ನೀರು

ನೈಸರ್ಗಿಕ ಸಂಪನ್ಮೂಲಗಳು ಬದಲಾಯಿಸಿ

ಉಪಯೋಗಕ್ಕೆ ಬರುವಂತಹ ಉತ್ಪನ್ನ ವಸ್ತುವಾಗಿ ಮಾರ್ಪಡಿಸುವಂತಹ ಯಾವುದೆ ವಸ್ತುವನ್ನು ಸಂಪನ್ನೂಲ ಎನ್ನುತ್ತೇವೆ.ನಿಸರ್ಗದಲ್ಲಿ ದೊರೆಯುವಂತಹ ಸಂಪನ್ಮೂಲಗಳನ್ನು ನೈಸರ್ಗಿಕ ಸಂಪನ್ಮೂಲಗಳೆನ್ನುತ್ತೇವೆ.ನೈಸರ್ಗಿಕ ಸಮಪನ್ನೂಲಗಳ ಲಕ್ಷಣಗಳ ಆಧಾರದ ಮೇಲೆ ಅವುಗಳನ್ನು ಅನೇಕ ವಿದಗಳಾಗಿ ವಿಂಡಿಸಬಹುದು.

  1. ಜ್ಯೆವಿಕ ಮತ್ತು ಅಜ್ಯೆವಿಕ ಸಂಪನ್ನೂಲಗಳು
  2. ಪರಿಚಲನೆ ಹೊಂದುವ ಮತ್ತು ಪರಿಚಲನೆ ಹೊಂದದ ಸಂಪನ್ನೂಲಗಳು
  3. ಭೂಸಂಪನ್ನೂಲಗಳು,ಜಲಸಂಪನ್ನೂಲಗಳು ಮತ್ತು ವಾಯ ಸಂಪನ್ನೂಲಗಳು

ಜ್ಯೆವಿಕ ಮತ್ತು ಅಜ್ಯೆವಿಕ ಸಂಪನ್ನೂಲಗಳು. ಬದಲಾಯಿಸಿ

ಜ್ಯೆವಿಕ ಸಂಪನ್ನೂಲಗಳು-ಜೀವ ಇರುವ ಸಂಪನ್ನೂಲಗಳನ್ನು ಜ್ಯೆವಿಕ ಸಂಪನ್ಮೂಲಗಳೆನ್ನುತ್ತೇವೆ.ಉ.ದಾ. ಪ್ರಾಣಿಗಳು, ಪಕ್ಷಿಗಳು, ಕೀಟಗಳು. ಸಸ್ಯಗಳು ಸೂಕ್ಷ್ಮಾಣು ಜೀವಿಗಳು ಇತ್ಯಾದಿಗಳು. ಅಜ್ಯೆವಿಕ ಸಂಪನ್ನೂಲಗಳು-ಜೀವ ಇರದ ಸಂಪನ್ಮೂಲಗಳನ್ನು ಅಜ್ಯೆವಿಕ ಸಂಪನ್ಮೂಲಗಳೆನ್ನುತ್ತೇವೆ. ಉ.ದಾ. ಖನಿಜಗಳು, ಅಧಿರುಗಳು, ಇಂಧನಗಳು, ಕಲ್ಲು, ಮಣ‍್ಣು,ಗಾಳಿ,ನೀರು,ಬೆಳಕು ಇತ್ಯಾದಿಗಳು ಜ್ಯೆವಿಕ ಸಂಪನ್ಮೂಗಳಿಂದ ಉತ್ತಮ ಆಹಾರ ಸರಪಳಿ ಉಂಟಾಗಿ,ಪರಿಸರ ಸಮಸ್ತಿತಿಯಲ್ಲಿರಲು ಸಹಾಯ ವಾಗುತ್ತದೆ.ಅಜ್ಯೆವಿಕ ಸಂಪನ್ಮೂಲಗಳನ್ನು,ಜೀವಿಗಳು ತಮ್ಮ ದಿನ ನಿತ್ಯದ ಅಗತ್ಯತೆಗಳನ್ನು ಪೂರೈಸಿಕೊಳ್ಳಲ ಬಳಸಿ ಕೊಳ್ಳುತ್ತವೆ. ಜ್ಯೆವಿಕ ಮತ್ತು ಅಜ್ಯೆವಿಕ ಸಂಪನ್ಮೂಲಗಳು ಪರಸ್ಪರ ನಿಕಟ ಸಂಬಂಧವನ್ಮು ಹೊಂದಿವೆ.

 

ಪರಿಚಲನೆ ಹೊಂದುವ ಮತ್ತು ಪರಿಚಲನೆ ಹೊಂದದ ಸಂಪನ್ಮೂಲಗಳು. ಬದಲಾಯಿಸಿ

ಬಳಸಿದಂತೆಲ್ಲಾ ಪುನಹ ಉತ್ಪತ್ತಿ ಯಾಗುವ ಮತ್ತು ಬರಿದಾಗದ ಸಂಪನ್ನೂಲಗಳನ್ನು ಪರಿಚಲನೆ ಹೊಂದುವ ಸಂಪನ್ನೂಲಗಳೆನ್ನುತ್ತಾರೆ.ಉ.ದಾ.-ಗಾಳಿ, ವೀರು, ಬೆಳಕು,ಸಸ್ಯಗಳು,ಪ್ರಾಣಿಗಳು,ಪಕ್ಷಿಗಳು,ಕೀಟಗಳು ಇತ್ಯಾದಿಗಳು.

ಬಳಸಿದಂತೆಲ್ಲಾ ಪುನಹ ಉತ್ಪತ್ತಿ ಯಾಗದ ಮತ್ತು ಬರಿದಾಗುವ ಸಂಪನ್ಮೂಲಗಳನ್ನು ಪರಿಚಲನೆ ಹೊಂದದ ಸಂಪನ್ಮೂಲಗಳೆನ್ನುತ್ತಾರೆ. ಉ.ದಾ.-ಖನಿಜಗಳು, ಅಧಿರುಗಳು, ಇಂಧನಗಳು,ಮಣ್ಣು ಇತ್ಯಾದಿಗಳು. ಪರಿಚಲನೆ ಹೊಂದದ ಸಂಪ್ಮೂಲಗಳ ಬಳಕೆ ಕಡಿಮೆ ಮಾಡಿ ಪರಿಚಲನೆ ಹೊಂದದ ಸಂಪನ್ಮೂಲಗಳನ್ನು ಹೆಚ್ಚು ಬಳಸಬೇಕು ಯಾಕೆಂದರೆ, ಮಂದಿನ ಪೀಳಿಗೆಗೆ ಸಂಪನ್ಮೂಲಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು.ಆದ್ದರಿಂದ ಯತೇಚ್ಚವಾಗಿ ಲಭ್ಯವಾಗುವ ಸೂರ್ಯನ ಶಕ್ತಿಯನ್ನು ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳಬೇಕ.

==ಭೂಸಂಪನ್ಮೂಲಗಳು,ಜಲಸಂಪನ್ಮೂಲಗಳು ಮತ್ತು ವಾಯುಸಂಪನ್ಮೂಲಗಳು. ಭೂಸಂಪನ್ಮೂಲಗಳು:-ಭೂಮಿಯಮೇಲೆ ದೊರೆಯುವ ಸಂಪನ್ಮೂಲಗಳನ್ನು ಭೂಸಂಪನ್ಮೂಲಗಳೆನ್ನುತ್ತೇವೆ. ಉ.ದಾ-ಸಸ್ಯಗಳು,ಪ್ರಾಣಿಗಳು,ಪಕ್ಷಿಗಳು,ಕೀಟಗಳು,ಖನಿಜ ಲವಣಗಳು,ಇಂದನಗಳು, ಮಣ‍್ಣು ಇತ್ಯಾದಿಗಳು. ಜಲಸಂಪನ್ಮೂಲಗಳು:-ನೀರು ಮತ್ತು ನೀರಿನಲ್ಲಿ ದೊರೆಯುವ ಸಂಪನ್ಮೂಲಗಳನ್ನು ಜಲಸಂಪನ್ಮೂಲಗಳೆನ್ನುತ್ತೇವೆ. ಉ.ದಾ-ಸಾಗರಗಲು,ಸಮುದ್ರಗಳು,ನದಿಗಳು,ಸರೋವರಗಳು ಮತ್ತು ಇವುಗಳಲ್ಲಿ ದೊರೆಯವ ಜಲಚರ ಜೀವಿಗಳು,ಸಸ್ಯಗಳು, ಖನಿಜಗಳು, ಮತ್ತು ಹವಳ ಇತ್ಯಾದಿಗಳು. ವಾಯು ಸಂಪನ್ಮೂಲಗಳು:-ವಾಯುವಿನಲ್ಲಿ ದೊರೆಯುವ ಸಂಪನ್ಮೂಲಗಲನ್ನು ವಾಯು ಸಮಪನ್ಮೂಲಗಳೆನ್ನುತ್ತೇವೆ. ಉ.ದಾ-ಗಾಳಿ, ಆಮ್ಲಜನಕ, ಸಾರಜನಕ, ಇಂಗಾಲದ ಡೈಯಾಕ್ಸೈಡ್, ರಾಜಾನಿಲಗಳು, ಸೂಕ್ಷ್ಮಾಣು ಜೀವಿಗಳು ಇತ್ಯಾದಿಗಳು.

ಯಾವುದೇ ರೀತಿಯ ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಇತಿ ಮಿತಿಯಲ್ಲಿ ಬಳಸಬೇಕು.ಇವುಗಳು ಪರಿಸರದಲ್ಲಿ ಪರಿಚಲನೆ ಯಾಗುವಂತೆ ಮತ್ತು ಮುಂದಿನ ಪೀಳಿಗೆಗೆ ಲಭ್ಯ ವಾಗುವಂತೆ ನೋಡಿಕೊಳ್ಳಬೇಕು.