ರಾಮಾಚಾರಿ (ಕನ್ನಡ ಧಾರಾವಾಹಿ)

ಭಾರತೀಯ ಕನ್ನಡ ಭಾಷೆಯ ಧಾರಾವಾಹಿ

ರಾಮಚಾರಿ ಒಂದು ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. 31 ಜನವರಿ 2022 ರಂದು ಪ್ರಥಮ ಪ್ರದರ್ಶನಗೊಂಡಿತು.[೧] ಇದರಲ್ಲಿ ರಿತ್ವಿಕ್ ಕ್ರುಪಕರ್, ಮೌನಾ ಗುಡ್ಡೆಮನೆ, ಮಿಥುನ್ ತೇಜಸ್ವಿ, ಶಂಕರ್ ಅಶ್ವತ್, ಸಿರಿಜಾ ಮತ್ತು ಅಂಜಲಿ ಸುಧಾಕರ್ ನಟಿಸುತ್ತಾ ಇದ್ದಾರೆ [೨][೩][೪] .


ರಾಮಾಚಾರಿ (ಕನ್ನಡ ಧಾರಾವಾಹಿ)
ಶೈಲಿದೈನಂದಿನ ಧಾರಾವಾಹಿ
ನಿರ್ದೇಶಕರುಕೆ.ಎಸ್ ರಾಮ್‌ಜಿ
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ನಿರ್ಮಾಪಕ(ರು)ಕೆ.ಎಸ್.ರಾಮ್‌ಜಿ
ಕ್ಯಾಮೆರಾ ಏರ್ಪಾಡುಮಲ್ಟೀಕ್ಯಾಮೆರಾ
ಸಮಯ22 ನಿಮಿಷಗಳು
ಪ್ರಸಾರಣೆ
ಮೂಲ ವಾಹಿನಿಕಲರ್ಸ್ ಕನ್ನಡ
ಮೂಲ ಪ್ರಸಾರಣಾ ಸಮಯ31 ಜನವರಿ 2022 – ಪ್ರಸ್ತುತ

ಕಥಾವಸ್ತು ಬದಲಾಯಿಸಿ

ರಾಮಚಾರಿ ಒಬ್ಬ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದ ಹಿನ್ನೆಲೆಯ ವ್ಯಕ್ತಿಯಾಗಿದ್ದಾನೆ. ಆರಂಭದ ಸಂಚಿಕೆಗಳಲ್ಲಿ ಆತ ಶ್ರೀಮಂತ ಉದ್ಯಮಿಯೊಬ್ಬನ 60ನೇ ವರ್ಷದ ಪೂಜೆಗೆ ಹೋಗುತ್ತಾನೆ ಎಂದು ತೋರಿಸಲಾಗಿದೆ. ಚಾರುಲತಾ (ಆಕೆ ಚಾರು) ಎಂಬ ಸೊಕ್ಕಿನ ಹೆಣ್ಣಿನ ತಂದೆಯಾಗಿರುತ್ತಾನೆ. ಈ ತನ್ನ ಕಾರನ್ನು ತುಂಬಾ ವೇಗವಾಗಿ ಓಡಿಸಿದಾಗ ಆಕಸ್ಮಿಕ ಸನ್ನಿವೇಶದಲ್ಲಿ ರಾಮಚಾರಿಯನ್ನು ಭೇಟಿಯಾಗಿದ್ದಳು. ಆದರೆ ರಾಮಚಾರಿ ಅವಳನ್ನು ಲೆಕ್ಕಿಸದೆ ಕಾರಿನ ಮೇಲೆ ಹೆಜ್ಜೆ ಹಾಕಿದ್ದನು ಮತ್ತು ಇದು ಅವಳಲ್ಲಿ ಕೋಪವನ್ನು ಉಂಟುಮಾಡಿತ್ತು. ನಂತರ ಹಲವಾರು ಘಟನೆಗಳು ಆಕೆಯನ್ನು ಇನ್ನಷ್ಟು ಕೆರಳಿಸುತ್ತವೆ , ಅಂತಿಮವಾಗಿ ಅವರು ಅದೇ ಕಂಪನಿಗೆ ಸೇರುತ್ತಾರೆ (ಅರ್ಜುನ ಆರ್ಕಿಟೆಕ್ಟ್ಸ್). ಹಲವಾರು ದಿನಗಳ ನಂತರ ಚಾರುಲತಾಳ ತಂದೆ ತನ್ನ ಮಗಳನ್ನು ಅವಳ ಇಚ್ಛೆಗೆ ವಿರುದ್ಧವಾಗಿ ರಾಮಚಾರಿಯ ಮನೆಯಲ್ಲಿ ಉಳಿಯಲು ಒತ್ತಾಯಿಸುತ್ತಾನೆ. ಇದು ಆಕೆಯನ್ನು ಇನ್ನಷ್ಟು ಕೆರಳಿಸುತ್ತದೆ ಮತ್ತು ಆಕೆಯ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧಾರಿಸುತ್ತಾಳೆ. ಹೀಗೆ ರಾಮಚಾರಿಯ ಸಹೋದರಿಯ ಮದುವೆಯನ್ನು ಹಾಳುಮಾಡುತ್ತಾಳೆ. ಇದು ಆತನ ಕುಟುಂಬಕ್ಕೆ ಇನ್ನಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ. ನಂತರ ರಾಮಚಾರಿಗೆ ಸತ್ಯದ ಬಗ್ಗೆ ತಿಳಿದುಬಂದಾಗ, ಅವನು ಆಕೆಗೆ ಎಚ್ಚರಿಕೆ ನೀಡಲು ಹೋಗುತ್ತಾನೆ. ಮತ್ತೊಂದೆಡೆ ಚಾರುಲತಾ 3 ತಿಂಗಳ ಕೆಲಸದ ಅನುಭವವು ಬಹುತೇಕ ಕೊನೆಗೊಳ್ಳುತ್ತದೆ. ಹೀಗಾಗಿ ಆಕೆಯ ತಂದೆ "ಪರ್ಫಾರ್ಮೆನ್ಸ್ ಸರ್ಟಿಫಿಕೇಟ್" ಬೇಡಿಕೆಯನ್ನು ಇಡುತ್ತಾನೆ. ಆದರೆ ಆ ಸರ್ಟಿಫಿಕೇಟ್ ರಾಮಚಾರಿಯಿಂದ ಪಡೆಯಬೇಕು. ಅವಳು ಕೆಲಸ ಮಾಡುವ ಕಂಪನಿ ಮ್ಯಾನೇಜರ್ನಿಂದ ಅಲ್ಲ ಎಂಬ ಷರತ್ತು ಹಾಕುತ್ತಾನೆ. ತನ್ನ ತಂದೆಯ ಕಂಪನಿಯ ಸಿಇಒ ಆಗಲು ಚಾರುಲತಾ ರಾಮಚಾರಿಯಿಂದ ಬಲವಂತವಾಗಿ ಪ್ರಮಾಣಪತ್ರವನ್ನು ಪಡೆಯಲು ಪ್ರಯತ್ನಿಸುತ್ತಾಳೆ, ಆದರೆ ಪ್ರತಿ ಬಾರಿಯೂ ವಿಫಲಳಾಗುತ್ತಾಳೆ.

ಪಾತ್ರವರ್ಗ ಬದಲಾಯಿಸಿ

ಮುಖ್ಯ ಪಾತ್ರಗಳು ಬದಲಾಯಿಸಿ

  • ರಿತ್ವಿಕ್ ಕ್ರುಪಕರ್[೫]: ರಾಮಚಾರಿಯಾಗಿ, ನಾರಾಯಣಚಾರಿ ಮತ್ತು ಜಾನಕಿಯ ಕಿರಿಯ ಮಗ. ಚಾರು ಅವರ ಪತಿ, ಶ್ರುತಿಯ ಸಹೋದರ.
  • ಮೌನಾ ಗುಡ್ಡೆಮನೆ: ಚಾರುಲತಾ ಪಾತ್ರದಲ್ಲಿ. ರಾಮಚಾರಿ ಪತ್ನಿ, ಜಯಶಂಕರ್ ಮತ್ತು ಮಾನ್ಯತಾ ಮಗಳಾಗಿ.
  • ಝಾನ್ಸಿ ಕಾವೇರಪ್ಪ[೬][೭]: ಮಾನ್ಯತಾ ಪಾತ್ರದಲ್ಲಿ, ಜಯಶಂಕರ್ ಅವರ ಮೊದಲ ಪತ್ನಿ ಮತ್ತು ಚಾರುಲತಾ ಅವರ ತಾಯಿಯಾಗಿ.
  • ಅಂಜಲಿ ಸುಧಾಕರ್: ಜಾನಕಿ ಪಾತ್ರದಲ್ಲಿ. ನಾರಾಯಣಚಾರಿ ಪತ್ನಿಯಾಗಿ, ರಾಮಾಚಾರಿ ಅವರ ತಾಯಿಯಾಗಿ.
  • ಶಂಕರ್ ಅಶ್ವತ್: ನಾರಾಯಣಚಾರಿ ಪಾತ್ರದಲ್ಲಿ. ಜಾನಕಿ ಪತಿಯಾಗಿ, ರಾಮಚಾರಿ & ಶ್ರುತಿಯ ತಂದೆಯಾಗಿ.

ಇತರೆ ಪಾತ್ರಗಳು ಬದಲಾಯಿಸಿ

  • ಚಿ. ಗುರು ದತ್[೮]: ಜಯಶಂಕರ್ ಪಾತ್ರದಲ್ಲಿ. ಚಾರುಲತಾ ಅವರ ತಂದೆಯಾಗಿ
  • ಸಿರಿಜಾ: ಶರ್ಮಿಳಾ ಪಾತ್ರದಲ್ಲಿ. ಜಯಶಂಕರ್ ಅವರ ಎರಡನೇ ಪತ್ನಿ ಮತ್ತು ಚಾರುಲತಾ ಮಲತಾಯಿಯಾಗಿ.
  • ಪುನಿತಾ ಗೌಡ: ಅಪರ್ಣಾ ರಾಮಚಾರಿಯವರ ಅತ್ತಿಗೆ ಪಾತ್ರದಲ್ಲಿ
  • ಎಂ. ಎಸ್. ಜಹಾಂಗೀರ್: ಬಿಸಿನೆಸ್ ಕಂಪನಿಯೊಂದರ ವ್ಯವಸ್ಥಾಪಕರಾಗಿ
  • ಬಾಲರಾಜ್: ನಾರಾಯಣ ಶಾಸ್ತ್ರಿ ಅವರ ಸಹೋದರಿಯ ಪತಿಯಾಗಿ
  • ಶ್ವೇತಾ ಬಿ: ನಾರಾಯಣ ಶಾಸ್ತ್ರಿ ಅವರ ಸಹೋದರಿಯಾಗಿ
  • ಶ್ರೀ ಭವ್ಯಾ
  • ಶ್ರುತಿ ಪುರುಷೋತ್ತಮ್
  • ಸಂಜೀವ್ ಜಮಾದಾರ್
  • ಸುಶ್ಮಿತಾ
  • ನಿಧಿ ಗೌಡ
  • ಅಕ್ಷತಾ ದೇಶಪಾಂಡೇ
  • ಭರತ್ ಚಕ್ರವರ್ತಿ
  • ಸುರೇಶ್ ರಾಯ್ - ಅಶುತೋಷ್ ಅಗರವಾಲ್ - ಉದ್ಯಮಿ
  • ಶ್ರೀಕುಮಾರ್
  • ಮೋನಿಕಾ
  • ಪುನೀತ್ ಬಾಬು: ಪೊಲೀಸ್ ಇನ್ಸ್ಪೆಕ್ಟರ್ ಆಗಿ
  • ಅತಿಥಿ ಪಾತ್ರದಲ್ಲಿ ರಾಜಿ ತಾಲಿಕೋಟೆ

ರೂಪಾಂತರಗಳು ಬದಲಾಯಿಸಿ

ಭಾಷೆ. ಶೀರ್ಷಿಕೆ ಮೂಲ ಬಿಡುಗಡೆ ವಾಹಿನಿ(ಗಳು) ಕೊನೆಯ ಪ್ರಸಾರ ಟಿಪ್ಪಣಿಗಳು
ಕನ್ನಡ ರಾಮಚಾರಿ



31 ಜನವರಿ 2022 ಕಲರ್ಸ್ ಕನ್ನಡ ಪ್ರಸುತ್ತವಾಗಿ ಪ್ರಸಾರವಾಗುತ್ತಿದೆ ಮೂಲ
ಒಡಿಯಾ ಜಟಾ ರಬನಾಸ್ಯಾ ಮಂಡೋದರಿ 19 ಸೆಪ್ಟೆಂಬರ್ 2022 ಕಲರ್ಸ್ ಒಡಿಯಾ ಡಬ್ಬಿಂಗ್
ಮರಾಠಿ ರಾಮ ರಾಘವ



[೯]
9 ಜನವರಿ 2023 ಕಲರ್ಸ್ ಮರಾಠಿ ರೀಮೆಕ್
ಬಂಗಾಳಿ ರಾಮಕೃಷ್ಣ



10 ಏಪ್ರಿಲ್ 2023 ಕಲರ್ಸ್ ಬಾಂಗ್ಲಾ

ಬಾಹ್ಯಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Kannada Television Industry Gets its own Ramachari". The Times of India. 9 January 2022.
  2. "All about Ramachari Kannada TV Serial actor Rithvik Krupakar". Vijaya Karnataka. 5 February 2022.
  3. "Actress Sirija to maker her acting Comeback with Ramachari". The Times of India. 6 January 2022.
  4. "Eminent actress anjali Bags a Prominent role in New show Ramachari". The Times of India. 27 January 2022.
  5. "Kannada television industry gets its own Ramachari". The Times of India. 9 January 2022.
  6. "Why is Bhavana Ramanna being so bossy?". The Times of India. 13 January 2022.
  7. "Actress Jhansi Kaverappa to replace Bhavana Ramanna in 'Ramachari'". The Times of India. 19 May 2022.
  8. "Mithun Tejasvi bags a prominent role in new show Ramachari". The Times of India. 3 March 2022.
  9. "Kannada daily soap 'Ramachari' to be remade into Marathi soon - Times of India". The Times of India.