ರಿಗ್ರೆಟ್ ಅಯ್ಯರ್(ನಿಜ ನಾಮಧೇಯ: ಸತ್ಯನಾರಾಯಣ ಅಯ್ಯರ್) ಒಬ್ಬ ಕನ್ನಡಿಗ ಬರಹಗಾರ ಪತ್ರಕರ್ತ ವ್ಯಂಗ್ಯಚಿತ್ರಕಾರ ಛಾಯಾಗ್ರಾಹಕ ಮತ್ತು ಪ್ರಕಾಶಕ. ವಿವಿಧ ಪತ್ರಿಕೆ/ನಿಯತಕಾಲಿಕೆಗಳಿಂದ ಬಂದ ಸುಮಾರು ೩೭೫ರಷ್ಟು ತಿರಸ್ಕಾರ ಪತ್ರಗಳನ್ನು ಪಡೆದ ಕಾರಣದಿಂದ ತಮ್ಮ ಹೆಸರನ್ನೇ ರಿಗ್ರೆಟ್ ಅಯ್ಯರ್ ಎಂದು ಬದಲಿಸಿಕೊಂಡ ಒಬ್ಬ ಅಪರೂಪದ ವ್ಯಕ್ತಿ.

ಜನನ ಬದಲಾಯಿಸಿ

ರಿಗ್ರೆಟ್ ಅಯ್ಯರ್ ಅವರು ಹುಟ್ಟಿದ್ದು ಸೆಪ್ಟೆಂಬರ್ ೨೮, ೧೯೫೦ರಂದು ಕೋಲಾರದಲ್ಲಿ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ದಾಖಲೆಗಳು ಬದಲಾಯಿಸಿ

೧೯೬೪ರಲ್ಲಿ ಬಿಜಾಪುರದ ಬಗೆಗಿನ ಒಂದು ಛಾಯಾಚಿತ್ರವನ್ನು, ಟಿಪ್ಪಣಿಯ ಜೊತೆಗೆ ಬರೆದು ಬಿಜಾಪುರದ ಖ್ಯಾತ ಸಂಜೆ ಪತ್ರಿಕೆ ಜನವಾಣಿಗೆ ಕಳಿಸಿದ್ದರು. ಅದನ್ನು ಪತ್ರಿಕೆಯ ಸಂಪಾದಕರು ತಿರಸ್ಕರಿಸಿ ಮಾರುತ್ತರ ಬರೆದಿದ್ದರು. ಇದು ಅಯ್ಯರ್ ಅವರು ಮೊದಲ ಸಲ ಪಡೆದ ತಿರಸ್ಕಾರ ಪತ್ರ[೧]. ಮಾರ್ಚ್ ೨, ೧೯೯೦ರವರೆಗೆ ರಿಗ್ರೆಟ್ ಅಯ್ಯರ್ ಅವರು ವಿವಿಧ ಪತ್ರಿಕೆ/ನಿಯತಕಾಲಿಕೆಗಳಿಂದ ಸ್ವೀಕರಿಸಿದ ಒಟ್ಟು ತಿರಸ್ಕಾರ ಪತ್ರಗಳ ಸಂಖ್ಯೆ ೩೭೫. ಈ ರೀತಿ ಅತೀ ಹೆಚ್ಚು ತಿರಸ್ಕಾರ ಪತ್ರಗಳನ್ನು ಪಡೆದ ವ್ಯಕ್ತಿಯಾಗಿ ರಿಗ್ರೆಟ್ ಅಯ್ಯರ್ ಅವರು ದಾಖಲೆ ನಿರ್ಮಿಸಿದ್ದಾರೆ. ಮಾತ್ರವಲ್ಲ ಇವರ ಈ ದಾಖಲೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ[೨].

ಪ್ರಶಸ್ತಿ ಬದಲಾಯಿಸಿ

ರಿಗ್ರೆಟ್ ಅಯ್ಯರ್ ಅವರನ್ನು ಅವರ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಟಿ.ಎಸ್.ಸತ್ಯನ್ ಸ್ಮಾರಕ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ[೩].

ಉಲ್ಲೇಖಗಳು ಬದಲಾಯಿಸಿ

  1. "The Indian man who changed his name to Regret". BBC.com. BBC. Retrieved 20 December 2020.
  2. "Maximum Number of Regret Slips Received". indiabookofrecords.in/. India Book of Records. Retrieved 20 December 2020.
  3. "T.S. SATYAN Awards for Photojournalists". indianjournalismreview.com. indianjournalismreview.com.