ಬಿ. ಇ. ಎಸ್. ಟಿ, ಮುಂಬೈ

'

BEST Undertaking
ಸಂಸ್ಥೆಯ ಪ್ರಕಾರAutonomous State-owned enterprise
ಸ್ಥಾಪನೆMumbai (1873)
ಮುಖ್ಯ ಕಾರ್ಯಾಲಯಮುಂಬೈ, India
ಪ್ರಮುಖ ವ್ಯಕ್ತಿ(ಗಳು)O.P.Gupta, General Manager
ಉದ್ಯಮPublic transport,
Electricity
ಉತ್ಪನ್ನBus, Electricity
ಆದಾಯRs. 2,353.40 cr. ($538.7m USD) (2004)
ಉದ್ಯೋಗಿಗಳು44,000 (2005)
ಜಾಲತಾಣwww.bestundertaking.com

'BEST, Mumbai'

ಮುಂಬಯಿನಗರದ, ಪ್ರಖ್ಯಾತ,'ಬೆಸ್ಟ್ ಬಸ್,' ಸೇವಾ ಪದ್ಧತಿ : ಬದಲಾಯಿಸಿ

'ಮುಂಬಯಿ ಟ್ರಾಮ್ ಕಂ,ಲಿಮಿಟೆಡ್ ', ಬೊಂಬಾಯ್ ನಗರದಲ್ಲಿ, ೧೮೭೩ ರಲ್ಲಿ ವಿಧ್ಯುಕ್ತವಾಗಿ ಪ್ರಾರಂಭವಾಯಿತು. ಮುಂಬಯಿ ಮ್ಯುನಿಸಿಪಾಲಿಟಿಗೆ, ಎಲ್ಲಾ ಹಕ್ಕುಗಳೂ ಸೇರಿದಮೇಲೆ, ೧೮೭೪ ರ ಆಕ್ಟ್ ಪ್ರಕಾರ, ಮುಂಬಯಿಸರ್ಕಾರ, ಟ್ರಾಮ್ ಸರ್ವಿಸ್ ನ್ನು ದಕ್ಷಿಣ ಮುಂಬಯಿನಲ್ಲಿ ಗ್ರಾಹಕರಿಗೆ ಕೊಡಲು ಪ್ರಾರಂಭಿಸಿತು. ಮೊದಲ ೨೫ ವರ್ಷಗಳ ನಂತರ ಅಥವಾ ಪ್ರತಿ ೭ ವರ್ಷಗಳನಂತರ, ಎರಡು ಕಂಪೆನಿಗಳೂ ಸಂಧಾನಮಾಡಿಕೊಂಡಮೇಲೆ ಖರೀದಿಸಲು ಅನುಮತಿಕೊಡಲಾಯಿತು. ಎರಡು ಪ್ರಕಾರದ ಟ್ರಾಮ್ ಗಳು ಚಾಲನೆಯಲ್ಲಿದ್ದವು. ಒಂದು ಕುದುರೆಯಿಂದ ಎಳೆಯಲ್ಪಡುವ ಟ್ರಾಮ್, ಇನ್ನೊಂದು ಎರಡು ಕುದುರೆಗಳಿಂದ ಎಳೆಯಲ್ಪಡುವ ಟ್ರಾಮ್ . ಆಗಲೇ ಚಾಲನೆಯಲ್ಲಿದ್ದ, 'ಮುಂಬಯಿ ಟ್ರಾಮ್ ಕಂಪೆನಿ ಯನ್ನು, ೧೯೦೫ ರಲ್ಲಿ, ಹೊಸ ಕಂಪೆನಿಯೊಂದು, 'ದ ಮುಂಬಯಿ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್ ಪೋರ್ಟ್ ಕಂ ಲಿಮಿಟೆಡ್', ಖರೀದಿಸಿತು. ಪ್ರಪ್ರಥಮ ಎಲೆಕ್ಟ್ರಿಕ್ ಶಕ್ತಿಯಿಂದ ನಡೆಯುವ, ಟ್ರಾಮ್ ಕಾರ್ ಗಳು, ೧೯೦೭ ರಲ್ಲಿ ಮುಂಬಯಿಯ ರಸ್ತೆಗಳಲ್ಲಿ ಕಾಣಿಸಿಕೊಂಡವು. ನಂತರದ ದಿನಗಳಲ್ಲಿ, ಅತಿಯಾದ ಜನಸಂದಣಿ, ಜಾಗದ ಅಭಾವಗಳಿಂದಾಗಿ, ಕೆಲವು ಹೆಚ್ಚಿನ-ಸೌಕರ್ಯಗಳಿಂದಾಗಿ, ಡಬಲ್ ಡೆಕ್ಕರ್ ಬಸ್ ಗಳು, ಸೆಪ್ಟೆಂಬರ್, ೧೯೨೦ ರಲ್ಲಿ, ಬೊಂಬಾಯಿನ ರಸ್ತೆಗಳನ್ನು ಅಲಂಕರಿಸಿದವು. ಮುಂದಿನದೆಲ್ಲಾ ಇತಿಹಾಸ.