ್ನು ನೆನಪಿಸುತ್ತದೆ. ಈ ಪಟ್ಟೆಗಳು ಕಾಡಲ್ ರೆಕ್ಕೆಯ ಅಂತ್ಯದ ವರೆಗೂ ವಿಸ್ತರಿಸುತ್ತದೆ. ಅದರ ಆಕಾರವು ಫ್ಯೂಸಿಫಾರ್ಮ್ ಮತ್ತು ಪಾರ್ಶ್ವವಾಗಿ ಸಂಕುಚಿತಗೊಂಡಿದ್ದು, ಅದರ ಬಾಯಿ ಮೇಲ್ ಮುಖವಾಗಿದೆ.ಗಂಡು ಜಾತಿಯ ಜೀಬ್ರಾಫಿಶ್ ಟಾರ್ಪಿಡೊ- ಆಕಾರದಲ್ಲಿದೆ ಹಾಗೂ ನೀಲಿ ಪಟ್ಟಿಯ ನಡುವೆ ಚಿನ್ನದ ಬಣ್ಣದ ಪಟ್ಟಿಯನ್ನು ಹೊಂದಿದೆ. ಹೆಣ್ಣು ಜಾತಿಯ ಮೀನು ದೊಡ್ಡದಾದ, ಬಿಳಿ ಹೊಟ್ಟೆ ಮತ್ತು ಚಿನ್ನದ ಪಟ್ಟೆಯ ಬದಲಿಗೆ ಬೆಳ್ಳಿ ಬಣ್ಣದ ಪಟ್ಟೆಗಳನ್ನು ಹೊಂದಿದೆ. ಜೀಬ್ರಾಫಿಶ್ ೬.೪ ಸೆಂಟಿಮೀಟರ್ ಉದ್ದಕ್ಕೆ ಬೆಳೆಯಬಹುದು.  ಅದು ಸೆರೆಯಲ್ಲಿದಾಗಲೂ ೪ ಸೆಂಟಿಮೀಟರ್ ಗಿಂತ ದೊಡ್ಡದಾಗಿ ಬೆಳೆಯುತ್ತದೆ. ಅದು ಸೆರೆಯಲ್ಲಿದಾಗ ಅದರ ಜೀವಿತಾವಧಿಯು ಸುಮಾರು ಎರಡರಿಂದ ಮೂರು ವರ್ಷಗಳು, ಆದರೆ ಅದು ಸೂಕ್ತ ಸ್ಥಿತಿಯಲ್ಲಿದ್ದರೆ ಸುಮಾರು ಐದು ವರ್ಷಗಳವರೆಗೂ ಅದರ ಜೀವಿತಾವಧಿಯು ವಿಸ್ತರಿಸಬಹುದು.

ಸಂತಾನೋತ್ಪತ್ತಿ ಬದಲಾಯಿಸಿ

ಜೀಬ್ರಾಫಿಶ್ ನ ಅಭಿವೃದ್ದಿಯ ಅಂತಗಳು.ಡೇನಿಯೊ ರೇರಿಯೋಗೆ ಅಂದಾಜು ಪೀಳಿಗೆಯ ಸಮಯ ಮೂರು ತಿಂಗಳು. ಅಂಡೋತ್ಪತ್ತಿ ಮತ್ತು ಮೊಟ್ಟೆಯಿಡುವಿಕೆಗೆ ಗಂಡು ಜಾತಿಮೀನು ಅಸ್ಥಿತ್ವದಲ್ಲಿರಬೇಕು.ಹೆಣ್ಣು ಜಾತಿಯ ಮೀನುಗಳು ಸುಮಾರು ನೂರಾರು ಮೊಟ್ಟೆಗಳನ್ನು ಒಂದೇ ಬಾರಿ ಇಡುತ್ತವೆ. ಇವು ಎರಡು ಮೂರು ದಿನಗಳ ಮಧ್ಯಂತರದಲ್ಲಿ ಮೊಟ್ಟೆಯಿಡುವ ಸಾಮರ್ಥ್ಯವನ್ನು ಹೊಂದಿವೆ. ಮೊಟ್ಟೆ ಇಟ್ಟ ನಂತರ, ಭ್ರೂಣದ ಬೆಳವಣಿಗೆ ಆರಂಭವಾಗುತ್ತದೆ; ಫಲವತ್ತಾದ ಮೊಟ್ಟೆಗಳ ತಕ್ಷಣವೇ ಪಾರದರ್ಶಕವಾಗಿ ಮಾರ್ಪಡುತ್ತವೆ,ಇದು ಡೇನಿಯೊ ರೇರಿಯೋ ಅನ್ನು ಒಂದು ಅನುಕೂಲಕರ ಸಂಶೋಧನಾ ಮಾದರಿಯ ಜಾತಿಯಾಗಿ ಮಾಡುತ್ತದೆ. ಜೀಬ್ರಾಫಿಶ್ ಭ್ರೂಣವು ವೇಗವಾಗಿ ಬೆಳೆಯುತ್ತದೆ. ೩೬ ಗಂಟೆಗಳ ಫಲೀಕರಣದೊಳಗೆ ಎಲ್ಲಾ ಪ್ರಮುಖ ಅಂಗಗಳು ಬೆಳೆಯುತ್ತವೆ.ಭ್ರೂಣವು ಹಳದಿ ಲೋಳೆಯಂತೆಯೇ ಪ್ರಾರಂಭವಾಗುತ್ತದೆ. ಇದರಲ್ಲಿ ಒಂದೇ ಜೀವಕೋಶ ಇರುತ್ತದೆ. ನಂತರ ಅದು ಎರೆಡಾಗಿ ವಿಭಜಿಸುತ್ತದೆ. ಇದೇ ರೀತಿ ಸಾವಿರಾರು ಸಣ್ಣ ಜೀವಕೋಶಗಳಾಗಿ ವಿಭಜನೆಯಾಗುತ್ತಾ ಹೋಗುತ್ತದೆ.ಜೀವಕೋಶಗಳು ಹಳದಿ ಲೋಳೆಯ ಕಡೆಗೆ ಹೋಗುತ್ತವೆ. ತಲೆ ಮತ್ತು ಬಾಲವನ್ನು ರೂಪಿಸಲು ಪ್ರಾರಂಭಿಸುತ್ತವೆ. ಬಾಲವು ಬೆಳೆಯುತ್ತದೆ, ಬೆಳೆದ ನಂತರ ದೇಹದಿಂದ ಬೇರ್ಪಡುತ್ತದೆ. ಹಳದಿ ಲೋಳೆಯು ಕಾಲಾನಂತರದಲ್ಲಿ ಕಡಿಮೆಯಾಗುತ್ತಾ ಬರುತ್ತದೆ ಏಕೆಂದರೆ ಮೊದಲ ಕೆಲವು ದಿನಗಳ ಕಾಲ ಮೀನು ಅದನ್ನೇ ಆಹಾರವನ್ನಾಗಿ ಸೇವಿಸುತ್ತದೆ. ಕೆಲವು ತಿಂಗಳುಗಳ ನಂತರ, ವಯಸ್ಕ ಮೀನು ಸಂತಾನೋತ್ಪತ್ತಿ ಪ್ರಬುದ್ದತೆಯನ್ನು ತಲುಪುತ್ತದೆ.

ಆಹಾರ ಬದಲಾಯಿಸಿ

ಜೀಬ್ರಾಫಿಶ್ ಸರ್ವಭಕ್ಷಕ, ಝೂಪ್ಲ್ಯಾಂಕ್ಟನ್, ಫೈಟೊಪ್ಲಾಂಕ್ಟನ್, ಕೀಟಗಳು ಮತ್ತು ಕೀಟಗಳ ಲಾರ್ವಾಗಳನ್ನು ತಿನ್ನುತ್ತದೆ; ಅವುಗಳಿಗೆ ಬೇಕಾದ ಆಹಾರ ಪದಾರ್ಥಗಳು ಸುಲಭವಾಗಿ ಲಭ್ಯವಿಲ್ಲದಿದ್ದಲ್ಲಿ, ಹುಳುಗಳು ಮತ್ತು ಸಣ್ಣ ಕಠಿಣ ಚರ್ಮಿಗಳಂತಹ ವಿವಿಧ ಆಹಾರಗಳನ್ನು ತಿನ್ನುತ್ತವೆ.

ಮಾದರಿ ಗುಣಲಕ್ಷಣಗಳು ಬದಲಾಯಿಸಿ

ಜೀಬ್ರಾಫಿಶ್ ವಿಜ್ನಾನಿಗಳಿಗೆ ಹಲವಾರು ರೀತಿಯಲ್ಲಿ ಪ್ರಯೋಜನಕರವಾಗಿದೆ. ಇದರ ಜಿನೊಮ್ ಸಂಪೂರ್ಣವಾಗಿ ಅನುಕ್ರಮವಾಗಿದೆ ಮತ್ತು ಇದು ಸುಲಭವಾಗಿ ಅರ್ಥಮಾಡಿಕೊಳ್ಳ ಬಲ್ಲ ಮತ್ತು ಸುಲಭವಾಗಿ ಪರೀಕ್ಷಿಸಬಹುದಾದ ಬೆಳವಣಿಗೆಯ ವರ್ತನೆಗಳನ್ನು ಹೊಂದಿದೆ. ಇದರ ಭ್ರೂಣೀಯ ಬೆಳವಣಿಗೆ ಬಹಳ ವೇಗವಾಗಿರುತ್ತದೆ ಮತ್ತು ಪಾರದರ್ಶಕವಾಗಿರುತ್ತವೆ ಮತ್ತು ಅದರ ಬೆಳವಣಿಗೆ ಪರಿಸರದಲ್ಲಿಯೇ ಸಾಧ್ಯವಾಗುತ್ತದೆ. ಬೆಳವಣಿಗೆಗಾಗಿ ತಾಯಿಯ ಅಗತ್ಯವಿರುವುದಿಲ್ಲ. ಇದಲ್ಲದೆ, ರೂಪಾಂತರಿತ ತಳಿಗಳು ಸುಲಭವಾಗಿ ಲಭ್ಯವಿದೆ.ಜೀಬ್ರಾಫಿಶ್ ಸಾರ್ವತ್ರಿಕವಾಗಿ ಆದರ್ಶ ಸಂಶೋಧನಾ ಮಾದರಿ ಅಲ್ಲ; [೧] [೨] [೩] [೪]

  1. Vishwanath, W. (2010). "Danio rerio". The IUCN Red List of Threatened Species. IUCN. 2010: e.T166487A6219667. doi:10.2305/IUCN.UK.2010-4.RLTS.T166487A6219667.en. Retrieved 15 January 2018.
  2. Lush, Mark E.; Piotrowski, Tatjana (2013). "Sensory hair cell regeneration in the zebrafish lateral line".
  3. "Fudan scientists turn fish into estrogen alerts". Xinhua. January 12, 2007. Retrieved November 15, 2012.
  4. "Researchers Capture A Zebrafish's Thought Process On Video". Popular Science. January 31, 2013. Retrieved February 4, 2013