ಮಿಡ್ಲ್‌ಸೆಕ್ಸ್ (pronounced /ˈmɪdəlsɛks/) ಇಂಗ್ಲೆಂಡ್‌ನ ಐತಿಹಾಸಿಕ ಕೌಂಟಿಗಳಲ್ಲಿ ಒಂದಾಗಿದೆ ಮತ್ತು ಇದು ಪ್ರದೇಶದಿಂದ ಎರಡನೇ ಅತ್ಯಂತ ಚಿಕ್ಕಕೌಂಟಿಯಾಗಿದೆ.[೩] ಕಡಿಮೆ ಎತ್ತರದಲ್ಲಿರುವ ಈ ಕೌಂಟಿಯು ದಕ್ಷಿಣದ ಗಡಿಯಲ್ಲಿ ಶ್ರೀಮಂತ ಮತ್ತು ರಾಜಕೀಯವಾಗಿ ಸ್ವತಂತ್ರವಾಗಿರುವ ಸಿಟಿ ಆಫ್ ಲಂಡನ್ಅನ್ನು ಒಳಗೊಂಡಿದೆ ಮತ್ತು ಇದು ಅತ್ಯಂತ ಹಿಂದಿನಿಂದಲೂ ಇದರಿಂದ ಆಳಲ್ಪಡುತ್ತಿದೆ.[೪] ಈ ಕೌಂಟಿಯು ೧೮ನೇ ಮತ್ತು ೧೯ನೇ ಶತಮಾನದಲ್ಲಿ ಲಂಡನ್‌ನ ಮೆಟ್ರೋಪಾಲಿಟನ್ ಕ್ಷೇತ್ರ ವಿಸ್ತರಣೆಯ ಪ್ರಭಾವಕ್ಕೊಳಗಾಯಿತು, ಈ ಕಾರಣದಿಂದಾಗಿ ೧೮೫೫ರಿಂದ ಆಗ್ನೇಯವನ್ನು ಮೆಟ್ರೋಪಾಲಿಸ್‌ನ ಭಾಗವೆಂಬಂತೆ ನೋಡಿಕೊಳ್ಳಲಾಗುತ್ತಿತ್ತು.[೫] ೧೮೮೯ರಲ್ಲಿ ಕೌಂಟಿ ಕೌನ್ಸಿಲ್‍‌ಗಳನ್ನು ಇಂಗ್ಲೆಂಡ್‌ನಲ್ಲಿ ಮೊದಲು ಚಾಲ್ತಿಗೆ ತಂದಾಗ, ಮಿಡ್ಲ್‌ಸೆಕ್ಸ್‌ನ ಮೂರನೇ ಒಂದು ಭಾಗದಷ್ಟು ಜನಸಂಖ್ಯೆಯೊಂದಿಗೆ ಸುಮಾರು ೨೦ ಪ್ರತಿಶತದಷ್ಟು ಪ್ರದೇಶವನ್ನೂ ಕೌಂಟಿ ಆಫ್ ಲಂಡನ್‌ಗೆ ವರ್ಗಾಯಿಸಲಾಯಿತು. ಉಳಿದ ಪ್ರದೇಶಗಳು ಮಿಡ್ಲ್‌ಸೆಕ್ಸ್‌ ಕೌಂಟಿ ಕೌನ್ಸಿಲ್‌ನಡಿಯಲ್ಲಿ ವಾಯವ್ಯ ಭಾಗದಲ್ಲಿ ಸಣ್ಣ ಕೌಂಟಿಯನ್ನು ರಚಿಸಿಕೊಂಡವು.[೬]

Middlesex
Ancient extent of MiddlesexMiddlesex in 1889
Ancient and 1889 extent of Middlesex
Area
 - ೧೮೦೧/೧೮೮೧181,320 acres (734 km2)[೧]
 - ೧೯೧೧148,701 acres (601.8 km2)[೨]
 - ೧೯೬೧148,691 acres (601.7 km2)[೨]
Population
 - ೧೮೦೧818,129[೧]
 - ೧೮೮೧೨,೯೨೦,೪೮೫[೧]
 - ೧೯೧೧೧,೧೨೬,೪೬೫[೨]
 - ೧೯೬೧೨,೨೩೪,೫೪೩[೨]
Density
 - ೧೮೦೧೪.೫/acre
 - ೧೮೮೧೧೬.೧/acre
 - ೧೯೧೧೭.೬/acre
 - ೧೯೬೧೧೫/acre
History
 - OriginMiddle Saxons
 - CreatedIn antiquity
 - Succeeded by1889: part to County of London
1965: Greater London and
parts to Surrey and Hertfordshire
StatusCeremonial county (until 1965)
Administrative county (1889–1965)
Chapman codeMDX
GovernmentMiddlesex County Council (1889–1965)
 - HQsee text

Banner of arms of Middlesex County Council
Subdivisions
 - Typehundreds (ancient)

ಅಂತರ್ಯುದ್ಧದ ವರ್ಷಗಳಲ್ಲಿ, ಉಪನಗರೀಕರಣ, ಸಾರ್ವಜನಿಕ ಸಾರಿಗೆ ಸಂಪರ್ಕದ ಅಭಿವೃದ್ಧಿ ಮತ್ತು ವಿಸ್ತರಣೆಯನ್ನು[೭] ಹೆಚ್ಚಿಸುವುದರೊಂದಿಗೆ ನಗರ ಲಂಡನ್ಅನ್ನು ಇನ್ನಷ್ಟು ವಿಸ್ತರಿಸಲಾಯಿತು. ಅಲ್ಲದೇ ಒಳ ಲಂಡನ್ ಪ್ರದೇಶದ ಹೊರಗೆ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಮಹಾಯುದ್ಧ IIರ ನಂತರ ಕೌಂಟಿ ಆಫ್ ಲಂಡನ್[೮]‌ ಮತ್ತು ಒಳ ಮಿಡ್ಲ್‌ಸೆಕ್ಸ್‌ನ ಜನಸಂಖ್ಯೆಯು ಕ್ರಮವಾಗಿ ಇಳಿಮುಖವಾಯಿತು. ಹೊರಗಿನ ಉಪನಗರಗಳಲ್ಲಿ ಮಾತ್ರ ಹೊಸ ಜನಸಂಖ್ಯೆಯ ಬೆಳವಣಿಗೆಯಾಯಿತು.[೯] ಗ್ರೇಟರ್ ಲಂಡನ್‌ನಲ್ಲಿ ರಾಯಲ್ ಕಮಿಷನ್ ಆನ್ ಲೋಕಲ್ ಗವರ್ನಮೆಂಟ್‌ ಸ್ಥಾಪನೆಯಾದ ನಂತರ, ಮೂಲ ಪ್ರದೇಶದ ಬಹುಪಾಲನ್ನು ೧೯೬೫ರಲ್ಲಿ ವಿಶಾಲ ಗ್ರೇಟರ್ ಲಂಡನ್ ಆಗಿ ಸಂಘಟಿಸಲಾಯಿತು. ಇದರೊಂದಿಗೆ ಸಣ್ಣ ಭಾಗಗಳನ್ನು ಪಕ್ಕದ ಹರ್ಟ್‌ಫೋರ್ಡ್ಶೈರ್ ಮತ್ತು ಸ್ಯುರ್ರೆ ಕೌಂಟಿಗಳಿಗೆ ವರ್ಗಾಯಿಸಲಾಯಿತು.[೧೦] ಕೌಂಟಿ ಕಣ್ಮರೆಯಾದರೂ ಕೂಡ ಮಿಡ್ಲ್‌ಸೆಕ್ಸ್‌ಅನ್ನು ಅನೌಪಚಾರಿಕವಾಗಿ ಪ್ರದೇಶದ ಹೆಸರಾಗಿ ಇನ್ನೂ ಬಳಸಲಾಗುತ್ತಿದೆ. ಅಲ್ಲದೇ ಇದು ಪೋಸ್ಟಲ್ ಕೌಂಟಿಯಾಗಿಯೇ ಉಳಿದುಕೊಂಡಿದೆ; ಇದು ಈಗ ಅಂಚೆ ವಿಳಾಸಗಳ ಐಚ್ಛಿಕ ಘಟಕವಾಗಿದೆ.[೧೧]

ಇತಿಹಾಸ ಬದಲಾಯಿಸಿ

ಸ್ಥಳನಾಮ ಅಧ್ಯಯನ ಬದಲಾಯಿಸಿ

ಮಿಡಲ್ ಸ್ಯಾಕ್ಸನ್ ಜನರ ಆಳ್ವಿಕೆಗೆ ಒಳಪಟ್ಟ ಪ್ರದೇಶವೆಂಬುದು ಈ ಹೆಸರಿನ ಅರ್ಥವಾಗಿದ್ದು, ಇದರ ನಿವಾಸಿಗಳ ಮೂಲ ಬುಡಕಟ್ಟು-ಜನಾಂಗದವರವನ್ನು ಸೂಚಿಸುತ್ತದೆ. ಈ ಪದವು ಆಂಗ್ಲೋ-ಸ್ಯಾಕ್ಸನ್‌ನಿಂದ ರಚಿತವಾಗಿದೆ, ಉದಾಹರಣೆಗೆ, ಒಲ್ಡ್ ಇಂಗ್ಲೀಷ್, 'ಮಿಡ್ಲ್' ಮತ್ತು 'ಸಿಯಾಕ್ಸೆ'.[೧೨] ಇದನ್ನು ೭೦೪ರಲ್ಲಿ ಮಿಡಲ್‌ಸಿಯಾಕ್ಸನ್ ಎಂದು ಬಳಸಲಾಗಿದೆ ಎಂದು ದಾಖಲಿಸಲಾಗಿದ್ದು, ಇದು ಇದರ ಬಳಕೆಯ ಮೊದಲ ದಾಖಲೆಯಾಗಿದೆ.

ಹಿಂದಿನ ವಸಾಹತು ಬದಲಾಯಿಸಿ

 
ಮಿಡ್ಲ್‌ಸೆಕ್ಸ್‌ನ ನಕ್ಷೆ‌, 1824

ಮಿಡ್ಲ್‌ಸೆಕ್ಸ್‌ಅನ್ನು ಡೊಮೆಸ್‌ಡೇ ಪುಸ್ತಕದಲ್ಲಿ ದಾಖಲಿಸಲಾಗಿದ್ದು, ಎಡ್ಮಂಟನ್‌, ಎಲ್ತೋರ್ನೆ, ಗೋರೆ, ಹೌನ್ ಸ್ಲೊವ್(ನಂತರದ ಎಲ್ಲಾ ದಾಖಲೆಗಳಲ್ಲಿ ಐಸ್ಲೆವರ್ತ್ ಎಂದಿದೆ),[೧೩] ಒಸಲ್ಟೋನ್ ಮತ್ತು ಸ್ಪೆಲ್ಥ್ರೋನ್ ನ ಆರು ಹಂಡ್ರೆಡ್‌ಗಳಾಗಿ ವಿಂಗಡಿಸಲಾಗಿದೆ. ಹದಿಮೂರನೇ ಶತಮಾನದಿಂದ ಸ್ವಯಂ ಆಡಳಿತಕ್ಕೆ ಒಳಪಟ್ಟ ಸಿಟಿ ಆಫ್ ಲಂಡನ್, ಭೌಗೋಳಿಕವಾಗಿ ಕೌಂಟಿಯ ಒಳಗಿದೆ. ಇದು ಅಧಿಕ ಮಟ್ಟದ ಸ್ವಾಯತ್ತತೆಯನ್ನು ಹೊಂದಿರುವ ವೆಸ್ಟ್‌ಮಿಂಸ್ಟರ್ಅನ್ನೂ ಒಳಗೊಂಡಿದೆ. ಆರು ಹಂಡ್ರೆಡ್‌ಗಳಲ್ಲಿ ಒಸಲ್‌ಸ್ಟೋನ್ ಸಿಟಿ ಆಫ್ ಲಂಡನ್‌ಗೆ ಹತ್ತಿರವಿರುವ ಡಿಸ್ಟ್ರಿಕ್ಟ್‌ಗಳನ್ನು ಒಳಗೊಂಡಿದೆ. ೧೭ನೇ ಶತಮಾನದಲ್ಲಿ ಇದನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಯಿತು. ಇದು ಲಿಬರ್ಟಿ ಆಫ್ ವೆಸ್ಟ್‌ಮಿಂಸ್ಟರ್ ಒಂದಿಗೆ ಹಂಡ್ರೆಡ್‌ನ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಿತ್ತು. ಈ ವಿಭಾಗಗಳಿಗೆ ಫಿನ್ಸ್ ಬರಿ, ಹೊಲ್ ಬಾರ್ನ್, ಕೆನ್ ಸಿಂಗ್ಟನ್ ಮತ್ತು ಟವರ್ ಎಂದು ಹೆಸರಿಡಲಾಯಿತು.[೧೪] ಈ ಕೌಂಟಿಯು ೧೩ನೇ ಶತಮಾನದಿಂದ ಪಾರ್ಲಿಮೆಂಟಿನ ಪ್ರಾತಿನಿಧ್ಯವನ್ನು ಹೊಂದಿದೆ. ಅರ್ಲ್ ಆಫ್ ಮಿಡ್ಲ್‌ಸೆಕ್ಸ್‌ ಶೀರ್ಷಿಕೆಯನ್ನು ೧೬೨೨ ಮತ್ತು ೧೬೭೭ರಲ್ಲಿ ಎರಡುಬಾರಿ ಸೃಷ್ಟಿಸಲಾಯಿತು, ಆದರೆ ಅದು ೧೮೪೩ರಲ್ಲಿ ಗತಿಸಿತು.[೧೫]

ಆರ್ಥಿಕ ಬೆಳವಣಿಗೆ ಬದಲಾಯಿಸಿ

ಕೌಂಟಿಯ ಆರ್ಥಿಕತೆಯು ಹಿಂದಿನಿಂದಲೂ ಸಿಟಿ ಆಫ್ ಲಂಡನ್‌ನ ಮೇಲೆ ಅವಲಂಭಿಸಿದ್ದು, ಪ್ರಾಥಮಿಕವಾಗಿ ಕೃಷಿ ಆಧಾರಿತವಾಗಿದೆ.[೪] ಧಾನ್ಯದಂತಹ ಬೆಳೆಗಳು, ಒಣಹುಲ್ಲು ಮತ್ತು ಕಟ್ಟಡ ಸಾಮಗ್ರಿಗಳನ್ನೂ ಒಳಗೊಂಡಂತೆ ಎಲ್ಲಾ ರೀತಿಯ ಸರಕುಗಳನ್ನು ಈ ಸಿಟಿಗೆ ಒದಗಿಸಲಾಗುತ್ತದೆ. ಹ್ಯಾಕ್ನೆ, ಇಸ್ಲಿಂಗ್ಟನ್ ಮತ್ತು ಹೈಗೇಟ್‌ನಂತಹ ಹಿಂದಿನ ರೆಸಾರ್ಟ್‌ಗಳ ಪ್ರವಾಸೋದ್ಯಮವೂ ಸಹ ಹಿಂದಿನ ಆರ್ಥಿಕತೆಯಲ್ಲಿ ಸ್ವಲ್ಪಭಾಗವನ್ನು ರೂಪುಗೊಳಿಸಿದೆ. ಅದೇನೇ ಆದರೂ ೧೮ನೇ ಶತಮಾನದಲ್ಲಿ ಮಿಡ್ಲ್‌ಸೆಕ್ಸ್‌ನ ಒಳ ಪ್ಯಾರಿಷ್‌ಗಳು ಸಿಟಿಯ ಉಪನಗರಗಳಂತೆ ಕಾರ್ಯನಿರ್ವಹಿಸಲು ಆರಂಭಿಸಿದವು. ಅಲ್ಲದೇ ಇವುಗಳನ್ನು ನಗರೀಕರಿಸಲಾಯಿತು.[೪]

೧೮೩೯ರಿಂದ ಪರಿಚಯಿಸಲಾದ ರೇಡಿಯಲ್ ರೈಲ್ವೆ ಮಾರ್ಗಗಳಿಂದಾಗಿ, ಲಂಡನ್‌ನ ಕೃಷಿ ಪೂರೈಕೆಯಿಂದ ಬೃಹತ್ ಮಟ್ಟದ ಮನೆ ನಿರ್ಮಾಣದ ಕಡೆಗೆ ಮೂಲಭೂತ ಬದಲಾವಣೆಯಾಯಿತು.[೧೬] ಈಶಾನ್ಯದಲ್ಲಿ ಟೊಟೆನ್ ಹ್ಯಾಮ್, ಎಡ್ಮಂಟನ್‌ ಮತ್ತು ಎನ್ ಫೀಲ್ಡ್‌ಗಳನ್ನು ಮೊದಲು, ಮಧ್ಯ ಲಂಡನ್‌ಗೆ ಸುಲಭ ಪ್ರವೇಶ ಸಾಧ್ಯವಾಗಿಸುವುದರೊಂದಿಗೆ ಕಾರ್ಮಿಕ ವರ್ಗದ ನಿವಾಸಗಳನ್ನೊಳಗೊಂಡ ಉಪನಗರಗಳಾಗಿ ಅಭಿವೃಡ್ಧಿಪಡಿಸಲಾಯಿತು. ೧೮೪೮ರಲ್ಲಿ ಮಿಡ್ಲ್‌ಸೆಕ್ಸ್‌ನ ಮೂಲಕ ವಿಂಡ್ಸರ್‌ಗೆ ಮತ್ತು೧೮೫೦ರಲ್ಲಿ ಪಾಟರ್ಸ್ ಬಾರ್‌ಗೆ ರೈಲುಮಾರ್ಗವನ್ನು ಸಂಪೂರ್ಣಗೊಳಿಸಲಾಯಿತು. ಅಲ್ಲದೇ ಮೆಟ್ರೋಪಾಲಿಟನ್ ಮತ್ತು ಮೆಟ್ರೋಪಾಲಿಟನ್ ಡಿಸ್ಟ್ರಿಕ್ಟ್ ರೈಲ್ವೆಗಳು ೧೮೭೮ರಲ್ಲಿ ಕೌಂಟಿಗೆ ರೈಲುಮಾರ್ಗದ ವಿಸ್ತೃತಭಾಗದ ಸರಣಿಗಳನ್ನು ಆರಂಭಿಸಿದವು. ಲಂಡನ್‌ಗೆ ಸಮೀಪವಾಗಿ, ಆಕ್ಟನ್, ವಿಲ್ಸೆಸ್‌ಡೆನ್, ಈಲಿಂಗ್ ಮತ್ತು ಹಾರ್ನ್ಸೆಯ ಡಿಸ್ಟ್ರಿಕ್ಟ್‌ಗಳು ಟ್ರ್ಯಾಮ್(ರಸ್ತೆಯ ರೈಲು ಬಂಡಿ) ಮತ್ತು ಬಸ್ ಜಾಲಗಳ ವ್ಯಾಪ್ತಿಯೊಳಗೆ ಬಂದವು, ಇವು ಮಧ್ಯ ಲಂಡನ್‌ಗೆ ಅಗ್ಗದ ಸಾರಿಗೆ ಸಂಪರ್ಕವನ್ನು ಒದಗಿಸುತ್ತಿದ್ದವು.[೧೬]

ಮಹಾಯುದ್ಧ Iರ ನಂತರ, ಕಾರ್ಮಿಕರ ಲಭ್ಯತೆ ಮತ್ತು ಲಂಡನ್‌ನ ಸಾಮೀಪ್ಯವು ಹೊಸ ಕೈಗಾರಿಕೆಗಳ ಅಭಿವೃದ್ಧಿಗಾಗಿ ಹೇಸ್ ಮತ್ತು ಪಾರ್ಕ್ ರಾಯಲ್‌ನಂತಹ ಪ್ರದೇಶಗಳನ್ನು ಮಾದರಿ ಸ್ಥಳಗಳಾಗಿ ಮಾಡಿತು.[೧೬] ಹೊಸ ಉದ್ಯೋಗಗಳು ಅಧಿಕ ಜನರನ್ನು ಕೌಂಟಿಯ ಕಡೆಗೆ ಆಕರ್ಷಿಸಿದವು. ಅಲ್ಲದೇ ಜನಸಂಖ್ಯೆಯು ಹೆಚ್ಚುತ್ತಾ ಹೋಯಿತು ಹಾಗು ೧೯೫೧ರಲ್ಲಿ ಅದರ ಉತ್ತುಂಗಕ್ಕೇರಿತು.

ಆಡಳಿತ ಬದಲಾಯಿಸಿ

ಮೈಟ್ರೋಪಾಲಿಸ್ ಬದಲಾಯಿಸಿ

೧೯ ನೇ ಶತಮಾನದ ಹೊತ್ತಿಗೆ ಈಸ್ಟ್ ಎಂಡ್ ಆಫ್ ಲಂಡನ್ ಅನ್ನು ಎಸೆಕ್ಸ್‌ನೊಂದಿಗೆ ಪೂರ್ವದ ಗಡಿಯ ಕಡೆಗೆ ವಿಸ್ತರಿಸಲಾಯಿತು. ಅಲ್ಲದೇ ಟವರ್ ವಿಭಾಗ ಸುಮಾರು ಒಂದು ಮಿಲಿಯನ್‌ನಷ್ಟು ಜನಸಂಖ್ಯೆಯನ್ನು ತಲುಪಿತು.[೧] ರೈಲು ಮಾರ್ಗಗಳು ಬಂದ ನಂತರ ಲಂಡನ್‌ನ ವಾಯವ್ಯ ಭಾಗದ ಉಪನಗರಗಳು ಕೌಂಟಿಯ ಬೃಹತ್ ಭಾಗದಲ್ಲೆಲ್ಲಾ ಗಮನಾರ್ಹವಾಗಿ ಹರಡಿದವು.[೭] ೧೮೨೯ರಿಂದ ಮೆಟ್ರೋಪಾಲಿಟನ್ ಪೋಲಿಸ್ ಲಂಡನ್‌ಗೆ ಹತ್ತಿರವಾಗಿದ್ದಂತಹ ಪ್ರದೇಶಗಳಿಗೆ ಸೇವೆಸಲ್ಲಿಸುತ್ತಿತ್ತು. ೧೮೪೦ರಿಂದ ಸಂಪೂರ್ಣ ಕೌಂಟಿಯನ್ನು ಮೆಟ್ರೋಪಾಲಿಟನ್ ಪೋಲಿಸ್ ಡಿಸ್ಟ್ರಿಕ್ಟ್‌ಗೆ ಸೇರಿಸಲಾಯಿತು.[೧೭] ಕೌಂಟಿಯಲ್ಲಿದ್ದ ಸ್ಥಳೀಯ ಸರ್ಕಾರ ೧೮೩೫ರ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಪ್ರಭಾವಕ್ಕೊಳಪಡಲಿಲ್ಲ. ಅಲ್ಲದೇ ನಾಗರಿಕ ಕಾರ್ಯಗಳು ಪ್ರತ್ಯೇಕ ಪ್ಯಾರಿಷ್ ಸಂಘಗಳ ಅಥವಾ ಆಡ್ ಹಾಕ್ ಇಂಪ್ರೂಮೆಂಟ್ ಕಮಿಷನರ್‌ಗಳ ಹೊಣೆಗಾರಿಕೆಯಾಗಿ ಮುಂದುವರೆದವು.[೧೮][೧೯] ೧೮೫೫ರಲ್ಲಿ, ಸಿಟಿ ಆಫ್ ಲಂಡನ್ಅನ್ನು ಹೊರತುಪಡಿಸಿ ಆಗ್ನೇಯ ಭಾಗದಲ್ಲಿರುವ ಅತ್ಯಂತ ಜನದಟ್ಟಣೆಯ ಪ್ರದೇಶದ ಪ್ಯಾರಿಷ್‌ಗಳು, ಮೆಟ್ರೋಪಾಲಿಟನ್ ಬೋರ್ಡ್ ಆಫ್ ವರ್ಕ್ಸ್‌ನ ಹೊಣೆಗಾರಿಕೆಗೆ ಒಳಪಟ್ಟವು.[೫] ಈ ನಾವೀನ್ಯದ ಹೊರತಾಗಿಯು ಆ ಸಮಯದಲ್ಲಿ ವ್ಯವಸ್ಥೆ "ಗೊಂದಲಮಯ"ವಾಗಿದೆ ಎಂದು ಟೀಕಾಕಾರರು ವಿವರಿಸಿದ್ದಾರೆ.[೬] ೧೮೮೯ರಲ್ಲಿ ೧೮೮೮ರ ಸ್ಥಳೀಯ ಸರ್ಕಾರದ ಕಾಯ್ದೆಯಡಿಯಲ್ಲಿ, ಸರಿಸುಮಾರು 30,000 acres (120 km2) ನಷ್ಟು ಮೆಟ್ರೋಪಾಲಿಟನ್ ಪ್ರದೇಶ ಕೌಂಟಿ ಆಫ್ ಲಂಡನ್ ನ ಭಾಗವಾಯಿತು.[೧೫] ಕಾಯ್ದೆಯು ಆಡಳಿತಾತ್ಮಕ ಕೌಂಟಿ ಆಫ್ ಲಂಡನ್ ನ ಮಿಡ್ಲ್‌ಸೆಕ್ಸ್‌ ಭಾಗವನ್ನು "[ಮಿಡ್ಲ್‌ಸೆಕ್ಸ್‌] ನೋಡಿಕೊಳ್ಳುವ, ಮತ್ತು ಆಡಳಿತಾತ್ಮಕವಲ್ಲದ ಎಲ್ಲಾ ಉದ್ದೇಶಗಳಿಗಾಗಿ ಪ್ರತ್ಯೇಕ ಕೌಂಟಿಯನ್ನು ರಚಿಸುವ" ಅವಕಾಶ ಒದಗಿಸಿತು.

 
ನಕ್ಷೆಯು 1851 ಮತ್ತು 1911ರಲ್ಲಿದ್ದ ಮಿಡ್ಲ್‌ಸೆಕ್ಸ್‌‌ನ ಗಡಿಪ್ರದೇಶಗಳನ್ನು ತೋರಿಸುತ್ತದೆ.ಸಣ್ಣ ಪ್ರಮಾಣದ ಪುನಸ್ಸಂಯೋಜನೆಯನ್ನು ಹೊರತುಪಡಿಸಿ, ಉತ್ತರದ ಮಾಂಕೆನ್ ಹ್ಯಾಡ್ಲಿಯನ್ನು 1889ರಲ್ಲಿ ಹರ್ಟ್‌ಫೋರ್ಡ್ಶೈರ್‌ಗೆ ವರ್ಗಾಯಿಸಲಾಗಿದೆ ಹಾಗೂ ಆಗ್ನೇಯದ ಭಾಗವನ್ನು ಕೌಂಟಿ ಆಫ್ ಲಂಡನ್‌ಗೆ ವರ್ಗಾಯಿಸಲಾಗಿದೆ.
 
1882ರ ನಕ್ಷೆಯು ಈಸ್ಟ್ ಎಂಡ್‌ನ ಸಂಪೂರ್ಣ ನಗರೀಕರಣವನ್ನು ತೋರಿಸುತ್ತದೆ.

ಮಿಡ್ಲ್‌ಸೆಕ್ಸ್‌ ನಿಂದ ವರ್ಗಾಯಿಸಲಾಗಿದ್ದ ಕೌಂಟಿ ಆಫ್ ಲಂಡನ್ ನ ಭಾಗವನ್ನು ೧೯೦೦ ರಲ್ಲಿ ೧೮ ಮೆಟ್ರೋಪಾಲಿಟನ್ ಬರೋಗಳಾಗಿ ವಿಂಗಡಿಸಲಾಯಿತು. ಇವುಗಳನ್ನು ಪ್ರಸ್ತುತದ ಏಳು ಒಳ ಲಂಡನ್ ಬರೋಗಳನ್ನು ನಿರ್ಮಿಸಲು ೧೯೬೫ ಒಟ್ಟುಗೂಡಿಸಲಾಯಿತು:

  • ಕ್ಯಾಮ್ ಡನ್ ಅನ್ನು ಹ್ಯಾಂಪ್ ಸ್ಟೆಡ್, ಹೊಲ್ ಬಾರ್ನ್ ಮತ್ತು ಸೆಂಟ್ ಪ್ಯಾನ್ ಕ್ರಾಸ್ ಅನ್ನು ಮೆಟ್ರೋಪಾಲಿಟನ್ ಬರೋಗಳಿಂದ ರೂಪಿಸಲಾಯಿತು.
  • ಹ್ಯಾಕ್ ನೆ ಯನ್ನು ಹ್ಯಾಕ್ ನೆ, ಶೋರ್ ಡಿಚ್ ಮತ್ತು ಸ್ಟಾಕ್ ನ್ಯೂಂಗ್ಟನ್ ಮೆಟ್ರೋಪಾಲಿಟನ್ ಬರೋಗಳಿಂದ ರಚಿಸಲಾಯಿತು.
  • ಹ್ಯಾಮರ್ ಸ್ಮಿತ್ (೧೯೭೯ ರಿಂದ ಹ್ಯಾಮರ್ ಸ್ಮಿತ್ ಮತ್ತು ಫುಲ್ ಹ್ಯಾಮ್ ಎಂದು ಕರೆಯಲಾಗುತ್ತದೆ) ಅನ್ನು ಹ್ಯಾಮರ್ ಸ್ಮಿತ್ ಮತ್ತು ಫುಲ್ ಹ್ಯಾಮ್ ಗಳ ಮೆಟ್ರೋಪಾಲಿಟನ್ ಬರೋಗಳಿಂದ ರೂಪಿಸಲಾಗಿದೆ
  • ಇಸ್ಲಿಂಗ್ಟನ್ ಅನ್ನು ಫಿನ್ಸ್ ಬರಿ ಮತ್ತು ಇಸ್ಲಿಂಗ್ಟನ್ ಗಳ ಮೆಟ್ರೋಪಾಲಿಟನ್ ಬರೋಗಳಿಂದ ರೂಪಿಸಲಾಗಿದೆ.
  • ಕೆನ್ ಸಿಂಗ್ಟನ್ ಮತ್ತು ಚೆಲ್ಸಿಯವನ್ನು ಚ್ವೆಲ್ಸಿಯಾ ಮತ್ತು ಕೆನ್ ಸಿಂಗ್ಟನ್ ಗಳ ಮೆಟ್ರೋಪಾಲಿಟನ್ ಬರೋಗಳಿಂದ ರಚಿಸಲಾಗಿದೆ.
  • ಟವರ್ ಹ್ಯಾಮ್ಲೆಟ್ಸ್ ಅನ್ನು ಬೆಥನಲ್ ಗ್ರೀನ್, ಪಾಪ್ಲರ್ ಮತ್ತು ಸ್ಟೆಪ್ನೆಗಳ ಮೆಟ್ರೋಪಾಲಿಟನ್ ಬರೋಗಳಿಂದ ರೂಪಿಸಲಾಗಿದೆ.
  • ಸಿಟಿ ಆಫ್ ವೆಸ್ಟ್ಮಿನಿಸ್ಟರ್ ಅನ್ನು ಪ್ಯಾಡಿಂಗ್ಟನ್, ಸೆಂಟ್ ಮಾರ್ಲೆಬೋನ್ ಮತ್ತು ವೆಸ್ಟ್ಮಿನಿಸ್ಟರ್ ನಗರಗಳ ಮೆಟ್ರೋಪಾಲಿಟನ್ ಬರೋಗಳಿಂದ ರೂಪಿಸಲಾಗಿದೆ.[೫]

ಅಧಿಕ-ಮೆಟ್ರೋಪಾಲಿಟನ್ ಪ್ರದೇಶ ಬದಲಾಯಿಸಿ

ಮೆಟ್ರೋಪಾಲಿಟನ್ ಪ್ರದೇಶದಿಂದ ಹೊರಗಿದ್ದ ಮಿಡ್ಲ್‌ಸೆಕ್ಸ್‌ ೧೯ನೇ ಶತಮಾನದ ಮಧ್ಯಾವಧಿಯ ವರೆಗು ಗ್ರಾಮವಾಗಿಯೇ ಉಳಿದಿತ್ತು. ಆದ್ದರಿಂದ ಸ್ಥಳೀಯ ಸರ್ಕಾರಗಳು ಅಭಿವೃದ್ಧಿ ಹೊಂದುವುದು ತಡವಾಯಿತು. ಲಂಡನ್ ಮತ್ತು ವೆಸ್ಟ್ಮಿನಿಸ್ಟರ್ ನ ನಗರಗಳನ್ನು ಹೊರತು ಪಡಿಸಿ ಬೇರಾವ ಪ್ರಾಚೀನ ಬರೋಗಳು ಉಳಿದಿರಲಿಲ್ಲ.[೨೦] ಹಂಡ್ರೆಡ್ ಕೋರ್ಟ್ ಗಳ ಮಹತ್ವ ಕುಸಿಯಿಯು. ಅಲ್ಲದೇ ಅಂತಹ ಸ್ಥಳೀಯ ಆಡಳಿತವನ್ನು ತ್ರೈಮಾಸಿಕ ಅಧೀವೇಶನದಲ್ಲಿ ಜಸ್ಟೀಸ್ ಆಫ್ ಪೀಸ್ ಸಭೆಯು ನಡೆಸಿದಂತಹ "ಕೌಂಟಿ ವ್ಯವಹಾರಗಳ" ನಡುವೆ ವಿಂಗಡಿಸಲಾಯಿತು. ಅಲ್ಲದೇ ಸ್ಥಳೀಯ ವಿಷಯಗಳನ್ನು ಪ್ಯಾರಿಷ್ ಸಂಘಗಳು ನಿರ್ವಹಿಸುತ್ತಿದ್ದವು. ಲಂಡನ್ ನ ಉಪನಗರಗಳು ಕ್ಷೇತ್ರದುದ್ದಕ್ಕೂ ಹರಡಿದಂತೆ, ಯೋಜನೆಯಿಲ್ಲದ ಅಭಿವೃದ್ಧಿ ಮತ್ತು ಕಾಲರದ ಆರಂಭ, ಬೆಳೆಯುತ್ತಿರುವ ನಗರಗಳನ್ನು ನಿರ್ವಹಿಸಲು, ಸ್ಥಳೀಯ ಮಂಡಳಿಗಳು ಅಥವಾ ಇಂಪ್ರೂಮೆಂಟ್ ಕಮಿಷನರ್ ಗಳನ್ನು ರಚಿಸಲು ಒತ್ತಾಯಿಸಿತು. ಭಿನ್ನ ಆಡಳಿತಾತ್ಮಕ ಉದ್ದೇಶಗಳಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ಯಾರಿಷ್ ಗಳನ್ನು ಗುಂಪುಗೂಡಿಸಲಾಯಿತು. ೧೮೭೫ ರಿಂದ ಈ ಸ್ಥಳೀಯ ಆಡಳಿತಾತ್ಮಕ ವಿಭಾಗಗಳಿಗೆ ಪಟ್ಟಣ ಅಥವಾ ಗ್ರಾಮೀಣ ನೈರ್ಮಲ್ಯ ಡಿಸ್ಟ್ರಿಕ್ಟ್ ಗಳಂತೆ ನಿಯೋಜಿಸಲಾಯಿತು.[೨೧]

೧೮೮೮ ರ ಸ್ಥಳೀಯ ಸರ್ಕಾರದ ಕಾಯ್ದೆಯ ನಂತರ, ಮಾನ್ ಕೆನ್ ಹ್ಯಾಡ್ಲೆ ಪ್ಯಾರಿಷ್ ಅನ್ನು ಹೊರತು ಪಡಿಸಿ ಉಳಿದ ಕೌಂಟಿ ಮಿಡ್ಲ್‌ಸೆಕ್ಸ್‌ ಕೌಂಟಿ ಕೌನ್ಸಿಲ್ ನ ನಿಯಂತ್ರಣಕ್ಕೆ ಒಳಪಟ್ಟಿತು. ಇದು ಹರ್ಟ್‌ಫೋರ್ಡ್ಶೈರ್ ನ ಭಾಗವಾಯಿತು.[೨೨] ಅದರಂತೆ ಲಾರ್ಡ್ ಲಿಟ್ ನ್ಯಾನ್ಟ್ ಆಫ್ ಮಿಡ್ಲ್‌ಸೆಕ್ಸ್‌ ನ ಹೊಣೆಗಾರಿಕೆಯ ಕ್ಷೇತ್ರವನ್ನು ಇಳಿಸಲಾಯಿತು. ಮಿಡ್ಲ್‌ಸೆಕ್ಸ್‌ ಯಾವುದೇ ಕೌಂಟಿ ಬರೋಗಳನ್ನು ಒಳಗೊಂಡಿರಲಿಲ್ಲ, ಆದ್ದರಿಂದ ಕೌಂಟಿ ಮತ್ತು ಆಡಳಿತಾತ್ಮಕ ಕೌಂಟಿ (ಕೌಂಟಿ ಕೌನ್ಸಿಲ್ ಕಂಟ್ರೋಲ್ ನ ಪ್ರದೇಶ)ಗಳು ಅಭಿನ್ನವಾಗಿದ್ದವು.

೧೮೯೪ ರ ಸ್ಥಳೀಯ ಸರ್ಕಾರದ ಕಾಯ್ದೆ ಆಡಳಿತಾತ್ಮಕ ಕೌಂಟಿಯನ್ನು ಅಸ್ತಿತ್ವದಲ್ಲಿರುವ ಸ್ಯಾನಿಟರಿ ಡಿಸ್ಟ್ರಿಕ್ಟ್ ಗಳ ಆಧಾರದ ಮೇಲೆ ನಾಲ್ಕು ರೂರಲ್ ಡಿಸ್ಟ್ರಿಕ್ಟ್ ಗಳಾಗಿ ಮತ್ತು ಮೂವತ್ತೊಂದು ಅರ್ಬನ್ ಡಿಸ್ಟ್ರಿಕ್ಟ್ ಗಳಾಗಿವೆ ವಿಂಗಡಿಸಿತು. ಸೌತ್ ಹಾರ್ನ್ ಸೆ ಎಂಬ ಒಂದು ಅರ್ಬನ್ ಡಿಸ್ಟ್ರಿಕ್ಟ್ ೧೯೦೦ ರವರೆಗೆ ಇದನ್ನು ಅನಂತರ ಕೌಂಟಿಗೆ ವರ್ಗಾಯಿಸುವ ವರೆಗು, ಇದು ಕೌಂಟಿ ಆಫ್ ಲಂಡನ್ ನೊಳಗೆಯೇ ಇರುವಂತಹ ಮಿಡ್ಲ್‌ಸೆಕ್ಸ್‌ನ ಹೊರಕ್ಷೇತ್ರವಾಗಿತ್ತು.[೨೩] ಹೆನ್ ಡನ್, ಸೌತ್ ಮಿಮ್ಸ್, ಸ್ಟ್ಯೇನ್ಸ್ ಮತ್ತು ಉಕ್ಸ್ ಬ್ರಿಡ್ಜ್ ರೂರಲ್ ಡಿಸ್ಟ್ರಿಕ್ಟ್ ಗಳಾಗಿದ್ದವು. ಬೆಳೆಯುತ್ತಿದ್ದ ನಗರೀಕರಣದಿಂದಾಗಿ ೧೯೩೪ ರಲ್ಲಿ ಇವುಗಳನ್ನು ನಾಶ ಮಾಡಲಾಯಿತು.[೧೦] ಅರ್ಬನ್ ಡಿಸ್ಟ್ರಿಕ್ಟ್ ಗಳನ್ನು ಸೃಷ್ಟಿಸಲಾಯಿತು, ಸೇರಿಸಲಾಯಿತು. ಅಲ್ಲದೇ ೧೯೬೫ ರಲ್ಲಿ ಅನೇಕ ಡಿಸ್ಟ್ರಿಕ್ಟ್ ಗಳು ಮುನ್ಸಿಪಲ್ ಬರೋನ ಸ್ಥಾನವನ್ನು ಗಳಿಸಿದವು. ೧೯೬೧ ರ ಗಣತಿಯ ಸಮಯದಲ್ಲಿ ಇದ್ದಂತಹ ಡಿಸ್ಟ್ರಿಕ್ಟ್ ಗಳು:[೯]

  1. ಪಾಟರ್ಸ್ ಬಾರ್
  2. ಎನ್ ಫೀಲ್ಡ್
  3. ಸೌತ್ ಗೇಟ್
  4. ಎಡ್ಮಂಟನ್‌
  5. ಟೊಟೆನ್ ಹ್ಯಾಮ್
  6. ವುಡ್ ಗ್ರೀನ್
  7. ಫ್ರೆರ್ನ್ ಬಾರ್ನೆಟ್
  8. ಹಾರ್ನ್ ಸೆ
  9. ಫಂಚ್ಲೆ
  10. ಹೆನ್ ಡನ್
  11. ಹ್ಯಾರೊ
  12. ರುಸ್ಲಿಪ್-ನಾರ್ಥ್ ವುಡ್
  13. ಉಕ್ಸ್ ಬ್ರಿಡ್ಜ್
 
  1. ಎಲಿಂಗ್
  2. ವೆಂಬ್ಲೆ
  3. ವಿಲ್ಸ್ ಡನ್
  4. ಆಕ್ಟನ್
  5. ಬ್ರೆಂಟ್ ಫೋರ್ಡ್ ಮತ್ತು ಚಿಸ್ ವಿಕ್
  6. ಹೆಸ್ಟನ್ ಮತ್ತು ಇಸ್ಲೆವರ್ತ್
  7. ಸೌಟ್ ಆಲ್
  8. ಹ್ಯೇಸ್ ಮತ್ತು ಹ್ಯಾರ್ಲಿಂಗ್ಟನ್
  9. ವೈಸ್ಲೆ ಮತ್ತು ವೆಸ್ಟ್ ಡ್ರಾಯ್ಟನ್
  10. ಸ್ಟೈನ್ಸ್
  11. ಫೆಲ್ಥಮ್
  12. ಟ್ವಿಕೆನ್ ಹ್ಯಾಮ್
  13. ಸನ್ ಬರಿ-ಆನ್-ಥೇಮ್ಸ್

೧೮೮೯ ರಲ್ಲಿ ಲಂಡನ್ ನ ಬೆಳವಣಿಗೆ ಮುಂದುವರೆಯಿತಲ್ಲದೇ, ಕೌಂಟಿ ಜನಸಾಂದ್ರತೆಯಲ್ಲಿ ಅತ್ಯಂತ ಹೆಚ್ಚಳವನ್ನು ಕಾಣುವುದರೊಂದಿಗೆ ಲಂಡನ್ ನ ಉಪನಗರಗಳಿಂದ ಸಂಪೂರ್ಣವಾಗಿ ತುಂಬಿ ಹೋಯಿತು. ಇದನ್ನು ಕೌಂಟಿಯ ದೊಡ್ಡ ಭಾಗವನ್ನು ಆವರಿಸಿದ್ದ ಮೆಟ್ರೋ-ಲ್ಯಾಂಡ್ ಅಬಿವೃದ್ಧಿಗಳು ತ್ವರಿತಗೊಳಿಸಿದ್ದವು.[೨೪] ಟ್ರ್ಯಾಮ್ ಗಳ [೨೫] ವ್ಯಾಪಕ ಸಂಪರ್ಕ, ಬಸ್ ಗಳು ಮತ್ತು ಲಂಡನ್ ನ ಅಂಡರ್ಗ್ರೌಂಡ್ ಅನ್ನು ಒಳಗೊಂಡಂತೆ ಕೌಂಟಿಯಲ್ಲಿನ ಸಾರ್ವಜನಿಕ ಸಾರಿಗೆ ಸಂಪರ್ಕ ೧೯೩೩ ರಲ್ಲಿ ಲಂಡನ್ ಪ್ಯಾಸೆಂಜರ್ ಟ್ರಾನ್ಸ್ ಫೋರ್ಟ್ ಬೋರ್ಡ್ ನ ನಿಯಂತ್ರಣಕ್ಕೆ ಒಳಪಟ್ಟಿತು[೨೬]. ಅಲ್ಲದೇ ಮುಂದೆ ಸೇವೆಯನ್ನು ಅಧಿಕಗೊಳಿವುದಕ್ಕಾಗಿ ೧೯೩೦ ರ ಹೊತ್ತಿಗೆ ನ್ಯೂ ವರ್ಕ್ಸ್ ಪ್ರೋಗ್ರಾಂ ಅನ್ನು ಅಭಿವೃದ್ಧಿಪಡಿಸಿತು.[೭] ಬಹುಶಃ ರಾಜಧಾನಿಗೆ ಇದು ತೀರ ಹತ್ತಿರದಲ್ಲಿರುವುದರಿಂದ ಕೌಂಟಿ ಮಹಾಯುದ್ಧ IIರ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸಿತು. ಅಲ್ಲದೇ ಇದು ಏರಿಯಲ್ ಬಾಂಬುದಾಳಿಗೆ ತುತ್ತಾಗಿತ್ತು, ಹಾಗು ಬ್ರಿಟನ್ ಕದನದಲ್ಲಿ ಪಾಲ್ಗೊಂಡಿದ್ದ RAF ಉಕ್ಸ್ ಬ್ರಿಡ್ಜ್ ಮತ್ತು RAF ಹೆಸ್ಟನ್ ನಂತಹ ಅನೇಕ ಮಿಲಿಟರಿ ವ್ಯವಸ್ಥೆಗಳನ್ನು ಒಳಗೊಂದಿತ್ತು.[೨೭]

ಕೌಂಟಿ ಟೌನ್ ಬದಲಾಯಿಸಿ

 
ವೆಸ್ಟ್‌ಮಿಂಸ್ಟರ್‌ನ ಮಿಡ್ಲ್‌ಸೆಕ್ಸ್‌ ಗಿಲ್ಡ್‌ಹಾಲ್.

ಮಿಡ್ಲ್‌ಸೆಕ್ಸ್‌ ಲಂಡನ್ ನ ಹತ್ತಿರವಿರುವುದರಿಂದಾಗಿ ಮತ್ತು ಅದರ ನಿರ್ವಹನೆಯಿಂದಾಗಿ ಸ್ಥಾಪಿಸಲಾದ ಏಕ ಐತಿಹಾಸಿಕ ಕೌಂಟಿ ಟೌನ್ ಅನ್ನು ಹೊಂದಿಲ್ಲ.[೧೬] ಅದೇನೇ ಆದರೂ, ಕೌಂಟಿಯ ವಿಭಿನ್ನ ಉದ್ದೇಶಕ್ಕಾಗಿ ವಿಭಿನ್ನ ಸ್ಥಳಗಳನ್ನು ಬಳಸಲಾಗಿದೆ. ಮಿಡ್ಲ್‌ಸೆಕ್ಸ್‌ ಗಾಗಿ ನಡೆಸಲಾಗಿವ ಕೌಂಟಿಯ ನ್ಯಾಯಾಧಿವೇಶನಗಳು ಸಿಟಿ ಆಫ್ ಲಂಡನ್ ನಲ್ಲಿರುವ ಓಲ್ಡ್ ಬೈಲೆಯಲ್ಲಿ ನಡೆಯುತ್ತಿದ್ದವು.[೪] ೧೮೮೯ ರ ವರೆಗು ಮಿಡ್ಲ್‌ಸೆಕ್ಸ್ ನ ಪ್ರಧಾನ ನ್ಯಾಯಮೂರ್ತಿ‌ಯನ್ನು ಸಿಟಿ ಆಫ್ ಲಂಡನ್ ಆಯ್ಕೆ ಮಾಡುತ್ತಿತ್ತು. ಹದಿನೆಂಟನೆ ಶತಮಾನದ ಪೂರ್ವಾರ್ಧದಿಂದ ಮಿಡ್ಲ್‌ಸೆಕ್ಸ್‌ ತ್ರೈಮಾಸಿಕ ಅಧಿವೇಶನಗಳಿಗಾಗಿ ಇದ್ದಂತಹ ಅಧೀವೇಶನಗಳ ಮನೆ ಕ್ಲರ್ಕೆನ್ ವೆಲ್ ಗ್ರೀನ್ ನಲ್ಲಿತ್ತು. ೧೮೮೯ ರಲ್ಲಿ ಮಿಡ್ಲ್‌ಸೆಕ್ಸ್‌ ಕೌಂಟಿ ಕೌನ್ಸಿಲ್ ಅನ್ನು ನಿರ್ಮಿಸುವ ವರೆಗು ಹಿಂದಿನ ಮಿಡ್ಲ್‌ಸೆಕ್ಸ್‌ ಸೆಷನ್ಸ್ ಹೌಸ್ ನಲ್ಲಿ ನಡೆಯುತ್ತಿದ್ದ ತ್ರೈಮಾಸಿಕ ಅಧಿವೇಶನ, ಕೌಂಟಿಯ ಬಹುಪಾಲು ಆಡಳಿತವನ್ನು ನಿರ್ವಹಿಸಿತ್ತು. ಷೈರ್ ಗಳಿಗಾಗಿ (ಅಥವಾ ಸಂಸತ್ತಿನ ಸದಸ್ಯರು) ನೈಟ್ಸ್ ಗಳನ್ನು ಆಯ್ಕೆ ಮಾಡಲು ೧೭೦೧ ರಿಂದ ನ್ಯೂ ಬ್ರೆಂಟ್ ಫೋರ್ಡ್ ನಲ್ಲಿ ಚುನಾವಣೆಯನ್ನು ನಡೆಸಲಾಗುತ್ತಿತ್ತು, ಇದರ ಆಧಾರದ ಮೇಲೆ ೧೭೮೯ ರಲ್ಲಿ ಮೊದಲು ಇದನ್ನು ಕೌಂಟಿ ಟೌನ್ ಎಂದು ವಿವರಿಸಲಾಯಿತು.[೧೫][೨೮] ೧೭೯೫ ರಲ್ಲಿ , ನ್ಯೂ ಬ್ರೆಂಟ್ ಫೋರ್ಡ್ ಅನ್ನು "ಕೌಂಟಿ-ಟೌನ್ ಎಂದು ಪರಿಗಣಿಸಲಾಯಿತು; ಆದರೆ ಇಲ್ಲಿ ಟೌನ್ ಹಾಲ್ ಇಲ್ಲ ಅಥವಾ ಇತರ ಸಾರ್ವಜನಿಕ ಕಟ್ಟಡವಿಲ್ಲ".[೨೯] ೧೮೮೯ ರಲ್ಲಿ ತ್ರೈಮಾಸಿಕ ಅಧಿವೇಶನಗಳ ಆಡಳಿತಾತ್ಮಕ ಕರ್ತವ್ಯಗಳನ್ನು ವಹಿಸಿಕೊಂಡ ಮಿಡ್ಲ್‌ಸೆಕ್ಸ್‌ ಕೌಂಟಿ ಕೌನ್ಸಿಲ್ ವೆಸ್ಟ್ಮಿನಿಸ್ಟರ್ ನಲ್ಲಿರುವ ಮಿಡ್ಲ್‌ಸೆಕ್ಸ್‌ ಗಿಲ್ಡ್ ಹಾಲ್ ಅನ್ನು ಆಧರಿಸಿದೆ. ಇದು ಕೌಂಟಿ ಆಫ್ ಲಂಡನ್ ನಲ್ಲಿದೆ, ಆದ್ದರಿಂದ ಕೌನ್ಸಿಲ್ ನ ನ್ಯಾಯಕ್ಶೇತ್ರದಿಂದ ಹೊರಗುಳಿದಿದೆ.

ಮಿಡ್ಲ್‌ಸೆಕ್ಸ್‌ ಕೌಂಟಿ ಕೌನ್ಸಿಲ್‌ನ ಲಾಂಛನ ಬದಲಾಯಿಸಿ

 
ಮಿಡ್ಲ್‌ಸೆಕ್ಸ್‌ ಕೌಂಟಿ ಕೌನ್ಸಿಲ್‌ನ ಲಾಂಛನ.

ರಾಜರ ವಂಶಲಾಂಛನಗಳು ಮಧ್ಯಕಾಲೀನ ಹೆರಾಲ್ಡ್‌ಗಳಿಂದ ಹಿಡಿದು ಆಂಗ್ಲೊ-ಸ್ಯಾಕ್ಸನ್ ಸಪ್ತರಾಜ್ಯಗಳ ಸಾಮ್ರಾಜ್ಯಗಳವರೆಗಿನ ಗುಣಲಕ್ಷಣಗಳಿಂದ ವೈಶಿಷ್ಟ್ಯಗೊಂಡಿವೆ. ಅವು ಮಧ್ಯ ಮತ್ತು ಪೂರ್ವ ಸ್ಯಾಕ್ಸನ್‌ಗಳ ರಾಜ್ಯಗಳ ಕಾಲದ್ದೆಂದು ಸೂಚಿಸಲಾಗಿದ್ದು, ಮೂರು "ಸಿಯಾಕ್ಸೆ‌ಗಳು" ಅಥವಾ ಕೆಂಪು ಹಿನ್ನೆಲೆಯಲ್ಲಿ ಗರಗಸದ ಏಣಿನಾಕಾರದ ಸಣ್ಣ ಖಡ್ಗಗಳನ್ನು ಹೊಂದಿದ್ದವು. ಸಿಯಾಕ್ಸೆಯು ಆಂಗ್ಲೊ-ಸ್ಯಾಕ್ಸನ್ ಸೈನಿಕರು ಬಳಸುತ್ತಿದ್ದ ಒಂದು ಆಯುಧವಾಗಿತ್ತು ಮತ್ತು 'ಸ್ಯಾಕ್ಸನ್' ಪದವನ್ನು ಈ ಪದದಿಂದ ಪಡೆದಿರಬಹುದು.[೩೦][೩೧] ಈ ಲಾಂಛನಗಳು ಮಿಡ್ಲ್‌ಸೆಕ್ಸ್‌ ಮತ್ತು ಎಸ್ಸೆಕ್ಸ್ ರಾಜ್ಯಗಳನ್ನು ಹೋಲುವ ಎರಡು ಕೌಂಟಿಗಳೊಂದಿಗೆ ಜತೆಗೂಡಿದವು. ಈ ಎರಡೂ ಕೌಂಟಿಗಳಿಗೆ ಸಂಬಂಸಿದ ಕೌಂಟಿ ಅಧಕೃತ ವರ್ಗ, ಸೇನೆ ಮತ್ತು ಸ್ವಯಂ ಸೇವಕ ರೆಜಿಮೆಂಟುಗಳು ಈ ವಿಶಿಷ್ಟ ಲಾಂಛನಗಳನ್ನು ಬಳಸಿಕೊಂಡವು.

೧೯೧೦ರಲ್ಲಿ ಎಸ್ಸೆಕ್ಸ್ ಮತ್ತು ಮಿಡ್ಲ್‌ಸೆಕ್ಸ್‌‌ನ ಕೌಂಟಿ ಕೌನ್ಸಿಲ್‌ಗಳು ಹಾಗೂ ಕೌಂಟಿ ಆಫ್ ಲಂಡನ್‌ನ ಶೆರಿಫ್‌ನ ಕಛೇರಿ ಇವೆಲ್ಲವೂ ಅದೇ ಲಾಂಛನಗಳನ್ನು ಬಳಸುತ್ತಿದ್ದವು. ಮಿಡ್ಲ್‌ಸೆಕ್ಸ್‌ ಕೌಂಟಿ ಕೌನ್ಸಿಲ್ ಈ ವಿಶಿಷ್ಟ ಲಾಂಛನಗಳಿಗೆ ಒಂದು ವಂಶಲಾಂಛನ 'ಭಿನ್ನತೆ'ಯನ್ನು ಸೇರಿಸುವುದರೊಂದಿಗೆ ಕಾಲೇಜ್ ಆಫ್ ಆರ್ಮ್ಸ್‌ನಿಂದ ಸಾಂಪ್ರಾದಾಯಿಕ ಲಾಂಛನಗಳನ್ನು ಪಡೆಯಲು ನಿರ್ಧರಿಸಿತು. ಮಿಡ್ಲ್‌ಸೆಕ್ಸ್‌ ಕೌಂಟಿಯ ನ್ಯಾಯಾಧಿಪತಿ ಮತ್ತು ಮಿಲಿಟರಿ ಲಾಂಛನಗಳ ಬಗೆಗಿನ ಪುಸ್ತಕವೊಂದರ ಲೇಖಕ ಕರ್ನಲ್ ಒಟ್ಲಿ ಪ್ಯಾರಿಯಲ್ಲಿ ಈ ವಂಶಲಾಂಛನಕ್ಕೆ ಒಂದು ಹೆಚ್ಚುವರಿಯನ್ನು ರಚಿಸುವಂತೆ ಕೇಳಲಾಯಿತು. ಇದಕ್ಕಾಗಿ ಆರಿಸಿದ ಹೆಚ್ಚುವರಿಯೆಂದರೆ "ಸ್ಯಾಕ್ಸನ್ ಕಿರೀಟ", ಇದನ್ನು ರಾಜ ಅತೆಲ್‌ಸ್ಟ್ಯಾನ್‌ನ ರಾಜ್ಯಭಾರದ ಕಾಲದ ಒಂದು ಬೆಳ್ಳಿಯ ಪೆನ್ನಿಯ ಮೇಲಿದ್ದ ಆತನ ಭಾವಚಿತ್ರದಿಂದ ಪಡೆಯಲಾಗಿತ್ತು. ಇದು ಯಾವುದೇ ಇಂಗ್ಲಿಷ್ ಸಾಮ್ರಾಜ್ಯದೊಂದಿಗೆ ಸಂಬಂಧಿಸಿದ ಕಿರೀಟದ ಆರಂಭಿಕ ರೂಪವೆಂದು ಹೇಳಲಾಗಿದೆ. ಈ ಲಾಂಛನಗಳನ್ನು ೧೯೧೦ರ ನವೆಂಬರ್ ೭ರಂದು ಸ್ವಾಮ್ಯದ ಹಕ್ಕುಪತ್ರದಿಂದ ವಿಧಿವಿಹಿತವಾಗಿ ನೀಡಲಾಯಿತು.[೩೨][೩೩][೩೪] ಈ ಲಾಂಛನಗಳ ನಿರೂಪಣೆಗಳು ಹೀಗಿದ್ದವು:

Gules, three seaxes fessewise points to the sinister proper, pomels and hilts and in the centre chief point a Saxon crown or.

ರಾಜ್ಯದ ವ್ಯತ್ಯಾಸಗೊಳಿಸದ ಲಾಂಛನಗಳನ್ನು ಅಂತಿಮವಾಗಿ ೧೯೩೨ರಲ್ಲಿ ಎಸ್ಸೆಕ್ಸ್ ಕೌಂಟಿ ಕೌನ್ಸಿಲ್‌ಗೆ ನೀಡಲಾಯಿತು.[೩೫] ಸಿಯಾಕ್ಸೆ‌ಗಳನ್ನೂ ಸಹ ಕೌಂಟಿಯ ಹೆಚ್ಚಿನ ಅರ್ಬನ್ ಡಿಸ್ಟ್ರಿಕ್ಟ್‌ಗಳು ಮತ್ತು ಬರೋಗಳ ಲಾಂಛಗಳಲ್ಲಿ ಬಳಸಲಾಯಿತು. ಸ್ಯಾಕ್ಸನ್ ಕಿರೀಟವು ಇಂಗ್ಲಿಷ್ ಪೌರ ಲಾಂಛನಗಳಲ್ಲಿ ಒಂದು ಸಾಮಾನ್ಯ ವಂಶಲಾಂಛನದ ಚಿಹ್ನೆಯಾಯಿತು.[೩೬][೩೭] ೧೯೬೫ರಲ್ಲಿ ಗ್ರೇಟರ್ ಲಂಡನ್ ಕೌನ್ಸಿಲ್ಅನ್ನು ರಚಿಸುವಾಗ ಅದರ ಲಾಂಛನಗಳಲ್ಲಿ ಒಂದು ಸ್ಯಾಕ್ಸನ್ ಕಿರೀಟವನ್ನು ಸೇರಿಸಲಾಯಿತು.[೩೮] ಸಿಯಾಕ್ಸೆಗಳು ಮಿಡ್ಲ್‌ಸೆಕ್ಸ್‌ನಲ್ಲಿರುವ ಸ್ಪೆಲ್ತೋರ್ನೆ ಬರೋ ಕೌನ್ಸಿಲ್‌ ಮತ್ತು ಅನೇಕ ಲಂಡನ್ ಬರೋ ಕೌನ್ಸಿಲ್‌ಗಳ ಲಾಂಛನಗಳಲ್ಲಿ ಕಂಡುಬರುತ್ತವೆ ‌.[೩೯][೪೦]

ಗ್ರೇಟರ್ ಲಂಡನ್‌ನ ರಚನೆ ಬದಲಾಯಿಸಿ

೧೮೮೯ರಲ್ಲಿ ರಚನೆಯಾದಂದಿನಿಂದ ಕೌಂಟಿ ಆಫ್ ಲಂಡನ್‌ನ ಜನಸಂಖ್ಯೆಯು ಕ್ಷೀಣಿಸುತ್ತಿತ್ತು ಮತ್ತು ವಿಶ್ವ ಸಮರ IIರ ನಂತರ ಸಾಮೂಹಿಕ ನಿರ್ಗಮನವು ಮುಂದುವರಿಯಿತು.[೮] ಇದಕ್ಕೆ ವಿರುದ್ಧವಾಗಿ, ಆ ಸಂದರ್ಭದಲ್ಲಿ ಮಿಡ್ಲ್‌ಸೆಕ್ಸ್‌‌ನ ಜನಸಂಖ್ಯೆಯು ಒಂದು ಸ್ಥಿರವಾದ ಏರಿಕೆಯನ್ನು ಕಂಡಿತು.[೪೧] ೧೯೫೧ರಿಂದ ೧೯೬೧ರವರೆಗೆ ಈ ಕೌಂಟಿಯ ಒಳಗಿನ ಡಿಸ್ಟ್ರಿಕ್ಟ್‌ಗಳ ಜನಸಂಖ್ಯೆಯು ಕ್ಷೀಣಿಸಲು ಆರಂಭವಾಯಿತು ಮತ್ತು ಜನಸಂಖ್ಯಾ ಏರಿಕೆಯು ಕೇವಲ ಎಂಟು ನಗರದ ಹೊರಗಿನ ಡಿಸ್ಟ್ರಿಕ್ಟ್‌ಗಳಲ್ಲಿ ಮಾತ್ರ ಕಂಡುಬಂದಿತು.[೯] ೧೯೬೧ರ ಜನಗಣತಿಯ ಪ್ರಕಾರ, ಈಲಿಂಗ್, ಏನ್ಫೀಲ್ಡ್, ಹ್ಯಾರೊ, ಹೆಂಡನ್, ಹೆಸ್ಟನ್ ಮತ್ತು ಐಲ್‌ವರ್ತ್, ಟೊಟ್ಟೆನ್ಹ್ಯಾಮ್, ವೆಂಬ್ಲಿ, ವಿಲ್ಸ್‌ಡನ್ ಮತ್ತು ಟ್ವಿಕೆನ್ಹ್ಯಾಮ್ ಮೊದಲಾದವೆಲ್ಲವೂ ೧೦೦,೦೦೦ ಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ತಲುಪಿದವು, ಇದು ಅವನ್ನು ಕೌಂಟಿ ಬರೋ ಸ್ಥಿತಿಯನ್ನು ತಲುಪುವಂತೆ ಮಾಡಬಹುದಿತ್ತು. ಈ ಎಲ್ಲಾ ಬರೋಗಳಿಗೆ ಅದನ್ನು ನೀಡಿದ್ದರೆ, ಆಡಳಿತಾತ್ಮಕ ಕೌಂಟಿ ಮಿಡ್ಲ್‌ಸೆಕ್ಸ್‌ನ ಜನಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡಬೇಕಾಗುತ್ತಿತ್ತು.

ಗ್ರೇಟರ್ ಲಂಡನ್‌ನಲ್ಲಿ ರಾಯಲ್ ಕಮೀಷನ್ ಆನ್ ಲೋಕಲ್ ಗವರ್ನ್ಮೆಂಟ್‌ಅನ್ನು ಸ್ಥಾಪಿಸಿದ ನಂತರ, ಪಾರ್ಲಿಮೆಂಟ್ ೧೯೬೩ರ ಲಂಡನ್ ಸರ್ಕಾರ ಕಾಯಿದೆಯನ್ನು ಕಾನೂನಾಗಿಸಿತು, ಇದು ೧೯೬೫ರ ಎಪ್ರಿಲ್ ೧ರಂದು ಚಾಲ್ತಿಗೆ ಬಂದಿತು.

ಈ ಕಾಯಿದೆಯು ಮಿಡ್ಲ್‌ಸೆಕ್ಸ್‌ ಮತ್ತು ಲಂಡನ್ ಆಡಳಿತಾತ್ಮಕ ಕೌಂಟಿಗಳನ್ನು ರದ್ದುಗೊಳಿಸಿತು.[೪೨] ೧೯೬೪ರ ನ್ಯಾಯ ನಿರ್ವಹಣೆ ಕಾಯಿದೆಯು ಮಿಡ್ಲ್‌ಸೆಕ್ಸ್‌ನ ಮ್ಯಾಜಿಸ್ಟ್ರೇಟರ್‌ಗಳು ಮತ್ತು ಲೆಫ್ಟೆನಂಟ್-ಅಧಿಕಾರಗಳನ್ನು ತೆಗೆದುಹಾಕಿತು. ಮಿಡ್ಲ್‌ಸೆಕ್ಸ್‌ನ ಉಳಿದ ಎಲ್ಲಾ ಭಾಗಗಳು ೧೯೬೫ರಲ್ಲಿ ಗ್ರೇಟರ್ ಲಂಡನ್‌ನ ಭಾಗವಾದವು ಹಾಗೂ ಬಾರ್ನೆಟ್ (ಭಾಗಶಃ ಮಾತ್ರ), ಬ್ರೆಂಟ್, ಈಲಿಂಗ್, ಎನ್ಫೀಲ್ಡ್, ಹ್ಯಾರಿಂಗೆ, ಹ್ಯಾರೊ, ಹಿಲ್ಲಿಂಗ್ಡನ್, ಹಾನ್ಸ್ಲೊ ಮತ್ತು ಥೇಮ್ಸ್‌ನ ಮೇಲಿನ ರಿಚ್ಮಂಡ್ (ಭಾಗಶಃ ಮಾತ್ರ) ಮೊದಲಾದ ಹೊಸ ಹೊರಗಿನ ಲಂಡನ್ ಬರೋಗಳಾಗಿ ರೂಪುಗೊಂಡವು.[೪೩] ಉಳಿದ ಪ್ರದೇಶಗಳೆಂದರೆ ಪಾಟರ್ಸ್ ಬಾರ್ ಅರ್ಬನ್ ಡಿಸ್ಟ್ರಿಕ್ಟ್, ಇದು ಹರ್ಟ್‌ಫೋರ್ಡ್ಶೈರ್‌ನ ಭಾಗವಾಯಿತು, ಸನ್‌ಬರಿ-ಆನ್-ಥೇಮ್ಸ್ ಅರ್ಬನ್ ಡಿಸ್ಟ್ರಿಕ್ಟ್ ಮತ್ತು ಸ್ಟೈನ್ಸ್ ಅರ್ಬನ್ ಡಿಸ್ಟ್ರಿಕ್ಟ್, ಇವು ಸುರ್ರೆಯ ಭಾಗವಾದವು.[೧೦] ಬದಲಾವಣೆಗಳ ನಂತರ, ಮಿಡ್ಲ್‌ಸೆಕ್ಸ್‌ಗೆ ಸಂಬಂಧಿಸಿದ ಪಾರ್ಲಿಮೆಂಟ್‌ನ ಸ್ಥಳೀಯ ಕಾಯಿದೆಗಳು ಮುಂದೆ ಒಂಭತ್ತು ವಾಯವ್ಯ ಲಂಡನ್ ಬರೋಗಳ ಸಮಗ್ರತೆಯ ಬಗ್ಗೆ ಗಮನ ಹರಿಸಿದವು.[೪೪] ೧೯೭೪ರಲ್ಲಿ, ಹರ್ಟ್‌ಫೋರ್ಡ್ಶೈರ್ ಮತ್ತು ಸುರ್ರೆಗೆ ವರ್ಗಾಯಿಸಿದ ಮೂರು ಅರ್ಬನ್ ಡಿಸ್ಟ್ರಿಕ್ಟ್‌ಗಳನ್ನು ರದ್ದುಗೊಳಿಸಲಾಯಿತು ಹಾಗೂ ಅವು ಅನುಕ್ರಮವಾಗಿ ಹರ್ಟ್ಸ್‌ಮಿಯರ್ (ಭಾಗಶಃ ಮಾತ್ರ) ಮತ್ತು ಸ್ಪೆಲ್ತೋರ್ನೆಯ ಡಿಸ್ಟ್ರಿಕ್ಟ್‌ಗಳಾದವು.[೪೫] ೧೯೯೫ರಲ್ಲಿ ಪೋಯ್ಲೆ ಹಳ್ಳಿಯನ್ನು ಸ್ಪೆಲ್ತೋರ್ನೆಯಿಂದ ಸ್ಲೌಘ್‌ನ ಬರ್ಕ್ಶೈರ್ ಬರೋಗೆ ವರ್ಗಾಯಿಸಲಾಯಿತು.[೪೬] ಇದಕ್ಕೆ ಹೆಚ್ಚುವರಿಯಾಗಿ, ೧೯೬೫ರಿಂದ ಗ್ರೇಟರ್ ಲಂಡನ್‌ನ ಪಶ್ಚಿಮ ಮತ್ತು ಉತ್ತರದ ಗಡಿಪ್ರದೇಶಗಳು ಗಮನಾರ್ಹ ಸಂಖ್ಯೆಯ ಸಣ್ಣ ಬದಲಾವಣೆಗಳಿಗೆ ಒಳಗಾದವು.[೪೭][೪೮]

ಭೂವಿವರಣೆ ಬದಲಾಯಿಸಿ

ಈ ಕೌಂಟಿಯು ಲಂಡನ್ ಬೇಸಿನ್‌ ವ್ಯಾಪ್ತಿಯೊಳಗೆ ಬರುತ್ತದೆ[೪೯] ಮತ್ತು ಇದರ ಹೆಚ್ಚು ಗಮನಾರ್ಹ ವೈಶಿಷ್ಟ್ಯವೆಂದರೆ ಥೇಮ್ಸ್ ನದಿ, ಇದು ದಕ್ಷಿಣದ ಗಡಿಯಾಗಿ ರೂಪುಗೊಂಡಿದೆ. ಲಿಯಾ ನದಿ ಮತ್ತು ಕೋಲ್ನೆ ನದಿಗಳು ಇದಕ್ಕೆ ಪೂರ್ವ ಮತ್ತು ಪಶ್ಚಿಮದಲ್ಲಿ ನೈಸರ್ಗಿಕ ಗಡಿರೇಖೆಗಳಾಗಿವೆ. ಈ ಕೌಂಟಿಯ ನೈಋತ್ಯದಲ್ಲಿ ಥೇಮ್ಸ್ ನದಿಯು ಸಾಕಷ್ಟು ಡೊಂಕುಡೊಂಕಾಗಿ ಹರಿದು, "ಉತ್ತರದ ತೀರ"ಕ್ಕಿಂತ "ಮಿಡ್ಲ್‌ಸೆಕ್ಸ್‌ ತೀರ"ವನ್ನು ಹೆಚ್ಚು ವರ್ಣನಾತ್ಮಕವಾಗಿ ನಿಖರವಾಗಿಸಿದೆ; ಇದು ದೋಣಿ ಪಂದ್ಯದ ಸಂದರ್ಭದಲ್ಲಿ ಬಳಸಲ್ಪಡುವ ಒಂದು ಭಿನ್ನತೆಯಾಗಿದೆ. ಉತ್ತರದಲ್ಲಿ ಇದರ ಗಡಿಯು ಬಾರ್ನೆಟ್ ಕಣಿವೆಯಿಂದ ಬೇರ್ಪಟ್ಟ ಬೆಟ್ಟಗಳ ಏಣು ಮತ್ತು ಹರ್ಟ್‌ಫೋರ್ಡ್ಶೈರ್‌ನ ದೀರ್ಘವಾದ ಮುಂಚಾಚಿರುವಿಕೆಯಿಂದ ರೂಪುಗೊಂಡಿದೆ.[೫೦] ಈ ಕೌಂಟಿಯು ದಟ್ಟ ಕಾಡುಗಳಿಂದ ಕೂಡಿತ್ತು[೪೯] ಮತ್ತು ಇದರ ಹೆಚ್ಚಿನ ಭಾಗವು ಪುರಾತನ ಮಿಡ್ಲ್‌ಸೆಕ್ಸ್ ಅರಣ್ಯದಿಂದ ಆವರಿಸಲ್ಪಟ್ಟಿತ್ತು. ಇದರ ಅತ್ಯಂತ ಎತ್ತರದ ಸ್ಥಳವೆಂದರೆ 502 feet (153 m) ಎತ್ತರದಲ್ಲಿರುವ ಬುಶೆ ಹೀತ್‌ನ ಹೈ ರೋಡ್.[೫೧] ಇದು ಈಗ ಲಂಡನ್‌ನಲ್ಲೇ ಅತ್ಯಂತ ಎತ್ತರ ಕೇಂದ್ರವಾಗಿದೆ.[೫೨]

ಕೊಡುಗೆ ಬದಲಾಯಿಸಿ

ಮಿಡ್ಲ್‌ಸೆಕ್ಸ್‌ ಅಲ್ಲಿರುವ ಸಂಸ್ಥೆಗಳ ಹೆಸರುಗಳಿಂದ ಬಳಸಲ್ಪಡುತ್ತದೆ, ಉದಾಹರಣೆಗಾಗಿ, ಮಿಡ್ಲ್‌ಸೆಕ್ಸ್‌ ಕೌಂಟಿ ಕ್ರಿಕೆಟ್ ಕ್ಲಬ್,[೫೩] ಮಿಡ್ಲ್‌ಸೆಕ್ಸ್‌ ಕ್ರಿಕೆಟ್ ಮಂಡಳಿ ಮತ್ತು ಮಿಡ್ಲ್‌ಸೆಕ್ಸ್‌ ವಿಶ್ವವಿದ್ಯಾನಿಲಯ.[೫೪] ಇಲ್ಲಿ ಒಂದು ಮಿಡ್ಲ್‌ಸೆಕ್ಸ್‌ ಕೌಂಟಿ ಪುಟ್ಬಾಲ್ ಸಂಸ್ಥೆಯಿದೆ ಹಾಗೂ ಸ್ಟೈನ್ಸ್ ಟೌನ್ ಮತ್ತು ಆಶ್ಫೋರ್ಡ್ ಟೌನ್ (ಮಿಡ್ಲ್‌ಸೆಕ್ಸ್‌) ಎಂಬ ಎರಡು ತಂಡಗಳಿವೆ, ಅವು ಈಗ ಸುರ್ರೆಯಲ್ಲಿವೆ. ಅಲ್ಲದೆ ಹರ್ಟ್‌ಫೋರ್ಡ್ಶೈರ್‌ನಲ್ಲಿ ಪಾಟರ್ಸ್ ಬಾರ್ ಟೌನ್ ಇದೆ,[೫೫] ಇದು ಮಿಡ್ಲ್‌ಸೆಕ್ಸ್‌ ಕೌಂಟಿ ಕಪ್‌ನಲ್ಲಿ ಸ್ಪರ್ಧಿಸುತ್ತದೆ.[೫೬] ಉತ್ತರ ಲಂಡನ್‌ನ ನಿವಾಸಿ ಮತ್ತು ಆಸ್ಥಾನಕವಿ ಸರ್ ಜಾನ್ ಬೆಟ್ಜ್‌ಮ್ಯಾನ್ ಮಿಡ್ಲ್‌ಸೆಕ್ಸ್‌ನ ಬಗ್ಗೆ ಮತ್ತು ನಗರದಲ್ಲಿನ ತನ್ನ ಅನುಭವದ ಬಗ್ಗೆ ಹಲವಾರು ಕವನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನವು ದೂರದರ್ಶನದ ಮೂಲಕ ಪ್ರಸಾರ ಮಾಡಿದ ಕಾವ್ಯವಾಚನ ಮೆಟ್ರೊಲ್ಯಾಂಡ್ ‌ನಲ್ಲಿ ಒಳಗೊಂಡಿದ್ದವು.[೫೭] ೨೦೦೨ರ ವ್ಯಾಪಾರ ಚಳವಳಿಯ ಭಾಗವಾಗಿ, ಸಸ್ಯ ಸಂರಕ್ಷಣಾ ಸಂಸ್ಥೆ ಪ್ಲ್ಯಾಂಟ್‌ಲೈಫ್ ಕಾಡು ಅನಿಮನಿಯನ್ನು ಕೌಂಟಿಯ ಹೂವಾಗಿ ಆರಿಸಿತು. ೨೦೦೩ರಲ್ಲಿ, ಇಬ್ಬರು ಸಹಿಹಾಕಿದ ಅರ್ಲಿ ಡೇ ಮೋಶನ್ ಮೇ ೧೬ ಅನ್ನು ಅಲ್ಬುವೆರಾ ಕದನದ ವಾರ್ಷಿಕ ದಿನವಾಗಿ ಸೂಚಿಸಿತು ಹಾಗೂ ಇತ್ತೀಚೆಗೆ ಈ ದಿನದಂದು ಈ ಕದನದಲ್ಲಿನ ಮಿಡ್ಲ್‌ಸೆಕ್ಸ್‌ ರೆಜಿಮೆಂಟುಗಳ('ಡೈ-ಹಾರ್ಡ್‌ಗಳು') ಧೀರ ಸಾಹಸಗಳನ್ನು ನೆನಪಿಸುವ ಮಿಡ್ಲ್‌ಸೆಕ್ಸ್‌ ದಿನ ವಾಗಿ ಆಚರಿಸಲಾಗುತ್ತಿದೆ. ಈ ಕಲ್ಪನೆಯನ್ನು ಈ ಐತಿಹಾಸಿಕ ಕೌಂಟಿಯನ್ನು ನೆನೆಪಿಸಿಕೊಳ್ಳಲು ಮತ್ತು ಆಚರಿಸಲು ಮಾಡಲಾಗಿದೆ.[೫೮] ೧೯೬೫ರಲ್ಲಿ ರಚನೆಯಾದ ದಿನದಂದು ಗ್ರೇಟರ್ ಲಂಡನ್ ನ್ಯಾಯ ನಿರ್ವಹಣೆಗಾಗಿ ಐದು ಕಮೀಷನ್ ಪ್ರದೇಶಗಳಾಗಿ ವಿಭಾಗಗೊಂಡಿತು. ಒಂದಕ್ಕೆ "ಮಿಡ್ಲ್‌ಸೆಕ್ಸ್‌" ಎಂದು ಹೆಸರಿಡಲಾಯಿತು ಮತ್ತು ಇದು ಬಾರ್ನೆಟ್, ಬ್ರೆಂಟ್, ಈಲಿಂಗ್, ಎನ್ಫೀಲ್ಡ್, ಹ್ಯಾರಿಂಗಿ, ಹ್ಯಾರೊ, ಹಿಲ್ಲಿಂಗ್ಡನ್ ಮತ್ತು ಹೌನ್‌ಸ್ಲೊ ಮೊದಲಾದ ಬರೋಗಳನ್ನು ಒಳಗೊಂಡಿತ್ತು.[೫೯] ಇದನ್ನು ೨೦೦೩ರ ಜುಲೈ ೧ರಂದು ರದ್ದುಗೊಳಿಸಲಾಯಿತು.[೬೦]

ಹಿಂದಿನ ಪೋಸ್ಟಲ್ ಕೌಂಟಿ ಬದಲಾಯಿಸಿ

ಮಿಡ್ಲ್‌ಸೆಕ್ಸ್‌ಅನ್ನು (ಮಿಡ್‌ಎಕ್ಸ್ ಎಂದು ಸಣ್ಣದಾಗಿ ಹೇಳಲಾಗುತ್ತದೆ)[೬೧][೬೨] ಹಿಂದಿನ ಪೋಸ್ಟಲ್ ಕೌಂಟಿ ಎಂದೂ ಕರೆಯಲಾಗುತ್ತದೆ; ಅಂಚೆಯ ವಿಳಾಸವು ೧೯೯೬ರವರೆಗೆ ವಾಡಿಕೆಯ ಬಳಕೆಯಲ್ಲಿತ್ತು ಮತ್ತು ಈಗ ಒಂದು ಐಚ್ಛಿಕ ಘಟಕವಾಗಿದೆ.[೧೧] ಪೋಸ್ಟಲ್ ಕೌಂಟಿಯು ೧೯೬೫ರ ನಂತರವೂ ಉಳಿದುಕೊಂಡಿತು ಏಕೆಂದರೆ ರಾಯಲ್ ಮೇಲ್ ಕೌಂಟಿಯ ಗಡಿಪ್ರದೇಶಗಳಿಗೆ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲು ಅಸಮರ್ಥವಾಗಿತ್ತು ಮತ್ತು ಗ್ರೇಟರ್ ಲಂಡನ್ ಅನ್ನು ಪೋಸ್ಟಲ್ ಕೌಂಟಿಯಾಗಿ ಮಾರ್ಪಡಿಸಲು ಅಸಾಧ್ಯವಾಗಿತ್ತು.[೬೩] ಆದರೆ, ಹೆಚ್ಚಿನ ಒಳಗಿನ ಮಿಡ್ಲ್‌ಸೆಕ್ಸ್‌ (ವಿಲ್ಲೆಸ್ಡನ್, ಹಾರ್ನ್ಸೆ ಇತ್ಯಾದಿ)[೬೪] ಪ್ರದೇಶಗಳು ಲಂಡನ್ ಪೋಸ್ಟಲ್ ಡಿಸ್ಟ್ರಿಕ್ಟ್‌ನ ವ್ಯಾಪ್ತಿಯೊಳಗಿದ್ದವು, ಅಲ್ಲಿ ಅದಾಗಲೇ ವಿಳಾಸಗಳು "ಲಂಡನ್"ಅನ್ನು ಒಳಗೊಂಡಿದ್ದವು ಮತ್ತು ಕೌಂಟಿಯನ್ನು ಒಳಗೊಂಡಿರಲಿಲ್ಲ. ಹರ್ಟ್‌ಫೋರ್ಡ್ಶೈರ್‌ಗೆ ಪಾಟರ್ಸ್ ಬಾರ್‌ನ ವರ್ಗಾವಣೆಯನ್ನು ರಾಯಲ್ ಮೇಲ್ ಅಂಗೀಕರಿಸಿತು, ಆದರೆ ಸುರ್ರೆಗೆ ಸ್ಟೈನ್ಸ್ ಮತ್ತು ಸನ್‌ಬರಿಯ ವರ್ಗಾವಣೆಗಳನ್ನು ಒಪ್ಪಲಿಲ್ಲ. ಉಳಿದ ಪೋಸ್ಟಲ್ ಕೌಂಟಿಯು ಎರಡು ಸಂಪರ್ಕವಿರದ ಪ್ರದೇಶಗಳನ್ನು ಒಳಗೊಂಡಿದೆ, ಇದು 6 miles (9.7 km) ದೂರವಿದೆ (ಎನ್ಫೀಲ್ಡ್ ಮತ್ತು ಉಳಿದವುಗಳಿಂದ)[೬೧] ಮತ್ತು ಈ ಕೆಳಗಿನ ಅಂಚೆ-ನಗರಗಳನ್ನು ಒಳಗೊಂಡಿದೆ:

ಅಂಚೆ-ನಗರಗಳು Lua error in ಮಾಡ್ಯೂಲ್:Location_map/multi at line 27: Unable to find the specified location map definition: "Module:Location map/data/Greater London" does not exist.
  EN (ಭಾಗಶಃ) ಎನ್ಫೀಲ್ಡ್
  HA ಎಡ್ಗ್‌ವೇರ್ • ಹ್ಯಾರೋ • ನಾರ್ತ್‌ವುಡ್ • ಪಿನ್ನರ್ • ರುಯ್‌ಸ್ಲಿಪ್ • ಸ್ಟ್ಯಾನ್ಮೋರ್• ವೆಂಬ್ಲಿ
  TW (ಭಾಗಶಃ) ಆಶ್ಫೋರ್ಡ್ • ಬ್ರೆಂಟ್ಫೋರ್ಡ್ • ಫೆಲ್ತ್ಯಾಮ್ • ಹ್ಯಾಂಪ್ಟನ್ • ಹಾನ್ಸಸ್ಲೊ† • ಐಲ್‌ವರ್ತ್• ಶೆಪ್ಪರ್ಟನ್ • ಸ್ಟೈನ್ಸ್ • ಸನ್‌ಬರಿ-ಆನ್-ಥೇಮ್ಸ್ • ಟೆಡ್ಡಿಂಗ್ಟನ್ • ಟ್ವಿಕನ್ಹ್ಯಾಮ್†
  UB ಗ್ರೀನ್‌ಫೋರ್ಡ್ • ಹ್ಯಾಯ್ಸ್ • ನಾರ್ತ್‌ಹೋಲ್ಟ್ • ಸೌತ್‌ಹಾಲ್ • ಉಕ್ಸ್‌ಬ್ರಿಡ್ಜ್ • ವೆಸ್ಟ್ ಡ್ರಾಯ್ಟನ್

† = ಪೋಸ್ಟಲ್ ಕೌಂಟಿಯ ಅಗತ್ಯವಿರಲಿಲ್ಲ.

ಪೋಸ್ಟಲ್ ಕೌಂಟಿಯು ಅನೇಕ ಅಸಂಗತಿಗಳನ್ನು ಒಳಗೊಂಡಿತ್ತು, ಇದರ ಅಂಚೆ-ನಗರಗಳು ಹತ್ತಿರದ ಕೌಂಟಿಗಳಲ್ಲಿ ಅತಿಕ್ರಮಿಸಿದ್ದವು, ಉದಾ, ಬಕಿಂಗ್ಹ್ಯಾಮ್ಶೈರ್‌ನ ದೇನ್ಹ್ಯಾಮ್ ಗ್ರಾಮವು ಉಕ್ಸ್‌ಬ್ರಿಡ್ಜ್‌ ಅಂಚೆ-ನಗರದಲ್ಲಿ ಒಳಗೊಂಡಿತ್ತು ಮತ್ತು ಆದ್ದರಿಂದ ಇದು ಮಿಡ್ಲ್‌ಸೆಕ್ಸ್‌ ಪೋಸ್ಟಲ್ ಕೌಂಟಿಯೊಳಗೆ ಇತ್ತು; ಇದಕ್ಕೆ ವಿರುದ್ಧವಾಗಿ, ಹ್ಯಾಂಪ್ಟನ್ ವಿಕ್ ಮಿಡ್ಲ್‌ಸೆಕ್ಸ್‌ ಪೋಸ್ಟಲ್ ಕೌಂಟಿಯೊಳಗೆ ಕಂಡುಬರಲಿಲ್ಲ ಏಕೆಂದರೆ ಇದು ಸುರ್ರೆಯೊಂದಿಗೆ ಸಂಬಂಧಿಸಿದ ಅಂಚೆ-ನಗರಗಳಿಂದೆ ಸೇವೆಯನ್ನು ಪಡೆಯುತ್ತಿತ್ತು.[೬೫] ಇಲ್ಲಿ ಹ್ಯಾಂಪ್ಟನ್ ಕೋರ್ಟ್ ಪ್ಯಾಲೇಸ್ ಇದೆ, ಇದು ಸುರ್ರೆಯ ಪೂರ್ವ ಮೋಲೆಸೆಯಲ್ಲಿದೆ ಎಂದು ಒಂದು ಪೋಸ್ಟಲ್(ಅಂಚೆಯ) ವಿಳಾಸವು ಸೂಚಿಸುತ್ತದೆ.[೬೬] ವ್ರೇಸ್‌ಬರಿ, ಬರ್ಕ್ಶೈರ್ ಮತ್ತು ಸುರ್ರೆಯ ಎಗ್ಹ್ಯಾಮ್ ಹೈತ್ ಮೊದಲಾದವು ಸ್ಟೇನ್ಸ್ ಅಂಚೆ-ನಗರದಲ್ಲಿ ಬರುತ್ತವೆ, ಆದ್ದರಿಂದ ಅವು ಮಿಡ್ಲ್‌ಸೆಕ್ಸ್‌ ಪೋಸ್ಟಲ್ ಕೌಂಟಿಯಲ್ಲಿ ಒಳಗೊಂಡಿದ್ದವು.

ಉಲ್ಲೇಖಗಳು‌ ಬದಲಾಯಿಸಿ

ಅಡಿ ಟಿಪ್ಪಣಿಗಳು
  1. ೧.೦ ೧.೧ ೧.೨ ೧.೩ "Table of population, 1801-1901". A History of the County of Middlesex: Volume 22. 1911. Archived from the original on 2011-05-14. Retrieved 2008-02-20.
  2. ೨.೦ ೨.೧ ೨.೨ ೨.೩ GB Historical GIS / University of Portsmouth, Middlesex population (area and density). Retrieved on 2008-02-20.
  3. GB Historical GIS / University of Portsmouth, 1831 Census population. Retrieved on 2008-02-20.
  4. ೪.೦ ೪.೧ ೪.೨ ೪.೩ ದಿ ಪ್ರೊಸೀಡಿಂಗ್ಸ್ ಆಫ್ ದಿ ಓಲ್ಡ್ ಬೈಲಿ - ರೂರಲ್ ಮಿಡ್ಲ್‌ಸೆಕ್ಸ್‌ Archived 2007-10-26 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೮ ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  5. ೫.೦ ೫.೧ ೫.೨ ಸೇಂಟ್ ಎ., ಪಾಲಿಟಿಕ್ಸ್ ಆಂಡ್ ದಿ ಪೀಪಲ್ ಆಫ್ ಲಂಡನ್: ದಿ ಲಂಡನ್ ಕೌಂಟಿ ಕೌನ್ಸಿಲ್ (೧೮೮೯-೧೯೬೫) , (೧೯೮೯)
  6. ೬.೦ ೬.೧ ಬಾರ್ಲೊ, I., ಮೆಟ್ರೋಪಾಲಿಟನ್ ಗವರ್ನ್ಮೆಂಟ್ , (೧೯೯೧)
  7. ೭.೦ ೭.೧ ೭.೨ ವೋಲ್ಮರ್, ಸಿ., ದಿ ಸಬ್‌ಟೆರ್ರಾನಿಯನ್ ರೈಲ್ವೆ , (೨೦೦೪)
  8. ೮.೦ ೮.೧ GB Historical GIS / University of Portsmouth, County of London population. Retrieved on 2008-02-20.
  9. ೯.೦ ೯.೧ ೯.೨ GB Historical GIS / University of Portsmouth, Census 1961: Middlesex population. Retrieved on 2008-02-20.
  10. ೧೦.೦ ೧೦.೧ ೧೦.೨ GB Historical GIS / University of Portsmouth, Middlesex. Retrieved on 2008-02-20. Archived 2012-02-01 ವೇಬ್ಯಾಕ್ ಮೆಷಿನ್ ನಲ್ಲಿ. "ಆರ್ಕೈವ್ ನಕಲು". Archived from the original on 2012-02-01. Retrieved 2011-04-25.
  11. ೧೧.೦ ೧೧.೧ Royal Mail 2004, p. 9
  12. Mills 2001, p. 151
  13. "The hundred of Isleworth". A History of the County of Middlesex: Volume 3. 1962. Archived from the original on 2011-05-25. Retrieved 2008-02-20.
  14. GB Historical GIS / University of Portsmouth, Ossulstone hundred. Retrieved on 2008-02-20. Archived 2012-12-24 at Archive.is "ಆರ್ಕೈವ್ ನಕಲು". Archived from the original on 2012-12-24. Retrieved 2011-04-25.
  15. ೧೫.೦ ೧೫.೧ ೧೫.೨ ಎನ್‌ಸೈಕ್ಲೊಪೀಡಿಯಾ ಬ್ರಿಟಾನಿಕಾ, ೧೯೧೧ ಆವೃತ್ತಿ
  16. ೧೬.೦ ೧೬.೧ ೧೬.೨ ೧೬.೩ Greater London Group (July, 1959). Memorandum of Evidence to The Royal Commission on Local Government in Greater London. London School of Economics. {{cite book}}: Check date values in: |date= (help)
  17. ಆರ್ಡರ್ ಇನ್ ಕೌನ್ಸಿಲ್ ಎನ್ಲಾರ್ಜಿಂಗ್ ದಿ ಮೆಟ್ರೋಪಾಲಿಟನ್ ಪೋಲೀಸ್ ಡಿಸ್ಟ್ರಿಕ್ಟ್ (SI ೧೮೪೦ ೫೦೦೧)
  18. ಲೋಕಲ್ ಗವರ್ನ್ಮೆಂಟ್ ಏರಿಯಾಸ್ ೧೮೩೪ -೧೯೪೫ , ವಿ ಡಿ ಲಿಪ್‌ಮ್ಯಾನ್, ಆಕ್ಸ್‌ಫರ್ಡ್, ೧೯೪೯
  19. ಜೋಸೆಫ್ ಫ್ಲೆಟ್ಚರ್, ದಿ ಮೆಟ್ರೊಪೊಲಿಸ್; ಇಟ್ಸ್ ಬೌಂಡರೀಸ್, ಎಕ್ಸ್‌ಟೆಂಟ್ ಆಂಡಿ ಡಿವಿಜನ್ಸ್ ಫಾರ್ ಲೋಕಲ್ ಗವರ್ನ್ಮೆಂಟ್ - ಜರ್ನಲ್ ಆಫ್ ದಿ ಸ್ಟ್ಯಾಟಿಸ್ಟಿಕಲ್ ಸೊಸೈಟಿ ಆಫ್ ಲಂಡನ್ , ಸಂಪುಟ ೭, ಸಂಖ್ಯೆ ೨. (ಜೂನ್ ೧೮೪೪), ಪುಟಗಳು ೧೦೩-೧೪೩.
  20. ಲಂಡನ್ ಮೆಟ್ರೋಪಾಲಿಟನ್ ಆರ್ಕೀವ್ಸ್ - ಎ ಬ್ರೀಫ್ ಗೈಡ್ ಟು ದಿ ಮಿಡ್ಲ್‌ಸೆಕ್ಸ್‌ ಸೆಷನ್ಸ್ ರೆಕಾರ್ಡ್ಸ್, (೨೦೦೯). ೨೦೦೯ರ ಜುಲೈ ೨೬ರಂದು ಪುನಃಸಂಪಾದಿಸಲಾಯಿತು.
  21. ರಾಯ್‌ಸ್ಟನ್ ಲ್ಯಾಂಬರ್ಟ್, ಸೆಂಟ್ರಲ್ ಆಂಡ್ ಲೋಕಲ್ ರಿಲೇಶನ್ಸ್ ಇನ್ ಮಿಡ್-ವಿಕ್ಟೋರಿಯನ್ ಇಂಗ್ಲೆಂಡ್: ದಿ ಲೋಕಲ್ ಗವರ್ನ್ಮೆಂಟ್ ಆಕ್ಟ್ ಆಫೀಸ್, ೧೮೫೮-೭೧ , ವಿಕ್ಟೋರಿಯನ್ ಸ್ಟಡೀಸ್ , ಸಂಪುಟ. ೬, ಸಂಖ್ಯೆ ೨. (ಡಿಸೆಂಬರ್, ೧೯೬೨), ಪುಟಗಳು ೧೨೧-೧೫೦.
  22. GB Historical GIS / University of Portsmouth, Monken Hadley. Retrieved on 2008-02-20. Archived 2022-06-05 ವೇಬ್ಯಾಕ್ ಮೆಷಿನ್ ನಲ್ಲಿ. "ಆರ್ಕೈವ್ ನಕಲು". Archived from the original on 2022-06-05. Retrieved 2022-08-23.{{cite web}}: CS1 maint: bot: original URL status unknown (link)
  23. ಫ್ರೆಡೆರಿಕ್ ಯಂಗ್ಸ್, ಗೈಡ್ ಟು ದಿ ಲೋಕಲ್ ಅಡ್ಮಿನಿಸ್ಟ್ರೇಟಿವ್ ಯುನಿಟ್ಸ್ ಆಫ್ ಇಂಗ್ಲೆಂಡ್ , ಸಂಪುಟ I : ದಕ್ಷಿಣ ಇಂಗ್ಲೆಂಡ್, ಲಂಡನ್, ೧೯೭೯
  24. ರಾಯ್‌ಸ್ಟನ್, ಜೆ, ರಿವಿಸಿಟಿಂಗ್ ದಿ ಮೆಟ್ರೊ-ಲ್ಯಾಂಡ್ ರೂಟ್ , ಹ್ಯಾರೊ ಟೈಮ್ಸ್. ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  25. ರೀಡ್, ಜೆ, ಲಂಡನ್ ಟ್ರ್ಯಾಮ್‌ವೇಸ್ , (೧೯೯೭)
  26. ಆಫೀಸ್ ಆಫ್ ಪಬ್ಲಿಕ್ ಸೆಕ್ಟರ್ ಇನ್ಫರ್ಮೇಶನ್ - ಲಂಡನ್ ಪ್ಯಾಸೆಂಜರ್ ಟ್ರಾನ್ಸ್‌ಪೋರ್ಟ್ ಆಕ್ಟ್ 1933 (ಆಸ್ ಅಮೆಂಡೆಡ್)[ಶಾಶ್ವತವಾಗಿ ಮಡಿದ ಕೊಂಡಿ] . ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  27. ರಾಯಲ್ ಏರ್ ಫೋರ್ಸ್ - ಬ್ಯಾಟಲ್ ಆಫ್ ಬ್ರಿಟನ್ ಕಾಂಪೇನ್ ಡೈರಿ. ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  28. "Ealing and Brentford: Growth of Brentford". A History of the County of Middlesex: Volume 7. 1982. Archived from the original on 2012-10-25. Retrieved 2008-02-20.
  29. "Brentford". The Environs of London: volume 2: County of Middlesex. 1795. Archived from the original on 2012-10-25. Retrieved 2008-02-20.
  30. ಡೋಹರ್ಟಿ, ಎಫ್, ದಿ ಆಂಗ್ಲೊ ಸ್ಯಾಕ್ಸನ್ ಬ್ರೋಕನ್ ಬ್ಯಾಕ್ ಸಿಯಾಕ್ಸ್ Archived 2011-03-12 ವೇಬ್ಯಾಕ್ ಮೆಷಿನ್ ನಲ್ಲಿ. . ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  31. ಆನ್‌ಲೈನ್ ಎಟಿಮೋಲಜಿ ಡಿಕ್ಷನರಿ - ಸ್ಯಾಕ್ಸನ್. ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  32. ಆರ್ಮೋರಿಯಲ್ ಬಿಯರಿಂಗ್ಸ್ ಆಫ್ ಮಿಡ್ಲ್‌ಸೆಕ್ಸ್‌ , ದಿ ಟೈಮ್ಸ್. ೭ ನವೆಂಬರ್ ೧೯೧೦.
  33. ದಿ ಬುಕ್ ಆಫ್ ಪಬ್ಲಿಕ್ ಆರ್ಮ್ಸ್ , ಎ. ಸಿ. ಫಾಕ್ಸ್-ಡೇವಿಸ್, ೨ನೇ ಆವೃತ್ತಿ, ಲಂಡನ್, ೧೯೧೫
  34. ಸಿವಿಕ್ ಹೆರಾಲ್ಡ್ರಿ ಆಫ್ ಇಂಗ್ಲೆಂಡ್ ಆಂಡ್ ವೇಲ್ಸ್ , ಡಬ್ಲ್ಯೂ.ಸಿ. ಸ್ಕಾಟ್ ಗಿಲ್ಸ್, ೨ನೇ ಆವೃತ್ತಿ, ಲಂಡನ್, ೧೯೫೩
  35. ಸಿವಿಕ್ ಹೆರಾಲ್ಡ್ರಿ ಆಫ್ ಇಂಗ್ಲೆಂಡ್ ಆಂಡ್ ವೇಲ್ಸ್ - ಎಸ್ಸೆಕ್ಸ್ ಕೌಂಟಿ ಕೌನ್ಸಿಲ್ Archived 2007-02-03 ವೇಬ್ಯಾಕ್ ಮೆಷಿನ್ ನಲ್ಲಿ. . ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  36. ಸಿವಿಕ್ ಹೆರಾಲ್ಡ್ರಿ ಆಫ್ ಇಂಗ್ಲೆಂಡ್ ಆಂಡ್ ವೇಲ್ಸ್ - ಮಿಡ್ಲ್‌ಸೆಕ್ಸ್‌ (ಆಬ್ಸೊಲೀಟಿ) . ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  37. ಸಿ ಡಬ್ಲ್ಯೂ ಸ್ಕಾಟ್-ಗಿಲ್ಸ್, ರಾಯಲ್ ಆಂಡ್ ಕಿಂಡ್ರೆಡ್ ಎಂಬ್ಲೆಮ್ಸ್ , ಸಿವಿಕ್ ಹೆರಾಲ್ಡ್ರಿ ಆಫ್ ಇಂಗ್ಲೆಂಡ್ ಆಂಡ್ ವೇಲ್ಸ್ , ೨ನೇ ಆವೃತ್ತಿ, ಲಂಡನ್, ೧೯೫೩, ಪುಟ ೧೧
  38. ಸಿವಿಕ್ ಹೆರಾಲ್ಡ್ರಿ ಆಫ್ ಇಂಗ್ಲೆಂಡ್ ಆಂಡ್ ವೇಲ್ಸ್ - ಗ್ರೇಟರ್ ಲಂಡನ್ ಕೌನ್ಸಿಲ್ . ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  39. ಸಿವಿಕ್ ಹೆರಾಲ್ಡ್ರಿ ಆಫ್ ಇಂಗ್ಲೆಂಡ್ ಆಂಡ್ ವೇಲ್ಸ್ - ಸ್ಪೆಲ್ತೋರ್ನೆ ಬರೋ ಕೌನ್ಸಿಲ್ . ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  40. ಸಿವಿಕ್ ಹೆರಾಲ್ಡ್ರಿ ಆಫ್ ಇಂಗ್ಲೆಂಡ್ ಆಂಡ್ ವೇಲ್ಸ್ - ಗ್ರೇಟರ್ ಲಂಡನ್ . ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  41. GB Historical GIS / University of Portsmouth, Middlesex population. Retrieved on 2008-02-20.
  42. ಲಂಡನ್ ಗವರ್ನ್ಮೆಂಟ್ ಆಕ್ಟ್ ೧೯೬೩, ಸೆಕ್ಷನ್ ೩: (೧) ೧೯೬೫ರ ಎಪ್ರಿಲ್ ೧ರ ಪ್ರಕಾರ—
    (a) ಗ್ರೇಟರ್ ಲಂಡನ್‌ನ ಯಾವುದೇ ಭಾಗವು ಯಾವುದೇ ಆಡಳಿತಾತ್ಮಕ ಕೌಂಟಿ, ಕೌಂಟಿ ಡಿಸ್ಟ್ರಿಕ್ಟ್ ಅಥವಾ ಪ್ಯಾರಿಷ್‌ನ ಭಾಗವಾಗುತ್ತದೆ;
    (b) ಕೆಳಗಿನ ಆಡಳಿತಾತ್ಮಕ ಪ್ರದೇಶಗಳು ಮತ್ತು ಅವುಗಳ ಕೌನ್ಸಿಲ್‌ಗಳು (ಮತ್ತು, ಬರೋ ಆಗಿದ್ದರೆ ಅದರ ಮುನ್ಸಿಪಾಲ್ ಕಾರ್ಪೊರೇಶನ್) ಕೊನೆಗೊಳ್ಳುತ್ತವೆ - ಲಂಡನ್ ಮತ್ತು ಮಿಡ್ಲ್‌ಸೆಕ್ಸ್‌ನ ಕೌಂಟಿಗಳು, ಮೆಟ್ರೋಪಾಲಿಟನ್ ಬರೋಗಳು ಮತ್ತು ಯಾವುದೇ ಅಸ್ತಿತ್ವದಲ್ಲಿರುವ ಕೌಂಟಿ ಬರೋ, ಕೌಂಟಿ ಡಿಸ್ಟ್ರಿಕ್ಟ್ ಅಥವಾ ಪ್ಯಾರಿಷ್, ಸಂಪೂರ್ಣವಾಗಿ ಗ್ರೇಟರ್ ಲಂಡನ್‌ನೊಳಗೆ ಬರುವ ಪ್ರದೇಶ;
    (c) ಪಾಟರ್ಸ್ ಬಾರ್‌ನ ಅರ್ಬನ್ ಡಿಸ್ಟ್ರಿಕ್ಟ್ ಹರ್ಟ್‌ಫೋರ್ಡ್‌ಶೈರ್ ಕೌಂಟಿಯ ಭಾಗವಾಗುತ್ತದೆ;
    (d) ಸ್ಟೈನ್ಸ್ ಮತ್ತು ಸನ್‌ಬರಿ-ಆನ್-ಥೇಮ್ಸ್‌ನ ಅರ್ಬನ್ ಡಿಸ್ಟ್ರಿಕ್ಟ್‌ಗಳು ಸುರ್ರೆ ಕೌಂಟಿಯ ಭಾಗವಾಗುತ್ತವೆ.
    ಸೆಕ್ಷನ್ ೮೯: (೧) ಈ ಕಾಯಿದೆಯಲ್ಲಿ, ಅಗತ್ಯವಾಗಿರುವ ಸಂದರ್ಭವನ್ನು ಹೊರತುಪಡಿಸಿ, ಕೆಳಗಿನ ಹೊರತುಪಡಿಸಿದವು ಅನುಕ್ರಮವಾಗಿ ಕೆಳಗಿನ ಅರ್ಥಗಳನ್ನು ಹೊಂದಿವೆ, ಅಂದರೆ —
    'ಕೌಂಟಿ' ಅಂದರೆ ಒಂದು ಆಡಳಿತಾತ್ಮಕ ಕೌಂಟಿಯಾಗಿದೆ;
  43. ಆಫೀಸ್ ಆಫ್ ಪಬ್ಲಿಕ್ ಸೆಕ್ಟರ್ ಇನ್ಫರ್ಮೇಶನ್ - ಲಂಡನ್ ಗವರ್ನ್ಮೆಂಟ್ ಆಕ್ಟ್ 1963 (ಆಸ್ ಅಮೆಂಡೆಡ್). ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  44. ದಿ ಲೋಕಲ್ ಲಾ (ನಾರ್ತ್ ವೆಸ್ಟ್ ಲಂಡನ್ ಬರೋಸ್) ಆರ್ಡರ್ ೧೯೬೫ (S.I. ೧೯೬೫ No. ೫೩೩)
  45. ದಿ ಇಂಗ್ಲಿಷ್ ನಾನ್-ಮೆಟ್ರೋಪಾಲಿಟನ್ ಡಿಸ್ಟ್ರಿಕ್ಟ್ಸ್ (ಡೆಫಿನಿಶನ್) ಆರ್ಡರ್ ೧೯೭೨ (SI ೧೯೭೨/೨೦೩೮)
  46. ಆಫೀಸ್ ಆಫ್ ಪಬ್ಲಿಕ್ ಸೆಕ್ಟರ್ ಇನ್ಫರ್ಮೇಶನ್ - Berkshire, Buckinghamshire and Surrey (ಕೌಂಟಿ Boundaries) Order 1994. ೨೦೦೮ ರ ಫೆಬ್ರವರಿ ೨೨ ರಂದು ಪುನಃ ಸಂಪಾದಿಸಲಾಯಿತು.
  47. ಆಫೀಸ್ ಆಫ್ ಪಬ್ಲಿಕ್ ಸೆಕ್ಟರ್ ಇನ್ಫರ್ಮೇಶನ್ - ದಿ ಹೀತ್ರೊ ಏರ್‌ಪೋರ್ಟ್ (ಕೌಂಟಿ ಆಂಡ್ ಲಂಡನ್ ಬರೋ ಬೌಂಡರೀಸ್) ಆರ್ಡರ್ 1993. ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  48. ಆಫೀಸ್ ಆಫ್ ಪಬ್ಲಿಕ್ ಸೆಕ್ಟರ್ ಇನ್ಫರ್ಮೇಶನ್ - ದಿ ಗ್ರೇಟರ್ ಲಂಡನ್ ಆಂಡ್ ಸುರ್ರೆ (ಕೌಂಟಿ ಆಂಡ್ ಲಂಡನ್ ಬರೋ ಬೌಂಡರೀಸ್) (ಸಂಖ್ಯೆ 4) ಆರ್ಡರ್ 1993. ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  49. ೪೯.೦ ೪೯.೧ ನ್ಯಾಚುರಲ್ ಇಂಗ್ಲೆಂಡ್ - ಲಂಡನ್ ಬೇಸಿನ್ ನ್ಯೂಚುರಲ್ ಆರಿಯಾ. ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  50. "The Physique of Middlesex". A History of the County of Middlesex: Volume 1. 1969. Archived from the original on 2011-05-25. Retrieved 2008-02-20.
  51. ದಿ ಮೌಂಟೇನ್ಸ್ ಆಫ್ ಇಂಗ್ಲೆಂಡ್ ಆಂಡ್ ವೇಲ್ಸ್ - ಹಿಸ್ಟೋರಿಕ್ ಕೌಂಟಿ ಟಾಪ್ಸ್. ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  52. ದಿ ಮೌಂಟೇನ್ಸ್ ಆಫ್ ಇಂಗ್ಲೆಂಡ್ ಆಂಡ್ ವೇಲ್ಸ್ - ಲಂಡನ್ ಬರೋ ಟಾಪ್ಸ್. ೨೦೦೮ರ ಫೆಬ್ರವರಿ ೨ರಂದು ಪುನಃ ಸಂಪಾದಿಸಲಾಯಿತು.
  53. ಮಿಡ್ಲ್‌ಸೆಕ್ಸ್‌ ಕೌಂಟಿ ಕ್ರಿಕೆಟ್ ಕ್ಲಬ್. ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  54. ಮಿಡ್ಲ್‌ಸೆಕ್ಸ್‌ ಯೂನಿವರ್ಸಿಟಿ - ಎಬೌಟ್ ಅಸ್: ಅವರ್ ಹಿಸ್ಟರಿ Archived 2012-03-06 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  55. ಪಾಟರ್ಸ್ ಬಾರ್ ಟೌನ್ ಎಫ್. ಸಿ. - ಫಿಕ್ಚರ್ಸ್ Archived 2007-06-10 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  56. ಮಿಟೂ - 2006–2007 ಸೀಜನ್: ಮಿಡ್ಲ್‌ಸೆಕ್ಸ್‌ ಕೌಂಟಿ ಫುಟ್ಬಾಲ್ ಅಸೋಸಿಯೇಶನ್. ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  57. ವಿಲ್ಸನ್, ಎ., ಬೆಟ್ಜೆಮ್ಯಾನ್ , (೨೦೦೬)
  58. ರಾಂಡಲ್, ಜೆ., ಅರ್ಲಿ ಡೇ ಮೋಶನ್ 13 ಮೇ 2003 Archived 2006-07-21 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  59. ಅಡ್ಮಿನಿಸ್ಟ್ರೇಶನ್ ಆಫ್ ಜಸ್ಟಿಸ್ ಆಕ್ಟ್ ೧೯೬೪ (೧೯೬೪ C. ೪೨)
  60. ಆಫೀಸ್ ಆಪ್ ಪಬ್ಲಿಕ್ ಸೆಕ್ಟರ್ ಇನ್ಫರ್ಮೇಶನ್ - ದಿ ಕಮೀಶನ್ ಏರಿಯಾಸ್ (ಗ್ರೇಟರ್ ಲಂಡನ್) ಆರ್ಡರ್ 2003 (ಸ್ಟ್ಯಾಟ್ಯುಟರಿ ಇನ್‌ಸ್ಟ್ರುಮೆಂಟ್ 2003 ಸಂಖ್ಯೆ 640). ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  61. ೬೧.೦ ೬೧.೧ Geographers' A-Z Map Company 2008, p. 1
  62. ರಾಯಲ್ ಮೇಲ್ - PAF ಡೈಜೆಸ್ಟ್ ಇಶ್ಯೂ 6.0[ಶಾಶ್ವತವಾಗಿ ಮಡಿದ ಕೊಂಡಿ]. ೨೦೦೮ರ ಫೆಬ್ರವರಿ ೨೦ರಂದು ಮರುಸಂಪಾದಿಸಲಾಯಿತು.
  63. "G.P.O. To Keep Old Names. London Changes Too Costly". The Times. April 12, 1966.
  64. HMSO, ನೇಮ್ಸ್ ಆಫ್ ಸ್ಟ್ರೀಟ್ ಆಂಡ್ ಪ್ಲೇಸಸ್ ಇನ್ ದಿ ಲಂಡನ್ ಪೋಸ್ಟಲ್ ಏರಿಯಾ , (೧೯೩೦). ೨೦೦೮ರ ಫೆಬ್ರವರಿ ೨೦ರಂದು ಪುನಃ ಸಂಪಾದಿಸಲಾಯಿತು.
  65. Paul Waugh (29 May 2003). "Property boom fuels calls to reform 'postcode lottery'". The Independent. Retrieved 2009-11-02.[ಶಾಶ್ವತವಾಗಿ ಮಡಿದ ಕೊಂಡಿ]
  66. "Hampton Court: How to find us". Historic Royal Palaces. Retrieved 2009-11-02.
ಗ್ರಂಥಸೂಚಿ

ಬಾಹ್ಯ ಕೊಂಡಿಗಳು‌ ಬದಲಾಯಿಸಿ

51°30′N 0°25′W / 51.500°N 0.417°W / 51.500; -0.417