ಮಅದ್ದ್

ಮುಹಮ್ಮದ್ ಪೈಗಂಬರರ ಪೂರ್ವಜರು

ಮಅದ್ದ್ ಬಿನ್ ಅದ್ನಾನ್ (ಅರಬ್ಬಿ: معد بن عدنان) ― ಅರಬ್ಬರ ಪೂರ್ವ ಪಿತಾಮಹ ಮತ್ತು ಮುಹಮ್ಮದ್ ಪೈಗಂಬರರ ಪೂರ್ವಜರಲ್ಲೊಬ್ಬರು. ಅರಬ್ ಐತಿಹ್ಯ ಮತ್ತು ಮುಸ್ಲಿಂ ವಿದ್ವಾಂಸರ ಪ್ರಕಾರ ಇವರು ಇಷ್ಮಾಯೇಲ್‌ರ ಪುತ್ರ ಕೇದಾರರ ವಂಶದಲ್ಲಿ ಸೇರಿದ ಅದ್ನಾನ್‌ರ ಮಗನಾಗಿದ್ದು, ಇವರ ವಂಶದವರು ಉತ್ತರ, ಪೂರ್ವ, ಪಶ್ಚಿಮ ಮತ್ತು ಮಧ್ಯ ಅರೇಬಿಯಾದಲ್ಲಿ ವಾಸಿಸುತ್ತಿದ್ದರು.[೧]

ಮಅದ್ದ್ ಬಿನ್ ಅದ್ನಾನ್
معد بن عدنان
Children
  • ನಿಝಾರ್
  • ಕುದಾಅ
  • ಇಯಾದ್
  • ಕುನುಸ್
Parents
  • ಅದ್ನಾನ್ ಬಿನ್ ಉದದ್ (father)
  • ಮಹ್ದದ್ ಬಿಂತ್ ಲಹ್ಮ್‌ (mother)
Familyಇಷ್ಮಾಯೇಲ್ ಕುಟುಂಬ

ಜನನ ಮತ್ತು ಕುಟುಂಬ ಬದಲಾಯಿಸಿ

ಮಅದ್ದ್ ಕ್ರಿ.ಪೂ. 598ರಲ್ಲಿ ಹುಟ್ಟಿದರೆಂದು ಹೇಳಲಾಗುತ್ತದೆ. ಇವರ ತಂದೆಯ ಹೆಸರು ಅದ್ನಾನ್ ಬಿನ್ ಉದದ್ ಮತ್ತು ತಾಯಿಯ ಹೆಸರು ಮಹ್ದದ್ ಬಿಂತ್ ಲಹ್ಮ್‌. ಇವರಿಗೆ ಕುದಾಅ, ನಿಝಾರ್, ಕುನುಸ್ ಮತ್ತು ಇಯಾದ್ ಎಂಬ ನಾಲ್ಕು ಮಕ್ಕಳಿದ್ದರು.[೨]

ಉಲ್ಲೇಖಗಳು ಬದಲಾಯಿಸಿ

  1. ಅಬ್ದುಲ್ ರಹ್ಮಾನ್ ಅಲ್-ಮುಗೀರಿ. The chosen record of the Ancestries of Arab tribes. Vol. 1. p. 58.
  2. ಇಬ್ನ್ ಇಸ್ಹಾಕ್. ದಿ ಲೈಫ್ ಆಫ್ ಮುಹಮ್ಮದ್. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್. p. 4.
"https://kn.wikipedia.org/w/index.php?title=ಮಅದ್ದ್&oldid=1157887" ಇಂದ ಪಡೆಯಲ್ಪಟ್ಟಿದೆ