ಮೀನಾಕ್ಷಿ ಶೇಷಾದ್ರಿ


ಮೀನಾಕ್ಷಿ ಶೇಷಾದ್ರಿ (ತಮಿಳು -மீனாக்ஷி சேஷாத்திரி) (ಜನನ ೧೬ ನವೆಂಬರ್ ೧೯೬೩) ಭಾರತದ ಚಲನಚಿತ್ರ ನಟಿ.

ಮೀನಾಕ್ಷಿ ಶೇಷಾದ್ರಿ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಶಶಿಕಲಾ ಶೇಷಾದ್ರಿ
(1963-11-16) ನವೆಂಬರ್ ೧೬, ೧೯೬೩ (ವಯಸ್ಸು ೬೦)
ಸಿಂದ್ರಿ, ಜಾರ್ಖಂಡ್, ಭಾರತ
ವೃತ್ತಿ ಚಲನಚಿತ್ರ ನಟಿ
ವರ್ಷಗಳು ಸಕ್ರಿಯ ೧೯೮೨ – ೧೯೯೭
ಪತಿ/ಪತ್ನಿ ಹರೀಶ್ ಮೈಸೂರು (೧೯೯೬ - ಪ್ರಸ್ತುತ)

ಆರಂಭಿಕ ಜೀವನ ಬದಲಾಯಿಸಿ

ಜಾರ್ಖಂಡ್ನ (ಅವಾಗ ಬಿಹಾರ್) ಧನ್‌ಬಾದ್‌ ಹತ್ತಿರ ಇರುವ ಸಿಂದ್ರಿಯಲ್ಲಿ ಶಶಿಕಲಾ ಶೇಷಾದ್ರಿ ಜನಿಸಿದರು, ಮತ್ತು ಇವರು ಧನ್‌ಬಾದ್‌‍ನ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಈಕೆಯ ತಂದೆ ಜಾರ್ಖಂಡ್ ರಾಜ್ಯದ ಸಿಂದ್ರಿಯ ರಾಸಾಯನಿಕ ಗೊಬ್ಬರ ಕಾರ್ಖಾನೆ (ಫರ್ಟಿಲೈಜರ್ ಪ್ಲಾಂಟ್) ಎಫ್‌ಸಿಐ ಉದ್ಯೋಗಿ.

ವೃತ್ತಿ ಜೀವನ ಬದಲಾಯಿಸಿ

ಇವರು ಮನೋಜ್ ಕುಮಾರ್‌ ಅವರ ಮಗ ರಾಜೀವ್‌ ಗೋಸ್ವಾಮಿ ಅವರೊಂದಿಗೆ ಪೇಂಟರ್ ಬಾಬು(೧೯೮೨) ಎಂಬ ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಅವರ ಸಿನಿಮಾ ವೃತ್ತಿಯನ್ನು ಆರಂಭಿಸಿದರು. ಶುಭಾಷ್‌ ಘಾಯ್ ನಿರ್ದೇಶನದ ಮೆಗಾಹಿಟ್ ಚಿತ್ರ ಹೀರೋ (೧೯೮೩) ಇವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು.

ವೈಯಕ್ತಿಕ ಜೀವನ ಬದಲಾಯಿಸಿ

೧೯೯೭ ರ ಘಾತಕ್ ಇವರು ಅಭಿನಯಿಸಿದ ಕೊನೆಯ ಚಲನಚಿತ್ರ. ಇವರ ಸಿನಿಮಾ ವೃತ್ತಿಜೀವನದಲ್ಲಿ 80ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.[೧]

  • ಇವರು ಈಗ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಾಸವಾಗಿದ್ದಾರೆ. ಇವರು ಭರತನಾಟ್ಯ, ಕಥಕ್ ಮತ್ತು ಒಡಿಸಿ ನೃತ್ಯಗಳನ್ನು ಕಲಿಸುತ್ತಾರೆ.
  • ವೈವಾಹಿಕ ಸ್ಥಿತಿ: ವಿವಾಹಿತರು
  • ಸಂಗಾತಿ: ಸಾಫ್ಟ್‌ವೇರ್ ಇಂಜಿನಿಯರ್ ಹರೀಶ್ ಮೈಸೂರು

ಫಿಲಂಫೇರ್ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ಬದಲಾಯಿಸಿ

  • ಉತ್ತಮ ನಟಿ - ಜುರ್ಮ್ (೧೯೯೦)
  • ಉತ್ತಮ ನಟಿ - ದಾಮಿನಿ (೧೯೯೩)

ಆಕರಗಳು ಬದಲಾಯಿಸಿ