ವ್ಯಕ್ತಿಯ ದೇಹದ ಅಗತ್ಯಗಳಿಗನುಗುಣವಾಗಿ ಪಥ್ಯ ಆಹಾರವನ್ನಾಗಿ ಮಾಡುವ ಉದ್ದೇಶದಿಂದ ಬದಲಾಯಿಸಲಾದ ಯಾವುದೇ ಆಹಾರ ಅಥವಾ ಪಾನೀಯವನ್ನು ಪಥ್ಯಾಹಾರ (ಅಥವಾ ಡಯೆಟಿಕ್ ಫುಡ್ ) ಎಂದು ಕರೆಯಲಾಗುತ್ತದೆ. ಮುಖ್ಯವಾಗಿ ಇದರ ಉದ್ದೇಶ ದೇಹದ ಭಾರವನ್ನು ಕಡಿಮೆಗೊಳಿಸುವುದು ಮತ್ತು ದೇಹದ ಆಕಾರವನ್ನು ಬದಲಿಸುವುದಾದರೂ, ಕೆಲವೊಮ್ಮೆ ಇದನ್ನು ದೇಹದ ಭಾರ ಹೆಚ್ಚಿಸಲು ಅಥವಾ ದೇಹದ ಸ್ನಾಯು ಬೆಳೆಸಲು ಸಹಕಾರಿಯಾದ ದೇಹವರ್ಧನೆ ಪೂರಕ ಆಹಾರದ ಉದ್ದೇಶದಿಂದಲೂ ಬಳಸಲಾಗುತ್ತದೆ.

ಡಯೆಟ್ ಕೋಕ್

ಪರಿಭಾಷೆ ಬದಲಾಯಿಸಿ

ಪಥ್ಯ (diet) ಎಂಬುದನ್ನು ಸೂಚಿಸಲು ಅನೇಕ ಇತರ ಶಬ್ದಗಳನ್ನು ಅಥವಾ ಪದಸಮುಚ್ಛಯಗಳನ್ನು ಬಳಸಲಾಗುತ್ತಿದ್ದು, ಅವುಗಳಲ್ಲಿ ಲೈಟ್ (ಅಥವಾ lite ), ಲೀನ್ (lean) , ನೊ ಕ್ಯಾಲೊರಿ , ಲೋ ಕ್ಯಾಲೊರಿ , ಲೋ ಫ್ಯಾಟ್ , ನೊ ಫ್ಯಾಟ್ , ಫ್ಯಾಟ್ ಫ್ರೀ , ನೊ ಶುಗರ್ , ಶುಗರ್ ಫ್ರೀ , ಮತ್ತು ಝೀರೊ ಕ್ಯಾಲೊರಿ ಎಂಬುವವು ಮುಖ್ಯವಾಗಿವೆ. ಇನ್ನು ಕೆಲವು ಕ್ಷೇತ್ರಗಳಲ್ಲಿ ಈ ಶಬ್ದಗಳ ಬಳಕೆಯು ಕಾನೂನಿನಿಂದ ನಿಯಂತ್ರಿಸಲ್ಪಡುತ್ತದೆ. ಉದಾಹರಣೆಗೆ ಯು.ಎಸ್.ನಲ್ಲಿ ೦}ಲೋ ಫ್ಯಾಟ್ ಎಂದು ಕರೆಯಲ್ಪಡುವ ಒಂದು ಉತ್ಪನ್ನವು ಒಂದು ಬಡಿಸುವಿಕೆಯಲ್ಲಿ ೩ ಗ್ರಾಂಗಳಿಗಿಂತ ಹೆಚ್ಚಿನ ಕೊಬ್ಬನ್ನು ಒಳಗೊಂಡಿರುವಂತಿಲ್ಲ; ಮತ್ತು ಫ್ಯಾಟ್ ಫ್ರೀ ಎಂಬ ಲೇಬಲ್ ಹಾಕುವುದಾದರೆ ಒಂದು ಬಡಿಸುವಿಕೆಯಲ್ಲಿ ೦.೫ ಗ್ರಾಂಗಳಿಗಿಂತ ಹೆಚ್ಚಿನ ಕೊಬ್ಬನ್ನು ಒಳಗೊಂಡಿರುವಂತಿಲ್ಲ.[೧]

ಕಾರ್ಯವಿಧಾನ ಬದಲಾಯಿಸಿ

ಪಥ್ಯಾಹಾರವನ್ನು ಮಾಡುವ ಪ್ರಕ್ರಿಯೆಯಲ್ಲಿ ಮೊದಲು ಹೆಚ್ಚಿನ ಕ್ಯಾಲೊರಿಯಿರುವ ಆಹಾರ ಘಟಕಾಂಶದ ಬದಲು ಒಂದು ಸ್ವೀಕಾರಾರ್ಹವಾದ ಕನಿಷ್ಟ ಕ್ಯಾಲೊರಿ ಬದಲಿ ಆಹಾರವನ್ನು ಕಂಡುಕೊಳ್ಳುವುದು ಅಗತ್ಯವಾಗುತ್ತದೆ. ಇದು ಆಹಾರದ ಕೆಲವು ಅಥವಾ ಎಲ್ಲಾ ಸಕ್ಕರೆಯನ್ನು ಸಕ್ಕರೆ ಪರ್ಯಾಯದೊಂದಿಗೆ ಬದಲಿಸುವಷ್ಟು ಸುಲಭವಾಗಿದೆ. ಉದಾಹರಣೆಗೆ ಪಥ್ಯದ ಪಾನಿಯವಾದ ಕೊಕಾ-ಕೊಲಾದಲ್ಲಿ ಬದಲಿಸಿದಂತೆ (ಉದಾಹರಣೆಗೆ ಪಥ್ಯ ಕೋಕ್). ಕೆಲವು ಲಘು ಆಹಾರಗಳಲ್ಲಿ, ಕರಿಯುವ ಬದಲು ಬೇಯಿಸುವ ಮೂಲಕ ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದಾಗಿದೆ. ಇನ್ನು ಬೇರೆ ಸಂದರ್ಭಗಳಲ್ಲಿ, ಕನಿಷ್ಟ ಮೇದಸ್ಸಿನ ಘಟಕಾಂಶಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಿಕೊಳ್ಳಬಹುದಾಗಿದೆ.

ಕಾಳಿನ ಆಹಾರಗಳಲ್ಲಿ, ಹೆಚ್ಚಿನ ಫೈಬರ್ ಇದ್ದು, ಅದನ್ನು ಹೆಚ್ಚಿನ ಪಿಷ್ಟವಿರುವ ಹಿಟ್ಟಿನ ಬದಲಾಗಿ ಬಳಸುವ ಮೂಲಕ ಇದನ್ನು ಮಾಡಬಹುದಾಗಿದೆ. ಕೆಲವು ಫೈಬರ್‌ಗಳಲ್ಲಿ ಯಾವುದೇ ಮಟ್ಟದ ಕ್ಯಾಲೊರಿ ಇಲ್ಲದಿರುವುದರಿಂದಾಗಿ, ಅದು ಉತ್ತಮ ಮಟ್ಟದಲ್ಲಿ ಕ್ಯಾಲರಿ ಕಡಿತಕ್ಕೆ ಸಹಾಯ ಮಾಡುತ್ತದೆ. ಇನ್ನೊಂದು ತಂತ್ರವೆಂದರೆ ಇತರೆ ಉದ್ದೇಶಪೂರ್ವಕವಾಗಿ ಕ್ಯಾಲೊರಿ-ಕಡಿತಗೊಳಿಸಿದ ಆಹಾರ ಘಟಕಗಳನ್ನು ಸೇರಿಸುವುದು, ಉದಾಹರಣೆಗೆ ಹಿಟ್ಟಿನ ಬದಲಾಗಿ ನಿರೋಧಕ ಪಿಷ್ಟ ಅಥವಾ ಡಯೆಟರಿ ಫೈಬರ್ ಬಳಸುವುದು ಮತ್ತು ಗಮನಾರ್ಹವಾಗಿ ಕ್ಯಾಲರಿ ಕಡಿಮೆಗೊಳಿಸುವುದು.[೨]

ವಿವಾದ ಬದಲಾಯಿಸಿ

ಶರ್ಕರ ಪದಾರ್ಥದ ಬದಲು ಕನಿಷ್ಟ-ಕ್ಯಾಲೊರಿಯುಳ್ಳ ಪರ್ಯಾಯ ಆಹಾರವಿರುವ ಪಥ್ಯಾಹಾರಗಳ[೩] ಕುರಿತಂತೆ ಇರುವ ವಿವಾದವೆಂದರೆ ಶರ್ಕರ ಪದಾರ್ಥದ ಬದಲು ಬಳಸುವ ಶರ್ಕರ ಪರ್ಯಾಯವು ಆರೋಗ್ಯಕ್ಕೆ ಹಾನಿಕರವಾಗಿರುತ್ತವೆ ಎಂಬುದು. ಈ ವಿವಾದವನ್ನು ಸಮರ್ಥವಾಗಿ ಪರಿಹರಿಸಲಾಗಿದ್ದರೂ ಕೂಡಾ (ಈಗ ಅದು ಉಳಿದಿಲ್ಲ[೪]), ಕ್ಯಾಲೋರಿಯನ್ನು ಕಡಿಮೆಗೊಳಿಸುವಿಕೆಯು ಸಂಭವನೀಯ ನಷ್ಟಕ್ಕಿಂತ ಹೆಚ್ಚು ಪ್ರಾಮುಖ್ಯವಾದುದ್ದೇ ಎಂಬ ಪ್ರಶ್ನೆಯು ಇನ್ನೂ ಉಳಿದಿದೆ.

ಅನೇಕ ಕನಿಷ್ಟ-ಮೇದಸ್ಸು ಮತ್ತು ಮೇದಸ್ಸು-ಮುಕ್ತ ಆಹಾರಗಳಲ್ಲಿ, ಮೇದಸ್ಸಿನ ಪರ್ಯಾಯವಾಗಿ ಸಕ್ಕರೆಯನ್ನು, ಹಿಟ್ಟನ್ನು, ಅಥವಾ ಇತರೆ ಪೂರ್ಣ-ಕ್ಯಾಲೊರಿ ಘಟಕಾಂಶಗಳನ್ನು ಬಳಸಲಾಗುತ್ತದೆ, ಮತ್ತು ಇದರಲ್ಲಿ ಕ್ಯಾಲೊರಿಯ ಕಡಿತವು ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ.[೫] ಇದಲ್ಲದೇ, ಹೆಚ್ಚಿನ ಪ್ರಮಾಣದ ಜೀರ್ಣವಾಗಬಲ್ಲ ಸಕ್ಕರೆಯು (ಹೆಚ್ಚಿನ ಪ್ರಮಾಣದ ಯಾವುದೇ ಮ್ಯಾಕ್ರೋನ್ಯೂಟ್ರಿಯೆಂಟ್ ಸಹಾ) ಮೇದಸ್ಸಾಗಿ ದೇಹದಲ್ಲಿ ಸಂಗ್ರಹಗೊಳ್ಳುತ್ತದೆ.

ಇವನ್ನೂ ಗಮನಿಸಿ‌ ಬದಲಾಯಿಸಿ

  • ಪಥ್ಯದಲ್ಲಿರುವುದು‌
  • ಕ್ಯಾಲೊರಿ ನಿರ್ಬಂಧಿತ ಪಥ್ಯ
  • ಕನಿಷ್ಟ-ಕಾರ್ಬೋಹೈಡ್ರೇಟ್ ಇರುವ ಪಥ್ಯ
  • ಕನಿಷ್ಟ ಜಿಐ ಪಥ್ಯ
  • ಒಲೆಸ್ಟ್ರಾ
  • ಆನ್‌ಲೈನ್ ಮೂಲಕ ಭಾರ ಕಡಿಮೆಗೊಳಿಸುವ ಉಪಾಯಗಳು

ಉಲ್ಲೇಖಗಳು‌ ಬದಲಾಯಿಸಿ

  1. ಡೆಫಿನಿಶನ್ಸ್ ಆಫ್ ನ್ಯೂಟ್ರಿಯೆಂಟ್ ಕಂಟೆಂಟ್ ಕ್ಲೈಮ್ಸ್ Archived 2013-03-07 ವೇಬ್ಯಾಕ್ ಮೆಷಿನ್ ನಲ್ಲಿ., ಯು.ಎಸ್. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್‌
  2. ನಿರೋಧಕ ಪಿಷ್ಟ ಬದಲಾವಣೆ ವ್ಯವಸ್ಥೆ Archived 2011-07-10 ವೇಬ್ಯಾಕ್ ಮೆಷಿನ್ ನಲ್ಲಿ..
  3. ಪಥ್ಯ ಮತ್ತು ಉತ್ತಮ ಆಹಾರ, ರಾಷ್ಟ್ರೀಯ ಆರೋಗ್ಯ ಸೇವೆ
  4. "ಡಯಟ್‌ಪೀಡಿಯಕ್ಕೆ ಸ್ವಾಗತ -- ಡಯಟ್‌ ಎನ್‌ಸೈಕ್ಲೋಪೀಡಿಯಾ". Archived from the original on 2019-07-09. Retrieved 2011-04-25.
  5. ಮೇದಸ್ಸು-ಮುಕ್ತ ಮತ್ತು ಸಾಮಾನ್ಯ ಕ್ಯಾಲೊರಿ ಹೋಲಿಕೆ Archived 2007-06-17 ವೇಬ್ಯಾಕ್ ಮೆಷಿನ್ ನಲ್ಲಿ., ಯು.ಎಸ್. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್‌