ಪಿತೃ ಆರಾಧನೆ

   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರಸಿದ್ಧವಾಗಿರುವುದು ತುಳು ಸಂಸ್ಕೃತಿ. ತುಳುನಾಡಿನ ವಿಚಾರ ಪರಂಪರೆ ಕೆಟ್ಟ ಮತ್ತು ಒಳ್ಳೆಯ ದರ ಸಮ್ಮಿಶ್ರಣವನ್ನು ಹೊಂದಿದೆ. ತುಳುನಾಡಿನ ಹಬ್ಬಗಳು, ಸಂಪ್ರದಾಯಗಳು, ಅದನ್ನು ಆಚರಿಸುವ ವಿಭಿನ್ನವಾದ ವಿಧವು ಅತಿ ಸುಂದರವಾಗಿದೆ. ತುಳುನಾಡಿನವರು ಪಾಶ್ಚಾತ್ಯ ಮಾದರಿಗಿಂತ ಪರಂಪರೆಗಳಲ್ಲಿ ನಂಬಿಕೆ ಉಳ್ಳವರು.
   ಮಂಗಳೂರು, ಕಾಸರಗೋಡು ಪ್ರದೇಶದ ಗಡಿ, ಸುಳ್ಯದ ಗಡಿ ಪ್ರದೇಶಗಳಲ್ಲಿ ತುಳು ಮಾತಾಡುವ ಜನ ಹೆಚ್ಚಾಗಿ ಕಾಣಸಿಗುತ್ತಾರೆ. ತುಳು ಭಾಷೆಯಲ್ಲಿರುವ ಮನೋರಂಜನೆ ಇತರ ಯಾವ ಭಾಷೆಗಳಲ್ಲಿಯೂ ಕಾಣಸಿಗಲಾರದು. ತುಳುನಾಡಿನ ಜನರು ಸ್ವಾಭಿಮಾನಿಗಳು, ಶ್ರಮಜೀವಿಗಳು, ಹೆಚ್ಚಾಗಿ ದೈವಗಳಲ್ಲಿ ನಂಬಿಕೆ ಉಳ್ಳವರು. ಅದರಲ್ಲಿ ದೈವ ಸ್ವರೂಪವಾದ ಪಿತೃಗಳ ಆರಾಧನೆಯೂ ಒಂದಾಗಿದೆ. 
   ಪಿತೃ ಆರಾಧನೆ ಎಲ್ಲಾ ಸಂಸ್ಕೃತಿಗಳಲ್ಲಿ ಸಾಮಾನ್ಯವಾಗಿ ಕಂಡು ಬಂದರೂ ಆಚರಣಾ ವಿಧಾನಗಳಲ್ಲಿ ತುಳುವರು ತಮ್ಮದೇ ಆದ ವಿಶೇಷತೆಯನ್ನು ಹೊಂದಿದ್ದಾರೆ. ಪಿತೃಗಳಿಗೆ ಬಡಿಸುವುದು ಎಂಬ ಪದ್ಧತಿ ತುಳುನಾಡಿನಲ್ಲಿದೆ. ಪ್ರತಿ ವರ್ಷ ಊರಿನ ಜನರಿಗೆ ಹೇಳಿ ತಮ್ಮ ಪಿತೃಗಳ ಮೋಕ್ಷಕ್ಕಾಗಿ ಬಡಿಸುವ ಪದ್ಧತಿ ಇದೆ. ಇಲ್ಲಿ ಕೋಳಿ, ಹಂದಿ ಇವರ ಭಕ್ಷಗಳನ್ನು ತಯಾರಿಸುತ್ತಾರೆ. ಜೊತೆಗೆ ಶೇಂದಿ, ಶರಾಬು ಇಡುವ ಪದ್ಧತಿಯೂ ಇದೆ. ಇದನ್ನು ಕೆಟ್ಟ ಆಚರಣೆಯ ಪಟ್ಟಿಗೆ ತರಬಹುದು. ಅದು ಸಂಸ್ಕೃತಿಯಾಗಿದ್ದರೂ ಒಳ್ಳೆಯ ಲಕ್ಷಣಗಳನ್ನು ಹೊಂದಿಲ್ಲ. ಆದರೂ ಪಿತೃಗಳ ಆರಾಧನೆಗೆ ಒಂದು ಮಹತ್ವವನ್ನು ಜನ ನೀಡಿದ್ದಾರೆ. ಮನೆಯಲ್ಲಿ ಏನಾದರೂ ತೊಂದರೆ ಎದುರಾದರೆ ಅದಕ್ಕೆ ಕಾರಣ ಹಿರಿಯರ ತೊಂದರೆ ಎಂದು ಭಾವಿಸುತ್ತಾರೆ. ಅದಕ್ಕಾಗಿ ಮತ್ತೊಮ್ಮೆ 'ಅಗೆಲ್' ಹಾಕುವ ಪದ್ಧತಿಯನ್ನು ಮಾಡುತ್ತಾರೆ. ತಮ್ಮ ಪ್ರತೀ ಕಾರ್ಯದಲ್ಲಿ ಪಿತೃಗಳ ಆಶೀರ್ವಾದವನ್ನು ಅವರು ಸದಾ ಬಯಸುತ್ತಾರೆ.