ಪ್ರೇಮ ಬರಹ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಪ್ರೇಮ ಬರಹ (ಆಂಗ್ಲ: Love Article), ತಮಿಳಿನಲ್ಲಿ ಸೊಲ್ಲಿವಿಡವಾ ( ಆಂಗ್ಲ: Shall I say it) ೨೦೧೮ರ ಕನ್ನಡ ಭಾಷೆಯ ಚಿತ್ರ. ಅರ್ಜುನ್ ಸರ್ಜಾ ಬರೆದು ನಿರ್ದೇಶಿಸಿರುವ ಚಿತ್ರವಿದು. ಅವರ ಪತ್ನಿ ನಿವೇದಿತಾ ಸರ್ಜಾ ತಮ್ಮ ಸ್ವಂತ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರವನ್ನು ಏಕಕಾಲಕ್ಕೆ ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಿಸಲಾಯಿತು. ಚಂದನ್ ಕುಮಾರ್ ಮತ್ತು ಐಶ್ವರ್ಯ ಅರ್ಜುನ್ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ಜಸ್ಸಿ ಗಿಫ್ಟ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎಚ್. ಸಿ. ವೇಣುಗೋಪಾಲ್ ಚಿತ್ರಕ್ಕೆ ಛಾಯಗ್ರಹಣ ಮಾಡಿದ್ದಾರೆ. ಈ ಚಿತ್ರ ಎರಡೂ ಬಾಷೆಗಳಲ್ಲಿ ೯ ಫೆಬ್ರವರಿ ೨೦೧೮ ರಂದು ಏಕಕಾಲಕ್ಕೆ ಬಿಡುಗಡೆಯಾಯಿತು. ಕರ್ನಾಟಕದಲ್ಲಿ ಆರ್ಥಿಕವಾಗಿ ಯಶಸ್ವಿಯಾದ ಚಿತ್ರ, ತಮಿಳಿನಲ್ಲಿ ನಿರೀಕ್ಷೆಯ ಮಟ್ಟದಲ್ಲಿ ಯಶಸ್ಸು ಕಾಣಲ್ಲಿಲ.
ಪ್ರೇಮ ಬರಹ | |
---|---|
ನಿರ್ದೇಶನ | ಅರ್ಜುನ್ ಸರ್ಜಾ |
ನಿರ್ಮಾಪಕ | ನಿವೇದಿತಾ ಅರ್ಜುನ್ |
ಲೇಖಕ | ಅರ್ಜುನ್ ಸರ್ಜಾ |
ಪಾತ್ರವರ್ಗ | ಚಂದನ್ ಕುಮಾರ್ ಐಶ್ವರ್ಯ ಅರ್ಜುನ್ |
ಸಂಗೀತ | ಜಸ್ಸಿ ಗಿಫ್ಟ್ |
ಛಾಯಾಗ್ರಹಣ | ಎಚ್. ಸಿ. ವೇಣುಗೋಪಾಲ್ |
ಸಂಕಲನ | ಕೈ ಕೈ |
ಸ್ಟುಡಿಯೋ | ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ |
ಬಿಡುಗಡೆಯಾಗಿದ್ದು |
|
ದೇಶ | India |
ಭಾಷೆ | ಕನ್ನಡ ತಮಿಳುl |
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಪಾತ್ರವರ್ಗ ಬದಲಾಯಿಸಿ
ಸಂಜಯ್ ಆಗಿ ಚಂದನ್ ಕುಮಾರ್
ಮಧು ಆಗಿ ಐಶ್ವರ್ಯ ಅರ್ಜುನ್
ಸುಹಾಸಿನಿ
ಕೆ.ವಿಶ್ವನಾಥ್
ಪ್ರಕಾಶ್ ರಾಜ್
ಬ್ಲಾಕ್ ಪಾಂಡಿ
ಅರ್ಜುನ್ ಸರ್ಜಾ