ಮುಂಬಾದೇವಿ ದೇವಸ್ಥಾನ, ದಕ್ಷಿಣ ಮುಂಬಯಿ

ಮುಂಬಾದೇವಿ ದೇವಸ್ಥಾನ ಮುಂಬಯಿ ನಗರದ 'ಭುಲೇಶ್ವರ್' ವಲಯದಲ್ಲಿರುವ ಪ್ರಾಚೀನ ದೇವಾಲಯ. ಈಗಿರುವ ಮುಂಬಾದೇವಿ ದೇವಾಲಯ 'ಸಿ.ಎಸ್.ಟಿ ರೈಲ್ವೆ ಸ್ಟೇಷನ್' ಇರುವ ಜಾಗದಲ್ಲಿತ್ತು. ಆಗಿನ ಬ್ರಿಟಿಷ್ ಸರಕಾರದ ಅಧಿಕಾರಿಗಳು, ೧೭೩೭ ರಲ್ಲಿ ಅಲ್ಲಿಂದ ದೇವಾಲಯವನ್ನು ಈಗಿರುವ 'ಜವೇರಿ ಬಜಾರ್ ಜಿಲ್ಲೆ'ಗೆ ತಂದು ಪ್ರತಿಷ್ಠಾಪನೆ ಮಾಡಿದರು. ಕೆಲವು ಹಿರಿಯರು, ಬೋರಿಬಂದಿರದ ಹತ್ತಿರ ೧೬೭೫ ಕ್ಕೂ ಮೊದಲೇ ಈ ಮಂದಿರವಿತ್ತೆಂದು ಹೇಳುತ್ತಾರೆ. ದೇವಸ್ಥಾನಕ್ಕೆ ಸಾಗುವ ದಾರಿಗೆ 'ಮುಂಬಾದೇವಿ ರೋಡ್' ಎಂದು ಹೆಸರಿಟ್ಟಿದ್ದಾರೆ. ಇಲ್ಲಿ ೧೯೯೩ ಮತ್ತು ೨೦೦೪ ರ ಮಧ್ಯೆ, ಬಾಂಬ್ ಸ್ಪೋಟ ಮಾಡಿಸಲು ಪ್ರಯತ್ನಗಳು ನಡೆದವು. ಹಾಗಿ ಇಲ್ಲಿ ೨೪ x೭ ಸಮಯದಲ್ಲಿ 'ಪೋಲಿಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ' ಇದೆ. ಯಾವಾಗಲೂ ವಾಹನಗಳ ಓಡಾಟ ಅತಿಯಾಗಿರುತ್ತದೆ. ದೇವಾಲಯದ ಅಕ್ಕಪಕ್ಕಗಳಲ್ಲಿ ಹೂವಿನ ಹಾರಗಳು, ದೇವರಗಳ ಫೋಟೋಗಳು, ಪೂಜ ದ್ರವ್ಯಗಳು ಮತ್ತಿತರ ವಸ್ತುಗಳನ್ನು ಮಾರುವ ಚಿಕ್ಕ-ಚಿಕ್ಕ ಅಂಗಡಿಗಳಿವೆ.[೧] ಈ ದೇವಾಲಯವನ್ನು ೧೭೩೭ ರಲ್ಲಿ ಹೊಸದಾಗಿ ನಿರ್ಮಿಸಲಾಯಿತು. ಮೊದಲಿನ ಹಳೆಯ ದೇವಸ್ಥಾನ, ಶಿಥಿಲವಾಗಿ ನಾಶದ ಅಂಚಿನಲ್ಲಿದ್ದಿದ್ದರಿಂದ ಅದನ್ನು ಸಂಪೂರ್ಣವಾಗಿ ಕೆಡವಿ, ಹೊಸಮಂದಿರದ ನಿರ್ಮಾಣದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಆಗಿನ ಮುಂಬಯಿ ನಗರದ ಮೂಲ ವಾಸಿಗಳಾದ 'ಕೋಳಿ ಜನಸಮುದಾಯದವರು ಪೂಜಿಸುತ್ತಿದ್ದ ದೇವತೆ'ಯ ಹೆಸರನ್ನು ನಗರಕ್ಕೆ ಇಟ್ಟಿರುತ್ತಾರೆ.

ದಕ್ಷಿಣ ಮುಂಬಯಿನಲ್ಲಿರುವ ದೇವಾಲಯ

ಉಲ್ಲೇಖಗಳು ಬದಲಾಯಿಸಿ

  1. "ಮುಂಬಾದೇವಿ ದೇವಾಲಯ, ಮುಂಬಯಿನ ಆತಿ ಪ್ರಾಚೀನ ದೇವಸ್ಥಾನ". Archived from the original on 2014-05-19. Retrieved 2014-06-02.