ಸದಸ್ಯ:2230985Siddhima.M/ನನ್ನ ಪ್ರಯೋಗಪುಟ

ಸ್ವಯಂ ಪರಿಚಯ


"ಪ್ರತಿಯೊಬ್ಬ ವ್ಯಕ್ತಿ ತನ್ನದೇ ಆದ ರೀತಿಯಲ್ಲಿ ಅನನ್ಯ" ಯಂದು ಪ್ರಸಿದ್ಧ ಕವಿ ಮಿಲ್ಟನ್ ಹೇಳಿದ್ದಾರೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರು ಕೆಲವು ಸಾಮರ್ಥ್ಯಗಳನ್ನು ಮತ್ತು ಉದೇಶಗಳನ್ನು ಹೊಂದಿರುವರು. ಈಗ ಪ್ರಶ್ನೆಯಂದರೆ ನಾವು ಹೊಂದಿರುವ ಈ ವಿಶೇಷ ಸಾಮರ್ಥ್ಯಗಳು ನಮಗೆ ತಿಳಿದಿದೀಯೇ ಇಲ್ಲವೇ ಎಂಬುದು. ನನಗು ಇದೇ ಮಾತು ನಿಜ. ನನ್ನ ಹೆಸರು ಸಿದ್ಧಿಮ. ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನ ಜಿಗಣಿಯಲ್ಲಿ. ಪಿ.ಎಸ್.ಬಿ.ಬಿ.ಎಲ್.ಎಲ್.ಏ ಯಂಬ ಶಾಲೆಯಲ್ಲಿ ಶಿಕ್ಷಣವನ್ನು ಮುಗಿಸಿ ಮತ್ತು ಪ್ರಿ ಯೂನಿವರ್ಸಿಟಿ ಕೋರ್ಸನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಿಂದ ಮುಗಿಸಿದ್ದೇನೆ . ಪ್ರಸ್ತುತವಾಗಿ ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಎರಡನೇ ವರ್ಷದ ಬಿ.ಎ ವಿದ್ಯಾರ್ಥಿಯಾಗಿ ಓದುತ್ತಿದ್ದೇನೆ. ಇತಿಹಾಸ, ರಾಜಕೀಯ ವಿಜ್ಞಾನ ಹಾಗು ಅರ್ಥಶಾಸ್ತ್ರ ನನ್ನ ಮುಖ್ಯ ವಿಷಯಗಳು. ಅದರಲ್ಲಿ ಭಾರತೀಯ ರಾಷ್ಟ್ರ ಚಳುವಳಿ ಮತ್ತು ಭಾರತದ ಕಾನ್ಸ್ಟಿಟ್ಯೂಷನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೇನೆ.ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿಯಿದ್ದು, ಬಿಡುವಿನ ಸಮಯದಲ್ಲಿ ಫಿಕ್ಷನ್ ಪುಸ್ತಕಗಳನ್ನು ಓದುವುದು ಹಾಗು ಚಿತ್ರಗಳನ್ನು ಬಿಡಿಸುತ್ತೇನೆ. ಅದಲ್ಲದೆ  ಒಳ್ಳೆಯ ಚಲನಚಿತ್ರಗಳ್ಳನ್ನು ನೋಡುತ್ತಾ ಸಮಯವನ್ನು ಕಳೆಯುತ್ತೇನೆ. ನನ್ನ ಕಲ್ಪನೆ ಹಾಗು ಆಲೋಚನಾ ಬುದ್ಧಿಯನ್ನು ಈ ರೀತಿ ವಿಸ್ತಾರಿಸುತ್ತೇನೆ. "ಗ್ಲೋಬಲ್ ಆರ್ಟ್" ಯಂಬ ಸಂಸ್ಥೆಯಲ್ಲಿ ಚಿತ್ರಕಲೆಯ ಕೋರ್ಸ್ ಮುಗಿಸಿ, ಕೆಲವು ಸೆಮಿನಾರುಗಳಲ್ಲಿ ಭಾಗವಹಿಸಿದೇನೆ.ನನ್ನ ಶಾಲಾ ದಿನಗಳಲ್ಲಿ ಹ್ಯಾಂಡ್ಬಾಲ್ ಕ್ರೀಡೆಯ ತರಬೇತಿಯನ್ನು ಹೊಂದಿದ್ದು , ನನ್ನ ನೆಚ್ಚಿನ ಕ್ರೀಡೆಯಾದರಿಂದ ಇದರಲ್ಲಿ ಹೆಚ್ಚು ಭಾಗವಹಿಸಿ ಬೇರೆ ಶಾಲೆಗಳ ವಿದ್ಯಾರ್ಥಿಗಳ ಮೇಲೆ ಸ್ಪರ್ಧೆಯಲ್ಲಿ ಗೆದಿದ್ದೇನೆ ಹಾಗು ಸಿ.ಬಿ.ಎಸ್.ಈ ಸೌತ್ ಜೋನ್ ಕ್ಲಕ್ಸ್ಟರ್ಸ್ನಲ್ಲಿ ಭಾಗವಹಿಸಿದ್ದೇನೆ . ಈ ಕ್ರೀಡೆಯಿಂದ ನಾನು ಕಲಿತ ಪಾಠವೆಂದರೆ ಆತ್ಮವಿಶ್ವಾಸ ಹಾಗು ಧೈರ್ಯ ಹೆಚ್ಚು ಪ್ರಮುಖ. ಅದೇ ರೀತಿ ಟೀಮ್ ವರ್ಕ್ ಬಲು ಮುಖ್ಯ ಎಂದು ಕಲಿತೆ.  ಅದಲ್ಲದೆ ನಾನು ಕಾಲೇಜಿನಲ್ಲಿ ಒಂದು ಇಂಟರ್ನ್ಶಿಪ್ ಅನ್ನು ಸಹ ಮುಗಿಸಿದ್ದೇನೆ.ನನ್ನ ಇಂಟರ್ನ್‌ಶಿಪ್ ಅಂತರಾಷ್ಟ್ರೀಯ ಸಂಬಂಧವನ್ನು ಸಂಭಂದಿಸಿದ್ದು,ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳನ್ನು ಪರಿಶೀಲಿಸಿದೆ. ಈ ರೀತಿಯಲ್ಲಿ ನನ್ನ ಕಾಲೇಜಿನ ವಿಷಯಗಳ್ಳನ್ನು ಹೆಚ್ಚು ಕಲಿತೆನು. ಇದನ್ನು ಹೊರತುಪಡಿಸಿ ಕಾನ್ಸ್ಟಿಟ್ಯೂಷನಲ್ ಪ್ರಶ್ನಾಸ್ಫರ್ಧೆಗಳಲ್ಲಿ  ಗೆದ್ದು, ಬುಕ್ ರಿವ್ಯೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಈ ಮೇಲೆ ಚರ್ಚಿಸಿದ್ದು ನನ್ನ ಶೈಕ್ಷಣಿಕ ಗುರಿಗಲ್ಲಾದರೆ, ನನ್ನ ಗುಣಗಳೇ ಬೇರೆ. ಕಷ್ಟ ಪಟ್ಟು ಕೆಲಸ ಮಾಡುವುದು ಹಾಗು ಪ್ರಾಮಾಣಿಕತೆಯನ್ನು ಇಷ್ಟಪಡುತ್ತೇನೆ, ಅದೇ ರೀತಿಯಲ್ಲಿ ಯಾವುದೇ ಕೆಲಸ ಮಾಡಲಿ ಅದರಲ್ಲಿ ನನ್ನ ಸೃಜನಶೀಲತೆಯನ್ನು ತೋರುತ್ತೇನೆ. ಹಾಗೆ ನಾನು ಒಬ್ಬ ಕ್ರೀಯಾತ್ಮಕ ಮತ್ತು ಉತ್ಸಹವುಳ್ಳ ವ್ಯಕ್ತಿ. ನನ್ನ ಮುಂದಿನ ಓದಿನ ಬಗ್ಗೆ ಹೆಚ್ಚು ಆಕಾಂಕ್ಷೆ ಹೊಂದಿದ್ದು ನನ್ನ ಈ ಗುಣಗಳ್ಳನ್ನು ಸಮರ್ಥವಾಗಿ ಉಪಯೋಗಿಸಲು ಪ್ರಯತ್ನಪಡುತ್ತೇನೆ. ಸಾಧ್ಯವಿರುವ ಪ್ರತಿಯೊಂದು ಸಂಧರ್ಭದಲ್ಲೂ ನಾನು ಕಲಿಯಲು ಪ್ರಯತ್ನಿಸುತ್ತೆನೆ. ಮನೋರಂಜನೆಗಾಗಿ ನನ್ನ ಸ್ನೇಹಿತರೊಂದಿಗೆ ಸಮಯ ಕಳೆಯಲು ಅಥವಾ ಪರಿವಾರದವರೊಂದಿಗೆ ರಜಾ ಸಮಯದಲ್ಲಿ  ಪ್ರವಾಸಕ್ಕೆ ಹೋಗಿ ಸಮಯ ಕಳಿಯಲು ಇಷ್ಟಪಡುತ್ತೇನೆ. ಆ ಸಮಯವನ್ನು ಬರೀ ಮನೋರಂಜನೆಯಲ್ಲಿ ಕಳೆಯದೆ ಆ ಸ್ಥಳದ ಇತಿಹಾಸ, ಭಾಷೆ, ಕಲೆ ಹಾಗು ಸಾಂಪ್ರದಾಯವನ್ನು ತಿಳಿಯಲು ಆಸಕ್ತಿ ವಹಿಸುತ್ತೇನೆ. ಈ ಕೆಲಸವನ್ನು ಸುಲಭ ಮಾಡಲು ಒಂದು ಟ್ರಾವೆಲ್ ಜರ್ನಲ್ ಅನ್ನು ಹೊಂದಿದ್ದೇನೆ. ಅದೇ ರೀತಿ ನನಗೆ ಬೇರೆ ಬೇರೆ ದೇಶಗಳನ್ನು ಭೇಟಿ ನೀಡಿ ಅಲ್ಲಿನ ಜೀವನ ಶೈಲಿ ಹಾಗು ಜನರ ಬಗ್ಗೆ ತಿಳಿಯಲು ಆಸಕ್ತಿಯನ್ನು ಹೊಂದಿದ್ದೇನೆ. ಅದರಲ್ಲಿ ಬಹುಮುಖ್ಯವಾಗಿ ಆ ಸ್ಥಳದ ಆಹಾರವನ್ನು ಸೇವನೆ ಮಾಡಲು ಆಸಕ್ತಿ ಹೊಂದಿದೇನೆ. ಟಿ.ವಿ ಷೋಗಳಲ್ಲಿ ತೋರಿಸುವಂತೆ ಆ ಆಹಾರಗಳು,ತಿನ್ನಲೂ ಸಹ ರುಚಿಯಾಗಿರುತಾವೆಯೇ ಯಂದು ನನಗೆ ಒಂದು ಕುತೂಹಲ. ಮನುಷ್ಯನು ಯಾವಾಗಲೂ ಒಳ್ಳಯ ಹಾಗು ಕೆಟ್ಟ ಗುಣಗಳನ್ನು ಅಥವಾ ಅಭ್ಯಾಸಗಳನ್ನು ಹೊಂದಿರುತಾನೆ. ಈ ಕೆಟ್ಟ ಗುಣಗಳನ್ನು ಒಪ್ಪಿಕೊಳ್ಳುವುದು ಮತ್ತು ಅದರ ಕಡೆಗೆ ಕೆಲಸ ಮಾಡುವುದು ಮುಖ್ಯವಾಗಿರಬೇಕು. ಇದು ನನಗೂ ಅನ್ವಯಿಸುತ್ತದೆ. ಕೋಪ, ಅಸಹನೆ ಮತ್ತು ನನ್ನ ಭಾವನೆಗಳನ್ನು ನಿಯಂತ್ರಿಸಲು ಅಸಮರ್ಥತೆ ನನ್ನ ದೌರ್ಬಲ್ಯಗಳು. ನಾನು ಅಪರಿಚಿತರನ್ನು ಸುಲಭವಾಗಿ ನಂಬುತೇನೆ, ಅವರ ಮೇಲೆ ಹೆಚ್ಚು ಭರವಸೆ ಇಟ್ಟು ಅನಂತರ ದುಃಖ ಪಡುತ್ತೇನೆ. ಈ ದೌರ್ಬಲ್ಯಗಳ್ಳನು ಸರಿಯಾಗಿ ನಿರ್ವಹಿಸದಿದ್ದಲ್ಲಿ ನನ್ನ ಯಾವ ಒಳ್ಳೆಯ ಗುಣಗಳು ಉಪಯೋಗಕ್ಕೆ ಬಾರದು.ಅದನ್ನು ಅರಿತು ನನ್ನ ಈ ಕೆಟ್ಟ ಗುಣಗಳನ್ನು ಸುಧಾರಿಸಲು ಪ್ರಯತ್ನಿಸುತ್ತೇನೆ.ಈ ಮೇಲಿನ ಬರಹ ನನ್ನ ಒಂದು ಪರಿಚಯ. ಕವಿ ಮಿಲ್ಟನ್ ಹೇಳಿದಂತೆ ನನ್ನ ಸಾಮರ್ಥ್ಯಗಳನ್ನು ಮತ್ತು ಉದೇಶಗಳನ್ನು ಅರಿತಿದ್ದೇನೆಯೊ ಇಲ್ಲವೋ ನನಗೆ ತಿಳಿಯದು. ಆದರೆ ನನ್ನನ್ನು ನಾನೇ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾ , ಹಾಗೆಯೇ ನಾನು ಪಡೆದ ಸೌಲಭ್ಯಗಳನ್ನು ಒಳ್ಳೆಯ ಉದೇಶಕ್ಕಾಗಿ ಬಳಿಸಿ, ಸಮಾಜದಲ್ಲಿ ನನ್ನ ಒಂದು ಸಣ್ಣ ಕೊಡುಗೆ ನೀಡಲು ಬಯಸುತ್ತಾ, ಈ ಒಂದು ಕಾರಣದಲ್ಲಿ ನನ್ನ ನಂಬಿಕೆಯನ್ನು ಬೀರಲು ಬಯಸುತ್ತೇನೆ.