ಒಟ್ಟಾರೆ, ೧೪ ಶಂಕರಮಠಗಳಿರುವ ಕರ್ನಾಟಕ ರಾಜ್ಯದಲ್ಲಿ, ಭದ್ರಾವತಿಯಲ್ಲಿರುವ ಶಂಕರಮಠದ ಶಾಖೆ ಬಹಳ ಹೆಸರುವಾಸಿಯಾಗಿದೆ. ಸನ್, ೨೦೦೧ ರಲ್ಲಿ 'ಹೆಬ್ಬೂರು ಯತಿ'ಗಳಿಂದ ಗುದ್ದಲಿ ಪೂಜೆಯ ಶಾಸ್ತ್ರದ ಬಳಿಕ ಶೃಂಗೇರಿ ಯತೀಂದ್ರ, ಶ್ರೀ. ಶ್ರೀ. ಶ್ರೀ. ಭಾರತಿಮಹಾಸ್ವಾಮಿಗಳ ಅಮೃತಹಸ್ತದಿಂದ 'ಕುಂಬಾ ಭಿಷೇಕದ ಕಾರ್ಯಕ್ರಮ 'ಸಂಪನ್ನಗೊಂಡಿತು. ವರ್ಷದಲ್ಲಿ ೪ ಸಮಾರಂಭಗಳು ಬಹಳ ವಿಜೃಂಭಣೆಯಿಂದ ಜರುಗುತ್ತವೆ. ಅವುಗಳು :

  • ನವರಾತ್ರಿ ಉತ್ಸವ
  • ವಾರ್ಷಿಕೋತ್ಸವ
  • ಶಂಕರ ಜಯಂತಿ
  • ಕಾರ್ತಿಕಮಾಸದ ಪೂಜೆ
  • ದೀಪ ನಮಸ್ಕಾರ
ಚಿತ್ರ:023.JPG
'ಶಾರದಾ ದೇವಿಯ ಮಂದಿರ'

ಭಾರತೀ ತೀರ್ಥರ ಸಭಾಭವನ ಬದಲಾಯಿಸಿ

ವಿಶಾಲವಾದ ಈ ಸಭಾಂಗಣದ ಉದ್ಘಾಟನೆ 'ಶ್ರೀ. ವಿಕೃತಿನಾಮ ಸಂವತ್ಸರ'ದ ಚೈತ್ರ, ಬಹುಳ,ಚತುರ್ಥಿ, ಶುಕ್ರವಾರದಂದು, ಅಂದರೆ, ತಾ.೦೨-೦೪-೨೦೧೦ ರಂದು, ಭಾರತೀ ತೀರ್ಥಸ್ವಾಮಿಗಳವರ ೬೦ ನೇ ವರ್ಷದಂದು ಅವರ ಅಮೃತಹಸ್ತದಿಂದ ಜರುಗಿತು. ಈ ಸಭಾಗೃಹದಲ್ಲಿ ಮದುವೆ, ಉಪನಯನ, ಮುಂತಾದ ಸಮಾರಂಭಗಳಿಗೆ ಅನುಕೂಲವಾದ ಸ್ಥಳವಾಗಿದೆ.

ಚಿತ್ರ:027.JPG
'ಭದ್ರಾವತಿಯ ಶಂಕರಮಠದ ಪ್ರಾಂಗಣದಲ್ಲಿರುವ ಭಾರತೀ ತೀರ್ಥ ಸಭಾಭವನ'