ವಿಹಾರ ನೌಕೆ ಒಂದು ವಿಹಾರಕ್ಕಾಗಿ ಬಳಸುವ ದೋಣಿ. ಈ ಶಬ್ದವು ಡಚ್‌ನಲ್ಲಿ "ಬೇಟೆ" ಎಂಬ ಅರ್ಥದ ಜಾಟ್ ಎಂಬ ಪದದಿಂದ ವ್ಯುತ್ಪತ್ತಿಯಾಗಿದೆ (Etymology). ಮೂಲತಃ ಇದಕ್ಕೆ ಬೆಳಕು,ವೇಗವಾಗಿ ಸಂಚರಿಸುವ ದೋಣಿ ಎಂಬ ಅರ್ಥವಿದ್ದು ,ಕಡಲ್ಗಳ್ಳರನ್ನು ಮತ್ತು ತಗ್ಗು ಪ್ರದೇಶದಲ್ಲಿನ ಆಳವಿಲ್ಲದ ಸಮುದ್ರತೀರದ ಸುತ್ತಲಿನ ಅತಿಕ್ರಮಣಕಾರರನ್ನು ಹಿಂಬಾಲಿಸಲು ಡಚ್ ಸೈನಿಕರಿಂದ ಇದು ಬಳಸಲ್ಪಡುತ್ತಿತ್ತು. ತನ್ನ ರಾಜಪ್ರಭುತ್ವದ ಪುನಃಪ್ರತಿಷ್ಠಾಪನೆಗಾಗಿ ಹಾಲೆಂಡ್‌ನಿಂದ ಬ್ರಿಟನ್‌ಗೆ ಹಿಂತಿರುಗಲು ಇಂಗ್ಲೆಂಡ್‌ನ ಎರಡನೇ ಚಾರ್ಲ್ಸ್‌ ಈ ದೋಣಿಯನ್ನು ಬಳಸಿದ ನಂತರದಲ್ಲಿ ಇದು ಪ್ರತಿಷ್ಠಿತ ವ್ಯಕ್ತಿಗಳನ್ನು ಒಯ್ಯಬಲ್ಲ ದೋಣಿಯಾಗಿ ಬಳಸಲ್ಪಟ್ಟಿತು.

ಕಡಲಾಚೆಗೆ ಸಮುದ್ರಯಾನ ಮಾಡುವ ವಿಹಾರ ನೌಕೆ

ಇಂದಿನ ಬಳಕೆಯಲ್ಲಿ ಈ ಪದವು ಎರಡು ಪ್ರತ್ಯೇಕ ವರ್ಗಗಳ ದೋಣಿಯಾನಗಳನ್ನು ಸೂಚಿಸುವುದಕ್ಕಿಂತ ಹೆಚ್ಚಾಗಿ ವಿದ್ಯುತ್‌ಚಾಲಿತ ದೋಣಿ ಹಾಗೂ ನೌಕಾಯಾನವನ್ನು ಸೂಚಿಸುತ್ತದೆ. ದುಬಾರಿ ಬೆಲೆಯ ಸುಖವಿಲಾಸಕ್ಕಾಗಿ ಬಳಸುವ ಆವಿದೋಣಿ (ಆವಿ ಶಕ್ತಿಯಿಂದ ನಡೆಯುವ ದೋಣಿ) ಮತ್ತು ಇನ್ನಿತರ ವಿದ್ಯುತ್‌ಚಾಲಿತ ದೋಣಿಗಳೂ ಇಂದು ನೌಕಾವಿಹಾರಕ್ಕಾಗಿಯೇ ಬಳಸಲ್ಪಡುತ್ತಿದ್ದು, ಇದಕ್ಕೂ ಮುನ್ನ ವಿಹಾರದ ಉದ್ದೇಶಕ್ಕಾಗಿಯೇ ಬಳಸಲ್ಪಡುತ್ತಿದ್ದ ವಿಹಾರ ನೌಕೆಗಳು ಈಗ ಕಾರ್ಯನಿರ್ವಹಿಸುತ್ತಿರುವ ಹಡಗುಗಳಿಗಿಂತ ಭಿನ್ನವಾಗಿದ್ದವು. ನಂತರದಲ್ಲಿ ಈ ಪದವು ಖಾಸಗಿ ನೌಕಾವಿಹಾರಕ್ಕೆ ಬಳಸುವ ಮೋಟಾರು ದೋಣಿಗಳನ್ನು ಸೂಚಿಸುತ್ತಿದ್ದು ಇವನ್ನು ಅದೇ ಉದ್ದೇಶಕ್ಕಾಗಿಯೇ ಬಳಸಲಾಗುತ್ತಿತ್ತು.

ವಿಹಾರ ನೌಕೆಯ ಉದ್ದವು ಸಾಮಾನ್ಯವಾಗಿ 20 feet (6.1 m) ರಿಂದ ನೂರು ಅಡಿ. ದುಬಾರಿ ಬೆಲೆಯ ಪ್ರತಿಷ್ಠಿತ ದೋಣಿಯು 20 feet (6.1 m) ಕ್ಕಿಂತ ಸಣ್ಣದಾಗಿರುತ್ತದೆ, ಸಾಮಾನ್ಯವಾಗಿ {1}ಕ್ಯಾಬಿನ್ ಕ್ರುಸಿಯರ್{/1} ಅಥವಾ ಸರಳವಾಗಿ ಕ್ರುಸಿಯರ್ ಎಂದೇ ಕರೆಯಲ್ಪಡುತ್ತದೆ. ವಿಹಾರ ನೌಕೆಗಿಂತ ಮೇಲಿನ {1/}ಯಾವುದೇ ದೋಣಿಗಳನ್ನು (ಯಾಂತ್ರಿಕ ಅಥವಾ ನೌಕಾಯಾನ) ಸಾಮಾನ್ಯವಾಗಿ 20 feet (6.1 m)ಮೆಗಾಯಾಟ್20 feet (6.1 m) ಎಂದೂ ಇದಕ್ಕಿಂತ ಹೆಚ್ಚಿನದನ್ನು ಅತ್ಯುತ್ಕೃಷ್ಟ ದರ್ಜೆಯ ಯಾಟ್ (20 feet (6.1 m)ಸೂಪರ್ ಯಾಟ್20 feet (6.1 m)) ಎಂದೂ ಕರೆಯಲಾಗುತ್ತದೆ.{2/} ಇತರ ವಿಹಾರ ದೋಣಿಗಳಿಗೆ ಮತ್ತು ತೈಲ ಟ್ಯಾಂಕರ್‌ಗಳಿಗೆ ಹೋಲಿಸಿದರೆ, ಈ ವಿಹಾರ ನೌಕೆಗಳ ಗಾತ್ರವು ಚಿಕ್ಕದಾಗಿದೆ.

ಇತಿಹಾಸ ಬದಲಾಯಿಸಿ

ಕೆಳಗಿನಿಂದ ನೋಡಿದಾಗ ಕಾಣುತ್ತಿರುವ ಹಾಯಿ

ವಿಹಾರ ನೌಕೆ pronounced /ˈjɒt/(ಡಚ್‌ನ/ಕೆಳ ಜರ್ಮನ್‌ನ "ಬೇಟೆಯಾಡು " ಅಥವಾ ಬೇಟೆ ಎಂಬ ಅರ್ಥದ ಜಾಟ್ ಎಂಬ ಪದವಾಗಿದ್ದು ಸ್ಟಾಂಡರ್ಡ್‌ ಜರ್ಮನ್/ ಹೈ ಜರ್ಮನ್ ಜಾಡ್) ಎಂಬ ಪದಕ್ಕೆ ಮೂಲತಃ ಬೆಳಕು, ವೇಗವಾಗಿ ಸಂಚರಿಸುವ ದೋಣಿ ಎಂಬ ಅರ್ಥವಿದ್ದು ,ಕಡಲ್ಗಳ್ಳರನ್ನು ಮತ್ತು ತಗ್ಗು ಪ್ರದೇಶದಲ್ಲಿನ ಆಳವಿಲ್ಲದ ಸಮುದ್ರತೀರದ ಸುತ್ತಲಿನ ಅತಿಕ್ರಮಣಕಾರರನ್ನು ಹಿಂಬಾಲಿಸಲು ಡಚ್ ಸೈನಿಕರಿಂದ ಇದು ಬಳಸಲ್ಪಡುತ್ತಿತ್ತು. ಸೈನಿಕೇತರ ಸರಕಾರಿ ಕರ್ತವ್ಯಗಳಾದ ವ್ಯಾಪಾರೀ ತೆರಿಗೆಗಳನ್ನು ಸ್ವೀಕರಿಸುವ, ಹಡಗಿನ ಚಾಲಕನನ್ನು ತಂಗಿರುವ ಹಡಗಿಗೆ ಒಯ್ಯುವ ಕಾರ್ಯಗಳಲ್ಲಿ ಕೂಡಾ ಇವುಗಳನ್ನು ಬಳಸಲಾಗುತ್ತದೆ.[೧] ಇದರಲ್ಲಿ ಎರಡನೆಯ ಬಳಕೆಯು ಶ್ರೀಮಂತ ಡಚ್ ವ್ಯಾಪಾರಿಗಳ ಗಮನವನ್ನು ಸೆಳೆದು ಅವರನ್ನು ತಮ್ಮದೇ ಆದ ಸ್ವಂತ ವಿಹಾರ ನೌಕೆಗಳನ್ನು ನಿರ್ಮಿಸುವಂತೆ ಪ್ರೇರೇಪಿಸಿತು ಈ ವಿಹಾರ ನೌಕೆಗಳನ್ನು ಅವರು ಹಿಂತಿರುಗುವ ಹಡಗುಗಳನ್ನು ಅಭಿನಂದಿಸಲು ತೆಗೆದುಕೊಂಡು ಹೋಗುತ್ತಿದ್ದರು. ಶೀಘ್ರದಲ್ಲೇ ಶ್ರೀಮಂತ ವ್ಯಕ್ತಿಗಳು ತಮ್ಮದೇ ಆದ ಜಾಟ್‌ಗಳನ್ನು ತಮ್ಮ ವಿಹಾರ-ಪ್ರವಾಸಗಳಿಗಾಗಿ ಬಳಸಲಾರಂಭಿಸಿದರು. ಹದಿನೇಳನೆ ಶತಮಾನದ ಆರಂಭದಲ್ಲಿ ಜಾಟ್‌ ಎರಡು ಪ್ರತ್ಯೇಕ ವರ್ಗಗಳಾಗಿ ವಿಭಜನೆ ಹೊಂದಿತು. ಸ್ಪೀಲ್-ಜಾಟ್‌ ನ್ನು ಕ್ರೀಡೆಗಾಗಿಯೂ, ಊರ್ಲಾಗ್-ಜಾಟ್‌ ಗಳನ್ನು ನೌಕಾದಳದ ಕಾರ್ಯಗಳಿಗಾಗಿ ಬಳಸಲಾಯಿತು.[೧] ಈ ಶತಮಾನದ ಮಧ್ಯದಲ್ಲಿ ಡಚ್ ಕಡಲತೀರದ ಸುತ್ತಲೂ ಜಾಟ್‌ಗಳ ಬೃಹತ್ ಪಡೆಯೇ ಕಾಣಲ್ಪಟ್ಟವು ಹಾಗೂ ಈ ನೌಕಾ ಸೈನ್ಯವನ್ನು ಡಚ್ ರಾಜ್ಯಗಳು ವಿಧ್ಯುಕ್ತ ಪರಿಶೀಲನೆ ನಡೆಸಿ ಖಾಸಗಿ ಹಾಗೂ ಯುದ್ಧ ವಿಹಾರ ನೌಕೆಗಳಾಗಿ ವಿಭಜಿಸಿ ವಿಶೇಷ ಸಂಬರ್ಭಗಳಲ್ಲಿ ಬಳಸುವಂತೆ ಸೂಚಿಸಿದರು. ಈ ವಿಭಜನೆಯು ಆಧುನಿಕ ಕ್ರೀಡಾ ದೋಣಿವಿಹಾರ ನಡೆಸಲು ಪ್ರತ್ಯೇಕ ಸಾಧನವನ್ನು ಕಂಡುಹಿಡಿಯಲು ತಳಹದಿಯಾಯಿತು. ಈ ಸಮಯದ ಜಾಟ್‌ ಗಳು ವಿಭಿನ್ನ ಗಾತ್ರಗಳನ್ನು ಹೊಂದಿದ್ದು ಇದು ಸಾಮಾನ್ಯವಾಗಿ 40 ft (12 m) ರಷ್ಟು ಉದ್ದವಿದ್ದು ಕೆಳವರ್ಗದ ಹಡಗುಗಳ ಸರಣಿಯ ಗಾತ್ರದಷ್ಟೇ ದೊಡ್ಡದಾಗಿತ್ತು.[೨] ಈ ಎಲ್ಲಾ ಜಾಟ್‌ಗಳು ಆಳವಿಲ್ಲದ ತೀರಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ಮಗ್ಗುಲು ಹಲಗೆ (ಹಡಗು ಪಕ್ಕಕ್ಕೆ ಸರಿಯುವುದನ್ನು ತಪ್ಪಿಸಲು ಹಡಗಿನ ಹೊರಮಗ್ಗುಲಲ್ಲಿ ನೀರಿನೊಳಕ್ಕೆ ಬಿಟ್ಟಿರುವ ಹಲಗೆ) ಹಾಗೂ ಚಪ್ಪಟೆದಾದ ಅಡಿಭಾಗವನ್ನು ಹೊಂದಿದ್ದ ಮುಂಭಾಗದ/ಹಿಂಭಾಗದ ಗಾಫ್ ರಿಗ್‌ಗಳನ್ನು (ಹಡಗಿನ ಹಿಂತುದಿಯಿಂದ ಮುಂತುದಿಯವರೆಗೆ ಚಾಚಿದ ಕೂವೆ ಹಗ್ಗದ ಮೇಲೆ ನಿಲ್ಲಿಸಿರದ ಚೌಕಾಕಾರದ ಹಾಯಿಪಟದ ಮೇಲ್ಭಾಗವನ್ನು ಬಿಚ್ಚಿಡಲು ಕಟ್ಟುವ ಅಡ್ಡಗೋಲನ್ನು ಹೊಂದಿದ್ದ ವಿನ್ಯಾಸ) ಹೊಂದಿದ್ದವು. ೧೯೬೦ರಲ್ಲಿ "ಬರ್ಮುಡನ್ ಸ್ಲೂಪ್" ಬಳಕೆಗೆ ಬರುವಲ್ಲಿಯವರೆಗೆ ಎಲ್ಲಾ ಯೂರೋಪಿಯನ್ ವಿಹಾರ ನೌಕೆಗಳಲ್ಲಿ ಹಲವು ಶತಮಾಗಳಿಂದಲೂ ಈ ಗಾಫ್ ರಿಗ್‌ನ್ನು ಒಂದು ಪ್ರಧಾನ ಸಜ್ಜುವಿನ್ಯಾಸವಾಗಿ ಬಳಸಲಾಗುತ್ತಿತ್ತು. ನೆದರ್‌ಲ್ಯಾಂಡ್‌ನಲ್ಲಿ ನಡೆದ ಕಾಮನ್‌ವೆಲ್ತ್ ಆಫ್ ಇಂಗ್ಲೆಂಡ್‌ ಸಂದರ್ಭದಲ್ಲಿ ಗಡೀಪಾರುಗೊಂಡು ಬಹುತೇಕ ತನ್ನ ಸಮಯವನ್ನು ಪರದೇಶೀಯನಾಗಿಯೇ ಕಳೆದ ಇಂಗ್ಲೇಂಡ್‌ನ ಎರಡನೇ ಚಾರ್ಲ್ಸ್ ನೌಕಾಯಾನದಲ್ಲಿ ಬಹಳ ಉತ್ಸುಕತೆಯುಳ್ಳವನಾಗಿದ್ದನು. ೧೬೬೦ರಲ್ಲಿ ಡಚ್ ವಿಹಾರ ನೌಕೆನಲ್ಲಿ ಇವನು ಇಂಗ್ಲೆಂಡ್‌ಗೆ ವಾಪಾಸಾದನು. ತನ್ನ ಆಳ್ವಿಕೆಯಲ್ಲಿ ಚಾರ್ಲ್ಸ್ ಅತ್ಯುತ್ಕೃಷ್ಟ ದರ್ಜೆಯ ರಾಜವೈಭವದ ಒಟ್ಟು ೨೪ ವಿಹಾರ ನೌಕೆಗಳನ್ನು ಅಧಿಕೃತವಾಗಿ ಸನ್ನದ್ಧಗೊಳಿಸಿದನು ಹಾಗೂ ಇವುಗಳಲ್ಲಿ ಮೊದಲ ಎರಡನ್ನು ಡಚ್ ರಾಷ್ಟ್ರವು ಈತನ ರಾಷ್ಟ್ರ ಪುನಃಸ್ವಾಧೀನತೆಯ ಸಮಯದಲ್ಲಿ ಉಡುಗೊರೆಯನ್ನಾಗಿ ನೀಡಿತ್ತು.[೨] ನಂತರದಲ್ಲಿ ಕ್ರೀಡಾಸಕ್ತ ದೋಣಿವಿಹಾರವು ಇಂಗ್ಲಿಷ್ ಶ್ರೀಮಂತ ಮನೆತನದ ಒಂದು ಪ್ರವೃತ್ತಿಯಾಗಿ ಹರಡಿ ದೋಣಿವಿಹಾರ ಹಾಗೂ ಇದರಲ್ಲಿ ಸ್ಪರ್ದೆಯು ಒಂದು ಸಾಮಾನ್ಯ ಆಟವಾಗಿ ಬೆಳೆದುಬಂದಿತು. ಯುರೋಪಿನ ಇತರ ಶ್ರೀಮಂತವರ್ಗದ ಜನರು ವಿಹಾರ ನೌಕೆನ್ನು ಒಂದು ಕ್ರೀಡಾದೋಣಿಯನ್ನಾಗಿಯೇ ನಿರ್ಮಿಸಿದರು. ಇದರಿಂದ ಈ ದೋಣಿ ವಿಹಾರವು ವ್ಯಾಪಾರೀ ಅಥವಾ ಸೈನಿಕ ಕಾರ್ಯೋದ್ದೇಶಗಳಿಗೆ ಬಳಸದೆ ಇದೊಂದು ವಿನೋದದ/ಮನೋರಂಜನೆಯ ಪ್ರಯಾಣಕ್ಕಾಗಿ ಬಳಸಲ್ಪಟ್ಟು (ಉದಾಹರಣೆಗೆ ೨೦ನೇ ಶತಮಾನದ ಆರಂಭದಲ್ಲಿನ ಕಾಕ್ಸ್ ಮತ್ತು ಕಿಂಗ್ ವಿಹಾರ ನೌಕೆಗಳನ್ನು ನೋಡಿ) ಈಗಲೂ ಇದನ್ನು ಕ್ರೀಡಾ ಸಾಧನವಾಗಿ ಮತ್ತು ದೋಣಿವಿಹಾರಕ್ಕಾಗಿಯೇ ಬಳಸಲಾಗುತ್ತಿದೆ.

ರಚನಾ ಸಾಮಾಗ್ರಿಗಳು ಮತ್ತು ತಂತ್ರಗಳು ಬದಲಾಯಿಸಿ

೧೯೫೦ ರವರೆಗೆ ಹೆಚ್ಚಿನ ಎಲ್ಲಾ ವಿಹಾರ ನೌಕೆಗಳು ಮರ ಮತ್ತು ಉಕ್ಕಿನಿಂದ ರಚಿಸಲ್ಪಟ್ಟಿದ್ದರೂ, ಈಗ ಇನ್ನೂ ಹೆಚ್ಚಿನ ಆವಶ್ಯಕವಸ್ತುಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ. ಮರದ ತೊಗಟೆಗಳು ಬಳಕೆಯಾಗುತ್ತಿದ್ದರೂ, ಸಾಮಾನ್ಯವಾಗಿ ಅಲುಮಿನಿಯಂ, ಸ್ಟೀಲ್, ಇಂಗಾಲದ ನಾರು, ಫೆರೋಸಿಮೆಂಟ್‌ಗಳನ್ನೊಳಗೊಂಡ (ವಿಮೆಯ ವ್ಯವಹಾರದಲ್ಲಿ ಕಷ್ಟವಾಗುತ್ತಿದ್ದುದರಿಂದ ಇದು ಅಪರೂಪ) ನಾರುಗಾಜು(ಫೈಬರ್‌ಗ್ಲಾಸ್)ಗಳನ್ನು ಬಳಸಲಾಗುತ್ತದೆ. ಮರದ ಬಳಕೆಗೆ ಬದಲಾಗಿ ಸಾಂಪ್ರದಾಯಿಕ ಬೋರ್ಡ್-ಆಧಾರಿತ ವಿಧಾನ ಬಳಸಲಾಗಿದ್ದರೂ, ಇಂದು ಆಧುನಿಕ ಉತ್ಪನ್ನಗಳಾದ ಫ್ಲೈವುಡ್, ವೆನೀರ್(ಮರಮಟ್ಟುಗಳಿಗೆ ಹಚ್ಚುವ ಹೊರಲೇಪ), ಮತ್ತು ಇಪೊಕ್ಸಿ ರೆಜಿನ್ಸ್ (ಸಂಶ್ಲೇಷಿತ ರಾಳವನ್ನು) ಕೂಡ ಬಳಸುತ್ತಾರೆ. ಮರದ ದೋಣಿಯನ್ನು ಪರಿಶುದ್ಧಗೊಳಿಸುವವರು, ಅಥವಾ ಇದನ್ನೇ ಪ್ರವೃತ್ತಿಯನ್ನಾಗಿಸಿಕೊಂಡವರು ತಮ್ಮ ಖಾಸಗಿ ದೋಣಿಯ ನಿರ್ಮಾಣಕ್ಕೆ ಮರವನ್ನೇ ಹೆಚ್ಚಾಗಿ ಬಳಸುತ್ತಾರೆ.

ಸಮುದ್ರಯಾನದ ವಿಹಾರ ನೌಕೆಗಳು ಬದಲಾಯಿಸಿ

ಸಿಎಸ್30, ಸಮುದ್ರಯಾನ ವಿಹಾರ ನೌಕೆ

ಸಮುದ್ರಯಾನದ ವಿಹಾರ ನೌಕೆಗಳು ಒಟ್ಟು ೨೦ಅಡಿ(೬ ಮೀ) ಗಳಿಂದ ೧೦೦ ಅಡಿಗಳವರೆಗಿನ (೩೦ಮೀ) ಉದ್ದವನ್ನು ಹೊಂದಿದ್ದು, (ಕ್ರೀಡಾದೋಣಿ ವಿಹಾರದ ವ್ಯವಹಾರಕ್ಕೆ ಸಂಬಂಧಿಸಿದಂತೆ) ಯಾಟ್ ದೋಣಿ ಮತ್ತು ಹಡಗಿಗಿರುವ ವ್ಯತ್ಯಾಸವು ಈಗ ಅಸ್ಪಷ್ಟವಾಗಿದೆ. ಖಾಸಗಿ ಸ್ವಾಮ್ಯಕ್ಕೊಳಪಟ್ಟ ವಿಹಾರ ನೌಕೆಗಳು ೨೫ ಅಡಿಗಳಿಂದ ೪೫ ಅಡಿಗಳಷ್ಟು (೭–೧೪ ಮೀ) ಉದ್ದವಿರುತ್ತವೆ, ಉದ್ದ ಹೆಚ್ಚಾದಂತೆ ಈ ವಿಹಾರ ನೌಕೆಗಳನ್ನು ನಿರ್ಮಿಸುವ ಹಾಗೂ ಸುಸ್ಥಿತಿಯಲ್ಲಿಡುವ ಖರ್ಚು-ವೆಚ್ಚಗಳೂ ಹೆಚ್ಚಾಗುತ್ತವೆ. ಯು.ಎಸ್‌ನಲ್ಲಿ ಸಮುದ್ರಯಾನಿಗಳು ತಮ್ಮ ಸಾಧಾರಣ ಕ್ರೀಡಾದೋಣಿವಿಹಾರಕ್ಕೂ ಹಾಯಿದೋಣಿಗಳಂತಹ ಸಣ್ಣ ವಿಹಾರ ನೌಕೆಗಳನ್ನೇ ಉಲ್ಲೇಖಿಸುತ್ತಾರೆ. ನಿಯಮಿತ ದೋಣಿ ಓಟ ಸ್ಪರ್ಧೆಯಲ್ಲಿ ತನ್ನ ಗಾತ್ರವನ್ನು ಪರಿಗಣನೆಗೆ ತೆಗೆದುಕೊಳ್ಳದೇ, ಈ ವಿಹಾರ ನೌಕೆಗಳು ಕೂಡಾ ಉಳಿದ ದೋಣಿಗಳಿಗೆ ಸರಿಸಮಾನವಾಗಿ ಭಾಗವಹಿಸುತ್ತವೆ. ಆಧುನಿಕ ವಿಹಾರ ನೌಕೆಗಳು ನೌಕಾಯಾನದ ಸಮರ್ಥ ಯೋಜನೆಗಳನ್ನು ಹೊಂದಿರುತ್ತವೆ, ವಿಶೇಷವಾಗಿ ಗಾಳಿಗೆ ಅಭಿಮುಖವಾಗಿ ಚಲಿಸುವ ಬರ್ಮುಡ ರಿಗ್ ತನ್ನದೇ ಆದ ದಕ್ಷ ಚಲಿಸುವ ಯೋಜನೆಗಳನ್ನು ಹೊಂದಿರುವುದು ಗಮನಾರ್ಹವಾಗಿದೆ. ಈ ಸಾಮರ್ಥ್ಯವು ನೌಕಾಯಾನದ ಯೋಜನೆಗಳು ಹಾಗೂ ಅದರ ಹೊರಆವರಣ ವಿನ್ಯಾಸದ ಫಲಿತಾಂಶವಾಗಿದೆ.

ವರ್ಗೀಕರಣಗಳು ಬದಲಾಯಿಸಿ

ಹಗಲಿನಲ್ಲಿ ಸಂಚರಿಸಬಲ್ಲ ವಿಹಾರ ನೌಕೆಗಳು(ಡೇ ಸೇಲಿಂಗ್ ಯಾಟ್):

ಹಗಲಿನಲ್ಲಿ ಸಂಚರಿಸಬಲ್ಲ ವಿಹಾರ ನೌಕೆಗಳು ಸಾಮಾನ್ಯವಾಗಿ ಸಣ್ಣ ಗಾತ್ರದ್ದಾಗಿದ್ದು, ಇದರ ಉದ್ದವು ೨೦ಅಡಿ (೬ಮೀ)ಯ ಒಳಗಿರುತ್ತದೆ. ಕೆಲವೊಮ್ಮೆ ಡಿಂಘೀಸ್ (ವಿಹಾರಕ್ಕೆ ಬಳಸುವ ಕಿರುದೋಣಿ) ಎಂದು ಕರೆಯಲ್ಪಡುವ ಇವು ಒಳಕ್ಕೆಳೆದುಕೊಳ್ಳಬಲ್ಲ ಅಡಿಹಲಗೆ, ಹಡಗು ಚಲಿಸಬೇಕಾದ ದಿಕ್ಕಿಗೆ ವಿರುದ್ಧವಾಗಿ ತಿರುಗದಂತೆ ಮಾಡಲು ಹಡಗಿನ ಅಡಿಗಟ್ಟಿನ ಮೂಲಕ ಏರಿಸಬಹುದಾದ ಯಾ ಇಳಿಸಬಹುದಾದ ನಡುಹಲಗೆ ಅಥವಾ ಡ್ಯಾಗರ್ ಬೋರ್ಡ್‌ಗಳನ್ನು ಹೊಂದಿರುತ್ತವೆ. ಹೆಚ್ಚಿನ ಹಗಲು-ಸಂಚಾರದ ವಿಹಾರ ನೌಕೆಗಳನ್ನು ರಾತ್ರಿ ಪ್ರಯಾಣಕ್ಕೆ ಬಳಸದೆ, ಕೇವಲ ದೈನಂದಿನ ಯಾನಕ್ಕೆ ಬಳಸಲ್ಪಡುವುದರಿಂದ ಇದರಲ್ಲಿ ಕ್ಯಾಬಿನ್ (ಚಾಲಕರಿಗಾಗಿ ನಿಗದಿಪಡಿಸಿದ ಕೋಣೆ) ಇರುವುದಿಲ್ಲ. ಬದಲಿಗೆ, ಇದಕ್ಕಿಂತ ಉತ್ತಮವಾದ ಕ್ಯುಬಿ ಎನ್ನುವ ಸ್ಥಳವಿದ್ದು ಇದು ದೋಣಿಯ ಮುಂಭಾಗದ ತುಸು ಮೇಲಕ್ಕೆತ್ತಿದ್ದ ಭಾಗವಾಗಿದ್ದು ಭದ್ರವಾದ ಛಾವಣಿಯನ್ನು ಹೊಂದಿದ್ದು ಇತರ ಸಾಮಾಗ್ರಿಗಳ ದಾಸ್ತಾನಿಗೆ ಆಶ್ರಯ ಅಥವಾ, ರಭಸದಿಂದ ಬೀಸುವ ಗಾಳಿ, ಇದರಿಂದುಂಟಾಗುವ ನೀರಿನ ಎರಚಾಟದಿಂದ ರಕ್ಷಣೆಯನ್ನೊದಗಿಸುತ್ತದೆ.

ವಾರಾಂತ್ಯದಲ್ಲಿ ಸಂಚರಿಸಬಲ್ಲ ವಿಹಾರ ನೌಕೆಗಳು (ವೀಕೆಂಡರ್ ಯಾಟ್):

ವಾರಾಂತ್ಯದಲ್ಲಿ ಸಂಚರಿಸಬಲ್ಲ ವಿಹಾರ ನೌಕೆಗಳು ಸ್ವಲ್ಪ ದೊಡ್ಡಗಾತ್ರದ್ದಾಗಿದ್ದು ಇವುಗಳ ಉದ್ದವು ೩೦ ಅಡಿಗಳ (೯.೫ ಮೀ) ಒಳಗಿರುತ್ತವೆ. ಇವು ಹೆಚ್ಚಾಗಿ ಹಾಯಿ ಹಡಗುಗಳಂತೆ, ಜೋಡಿ ಅಡಿಹಲಗೆಗಳನ್ನು ಅಥವಾ ಮೇಲಕ್ಕೆತ್ತಬಲ್ಲ ಹಲಗೆಗಳನ್ನು ಹೊಂದಿರುತ್ತವೆ. ಇದರಿಂದ ಇವುಗಳನ್ನು ಕಡಿಮೆ ಆಳದ ತೀರಪ್ರದೇಶಗಳಲ್ಲೂ ಕಾರ್ಯನಿರ್ವಹಿಸುವಂತೆ ಮಾಡಬಹುದಾಗಿದ್ದು, ಅಲೆಗಳ ಉಬ್ಬರ/ಇಳಿತ ಕಡಿಮೆಯಾದಲ್ಲಿ ಕಡಲದಂಡೆಯ ಮೇಲೆ ತಂಗುವಂತೆ ಮಾಡುತ್ತದೆ. ಈ ದೋಣಿಯ ಹೊರಮೈ (ಹಲ್) ಆಕಾರವು (ಅಥವಾ ಜೋಡಿ ಅಡಿಹಲಗೆಗಳ ವಿನ್ಯಾಸ) ನೀರಿಲ್ಲದೇ ಇದ್ದ ಸಂದರ್ಭದಲ್ಲಿ ದೋಣಿಯನ್ನು ಲಂಬವಾಗಿ ನಿಲ್ಲುವಂತೆ ಸಹಕರಿಸುತ್ತದೆ. ಇಂತಹ ದೋಣಿಗಳನ್ನು ಸಾಮಾನ್ಯವಾಗಿ ಕಡಿಮೆ ಅವಧಿಯ ಪ್ರಯಾಣವನ್ನು ಕೈಗೊಳ್ಳುವಂತೆ, ಅಪರೂಪವಾಗಿ ೨ ಅಥವಾ ೩ ದಿನಗಳೊಳಗೆ ಮುಗಿಯುವಂತೆ ವಿನ್ಯಾಸಗೊಳಿಸಲಾಗಿದೆ(ಹೆಸರೇ ಸೂಚಿಸುವಂತೆ). ಕಡಲತೀರ ಪ್ರದೇಶದಲ್ಲಿ ದೀರ್ಘಪ್ರಯಾಣದ ಸಮಯದಲ್ಲಿ ಹಂತ ಹಂತವಾಗಿ ಚಲಿಸುವ ಮೂಲಕ ಪ್ರಯಾಣವು ಮುಂದುವರೆಯುತ್ತದೆ. ವಾರಾಂತ್ಯದ ವಿಹಾರ ನೌಕೆಗಳು ಕೇವಲ ಪುಟ್ಟ "ಕ್ಯಾಬಿನ್‌"ನ್ನು ಹೊಂದಿದ್ದು, ಇದರಲ್ಲಿ ಎರಡರಿಂದ ಮೂರು ಜನರು ಮಲಗಬಹುದಾದ ಒಂದು ವಿಶಾಲ ಕೋಣೆಯೂ ಇರುತ್ತದೆ. ಈ ಕೋಣೆಯನ್ನು ದಕ್ಷತೆಯಿಂದ ಬಳಸಿದಲ್ಲಿ ಇದರಲ್ಲಿನ ಸ್ಥಳವನ್ನು ಅಡಿಗೆಮನೆಗಾಗಿಯೂ, ಕುಳಿತುಕೊಳ್ಳುವ ಸ್ಥಳವಾಗಿಯೂ ಮತ್ತು, ಸಮುದ್ರಯಾನಕ್ಕೆ ಬಳಸಲಾಗುವ ಸಾಧನಗಳನ್ನು ಇಡಲೂ ಬಳಸಬಹುದು. ಆಹಾರ ಮತ್ತು ನೀರನ್ನು ತೆಗೆದಿರಿಸಿಕೊಳ್ಳಲು ಇಲ್ಲಿ ಸೀಮಿತ ಸ್ಥಳಾವಕಾಶ ಮಾತ್ರವಿದೆ. ಹೆಚ್ಚಿನ ಎಲ್ಲಾ ದೋಣಿಗಳು ಒಂದೇ ಮೊಳೆಯಿಂದ ಬಿಗಿದ ತ್ರಿಕೋಣಾಕಾರದ ಹಾಯಿ ಅಥವಾ ಜಿನೋವಾ ಮುಂಪಟವನ್ನು ಹೊಂದಿರುವ, ಮುಖ್ಯ ಕೂವೆಯ ಹಿಂಭಾಗಕ್ಕೆ ಕಟ್ಟಿದ ಹಾಯಿಯಿದ್ದು (ಬರ್ಮುಡಾ ರಿಗ್ ಮತ್ತು ಇದಕ್ಕಿರುವ ಇನ್ನೊಂದು ವ್ಯತ್ಯಾಸ) ಒಂದೇ ಕೂವೆಯನ್ನು ಒದಗಿಸಿರುವ ಬರ್ಮುಡಾ ಸ್ಲೂಪ್ (ತ್ರಿಕೋನಾಕಾರದ ಹಾಯಿಯಿರುವ ಸಣ್ಣ ಒಕ್ಕೂವೆ ಹಡಗು) ಆಗಿದೆ (ಸಾಂಪ್ರದಾಯಿಕ ಬರ್ಮುಡಿಯನ್ ಹಡಗು ಬರ್ಮುಡ ಸ್ಲೂಪ್‌ಗಿಂತ ಸ್ಪಷ್ಟವಾಗಿ ಭಿನ್ನವಾಗಿದೆ). ಇನ್ನು ಕೆಲವು ಗಾಫ್ ರಿಗ್‌ನ್ನು ಹೊಂದಿರುವಂತಹುದು. ಈ ಮಾದರಿಯ ದೋಣಿಗಳಲ್ಲಿ ಅತ್ಯಂತ ಚಿಕ್ಕ ಗಾತ್ರದ ದೋಣಿಗಳನ್ನು ಸಾಮಾನ್ಯವಾಗಿ ಪಾಕೆಟ್ ಯಾಟ್ ಅಥವಾ ಪಾಕೆಟ್ ಕ್ರುಸಿಯರ್ ಎಂದು ಕರೆಯುತ್ತಾರೆ. ಅಲ್ಲದೇ, ಟ್ರೈಲರ್ ಸೈಲರ್‌ ಗಳನ್ನು ವಿಶೇಷ ಟ್ರೈಲರ್‌ಗಳ ಸಹಾಯದಿಂದ ಒಂದುಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲಾಗುತ್ತದೆ.

ವಿಹಾರಾರ್ಥ ಬಳಸುವ ನೌಕೆಗಳು

ಚಿತ್ರ:RowesWharf001.JPG
ಬೋಸ್ಟನ್ ಬಂದರಿನ ರೋವ್ಸ್ ವಾರ್ಫ್‌ನಲ್ಲಿ ಲಂಗರು ಹಾಕಿದ ವಿಹಾರ ನೌಕೆ

ಕ್ರ್ಯುಸಿಂಗ್ ವಿಹಾರ ನೌಕೆಗಳು ಹೆಚ್ಚಾಗಿ ಖಾಸಗಿ ಬಳಕೆಗಾಗಿ ಉಪಯೋಗಿಸಲ್ಪಡುವ ವಿಹಾರ ನೌಕೆಗಳು ಹಾಗೂ, ಇವು ೨೫ ಅಡಿಯಿಂದ ೪೫ ಅಡಿಯವರೆಗೆ (೭ ರಿಂದ ೧೪ಮೀ) ಉದ್ದವನ್ನು ಹೊಂದಿರುತ್ತವೆ. ಇವುಗಳ ನಿರ್ವಹಣಾ ಕೌಶಲ್ಯ, ಒಳಗೆ ಲಭ್ಯವಿರುವ ಸ್ಥಳಾವಕಾಶ, ಗಾಳಿ-ಬೆಳಕಾಡುವಂತೆ ಮಾಡುವ ಸಾಮರ್ಥ್ಯ ಹಾಗೂ, ಒಳಗಿನ ಸುವ್ಯವಸ್ಥೆಗಳು ಇವೆಲ್ಲಾ ಅಂಶಗಳಲ್ಲಿ ಸಮತೋಲನವನ್ನು ಕಾಪಾಡಬೇಕಾಗಿರುವುದರಿಂದ ಇದು ಸಂಕೀರ್ಣವಾದ ವಿನ್ಯಾಸವನ್ನು ಹೊಂದಿವೆ. ಇದರಲ್ಲಿ ಬಳಸಬಹುದಾದ ಕೌಶಲ್ಯಗಳಲ್ಲಿ ಬಹಳವೇ ವ್ಯತ್ಯಾಸವಿರುವುದರಿಂದ, ಪ್ರಪಂಚದಾದ್ಯಂತ ಇರುವ ಎಲ್ಲಾ ತಯಾರಕರು ಸೇರಿಯೂ ಇದರ ವಿನ್ಯಾಸವನ್ನು ವಿವರಿಸಬಲ್ಲ ನಿರ್ದಿಷ್ಟ, ಸಚಿತ್ರವಾಗಿ ಸ್ಪಷ್ಟಪಡಿಸುವ ವಿವರಣೆಯನ್ನು ಕೊಡಲಾಗಿಲ್ಲ. ಆದರೂ, ಎಲ್ಲರ ಮೆಚ್ಚಿಗೆಗೆ ಪಾತ್ರವಾದ ಹೊರಮೈ ಹೊಂದಿರುವ, ಚಪ್ಪಟೆ, ಸಮತಲ ಹೊಂದಿರುವ ಮತ್ತು ಒಂದೇ ಹಲಗೆಯನ್ನು ಹೊಂದಿದ್ದ ಅಡಿಮರವು ಈ ದೋಣಿಗೆ ಸ್ಥಿರವಾದ, ಭದ್ರತೆಯೊದಗಿಸಬಲ್ಲ ವಿನ್ಯಾಸವಾಗಿದೆ. ಹೆಚ್ಚಿನ ಎಲ್ಲಾ ದೋಣಿಗಳು ಒಂದೇ ಮೊಳೆಯಿಂದ ಬಿಗಿದ ಮುಂಪಟವನ್ನು ಹೊಂದಿರುವ, ಮುಖ್ಯ ಕೂವೆಯ ಹಿಂಭಾಗಕ್ಕೆ ಕಟ್ಟಿದ ಹಾಯಿಯಿದ್ದು ಒಂದೇ ಕೂವೆಯನ್ನು ಒದಗಿಸಿರುವ(ಮಾಸ್ಟಡ್) ಬರ್ಮುಡಾ ರಿಗ್‌ಡ್ ಸ್ಲೂಪ್ (ತ್ರಿಕೋನಾಕಾರದ ಹಾಯಿ ಅಥವಾ ಜಿನೋವಾ ಪ್ರಕಾರದ ಸಣ್ಣ ಒಕ್ಕೂವೆ ಹಡಗು) ಆಗಿದೆ. ಗಾಳಿಯ ವೇಗ ಕಡಿಮೆಯಿದ್ದಾಗ ಉಪಯೋಗಿಸುವುದಕ್ಕಾಗಿಯೇ ಬೇರೆ ಬೇರೆ ಗಾತ್ರಗಳ ಸ್ಪಿನ್ನಾಕರ್ ದೋಣಿಗಳನ್ನು ಒದಗಿಸಲಾಗಿದೆ. ಈ ವಿಧದ ದೋಣಿಗಳನ್ನು ವಿಶೇಷವಾಗಿ, ೨೬ ರಿಂದ ೪೦ ಅಡಿ (೮ ರಿಂದ ೧೨ ಮೀ.) ಉದ್ದವಿರುವ ದೋಣಿಗಳನ್ನು ಸಾಮಾನ್ಯವಾಗಿ ಕೌಟುಂಬಿಕ ವಿಹಾರಕ್ಕಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಇಂತಹ ಹಡಗುಗಳ ಡೆಕ್‌ನ ಹಡಗಿನ ಅಟ್ಟ ಕೆಳಗೆ ಹಲವು ಕ್ಯಾಬಿನ್‌ಗಳನ್ನು ನಿರ್ಮಿಸಲಾಗಿದೆ. ಈ ಮಾದರಿಯಲ್ಲಿ ಮೂರು ದ್ವಿ-ಅಂತಸ್ಥಿನ ಕ್ಯಾಬಿನ್‌ಗಳಿದ್ದು ಅಡಿಗೆಮನೆಯನ್ನು ಹೊಂದಿರುವ, ಆಸೀನಗೊಳ್ಳಬಹುದಾದ, ನೌಕಾಯಾನಕ್ಕೆ ಆವಶ್ಯಕವಾದ ಸಾಧನಗಳನ್ನು ಹಾಗೂ ಸ್ನಾನಗೃಹ, ಶೌಚಾಲಯಗಳನ್ನು ಹೊಂದಿರುವ ಒಂದು {0}ವಿಶಾಲವಾದ ಕೋಣೆ{/0}ಯನ್ನೊಳಗೊಂಡಿದೆ. ಬೃಹತ್ ಗಾತ್ರದ ವಿಹಾರ ನೌಕೆಗಳು,50 ft (15 m) ಸುಮಾರು ೧೫ ಮೀ ಗಿಂತ ಹೆಚ್ಚಿನ ಉದ್ದವುಳ್ಳ ದೋಣಿಗಳು ಕೂಡಾ ಕ್ರ್ಯೂಸರ್‌ಗಳೇ ಆಗಿದ್ದರೂ, ಪ್ರವಾಸಿಗರ ಅಗತ್ಯದ ಮೇರೆಗೆ ಈ ದೋಣಿಗಳನ್ನು ಕೆಲವು ವಿಶೇಷ ಉದ್ದೇಶಗಳ ಬಳಕೆಗಾಗಿಯೇ ನಿರ್ಮಿಸಲಾಗಿದ್ದುದರಿಂದ ರಚನಾತ್ಮಕ ವಿನ್ಯಾಸದಲ್ಲಿ ಇದು ಕ್ರ್ಯೂಸರ್‌ಗಳಿಗಿಂತ ತೀರಾ ಭಿನ್ನವಾಗಿವೆ.ಇದರ ಒಳವಿನ್ಯಾಸವು ಗೋಡೆಗಳಿಗೆ ಹತ್ತಿಸಿದ ಮರದ ಹಲಗೆಯ ಮೇಲ್ಮೈ ಹೊಂದಿದ್ದು, ಇದು ವಿಶಾಲವಾದ ಸಂಗ್ರಹಣಾ ಸ್ಥಳವನ್ನು ಹೊಂದಿದೆ. ಈ ಕ್ರ್ಯುಸಿಯರ್‌ಗಳು ಸಾವಿರಾರು ಮೈಲಿಗಳ ದೀರ್ಘಕಾಲದ ಯಾನವನ್ನು ಕೈಗೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇಂತಹ ದೋಣಿಗಳ ಸಾಧಾರಣ ವೇಗ, ೬ ನಾಟ್‌ಗಳು. ಈ ಪ್ರಾಥಮಿಕ ವಿನ್ಯಾಸವು ಪ್ರಧಾನ ಯಾಟ್ ನಿರ್ಮಾಪಕರಿಂದ ನಿರ್ಮಿಸಲಾದ ಪ್ರಮುಖ ವಿಧದ ವಿನ್ಯಾಸಗಳಲ್ಲೊಂದು. ವಿಲಾಸೀ ಯಾನದ ನೌಕೆಗಳು

ಈ ವಿಹಾರ ನೌಕೆಗಳು ಸಾಮಾನ್ಯವಾಗಿ 82 ft (25 m) ಅಥವಾ ಇನ್ನೂ ಉದ್ದವಾದುದು. ಇತ್ತೀಚಿನ ವರ್ಷಗಳಲ್ಲಿ, ಈ ವಿಹಾರ ನೌಕೆಗಳು ಸರಳ ಸುಂದರವಾದ ಮೂಲಭೂತ ವಾಸ್ತವ್ಯವೊದಗಿಸಬಲ್ಲ, ಆಧುನಿಕ ಸೌಕರ್ಯಗಳುಳ್ಳ ಹಾಗೂ ವಿಲಾಸೀ ಸುಖ ಸಾಧನಗಳನ್ನೊಳಗೊಂಡ ದೋಣಿಗಳಾಗಿ ಮೂಡಿಬಂದಿದೆ. ವಿಶೇಷವಾಗಿ ಯುರೋಪಿನಲ್ಲಿ ನಾರುಗಾಜಿನ ಕವಚದ (ಫೈಬರ್ ಗ್ಲಾಸ್) ಬಳಕೆ ಆರಂಭವಾದಂದಿನಿಂದ, ಈ ದೋಣಿಗಳ ಹೊರಮೈಯನ್ನು ನಿರ್ಮಾಣಮಾಡುವ ಖರ್ಚು ವೆಚ್ಚಗಳು ಕಡಿಮೆಯಾಗುತ್ತಿರುವುದು, ಮುಂದುವರೆದ ಸ್ವಯಂಚಲನೆ, ಮತ್ತು ವಿಹಾರ ನೌಕೆಗಳ ನಿರ್ಮಾಣದ "ಉತ್ಪಾದನಾ ಸರಣಿ"ಯಲ್ಲಿ ಬಳಸಲಾದ ತಾಂತ್ರಿಕತೆಯೆ ಇದಕ್ಕೆ ಕಾರಣ.

ಅತೀ ದೊಡ್ಡದಾದ, ೧೩೦ಕ್ಕೂ ಹೆಚ್ಚಿಗೆ (೪೦ಮೀ) ಉದ್ದವಿರುವ ವಿಲಾಸೀ ವಿಹಾರ ನೌಕೆಗಳು ಹವಾನಿಯಂತ್ರಿತ, ದೂರದರ್ಶನಗಳನ್ನೊಳಗೊಂಡ ಎಲ್ಲಾ ಆಧುನಿಕ ವ್ಯವಸ್ಥೆಗಳನ್ನೊಳಗೊಂಡಿವೆ ಈ ಗಾತ್ರದ ಜಲಯಾನದ ವಿಹಾರ ನೌಕೆಗಳು ಹೆಚ್ಚಾಗಿ ಸ್ವಯಂಚಾಲಿತವಾಗಿರುತ್ತವೆ. ಉದಾಹರಣೆಗೆ, ಕಂಪ್ಯೂಟರ್ ನಿಯಂತ್ರಿತ, ವಿದ್ಯುತ್ ಚಾಲಿತ ವಿಂಚ್‌ಗಳು (ಹಾಯಿ ಹಗ್ಗದ ರಾಟೆ) ಈ ವಿಹಾರ ನೌಕೆಗಳ ಚಲನೆಯನ್ನು ನಿಯಂತ್ರಿಸುತ್ತವೆ. ಇಂತಹ ಸಂಕೀರ್ಣ ವಿನ್ಯಾಸಗಳಿಗೆ ನಿರಂತರ ವಿದ್ಯುತ್ ಉತ್ಪಾದನೆ ವ್ಯವಸ್ಥೆಯ ಅಗತ್ಯವಿದೆ. ಇತ್ತೀಚಿನ ವರ್ಷಗಳಲ್ಲಿ, ಈ ವಿಹಾರ ನೌಕೆಗಳಲ್ಲಿ ಬಳಸುವ ವಿದ್ಯುತ್‌ಚಾಲಿತ ಸಾಧನಗಳ ಒಟ್ಟು ಸಂಖ್ಯೆಯು ಗಣನೀಯವಾಗಿ ಹೆಚ್ಚಾಗುತ್ತಿದೆ. ೨೦ ವರ್ಷಗಳ ಹಿಂದೆ ಕೂಡಾ, ೨೫ಅಡಿ (೭ಮೀ) ಉದ್ದದ ವಿಹಾರ ನೌಕೆಗಳಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆಯು ಅಪರೂಪವಾಗಿತ್ತು. ಆದರೆ ಈಗ, ಅತೀ ಚಿಕ್ಕ, ಅತೀ ಸರಳವಾದ ವಿಹಾರ ನೌಕೆಗಳು ಕೂಡಾ ವಿದ್ಯುತ್ ಬೆಳಕಿನ ವ್ಯವಸ್ಥೆ, ರೇಡಿಯೋ ಹಾಗೂ ನೌಕಾಯಾನಕ್ಕೆ ಬೇಕಾದ ಮಾರ್ಗಸೂಚಿಗಳನ್ನೊಳಗೊಂಡ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್‌ನ್ನು ಹೊಂದಿದೆ. ಸುಮಾರು ೩೩ ಅಡಿ (೧೦ಮೀ) ಉದ್ದವಿರುವ ವಿಹಾರ ನೌಕೆಗಳು ಬಿಸಿನೀರಿನ ಸೌಲಭ್ಯ, ಪ್ರೆಷರೈಸ್‌ಡ್ ವಾಟರ್ ಸಿಸ್ಟಮ್ (ಅಧಿಕ ಒತ್ತಡದ ನೀರನ್ನು ತಂಪು ಮಾಡಿ ಬಳಸುವುದು), ಹಾಗೂ ಶೈತ್ಯೀಕರಣ ಯಂತ್ರಗಳನ್ನೊಳಗೊಂಡ ಎಲ್ಲಾ ಅನುಕೂಲತೆಗಳನ್ನು ಕಲ್ಪಿಸಿವೆ. ಇತರ ಸಾಧನಗಳಾದ ರಾಡಾರ್, ಎಕೋ-ಸೌಂಡಿಂಗ್(ಮಾರ್ದನಿಗಳಿಂದ ನೀರಿನ ಆಳ ಕಂಡುಹಿಡಿಯುವ ಸಾಧನ) ಮತ್ತು ಸ್ವಯಂನಿಯಂತ್ರಕಗಳು ಸರ್ವೇ ಸಾಮಾನ್ಯ. ಸಹಾಯಕ ಯಂತ್ರಗಳು ಕೂಡಾ ಇಲ್ಲಿ ಕ್ರಿಯಾಶೀಲ ಕಾರ್ಯಗಳನ್ನು ನಡೆಸಿ ಆವರ್ತಕಗಳಿಗೆ ವಿದ್ಯುತ್ ಪೂರೈಕೆ ಮಾಡುವುದರೊಂದಿಗೆ ವಿಹಾರ ನೌಕೆಗಳ ಬ್ಯಾಟರಿಗಳು ವಿದ್ಯುದಾವೇಶಗೊಳ್ಳುವಂತೆ ಮಾಡಿ, ವಿದ್ಯುತ್ ಸಂಪರ್ಕದ ವ್ಯವಸ್ಥೆಯು ನಿರಂತರವಾಗಿರುವಂತೆ ಸಹಕಾರಿಯಾಗುತ್ತವೆ. ದೀರ್ಘಕಾಲದ ವಿಹಾರಯಾನದಲ್ಲಿ ನಿರತಗೊಂಡ ವಿಹಾರ ನೌಕೆಗಳಲ್ಲಿ ಗಾಳಿಯ, ನೀರಿನ ಮತ್ತು ಸೌರ ಶಕ್ತಿಯನ್ನು ಬಳಸುವ ವಿದ್ಉತ್ಪಾದಕ ಯಂತ್ರಗಳೂ ಇದೇ ರೀತಿ ಕಾರ್ಯನಿರ್ವಹಿಸುತ್ತವೆ. ರೇಸಿಂಗ್ ವಿಹಾರ ನೌಕೆಗಳು

ಆಸ್ಟ್ರೇಲಿಯಾದ ಸಿಡ್ನಿ ಬಂದರಿನ ಸಮುದ್ರತೀರದಲ್ಲಿ ನಡೆಯುವ ವಿಹಾರ ನೌಕೆ ಸ್ಪರ್ಧೆ

ರೇಸಿಂಗ್ ಯಾಟ್‍ಗಳು ತಮ್ಮ ಹೊರಕವಚವನ್ನು ಹಗುರವಾಗಿರಿಸಿ, ತನ್ನ ಆಳವಾದ, ಭಾರವಾದ ದುಂಡಗಿನ ಅಡಿಹಲಗೆಗಳನ್ನು ಎಳೆದು ತನ್ನ ಉದ್ದವಾದ ಪಟಸ್ತಂಭವನ್ನು ಆಧರಿಸಿ ಒದ್ದೆಯಾದ ಮೇಲ್ಮೈ ಪ್ರದೇಶವನ್ನು ಕಡಿಮೆ ಮಾಡಲು ಪ್ರಯತ್ನಿಸಿ ತನ್ನ ಪ್ರಯಾಣದ ಜಾಗವನ್ನು ವಿಸ್ತೃತಗೊಳಿಸುತ್ತವೆ. ಆಧುನಿಕ ವಿನ್ಯಾಸಗಳು ಅಗಲವಾದ ಚಪ್ಪಟೆಯಾದ ಅಡಿಭಾಗವನ್ನು ಹೊಂದಿದ್ದು ನೀರಿನ ಮೇಲೊತ್ತಡವನ್ನು ಹೆಚ್ಚಿಸಿ ಇದರಿಂದ ಅಡಿಹಲಗೆಯ ಹಿಂಭಾಗದ ವಾಲುವಿಕೆಯ ಕೋನವು ಹೆಚ್ಚಾಗುವುದನ್ನು ತಪ್ಪಿಸುತ್ತದೆ. ಕೆಲವು ವಿಷಮ ಸಂದರ್ಭಗಳಲ್ಲಿ ಇದು ಸುಮಾರು ೩೫ ನಾಟ್‌ಗಳಷ್ಟು ವೇಗವನ್ನು ಪಡೆಯಬಲ್ಲುದು. ಸಮುದ್ರ ಪ್ರದೇಶದಕ್ಕೆ ಮೀಸಲಾಗಿರುವ ಓಟದ ವಿಹಾರ ನೌಕೆಗಳು ನಾವಿಕ ವರ್ಗಗಳಿಲ್ಲದೇ ಕೇವಲ ಪ್ರಾಥಮಿಕ ವಸತಿ ಸೌಲಭ್ಯವನ್ನು ಹೊಂದಿದ್ದು ಇದು ವೇಗವನ್ನು ಹೆಚ್ಚಿಸಲು ಹಾಗೂ ಭಾರವನ್ನು ಕಡಿಮೆಗೊಳಿಸುವ ತಂತ್ರವಾಗಿದೆ. ದೋಣಿ ಓಟದ ನಮೂನೆಯನ್ನವಲಂಭಿಸಿ ಈ ದೋಣಿಗಳು ತನ್ನಲ್ಲಿ ೧೫ ಅಥವಾ ಹೆಚ್ಚು ಜನರನ್ನೊಳಗೊಂಡ ನಾವಿಕವರ್ಗವನ್ನು ಹೊಂದಿರಬಹುದು. ಕಡಲತೀರದ ದೋಣಿಓಟದಲ್ಲಿ ಭಾಗವಹಿಸುವ ಬಹು ದೊಡ್ಡ ವಿಹಾರ ನೌಕೆಗಳು ತನ್ನಲ್ಲಿ ೩೦ ಜನರನ್ನೊಳಗೊಂಡ ನಾವಿಕವರ್ಗವನ್ನು ಹೊಂದಿರಬಹುದು. ಇನ್ನೊಂದೆಡೆ, "ಓರ್ವ ವ್ಯಕ್ತಿ ಮಾತ್ರ ನಡೆಸಬಲ್ಲ" ದೋಣಿ ಓಟಗಳಲ್ಲಿ ಒಬ್ಬ ವ್ಯಕ್ತಿ ಮಾತ್ರ ನಿಯಂತ್ರಿಸುವಂತೆ ಯಾಟ್‍ನ್ನು ನಿರ್ಮಿಸಲಾಗಿರುತ್ತದೆ.

ವಿಹಾರ ನೌಕೆ ಓಟಗಳು ಇಂಟರ್‌ನ್ಯಾಷನಲ್ ಒನ್ ಡಿಸೈನ್‌ನಲ್ಲಿ ನಡೆಯುವ ಹಾರ್ಬರ್ ರೇಸಿಂಗ್‌ನಂತೆ ಕೇವಲ ಕೆಲವು ಮೈಲುಗಳ ಓಟವಾಗಿರಬಹುದು, ಮುಕ್ತ ಸಮುದ್ರದ ಓಟವಾದ ಬರ್ಮುಡ ರ‍ೇಸ್‌ನಂತಹ ಅಥವಾ ಗ್ಲೋಬಲ್ ಚಾಲೆಂಜಸ್‌, ವೋಲ್ವೋ ಒಸಿಯನ್ ರೇಸ್, ಮತ್ತು ಕ್ಲಿಪ್ಪರ್ ರೌಂಡ್ ದ ವರ್ಲ್ಡ್‌ ಜಗತ್ತಿನ ಸಾಹಸೀ ಸ್ಪರ್ಧೆಯಂತಹ ಬಹುದೂರದ ಓಟವೇ ಆಗಿರಬಹುದು.

ಮುಂಚಲನೆ ಬದಲಾಯಿಸಿ

ಗಾಳಿಯೇ ನೌಕಾಯಾನಕ್ಕೆ ಪ್ರೇರಕ ಶಕ್ತಿಯಾಗಿದ್ದು, ಇದು ಆರ್ಥಿಕ ದೃಷ್ಠಿಯಿಂದಲೂ ಪರಿಸರ ಸ್ನೇಹೀದೃಷ್ಠಿಯಿಂದಲು ಇತರ ತಳ್ಳುವಿಕೆಯ ಮಾಧ್ಯಮಗಳಿಗಿಂತ ಲಾಭದಾಯಕವಾಗಿದೆ. ಮೋಟಾರು ದೋಣಿಯಿಂದ ನಡೆಸುವ ಜಲಯಾನವು ಒಂದು ಮಿಶ್ರ ಮಾದರಿಯ ನಮೂನೆಯಾಗಿದ್ದು ಇದರಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಯಾಂತ್ರಿಕ ಅಥವಾ ತಳ್ಳುವಿಕೆಯನ್ನೇ ಚಲನಶಕ್ತಿಯಾಗಿ ಬಳಸಲಾಗುತ್ತದೆ. ಹೆಚ್ಚಿನ ಕೇವಲ ಜಲಯಾನಕ್ಕೇ ಸೀಮಿತವಾದ ವಿಹಾರ ನೌಕೆಗಳು ತನ್ನೊಳಗಿನ ಕಡಿಮೆ ಶಕ್ತಿಯ ದಹನ ಕ್ರಿಯೆಯಿಂದ ನಿರ್ವಹಿಸಬಲ್ಲ ಯಂತ್ರವನ್ನೂ ಹೊಂದಿದ್ದು ಯಾಟ್ ಬಂದರು ಪ್ರದೇಶವನ್ನು ಪ್ರವೇಶಿಸಿದಾಗ ಮತ್ತು ಬಿಟ್ಟಾಗ ಆವಶ್ಯಕ ಸಂದರ್ಭದಲ್ಲಿ ಇದನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತವೆ. ೭ಮೀಟರ್‌ಗಿಂತ ಕಡಿಮೆ ಉದ್ದವಿರುವ ದೋಣಿಗಳು ಸಾಮಾನ್ಯವಾಗಿ ೫ ರಿಂದ ೪೦ ಅಶ್ವಶಕ್ತಿ(೩.೫ ನಿಂದ ೩೦ ಕಿ.ವಾ.) ಸಾಮರ್ಥ್ಯದ ಪೆಟ್ರೋಲ್ ತುಂಬಿರುವ ಹೊರಮೈ ಮೋಟಾರುಗಳನ್ನು ಹೊಂದಿವೆ.25 ft (8 m) ಬೃಹತ್ ಗಾತ್ರದ ದೋಣಿಗಳಲ್ಲಿ ದೋಣಿಯ ಗಾತ್ರಕ್ಕನುಸಾರವಾಗಿ ಸುಮಾರು ೨೦ ರಿಂದ ೧೦೦ ಅಶ್ವಶಕ್ತಿ ಸಾಮರ್ಥ್ಯದ ಡೀಸಿಲ್ ತುಂಬಿರುವ ಮೋಟಾರ್ ಯಂತ್ರವು ಒಳಮೈ ನಡುಭಾಗದ ಕಡೆಗೆ ಜೋಡಿಸಲ್ಪಟ್ಟಿರುತ್ತದೆ. ಸಾಮಾನ್ಯ ಬಳಕೆಯ ೨೫ ರಿಂದ ೪೫ ಅಡಿ (೭ ರಿಂದ ೧೪ ಮೀ) ಉದ್ದ ಹೊಂದಿರುವ ದೋಣಿಯ ವರ್ಗಗಳಲ್ಲಿ, ಸಾಮಾನ್ಯವಾಗಿ ೨೦ ರಿಂದ ೪೦ ಅಶ್ವಶಕ್ತಿ ಸಾಮರ್ಥ್ಯದ ಇಂಜಿನ್‌ಗಳ ಅಳವಡಿಕೆ ಸರ್ವೇ ಸಾಮಾನ್ಯ.

= ಬದಲಾಯಿಸಿ

ದೋಣಿಯ ಹೊರಮೈನ ವಿಧಗಳು=== ಒಂದೇ ಹೊರಮೈ ಹೊಂದಿರುವ ವಿಹಾರ ನೌಕೆಗಳು ಜಲಯಾನದ ಸಂದರ್ಭದಲ್ಲಿ ಗಾಳಿಯ ರಭಸಕ್ಕೆ ಮಗುಚದಂತೆ ನೀರಿನ ಮಟ್ಟದಲ್ಲಿ ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಸರಿಹೊಂದಿಸಬಹುದಾದ ಅಡಿಹಲಗೆಗಳು ಅಥವಾ ನಡು ಹಲಗೆಗಳನ್ನು ಹೊಂದಿರುತ್ತವೆ. ಒಂದಕ್ಕಿಂತ ಹೆಚ್ಚು ಹೊರಮೈ ಹೊಂದಿರುವ (ಮಲ್ಟಿ ಹಲ್) ವಿಹಾರ ನೌಕೆಗಳು ಅಗಲವಾಗಿ ಪ್ರತ್ಯೇಕಗೊಂಡ ಎರಡು ಹೊರಮೈ ಭಾಗಗಳನ್ನು (ಕಾಟಮರನ್) ಅಥವಾ ಮೂರು ಹೊರಮೈ ಭಾಗಗಳನ್ನು (ಟ್ರೈ ಮರನ್) ಹೊಂದಿದ್ದು ಇವು ಭದ್ರ ತಳಹದಿಯನ್ನು ಒದಗಿಸಿ ದೋಣಿಯು ಮಗುಚದಂತೆ ತಡೆಯುತ್ತವೆ ಮತ್ತು ಇದು ಆಳವಿಲ್ಲದ ನೀರಿನಲ್ಲಿ ಒಂದೇ ಹೊರಮೈ ಹೊಂದಿರುವ ವಿಹಾರ ನೌಕೆಗಳಿಗಿಂತ ಚೆನ್ನಾಗಿ ಪ್ರಯಾನ ಮಾಡಬಲ್ಲುದು.

ಮೋಟಾರು ವಿಹಾರ ನೌಕೆಗಳು ಬದಲಾಯಿಸಿ

 
ಮೋಟಾರು ವಿಹಾರ ನೌಕೆಗಳು

ವರ್ಗೀಕರಣ ಬದಲಾಯಿಸಿ

ಮೋಟಾರು ವಿಹಾರ ನೌಕೆಗಳು ಈ ಕೆಳಗಿನ ವರ್ಗಗಳಿಗೆ ಸೇರಿದವುಗಳಾಗಿವೆ:

  • ಹಗಲು ವಿಹಾರದ ಯಾಟ್ (ಡೇ ಕ್ರ್ಯುಸಿಯರ್) - (ಕ್ಯಾಬಿನ್, ವಿಶಾಲವಾದ ಸ್ಥಳ, ಶೈತ್ಯೀಕರನ ಯಂತ್ರ, ನೀರಿನ ವ್ಯವಸ್ಥೆಗಳಿಲ್ಲದ)
  • ವಾರಾಂತ್ಯದ ಯಾಟ್ (ವೀಕೆಂಡರ್) - (ಒಂದು ಅಥವಾ ಎರಡು ಸಾಮಾನ್ಯ ವರ್ಗದ ಕ್ಯಾಬಿನ್‌ಗಳು, ಅಡಿಗೆಮನೆ, ನೀರಿನ ಪ್ರಾಥಮಿಕ ವ್ಯವಸ್ಥೆ ಹೊಂದಿರುವ ಸೌಲಭ್ಯವಿದೆ)
  • ವಿಹಾರೀ ಯಾಟ್ (ಕ್ರ್ಯೂಸಿಂಗ್ ಯಾಟ್) - (ವಿಸ್ತೃತ ದೀರ್ಘಕಾಲದ ವಾಸಕ್ಕೆ ಯೋಗ್ಯವಾದ ಸೌಲಭ್ಯವನ್ನು ಹೊಂದಿದೆ)
  • ಕ್ರೀಡಾಸಕ್ತಿಯ ಮೀನುಗಾರಿಕಾ ಯಾಟ್ (ಸ್ಪೋರ್ಟ್ ಫಿಶಿಂಗ್ ಯಾಟ್) - (ವಾಸಕ್ಕೆ ಯೋಗ್ಯವಾದ ಸೌಲಭ್ಯಗಳ ಜೊತೆಗೆ ಕ್ರೀಡಾಸಕ್ತಿಯ ಮೀನುಗಾರಿಕೆಗೆ ಬೇಕಾದ ಸಾಧನಗಳು)
  • ವಿಲಾಸೀ ವಿಹಾರ ನೌಕೆಗಳು (ಲಕ್ಷುರಿ ಯಾಟ್) - (ಮೇಲಿನ ಮೂರು ವಿಧದ ವಿಹಾರ ನೌಕೆಗಳಿಗೆ ಸಮವಾಗಿದ್ದು ಹೆಚ್ಚಿನ ವಿಲಾಸೀ ಸೌಲಭ್ಯವನ್ನು ಹೊಂದಿದೆ)

ಮುಂಚಲನೆ ಬದಲಾಯಿಸಿ

ಮೋಟಾರು ವಿಹಾರ ನೌಕೆಗಳು ಸಾಮಾನ್ಯವಾಗಿ ಡೀಸೆಲ್‌ನ್ನು ಇಂಧನವನ್ನಾಗಿ ಬಳಸಿ ದಹಿಸಬಲ್ಲ ಒಂದು ಅಥವಾ ಎರಡು ಒಳ ದಹನಯಂತ್ರಗಳನ್ನು ಹೊಂದಿವೆ. ಕಡಲಿನಿಂದ ಉತ್ಪತ್ತಿಯಾಗಬಲ್ಲ ಜೈವಿಕ ಇಂಧನದ ಬಳಕೆ ಇನ್ನೂ ಪ್ರಾಯೋಗಿಕ ಹಂತದಲ್ಲಿಯೇ ಇದೆ. (ಉದಾ: ಅರ್ಥ್‌ರೇಸ್) ಇಂಜಿನ್ ಗಾತ್ರಕ್ಕನುಗುಣವಾಗಿ ಇಂಧನದ ಬೆಲೆಯು ಮೋಟಾರು ವಿಹಾರ ನೌಕೆಗಳ ನಿರ್ವಹಣೆಯನ್ನು ಜಲಯಾನಿ ವಿಹಾರ ನೌಕೆಗಳಿಗಿಂತ ಅಧಿಕ ವೆಚ್ಚದಾಯಕವನ್ನಾಗಿಸಿದೆ. ಹೀಗಿದ್ದಾಗ್ಯೂ, ಹಾಯಿ ದೋಣಿಗಳನ್ನು ನಡೆಸುವ ವೆಚ್ಚಕ್ಕೆ ಹೋಲಿಸಿದಾಗ ಸಣ್ಣ ಗಾತ್ರದ ಎಂಜಿನ್ ಹೊಂದಿರುವ ದೋಣಿಗಳು ಅಷ್ಟೆ ವೆಚ್ಚ ಹೊಂದಿರುತ್ತವೆ, {0/}ಇದಕ್ಕೆ ಅಗಾಗ ಬದಲಿ ವಸ್ಥೆಯನ್ನು ಮಾಡಬೇಕಾಗುತ್ತದೆ.

ದೋಣಿಯ ಹೊರಮೈ ವಿಧಗಳು ಬದಲಾಯಿಸಿ

ಮೋಟಾರು ವಿಹಾರ ನೌಕೆಗಳ ಹೊರಮೈ ಆಕಾರವು ಸ್ಥಾನಪಲ್ಲಟನ ಅಥವಾ ಸಮತಲಯಾನ ಅಥವಾ ಇವೆರಡನ್ನೂ ಅವಲಂಭಿಸಿದೆ. ಆದರೂ ಹಿಂದಿನಿಂದಲೂ ಬಳಕೆಯಲ್ಲಿದ್ದ ಒಂದೆ ಹೊರಮೈ ಹೊಂದಿರುವ ಮೊನೋಹಲ್ ವಿಹಾರ ನೌಕೆಗಿಂತ ಬಹುಹೊರಮೈ ಹೊಂದಿರುವ ಮಲ್ಟಿ ಹಲ್ ವಿಹಾರ ನೌಕೆಗಳು ಹೆಚ್ಚು ಜನಪ್ರಿಯವಾಗಿವೆ.

ರಾಜಕೀಯ ಗಮನ ಬದಲಾಯಿಸಿ

೨೦೧೦ರಲ್ಲಿ ಜೆಫ್ ಗ್ರೀನ್ (ಆರ್,ಫ್ಲೋರಿಡಾ), ಲಿಂಡಾ ಮ್ಯಾಕ್‌ಮಹೊನ್ (ಆರ್. ಕನೇಟಿಕಟ್)ರ (ಗಂಡ ವಿನ್ಸ್‌‌ರ ಹೆಸರಿನಲ್ಲಿದೆ), ಜಾನ್ ಕೆರ್ರಿ (ಡಿ-ಮಸಾಚ್ಯುಸೆಟ್ಸ್) ಮತ್ತು ಟೋಮ್ ಫೋಲೆ (ಆರ್-ಕನೇಟಿಕಟ್)[೩] ರನ್ನೊಳಗೊಂಡ ಅಮೇರಿಕಾ ಸಂಯುಕ್ತ ಸಂಸ್ಥಾನದ ಬೇರೆ ಬೇರೆ ಶಾಸನ ಸಭೆಗಳಲ್ಲಿ ವಿಹಾರ ನೌಕೆನ ಸ್ವಾಧೀನತೆಯು ಒಂದು ಕಾರ್ಯಾಚರಣೆಯ ಸಂಭಾಷಣೆಯಾಗಿ ಆರಂಭಗೊಂಡಿತು. ಗ್ರೀನ್, ಫೋಲೆ ಮತ್ತು ಕೆರ್ರಿಯ ವಿಹಾರ ನೌಕೆಗಳು ವಿಲಾಸೀ ವರ್ಗದ ವಿಹಾರ ನೌಕೆಗಳಡಿ ಬರುತ್ತವೆ ಹಾಗೂ ವಿನ್ಸ್ ಮ್ಯಾಕ್‌ಮಹನ್‌ನ ೪೭ಅಡಿ ಉದ್ದದ ಸ್ಪೋರ್ಟ್ ಯಾಟ್, ಸೆಕ್ಸೀ ಬಿಚ್ ಕೂಡಾ ಈ ಕಾರ್ಯಾಚರಣೆಯಲ್ಲಿ ಗುರುತಿಸಲ್ಪಟ್ಟಿವೆ.[೪]

ಸಮುದ್ರದ ತಳಭಾಗದಲ್ಲಿ ತೈಲ ಚೆಲ್ಲಿದ ದುರ್ಘಟನೆಯಲ್ಲಿನ ತನ್ನ ಪಾತ್ರದ ಬಗ್ಗೆ ಈತ ತೀವ್ರ ಪರಿಶೀಲನೆಗೊಳಪಟ್ಟ ಸಂದರ್ಭದಲ್ಲಿ ಮೊದಲ ಬಿಪಿ ಸಿಇಒ ಟೋನಿ ಹೆವಾರ್ಡ್ ವೈಟ್ ದ್ವೀಪವನ್ನು ಸೇರುವ ಮೂಲಕ ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆದನು. ತನ್ನ ಸಹಭಾಗಿತ್ವದಲ್ಲಿ ಸ್ವಾಧೀನಪಡಿಸಿಕೊಂಡ ಜಲಯಾನೀ ದೋಣಿ ಬಾಬ್‌ ನಲ್ಲಿ ಜೆಪಿ ಮೋರ್ಗನ್ ಛೇಸ್ ರೌಂಡ್ ದ ಐಲ್ಯಾಂಡ್ ರೇಸ್‌ನಲ್ಲಿ ಭಾಗವಹಿಸಿದನು. ನಂತರದಲ್ಲಿ ಹೇವರ್ಡ್ ತೈಲಸೋರಿಕೆಯ ದೈನಂದಿನ ಮೇಲ್ವಿಚಾರಣೆ ನಡೆಸಬೇಕಾದ ತನ್ನ ಜವಾಬ್ಧಾರಿಯಿಂದ ಹಿಂದೆ ಸರಿಯುತ್ತಿದ್ದಾನೆ ಎಂಬ ಪ್ರಕಟಣೆ ಘೋಷಿಸಲ್ಪಟ್ಟ ಮರುದಿನವೇ ಈ ಘಟನೆಯು ಸಂಭವಿಸಿತು ಹಾಗೂ ಎರಡು ದಿನದ ಬಳಿಕ, ಕ್ಯಾಪಿಟಲ್ ಹಿಲ್‌ನ ಶಾಸನಕಾರರ ಮೇಲೆ ಕೋಪಿಸಿಕೊಂಡ ಹೇವರ್ಡ್ ಸಾಕ್ಷ್ಯ ಹೇಳಿಕೆಯ ಸಂದರ್ಭದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸದಲ್ಲೇ ನಡೆದ ಕಡಲಕರೆಯಾಚೆಯ ತೈಲ ಸೋರಿಕೆಯ ದುರ್ಘಟನೆಯ ಬಗ್ಗೆ ಸಾಕ್ಷ್ಯ ವರದಿಯನ್ನು ಕೊಡಲು ನಿರಾಕರಿಸಿದನು.

ಇವನ್ನೂ ಗಮನಿಸಿ ಬದಲಾಯಿಸಿ

  • ಬೃಹತ್ ಗಾತ್ರದ ಸಮುದ್ರಯಾನದ ವಿಹಾರ ನೌಕೆಗಳ ಪಟ್ಟಿ
  • ಉದ್ದವಾದ ಮೋಟಾರು ವಿಹಾರ ನೌಕೆಗಳ ಪಟ್ಟಿ
  • ಹಾಯಿದೋಣಿ ವಿನ್ಯಾಸಗಾರರು ಮತ್ತು ತಯಾರಕರ ಪಟ್ಟಿ
  • ವಿಹಾರ ನೌಕೆ
  • ವಿಹಾರ ನೌಕೆ ಮಧ್ಯವರ್ತಿ
  • ವಿಹಾರ ನೌಕೆಯನ್ನು ಬಾಡಿಗೆ ಪಡೆಯುವುದು
  • ವಿಹಾರ ನೌಕೆ ಸಾಗಣೆ
  • ಮಾದರಿ ವಿಹಾರ ನೌಕೆ
  • ವಿಲಾಸಿ ವಿಹಾರ ನೌಕೆಗಳು

ಉಲ್ಲೇಖಗಳು ಬದಲಾಯಿಸಿ

  • ವಿಹಾರ ನೌಕೆಯ ಉಗಮ
  • ಪ್ರೇಸರ್, ಆ‍ಯ್‌೦ಟೋನಿಯಾ,"ರಾಯಲ್ ಚಾರ್ಲ್ಸ್ ". ಹಲವಾರು ಜನ ಸಂಪಾದಕರಿದ್ದಾರೆ.
  • ಗಾರ್ಡಿನರ್, ಆರ್ & ಲೇವರಿ, ಬಿ, "ದ ಲೈನ್ ಆಫ್ ಬ್ಯಾಟಲ್ : ದ ಸೇಲಿಂಗ್ ವಾರ್‌ಶಿಪ್ ೧೬೫೦-೧೮೪೦ ", ೧೯೯೨ (೨೦೦೪ ಆವೃತ್ತಿ), ಕನ್ವೆ, ISBN ೦-೮೫೧೭೭-೯೫೪-೯
  • ಪಾರ್ಟ್‌ರಿಜ್, ಎರಿಕ್, "ಒರಿಜಿನ್ಸ್, ಎ ಶಾರ್ಟ್ ಎಟಿಮಾಲಾಜಿಕಲ್ ಡಿಕ್ಷನರಿ ಆಫ್ ಮಾಡರ್ನ್ ಇಂಗ್ಲೀಶ್ ", ಗ್ರೀನ್‌ವಿಚ್ ಹೌಸ್, ೧೯೮೩, ISBN ೦-೫೧೭-೪೧೪೨೫-೨
  • ಇಂಟರ್ನ್ಯಾಷನಲ್ ಸೇಲಿಂಗ್ ಫೆಡರೇಶನ್ ರೇಸಿಂಗ್ ರೂಲ್ ಆಫ್ ಸೇಲಿಂಗ್
  1. ೧.೦ ೧.೧ ಗಾರ್ಡಿನರ್ & ಲೇವರಿ, ೧೯೯೨, ಪುಟ. ೬೮
  2. ೨.೦ ೨.೧ ಗಾರ್ಡಿನರ್ & ಲೇವರಿ, ೧೯೯೨, ಪುಟ. ೭೦
  3. ಗೇಲ್ಸ್ ಕಾಲಿನ್ಸ್‌ರಿಂದ "ಜುಲೈ ಫೋರ್ಥ್ ವೀಕೆಂಡ್ ಕ್ವಿಜ್", ಆಪ್-ಎಡ್ ಅಂಕಣ-, ದ ನ್ಯೂಯಾರ್ಕ್ ಟೈಮ್ಸ್ , ಜುಲೈ ೨, ೨೦೧೦ (ಜುಲೈ ೩, ೨೦೧೦ ಪುಟ. A೧೯ ನ್ಯೂಯಾರ್ಕ್ ಎಡಿಶನ್.). ೨೦೧೦-೦೮-೧೯ ರಂದು ಮರು ಸಂಪಾದಿಸಿದ್ದು .
  4. ದ ರನ್ನಿಂಗ್ ಆಫ್ ದ ರಿಚ್: ಈಸ್ ವೇಲ್ತ್ ಚೇಂಜಿಂಗ್ ಕನೆಕ್ಟಿಕಟ್ ಪಾಲಿಟಿಕ್ಸ್ ? Archived 2010-07-23 ವೇಬ್ಯಾಕ್ ಮೆಷಿನ್ ನಲ್ಲಿ.

ಬಾಹ್ಯ ಕೊಂಡಿಗಳು ಬದಲಾಯಿಸಿ

  1. REDIRECT Template:Sailing vessels and rigs
  2. REDIRECT Template:International keelboats