ತಲಕಾವೆರಿ ಕೊಡಗಿನ ಪುಣ್ಯ ಕ್ಖ್ಶೇತ್ರವಗಿದೆ. ಮಹರ್ಶಿ ಕವೆರರವರ್ ಪುತ್ರಿ ಕಾವೇರಿ ಮಾತೆ. ಕೊಡಗಿನ ಕುಲದೇವತೆ. ದೇವಿ ಕಾವೇರಿ ಅಗಸ್ತ್ಯ ಋಶಿಯರವರನ್ನು ಮದುವೆಯಾದರು. ಮದುವೆಯ ಸಂದರ್ಭದಲ್ಲಿ ಕಾವೇರಿ ಮಾತೆಯು ಅವರನ್ನು ಎಂದಿಗೂ ಒಂಟಿಯಾಗಿ ಬಿಟ್ಟು ಹೋಗಬಾರದು ಎಂದು ಮಾತು ಕೊಡುವಂತೆ ಹೇಳಿದರು. ಅಗಸ್ತ್ಯರು ಮಾತು ಕೊಟ್ಟರು.ಆದರೆ ಒಂದು ದಿನ ಬೆಳಗಿನ ಜಾವ ಅಗಸ್ತ್ಯರು ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲು ಕಾವೇರಿ ಮಾತೆಗೆ ಹೇಳದೆ ಹೊರಟು ಹೋದರು. ಇದನ್ನು ತಿಳಿದ ಕಾವೇರಿ ಮಾತೆಯು ನೊಂದು ಅಗಸ್ತ್ಯ ಮುನಿಯವರನ್ನು ಬಿಟ್ಟು ಹರಿದು ಹೋದರು. ಅಗಸ್ತ್ಯರು ಕಾವೇರಿ ಮಾತೆಯನ್ನು ನಿಲ್ಲಿಸಲು ಪ್ರಯತ್ನಿಸಿದರು ಆದರೆ ಅವರು ನಿಲ್ಲಲಿಲ್ಲ. ಕಾವೇರಿ ಮಾತೆ ಹರಿದು ಬಲಮುರಿ ಎಂಬ ಸ್ಥಳಕ್ಕೆ ಬಂದು ತಲುಪಿದಾಗ ಅಗಸ್ತ್ಯರು ಬಂದು ಅವರನ್ನು ತಡೆಯಲು ಪ್ರಯತ್ನಿಸಿದರು ಆದರೆ ಅವರು ಪುನಾ ಹರಿದು ಹೋದರು. ಅಗಸ್ತ್ಯರು ಕಾವೇರಿ ಮಾತೆಯನ್ನು ಹುಡುಕುತಿರುವಾಗ ಕೊಡವರನ್ನು ಕಾವೇರಿ ಮಾತೆ ಎಲ್ಲಿ ಹೊಗಿದ್ದಾರೆ ಎಂದು ಕೇಳಿದಾಗ ಅವರು ಹೇಳಿಲ್ಲ ಅದರೆ ಹರಿಜನರು ಹಏಳಿ ಕೊಟ್ಟರು. ಆಗ ಅಗಸ್ತ್ಯರು ಕೊಡವರಿಗೆ ಶಾಪ ಹಾಕಿದರು. ಕಾವೇರಿ ಮಾತೆ ಮತ್ತೆ ಬಂದು ಕೊಡವರಿಗೆ ಕೊಟ್ಟ ಶಾಪವನ್ನು ವಿಮೋಚನೆ ಮಾಡಿದಳು. ಪ್ರತಿ ಅಕ್ಟೋಬರ್ ತಿಂಗಳಲ್ಲಿ ಕಾವೇರಿ ಮಾತೆ ತಲಕಾವೇರಿಯ ಕುಂಡಿಗೆಯಲ್ಲಿ ತೀರ್ಥ ಸ್ವರೂಪಿಯಾಗಿ ಬರುತಳೆ.