ಶ್ರೀ ಭಾಷ್ಯ ಹಿಂದೂ ತತ್ವಜ್ಞಾನಿ ರಾಮಾನುಜರ (೧೦೧೭–೧೧೩೭) ಅತ್ಯಂತ ಪ್ರಸಿದ್ಧ ಕೃತಿ. ಇದರಲ್ಲಿ ಅವರು ಬಾದರಾಯಣನ ವೇದಾಂತ/ಬ್ರಹ್ಮಸೂತ್ರದ ಕುರಿತು ವ್ಯಾಖ್ಯಾನಿಸಿದ್ದಾರೆ. [೧]

ರಾಮಾನುಜರ ಚಿತ್ರಕಲೆ, ಹಚಿನ್‌ಸನ್‌ರ ರಾಷ್ಟ್ರಗಳ ಇತಿಹಾಸ

ವಿವರಣೆ ಬದಲಾಯಿಸಿ

ಉಪನಿಷತ್ತುಗಳು, ಭಗವದ್ಗೀತೆ ಮತ್ತು ಇತರ ಸ್ಮೃತಿ ಪಠ್ಯಗಳು, ಹಿಂದಿನ ಆಚಾರ್ಯರು ಮತ್ತು ವೇದಾಂತ-ಸೂತ್ರಗಳ ವ್ಯಾಖ್ಯಾನದ ಆಧಾರದ ಮೇಲೆ ರಾಮಾನುಜರು ತಮ್ಮ ವ್ಯಾಖ್ಯಾನದಲ್ಲಿ ವಿಶಿಷ್ಟಾದ್ವೈತದ ಮೂಲಭೂತ ತತ್ವಶಾಸ್ತ್ರದ ತತ್ವಗಳನ್ನು ಪ್ರಸ್ತುತಪಡಿಸುತ್ತಾರೆ. [೨] ಶಂಕರರ ಅದ್ವೈತ ವೇದಾಂತವನ್ನು ಮತ್ತು ನಿರ್ದಿಷ್ಟವಾಗಿ ಅವರ ಮಾಯಾ ಸಿದ್ಧಾಂತವನ್ನು ನಿರಾಕರಿಸುವ ಮೂಲಕ ಇದನ್ನು ರಚಿಸಲಾಗಿದೆ. ಈ ಕೃತಿಯಲ್ಲಿ, ಅವರು ವಾಸ್ತವದ ಮೂರು ವರ್ಗಗಳ ಕುರಿತು ವಿವರಿಸುತ್ತಾರೆ (ತತ್ತ್ವಗಳು) ಅವೆಂದರೆ, ದೇವರು, ಆತ್ಮ ಮತ್ತು ವಸ್ತು. ಇವುಗಳನ್ನು ಮಾಧ್ವರಂತಹ ನಂತರದ ವೈಷ್ಣವ ದೇವತಾಶಾಸ್ತ್ರಜ್ಞರು ಬಳಸಿದ್ದಾರೆ. [೩] ವಿಮೋಚನೆಗೆ (ಮೋಕ್ಷ) ಸಾಧನವಾಗಿ ಭಕ್ತಿಯ ತತ್ವಗಳನ್ನು ಸಹ ಇದರ ಮೂಲಕ ಅಭಿವೃದ್ಧಿಪಡಿಸಲಾಯಿತು. ದೇಹ ಮತ್ತು ಆತ್ಮದ ನಡುವಿನ ಸಂಬಂಧವನ್ನು ಅವರು ಈ ಕೃತಿಯಲ್ಲಿ ವಿವರಿಸುತ್ತಾರೆ. ರಾಮಾನುಜರು ವೇದಾಂತ-ದೀಪ ಮತ್ತು ವೇದಾಂತ-ಸಾರವನ್ನು [೪] ಶ್ರೀ ಭಾಷ್ಯವನ್ನು ಅರ್ಥ ಮಾಡಿಸಲೋಸುಗ ಬರೆದರು. [೫] [೬]

ಸಹ ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. Sri Ramanuja, M. Rangacharya (1899). Sri Bhashya English Translation by M Rangacharya, MB Varadaraja Aiyangar 3 Vols (in English). sanskritebooks.org/.{{cite book}}: CS1 maint: unrecognized language (link)
  2. Isayeva, Natalia (1993-01-01). Shankara and Indian Philosophy (in ಇಂಗ್ಲಿಷ್). State University of New York Press. p. 243. ISBN 978-1-4384-0762-3.
  3. Vemsani, Lavanya (2016-06-13). Krishna in History, Thought, and Culture: An Encyclopedia of the Hindu Lord of Many Names: An Encyclopedia of the Hindu Lord of Many Names (in ಇಂಗ್ಲಿಷ್). ABC-CLIO. p. 293. ISBN 978-1-61069-211-3.
  4. Seshachalam, C. (1974). Visishtadvaita Philosophy and Religion: A Symposium by Twenty-four Erudite Scholars (in ಇಂಗ್ಲಿಷ್). Ramanuja Research Society. p. 82.
  5. Clayton, John (2006-11-25). Religions, Reasons and Gods: Essays in Cross-cultural Philosophy of Religion (in ಇಂಗ್ಲಿಷ್). Cambridge University Press. pp. iii. ISBN 978-1-139-45926-6.
  6. Chari, S. M. Srinivasa (1999). Advaita and Viśiṣṭādvaita: A Study Based on Vedānta Deśikā's Śatadūṣaṇī (in ಇಂಗ್ಲಿಷ್). Motilal Banarsidass Publishe. p. 8. ISBN 978-81-208-1535-3.

ಮೂಲಗಳು ಬದಲಾಯಿಸಿ

  • ಹಾಜಿಮೆ ನಕಮುರಾ ಮತ್ತು ಟ್ರೆವರ್ ಲೆಗೆಟ್, ಎ ಹಿಸ್ಟರಿ ಆಫ್ ಅರ್ಲಿ ವೇದಾಂತ ಫಿಲಾಸಫಿ, ಸಂಪುಟ 2, ನವದೆಹಲಿ, ಮೋತಿಲಾಲ್ ಬನಾರ್ಸಿದಾಸ್ (1983)
  • ಅದ್ವೈತ ಆಶ್ರಮ (2003). ಶ್ರೀ ರಾಮಾನುಜರ ಪ್ರಕಾರ ಬ್ರಹ್ಮ ಸೂತ್ರಗಳು. ISBN 81-7505-006-3

ಬಾಹ್ಯ ಕೊಂಡಿಗಳು ಬದಲಾಯಿಸಿ