ಅಬೀಜ ಸಂತಾನೋತ್ಪತ್ತಿ

ಜೀವಶಾಸ್ತ್ರದಲ್ಲಿನ ಅಬೀಜ ಸಂತಾನೋತ್ಪತ್ತಿ ಯು, ಪ್ರಕೃತಿಯಲ್ಲಿ ಸಂಭವಿಸುವ, ತಳೀಯವಾಗಿ-ತದ್ರೂಪವಾಗಿರುವ ಜೀವಿಗಳ ಸಮುದಾಯಗಳನ್ನು ಉತ್ಪತ್ತಿ ಮಾಡುವ ಒಂದು ಪ್ರಕ್ರಿಯೆಯಯಾಗಿದೆ. ಬ್ಯಾಕ್ಟೀರಿಯ, ಕೀಟಗಳು ಅಥವಾ ಸಸ್ಯಗಳಂಥ ಜೀವಿಗಳು ಅಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಮಹತ್ವಪೂರ್ಣವಾಗಿದೆ.

DNA ತುಣುಕುಗಳು (ಆಣ್ವಿಕ ಅಬೀಜ ಸಂತಾನೋತ್ಪತ್ತಿ), ಜೀವಕೋಶಗಳು (ಜೀವಕೋಶ ಅಬೀಜ ಸಂತಾನೋತ್ಪತ್ತಿ), ಅಥವಾ ಜೀವಿಗಳ ನಕಲುಗಳನ್ನು ಸೃಷ್ಟಿಸುವ ಪ್ರಕ್ರಿಯೆಗೆ ಜೈವಿಕ ತಂತ್ರಜ್ಞಾನದಲ್ಲಿನ ಅಬೀಜ ಸಂತಾನೋತ್ಪತ್ತಿಯು ಉಲ್ಲೇಖಿಸಲ್ಪಡುತ್ತದೆ. ಅಂಕೀಯ ಮಾಧ್ಯಮ (ಡಿಜಿಟಲ್ ಮೀಡಿಯಾ) ಅಥವಾ ತಂತ್ರಾಂಶದಂಥ ಉತ್ಪನ್ನವೊಂದರ ಬಹುಸಂಖ್ಯೆಯ ನಕಲುಗಳ ತಯಾರಿಕೆಗೂ ಈ ಪದವು ಉಲ್ಲೇಖಿಸಲ್ಪಡುತ್ತದೆ. ಅಬೀಜ ಸಂತಾನ ಎಂಬುದರ ಆಂಗ್ಲಭಾಷಾ ಪರ್ಯಾಯ ಪದವಾಗಿರುವ clone‌ ಎಂಬುದು κλών ಎಂಬ ಪದದಿಂದ ಹುಟ್ಟಿಕೊಂಡಿದೆ. ಇದು "ಕಾಂಡ, ಕೊಂಬೆ" ಎಂಬುವನ್ನು ಸೂಚಿಸುವ ಗ್ರೀಕ್‌ ಪದವಾಗಿದ್ದು, ಒಂದು ಸಣ್ಣ-ರೆಂಬೆಯಿಂದ ಹೊಸ ಸಸ್ಯವೊಂದನ್ನು ಸೃಷ್ಟಿಸಬಹುದಾದ ಪ್ರಕ್ರಿಯೆಗೆ ಇದು ಉಲ್ಲೇಖಿಸಲ್ಪಡುತ್ತದೆ. ತೋಟಗಾರಿಕೆಯಲ್ಲಿ, clon ಎಂಬ ಕಾಗುಣಿತವನ್ನು ಇಪ್ಪತ್ತನೇ ಶತಮಾನದವರೆಗೂ ಬಳಸಲಾಯಿತು; ಸದರಿ ಪದದಲ್ಲಿರುವ ಸ್ವರವು "ಹ್ರಸ್ವವಾದ o" ಬದಲಿಗೆ ಒಂದು "ದೀರ್ಘವಾದ o" ಆಗಿದೆ ಎಂಬುದನ್ನು ಸೂಚಿಸಲು ಪದದ ಅಂತಿಮ ಅಕ್ಷರವಾದ e ಬಳಕೆಗೆ ಬಂದಿತು[ಸೂಕ್ತ ಉಲ್ಲೇಖನ ಬೇಕು].

ಸದರಿ ಪದವು ಜನಪ್ರಿಯ ಪದಕೋಶವನ್ನು ಒಂದು ಅತಿ ಸಾರ್ವತ್ರಿಕ ಸಂದರ್ಭದಲ್ಲಿ ಸೇರಿಕೊಂಡಿತಾದ್ದರಿಂದ, clone ಎಂಬ ಕಾಗುಣಿತವು ಏಕೈಕವಾಗಿ ಬಳಕೆಯಾಗುತ್ತಾ ಬಂದಿದೆ.

ಸ್ಪಷ್ಟವಾದ ಒಂದು DNA ಸರಣಿಯ ಬಹುಸಂಖ್ಯೆಯ ನಕಲುಗಳನ್ನು ತಯಾರಿಸುವ ಪ್ರಕ್ರಿಯೆಗೆ ಆಣ್ವಿಕ ಅಬೀಜ ಸಂತಾನೋತ್ಪತ್ತಿ ಎಂದು ಕರೆಯಲಾಗುತ್ತದೆ. ಸಮಗ್ರ ಜೀನುಗಳನ್ನು ಒಳಗೊಂಡ DNA ತುಣುಕುಗಳನ್ನು ವರ್ಧಿಸಲು ಅಬೀಜ ಸಂತಾನೋತ್ಪತ್ತಿಯನ್ನು ಅನೇಕವೇಳೆ ಬಳಸಲಾಗುತ್ತದೆಯಾದರೂ, ಉತ್ತೇಜಕಗಳು, ಸಂಕೇತಿಸದ ಸರಣಿಗಳು ಮತ್ತು ಗೊತ್ತುಗುರಿಯಿಲ್ಲದೆ ತುಣುಕಾಗಿರುವ DNAಯಂಥ ಯಾವುದೇ DNA ಶ್ರೇಣಿಯನ್ನು ವರ್ಧಿಸಲು ಕೂಡಾ ಇದನ್ನು ಬಳಸಬಹುದಾಗಿದೆ. ತಳೀಯ ಬೆರಳಿನ ಗುರುತು ಪಡೆಯುವಿಕೆಯಿಂದ ಮೊದಲ್ಗೊಂಡು ಬೃಹತ್‌ ಪ್ರಮಾಣದಲ್ಲಿನ ಪ್ರೊಟೀನು ಉತ್ಪಾದನೆಯವರೆಗಿನ ಅನೇಕ ಜೈವಿಕ ಪ್ರಯೋಗ-ಪರೀಕ್ಷೆಗಳು ಮತ್ತು ಪ್ರಾಯೋಗಿಕ ಅನ್ವಯಿಕೆಗಳ ಒಂದು ವಿಸ್ತೃತ ಶ್ರೇಣಿಯಲ್ಲಿ ಇದು ಬಳಕೆಯಾಗುತ್ತದೆ. ಅಬೀಜ ಸಂತಾನೋತ್ಪತ್ತಿ ಎಂಬ ಪದವು ಹಾದಿತಪ್ಪಿಸುವ ರೀತಿಯಲ್ಲಿ ಆಗೊಮ್ಮೆ ಈಗೊಮ್ಮೆ ಬಳಕೆಯಾಗುತ್ತಿದೆ. ಸ್ಥಾನಿಕ ಅಬೀಜ ಸಂತಾನೋತ್ಪತ್ತಿಯಲ್ಲಿರುವಂತೆ, ಆಸಕ್ತಿಗೆ ಕಾರಣವಾದ ಒಂದು ನಿರ್ದಿಷ್ಟ ಪ್ರಕಟ ಲಕ್ಷಣದೊಂದಿಗೆ ಸಂಬಂಧ ಹೊಂದಿರುವ ಒಂದು ಜೀನ್‌ನ ವರ್ಣತಂತುವಿನ ತಾಣದ ಗುರುತಿಸುವಿಕೆಗೆ ಇದು ತಪ್ಪಾಗಿ ಉಲ್ಲೇಖಿಸಲ್ಪಡುತ್ತಿದೆ. ಆಚರಣೆಯಲ್ಲಿ, ಒಂದು ವರ್ಣತಂತುವಿಗೆ ಅಥವಾ ಜೀನೋಮಿನ ವಲಯಕ್ಕಿರುವ ಜೀನ್‌ನ ಸ್ಥಳೀಕರಣವು, ಜೀನೋಮಿನ ಸಮಂಜಸವಾದ ಸರಣಿಯನ್ನು ಪ್ರತ್ಯೇಕಿಸಲು ಅಥವಾ ವರ್ಧಿಸಲು, ಒಂದನ್ನು ಅನುವು ಮಾಡಬೇಕು ಎಂಬ ಅಗತ್ಯವೇನೂ ಇಲ್ಲ

ಜೀವಕೋಶವೊಂದನ್ನು ಅಬೀಜ ಸಂತಾನೋತ್ಪತ್ತಿಗೆ ಈಡುಮಾಡುವುದು ಎಂದರೆ, ಏಕ ಜೀವಕೋಶದಿಂದ ಅಸಂಖ್ಯಾತ ಜೀವಕೋಶಗಳನ್ನು ಹುಟ್ಟಿಸುವುದು ಎಂದರ್ಥ. ಬ್ಯಾಕ್ಟೀರಿಯಾ ಮತ್ತು ಯೀಸ್ಟ್‌ನಂಥ ಏಕಕೋಶೀಯ ಜೀವಿಗಳ ವಿಷಯದಲ್ಲಿ ಈ ಪ್ರಕ್ರಿಯೆಯು ಗಮನಾರ್ಹವಾಗಿ ಸರಳವಾಗಿದೆ ಮತ್ತು ಇದಕ್ಕೆ ಅವಶ್ಯಕವಾಗಿ ಸೂಕ್ತ ಮಾಧ್ಯಮದ ತುಂಬುವಿಕೆಯದರ ಅಗತ್ಯವಷ್ಟೇ ಇರುತ್ತದೆ. ಆದಾಗ್ಯೂ, ಬಹು-ಕೋಶೀಯ ಜೀವಿಗಳಿಂದ ಜೀವಕೋಶದ ಬೆಳೆಸುವಿಕೆಯ ಸಂದರ್ಭದಲ್ಲಿ, ಜೀವಕೋಶದ ಅಬೀಜ ಸಂತಾನೋತ್ಪತ್ತಿಯು ಒಂದು ಪ್ರಯಾಸಕರ ವಿಷಯವಾಗಿದೆ. ಏಕೆಂದರೆ ಈ ಜೀವಕೋಶಗಳು ಪ್ರಮಾಣಬದ್ಧ ಮಾಧ್ಯಮದಲ್ಲಿ ಅನಾಯಾಸವಾಗಿ ಬೆಳೆಯುವುದಿಲ್ಲ.