ಬಿ.ವಿ.ಅನಂತರಾಮ್ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ೧೯೮೧ರಿಂದ ೨೦೦೯ರವರೆಗಿನ ೨೮ ವರ್ಷಗಳ ಕಾಲಾವಧಿಯಲ್ಲಿ ಇವರಿಂದ ರಚಿತವಾದ ಪತ್ತೇದಾರಿ ಕಾದಂಬರಿಗಳು ಸುಮಾರು ೧೦೦೦ ಸಂಖ್ಯೆಯಲ್ಲಿ ಪ್ರಕಾಶಿತವಾಗಿವೆ. ಪತ್ತೇದಾರಿ ಕಾದಂಬರಿಗಳನ್ನಲ್ಲದೆ ಸಾಮಾಜಿಕ, ಮಕ್ಕಳ ಕಥೆ, ಚಿಕ್ಕ ಕಥೆಗಳು ಇತ್ಯಾದಿ ವೈವಿಧ್ಯಪೂರ್ಣ ಲೇಖನಗಳನ್ನು ನೀಡಿ ರಸಿಕ ಓದುಗರ ಮನರಂಜಿಸಿ, ತಮ್ಮ ೫೯ನೆ ವಯಸ್ಸಿನಲ್ಲಿ (೧೯-೧೧-೨೦೦೯) ಕೀರ್ತಿಶೇಷರಾದರು. ಇವರು ಹಲವಾರು ಪಾಶಿಮಾತ್ಯ ಸನ್ನಿವೇಶಗಳಿದ್ದ ಇಂಗ್ಲೀಷ್ ಮತ್ತಿತರ ಭಾಷೆಯ ಕಾದಂಬರಿಗಳನ್ನು ಅಳವಡಿಸಿಕೊಂಡು ಅನುವಾದಿಸಿ ಬರೆಯಬಲ್ಲವರಾಗಿದ್ದರು.

ಮರಣಅಕ್ಟೋಬರ್ 19, 2009(2009-10-19)

ಇವರ ಕೆಲವು ಕಾದಂಬರಿಗಳು ಇಂತಿವೆ:

  • ಅಪಾಯಕ್ಕೆ ಅಂಜಬೇಡ
  • ಏಟಿಗೆ ಎದಿರೇಟು
  • ಡೆತ್ ವಾರಂಟ್
  • ಸಂಚು
  • ಕತ್ತಲಿಗೆ ನೂರು ಕಣ್ಣು
  • ಟ್ವಿಂಕಲ್ ಟ್ವಿಂಕಲ್

ಜಿಂಕೆ ಸಾಹಸಗಳು ಬದಲಾಯಿಸಿ

ಜಿಂಕೆ ಕೋಡ್ ನೇಮ್ ಪ್ರಸಿದ್ಧನಾದ ಪತ್ತೇದಾರ ಮಹೇಶ ಬದಲಾಯಿಸಿ
  1. ಪತ್ತೇದಾರ ಮಹೇಶ (ಮೊದಲ ಕಾದಂಬರಿ)
  2. ಟೆರರಿಸ್ಟ್ ಜಿಂಕೆ
  3. ಜಿಂಕೆ ಜಿಂಕೆ ಜಿಂಕೆ
  4. ಜಿಂಕೆ ಲೇಡೀಸ್ ಸ್ಮೈಲ್
  5. ಜಿಂಕೆ ರೋಷ ಶತ್ರುನಾಶ
  6. ಡೆತ್ ಚೇಸ್
  7. ಸೂಪರ್ ಕಿಡ್ನಾಪರ್
  8. ಡೆವಿಲ್ ಏಜೆಂಟ್
  9. ಸೈಲೆಂಟ್ ಕಿಲ್ಲರ್
  10. ಟಚ್ ಮಿ ನಾಟ್
  11. ಮುದ್ದಿನ ಜಿಂಕೆ
  12. ಆಟಂ ಬಾಂಬ್
  13. ಚಾಣಾಕ್ಷ
  14. ಟಚ್ ಅಂಡ್ ಗೋ
  15. ಸ್ಲೀಪಿಂಗ್ ಬ್ಯೂಟಿ

ಸಣ್ಣ ಕತೆಗಳು ಬದಲಾಯಿಸಿ

  • ಲಾಟರಿ ಟಿಕೆಟ್
  • ಬ್ಲಾ ಕ್ ಮೇಲ್
  • ನಾಗರ ಹಾವು
  • ಸೆಕಂಡ್ ಹನಿಮೂನ್
  • ಸಂಪಾದಕರೇ ಜಾಗ್ರತೆ
  • ಮಾಡಿದ್ದು ಒಂದೇ ತಪ್ಪು