ಫ್ರೆಂಚ್ ಭಾಷೆ (français - ಫ್ರಾನ್ಸೈ) ಯುರೋಪ್ ಖಂಡದ ಫ್ರಾನ್ಸ್ನಲ್ಲಿ ಉಗಮಗೊಂಡ ಇಂಡೋ-ಯುರೋಪಿಯನ್ ಭಾಷಾ ಕುಟುಂಬಕ್ಕ ಸೇರಿರುವ ಒಂದು ರೊಮಾನ್ಸ್ ಭಾಷೆ. ಫ್ರೆಂಚ್ ಜನರ ಭಾಷೆ, ಇಡೀ ಜಗತ್ತಿನಲ್ಲಿ ೧೨೮ ಮಿಲ್ಲಿಯನ್ ಜನರು ಫ್ರೆಂಚ್ ಭಾಷೆಯನ್ನ ಪ್ರಥಮ ಹಾಗು ದ್ವಿತೀಯ ಭಾಷೆಯಾಗಿ ಬಳಸುತ್ತಾರೆ.

ಫ್ರೆಂಚ್ ಭಾಷೆ
Français 
ಉಚ್ಛಾರಣೆ: IPA: ಫ್ರಾನ್ಸ್ವ
ಬಳಕೆಯಲ್ಲಿರುವ 
ಪ್ರದೇಶಗಳು:
ಲೇಖನ ನೋಡಿ 
ಪ್ರದೇಶ: ಆಫ್ರಿಕಾ, ಯುರೋಪ್, ಅಮೇರಿಕಗಳು, ಪೆಸಿಫಿಕ್ ಮಹಾಸಾಗರದ ದ್ವೀಪಗಳು
ಒಟ್ಟು 
ಮಾತನಾಡುವವರು:
ಮಾತೃಭಾಷೆಯಾಗಿ: ೬೫[೧]-೧೦೯[೨] ಮಿಲಿಯನ್ 
ಶ್ರೇಯಾಂಕ: ೧೮
ಭಾಷಾ ಕುಟುಂಬ: ಇಂಡೊ-ಯುರೋಪಿಯನ್
 ಇಟಾಲಿಕ್
  ರೊಮಾನ್ಸ್
   ಇಟಾಲೊ-ಪಶ್ಚಿಮ
    ಪಶ್ಚಿಮ ರೊಮಾನ್ಸ್
     ಗ್ಯಾಲೊ-ಐಬೀರಿಯನ್
      ಗ್ಯಾಲೊ-ರೊಮಾನ್ಸ್
       ರ್ಹೆಟೊ-ರೊಮಾನ್ಸ್
        ಒಇಇಲ್
         ಫ್ರೆಂಚ್ ಭಾಷೆ 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ೩೦ ದೇಶಗಳು
ನಿಯಂತ್ರಿಸುವ
ಪ್ರಾಧಿಕಾರ:
ಅಕಾಡೆಮಿ ಫ್ರಾನ್ಸ್ವಾ (ಫ್ರಾನ್ಸ್ನಲ್ಲಿ)
ಭಾಷೆಯ ಸಂಕೇತಗಳು
ISO 639-1: fr
ISO 639-2: fre (B)ಟೆಂಪ್ಲೇಟು:Infobox ಭಾಷೆ/terminological
ISO/FDIS 639-3: fra 

ಫ್ರೆಂಚ್ ಭಾಷೆಯ ವಿಸ್ತಾರ
ಆಳ ನೀಲಿ: ಫ್ರೆಂಚ್ ಮಾತನಾಡಲಾಗುವ ಪ್ರದೇಶಗಳು; ನೀಲಿ: ಅಧಿಕೃತ ಭಾಷೆ; ತಿಳಿ ನೀಲಿ: ಸಾಂಸ್ಕೃತಿಕ ಭಾಷೆ; ಹಸಿರು: ಅಲ್ಪಸಂಖ್ಯಾತ

ವರ್ಣಮಾಲೆ , ಉಚ್ಛಾರ ಬದಲಾಯಿಸಿ

ಲ್ಯಾಟಿನ್‍ನಿಂದ ಹುಟ್ಟಿ ಬಂದಿದ್ದರೂ ಫ್ರೆಂಚ್ ಭಾಷೆಗೆ ತನ್ನದೇ ಆದ ಅಸ್ತಿತ್ವವಿದೆ. ಉದಾ: ರೋಮನರಿಗೆ ಅನುನಾಸಿಕಗಳೆ ಗೊತ್ತಿರಲಿಲ್ಲ. ಫ್ರೆಂಚ್ ಅನುನಾಸಿಕಗಳಿಂದ ತುಂಬಿದೆ. ಲ್ಯಾಟಿನ್ ಭಾಷೆಯಲ್ಲಿ `ಹ ಹಾಗೂ ಮಹಾ ಪ್ರಾಣಗಳು ಇಲ್ಲ. ಗ್ರೀಕ್ ಭಾಷೆಯ ಮುಖಾಂತರ ಮಹಾಪ್ರಾಣಗಳು ಲಾಟಿನ್ನನ್ನು ಪ್ರವೇಶಿಸಿದುವು. ಜಮ್ರ್ಯಾನಿಕ್ ಭಾಷೆಯ ಭಾಗವಾಗಿದ್ದ ಫ್ರಾಂಕ್ ಭಾಷೆಯಲ್ಲಿ ಹ ಹಾಗೂ ಮಹಾಪ್ರಾಣಗಳಿವೆ. ಅದೇ ಫ್ರೆಂಚಿನಲ್ಲಿ ಎಚ್ ಎಂಬುದು ಆಷ್ ಎಂದು ಉಚ್ಚರಿಸಲ್ಪಟ್ಟು ಇಂಗ್ಲಿಷ್ ಭಾಷೆಯಲ್ಲಿಯಂತೆ ಹ ಕಾರವಾಗಿ ಉಚ್ಚರಿಸಲ್ಪಡದೇ ಮೃದುವಾಗಿ ಹೊರಬೀಳುತ್ತದೆ_ಉದಾ: ಲ್ಯಾಟಿನ್ನಿನ ಕಾಂತಾರ ಶಬ್ದವೆ ಫ್ರೆಂಚಿನಲ್ಲಿ ಶಾಂತೆ ಆಗಿದೆ. ಇದನ್ನು ಬರೆಯುವಾಗ ಸೆ ಆಷ್ ಆ ಎನ್ ತೆ ಅ ಎರ್ ಎಂದು ಬರೆದು ಶಾಂತೆ ಎಂದು ಉಚ್ಚರಿಸುತ್ತಾರೆ. ಕೊನೆಯ ರ ದ ಉಚ್ಚಾರಣೆ ಇಲ್ಲ.

ಜಿ ಎಂದರೆ ಇಂಗ್ಲಿಷ್ ಜಿ ಹಾಗೂ ವ್ಹೆ (ಇಂಗ್ಲಿಷ್‍ನ ವ್ಹಿ) ಅರ್ಧವರ್ಣಾಕ್ಷರ ಎಂದು ಭಾಷಾತಜ್ಞರು ವಿಂಗಡಿಸಿದ್ದಾರೆ. ಫ್ರೆಂಚ್ ಭಾಷೆ ಲ್ಯಾಟಿನ್ ಭಾಷೆಗಿಂತ ಸ್ವರಸಾಮ್ರಾಜ್ಯದಲ್ಲಿ ಸಮೃದ್ಧವಾಗಿದೆ. ವರ್ಣಾಕ್ಷರಗಳು ಅನೇಕ ಸಲ ಲ್ಯಾಟಿನ್ ಭಾಷೆಯಿಂದ ಫ್ರೆಂಚಿಗೆ ಬಂದಾಗ ಪರಿವರ್ತನೆಗೊಂಡಿವೆ. ಈ ಬದಲಾವಣೆ ಆಯಾ ಶಬ್ದಗಳನ್ನವಲಂಬಿಸಿದೆ.

ಉದಾ: ಮರಿತು>ಮರಿ (ಗಂಡ), ಪಾತ್ರೆಮ>ಪೇರ (ತಂದೆ), ಜುಮೆಂತು>ಜುಮೊ (ಹೆಣ್ಣು ಕುದುರೆ) ಇತ್ಯಾದಿ.

ಫ್ರೆಂಚ್ ಶಬ್ದಗಳು ಕೆಲವೊಮ್ಮೆ ಲ್ಯಾಟಿನ ಶಬ್ದ ರೂಪಗಳಿಗೆ ಹತ್ತಿರವಾಗಿದ್ದರೆ ಇನ್ನು ಕೆಲವು ಕಡೆ ತೀರ ದೂರವಾಗಿರುವುದೂ ಉಂಟು. ಬೆಕಾತಿ>ಶೆರ್ಷೆ (ಹುಡುಕು), ಪೆರಿಗ್ರಿನುಂ>ಪೆಲರಕ (ಯಾತ್ರಿಕ) ಫ್ರೆಂಜ್‍ನಲ್ಲಿ ಕೊನೆಗೆ ಲ, ನ, ಎರ್ ಅಥವಾ ರ, ಟ ಬಂದರೆ ಅವನ್ನು ಉಚ್ಚರಿಸುವುದಿಲ್ಲ. ಪೆಲರಂ ಶಬ್ದದಲ್ಲಿ pelerin ಎಂದು ಬರೆದು ಪೆಲರಕ ಎಂದುಚ್ಚರಿಸುತ್ತಾರೆ. ಕೊನೆಯ ಇ ಎನ್ ಅನುನಾಸಿಕವಾಗಿ ಹೊರಬೀಳುತ್ತದೆ. ಇನ್ನು ಕೆಲವೊಮ್ಮೆ ವರ್ಣವ್ಯತ್ಯಯವಾಗಿದ್ದರೆ ಕೆಲವೊಮ್ಮೆ ಹೊಸ ವರ್ಣಗಳ ಸಮ್ಮಿಲನ ಕಂಡುಬರುತ್ತದೆ. ಉದಾ: ಫೊರ್ಮಾಂತಿಕುಂ>ಫ್ರೊಮಾಜ (ಗಿಣ್ಣ). ಸಿಮಾಲಾರೆ>ಸಾಂಬ್ಲ>ಸಾಂಬ್ಲ (ಹೋಲು_ಕಾಣಿ)

ಫ್ರೆಂಚ್ ಉಚ್ಚಾರದ ಬಗೆ ಹೀಗಿದೆ. ಸಾಧ್ಯವಿದ್ದಷ್ಟು ಸ್ವರಗಳನ್ನು ಉಚ್ಚರಿಸಿ ವ್ಯಂಜನಾಕ್ಷರಗಳನ್ನು ನುಂಗಿಬಿಡುವುದು ವಾಡಿಕೆ. 17ನೆಯ ಶತಮಾನದವರೆಗೂ ರ ಎಂಬುದು ಎರ್ರ್ ಎಂದೇ ತುದಿನಾಲಗೆಯ ಮೇಲೆ ಉರುಳಿಹೋಗುತ್ತಿತ್ತು. ಈಗ ನಾಲಗೆಯ ಹಿಂಭಾಗವನ್ನು ಅಂಗುಳಕ್ಕೆ ಹಚ್ಚಿ ಉಚ್ಚರಿಸಲಾಗುತ್ತದೆ, ಉರ್ಮಪಾರಸಿ ಭಾಷೆಗಳಲ್ಲಿ ಖ ಉಚ್ಚರಿಸಿದಂತೆ. ಉರ್ದುವಿನಲ್ಲಿ ತಖ್ತ ಎಂಬ ಶಬ್ದದಲ್ಲಿಯ ಖ ದಂತೆ ಫ್ರೆಂಚಿನ ಮರ್ಸಿಯಲ್ಲಿಯ ರ ಉಚ್ಚರಿಸಲ್ಪಡುತ್ತದೆ. ಹಲ್ಲಿನ ಮೂಲಕ್ಕೆ ತುದಿನಾಲಗೆ ಹಚ್ಚಿ ಲ ಉಜ್ಜಾರ. ಎಂದರೆ ಅದು ಕನ್ನಡದ ಲನೂ ಅಲ್ಲ ಳ ಸಹ ಅಲ್ಲ, ಅದು ಲ್ಳ. ಉದಾ; ಎಲ್ ಅ ಇ ತೆ (lait) ಎಂದು ಬರೆದು ಲ್ಳೇ ಎಂದು ಉಚ್ಚರಿಸುತ್ತಾರೆ.

ಫ್ರೆಂಚ್ ವರ್ಣಮಾಲೆ ಹೀಗಿದೆ

ಫ್ರೆಂಚ್ ....

  • ಅ ಬೆ ಸೆ ದೆ ್ ಎಫ್ ಜೆ ಅ ಅಷ್ ಇ ಇಂಗ್ಲಿಷ್ ....
  • ಎ ಬಿ ಸಿ ಡಿ ಇ ಎಫ್ ಜಿ ಎಜ್ ಅಯ್ ಫ್ರೆಂಚ್ ....
  • ಜಿ ಕಾ ಎಲ್ ಎಮ್ ಎನ್ ಙ ಪೇ ಇಂಗ್ಲಿಷ್ ....
  • ಜಿ ಕೆ ಎಲ್ ಎಮ್ ಎನ್ ಓ ಪಿ ಫ್ರೆಂಚ್ ....
  • ಕ್ಯು ಎರ್ ಎಸ್ ತೆ ಯು ವ್ಹೆ ದುಂಬ್ಲ ವ್ಹೆ ಇಂಗ್ಲಿಷ್ ....
  • ಕ್ಯು ಆರ್ ಎಸ್ ಟಿ ಯು ವ್ಹಿ ಡಬ್ಲ್ಯು ಫ್ರೆಂಚ್
  • ಇಕ್ಸ್ ಇಗ್ರೆಕ್ ಜೆದ್. ಫ್ರೆಂಚ್ ....
  • ಎಕ್ಸ್ ವಾಯ್ ಝೆಡ್ ಇಂಗ್ಲಿಷ್ ....

ಇವಲ್ಲದೇ ಇಂಗ್ಲಿಷಿಗಿಂತ ಹೆಚ್ಚಾಗಿ ಎ ಹಾಗೂ ಯೆ ಎಂಬ ಎರಡು ಅಕ್ಷರ ಇವೆ. 1) ಔ ದ ಉಚ್ಚಾ ರ ಔ ಉಚ್ಚರಿಸುವಂತೆ 2) ಇವೆರಡರ ಮಧ್ಯೆ ಇದೆ ಕ್ಯು ಹಾಗೂ ಯುಗಳ ಉಚ್ಚಾರ ಯು ಅಂತೆಯೂ ಇಲ್ಲ ಉ ಅಂತೆಯೂ ಅಲ್ಲ.

ಇತಿಹಾಸ , ಶಬ್ದಭಾಂಡಾರ, ಬೆಳವಣಿಗೆ ಬದಲಾಯಿಸಿ

ಫ್ರೆಂಚ್ ಭಾಷೆ ಒಂದು ಕಾಲದಲ್ಲಿ ಸಕಲ ಯೂರೋಪಿನಲ್ಲಿ ತಜ್ಞರ, ಸುಸಂಸ್ಕೃತರ, ಅರಸುಮನೆತನ, ಶ್ರೀಮಂತರ, ಭಾಷೆಯಾಗಿದ್ದು 19ನೆಯ ಶತಮಾನದ ವರೆಗೂ ಜನರ ಗೌರವಾದರಗಳಿಗೆ ಪಾತ್ರವಾಗಿತ್ತು.

ಫ್ರೆಂಚ್ ಭಾಷೆ ರೊಮಾನ್ಸ್ ಭಾಷೆಗಳಲ್ಲಿ ಒಂದು. ಅಂದರೆ ಲ್ಯಾಟಿನ್ ಭಾಷೆಯಿಂದ ಉಗಮಿಸಿದ ಭಾಷೆಗಳಲ್ಲ್ಲೊಂದು. ರೋಮನರು ಫ್ರಾನ್ಸನ್ನು ವಶಪಡಿಸಿಕೊಂಡಾಗ ಅಲ್ಲಿನ ಗಾಲಿಷ್ ಭಾಷೆಯನ್ನು ನಿರ್ನಾಮ ಮಾಡಿ ಲ್ಯಾಟಿನ್ ಭಾಷೆ ತನ್ನ ಅಧಿಪತ್ಯವನ್ನು ಸ್ಥಾಪಿಸಿತು. ಕಾಲಕ್ರಮೇಣ ದಕ್ಷಿಣ ಫ್ರಾನ್ಸಿನಲ್ಲಿ ಪ್ರೊವೆಂಕಲ್ ಭಾಷೆಯೂ ಉತ್ತರ ಫ್ರಾನ್ಸಿನಲ್ಲಿ ಫ್ರೆಂಚೂ ತಲೆ ಎತ್ತಿದುವು. ಫ್ರೆಂಚ್ ಭಾಷೆಯಲ್ಲಿ ಸುಮಾರು 32,000 ಶಬ್ದಗಳಿವೆ ಎಂದು 1932-35ರಲ್ಲಿ ಫ್ರೆಂಚ್ ಅಕಾಡೆಮಿಯ ನಿಘಂಟು ಪ್ರಕಟಿಸಿತು. ಎಂದ ಮಾತ್ರಕ್ಕೆ ಫ್ರೆಂಚ್ ಶಬ್ದ ಭಂಡಾರ ಅಷ್ಟು ಬಡವಾಗಿದೆ ಎಂದರ್ಥವಲ್ಲ. ಮೂಲ ಶಬ್ದಗಳಿಗೆ ಪ್ರತ್ಯಯ ಸೇರಿಸುತ್ತ ಶಬ್ದಭಂಡಾರ ಬೆಳೆಸಬಹುದು. ಇವಲ್ಲದೆ ಗ್ರೀಕ್ ಹಾಗೂ ಲ್ಯಾಟಿನ್ ಭಾಷಾಮೂಲವುಳ್ಳ ಅನೇಕ ಶಬ್ದಗಳು ಅಲ್ಲಿವೆ. 14 ರಿಂದ 16ನೆಯ ಶತಮಾನಗಳಲ್ಲಿ ಸಾಹಿತ್ಯ ವಿಜ್ಞಾನಗಳು ಬೆಳೆದಂತೆಲ್ಲ. ಹೊಸ ಶಬ್ದಗಳನ್ನು ವಿಪುಲವಾಗಿ ಫ್ರೆಂಚ್ ಭಾಷೆಗೆ ಆಮದು ಮಾಡಲಾಯಿತು. ಜೊತೆಗೆ ನೆರೆ ರಾಷ್ಟ್ರಗಳ ಭಾಷೆಗಳಿಂದ ಈಚಿಗೆ ಇಂಗ್ಲಿಷ್ ಹಾಗೂ ಏಷ್ಯದ ಭಾಷೆಗಳಿಂದ ಶಬ್ದಗಳು ಅಪಾರ ಸಂಖ್ಯೆಯಲ್ಲಿ ಫ್ರೆಂಚನ್ನು ಪ್ರವೇಶಿಸಿವೆ.

ಈಗ ಫ್ರಾನ್ಸಿನಲ್ಲಿ 55,000,000 ಜನ ಫ್ರೆಂಚ್ ಮಾತಾಡುತ್ತಾರೆ. ಇದಲ್ಲದೇ ಬೆಲ್ಜಿಯಂ, ಸ್ವಿಟ್ಜರ್‍ಲೆಂಡಿನ ಒಂದು ಭಾಗ, ಅಲ್ಜೀರಿಯ, ಗ್ವಾಡ್‍ಲುಪ್, ಮಾರ್ಟಿನಿಕ್, ರೆಯುನಿಯೋಕ, ಮರೋಕ, ಮುಂತಾದ ಎಲ್ಲ ದೇಶಗಳಲ್ಲಿ ಫ್ರೆಂಚ್ ಕೇಳಿಬರುತ್ತಿದೆ. ಅಲ್ಲದೇ ಪಾಂಡಿಚೇರಿಯಲ್ಲಿ 12,000 ಜನ ಫ್ರೆಂಚ್ ರಾಷ್ಟ್ರಕರಾದ ಭಾರತೀಯರಿದ್ದಾರೆ.

ಇವನ್ನೂ ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. SIL Ethnologue
  2. http://www.tlfq.ulaval.ca/axl/francophonie/francophonie.htm [unreliable source?]
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: