ಸಂತೋಷ್ ಆನಂದ್ ರಾಮ್

ಭಾರತೀಯ ಚಲನಚಿತ್ರ ನಿರ್ದೇಶಕ, ಗೀತರಚನೆಕಾರ ಮತ್ತು ಚಿತ್ರಕಥೆಗಾರ

ಸಂತೋಷ್ ಆನಂದ್ ರಾಮ್ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಗೀತರಚನೆಕಾರ, ಚಿತ್ರಕಥೆಗಾರ, ನಿರ್ದೇಶಕ. ಅವರ ಚೊಚ್ಚಲ ಚಿತ್ರ 2014ರ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ . ಅವರು ರಾಜಕುಮಾರ ಮತ್ತು ಯುವರತ್ನ ಚಿತ್ರಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ನಿರ್ದೇಶಿಸಿದ್ದಾರೆ. ರಾಜಕುಮಾರ ಕನ್ನಡ ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು.

ಸಂತೋಷ್ ಆನಂದ್ ರಾಮ್
ಜನನ (1985-08-15) ೧೫ ಆಗಸ್ಟ್ ೧೯೮೫ (ವಯಸ್ಸು ೩೮)
ವೃತ್ತಿ(ಗಳು)ಚಲನಚಿತ್ರ ನಿರ್ದೇಶಕ, ಚಿತ್ರ ಸಾಹಿತಿ, ಚಿತ್ರಕಥೆಗಾರ
Years active2006-ಪ್ರಸ್ತುತ
ಸಂಗಾತಿಸುರಭಿ
Awardsರಾಜಕುಮಾರ (ಚಲನಚಿತ್ರ) ಕ್ಕಾಗಿ ಝೀ ಕನ್ನಡದಿಂದ "ಹೆಮ್ಮೆಯ ನಿರ್ದೇಶಕ" ಪ್ರಶಸ್ತಿ

ವೃತ್ತಿ ಬದಲಾಯಿಸಿ

ಅವರು ರಾಕಿ ಚಿತ್ರದ ಮೂಲಕ ಗೀತರಚನೆಕಾರರಾಗಿ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಚಿಂಗಾರಿಗೆ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ವಿಭಾಗಗಳಲ್ಲಿ ಹರ್ಷ ಅವರಿಗೆ ಸಹಾಯ ಮಾಡಿದರು. ಅಗ್ರಜ ಮತ್ತು ಗಜಕೇಸರಿ ಚಿತ್ರಗಳಿಗೆ ಸಂಭಾಷಣೆಕಾರರಾಗಿಯೂ ಕೆಲಸ ಮಾಡಿದ್ದಾರೆ. ಅವರು 2014 ರಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಇಂದಸ್ಟ್ರೀ ಹಿಟ್ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು. ಪುನೀತ್ ರಾಜ್‌ಕುಮಾರ್ ಜೊತೆಗಿನ ಅವರ ಮುಂದಿನ ಚಿತ್ರ ರಾಜಕುಮಾರ 24 ಮಾರ್ಚ್ 2017 ರಂದು ಬಿಡುಗಡೆಯಾಯಿತು ಮತ್ತು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಯನ್ನು ಪಡೆಯಿತು. ಸತತ ಎರಡು ಇಂಡಸ್ಟ್ರಿ ಹಿಟ್‌ಗಳ ಅದ್ಭುತ ಯಶಸ್ಸಿನ ನಂತರ, ಅವರು ಕನ್ನಡ ಚಿತ್ರರಂಗದ "ಸ್ಟಾರ್ ಡೈರೆಕ್ಟರ್" ಎಂಬ ಖ್ಯಾತಿ ಪಡೆದರು.

ಹೊಂಬಾಳೆ ಫಿಲಂಸ್ ಅಡಿಯಲ್ಲಿ ಕನ್ನಡದ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಯುವರತ್ನ ಚಿತ್ರ ನಿರ್ದೇಶಿಸಿದರು. ಇದನ್ನು 1 ನವೆಂಬರ್ 2018 ರಂದು ಕನ್ನಡ ರಾಜ್ಯೋತ್ಸವದ ನಿಮಿತ್ತ ಪ್ರಾರಂಭಿಸಲಾಯಿತು. ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಲು ಚಾಮರಾಜನಗರ ಜಿಲ್ಲೆಯ ಇಬ್ಬರು ಅಂಗವಿಕಲ ಮಕ್ಕಳು ಬಂದಿದ್ದರು. ಆನಂದ್ರಾಮ್ ಅವರಿಗೆ ಜೀ ಕನ್ನಡದ ಹೆಮ್ಮೆಯ ನಿರ್ದೇಶಕ (ಕರ್ನಾಟಕದ ಹೆಮ್ಮೆಯ ನಿರ್ದೇಶಕ) ರಾಜಕುಮಾರ ಚಿತ್ರಕ್ಕಾಗಿ ನೀಡಿ ಗೌರವಿಸಲಾಯಿತು. ಇವರು 2021 ರಲ್ಲಿ ಯುವರತ್ನ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ವೈಯಕ್ತಿಕ ಜೀವನ ಬದಲಾಯಿಸಿ

ಸಂತೋಷ್ ಆನಂದ್ರಾಮ್ ಅವರು ಕರ್ನಾಟಕದ ಉಡುಪಿ ಜಿಲ್ಲೆಯ ಕೋಟಾದವರು, ಆದರೂ ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರು. ಅವರಿಗೆ ಒಬ್ಬ ಸಹೋದರ ಸಾಗರ್ ಆನಂದ್ರಾಮ್ ಇದ್ದಾರೆ. ಅವರು ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರು ಎಜುಕೇಶನ್ ಸೊಸೈಟಿಯಲ್ಲಿ ಮಾಡಿದರು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವಿ ಪಡೆದರು. ಅವರು ಇನ್ಫೋಸಿಸ್‌ಗೆ ನೇಮಕಗೊಂಡರು, ಅಲ್ಲಿ ಅವರು ಸುಮಾರು ಒಂದು ವರ್ಷ ಕೆಲಸ ಮಾಡಿದರು. ಅವರು ಸುರಭಿಯವರನ್ನು 21 ಫೆಬ್ರವರಿ 2018 ರಂದು ಬೆಂಗಳೂರಿನಲ್ಲಿ ವಿವಾಹವಾದರು. [೧]

ಉಲ್ಲೇಖಗಳು ಬದಲಾಯಿಸಿ

  1. "Director Santhosh Ananddram Interview". Nam Cinema.

ಬಾಹ್ಯ ಕೊಂಡಿಗಳು ಬದಲಾಯಿಸಿ