ಸದಸ್ಯ:ಅಮೃತಾ ನಾಯ್ಕ/ನನ್ನ ಪ್ರಯೋಗಪುಟ

ಮಾರಣಕಟ್ಟೆ - ಬ್ರಹ್ಮಲಿಂಗೇಶ್ವರ ಬದಲಾಯಿಸಿ

ಮಾರಣಕಟ್ಟೆಯು ಕುಂದಾಪುರದಿಂದ ಕೊಲ್ಲೂರು ಮಾರ್ಗದಲ್ಲಿ ಕುಂದಾಪುರದಿಂದ ೧೬ಕಿಮೀ ದೂರದಲ್ಲಿದೆ.ಈ ಗ್ರಾಮವನ್ನು ಕಂಚಿನಕೋಡ್ಲು ಎಂದೂ ಕರೆಯುತ್ತಾರೆ. ಇಲ್ಲಿ ಬ್ರಹ್ಮಲಿಂಗೇಶ್ವರ ದೇವಸ್ಥಾನವಿದೆ. ಇದು ಉತ್ತರ ದಿಕ್ಕಿನಲ್ಲಿರುವ ಬ್ರಹ್ಮಕುಂಡ ನದಿಯ ದಡದಲ್ಲಿದೆ. ಇದು ಪೂರ್ವಕ್ಕೆ ಕಡಿದಾದ ತಿರುವು ಪಡೆದು ಇದರ ಸೌದಂರ್ಯವನ್ನು ಹೆಚ್ಚಿಸುತ್ತದೆ.

ಪೂಜೆ ಬದಲಾಯಿಸಿ

ಪ್ರತಿ ಮಕರಸಂಕ್ರಾತಿ ಎಂದು ಭಕ್ತಾದಿಗಳು ಬಂದು ಪೂಜೆ ,ಹಣ್ಣುಕಾಯಿ , ಮಂಗಳಾರತಿ ಯನ್ನು ಕೊಡುತ್ತಾರೆ. ರಂಗಪೂಜೆಯು ಈ ದೇವರಿಗೆ ಇಷ್ಟವಾದ ಪೂಜೆ. ಯಕ್ಷಗಾನವು ಕೂಡ ಇ ದೇವರ ಪ್ರೀಯವಾದ ಸೇವೆಯಾಗಿದೆ.

ಜಾತ್ರೆ ಬದಲಾಯಿಸಿ

ಪ್ರತಿ ವರ್ಷದ ಜನವರಿ ತಿಂಗಳ ೧೪ ಮತ್ತು ೧೫ ರ ಮಕರ ಸಕ್ರಾಂತಿ ಎಂದು ಇಲ್ಲಿ ಜಾತ‍್ರೆ ನೆಡೆಯುತ್ತೆ. ಇದಕ್ಕೆ ಬೇರೆ ಬೇರೆ ಕಡೆಯಿಂದ ಭಕ‍್ತಾದೀಗಳು ಆಗಮನಿಸುತ್ತಾರೆ.

ದೇವಸ್ಥಾನದ ವಿಶೇಷ ಕಾರ್ಯಕ್ರಮ_ಉತ್ಸವಾದಿಗಳೂ:

  1. ಮಕರಸಂಕ್ರಮಣ(ಜಾತ್ರೆ) ನಂತರ ಎರಡು ದಿನ ಮಂಡಲ ಉತ್ಸವ(ಜನವರಿ)
  2. ಕುಂಭ ಸಂಕ್ರಮಣ(ಕಿರು ಜಾತ್ರೆ)(‍ಫೆಬ್ರವರಿ)
  3. ವರ್ಷದ ಮೂರು ಕಾಲದಲ್ಲಿ ಚರುವಿನಪೂಜೆ(ವೃಷ್ಟಿಕ ಮಾಸ , ಮೇಷ ಮಾಸ, ಸಿಂಹ ಮಾಸ)
  4. ಸೌರಮಾನ ಯುಗಾದಿ
  5. ದೀಪಾವಳಿ

ಉಲ್ಲೇಖಗಳು ಬದಲಾಯಿಸಿ