ಲಾರ್ಡ್ಸ್ ಕ್ರಿಕೆಟ್ ಮೈದಾನ

ಲಾರ್ಡ್ಸ್ ಕ್ರಿಕೆಟ್ ಮೈದಾನ (ಸಾಮಾನ್ಯವಾಗಿ ಲಾರ್ಡ್ಸ್ ಎಂದು ಹೆಸರಾಗಿದೆ) ಎನ್ನುವುದು ಲಂಡನ್ನ ಸೇಂಟ್ ಜಾನ್ಸ್ ವುಡ್ನಲ್ಲಿರುವ ಕ್ರಿಕೆಟ್ ಆಟವಾಡುವ ಸ್ಥಳವಾಗಿದೆ. ಇದರ ಸ್ಥಾಪಕರಾದ ಥಾಮಸ್ ಲಾರ್ಡ್ ಎನ್ನುವವರ ಹೆಸರನ್ನು ಪಡೆದಿರುವ ಇದರ ಮಾಲೀಕತ್ವವನ್ನು ಮೆರ್ಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಹೊಂದಿದೆ ಮತ್ತು ಇದು ಮಿಡ್ಲ್‌ಸೆಕ್ಸ್ ಕಂಟ್ರಿ ಕ್ರಿಕೆಟ್ ಕ್ಲಬ್, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ), ಯುರೋಪಿಯನ್ ಕ್ರಿಕೆಟ್ ಕೌನ್ಸಿಲ್ (ಇಸಿಸಿ) ಇದರ ನೆಲೆಯಾಗಿದೆ ಮತ್ತು ಆಗಸ್ಟ್ 2005 ರವರೆಗೆ ಇದು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇದರ ನೆಲೆಯಾಗಿತ್ತು. ಲಾರ್ಡ್ಸ್ ಅನ್ನು ವ್ಯಾಪಕವಾಗಿ "ಕ್ರಿಕೆಟ್‌ನ ತವರುಮನೆ"[೧] ಎನ್ನಲಾಗುತ್ತದೆ ಮತ್ತು ಇದು ವಿಶ್ವದ ಅತ್ಯಂತ ಹಳೆಯ ಕ್ರೀಡಾ ವಸ್ತು ಸಂಗ್ರಹಾಲಯದ ನೆಲೆಯಾಗಿದೆ.[೨]

Lord's Cricket Ground
ಚಿತ್ರ:Lord's logo.png
ಕ್ರೀಡಾಂಗಣ ಮಾಹಿತಿ
ಸ್ಥಳSt John's Wood, ಲಂಡನ್
ಸ್ಥಾಪನೆ1814
ಸಾಮರ್ಥ್ಯ28,000
ಮಾಲೀಕತ್ವMarylebone Cricket Club
ಒಕ್ಕಲುತಂಡEngland and Wales Cricket Board
ಕೊನೆಗಳ ಹೆಸರು
Pavilion End
Nursery End
ಅಂತರಾಷ್ತ್ರೀಯ ಮಾಹಿತಿ
ಮೊದಲ ಟೆಸ್ಟ್21 July 1884:  ಇಂಗ್ಲೆಂಡ್ v  ಆಸ್ಟ್ರೇಲಿಯಾ
ಕೊನೆಯ ಟೆಸ್ಟ್

13 July 2010:

 ಪಾಕಿಸ್ತಾನ v  ಆಸ್ಟ್ರೇಲಿಯಾ
ಮೊದಲ ಏಕದಿನ26 August 1972:  ಇಂಗ್ಲೆಂಡ್ v  ಆಸ್ಟ್ರೇಲಿಯಾ
ಕೊನೆ ಏಕದಿನ

3 July 2010:

 ಇಂಗ್ಲೆಂಡ್ v  ಆಸ್ಟ್ರೇಲಿಯಾ
Domestic team information
Marylebone Cricket Club (1814 – present)
Middlesex (1877 – present)

ಇಂದಿನ ಲಾರ್ಡ್ಸ್ ಅದರ ಮೂಲ ಸ್ಥಳದಲ್ಲಿಲ್ಲ ಮತ್ತು 1787 ರಿಂದ 1814 ರವರೆಗೆ ಲಾರ್ಡ್ ಅವರು ಸ್ಥಾಪಿಸಿದ ಮೂರು ಮೈದಾನಗಳಲ್ಲಿ ಮೂರನೆಯದಾಗಿದೆ. ಲಾರ್ಡ್ ಅವರ ಮೊದಲ ಮೈದಾನವಾದ ಮತ್ತು ಇಂದು ಲಾರ್ಡ್ಸ್ ಹಳೆಯ ಮೈದಾನ ಎನ್ನುವುದು ಈಗ ಡೋರ್ಸೆಟ್ ಸ್ಕ್ವೇರ್ ಇರುವ ಸ್ಥಳದಲ್ಲಿತ್ತು. ಅವರ ಎರಡನೆಯ ಮೈದಾನವಾದ ಲಾರ್ಡ್ಸ್ ಮಧ್ಯದ ಮೈದಾನವನ್ನು 1811 ರಿಂದ 1813 ರವರೆಗೆ ಬಳಸಲಾಯಿತು ಮತ್ತು ನಂತರ ಇದರ ಮೂಲಕ ರೆಜೆಂಟ್ಸ್ ಕಾಲುವೆಯ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಬಳಸದೇ ಬಿಡಲಾಯಿತು. ಪ್ರಸ್ತುತ ಲಾರ್ಡ್ಸ್ ಮೈದಾನವು ಮಧ್ಯದ ಮೈದಾನ ಸ್ಥಳದ ಸುಮಾರು 250 yards (230 m) ವಾಯುವ್ಯದಲ್ಲಿದೆ. ಲಾರ್ಡ್ಸ್‌ನ ಸಾಮರ್ಥ್ಯವನ್ನು ಇನ್ನೂ 10,000 ದಷ್ಟು ಹೆಚ್ಚಿಸುವ ಜೊತೆಗೆ ಅಪಾರ್ಟ್‌ಮೆಂಟ್‌ಗಳು ಮತ್ತು ಐಸ್ ರಿಂಕ್ ಅನ್ನು ಸೇರ್ಪಡೆಗೊಳಿಸುವ ಮೂಲಕ ಲಾರ್ಡ್ಸ್‌ ಅನ್ನು ಮರು ಅಭಿವೃದ್ಧಿಗೊಳಿಸುವ ಪ್ರಸ್ತಾಪವನ್ನು ಮಾಡಲಾಯಿತು.

ಆರಂಭಿಕ ಇತಿಹಾಸ ಬದಲಾಯಿಸಿ

ಪ್ರಸ್ತುತ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಅತೀ ಮೊದಲಿನ ಪಂದ್ಯವು 1814 ರ ಜೂನ್ 22 ರಂದು ಮೆರ್ಲ್ಬೋನ್ ಕ್ರಿಕೆಟ್ ಕ್ಲಬ್ ಮತ್ತು ಹರ್ಟ್‌ಪೋರ್ಡ್‌ಶೈರ್ ನಡುವೆ ನಡೆಯಿತು.[೩]

ಲಾರ್ಡ್ಸ್‌ನಲ್ಲಿನ ಅತೀ ಹಳೆಯ ಕ್ರಿಕೆಟ್ ಪಂದ್ಯವು (ಅಂದರೆ ಇಂದಿನವರೆಗೆ ಮುಂದುವರೆದಿರುವಂತಹುದು) ವಾರ್ಷಿಕ ಎಟೋನ್ ವಿ ಹ್ಯಾರೋ ಪಂದ್ಯವಾಗಿದೆ, ಮತ್ತು ಇದನ್ನು 1805 ರಲ್ಲಿ ಹಳೆಯ ಮೈದಾನದಲ್ಲಿ ಮತ್ತು ಜುಲೈ 1818 ರಲ್ಲಿ ಪ್ರಸ್ತುತ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಆಟವಾಡಲಾಯಿತು.

ನೆಲ ಅಂತಸ್ತು ಬದಲಾಯಿಸಿ

ಸ್ಟ್ಯಾಂಡ್‌ಗಳು ಬದಲಾಯಿಸಿ

 
ಲಾರ್ಡ್ಸ್‌ನಲ್ಲಿನ ಪ್ರಸ್ತುತ ಸ್ಟ್ಯಾಂಡ್.

ಲಾರ್ಡ್ಸ್‌ನಲ್ಲಿನ ಪ್ರಸ್ತುತ ಸ್ಟ್ಯಾಂಡ್‌ಗಳು ಈ ರೀತಿಯಾಗಿದೆ (ಪ್ರದಕ್ಷಿಣಾಕಾರವಾಗಿ):

  • ಪೆವಿಲಿಯನ್
  • ವಾರ್ನರ್ ಸ್ಟ್ಯಾಂಡ್
  • ಗ್ರಾಂಡ್ ಸ್ಟ್ಯಾಂಡ್
  • ಕಾಂಪ್ಟನ್ ಸ್ಟ್ಯಾಂಡ್
  • ಮಾಧ್ಯಮ ಕೇಂದ್ರ
  • ಎಡ್ರಿಚ್ ಸ್ಟ್ಯಾಂಡ್
  • ಮೌಂಡ್ ಸ್ಟ್ಯಾಂಡ್
  • ಟಾವೆರ್ನ್ ಸ್ಟ್ಯಾಂಡ್
  • ಅಲೆನ್ ಸ್ಟ್ಯಾಂಡ್

20 ನೇ ಶತಮಾನದ ಅಂತ್ಯದಲ್ಲಿ ಬಹುಪಾಲು ಲಾರ್ಡ್ಸ್ ಕ್ರಿಕೆಟ್ ಮೈದಾನವನ್ನು ಮರು ನಿರ್ಮಾಣ ಮಾಡಲಾಯಿತು. 1987 ರಲ್ಲಿ ಸರ್ ಮೈಕೆಲ್ ಹೋಪ್‌ಕಿನ್ಸ್ ಅವರು ವಿನ್ಯಾಸಗೊಳಿಸಿದ ಹೊಸ ಮೌಂಟ್ ಸ್ಟ್ಯಾಂಡ್ ಅನ್ನು ತೆರೆಯಲಾಯಿತು, ಆನಂತರ 1996 ರಲ್ಲಿ ಗ್ರಾಂಡ್‌ಸ್ಟ್ಯಾಂಡ್ (ನಿಕೋಲಸ್ ಗ್ರಿಮ್‌ಶಾ ಅವರಿಂದ) ಅನ್ನು ತೆರೆಯಲಾಯಿತು. ಹೆಚ್ಚು ಪ್ರಮುಖವಾಗಿ, ಮಾಧ್ಯಮ ಕೇಂದ್ರವನ್ನು (ಫ್ಯೂಚರ್ ಸಿಸ್ಟಮ್ಸ್ ಅವರಿಂದ) 1998-99 ನೇ ಸಾಲಿನಲ್ಲಿ ಸೇರ್ಪಡೆಗೊಳಿಸಲಾಯಿತು ಮತ್ತು ಇದು 1999 ನೇ ಸಾಲಿಗೆ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ ಅವರು ನೀಡುವ ಸ್ಟರ್ಲಿಂಗ್ ಬಹುಮಾನವನ್ನು ಗೆದ್ದುಕೊಂಡಿತು. ಮೈದಾನವು ಪ್ರಸ್ತುತ 32,000 ಪ್ರೇಕ್ಷಕರಿಗೆ ಸ್ಥಳಾವಕಾಶವನ್ನು ಒದಗಿಸುತ್ತದೆ. ಪಿಚ್‌ನ ಎರಡು ತುದಿಗಳೆಂದರೆ ಮುಖ್ಯ ಸದಸ್ಯರುಗಳ ಪೆವಿಲಿಯನ್ ಇರುವ ಪೆವಿಲಿಯನ್ ತುದಿ (ನೈಋತ್ಯ) ಮತ್ತು ಮಾಧ್ಯಮ ಕೇಂದ್ರವಿರುವ ನರ್ಸರಿ ತುದಿ (ಈಶಾನ್ಯ)ಯಾಗಿದೆ.

ಪೆವಿಲಿಯನ್ ಬದಲಾಯಿಸಿ

 
ವಿಕ್ಟೋರಿಯಾ ಕಾಲದ ಪೆವಿಲಿಯನ್

ವಿಕ್ಟೋರಿಯಾ ಯುಗದ ಮುಖ್ಯ ಉಳಿಕೆಯು ಹೆಸರಾಂತ ಲಾಂಗ್ ರೂಮ್‌ನೊಂದಿಗಿನ ಪೆವಿಲಿಯನ್ ಆಗಿದೆ; ಇದನ್ನು ವಾಸ್ತುಶಿಲ್ಪಿ ಥಾಮಸ್ ವೆರಿಟಿ ಇವರ ವಿನ್ಯಾಸದ ಪ್ರಕಾರವಾಗಿ 1889-90 ರಲ್ಲಿ ನಿರ್ಮಾಣ ಮಾಡಲಾಯಿತು. ಇತ್ತೀಚೆಗೆ, ಈ ಐತಿಹಾಸಿಕ ಹೆಗ್ಗುರುತು ಮತ್ತು — ದರ್ಜೆ II*-ಎಂದು ಪಟ್ಟಿ ಮಾಡಿದ ಕಟ್ಟಡವು— 2004-05 ರಲ್ಲಿ £8 ಮಿಲಿಯನ್ ವೆಚ್ಚದಲ್ಲಿ ನವೀಕರಣಗೊಂಡಿತು. ಪೆವಿಲಿಯನ್ ಎನ್ನುವುದು ಪ್ರಮುಖವಾಗಿ ಎಂಸಿಸಿಯ ಸದಸ್ಯರುಗಳಿಗಾಗಿದ್ದು, ಅವರು ಇದರ ಆಸನಗಳನ್ನು ಒಳಗೊಂಡು ಇತರ ಸೌಕರ್ಯಗಳನ್ನು ಕ್ರಿಕೆಟ್ ವೀಕ್ಷಿಸಲು ಮತ್ತು ಲಾಂಗ್ ರೂಂ ಮತ್ತು ಲಾಂಗ್ ರೂಂ ಬಾರ್, ಬೌಲರ್ಸ್ ಬಾರ್, ಸದಸ್ಯರ ಅಂಗಡಿ ಇತ್ಯಾದಿ ಸೌಲಭ್ಯಗಳನ್ನು ಬಳಸಬಹುದು. ಮಿಡ್ಲ್‌ಸೆಕ್ಸ್ ಪಂದ್ಯಗಳಿಗೆ ಮಿಡ್ಲ್‌ಸೆಕ್ಸ್ ಕಂಟ್ರಿ ಕ್ಲಬ್ ಸದಸ್ಯರುಗಳಿಗೆ ಪೆವಲಿಯನ್ ಮುಕ್ತವಾಗಿರುತ್ತದೆ. ಆಟಗಾರರ ಬದಲಾವಣೆಗಾಗಿ ಡ್ರೆಸಿಂಗ್ ಕೊಠಡಿಯನ್ನು ಸಹ ಪೆವಿಲಿಯನ್ ಒಳಗೊಂಡಿದೆ ಮತ್ತು ಈ ಪ್ರತಿಯೊಂದು ಪೆವಿಲಿಯನ್ ಆಟಗಾರರು ಆಟವನ್ನು ವೀಕ್ಷಿಸಲಾಗುವಂತೆ ಚಿಕ್ಕ ಬಾಲ್ಕನಿಯನ್ನು ಹೊಂದಿದೆ. ಎರಡು ಪ್ರತಿ ಮುಖ್ಯ ಡ್ರೆಸಿಂಗ್ ಕೊಠಡಿಗಗಳಲ್ಲಿ ಗೌರವ ಫಲಕಗಳಿದ್ದು, ಇವುಗಳು ಲಾರ್ಡ್ಸ್ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಬಾರಿಸಿದ ಶತಕಗಳ ಮತ್ತು ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಬೌಲರ್ ಐದು ವಿಕೆಟ್‌ಗಳನ್ನು ತೆಗೆದುಕೊಂಡ ಮತ್ತು ಟೆಸ್ಟ್ ಪಂದ್ಯವೊಂದರಲ್ಲಿ ಹತ್ತು ವಿಕೆಟ್‌ಗಳನ್ನು ತೆಗೆದುಕೊಂಡ ಸಂದರ್ಭಗಳನ್ನು ಸ್ಮರಿಸುತ್ತದೆ.

ಓಲ್ಡ್ ಫಾದರ್ ಟೈಮ್ ಬದಲಾಯಿಸಿ

 
ಗ್ರಾಂಡ್ ಸ್ಟ್ಯಾಂಡ್

ಮೈದಾನದ ಮತ್ತೊಂದು ಕಾಣಬಹುದಾದ ವೈಶಿಷ್ಟ್ಯವೆಂದರೆ ಓಲ್ಡ್ ಫಾದರ್ ಟೈಮ್ ಆಗಿದ್ದು, ಇದು ಫಾದರ್ ಟೈಮ್ ಆಕಾದಲ್ಲಿರುವ ವಾಯು ದಿಕ್ಸೂಚಿಯಾಗಿದೆ ಮತ್ತು ಇದು ಪ್ರಸ್ತುತ ಕ್ಷೇತ್ರದ ಆಗ್ನೇಯ ಸ್ಟ್ಯಾಂಡ್ ಅನ್ನು ಅಲಂಕರಿಸಿದೆ.

ಮಾಧ್ಯಮ ಕೇಂದ್ರ ಬದಲಾಯಿಸಿ

 
ಫ್ಯೂಚರಿಸ್ಟಿಕ್ ಇನ್ವೆಸ್ಟಿಕ್ ಮಾಧ್ಯಮ ಕೇಂದ್ರ

ಮಾಧ್ಯಮ ಕೇಂದ್ರವನ್ನು 1999 ಕ್ರಿಕೆಟ್ ವಿಶ್ವಕಪ್ ವೇಳೆಗೆ ಪ್ರಾರಂಭಿಸಲಾಯಿತು ಮತ್ತು ಇದು ವಿಶ್ವದ ಮೊದಲ ಸಂಪೂರ್ಣ ಅಲ್ಯುಮಿನಿಯಂನ, ಅರೆ-ಏಕಕಾಯಕ ಕಟ್ಟಡವಾಗಿದೆ. ಇದನ್ನು ಎರಡು ದೋಣಿ ಅಂಗಳಗಳಲ್ಲಿ ನಿರ್ಮಿಸಲಾಯಿತು ಮತ್ತು ಜೋಡಿಸಲಾಯಿತು ಮತ್ತು ಇದು ದೋಣಿ-ನಿರ್ಮಾಣದ ತಂತ್ರಜ್ಞಾನವನ್ನು ಬಳಸುತ್ತದೆ. ಕೇಂದ್ರವು ಮೈದಾನದಿಂದ 15 metres (49 ft) ಮೇಲಕ್ಕೆ ನಿಂತಿದೆ ಮತ್ತು ಇದರ ಮುಖ್ಯ ಆಧಾರವು ಅದರ ಸುತ್ತಲಿನ ಎರಡು ಲಿಫ್ಟ್ ಶಾಫ್ಟ್‌ಗಳ ನೆರವಿನಿಂದ ಬಂದಿದೆ — ಇದು ಮೈದಾನದ ಮತ್ತೊಂದು ಭಾಗದಲ್ಲಿ ಇದರ ನೇರಕ್ಕೆ ಇರುವ ಪೆವಿಲಿಯನ್‌ನಷ್ಟೇ ಸುಮಾರು ಎತ್ತರವಾಗಿದೆ. ಕೇಂದ್ರದ ತಳ ಭಾಗವು ಸುಮಾರು 100 ಪತ್ರಕರ್ತರಿಗೆ ವಸತಿ ವ್ಯವಸ್ಥೆಯನ್ನು ಒದಗಿಸುತ್ತದೆ ಮತ್ತು ಮೇಲ್ಭಾಗವು ರೇಡಿಯೋ ಮತ್ತು ದೂರದರ್ಶನ ವೀಕ್ಷಕ ವಿವರಣೆ ಸ್ಥಳಗಳನ್ನು ಹೊಂದಿದೆ. ಕೇಂದ್ರದ ಏಕೈಕ ತೆರೆಯಬಹುದಾದ ಕಿಟಕಿಯು ಟೆಸ್ಟ್ ಪಂದ್ಯ ವಿಶೇಷವು ಬಳಸುವ ಪ್ರಸಾರ ಸ್ಥಳದಲ್ಲಿದೆ. ಕಟ್ಟಡಕ್ಕೆ ಅದರ ವಾಸ್ತುಶೈಲಿಗಾಗಿ 1999 ರಲ್ಲಿ ಆರ್ಐಬಿಎ ಸ್ಟರ್ಲಿಂಗ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಟಾವೆರ್ನ್ ಸ್ಟ್ಯಾಂಡ್ ಬದಲಾಯಿಸಿ

 
ಲಾರ್ಡ್ ಹ್ಯಾರಿಸ್ ಅವರ ಈ ಸ್ಮಾರಕ ಫಲಕವು ಲಾರ್ಡ್ಸ್‌ನಲ್ಲಿನ ಹ್ಯಾರಿಸ್ ಗಾರ್ಡನ್‌ನಲ್ಲಿದೆ

ಕ್ರಿಕೆಟಿಗರು ಮತ್ತು ಕ್ರಿಕೆಟ್ ಪ್ರೇಮಿಗಳನ್ನು ಒಳಗೊಂಡಿರುವ ಸೇವಾ ಸಮೂಹವಾದ ಲಾರ್ಡ್ಸ್ ಟಾವೆರ್ನರ್ಸ್ ಇವರು ತಮ್ಮ ಹೆಸರನ್ನು ಲಾರ್ಡ್ಸ್‌ನಲ್ಲಿರುವ ಸಂಸ್ಥೆಯ ಸ್ಥಾಪಕರುಗಳು ಒಂದು ಸೇರುತ್ತಿದ್ದ ಹಳೆಯ ಟಾವೆರ್ನ್ ಪಬ್‌ನಿಂದ ಹೆಸರನ್ನು ಆಯ್ದುಕೊಂಡರು. ಪಬ್ ಈಗ ಅಸ್ತಿತ್ವದಲ್ಲಿಲ್ಲ ಮತ್ತು ಟಾವೆರ್ನ್ ಸ್ಟ್ಯಾಂಡ್ ಇದೀಗ ಅದರ ಹಿಂದಿನ ಸ್ಥಳದಲ್ಲಿದೆ. ಆದರೆ, ಅದೇ ಹೆಸರಿನೊಂದಿಗೆ ಮೈದಾನದಲ್ಲಿ ಹೊಸ ಪಬ್ ಅನ್ನು ಜೊತೆಗೆ ಪೆವಿಲಿಯನ್‌ನಲ್ಲಿ ಸದಸ್ಯರ ಬಾರ್ ಅನ್ನು ಪ್ರಾರಂಭಿಸಲಾಯಿತು.

ಕ್ಷೇತ್ರ ಬದಲಾಯಿಸಿ

 
ಎಡಭಾಗದಲ್ಲಿ ಮೌಂಡ್ ಸ್ಟ್ಯಾಂಡ್ ಸಾರ್ವಜನಿಕ ಪ್ರದೇಶ ಮತ್ತು ಬಲಭಾಗದಲ್ಲಿ ಟಾವೆರ್ನ್ ಸ್ಟ್ಯಾಂಡ್ ಸದಸ್ಯರ ಪ್ರದೇಶ. ಪ್ರಸಿದ್ಧವಾದ ಓಲ್ಡ್ ಫಾದರ್ ಟೈಮ್ ಹವಾಮಾನ ದಿಕ್ಸೂಚಿ ಮತ್ತು ಗಡಿಯಾರವು ಸಹ ಕಾಣುತ್ತಿದೆ

ಕ್ಷೇತ್ರದಾದ್ಯಂತ ಪ್ರಮುಖವಾದ ಇಳಿಜಾರನ್ನು ಹೊಂದಿರುವುದು ಲಾರ್ಡ್ಸ್ ಮೈದಾನದ ಒಂದು ವಿಶಿಷ್ಟ ಮತ್ತು ಹೆಸರಾಂತ ವೈಶಿಷ್ಟ್ಯವಾಗಿದೆ. ಆಟವಾಡುವ ಭಾಗದ ವಾಯುವ್ಯ ಭಾಗವು ಆಗ್ನೇಯ ಭಾಗಕ್ಕಿಂತ ಸುಮಾರು ಎಂಟು ಅಡಿಯಷ್ಟು ಎತ್ತರವಾಗಿದೆ[ಸೂಕ್ತ ಉಲ್ಲೇಖನ ಬೇಕು]. ಈ ಇಳಿಜಾರು ಪಿಚ್‌ನಲ್ಲಿ ಗಮನಾರ್ಹವಾಗಿ ಚೆಂಡಿನ ಪುಟಿದೇಳುವಿಕೆಯ ವಿಚಲನಕ್ಕೆ ಕಾರಣವಾಗುತ್ತದೆ ಮತ್ತು ಪೆವಿಲಿಯನ್ ತುದಿಯಿಂದ ಬೌಲಿಂಗ್ ಮಾಡುವಾಗ ಬಲಗೈ ಬ್ಯಾಟ್ಸ್‌ಮನ್‌ಗೆ ಚೆಂಡನ್ನು ಸುಲಭವಾಗಿ ಚೆಂಡನ್ನು ಒಳಗೆ ತಿರುಗಿಸಲು ಸುಲಭವಾಗಿಸಿದರೆ ನರ್ಸರಿ ತುದಿಯಿಂದ ಬೌಲಿಂಗ್ ಮಾಡುವಾಗ ಚೆಂಡನ್ನು ಹೊರಗೆ ತಿರುಗಿಸಲು ಸಹಾಯ ಮಾಡುತ್ತದೆ. ಹೊರ ಕ್ಷೇತ್ರವು ನೀರಿನ ನಿಲ್ಲುವಿಕೆಗೆ ಹೆಸರಾಗಿತ್ತು ಮತ್ತು ಎಸ್ಟೇಟ್ ಸಮಿತಿಯ ಅಧ್ಯಕ್ಷರಾದ ಮೌರಿಸ್ ಡೆ ರೋಹನ್ ಅವರ ನೇತೃತ್ವದಲ್ಲಿ 2002-2003 ರ ಚಳಿಗಾಲದ ಸಮಯದಲ್ಲಿ ಹೊರ ಕ್ಷೇತ್ರವನ್ನು ಮರು ವಿನ್ಯಾಸಗೊಳಿಸಲಾಯಿತು. ಮಳೆಯಿಂದ ಅಡ್ಡಿಯುಂಟಾದ ಪಂದ್ಯಗಳಲ್ಲಿ ಟಿಕೆಟ್ ಹಣವನ್ನು ಮರುಪಾವತಿಸುವ ಅಗತ್ಯತೆಯನ್ನು ಕಡಿಮೆ ಮಾಡಲು ಹೂಡಿಕೆ ಹಣ (ಸುಮಾರು £2m)ವನ್ನು ತಕ್ಷಣವೇ ಮರುಪಾವತಿಸಲಾಯಿತು.

ಗ್ರೇಸ್ ದ್ವಾರಗಳು ಬದಲಾಯಿಸಿ

ಮೈದಾನದ ಒಂದು ವೈಶಿಷ್ಟ್ಯವೆಂದರೆ ಜೊತೆಯ ಅಲಂಕಾರಿಕ ಹೆಬ್ಬಾಗಿಲಾಗಿದ್ದು, ಇದನ್ನು ಡಬ್ಲ್ಯೂ ಜಿ ಗ್ರೇಸ್ ಅವರ ಸ್ಮರಣಾರ್ಥ ಹೆಸರಿಸಲಾಗಿದೆ. 1923 ರಲ್ಲಿ, ಮೈದಾನದ ಸೇಂಟ್ ಜಾನ್ಸ್ ವೂಡ್ ರೋಡ್ ಪ್ರವೇಶ ದ್ವಾರದಲ್ಲಿ ಡಬ್ಲ್ಯೂ ಜಿ ಗ್ರೇಸ್ ಸ್ಮಾರಕ ಬಾಗಿಲುಗಳನ್ನು ಸ್ಥಾಪಿಸಲಾಯಿತು.[೪] ಇವುಗಳನ್ನು ಸರ್ ಹರ್ಬರ್ಟ್ ಬೇಕರ್ ಇವರು ವಿನ್ಯಾಸಗೊಳಿಸಿದ್ದರು ಮತ್ತು ಅಂಕಿತದಲ್ಲಿ ದಿ ಗ್ರೇಟ್ ಕ್ರಿಕೆಟರ್ ಎಂಬ ಪದಗಳನ್ನು ಸೇರ್ಪಡಿಸುವಂತೆ ಸೂಚಿಸಿದ ಸರ್ ಸ್ಟಾನ್ಲೇ ಜಾಕ್ಸನ್ ಇವರು ಪ್ರಾರಂಭೋತ್ಸವವನ್ನು ಮಾಡಿದರು.[೫]

ಹೊನಲುಬೆಳಕು ಬದಲಾಯಿಸಿ

2007 ರಲ್ಲಿ ಮೈದಾನದಲ್ಲಿ

 
2009 ರ ಮೇ 27 ರಂದು ಲಾರ್ಡ್ಸ್‌ನಲ್ಲಿ ನಡೆದ ಮಿಡ್ಲ್‌ಸೆಕ್ಸ್ ಮತ್ತು ಕೆಂಟ್ ನಡುವಿನ ಟ್ವೆಂಟಿ20 ಪಂದ್ಯ

ತಾತ್ಕಾಲಿಕ ಹೊನಲು ದೀಪಗಳನ್ನು ಸ್ಥಾಪಿಸಲಾಯಿತು, ಆದರೆ ಸೇಂಟ್ ಜಾನ್ಸ್ ವುಡ್‌ನ ನಾಗರಿಕರು ಬೆಳಕಿನ ಮಾಲಿನ್ಯದ ಬಗ್ಗೆ ದೂರು ನೀಡಿದ ಕಾರಣದಿಂದ 2008 ರಲ್ಲಿ ಅದನ್ನು ತೆಗೆದು ಹಾಕಲಾಯಿತು. 2009 ರ ಜನವರಿಯಲ್ಲಿ, ಹೊಸತಾಗಿ ಸ್ಥಾಪನೆ ಮಾಡಿದ ಹೊನಲು ದೀಪಗಳನ್ನು ಬಳಸಲು ವೆಸ್ಟ್‌ಮಿನಿಸ್ಟರ್ ಕೌನ್ಸಿಲ್ ಅನುಮತಿಯನ್ನು ನೀಡಿತು. ಈ ಹೊಸ ದೀಪಗಳನ್ನು ಪ್ರಮುಖವಾಗಿ ಸಾಧ್ಯವಾದಷ್ಟು ಜನರ ಮನೆಗಳಲ್ಲಿ ಬೆಳಕು ಸೋರಿಕೆಯಾಗದಂತೆ ತಡೆಗಟ್ಟಲು ಮೈದಾನಕ್ಕಾಗಿ ವಿನ್ಯಾಸಗೊಳಿಸಲಾಗಿತ್ತು. ವೆಸ್ಟ್‌ಮಿನಿಸ್ಟರ್ ಕೌನ್ಸಿಲ್‌ನ ಅನುಮತಿಯು ಷರತ್ತಿನ ಹೊರತಾಗಿ ಇರಲಿಲ್ಲ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಬೆಳಕಿನಡಿಯಲ್ಲಿ 12 ಪಂದ್ಯಗಳು ಮತ್ತು 4 ಅಭ್ಯಾಸ ಪಂದ್ಯಗಳನ್ನಾಡಲು ಐದು ವರ್ಷಗಳ ಪ್ರಾಯೋಗಿಕ ಅವಧಿಗೆ ದೀಪಗಳನ್ನು ಬಳಸಲು ಅನುಮತಿಸಲಾಗಿತ್ತು. ದೀಪಗಳನ್ನು 9.50 ಕ್ಕೆ ಅರ್ಧದಷ್ಟು ಸಾಮರ್ಥ್ಯಕ್ಕೆ ಕುಂದಿಸಬೇಕಾಗಿತ್ತು ಮತ್ತು ರಾತ್ರಿ 11 ರೊಳಗೆ ಆಫ್ ಮಾಡಬೇಕಾಗಿತ್ತು. ಹೊನಲು ದೀಪಗಳನ್ನು ಮೊದಲನೆಯದಾಗಿ 2009 ರ ಮೇ 27 ರಂದು ಮಿಡ್ಲ್‌ಸೆಕ್ಸ್ ಮತ್ತು ಕೆಂಟ್ ನಡುವಿನ ಟ್ವೆಂಟಿ20 ಕಪ್ ಪಂದ್ಯದಲ್ಲಿ ಬಳಸಲಾಯಿತು.[೬]

ಕ್ರಿಕೆಟ್ ಬಳಕೆ ಬದಲಾಯಿಸಿ

 
2005 ರ ಜುಲೈ 10 ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ನಡುವಿನ ಒಂದು ದಿನದ ಅಂತರಾಷ್ಟ್ರೀಯ ಪಂದ್ಯ

ಲಾರ್ಡ್ಸ್ ಮೈದಾನವು ಟೆಸ್ಟ್ ಪಂದ್ಯಗಳು, ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳು, ಕೆಲವು ಮಿಡ್ಲ್‌ಸೆಕ್ಸ್ ಸ್ಥಳೀಯ ಪಂದ್ಯಗಳು, ಎಂಸಿಸಿ ಪಂದ್ಯಗಳು (ಜುಲೈ 2004 ರಲ್ಲಿ ಮಿಡ್ಲ್‌ಸೆಕ್ಸ್ ಮತ್ತು ಸರ್ರೆ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಯಿತು), ಕೆಲವು ಮಿಡ್ಲ್‌ಸೆಕ್ಸ್‌ನ ಸ್ಥಳೀಯ ಟ್ವೆಂಟಿ20 ಆಟಗಳನ್ನು ಆಯೋಜಿಸುತ್ತದೆ.

ಲಾರ್ಡ್ಸ್ ಮೈದಾನವು ಸಾಂಕೇತಿಕವಾಗಿ ಬೇಸಿಗೆ ಕಾಲದಲ್ಲಿ ಎರಡು ಟೆಸ್ಟ್‌ಗಳನ್ನು -ಇದರಲ್ಲಿ ಬೇಸಿಗೆಯ ಮೊದಲ ಟೆಸ್ಟ್ ಸೇರಿದೆ ಹಾಗೂ ಜೊತೆಗೆ ಎರಡು ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುತ್ತದೆ. ಲಾರ್ಡ್ಸ್ ಮೈದಾನವು ನ್ಯಾಷನಲ್ ವಿಲೇಜ್ ಕ್ರಿಕೆಟ್ ಸ್ಪರ್ಧೆಯ ಫೈನಲ್ ಪಂದ್ಯಗಳು, ಎಂಸಿಸಿ ವಿಶ್ವವಿದ್ಯಾನಿಲಯಗಳ ಚಾಲೆಂಜ್ ಪಂದ್ಯಾವಳಿ ಮತ್ತು ಫ್ರೆಂಡ್ಸ್ ಪ್ರಾವಿಡೆಂಟ್ ಟ್ರೋಫಿಯನ್ನು ಸಹ ಆಯೋಜಿಸುತ್ತದೆ. ಹೆಚ್ಚಿನದಾಗಿ, ಟ್ವೆಂಟಿ20 ಕಪ್‌ನಲ್ಲಿ ಎರಡು ಪಂದ್ಯಗಳನ್ನು, ಆದರೆ ಸ್ಪರ್ಧೆಗಳ ಫೈನಲ್ ದಿನವನ್ನು ಹೊರತುಪಡಿಸಿ ಪ್ರತಿ ಕಾಲಾವಧಿಯಲ್ಲಿ ಪಂದ್ಯಗಳನ್ನು ಲಾರ್ಡ್ಸ್‌ನಲ್ಲಿ ಆಡಲಾಗುತ್ತದೆ.

ಲಾರ್ಡ್ಸ್ ಮೈದಾನದಲ್ಲಿನ ಅತೀ ಹಳೆಯ ಪಂದ್ಯಾವಳಿಯು ವಾರ್ಷಿಕವಾಗಿ ಎಟೋನ್ ಮತ್ತು ಹ್ಯಾರೋ ನಡುವಿನ ಪಂದ್ಯವಾಗಿದ್ದು, ಇದು 1805 ರಲ್ಲಿ ಪ್ರಾರಂಭಗೊಂಡಿತು (ಲಾರ್ಡ್ ಬೈರೋನ್ ಇವರು 1805 ರ ಹ್ಯಾರೋ XI ನಲ್ಲಿ ಆಟವಾಡಿದರು) ಮತ್ತು ಇದರ ಇನ್ನೂರನೇ ವಾರ್ಷಿಕೋತ್ಸವವನ್ನು 2005 ರಲ್ಲಿ ಆಚರಿಸಲಾಯಿತು. ಪಂದ್ಯವು ಯಾವಾಗಲೂ ತುರುಸಿನಿಂದ ಕೂಡಿರುತ್ತದೆ. 2000 ರಿಂದ ಪ್ರತಿ ತಂಡಕ್ಕೂ 55 ಓವರ್‌ಗಳಾಗಿದೆ, ಆದರೆ ಇದಕ್ಕೆ ಮೊದಲು ಇದು ಡಿಕ್ಲರೇಶನ್ ಆಗಿತ್ತು ಮತ್ತು ಇದಕ್ಕೂ ಮೊದಲು ಎರಡು ದಿನಗಳಲ್ಲಿ ಪ್ರತಿ ತಂಡಕ್ಕೆ ಎರಡು ಇನ್ನಿಂಗ್ಸ್ ಆಗಿತ್ತು. ಎಟನ್ ತಂಡವು ಸಮತೋಲಿತ ಜಯಶಾಲಿಯಾಗಿತ್ತು, ಆದರೆ ಇನ್ನೂರನೇ ವಾರ್ಷಿಕೋತ್ಸವದ ವರ್ಷದಲ್ಲಿ ಹ್ಯಾರೋ ಜಯಶಾಲಿಯಾಗಿತ್ತು.

ಎಂಸಿಸಿ ವಸ್ತು ಸಂಗ್ರಹಾಲಯ ಬದಲಾಯಿಸಿ

 
ಲಾರ್ಡ್ಸ್‌ನಲ್ಲಿನ ಸುತ್ತಳತೆ ಗೋಡೆಯ ಪ್ರದರ್ಶನ

ಲಾರ್ಡ್ಸ್ ಎನ್ನುವುದು ವಿಶ್ವದಲ್ಲೇ ಅತ್ಯಂತ ಹಳೆಯದಾದ ಕ್ರೀಡಾ ವಸ್ತು ಸಂಗ್ರಹಾಲಯವಾದ ಎಂಸಿಸಿ ವಸ್ತು ಸಂಗ್ರಹಾಲಯದ ತವರು ಮನೆಯಾಗಿದೆ ಮತ್ತು ಇದು ಆಷಸ್ ಅನ್ನು ಒಳಗೊಂಡು ಕ್ರಿಕೆಟ್‌ನ ಚಿರಸ್ಮರಣೀಯ ವಸ್ತುಗಳ ವಿಶ್ವದ ಅತ್ಯಂತ ಪ್ರಸಿದ್ಧ ಸಂಗ್ರಹವನ್ನು ಒಳಗೊಂಡಿದೆ. 1864 ರಿಂದ ಎಂಸಿಸಿಯು ಸ್ಮಾರಕಗಳನ್ನು ಸಂಗ್ರಹಿಸುತ್ತಿದೆ. ಇಲ್ಲಿ ಪ್ರದರ್ಶಿತವಾಗಿರುವ ವಸ್ತುಗಳಲ್ಲಿ ವಿಕ್ಟರ್ ಟ್ರಂಪರ್, ಜಾಕ್ ಹಾಬ್ಸ್, ಡಾನ್ ಬ್ರಾಡ್‌ಮನ್ ಮತ್ತು ಶೇನ್ ವಾರ್ನ್ ಇವರುಗಳು ಬಳಸಿದ ಕ್ರಿಕೆಟ್ ಕಿಟ್‌ಗಳು, ಡಬ್ಲ್ಯೂ.ಜಿ. ಗ್ರೇಸ್ ಅವರ ವೃತ್ತಿ ಜೀವನಕ್ಕೆ ಸಂಬಂಧಿಸಿದ ಹಲವು ವಸ್ತುಗಳು; ಮತ್ತು 1933 ರ ಜುಲೈ 3 ರಂದು ಎಂಸಿಸಿ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದು ಟಿ.ಎನ್. ಪಿಯರ್ಸ್ ಅವರಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಜಹಾಂಗೀರ್ ಖಾನ್ ಅವರು ಚೆಂಡೊಂದನ್ನು ಎಸೆಯುವ ಸಂದರ್ಭದಲ್ಲಿ "ಉರುಳಿದ" ಗುಬ್ಬಚ್ಚಿಯ ಅವಶೇಷದಂತಹ ವೈಚಿತ್ರಗಳು ಸೇರಿವೆ. ಹಾಗೆಯೇ ಇಲ್ಲಿ ವಿಶ್ವ ಯುದ್ಧ IIರ ಸಂದರ್ಭದಲ್ಲಿ ಜಪಾನಿನ ಕೈದಿ ಶಿಬಿರದಲ್ಲಿ ಸೆರೆಯಾಳಾಗಿದ್ದ ಸಮಯದಲ್ಲಿ ಇ. ಡಬ್ಲ್ಯೂ. ಸ್ವಾಂಟಮ್ ಅವರಿಗೆ ಉತ್ತೇಜನವನ್ನು ನೀಡಿದ ವಿಸ್ಡನ್ನ ವಿರೂಪಗೊಂಡ ಪ್ರತಿಯೂ ಸಹ ಇದೆ. ವಸ್ತು ಸಂಗ್ರಹಾಲಯವು ಇನ್ನೂ ಸಹ ಐತಿಹಾಸಿಕ ವಸ್ತುಗಳನ್ನು ಸಂಗ್ರಹಿಸುವುದನ್ನು ಮುಂದುವರಿಸಿದೆ ಮತ್ತು ಹೊಸ ಚಿತ್ರಕಲೆಗಳು ಮತ್ತು "ಎಂಸಿಸಿ ಯುವ ಕ್ರಿಕೆಟ್ ಛಾಯಾಗ್ರಾಹಕ" ರ ಹೊಸ ಕಾರ್ಯವನ್ನು ನಿರ್ವಹಿಸುತ್ತದೆ. ಬ್ರಿಯಾನ್ ಲಾರಾ ಅವರ ಜೀವನ ಮತ್ತು ವೃತ್ತಿ ಜೀವನವನ್ನು ಪ್ರಶಂಸಿಸುವ ಇತ್ತೀಚೆಗೆ ತೆರೆಯಲಾದ ಪ್ರದರ್ಶನವು ವಿಶೇಷವಾಗಿ ಮಕ್ಕಳಿಗೆ ಸೂಕ್ತವಾಗಿದೆ. ಇದು ಸಂದರ್ಶಕರಿಗೆ ಐತಿಹಾಸಿಕ ಕ್ರಿಕೆಟ್ ದೃಶ್ಯಗಳನ್ನು ತೋರಿಸುವ ಸಿನೆಮಾ ಅಂಕಣವಾದ ಬ್ರಿಯಾನ್ ಜಾನ್‌ಸ್ಟನ್ ಸ್ಮಾರಕ ಥಿಯೇಟರ್ ಅನ್ನು ಒಳಗೊಂಡಿದೆ. ಪ್ರತಿದಿನವೂ ನಡೆಯುವ ಮಾರ್ಗದರ್ಶಿ ಮೈದಾನದ ಪ್ರವಾಸದಲ್ಲಿ ಎಂಸಿಸಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವುದನ್ನು ಸೇರಿಸಿಕೊಳ್ಳಲಾಗುತ್ತದೆ. ಬದಲಿಯಾಗಿ, ಪ್ರತ್ಯೇಕ ದರವನ್ನು ನೀಡಿ ಟಿಕೆಟ್ ಹೊಂದಿರುವ ವೀಕ್ಷಕರು ಪಂದ್ಯಗಳು ನಡೆಯುತ್ತಿರುವ ದಿನಗಳಲ್ಲಿ ಭೇಟಿ ನೀಡಬಹುದು.

ಲಾರ್ಡ್ಸ್‌ನಲ್ಲಿ ಟೆಸ್ಟ್ ಪಂದ್ಯಗಳು ಬದಲಾಯಿಸಿ

 
ಮೇ 2004 ರಂದು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯ

ಲಾರ್ಡ್ಸ್‌ನಲ್ಲಿ ಒಂದು ನೂರಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಟವಾಡಲಾಗಿದ್ದು, ಇದರಲ್ಲಿ 1884 ರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯ ತಂಡವನ್ನು ಒಂದು ಇನ್ನಿಂಗ್ಸ್ ಮತ್ತು 5 ರನ್‌ಗಳಿಂದ ಪರಾಭವಗೊಳಿಸಿತು. ಆಸ್ಟ್ರೇಲಿಯವು ಮೊದಲ ಬಾರಿಗೆ 1888 ರಲ್ಲಿ 61 ರನ್‌ಗಳ ಜಯ ಪಡೆಯಿತು. 1907 ರಲ್ಲಿ ದಕ್ಷಿಣ ಆಫ್ರಿಕ ತಂಡದವರು ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು ಮತ್ತು ಇದೇ ಮೈದಾನದಲ್ಲಿ 1912 ರಲ್ಲಿ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟೆಸ್ಟ್ ಪಂದ್ಯವು ನಡೆದಿದ್ದಿತು. 1928 ರಲ್ಲಿ ವೆಸ್ಟ್ ಇಂಡೀಸ್ ತಂಡವು ಲಾರ್ಡ್ಸ್‌ನಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನಾಡಿತು, ಈ ನಂತರ ನ್ಯೂಜಿಲೆಂಡ್ (1931), ಭಾರತ (1932), ಪಾಕಿಸ್ತಾನ (1954), ಶ್ರೀಲಂಕಾ (1984), ಜಿಂಬಾಬ್ವೆ (2000) ಮತ್ತು ಬಾಂಗ್ಲಾದೇಶ (2005) ತಂಡಗಳು ಪಂದ್ಯಗಳನ್ನಾಡಿದವು. 2000 ರಲ್ಲಿ ಲಾರ್ಡ್ಸ್‌ನಲ್ಲಿನ ನೂರನೇ ಟೆಸ್ಟ್ ಪಂದ್ಯವು ವೆಸ್ಟ್ ಇಂಡೀಸ್ ವಿರುದ್ಧವಾಗಿತ್ತು. 2010 ರ ಆಗಸ್ಟ್ 25 ರವರೆಗೆ ಇಂಗ್ಲೆಂಡ್ ತಂಡವು ಲಾರ್ಡ್ಸ್‌ನಲ್ಲಿ 119 ಟೆಸ್ಟ್ ಪಂದ್ಯಗಳನ್ನಾಡಿದ್ದು ಇದರಲ್ಲಿ 45 ರಲ್ಲಿ ಗೆದ್ದು, 28 ರಲ್ಲಿ ಸೋತಿದೆ ಮತ್ತು 46 ಪಂದ್ಯಗಳು ಡ್ರಾ ಆಗಿದೆ. ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿನ ಕ್ರಿಕೆಟಿಗರ ವೈಯಕ್ತಿಕ ಸಾಧನೆಗಳನ್ನು ಶತಕ ಬಾರಿಸಿದವರು, ಐದು ವಿಕೆಟ್‌ಗಳನ್ನು ತೆಗೆದುಕೊಂಡ ಬೌಲರ್‌ಗಳು, ಅಥವಾ ಪಂದ್ಯವೊಂದರಲ್ಲಿ ಹತ್ತು ವಿಕೆಟ್‌ಗಳನ್ನು ತೆಗೆದುಕೊಂಡವರು ಹೀಗೆ ಇವರೆಲ್ಲರ ಹೆಸರುಗಳನ್ನು ಡ್ರೆಸಿಂಗ್ ಕೊಠಡಿಯಲ್ಲಿನ ಸ್ಮರಣಾ ಫಲಕಗಳಲ್ಲಿ ಕೆತ್ತಿಸಲಾಗುತ್ತದೆ. 1934 ರಿಂದ ಈಚೆಗೆ ಮೊದಲ ಬಾರಿಗೆ 2009 ರ ಆಷಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯ ತಂಡವನ್ನು ಲಾರ್ಡ್ಸ್‌ನಲ್ಲಿ ಪರಾಭವಗೊಳಿಸಿತು.

ಪ್ರತಿ ಬೇಸಿಗೆಯಲ್ಲಿ ಲಾರ್ಡ್ಸ್ ಮೈದಾನವು ಎರಡು ಟೆಸ್ಟ್ ಪಂದ್ಯಗಳನ್ನು ಆಯೋಜಿಸುತ್ತದೆ, ಇದರಲ್ಲಿ ಒಂದು ಪಂದ್ಯವು ಪ್ರತಿ ಭೇಟಿ ನೀಡುವ ತಂಡಕ್ಕೆ ಆಗಿರುತ್ತದೆ. ಆದರೆ ಬೇಸಿಗೆಗಾಗಿ ಪ್ರತಿ ಮೈದಾನಕ್ಕೆ ಒಂದು ಟೆಸ್ಟ್ ಮಿತಿಯನ್ನು ಪಿಸಿಬಿಯು ವಿಧಿಸಬಹುದು, ಪ್ರಸ್ತಾವದ ಕುರಿತಂತೆ ಎಂಸಿಸಿಯು ಇಸಿಬಿಯೊಂದಿಗೆ ಮಾತನಾಡುವ ಕುರಿತು ಪರಿಶೀಲಿಸುತ್ತಿದೆ.[ಸೂಕ್ತ ಉಲ್ಲೇಖನ ಬೇಕು] 2010 ರಲ್ಲಿ, ಸ್ಟೇಡಿಯಂನಲ್ಲಿ ಮೂರು ಟೆಸ್ಟ್ ಪಂದ್ಯಗಳು ಜರುಗಿದವು. ಜೊತೆಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್‌ನ ಪಂದ್ಯಗಳು ಹಾಗೂ ಜುಲೈನಲ್ಲಿ ಆಸ್ಟ್ರೇಲಿಯ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟೆಸ್ಟ್ ಪಂದ್ಯವೊಂದು ನಡೆಯಿತು.

2011 ರ ಜುಲೈ 21 ರಿಂದ ಜುಲೈ 25 ರವೆರೆಗೆ ಇಂಗ್ಲೆಂಡ್ ಆತಿಥೇಯದಲ್ಲಿ ಭಾರತದ ಎದುರು ನಡೆಯುವ 2000 ನೇ ಟೆಸ್ಟ್ ಪಂದ್ಯದ ಸ್ಥಳವು ಲಾರ್ಡ್ಸ್ ಆಗಲಿದೆ.

ಇತರೆ ಕ್ರೀಡೆಗಳು ಬದಲಾಯಿಸಿ

ಮಹಾ ಯುದ್ಧದ ಸಮಯದಲ್ಲಿ ಕೆನಡಾದ ವಿಧವೆಯರು ಮತ್ತು ಅನಾಥರ ನಿಧಿಗಾಗಿ ಲಾರ್ಡ್ಸ್‌ನಲ್ಲಿ ಬೇಸ್‌ಬಾಲ್ ಪಂದ್ಯವೊಂದು ಜರುಗಿತು. 10,000 ಜನರು ವೀಕ್ಷಿಸಿದ ಈ ಪಂದ್ಯದಲ್ಲಿ ಕೆನಡಾ ತಂಡವು ಅಮೇರಿಕ ತಂಡದ ವಿರುದ್ಧ ಸೆಣಸಿತು. ಈ ಹಿಂದೆ ಬೌಲ್ಸ್, ಟೆನ್ನಿಸ್, ಬಿಲ್ಲುಗಾರಿಕೆ ಮತ್ತು ಇನ್ನೂ ಹಲವು ಕ್ರೀಡಾ ಪಂದ್ಯಗಳನ್ನು ಲಾರ್ಡ್ಸ್‌ನಲ್ಲಿ ಆಡಲಾಗಿದೆ, ಆದರೆ ರಗ್ಬಿ ಮತ್ತು ಪುಟ್‌ಬಾಲ್ ಪಂದ್ಯವನ್ನು ಎಂದಿಗೂ ಆಟವಾಡಲಾಗಿಲ್ಲ. ಭವಿಷ್ಯದಲ್ಲಿ ಲಾರ್ಡ್ಸ್‌ನಲ್ಲಿ ಮೇಜರ್ ಲೀಗ್ ಬೇಸ್‌ಬಾಲ್ ಆಟಗಳನ್ನು ಸಂಘಟಿಸುವ ಕುರಿತಂತೆ ಇತ್ತೀಚೆಗೆ ಚರ್ಚೆಗಳು ನಡೆದಿವೆ.[ಸೂಕ್ತ ಉಲ್ಲೇಖನ ಬೇಕು]

2012 ಬೇಸಿಗೆ ಒಲಂಪಿಕ್ಸ್ ನಡೆಸಲು ಉದ್ದೇಶಿಸಿರುವ ಯೋಜಿತ ಸ್ಥಳಗಳಲ್ಲಿ ಲಾರ್ಡ್ಸ್ ಮೈದಾನವು ಕೂಡ ಒಂದಾಗಿದೆ. ಪೆವಿಲಿಯನ್ ಎದುರಿಗೆ ಬಿಲ್ಲುಗಾರಿಕೆ ಸ್ಪರ್ಧೆ ಜರುಗುತ್ತದೆ, ಇಲ್ಲಿ ಬಿಲ್ಲುಗಾರರು ಅಲೆನ್ ಸ್ಟ್ಯಾಂಡ್ ಎದುರು ನಿಂತಿರುತ್ತಾರೆ ಮತ್ತು ಗುರಿಯನ್ನು ಗ್ರಾಂಡ್ ಸ್ಟ್ಯಾಂಡ್ ಎದುರು ಇರಿಸಿರಲಾಗುತ್ತದೆ.[೭] ಲಾರ್ಡ್ಸ್‌ನಲ್ಲಿ ನೈಜ ಟೆನ್ನಿಸ್ ಅಂಗಣ ಕೂಡ ಇದೆ.

ಸಾರಿಗೆ ಸಂಪರ್ಕಗಳು ಬದಲಾಯಿಸಿ

ಲಂಡನ್ ಬಸ್‌ಗಳು
ನಿಲುಗಡೆ ಹೆಚ್ ಸೇಂಟ್ ಜಾನ್ಸ್ ವುಡ್ ರೋಡ್ 139, 189
ನಿಲುಗಡೆ ಜೆ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್ 13, 82, 113, N13
ನಿಲುಗಡೆ ಕೆ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್ 13, 82, 113, N13
ಲಂಡನ್‌ ಭೂಗತ ಮಾರ್ಗ 0.6 ಮೈಲು ನಡಿಗೆ ಸೇಂಟ್ ಜಾನ್ಸ್ ವುಡ್   [೮]

ಟೆಸ್ಟ್ ಪಂದ್ಯ ದಾಖಲೆಗಳು ಬದಲಾಯಿಸಿ

ವೈಯಕ್ತಿಕ ದಾಖಲೆಗಳು ಬದಲಾಯಿಸಿ

ಬ್ಯಾಟಿಂಗ್ ಬದಲಾಯಿಸಿ

ಬೌಲಿಂಗ್ ಬದಲಾಯಿಸಿ

ತಂಡ ದಾಖಲೆಗಳು ಬದಲಾಯಿಸಿ

ಜೊತೆಯಾಟ ದಾಖಲೆಗಳು ಬದಲಾಯಿಸಿ

ಅತ್ಯಧಿಕ ಜೊತೆಯಾಟಗಳು[೧೯]
ರನ್‌ಗಳು ವಿಕೆಟ್ ಆಟಗಾರರು ಪಂದ್ಯ ವರ್ಷ
370 3 ನೆಯ ಡೆನ್ನಿಸ್ ಕಾಂಪ್ಟನ್ (208) ಮತ್ತು ಬಿಲ್ ಎಡ್ರಿಚ್ (189)   ಇಂಗ್ಲೆಂಡ್ ದಕ್ಷಿಣ ಆಫ್ರಿಕ ವಿರುದ್ಧ 1947
332 8 ನೆಯ ಜೊನಾಥನ್ ಟ್ರಾಟ್ (184) ಮತ್ತು ಸ್ಟುವರ್ಟ್ ಬ್ರಾಡ್ (169)   ಇಂಗ್ಲೆಂಡ್ ಪಾಕಿಸ್ತಾನ ವಿರುದ್ಧ 2010
308 3 ನೆಯ ಗ್ರಹಾಮ್ ಗೂಚ್ (333) ಮತ್ತು ಅಲಾಮ್ ಲ್ಯಾಂಬ್ (139)   ಇಂಗ್ಲೆಂಡ್ ಭಾರತದ ವಿರುದ್ಧ 1990
291 2 ನೆಯ ರಾಬರ್ಟ್ ಕೀ (221) ಮತ್ತು ಆಂಡ್ರೂ ಸ್ಟ್ರಾಸ್ (137)   ಇಂಗ್ಲೆಂಡ್ ವೆಸ್ಟ್ಇಂಡೀಸ್ ವಿರುದ್ಧ 2004
287* 2 ನೆಯ ಗಾರ್ಡನ್ ಗ್ರೀನಿಡ್ಜ್ (214*) & ಲ್ಯಾರಿ ಗೋಮ್ಸ್ (92*)   ವೆಸ್ಟ್ ಇಂಡೀಸ್ ಇಂಗ್ಲೆಂಡ್ ವಿರುದ್ಧ 1984
286 4 ನೆಯ ಇಯಾನ್ ಬೆಲ್ (199) ಮತ್ತು ಕೆವಿನ್ ಪೀಟರ್ಸನ್ (152)   ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ವಿರುದ್ಧ 2008

ಎಲ್ಲಾ ದಾಖಲೆಗಳು 28 ನೇ ಆಗಸ್ಟ್ 2010 ರವರೆಗೆ.

ಇವನ್ನೂ ಗಮನಿಸಿ‌ ಬದಲಾಯಿಸಿ

  • ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿನ ಅಂತರಾಷ್ಟ್ರೀಯ ಕ್ರಿಕೆಟ್ ಶತಕಗಳ ಪಟ್ಟಿ

ಉಲ್ಲೇಖಗಳು‌ ಬದಲಾಯಿಸಿ

  1. "Lord's". Cricinfo. Retrieved 2009-08-22.
  2. ಎಂಸಿಸಿ ಮ್ಯೂಸಿಯಂ Archived 2007-02-12 ವೇಬ್ಯಾಕ್ ಮೆಷಿನ್ ನಲ್ಲಿ. ವೆಬ್‌ಪುಟ ನೋಡಿ
  3. ಕ್ರಿಕೆಟ್‌ಆರ್ಕೈವ್ – ಪಂದ್ಯದ ಸ್ಕೋರ್‌ಕಾರ್ಡ್. 25 ಜುಲೈ 2009ರಂದು ಪಡೆಯಲಾಯಿತು
  4. ಲಾರ್ಡ್ಸ್ ಮೈಲ್‌ಸ್ಟೋನ್ಸ್ – 1923 Archived 2008-10-02 ವೇಬ್ಯಾಕ್ ಮೆಷಿನ್ ನಲ್ಲಿ.. 3 ನವೆಂಬರ್‌ 2007 ರಂದು ಪಡೆಯಲಾಯಿತು.
  5. ಮಿಡ್‌ವಿಂಟರ್, ಪು.154.
  6. ಲಾರ್ಡ್ಸ್ ಫ್ಲಡ್‌ಲೈಟ್ಸ್ ಜಸ್ಟ್ ಈಸಂಟ್ ಕ್ರಿಕೆಂಟ್' - ಲಂಡನ್ ಇನ್‌ಫೋರ್ಮರ್
  7. ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್- ಲಂಡನ್ 2012
  8. ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್ ನಿಂದ ಸೇಂಟ್ ಜಾನ್ಸ್ ವುಡ್ ಟ್ಯೂಬ್ ಸ್ಟೇಶನ್ ಗೆ ಕಾಲ್ನಡಿಗೆಯ ನಿರ್ದೇಶನಗಳು[ಶಾಶ್ವತವಾಗಿ ಮಡಿದ ಕೊಂಡಿ]
  9. ಸ್ಟಾಟ್ಸ್‌ಗುರು, ಕ್ರಿಕ್‌ಇನ್ಫೋ , 17 ಮಾರ್ಚ್ 2010.
  10. ಸ್ಟಾಟ್ಸ್‌ಗುರು, ಕ್ರಿಕ್‌ಇನ್ಫೋ , 17 ಮಾರ್ಚ್ 2010.
  11. ಸ್ಟಾಟ್ಸ್‌ಗುರು, ಕ್ರಿಕ್‌ಇನ್ಫೋ , 28 ಮೇ 2010.
  12. ಸ್ಟಾಟ್ಸ್‌ಗುರು, ಕ್ರಿಕ್‌ಇನ್ಫೋ , 17 ಮಾರ್ಚ್ 2010.
  13. ಸ್ಟಾಟ್ಸ್‌ಗುರು, ಕ್ರಿಕ್‌ಇನ್ಫೋ , 17 ಮಾರ್ಚ್ 2010.
  14. ಸ್ಟಾಟ್ಸ್‌ಗುರು, ಕ್ರಿಕ್‌ಇನ್ಫೋ , 17 ಮಾರ್ಚ್ 2010.
  15. ಸ್ಟಾಟ್ಸ್‌ಗುರು, ಕ್ರಿಕ್‌ಇನ್ಫೋ , 17 ಮಾರ್ಚ್ 2010.
  16. ಸ್ಟಾಟ್ಸ್‌ಗುರು, ಕ್ರಿಕ್‌ಇನ್ಫೋ , 17 ಮಾರ್ಚ್ 2010.
  17. ಸ್ಟಾಟ್ಸ್‌ಗುರು, ಕ್ರಿಕ್‌ಇನ್ಫೋ , 17 ಮಾರ್ಚ್ 2010.
  18. ಸ್ಟಾಟ್ಸ್‌ಗುರು, ಕ್ರಿಕ್‌ಇನ್ಫೋ , 17 ಮಾರ್ಚ್ 2010.
  19. ಸ್ಟಾಟ್ಸ್‌ಗುರು, ಕ್ರಿಕ್‌ಇನ್ಫೋ , 17 ಮಾರ್ಚ್ 2010.

ಗ್ರಂಥ ವಿವರಣೆ ಬದಲಾಯಿಸಿ

ಬಾಹ್ಯ ಕೊಂಡಿಗಳು ಬದಲಾಯಿಸಿ

51°31′46″N 0°10′22″W / 51.5294°N 0.1727°W / 51.5294; -0.1727