ಬಸೆನ್ ಮುರ್ಮು (೯ ಏಪ್ರಿಲ್ ೧೯೮೭ - ೮ ಜೂನ್ ೨೦೨೦) [೨]) ಸಂತಾಲಿ ಚಲನಚಿತ್ರ ಮತ್ತು ಆಲ್ಬಮ್ ಜಗತ್ತಿನ ಭಾರತೀಯ ಗಾಯಕ . ಬಸೆನ್ ಮುರ್ಮು ಜನಿಸಿದ್ದು ಒಡಿಶಾದ (ಭಾರತ) ಮಯೂರ್ಭಂಜ್ ಜಿಲ್ಲೆಯ ಬಿಜ್ತಾಲಾ ಬ್ಲಾಕ್‌ನ ಬರ್ಹಜಿಯಾನ್ ಗ್ರಾಮದಲ್ಲಿ. ಇವರ ತಂದೆಯ ಹೆಸರು ನರನ್ ಮುರ್ಮು ಮತ್ತು ತಾಯಿ ಮೈನಾ ಮುರ್ಮು. ಇವರ ಹೆಂಡತಿಯ ಹೆಸರು ಮಮತಾ ಮುರ್ಮು. ಭಾಗ್ಯಲಕ್ಷ್ಮಿ ಮುರ್ಮು ಇವರ ಏಕೈಕ ಪುತ್ರಿ.

ಬಸೆನ್‌ ಮುರ್ಮು
ಜನನ (1987-04-09) ೯ ಏಪ್ರಿಲ್ ೧೯೮೭ (ವಯಸ್ಸು ೩೭)
ಬರ್ಹಜಿಯನ್, ಮಯೂರ್ಭಂಜ್ ,ಒಡಿಶಾ, ಭಾರತ
ಮರಣ8 June 2020(2020-06-08) (aged 33)
ರಾಯ್‌ರಂಗ್ಪುರ್
ವೃತ್ತಿಗಾಯಕ[೧]

ವೃತ್ತಿಜೀವನ ಬದಲಾಯಿಸಿ

ಬಸೆನ್ ಮುರ್ಮು ಇವರು ತನ್ನ ಅಲ್ಪಾವಧಿಯ ಜೀವನದಲ್ಲಿ ಐನೂರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಇವರ ಸೂಪರ್ಹಿಟ್ ಹಾಡುಗಳು - "ಕುಲ್ಮಿ ಡೇರ್ ಲೆಕಾ ಕುಡಿಮ್ ಹರಾಯೆನ್", "ಚೆಮೆಕ್ ಚೆಮೆಕ್", "ಜಿವಿ ರಾಣಿ ತಿಸೀಮ್ ಹಿಜುಗ್", "ಅಲಕ್ ಜಾಡಿ ನಾಡಿ ಲೆಕಾ" ಮುಂತಾದವು.[೩][೪] [೫]

ನಿಧನ ಬದಲಾಯಿಸಿ

ಬಸೆನ್ ಮುರ್ಮು ೮ ಜೂನ್ ೨೦೨೦ ರಂದು ನಿಧನರಾದರು. ಇವರು ಕೇವಲ ೩೩ ರ ಹರೆಯವರಾಗಿದ್ದು ಇವರಿಗೆ ಯಾವುದೇ ರೋಗದ ಲಕ್ಷಣಗಳು ಇರಲಿಲ್ಲ. ಜೂನ್ ೮ ರಂದು, ಇವರು ಇದ್ದಕ್ಕಿದ್ದಂತೆ ಕುಸಿದುಬಿದ್ದರು ಮತ್ತು ಇವರನ್ನು ಚಿಕಿತ್ಸೆಗಾಗಿ ರಾಯರಂಗಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಯೇ ಇವರು ವಿಧಿವಶರಾಧರು.[೬]

ಬಾಹ್ಯ ಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. https://www.youtube.com/watch?v=rwxzyTSvFts
  2. "Clipping of Prabhat Khabar - JAMSHEDPUR - City". epaper.prabhatkhabar.com. Archived from the original on 11 ಜೂನ್ 2020. Retrieved 13 June 2020.
  3. https://www.youtube.com/watch?v=WJGQdwj2Gko
  4. https://www.youtube.com/watch?v=YofbZStg-9E
  5. https://www.youtube.com/watch?v=WHcE55kn_uc
  6. "ಆರ್ಕೈವ್ ನಕಲು". Archived from the original on 2020-06-08. Retrieved 2020-06-13.