ಮಧುಗಿರಿ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಹೆಸರು ಅಲ್ಲಿಯ ಬೆಟ್ಟದಲ್ಲಿ ಸಿಗುತ್ತಿದ್ದ ಜೇನಿನಿಂದ (ಮಧು) ಬಂದಿದೆ. ಈ ಬೆಟ್ಟವು ಏಷಿಯಾ ಖಂಡದಲ್ಲಿನ ಅತಿದೊಡ್ಡ ಏಕಶಿಲಾ ಪರ್ವತ. ಇದು ಪಾವಗಡದಿಂದ ಬಳ್ಳಾರಿಯವರೆಗೆ ಹರಡಿರುವ ಪರ್ವತ ಶ್ರೇಣಿಯ ಭಾಗವಾಗಿದೆ. ಸುತ್ತಲಿನ ಪ್ರದೇಶವು ಗಣಿಗಾರಿಕೆಯ ಪ್ರಮುಖ ತಾಣವಾಗಿದೆ.

ಮಧುಗಿರಿ

ಮಧುಗಿರಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ತುಮಕೂರು
ನಿರ್ದೇಶಾಂಕಗಳು 13.66° N 77.21° E
ವಿಸ್ತಾರ
 - ಎತ್ತರ
 km²
 - 787 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
267600
 - /ಚದರ ಕಿ.ಮಿ.

ಇತಿವೃತ್ತ ಬದಲಾಯಿಸಿ

  • ಇದು ಹಿಂದೆ ಮೈಸೂರು ರಾಜರ ಒಡೆತನದಲ್ಲಿ ಒಂದು ಮುಖ್ಯ ಠಾಣೆಯಾಗಿತ್ತು ಮತ್ತು ಸಿದ್ದನಾಯಕನೆಂಬ ಸೈನ್ಯಾಧಿಕಾರಿಯು ಆಡಳಿತ ಮಾಡುತಿದ್ದನು. ಬೆಟ್ಟದಲ್ಲಿ ಈಗಲೂ ಒಂದು ಕೋಟೆ ಇದೆ. ಇಲ್ಲಿ ಇರುವ ದಂಡಿನ ಮಾರಮ್ಮ ದೇವಿ ಶಕ್ತಿ ದೇವತೆ ಬಹಳ ಪ್ರಸಿದ್ದಿ. ಹಿಂದೆ ಇಲ್ಲಿನ ಬೆಟ್ಟದಲ್ಲಿ ಸೀತಾಫಲ ಮತ್ತು ದಾಳಿಂಬೆ ಹಣ್ಣುಗಳು ಬಹಳ ಬೆಳೆಯುತ್ತಿದ್ದವು. ಈ ಪ್ರದೇಶದ ಪ್ರಮುಖ ಬೆಳೆಗಳು ಕಡಲೇಕಾಯಿ, ರಾಗಿ, ಮಾವು ಹಾಗೂ ಜೋಳ. ಇಲ್ಲಿ ರೇಶಿಮೆ ಮತ್ತು ತೆಂಗು ಕೂಡ ಬೆಳೆಯಲಾಗುತ್ತದೆ.
  • ಮಧುಗಿರಿಯ ಕೋಟೆಯಿಂದ ಎಡಕ್ಕೆ ಹೊದರೆ ಸಿದ್ದರಕಟ್ಟೆ ಎಂಬ ಒಂದು ಸಣ್ಣ ಕೆರೆ ಇದೆ ಅದು ನೊಡಲು ತುಂಬ ಚೆನ್ನಾಗಿದೆ.ಹಾಗೆ ಸಿರ ಗೇಟ್ ನ ಬಳಿ ಒಂದು ಕಲ್ಯಾಣಿ ಇದೆ. ಇಲ್ಲಿಂದ ಸ್ವಲ್ಪ ದೂರದಲ್ಲೇ ಔಷಧೀಯ ಮೂಲಿಕೆಗಳಿಗೆ ಪ್ರಸಿದ್ಧವಾದ ಸಿದ್ಧರ ಬೆಟ್ಟವೂ ಇದೆ. ಮಧುಗಿರಿ ಯಿಂದ ಸುಮಾರು ೨೦ಕಿಮೀ ದೂರದಲ್ಲಿ ಮೈದನಹಳ್ಳಿ ಎಂಬಲ್ಲಿ ಕೃಷ್ಣಮೃಗಗಳ ವನ್ಯಧಾಮವನ್ನು 1993 ರಲ್ಲಿ ಪ್ರಾರಂಭಿಸಲಾಯಿತು. ಇದು ಕರ್ನಾಟಕ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ.
  • ಮಧುಗಿರಿಯ ಪಾಳೇಗಾರರ ಪ್ರಮುಖ ಕೋಟೆಗಳಲ್ಲಿ ಮುಖ್ಯವಾದವು ಕೊಡಗದಾಲ, ಮಿಡಿಗೇಶಿ ಕೋಟೆಗಳು. ವಿಶೇಷಾಂದ್ರೆ ಇಂದಿಗೂ ಕೋಡಗದಾಲ ಕೋಟೆಯಲ್ಲಿ ಜನ ವಾಸವಿದೆ. ಮುಖ್ಯವಾಗಿ ಮಧುಗಿರಿ ಪಾಳೇಗಾರರಿಗೆ ಹಾಗೂ ಅವರ ಸೈನಿಕರಿಗೆ ಹೆಂಡ ಸಾಗಿಸುತ್ತಿದ್ದ ಈಡಿಗರಲ್ಲಿ ಕೆಲವರು ಕೋಟೆಯಲ್ಲೇ ವಾಸಿಸುತ್ತಿದ್ದಾರೆ. ಇನ್ನುಳಿದ ಮೂಲ ಈಡಿಗರು ಪಕ್ಕದ ಕ್ಯಾಶವಾರದಲ್ಲಿ ನೆಲೆಸಿದ್ದಾರೆ.

ಮಧುಗಿರಿಯಲ್ಲಿ ಜನಿಸಿದ ಪ್ರಮುಖ ವ್ಯಕ್ತಿಗಳು ಬದಲಾಯಿಸಿ

  • ಹೆಚ್.ಆರ್.ನಾಗೇಶರಾವ್ - `ಸಂಯುಕ್ತ ಕರ್ನಾಟಕದ ನಿವೃತ್ತ ಸ್ಥಾನಿಕ ಸಂಪಾದಕ, ಕನ್ನಡದ ಹಿರಿಯ ಪತ್ರಕರ್ತ, `ಸುದ್ದಿಜೀವಿ' ಎಂದೇ ಹೆಸರಾದ ನಾಗೇಶರಾವ್ ೨೦ನೇ ಅಕ್ಟೋಬರ್ ೧೯೨೭ರಂದು ಜನಿಸಿದರು.
  • ಮಧುಗಿರಿ ತಾಲುಕಿನ ಬಡವನಹಳ್ಳಿ ಕಾಕಡಾ ಹೂ ಪ್ರಸಿದ್ದಿಯಾಗಿದೆ, ಅಲ್ಲಿನ ಸುತ್ತ ಮುತ್ತ ಹಳ್ಳಿಗಳು ಕಾಕಡ ಹೂ ಬೆಳೆಯುವುದಕ್ಕೆ ತು೦ಬ ಪ್ರಸಿದ್ದಿ. ಮಧುಗಿರಿ ಅನ್ನುವ ಹೆಸರನ್ನು ಇಟ್ಟವರು ಮಾಸ್ತಿ ವೆಂಕಟೆಶ್ ಅಯ್ಯಂಗಾರ್

ಮಧುಗಿರಿ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು ಬದಲಾಯಿಸಿ

"https://kn.wikipedia.org/w/index.php?title=ಮಧುಗಿರಿ&oldid=1065607" ಇಂದ ಪಡೆಯಲ್ಪಟ್ಟಿದೆ