ಸ್ವವಿವರ:

ನನ್ನ ಹೆಸರು .ನಾನು ಕೊಡಗು ಇ೦ದ ಬ೦ದಿದ್ದೇನೆ.ನಾನು ಸ೦ತ ಮೇರೀಸ್ ಶಾಲೆಯಲ್ಲಿ ನನ್ನ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದೆ. ನಾನು ಸ೦ತ ಮೈಕೇಲ್ಸ್ ಪದವಿಪೂರ್ವ ಕಾಲೇಜಿನಲ್ಲಿ ನನ್ನ ಮುಂದಿನ ಅಧ್ಯಯನವನ್ನು ಮುಗಿಸಿದೆ. ದ್ವಿತೀಯ ಪಿ.ಯು.ಸಿ ಯಲ್ಲಿ ನನಗೆ ೯೧ ಶೇಕಡ ಅಂಕಗಳು ದೊರೆತಿದೆ. ಮುಂದಿನ ಶಿಕ್ಷಣಕ್ಕಾಗಿ ನಾನು ಮಂಗಳೂರಿನ ಸ೦ತ ಅಲೋಶಿಯಸ್ ಕಾಲೇಜಿಗೆ ಬ೦ದಿದ್ದೇನೆ. ನನ್ನ ಹವ್ಯಾಸಗಳು ನೃತ್ಯ ಮಾಡುವುದು, ಹಾಡುಗಳನ್ನು ಹಾಡುವುದು,ಪುಸ್ತಕಗಳನ್ನು ಓದುವುದು,ಪ್ರಯಾಣ ಮಾಡುವುದು,ಚಿತ್ರಾ ಬಿಡಿಸುವುದು. ನನಗೆ ಚದುರಂಗದ ಆಟದಲ್ಲಿ ತುಂಬಾ ಆಸಕ್ತಿಯಿದೆ. ಚದುರಂಗ ಆಟದಲ್ಲಿ ರಾಜ್ಯ ಮಟ್ಟದಲ್ಲಿ ಮೂರು ಬಾರಿ ಪ್ರಶಸ್ತಿ ದೊರೆತಿದೆ. ನೃತ್ಯದಲ್ಲೂ ತುಂಬಾ ಆಸಕ್ತಿಯಿದೆ ಜಿಲ್ಲಾಮಟ್ಟದಲ್ಲಿ ಬಹಳ ಪ್ರಶಸ್ತಿ ದೊರೆತಿದೆ. ಈಗ ಕಂಪನಿ ಕಾರ್ಯದರ್ಶಿ ಕೋರ್ಸ್ ಇದನ್ನು ಅಧ್ಯಯನ ಮಾಡುತ್ತಿದ್ದೇನೆ ಇದರ ಜೊತೆಯಾಗಿ ಬಿ.ಕಾ೦ಸಹ ಮಾಡುತ್ತಿದ್ದೇನೆ. ನನಗೆ ಮು೦ದೆ ಎಲ್ಎಲ್ಬಿ ಹಾಗು ಎಂ.ಬಿ.ಎ ಪದವಿಗಳನ್ನು ಮಾಡುವ ಆಸೆ ಇದೆ. ನಾನು ಮು೦ದೆ ಕಂಪನಿ ಕಾರ್ಯದರ್ಶಿಯ ಜೊತೆಗೆ ಉಪನ್ಯಾಸಕಿಯಾಗಿ ಕೆಲಸ ಮಾಡಬೇಕು ಎ೦ಬ ಆಸೆಯಿದೆ.