ನೀರಿನ ಫ್ಲೂರೈಡೀಕರಣ

ದಂತಕ್ಷಯವನ್ನು ಕಡಿಮೆಗೊಳಿಸಲು ಸಾರ್ವಜನಿಕ ನೀರು ಸರಬರಾಜಿಗೆ ನಿಯಂತ್ರಿತ ಪ್ರಮಾಣದಲ್ಲಿ ಫ್ಲೋರೈಡ್‌ನ್ನು ಸೇರಿಸುವುದೇ ನೀರಿನ ಫ್ಲೂರೈಡೀಕರಣ . ಫ್ಲೂರೈಡೀಕರಿಸಿದ ನೀರು ಹಲ್ಲುಗಳು ಟೊಳ್ಳಾಗುವುದನ್ನು, ಹಲ್ಲುಗಳಲ್ಲಿ ಕುಳಿಗಳುಂಟಾಗುವುದನ್ನು ತಡೆಗಟ್ಟಲು ಸಾಮರ್ಥ್ಯ ಹೊಂದಿರುವಷ್ಟು ಫ್ಲೋರೈಡ್ ಪ್ರಮಾಣವನ್ನು ಒಳಗೊಂಡಿದ್ದು ಸ್ವಾಭಾವಿಕವಾಗಿಯೇ ಲಭ್ಯವಾಗುತ್ತದೆ ಅಥವಾ, ನೀರಿಗೆ ಫ್ಲೂರೈಡ್‌ನ್ನು ಸೇರಿಸುವುದರಿಂದ ಉಂಟಾಗುತ್ತದೆ.[೨] ಕೆಲವು ಭೂಖಂಡಗಳು ಉಪ್ಪನ್ನು ಫ್ಲೋರೈಡೀಕರಿಸಿದರೂ, ಯುರೋಪ್ ಭೂಖಂಡವು ಸಾರ್ವಜನಿಕ ನೀರು ಸರಬರಾಜನ್ನು ಫ್ಲೋರೈಡೀಕರಿಸದೇ ಇರುವುದರಿಂದ ನೀರಿನ ಫ್ಲೂರೈಡೀಕರಣದ ಬಳಕೆಯು ಮುಖ್ಯವಾಗಿ ಇಂಗ್ಲೀಷ್ ಮಾತನಾಡುವ ದೇಶಗಳಲ್ಲಿ ನಡೆದಿದೆ.[೩] ಫ್ಲೂರೈಡೀಕರಿಸಿದ ನೀರು ಹಲ್ಲಿನ ಮೇಲ್ಪದರಗಳ ಮೇಲೆ ಪ್ರಭಾವಬೀರುತ್ತದೆ. ಈ ನೀರು ಹಲ್ಲು ಗುಳಿಗಳುಂಟಾಗುವ ಪ್ರಥಮ ಹಂತಗಳಲ್ಲಿ ಸಂಭವಿಸುವ ಹಲ್ಲಿನ ಎನಾಮಲ್‌‌ನ ಖನಿಜಾಂಶಗಳ ನಷ್ಟದ ಪ್ರಮಾಣವನ್ನು ಕಡಿಮೆಗೊಳಿಸಿ ಅದು ಪುನರ್‌ಖನಿಜೀಕರಣವಾಗುವ ಪ್ರಮಾಣವನ್ನು ಹೆಚ್ಚುಮಾಡುವಂತೆ ಬಾಯಿಯ ಲಾಲಾರಸದಲ್ಲಿರುವ(ಜೊಲ್ಲುರಸ) ಫ್ಲೂರೈಡ್ ಪ್ರಮಾಣವನ್ನು ತಗ್ಗಿಸುತ್ತದೆ.[೪] ಮುಖ್ಯವಾಗಿ, ಫ್ಲೂರೈಡ್‌ಯುಕ್ತ ಸಂಯುಕ್ತಗಳು ಕುಡಿಯುವ ನೀರಿಗೆ ಸೇರಿಸಲ್ಪಡುವ ಪ್ರಕ್ರಿಯೆಯ ವೆಚ್ಚವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರತೀ ವರ್ಷಕ್ಕೆ, ಪ್ರತೀ ವ್ಯಕ್ತಿಗೆ ಸುಮಾರುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".{Inflation} - NaN check amount: 0.72 or year: 1999.  ಡಾಲರ್‌ಗಳು.[೨][೫] ನೈಸರ್ಗಿಕ ಫ್ಲೂರೈಡ್ ಪ್ರಮಾಣವು ಶಿಫಾರಸ್ಸು ಮಾಡಿದ ಮಿತಿಗಿಂತ ಹೆಚ್ಚಾಗಿದ್ದರೆ, ಅದರಿಂದ ಫ್ಲೋರೈಡ್ ಅಂಶಗಳನ್ನು ಹೊರತೆಗೆಯಬೇಕಾಗುತ್ತದೆ.[೬] ಹವಾಮಾನಕ್ಕನುಗುಣವಾಗಿ ಫ್ಲೋರೈಡ್ ಪ್ರಮಾಣವು ಪ್ರತೀ ಲೀಟರಿಗೆ ೦.೫ ರಿಂದ ೧.೦ ಮಿಲಿಗ್ರಾಮ್‌‌ಗಳಷ್ಟು ಇರಬಹುದು ಎಂದು ೧೯೯೪ ವಿಶ್ವ ಆರೋಗ್ಯ ಸಂಸ್ಥೆಯ ಪರಿಣಿತ ಮಂಡಳಿಯು ಸೂಚಿಸಿದೆ.[೭] ಬಾಟಲಿಗಳಲ್ಲಿ ತುಂಬಿದ ನೀರು ಅರಿವಿರದ (ಇನ್ನೂ ತಿಳಿದಿಲ್ಲದ) ಫ್ಲೂರೈಡ್ ಮಟ್ಟವನ್ನು ಹೊಂದಿದ್ದು, ಕೆಲವು ಸ್ವದೇಶೀ ನೀರು ಶೋಧಕಗಳು (ವಾಟರ್ ಫಿಲ್ಟರ್) ಅಲ್ಪ ಪ್ರಮಾಣದ ಅಥವಾ ಎಲ್ಲಾ ಫ್ಲೂರೈಡ್ ಅಂಶಗಳನ್ನು ಹೊರತೆಗೆಯುತ್ತವೆ.[೮]

Clear water pours from a spout into a drinking glass.
ಫ್ಲೂರೈಡೀಕರಣವು ನೀರಿಗೆ ಬಣ್ಣ, ವಾಸನೆ, ರುಚಿಯನ್ನುಂಟು ಮಾಡುವುದಿಲ್ಲ.[೧]

ಕೈಗಾರಿಕೀಕರಣಗೊಂಡ ಹೆಚ್ಚಿನ ದೇಶಗಳಲ್ಲಿ ಸುಮಾರು ೬೦ - ೯೦% ಶಾಲಾಮಕ್ಕಳನ್ನು ಮತ್ತು ಹೆಚ್ಚಿನ ಪ್ರೌಢರನ್ನು ಬಾಧಿಸುವ ಹಲ್ಲಿನ ಕುಳಿಗಳು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಮುಖ್ಯ ವಿಚಾರವಾಗಿಯೇ ಉಳಿದಿದೆ.[೯] ನೀರಿನ ಫ್ಲೂರೈಡೀಕರಣವು ಮಕ್ಕಳು ಮತ್ತು ಪ್ರೌಢರಲ್ಲೂ[೧೦] ಕಂಡುಬರುವ ಹಲ್ಲಿನ ಕುಳಿಗಳನ್ನು ತಡೆದಿದೆ. ಅಧ್ಯಯನಗಳು ಈಗಾಗಲೇ ಟೂತ್‌ಪೇಸ್ಟ್ ಮತ್ತು ಫ್ಲೂರೈಡ್ ಅಂಶಗಳನ್ನೊಳಗೊಂಡ ಇತರ ಮೂಲಗಳನ್ನು ಬಳಸುತ್ತಿರುವ ಮಕ್ಕಳಲ್ಲಿ ನೀರಿನ ಫ್ಲೂರೈಡೀಕರಣದಿಂದ ಸುಮಾರು ೧೮-೪೦% ಪ್ರಮಾಣದಷ್ಟು ಹಲ್ಲಿನ ಕುಳಿಗಳು ಇಳಿಕೆಯಾಗಿದೆ ಎಂದು ಅಂದಾಜುಮಾಡಿವೆ.[೨] ನೀರಿನ ಫ್ಲೂರೈಡೀಕರಣವು ಬೆಳೆಯುತ್ತಿರುವ ಹಲ್ಲಿನ ಸ್ವರೂಪವನ್ನು ಬದಲಾಯಿಸಬಲ್ಲ ಹಲ್ಲಿನ ಫ್ಲೂರೋಸಿಸ್ (ಫ್ಲೋರಿನ್ ಸೇವನೆಯಿಂದ ಉಂಟಾಗುವ ನಂಜು ಸ್ಥಿತಿ)ಗೆ ಕಾರಣವಾಗುವುದಾದರೂ, ಇದು ಅಷ್ಟೇನೂ ತೀವ್ರವಲ್ಲದ ಕಾರಣ ಸೌಂದರ್ಯದ ದೃಷ್ಟಿಯಲ್ಲಿ ಅಥವಾ ಸಾರ್ವಜನಿಕ ಆರೋಗ್ಯದ ದೃಷ್ಟಿಯಲ್ಲಿ ಗಂಭೀರವಾಗಿ ಪರಿಗಣಿಸಲ್ಪಟ್ಟಿಲ್ಲ.[೧೧] ಇತರ ದುಷ್ಪರಿಣಾಮಗಳ ಕುರಿತಾಗಿ ಸ್ಪಷ್ಟ ಸಾಕ್ಷ್ಯಗಳಿಲ್ಲ. ಮಧ್ಯಮವರ್ಗದ ಗುಣಮಟ್ಟದ ಅಧ್ಯಯನಗಳು ಪರಿಣಾಮಕಾರಿತ್ವವನ್ನು ಸಂಶೋಧಿಸಿವೆ.ದುಷ್ಪರಿಣಾಮಗಳ ಮೇಲಿನ ಅಧ್ಯಯನವು ಕೆಳದರ್ಜೆಯದ್ದಾಗಿದೆ.[೧೨] ಫ್ಲೋರೈಡ್‌ಗಳ ಪರಿಣಾಮವು ಪ್ರತೀ ದಿನ ಎಲ್ಲಾ ಮೂಲಗಳಿಂದ ಒಟ್ಟು ಎಷ್ಟು ಪ್ರಮಾಣದ ಫ್ಲೋರೈಡ್‌ಗಳನ್ನು ಸೇವಿಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಮುಖ್ಯವಾಗಿ ಕುಡಿಯುವ ನೀರು ಅತೀ ದೊಡ್ಡ ಮೂಲವಾಗಿದೆ.[೧೩] ಫ್ಲೂರೈಡ್‌ ಚಿಕಿತ್ಸೆಗಳ ಇತರ ವಿಧಾನಗಳೆಂದರೆ, ದಂತಮಂಜನಗಳ(ಟೂತ್‌ಪೇಸ್ಟ್) ಫ್ಲೂರೈಡೀಕರಣ, ಉಪ್ಪು ಮತ್ತು ಹಾಲು.[೧೪] ನೀರಿನ ಫ್ಲೋರೈಡೀಕರಣವು ಉಪಯುಕ್ತ ಹಾಗೂ ಸಾಂಪ್ರದಾಯಿಕವಾಗಿ ಸ್ವೀಕರಿಸಲ್ಪಟ್ಟಾಗ ವಿಶೇಷವಾಗಿ, ಅಪಾಯಕ್ಕೊಳಪಟ್ಟ ಜನರ ಗುಂಪುಗಳಿಗೂ ಸೇರಿದಂತೆ, ಗಣನೀಯ ಪ್ರಮಾಣದ ಪ್ರಯೋಜನಗಳನ್ನೇ ನೀಡಿದೆ.[೯] ಯು.ಎಸ್‌ನ ರೋಗ ನಿಯಂತ್ರಕ ಕೇಂದ್ರಗಳು (ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್) ನೀರಿನ ಫ್ಲೂರೈಡೀಕರಣವು ೨೦ನೇ ಶತಮಾನದ[೧೫] ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ನಡೆದ ಹತ್ತು ಸಾಧನೆಗಳಲ್ಲೊಂದು ಎಂದು ಗುರುತಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ, ಹೆಚ್ಚಿನ ಯುರೋಪ್ ದೇಶಗಳು ೧೯೭೦ರಲ್ಲಿ ಫ್ಲೂರೈಡ್‌ಯುಕ್ತ ದಂತಮಂಜನಗಳ ಪ್ರವೇಶವಾದ ಕಾರಣದಿಂದ ಫ್ಲೂರೈಡ್‌ಯುಕ್ತ ನೀರಿನ ಬಳಕೆಯಿಲ್ಲದೇ ದಂತಕ್ಷಯದ ಪ್ರಮಾಣವು ಗಣನೀಯವಾಗಿ ತಗ್ಗಿರುವುದನ್ನು ಗಮನಿಸಿವೆ.[೪] ದೇಹದ ಹೊರಭಾಗಗಳಿಗೆ ಬಳಸುವ ಫ್ಲೂರೈಡ್‌ಗಳನ್ನು(ಟೂತ್‌ಪೇಸ್ಟ್ ಮೊದಲಾದ) ಬಳಸುವ ಮೂಲಕ ಕೈಗಾರಿಕೀಕರಣ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಫ್ಲೂರೈಡೀಕರಿಸಿದ ನೀರಿನ ಅಗತ್ಯವನ್ನು ತಳ್ಳಿಹಾಕುವ ಪ್ರಸಂಗಗಳನ್ನು ತಡೆಯಬಹುದು ಎಂದು ಸೂಚಿಸಿದೆ.[೪] ಹಲ್ಲಿನ ಆರೋಗ್ಯ ಮತ್ತು ಹಲ್ಲಿನ ಜಾಗೃತಿಯ ಬಗ್ಗೆ ಸಾಮಾಜಿಕ ಮಾತ್ತು ಆರ್ಥಿಕವಾಗಿ ಅಸಮಾನತೆಯನ್ನು ಹೊಂದಿರುವುದರಿಂದ, ನೀರಿನ ಫ್ಲೂರೈಡೀಕರಣವು ಯು.ಎಸ್‌ನಲ್ಲಿ ಸಮರ್ಥನೆಗೊಳಪಟ್ಟಿದೆ.[೧೬]

ಆರ್ಥಿಕವಾಗಿ ಹಿಂದುಳಿದ ಮತ್ತು ಚಿಕ್ಕಮಕ್ಕಳ ಮೇಲೆ ಅಪಾಯಕಾರಿ ಪರಿಣಾಮ ಬೀರುವ ಭೀಕರ ರೋಗಗಳನ್ನು ತಡೆಗಟ್ಟುವುದೇ ನೀರಿನ ಫ್ಲೂರೈಡೀಕರಣದ ಮುಖ್ಯ ಉದ್ದೇಶ.[೧೭] ಇದರ ಉಪಯೋಗವು ಸಾರ್ವತ್ರಿಕ ಒಳಿತು ಮತ್ತು ವೈಯಕ್ತಿಕ ಹಕ್ಕುಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಿದೆ.[೧೮] ಇದು ವಿವಾದಾತ್ಮಕವಾಗಿದೆ,[೧೯] ಇದಕ್ಕೆ ವಿರುದ್ಧವಾಗಿ ಇದು ಸಾಂಪ್ರದಾಯಿಕ, ಕಾನೂನುಬದ್ಧ, ಸುರಕ್ಷೆ ಮತ್ತು ದಕ್ಷತೆಯ ನೆಲೆಯಲ್ಲಿ ಖಂಡನೆಗೊಳಗಾಯಿತು.[೨೦] ಆರೋಗ್ಯ ಮತ್ತು ದಂತ ವೈದ್ಯಕೀಯ ಸಂಸ್ಥೆಗಳು ಇದರ ರಕ್ಷಣಾತ್ಮಕ ಮತ್ತು ಪರಿಣಾಮಕಾರಿತ್ವ ಗುಣಗಳನ್ನು ದೃಢೀಕರಿಸಿದವು.[೪] ಇದರ ಬಳಕೆಯು ೧೯೪೫ರಲ್ಲಿ ಆರಂಭವಾಗಿ ನೈಸರ್ಗಿಕವಾಗಿ ಅಧಿಕ ಫ್ಲೂರೈಡ್ ಮಟ್ಟ ಹೊಂದಿರುವ ನೀರಿರುವ ಪ್ರದೇಶಗಳಲ್ಲಿ ನೆಲೆಸಿರುವ ಮಕ್ಕಳ ಮೇಲೆ ಅಧ್ಯಯನ ಮುಂದುವರೆಯಿತು.[೨೧] ಮಿತವಾದ ಫ್ಲೋರೈಡೀಕರಣವು ದಂತಕ್ಷಯ[೨೨] ವನ್ನು ತಡೆಯುತ್ತವೆ ಮತ್ತು ೨೦೦೪ರಲ್ಲಿ ವಿಶ್ವದಾದ್ಯಂತ ಸುಮಾರು ೪೦೦ ಮಿಲಿಯ ಜನರು ಫ್ಲೂರೈಡೀಕರಿಸಿದ ನೀರನ್ನು ಬಳಸಿದ್ದಾರೆ ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.[೨೩]

ಉದ್ದೇಶ ಬದಲಾಯಿಸಿ

 
ಹಲ್ಲಿನ ಹೊರಭಾಗದ ಎನಾಮಲ್‌ನಲ್ಲಿ ಕುಳಿಯನ್ನುಂಟುಮಾಡುತ್ತದೆ ಮತ್ತು ದಂತ ದ್ರವ್ಯ ಮತ್ತು ಒಳಗಿನ ತಿರುಳನ್ನೂ ಪ್ರವೇಶಿಸುತ್ತದೆ.

ಸಾರ್ವಜಿಕ ನೀರು ಸರಬರಾಜಿನಲ್ಲಿ ಫ್ಲೂರೈಡ್‌ನ ಪ್ರಭಲತೆಯನ್ನು ಸರಿಹೊಂದಿಸಿ ದಂತಕ್ಷಯವನ್ನು ತಡೆಹಿಡಿಯುವುದೇ ನೀರಿನ ಫ್ಲೂರೈಡೀಕರಣದ ಮುಖ್ಯ ಉದ್ದೇಶವಾಗಿದೆ.[೨] ಪ್ರಪಂಚದಾದ್ಯಂತ ದೀರ್ಘಕಾಲದಿಂದಲೂ ವ್ಯಾಪಿಸಿದ ರೋಗಗಳಲ್ಲಿ ದಂತಕ್ಷಯವು (ಮೂಳೆಗಳ ಯಾ ಹಲ್ಲಿನ ಸವೆತ) ಕೂಡಾ ಒಂದು.[೧೭] ಇದಲ್ಲದೇ ಪ್ರಾಣಾಪಾಯದ ಜೊತೆಗೆ, ದಂತಕ್ಷಯವು ಹಲ್ಲುಗಳ ನೋವಿನೊಂದಿಗೆ, ಮುಖದ ಅಂದಗೆಡಿಸಿ ಮಾತನಾಡುವುದಕ್ಕೆ, ತಿನ್ನುವುದಕ್ಕೆ ಅಡ್ಡಿಯುಂಟುಪಡಿಸುತ್ತದೆ ಜೊತೆಗೆ ಸಮಾಜದ[೨೪] ತಿರಸ್ಕಾರಕ್ಕೂ ಗುರಿಯಾಗುವಂತೆ ಮಾಡುತ್ತದೆ. ಅಲ್ಲದೆ, ವಿಶೇಷವಾಗಿ ಇದು ಆರ್ಥಿಕ ಮತ್ತು ಸಾಮಾಜಿಕವಾಗಿ ಕೆಳದರ್ಜೆಯಲ್ಲಿರುವ ಕುಟುಂಬದ ಮಕ್ಕಳ ಜೀವನವಿಧಾನದಲ್ಲಿ ತನ್ನ ಗಂಭೀರ ಪ್ರಭಾವವನ್ನು ಬೀರುತ್ತದೆ.[೧೭] ಕೈಗಾರಿಕೀಕರಣ ಹೊಂದಿದ ಹೆಚ್ಚಿನ ದೇಶಗಳಲ್ಲಿ ದಂತಕ್ಷಯವು ಸುಮಾರು ೬೦ - ೯೦% ಶಾಲಾಮಕ್ಕಳನ್ನು ಬಾಧಿಸಿದ್ದು ಭಾರೀ ಪ್ರಮಾಣದಲ್ಲಿ ಹಿರಿಯರಲ್ಲೂ ಕಂಡುಬಂದಿದೆ. ಆದರೆ, ಆಫ್ರಿಕಾದ ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಇದರ ಸಮಸ್ಯೆಗಳು ಕಡಿಮೆಯೆಂದು ತೋರಿದರೂ, ಬದಲಾಗುತ್ತಿರುವ ಆಹಾರಾಭ್ಯಾಸ ಮತ್ತು ಫ್ಲೂರೈಡ್‌ಗಳ ಕೊರತೆಯ ಕಾರಣಗಳಿಂದ ಹೆಚ್ಚಿನ ದೇಶಗಳಲ್ಲಿ ಈ ರೋಗವು ಹೆಚ್ಚಾಗುವ ನಿರೀಕ್ಷೆಯಿದೆ.[೯] ಯು.ಎಸ್‌ನ ಅಲ್ಪಸಂಖ್ಯಾತರು ಮತ್ತು ಬಡವರಲ್ಲಿ ಕ್ಷಯಿಸಿದ ಮತ್ತು ಬಿದ್ದುಹೋದ ಹಲ್ಲಿನ[೨೫] ಸಮಸ್ಯೆಗಳ ಪ್ರಮಾಣವು ಹೆಚ್ಚಾಗಿದ್ದು ಇಲ್ಲಿನ ಮಕ್ಕಳಲ್ಲಿ ಹಲ್ಲುಗಳ ಆರೋಗ್ಯದ ಬಗ್ಗೆ ಕಾಳಜಿ ಬಹಳ ಕಡಿಮೆಯಾಗಿದೆ.[೨೬] ಒಮ್ಮೆ ಹಲ್ಲುಗಳಲ್ಲಿ ರಂಧ್ರಗಳು ಮೂಡಿತೆಂದರೆ, ಮತ್ತೆ ಇದನ್ನು ಆಗಾಗ ತುಂಬಿಸಿಕೊಳ್ಳಬೇಕಾಗಿ ಬರುತ್ತದೆ. ಅಂದಾಜಿನ ಪ್ರಕಾರ, ಮಿಶ್ರಣಗಳಿಂದ ತುಂಬಿಸಲ್ಪಟ್ಟ (ಅಮಾಲ್ಗಮ್ ಟೂತ್ ಫಿಲ್ಲಿಂಗ್) ಹಲ್ಲುಗಳ ಜೀವಿತಾವಧಿಯು ಸುಮಾರು ೯ ರಿಂದ ೧೪ ವರ್ಷಗಳು ಮಾತ್ರ.[೨೭] ಬಾಯಿಯ ರೋಗವು ದುಬಾರಿ ಚಿಕಿತ್ಸಾವೆಚ್ಚ ತಗಲುವ ನಾಲ್ಕನೆಯ ರೋಗ.[೨೮] ನೀರಿನ ಅಥವಾ ಉಪ್ಪಿನ ಫ್ಲೂರೈಡೀಕರಣವನ್ನು ಬಳಸುವಂತೆ ನೀಡುವ ಪ್ರೇರಣೆಯು ಬುದ್ಧಿಮಾಂದ್ಯತೆ ಹಾಗೂ ಗಾಯಿಟರ್ ರೋಗಗಳನ್ನು ತಡೆಗಟ್ಟಲು ಅಯೋಡಿನ್‌ಯುಕ್ತ ಉಪ್ಪನ್ನು ಬಳಸುವಂತೆ ನೀಡಿದ ಪ್ರೇರಣೆಗೆ ಸಮವಾಗಿದೆ.[೨೯]

ಅನುಷ್ಠಾನ ಬದಲಾಯಿಸಿ

 
1987ರಲ್ಲಿ ಮಿನ್ನೊಸೊಟಾದ ಸಮುದಾಯ ನೀರಿನ ಸ್ಥಂಭದ ಪಂಪ್‌ಹೌಸಿನಲ್ಲ್ ಫ್ಲೂರೈಡ್‌ ಪರಿವೀಕ್ಷಣೆ(ಬಲಗಡೆ).

ಫ್ಲೂರೈಡೀಕರಣವು ನೀರಿನ ರೂಪ, ರುಚಿ ಅಥವಾ ವಾಸನೆಯ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.[೧] ಸೋಡಿಯಂ ಫ್ಲೂರೈಡ್, ಫ್ಲೋರೋಸಿಲಿಸಿಕ್ ಆಸಿಡ್ ಅಥವಾ ಸೋಡಿಯಂ ಫ್ಲೋರೋಸಿಲಿಕೇಟ್ ಈ ಮೂರು ಸಂಯುಕ್ತಗಳಲ್ಲಿ ಯಾವುದಾದರೂ ಒಂದನ್ನು ನೀರಿಗೆ ಸೇರಿಸುವುದರಿಂದ ನೀರಿನ ಫ್ಲೂರೈಡೀಕರಣವನ್ನು ಮಾಡಲಾಗುತ್ತದೆ.

  • ಸೋಡಿಯಂ ಫ್ಲೂರೈಡ್ (NaF) ಪ್ರಥಮ ಬಾರಿಗೆ ಉಪಯೋಗಿಸಿದ ಸಂಯುಕ್ತ ಮತ್ತು ಇದು ಉತ್ಕೃಷ್ಟ ದರ್ಜೆಯ ಉಲ್ಲೇಖಗಳನ್ನು ಹೊಂದಿದೆ.[೩೦] ಇದು ಬಿಳಿಬಣ್ಣದ ವಾಸನಾರಹಿತ ಪುಡಿ ಅಥವಾ ಹರಳಿನ ರೂಪದಲ್ಲಿದ್ದು, ಕೈಯಾರೆ ಮಾಡುವಾಗ ಹರಳಿನ ರೂಪದ ಸಂಯುಕ್ತವನ್ನೇ ಬಳಸಲಾಗುತ್ತದೆ ಯಾಕೆಂದರೆ, ಹರಳಿನ ರೂಪದ ಸಂಯುಕ್ತವು ಧೂಳಿನ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.[೩೧] ಇತರ ಸಂಯುಕ್ತಗಳಿಗಿಂತ ಇದು ಹೆಚ್ಚು ದುಬಾರಿಯಾಗಿದ್ದರೂ, ಇದರ ನಿರ್ವಹಣೆ ಸುಲಭ ಮತ್ತು ಇದನ್ನು ಸಣ್ಣ ಪ್ರಮಾಣದಲ್ಲಿ ಚಿಲ್ಲರೆ ಕಂಪನಿಗಳು ಬಳಸುತ್ತವೆ.[೩೨]
  • ಫ್ಲೋರೋಸಿಲಿಸಿಕ್ ಆಸಿಡ್ (HSiF) ಅಗ್ಗದ ಬೆಲೆಯ ದ್ರವವಾಗಿದ್ದು ಫಾಸ್ಪೇಟ್ ಗೊಬ್ಬರ ತಯಾರಿಕೆಯಲ್ಲಿ ದೊರೆಯುವ ಉಪ-ಉತ್ಪನ್ನವಾಗಿದೆ.[೩೦] ಇದು ವಿಭಿನ್ನ ಶಕ್ತಿಗಳಲ್ಲಿ ದೊರೆಯುತ್ತದೆ, ಮುಖ್ಯವಾಗಿ ೨೩ - ೨೫% ಪ್ರಬಲತೆಯಲ್ಲಿ ಲಭ್ಯವಾಗುತ್ತಿದ್ದು, ಇದರಲ್ಲಿ ನೀರಿನಂಶವು ಹೆಚ್ಚಾಗಿದ್ದರಿಂದ ಜಲ-ಸಾಗಾಣಿಕೆಯು ದುಬಾರಿಯಾಗುತ್ತದೆ.[೩೧] ಇದು ಹೆಕ್ಸಾಫ್ಲೋರೋಸಿಲಿಸಿಕ್, ಹೆಕ್ಸಾಫ್ಲೋಸಿಲಿಸಿಕ್, ಹೈಡ್ರೋಫ್ಲೋಸಿಲಿಸಿಕ್ ಮತ್ತು ಸಿಲಿಕೋಫ್ಲೂರಿಕ್ ಆಸಿಡ್ ಎಂದೂ ಕರೆಯಲ್ಪಡುತ್ತದೆ.[೩೦]
  • ಸೋಡಿಯಂ ಫ್ಲೂರೋಸಿಲಿಕೇಟ್ (NaSiF) ಪುಡಿ ರೂಪದಲ್ಲಿ ಅಥವಾ ಸಣ್ಣ ಹರಳಿನ ರೂಪದಲ್ಲಿದ್ದು ಜಲಸಾಗಾಣಿಕೆಯಲ್ಲಿ ಫ್ಲೂರೋಸಿಲಿಸಿಕ್ ಆಸಿಡ್‌ಗಿಂತ ಅಗ್ಗದ ವೆಚ್ಚವನ್ನು ಹೊಂದಿದೆ. ಇದನ್ನು ಸೋಡಿಯಂ ಸಿಲಿಕೋ ರೈಡ್ ಎಂದೂ ಕರೆಯುತ್ತಾರೆ.

[೩೧]

ಕರಗುವಿಕೆ, ನಿರಪಾಯತೆ, ಲಭ್ಯತೆ, ಮತ್ತು ಅಗ್ಗದ ಬೆಲೆ ಈ ಲಕ್ಷಣಗಳನ್ನು ಹೊಂದಿರುವುದರಿಂದಲೇ ಈ ಸಂಯುಕ್ತಗಳನ್ನು ಆರಿಸಲಾಗಿದೆ.[೩೦] ೧೯೯೨ರ ಜನಗಣತಿಯ ಪ್ರಕಾರ, ಫ್ಲೋರಿಡೀಕರಣಕ್ಕೆ ಬಳಸಿದ ಸಂಯುಕ್ತಗಳ ಬಗ್ಗೆ ಯು.ಎಸ್‌ನ ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆಗಳು ನೀಡಿದ ವರದಿಯಲ್ಲಿ ೬೩% ಜನತೆಯು ಫ್ಲೂರೋಸಿಲಿಸಿಕ್ ಆಸಿಡ್ ಬಳಸಿ ಫ್ಲೂರಿಡೀಕರಿಸಿದ ನೀರನ್ನು ಪಡೆದಿದ್ದು ೨೮% ಜನರು ಸೋಡಿಯಮ್ ಫ್ಲೂರೋಸಿಲಿಕೇಟ್ ಹಾಗೂ ೯% ಜನರು ಸೋಡಿಯಮ್ ಫ್ಲೂರೈಡ್ ಬಳಸಿ ಫ್ಲೂರಿಡೀಕರಿಸಿದ ನೀರನ್ನು ಪಡೆದಿರುವುದು ಕಂಡುಬಂದಿದೆ.[೩೩] ಪ್ರಮುಖ ಸಂಯುಕ್ತಗಳ ತಾಂತ್ರಿಕ ಅಗತ್ಯಗಳ ಜೊತೆಗೆ, ಒಬ್ಬ ವ್ಯಕ್ತಿಗೆ ಅಗತ್ಯವಿರುವ ಪ್ರಮಾಣ, ವರದಿ, ತರಬೇತಿ, ಪರಿಶೀಲನೆ, ಮೇಲ್ವಿಚಾರಣೆ, ವಹಿಸಬೇಕಾದ ಎಚ್ಚರಿಕೆ ಹಾಗೂ ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ನಡೆಸಬೇಕಾದ ಕಾರ್ಯಗಳ ಮೇಲೆ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರವು (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಶನ್) ತನ್ನದೇ ಆದ ಶಿಫಾರಸ್ಸನ್ನು ಅಭಿವೃದ್ಧಿಗೊಳಿಸಿದೆ.[೩೪]

ಗಾಳಿಯಲ್ಲಿನ ಸರಾಸರಿ ಉಷ್ಣತೆಯ ಅಧಾರದ ಮೇಲೆ ಫ್ಲೂರೈಡ್‌ನ ಮಟ್ಟವು ಪ್ರತೀ ಲೀಟರಿಗೆ ೦.೭ರಿಂದ ೧.೨ ಮಿಲಿಗ್ರಾಂವರೆಗೆ (ಮಿಲಿಗ್ರಾಂ ಪರ್ ಲೀಟರ್, ಇಕ್ವಿವೇಲೆಂಟ್ ಟು ಪಾರ್ಟ್ಸ್ ಪರ್ ಮಿಲಿಯನ್) ಇರುವುದು ಅನುಕೂಲಕರ ಹಾಗೂ ಪ್ರಶಸ್ತ ಎಂದು ಯುಎಸ್ ಸ್ಪಷ್ಟವಾಗಿ ನಮೂದಿಸಿದೆ. ಹೆಚ್ಚು ನೀರು ಕುಡಿಯುವ ಉಷ್ಣ ವಾತಾವರಣವಿರುವ ಪ್ರದೇಶಗಳಲ್ಲಿ ಫ್ಲೂರೈಡ್‌ನ ಮಟ್ಟವು ನಿಗಧಿತ ಮಟ್ಟವು ಕಡಿಮೆಯಾಗಿದ್ದು ಶೀತ ವಾತಾವರಣ ಪ್ರದೇಶಗಳಲ್ಲಿ ಇದು ಅಧಿಕವಾಗಿರುತ್ತದೆ.[೩೫] ಹಾವಾನಿಯಂತ್ರಣ, ತಂಪು ಪಾನೀಯಗಳ ಬಳಕೆಯ, ಸಂಸ್ಕರಿಸಿದ ಆಹಾರಪದಾರ್ಥಗಳು, ಮತ್ತು ಇತರ ಫ್ಲೂರೈಡ್‌ಯುಕ್ತ ಆಕರಗಳ ಬಳಕೆ ಹೆಚ್ಚಾಗತೊಡಗಿ ಹಲವಾರು ಊಹಾಪೋಹಗಳ ಆಧಾರದ ಮೇಲೆ ರಚಿತಗೊಂಡ ೧೯೬೨ರಲ್ಲಿ ಅಂಗೀಕೃತಗೊಂಡ ಯುಎಸ್ ಮಾದರಿಯು ಪ್ರಪಂಚದ ಎಲ್ಲಾ ಭಾಗಗಳಿಗೂ ಯೋಗ್ಯವಾದುದಾಗಿರಲಿಲ್ಲ. ೧೯೯೪ರಲ್ಲಿ ಫ್ಲೋರೈಡ್ ಬಳಕೆಯ ಪರಿಣಿತ ಜಾಗತಿಕ ಆರೋಗ್ಯ ಮಂಡಳಿಯು (ವರ್ಲ್ಡ್ ಹೆಲ್ತ್ ಆರ್ಗನೈಸೇಶನ್ ಎಕ್ಸ್‌ಪರ್ಟ್ ಕಮಿಟಿ) ಪ್ರತೀ ಲೀಟರಿಗೆ ೧.೦ಮಿಲಿಗ್ರಾಂ ಫ್ಲೂರೈಡ್ ಮಟ್ಟ ತಂಪುವಾತಾವರಣದ ಪ್ರದೇಶಗಳಿಗೂ ಕೂಡಾ ಇರಲೇಬೇಕಾದ ಗರಿಷ್ಟ ಸ್ವತಂತ್ರ ಮೌಲ್ಯ ಹಾಗೂ, ಪ್ರತೀ ಲೀಟರಿಗೆ .೫ಮಿಲಿಗ್ರಾಮ್ ಫ್ಲೂರೈಡ್ ಮಟ್ಟವು ಕನಿಷ್ಟ ಮಿತಿಯಾಗಿದೆ ಎಂದು ಹೇಳಿದೆ.[೭] ೨೦೦೭ರ ಆಸ್ಟ್ರೇಲಿಯಾದ ವ್ಯವಸ್ಥಿತ ಪುನರ್‌ಪರಿಶೀಲನೆಯು ಪ್ರತೀ ಲೀಟರಿಗೆ ೦.೬ ರಿಂದ ೧.೧ ಮಿಲಿಗ್ರಾಮ್ ಫ್ಲೂರೈಡ್ ಮಟ್ಟವನ್ನು ಅನುಮೋದಿಸಿದೆ.[೧೧]

 
ಪ್ರತಿ ಲೀಟರಿಗೆ 1.5ಮಿಲಿ ಗ್ರಾಂಕ್ಕೂ ಹಚ್ಚು ನೈಸರ್ಗಿಕವಾಗಿ ಫ್ಲೋರೈಡನ್ನು ಹೊಂದಿರುವ ಅಂತರ್ಜಲದ ಭೌಗೋಳಿಕ ಪ್ರದೇಶ, ಇದು ನಿಗದಿಪಡಿಸಿದ ಮಟ್ಟಕ್ಕಿಂತ ಹೆಚ್ಚಿನದಾಗಿದೆ.[೧೧]
 
ದಕ್ಷಿಣ ಅರಿಜೋನಾದ ವಿವರಣೆ. ಗಾಡ ನೀಲಿ ಬಣ್ಣದ ಪ್ರದೇಶವು ನೈಸರ್ಗಿಕವಾಗಿ ಪ್ರತಿ ಲೀಟರಿಗೆ 2 ಮಿಲಿ ಗ್ರಾಂಗಿಂತ ಹೆಚ್ಚು ಫ್ಲೊರೈಡನ್ನು ಹೊಂದಿದೆ.

ನೈಸರ್ಗಿಕವಾಗಿ ದೊರೆಯುವ ನೀರಿನಲ್ಲಿ ದೊರೆಯುವ ಫ್ಲೂರೈಡ್ ಪ್ರಮಾಣವು ಶಿಫಾರಸ್ಸು ಮಾಡಿದ ನಿಗದಿತ ಮಟ್ಟಕ್ಕಿಂತ ಹೆಚ್ಚು ಅಥವಾ ಕಡಿಮೆ ಇರಬಹುದು. ನದಿ ಮತ್ತು ಕೆರೆಗಳು ಸಾಮಾನ್ಯವಾಗಿ ಪ್ರತೀ ಲೀಟರಿಗೆ ೦.೫ಮಿಲಿಗ್ರಾಮ್‌ಗಿಂತ ಕಡಿಮೆ ಫ್ಲೂರೈಡ್ ಮಟ್ಟವನ್ನು ಹೊಂದಿರುತ್ತದೆಯಾದರೂ ಅಂತರ್ಜಲವು ಹೆಚ್ಚೆಂದರೆ ಸುಮಾರು ಲೀಟರಿಗೆ ೫೦ಮಿಲಿಗ್ರಾಮ್ ಫ್ಲೂರೈಡ್ ಪ್ರಮಾಣವನ್ನು ಹೊಂದಿರಬಹುದು.[೧೩] ಕ್ಷಾರೀಯ ಜ್ವಾಲಾಮುಖಿಗಳಲ್ಲಿ, ಜಲೋಷ್ಣೀಯ, ಸಂಚಿತ ಮತ್ತು ಇತರ ಉದ್ಭವಿಸಿದ ಅಗ್ನಿಶಿಲೆಗಳಲ್ಲಿ ಹಾಗೂ ಖನಿಜ ಮಿಶ್ರಣದಲ್ಲಿ ಕಂಡುಬರುವ ಜಲೋಷ್ಣೀಯ ದ್ರಾವಣಗಳಲ್ಲಿ ಅಧಿಕ ಪ್ರಭಲತೆಯುಳ್ಳ ಫ್ಲೋರಿನ್ ಕಂಡುಬರುತ್ತದೆ.ಈ ಫ್ಲೋರೈನ್ ಸಮೀಪದ ನೀರಿನಲ್ಲಿ ವಿಲೀನಗೊಂಡು ಫ್ಲೋರೈಡ್‌ಗಳಾಗುತ್ತದೆ. ಹೆಚ್ಚಿನ ಕುಡಿಯುವ ನೀರುಗಳ ಒಟ್ಟು ಫ್ಲೂರೈಡ್ ಪ್ರಮಾಣಗಳಲ್ಲಿ ೯೫% ನೀರು ಋಣಾತ್ಮಕ ಫ್ಲೋರಿನ್ ಪರಮಾಣು(F ion)ಗಳಿದ್ದು ಮೆಗ್ನೆಶಿಯಮ್ - ಫ್ಲೂರೈಡ್ ಸಂಯುಕ್ತಗಳು (MgF+) ಇದರ ನಂತರದ ಇನ್ನೊಂದು ಅಂಶವಾಗಿದೆ. ನೀರಿನಲ್ಲಿನ ಫ್ಲೂರೈಡ್ ಮಟ್ಟವು ಫ್ಲೋರೈಟ್‌(CaF)ನ ನೀರಿನೊಂದಿಗಿನ ಕರಗುವಿಕೆಯಿಂದ ನಿಯಂತ್ರಿಸಲ್ಪಡುವುದರಿಂದ ಅಧಿಕ ನೈಸರ್ಗಿಕ ಫ್ಲೋರೈಡ್ ಮಟ್ಟಗಳು ಕ್ಯಾಲ್ಸಿಯಮ್ ಕೊರತೆಯುಳ್ಳ ಕ್ಷಾರೀಯ ಮತ್ತು ಶುದ್ಧ ನೀರನ್ನು ಹೊಂದಿರುತ್ತದೆ.[೩೬] ನೈಸರ್ಗಿಕ ಫ್ಲೂರೈಡ್ ಮಟ್ಟವು ನಿಗದಿತ ಶಿಫಾರಸ್ಸು ಮಾಡಿದ ಫ್ಲೂರೈಡ್ ಮಟ್ಟಕ್ಕಿಂತ ಹೆಚ್ಚಾಗಿದ್ದರೆ, ಫ್ಲೂರೈಡ್ ರಹಿತತೆಯು (ಡಿಫ್ಲೂರೈಡೇಶನ್) ಅಗತ್ಯವಾಗುತ್ತದೆ. ಹರಳಿನ ರಚನೆಯುಳ್ಳ ಆ‍ಯ್‌ಕ್ಟಿವೇಟೆಡ್ ಅಲ್ಯುಮಿನಾ, ಎಲುಬಿನ ಹಿಟ್ಟು (ಬೋನ್ ಮೀಲ್), ಎಲುಬಿನ ಖಾರ್ (ಬೋನ್ ಖಾರ್) ಅಥವಾ ಟ್ರೈಕ್ಯಾಲ್ಸಿಯಂ ಫಾಸ್ಫೇಟ್ ಮೂಲಕ ನೀರನ್ನು ಸೋಸುವುದರಿಂದ ಮತ್ತು ಆಲಂ ಜೊತೆ ಘನೀಕರಿಸುವುದರಿಂದ ಅಥವಾ ಲೈಮ್‌ನೊಂದಿಗೆ ಸಾಂದ್ರೀಕರಿಸುವುದರಿಂದ (ಪ್ರಿಸಿಪಿಟೇಶನ್) ಫ್ಲೋರೈಡ್‌ ರಹಿತತೆ(ಡಿಫ್ಲೋರೈಡೇಶನ್)ಯನ್ನುಂಟುಮಾಡಲಾಗುತ್ತದೆ.[೬]

ಹೂಜಿ ಅಥವಾ ಪಿಪಾಯಿಗಳನ್ನು ಹೊಂದಿದ ನೀರಿನ ಶೋಧಕಗಳು ಫ್ಲೂರೈಡ್ ಮಟ್ಟವನ್ನು ಬದಲಿಸುವುದಿಲ್ಲ. ದುಬಾರಿ ಬೆಲೆಯ ವಿರುದ್ದ-ಪರಾಸರಣ ಕ್ರಿಯೆಯ (ಹಿಮ್ಮುಗವಾಗಿ ಚಲಿಸುವ) ಶೊಧಕಗಳು ೬೫-೯೫% ಫ್ಲೂರೈಡ್‌‌ನ್ನು ಹೊರಹಾಕುತ್ತದೆ ಮತ್ತು ಬಟ್ಟಿಯಿಳಿಸುವಿಕೆಯ ಶೋಧಕಗಳು (ಡಿಸ್ಟಿಲ್ಲೇಶನ್ ಫಿಲ್ಟರ್) ಎಲ್ಲಾ ಫ್ಲೂರೈಡ್‌ ಅಂಶಗಳನ್ನು ಹೊರಹಾಕುತ್ತವೆ.[೮] ಬಾಟಲ್ ನೀರಿನ ಮೇಲಿನ ಯುಎಸ್ ಕಾನೂನುಗಳು ನೀರಿನಲ್ಲಿರುವ ಫ್ಲೋರೈಡ್ ಪ್ರಮಾಣವನ್ನು ಬಹಿರಂಗಪಡಿಸುವ ಅಗತ್ಯವನ್ನು ಹೊಂದಿಲ್ಲ. ಆದುದರಿಂದ ಈ ನೀರನ್ನು ಕುಡಿಯುವುದರಿಂದ ಉಂಟಾಗುವ ಪರಿಣಾಮವು ತಿಳಿಯದಾಗಿದೆ.[೮] ಕ್ಲೆವೆಲ್ಯಾಂಡ್ ಮತ್ತು ಅಯೊವದಲ್ಲಿನ ಬಾಟಲ್ ನೀರಿನ ಮೇಲಿನ ಸಮೀಕ್ಷೆಯ ಪ್ರಕಾರ ಹೆಚ್ಚಿನ ಬಾಟಲ್ ನೀರು ನಿಗದಿತ ಫ್ಲೋರೈಡ್ ಪ್ರಮಾಣಕ್ಕಿಂತ ಕಡಿಮೆ ಫ್ಲೂರೈಡ್ ಮಟ್ಟವನ್ನು ಹೊಂದಿದೆ[೩೭] ಎಂದೂ, ಸಾ ಪೌಲೋ ಮತ್ತು ಬ್ರಜಿಲ್ ರಾಷ್ಟ್ರಗಳಲ್ಲಿ ನಡೆದ ಸಮೀಕ್ಷೆಯ ಪ್ರಕಾರ ಬಾಟಲ್ ನೀರಿನ ಫ್ಲೂರೈಡ್ ಮಟ್ಟದಲ್ಲಿ ವ್ಯಾಪಕ ವ್ಯತ್ಯಾಸ ಕಂಡುಬಂದಿದ್ದು, ಹೆಚ್ಚಿನ ಬಾಟಲ್ ನೀರುಗಳು ಶಿಫಾರಸ್ಸು ಮಾಡಿದ ಫ್ಲೂರೈಡ್ ಮಟ್ಟದ ಮಿತಿಯನ್ನು ಮೀರಿದ್ದು ಲೇಬಲ್‌ನಲ್ಲಿ ಬರೆದಿರುವುದು ಒಂದು ಆದರೆ ಅದರಲ್ಲಿ ಇರುವುದೇ ಬೇರೆ.[೩೮]

ಪ್ರಕ್ರಿಯೆ ಬದಲಾಯಿಸಿ

ಖನಿಜಾಂಶರಹಿತತೆಯೊಂದಿಗೆ(ಡಿಮಿನರಲೈಸೇಶನ್) ವರ್ತಿಸಿ ದಂತಕ್ಷಯವಾಗುವ ಪ್ರಕ್ರಿಯೆಯಲ್ಲಿ ಫ್ಲೂರೈಡ್‌ ತನ್ನ ಪ್ರಮುಖ ಪರಿಣಾಮವನ್ನು ಉಂಟುಮಾಡುತ್ತದೆ. ಹಲ್ಲಿನ ಮೇಲಣ ಲೋಳೆಯಂತಹ ನಿಕ್ಷೇಪ (ಪ್ಲೇಖ್)ದಲ್ಲಿ ಸ್ಟ್ರೆಪ್ಟೋಕಾಕ್ಕಸ್ ಮ್ಯೂಟನ್ಸ್ ಮತ್ತು ಲೇಕ್ಟೋಬ್ಯಾಸಿಲ್ಲಸ್ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನುಂಟುಮಾಡುವಂತಹ ಪ್ರಮುಖ ಲಕ್ಷಣಗಳನ್ನು ಹೊಂದಿದ ದಂತಕ್ಷಯವು ಒಂದು ಸಾಂಕ್ರಾಮಿಕ ರೋಗವಾಗಿದೆ. ಕಾರ್ಬೋಹೈಡ್ರೇಟ್‌ಗಳನ್ನು, ವಿಶೇಷವಾಗಿ ಸಕ್ಕರೆಯನ್ನು ಸೇವಿಸಿದಾಗ ಈ ಬ್ಯಾಕ್ಟೀರಿಯಾಗಳು ಕಾರ್ಬನ್‌ಯುಕ್ತ ಆಮ್ಲಗಳನ್ನು (ಆರ್ಗಾನಿಕ್ ಆಸಿಡ್) ಬಿಡುಗಡೆಮಾಡುತ್ತವೆ.[೩೯] pH ಮೌಲ್ಯವು ೫.೫ಕ್ಕೆ[೪೦] ಕುಸಿಯಲು ಅಗತ್ಯವಿರುವಷ್ಟು ಆಮ್ಲವು ಉತ್ಪಾದನೆಯಾದ ಬಳಿಕ ಈ ಆಮ್ಲವು ಹಲ್ಲಿನ ಮೇಲಿನ ಪದರ(ಇನಾಮಲ್)ದ ಪ್ರಧಾನ ಅಂಶವಾದ ಕಾರ್ಬನ್‌ಯುಕ್ತ ಹೈಡ್ರೋಕ್ಸಿಪೆಟೈಟ್‌‌ನ್ನು ಕರಗಿಸಿ ಖನಿಜರಹಿತತೆ ಎಂಬ ಪ್ರಕ್ರಿಯೆಯನ್ನು ಉಂಟುಮಾಡುತ್ತದೆ. ಸಕ್ಕರೆಯ ಅಂಶಗಳೆಲ್ಲಾ ಹೋದ ಮೇಲೆ ಕಳೆದುಹೋದ ಖನಿಜಾಂಶಗಳಲ್ಲಿ ಕೆಲವೊಂದನ್ನು ಜೊಲ್ಲುರಸದೊಂದಿಗೆ ಕರಗಿದ ಪರಮಾಣುಗಳಿಂದ ಮತ್ತೆ ಖನಿಜಾಂಶ ಪಡೆಯಬಹುದಾಗಿದೆ(ರಿಮಿನರಲೈಸ್‌ಡ್). ಖನಿಜಗಳು ನಾಶವಾಗುವ ದರವು ಪುನರ್‌ಖನಿಜೀಕರಣದ ದರಕ್ಕಿಂತ ಹೆಚ್ಚಾದರೆ, ಸಾಮಾನ್ಯವಾಗಿ ಕೆಲವು ತಿಂಗಳುಗಳಿಂದ ಕೆಲವು ವರ್ಷಗಳೇ ತಗಲುವ ಪ್ರಕ್ರಿಯೆಯಾದ ಹಲ್ಲಿನ ಕುಳಿಗಳು ಮೂಡುತ್ತವೆ.[೩೯]

 
ಫ್ಲೋರೈಡ್‌ನ್ನು ಜೊಲ್ಲುರಸ ಮತ್ತು ಹಲ್ಲುಗಳ ಮೇಲಿನ ಲೋಳೆಯಂತಹ ದ್ರವ(ಪ್ಲೇಖ್ ಫ್ಲುಯಿಡ್)ದ ಉಪಸ್ಥಿತಿಯಲ್ಲಿ ಮತ್ತು ಖನಿಜೀಕರಣಗಿಳಿಸದ ಮತ್ತು ಪುನಃಖನಿಜೀಕರಣಗೊಳಿಸಿದ ಹಲ್ಲಿನ ಎನಾಮಲ್.[೩೯]

ನೀರಿನ ಫ್ಲೋರೈಡೀಕರಣದೊಂದಿಗೆ ಎಲ್ಲಾ ಫ್ಲೋರೈಡೀಕರಣದ ವಿಧಾನಗಳು ಜೊಲ್ಲುರಸ ಮತ್ತು ಹಲ್ಲುಗಳ ಮೇಲಿನ ಲೋಳೆಯಂತಹ ದ್ರವ(ಪ್ಲೇಖ್ ಫ್ಲುಯಿಡ್)ಗಳಲ್ಲಿ ಫ್ಲೂರೈಡ್‌ ಪರಮಾಣುಗಳ ಮಟ್ಟವನ್ನು ಕಡಿಮೆಗೊಳಿಸಿ ಸ್ಥಳೀಯ ಅಥವಾ ಮೇಲ್ಮೈ ಪರಿಣಾಮವನ್ನುಂಟುಮಾಡುತ್ತದೆ. ಫ್ಲೂರೈಡೀಕಿರಿಸಿದ ನೀರಿರುವ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯೊಬ್ಬನು ತನ್ನ ಜೊಲ್ಲುರಸದಲ್ಲಿ ದಿನವೊಂದಕ್ಕೆ ಹಲವು ಭಾರಿ ಫ್ಲೂರೈಡ್‌ ಪ್ರಭಲತೆಯು ಪ್ರತಿ ಲೀಟರಿಗೆ ೦.೦೪ ಮಿಲಿಗ್ರಾಮ್‌ಗಳಷ್ಟು ಹೆಚ್ಚಾಗುವುದನ್ನು ತಿಳಿಯುತ್ತಾನೆ.[೪] ತಾಂತ್ರಿಕವಾಗಿ, ಈ ಫ್ಲೋರೈಡ್ ದಂತಕುಳಿಗಳುಂಟಾಗುವುದನ್ನು ತಡೆಹಿಡಿಯುವುದಿಲ್ಲ.ಬದಲಿಗೆ ಇವು ವೃದ್ಧಿಯಾಗುವ ಪ್ರಮಾಣವನ್ನು ನಿಯಂತ್ರಿಸುತ್ತವೆ.[೪೧] ಹಲ್ಲುಗಳ ಮೇಲಿನ ಲೋಳೆಯಂತಹ ದ್ರವ(ಪ್ಲೇಖ್ ಫ್ಲುಯಿಡ್)ಗಳಲ್ಲಿ ಫ್ಲೂರೈಡ್‌ ಪರಮಾಣುಗಳ ಜೊತೆಗೆ ಕರಗಿದ ಹೈಡ್ರೋಕ್ಸಿಅಪಟೈಟ್‌ಗಳಿರುವಾಗ ಮತ್ತು pH ಮೌಲ್ಯವು ೪.೫ಕ್ಕಿಂತ[೪೦] ಹೆಚ್ಚಾದಾಗ ಇನಾಮಲ್‌ನ ಉಳಿದ ಮೇಲ್ಮೈ ಭಾಗಗಳಲ್ಲಿ ಫ್ಲೋರಾಪಟೈಟ್‌ನಂತಹ ಪುನರ್‌ಖನಿಜೀಕರಣದ ಪದರವುಂಟಾಗುತ್ತವೆ. ಈ ಪದರವು ಮೂಲ ಹೈಡ್ರೋಕ್ಸಿಅಪಟೈಟ್‌ಗಳಿಗಿಂತ ಹೆಚ್ಚು ಆಮ್ಲನಿರೋಧಕತೆಯ ಗುಣವನ್ನು ಹೊಂದಿದ್ದು ಇದು ಸಾಮಾನ್ಯ ಪುನರ್‌ಖನಿಜೀಕರಣದಿಂದ ತಯಾರಾದ ಇನಾಮೆಲ್‌ಗಿಂತ ವೇಗವಾಗಿ ತಯಾರಾಗುತ್ತದೆ.[೩೯] ಹಲ್ಲು ಮೂಡುವ ಮೊದಲ ಮತ್ತು ನಂತರದಲ್ಲಿ ಉಂಟಾಗುವ ಈ ಮೇಲ್ಮೈ ಪರಿಣಾಮಗಳಿಂದಲೇ ಫ್ಲೂರೈಡ್‌ಗಳಲ್ಲಿ ದಂತಕುಳಿಗಳನ್ನು ತಡೆಯುವ ಪ್ರಭಾವವುಂಟಾಗುತ್ತದೆ.[೪೨] ಇಡೀ ಶರೀರದಲ್ಲಿರುವ ಕೆಲವು ಫ್ಲೂರೈಡ್‌‌ಗಳೂ ಕೂಡಾ ರಕ್ತದ ಪ್ಲಾಸ್ಮಾದ ಮೂಲಕ ಜೊಲ್ಲುರಸಕ್ಕೂ, ಬೆಳೆಯದ ಹಲ್ಲುಗಳಿಗೆ ಪ್ಲಾಸ್ಮಾ ಅಥವಾ ಕ್ರಿಪ್ಟ್(ದೇಹದ ಕೆಲವೆಡೆ ಕಂಡುಬರುವ, ದೇಹಕ್ಕೆ ಅಗತ್ಯವಾದ ರಸವನ್ನು ಸ್ರವಿಸುವ ಕುಳಿ) ದ್ರವದ ಮೂಲಕವೂ ಸೇರುವುದರಿಂದ, ಸರಾಸರಿ ಎಷ್ಟು ಕುಳಿವಿರೋಧಿ(ಆಂಟಿಕ್ಯಾವಿಟಿ) ಪ್ರಭಾವವು ಶರೀರದ ಈ ಪ್ರಕ್ರಿಯೆಯ ಮೂಲಕ ಬರುವ ಫ್ಲೂರೈಡ್‌‌ಗಳಿಂದ ಉಂಟಾಗುತ್ತವೆ ಎಂಬುದು ಕಂಡುಹಿಡಿಯಬೇಕಾದ ಸಣ್ಣ ಅಂಶ.[೪೩] ಅಲ್ಲದೇ, ಈ ಫ್ಲೂರೈಡ್‌ಗಳು ಹಲ್ಲಿನ ಬ್ಯಾಕ್ಟೀರಿಯಾ[೪೪] ಗಳ ಶರೀರವಿಜ್ಞಾನ(ದೈಹಿಕ ಕ್ರಿಯೆ)ದ ಮೇಲೆ ಪ್ರಭಾವ ಬೀರುವುದರಿಂದ, ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುವ ಇವುಗಳ ಪ್ರಭಾವವು ದಂತಕುಳಿಗಳನ್ನು ತಡೆಯಲು ಪ್ರಸಕ್ತವಾಗಿರುವಂತೆ ಕಂಡುಬರುತ್ತಿಲ್ಲ.[೪೫]

ಎಲ್ಲಾ ಮೂಲಗಳಿಂದ ಪ್ರತೀದಿನಕ್ಕೆ ಎಷ್ಟು ಫ್ಲೂರೈಡ್‌‌ಗಳು ಸೇವಿಸಲ್ಪಡುತ್ತವೆ ಎಂಬುದರ ಮೇಲೆ ಫ್ಲೂರೈಡ್‌ಗಳ ಪ್ರಭಾವವು ಅವಲಂಬಿಸಲ್ಪಟ್ಟಿದೆ.[೧೩] ಸೇವಿಸಿದ ಫ್ಲೂರೈಡ್‌‌ಗಳ ಸುಮಾರು ೭೦ - ೯೦% ಭಾಗವು ರಕ್ತಕ್ಕೆ ಹೀರಲ್ಪಟ್ಟು ಶರೀರದ ಇತರ ಎಲ್ಲಾ ಭಾಗಗಳಿಗೆ ವಿತರಿಸಲ್ಪಡುತ್ತದೆ. ಶಿಶುಗಳಲ್ಲಿ ಹೀರಲ್ಪಟ್ಟ ಫ್ಲೂರೈಡ್‌‌ಗಳ ಸುಮಾರು ೮೦-೯೦% ಭಾಗದಷ್ಟು ಶರೀರದಲ್ಲೇ ಉಳಿದುಕೊಂಡು ಉಳಿದವುಗಳು ಹೆಚ್ಚಾಗಿ ಮೂತ್ರದ ಮೂಲಕ ವಿಸರ್ಜಿಸಲ್ಪಡುತ್ತವೆ. ಪ್ರೌಢರಲ್ಲಿ ಸುಮಾರು ೬೦% ಪ್ರಮಾಣದ ಫ್ಲೂರೈಡ್‌‌ಗಳು ದೇಹದಲ್ಲೇ ಉಳಿದುಕೊಳ್ಳುತ್ತದೆ. ಉಳಿದುಕೊಂಡ ಫ್ಲೂರೈಡ್‌‌ಗಳಲ್ಲಿ ಸುಮಾರು ೯೯% ಭಾಗವು ಎಲುಬುಗಳಲ್ಲಿ, ಹಲ್ಲುಗಳಲ್ಲಿ ಮತ್ತು ಇತರ ಕ್ಯಾಲ್ಸಿಯಮ್ ಅಧಿಕವಾಗಿರುವ ಪ್ರದೇಶಗಳಲ್ಲಿ ಸಂಗ್ರಹವಾಗುತ್ತವೆ.ಮಿತಿಮೀರಿದ ಫ್ಲೂರೈಡ್‌‌ಗಳು ಫ್ಲೂರೋಸಿಸ್‌ಗೆ ಕಾರಣವಾಗುತ್ತವೆ.[೪೬] ವಿಶೇಷವಾಗಿ ಕುಡಿಯುವ ನೀರು ಫ್ಲೂರೈಡ್‌‌ಗಳ ಬಹುದೊಡ್ಡ ಮೂಲವಾಗಿದೆ.[೧೩] ಹೆಚ್ಚಿನ ಕೈಗಾರಿಕೀಕರಣಗೊಂಡ ದೇಶಗಳ ಫ್ಲೂರಿಡೀಕರಣಗೊಳ್ಳದ ಸಮುದಾಯಗಳಿಗೆ ನುಂಗಲ್ಪಡುವ ದಂತಮಂಜನಗಳೇ(ಟೂತ್‌ಪೇಸ್ಟ್) ಫ್ಲೂರೈಡ್‌‌ಗೆ ತೆರೆದುಕೊಳ್ಳಬಹುದಾದ ಮುಖ್ಯ ಆಕರಗಳು.[೪೭] ದಂತಮಂಜನಗಳ(ಟೂತ್‌ಪೇಸ್ಟ್) ಹೊರತಾದ ಹಲ್ಲಿಗೆ ಸಂಬಂಧಿಸಿದ ಇತರ ಉತ್ಪನ್ನಗಳು, ಫ್ಲೂರೈಡ್‌ ಮಿಶ್ರಿತ ಕಲ್ಲಿದ್ದಲಿನಿಂದ ಅಥವಾ ಫಾಸ್ಪೇಟ್ ಗೊಬ್ಬರಗಳಾದ ಟಾಂಜಾನಿಯದಲ್ಲಿ ಮಾಂಸಗಳನ್ನು ಮೃದುಗೊಳಿಸಲು ಬಳಸುವ ಟ್ರೋನ, ಚಹಾದ ಎಲೆಗಳು, ಮುಖ್ಯವಾಗಿ ಚೈನಾದ ಭಾಗಗಳು ಇಷ್ಟಪಡುವ ಚಹಾ ಬ್ರಿಕ್ಸ್‌ಗಳಿಂದ ಉಂಟಾದ ವಾಯುಮಾಲಿನ್ಯಗಳೇ ಇತರ ಫ್ಲೂರೈಡ್‌‌ ಆಕರಗಳು. ಬಾರ್ಲಿ, ಕಸ್ಸಾವ, ಜೋಳ, ಅಕ್ಕಿ, ಕೆಸವು (ಟಾರೋ-ಉಷ್ಣವಲಯದಲ್ಲಿ ಆಹಾರವಾಗಿ ಬಳಸುವ ಗಿಡ), ಗೆಣಸು ಮತ್ತು ಪ್ರಭಲ ಮೀನಿನ ಪ್ರೋಟೀನ್‌ಗಳಂತಹ ಇತರ ಆಹಾರಪದಾರ್ಥಗಳಲ್ಲಿ ಅಧಿಕ ಫ್ಲೂರೈಡ್‌ ಮಟ್ಟವು ಕಂಡುಬಂದಿದೆ. ಯುಎಸ್‌ನ ವೈದ್ಯಕೀಯ ಸಂಸ್ಥೆಯು ಫ್ಲೋರೈಡ್ ಸೇವನೆಗೆ ಸಂಬಂಧಿಸಿದಂತೆ ಸೇವಿಸಬೇಕಾದ ಆಹಾರಕ್ರಮದ ದಾಖಲೆಯನ್ನು ಅನುಷ್ಠಾನಗೊಳಿಸಿದೆ. ಇದರ ಪ್ರಕಾರ, ಸೇವಿಸಬೇಕಾದ ಆವಶ್ಯಕ ಮೌಲ್ಯವು ಆರುತಿಂಗಳ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಎಳೆಯ ಮಕ್ಕಳಿಗೆ ದಿನಕ್ಕೆ ೦.೦೧ಮಿ.ಗ್ರಾಮ್‌ನಿಂದ, ೧೯ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ದಿನಕ್ಕೆ ೦.೧೦ಮಿ.ಗ್ರಾಮ್‌ಗಳ ವ್ಯಾಪ್ತಿಯಲ್ಲಿರಬೇಕು. ಎಳೆಯ ಶಿಶುಗಳಿಗೆ ಮತ್ತು ೮ ವರ್ಷದೊಳಗಿನ ಮಕ್ಕಳಿಗೆ ಫ್ಲೂರೈಡ್ ಸೇವನೆಯ ಸಹನೀಯ(ತಾಳಬಹುದಾದ) ಗರಿಷ್ಟ ಮಟ್ಟವು ದಿನಕ್ಕೆ ೦.೧೦ mg/kg ಆಗಿದ್ದು ಇದಕ್ಕಿಂತ ದೊಡ್ಡವರಿಗೆ ದಿನಕ್ಕೆ ೧೦ mg. ಆಗಿರುತ್ತದೆ.[೪೮] ಸ್ಥೂಲ ಅಂದಾಜಿನ ಪ್ರಕಾರ, ಉಷ್ಣವಾತಾವರಣದಲ್ಲಿನ ಪ್ರೌಢ ವ್ಯಕ್ತಿಯೊಬ್ಬ ಫ್ಲೂರಿಡೀಕರಣಗೊಳಿಸುವ ಮೊದಲು ದಿನಕ್ಕೆ ೦.೬ಮಿ.ಗ್ರಾಂ ಹಾಗೂ ಫ್ಲೂರಿಡೀಕರಣಗೊಳಿಸಿದ ಮೇಲೆ ೨ಮಿ.ಗ್ರಾಂ ಫ್ಲೂರೈಡ್ ಸೇವಿಸುತ್ತಾನೆ. ಆದರೂ ಜಗತ್ತಿನ ಇತರ ಪ್ರದೇಶಗಳಲ್ಲಿ ಈ ಮೌಲ್ಯಗಳು ಬದಲಾಗುತ್ತವೆ. ಉದಾಹರಣೆಗೆ, ಚೈನಾದ ಸಿಚ್ವಾನ್‌ನಲ್ಲಿ ಕಲ್ಲಿದ್ದಲು ಮಾಲಿನ್ಯದಿಂದಾಗಿ ಸೇವಿಸಲ್ಪಡುವ ಪ್ರತಿದಿನದ ಸರಾಸರಿ ಫ್ಲೂರೈಡ್ ಪ್ರಮಾಣವು ಆಹಾರದಲ್ಲಿ ೮.೯ಮಿ.ಗ್ರಾಂ, ಗಾಳಿಯಿಂದ ನೇರವಾಗಿ ೦.೭ಮಿ.ಗ್ರಾಂ, ಹಾಗೂ ಕುಡಿಯುವ ನೀರಿನಿಂದ ೦.೧ಮಿ.ಗ್ರಾಂ ಎಂದು ಅಂದಾಜು ಮಾಡಲಾಗಿದೆ.[೧೩]

ಮಾನವರ ಜೀವನವನ್ನು ಉತ್ತೇಜಿಸಲು ಅಥವಾ ಬೆಳವಣಿಗೆಗೆ ಅಗತ್ಯವಿರುವ ದೃಷ್ಟಿಯಲ್ಲಿ ಫ್ಲೂರೈಡ್ ಒಂದು ಅತ್ಯಾವಶ್ಯಕ ಪೌಷ್ಟಿಕಾಂಶ ಎಂದು ನಿಸ್ಸಂಶಯವಾಗಿ, ಯಾವುದೇ ಸಂದಿಗ್ಧತೆಯಿಲ್ಲದೇ ಇದುವರೆಗೆ ಸಾಧಿಸಲ್ಪಟ್ಟಿಲ್ಲ.[೪೯] ಆಹಾರಕ್ರಮದಲ್ಲಿ ಪಿತ್ತರಸವನ್ನು ಕಡಿಮೆಗೊಳಿಸುವ ಅಥವಾ ಮಿತಿಯಲ್ಲಿಡುವ ಮತ್ತು ಕರುಳಿನಲ್ಲಿನ ಸಕ್ಕರೆಯ ಹೀರುವಿಕೆಗೆ ಕಾರಣವಾಗುವ ನಾರಿನಂಶಗಳ ಸಾಮರ್ಥ್ಯದ ಜೊತೆಗೆ ಫ್ಲೋರೈಡ್‌ಗಳು ಅಪಾಯಕಾರಿ ಜೈವಿಕ ಪ್ರಕ್ರಿಯೆಗಳ ವಿರುದ್ಧ ಹೋರಾಡುವ ಪೌಷ್ಟಿಕಾಂಶಗಳಾಗಿವೆ. ಫ್ಲೋರೈಡ್‌ಗಳ ವಿಚಾರದಲ್ಲಿ, ಸಕ್ಕರೆ ಹಾಗೂ ಬಾಯಿಯ ರೋಗಕಾರಕ ಸೂಕ್ಷ್ಮಜೀವಿಗಳಿಂದ ಕೂಡಿದ ಆಧುನಿಕ ಜೀವನಕ್ರಮದಿಂದ ಅಪಾಯಗಳು ಒದಗಿಬರುತ್ತವೆ. ಮತ್ತು ಸಕ್ಕರೆಯ ಪ್ರಮಾಣ ಕಡಿಮೆಯಿರುವ ಆಹಾರಕ್ರಮವು ಫ್ಲೂರೈಡ್ ಅಗತ್ಯವನ್ನು ನಿವಾರಿಸುತ್ತದೆ.[೫೦]

ಸಾಕ್ಷ್ಯಾಧಾರ ಬದಲಾಯಿಸಿ

ನೀರಿನ ಫ್ಲೂರೈಡೀಕರಣವು ದಂತಕ್ಷಯವನ್ನು ಕಡಿಮೆಗೊಳಿಸುತ್ತವೆ ಎಂದು ಅಸ್ಥಿತ್ವದಲ್ಲಿರುವ ಸಾಕ್ಷಿ, ಪುರಾವೆಗಳು ಬಲವಾಗಿ ನಿರೂಪಿಸಿವೆ. ಇದು ಹೆಚ್ಚಾಗಿ ಲಘು ಹಾಗೂ ಸೌಂದರ್ಯಪ್ರಜ್ಞೆಗೆ ಸಂಬಂಧಪಡದೇ ಇದ್ದ ಹಲ್ಲಿನ ಫ್ಲೂರೋಸಿಸ್ ಕಾಯಿಲೆಯನ್ನೂ ಉಂಟುಮಾಡುತ್ತದೆ ಎಂಬುದಕ್ಕೆ ಕೂಡಾ ಸಮಂಜಸವಾದ ಸಾಕ್ಷಿಗಳಿವೆ.[೧೧] ಇತರ ದುಷ್ಪರಿಣಾಮಗಳ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ. ನೀರಿನ ಫ್ಲೂರೈಡೀಕರಣದ ಪರಿಣಾಮಕಾರಿತ್ವ ಮತ್ತು ಕ್ಯಾನ್ಸರ್‌ನೊಂದಿಗಿನ ಇದರ ಪ್ರಭಾವಕಾರಿ ಸಂಯೋಜನೆಯ ಮೇಲೆ ನಡೆದ ಮಧ್ಯಮವರ್ಗದ ಗುಣಮಟ್ಟದ ಸಂಶೋಧನೆಗಳೆಲ್ಲವೂ ಕೆಳದರ್ಜೆಯಲ್ಲೇ ಇವೆ. ತುಸು ಉನ್ನತ ದರ್ಜೆಯ ಸಂಶೋಧನೆಗಳೂ ಕೂಡಾ ನಡೆಯಲ್ಪಟ್ಟಿವೆ.[೧೨]

ಪರಿಣಾಮಕಾರಿತ್ವ ಬದಲಾಯಿಸಿ

ನೀರಿನ ಫ್ಲೂರೈಡೀಕರಣವು ಬಾಲ ಹಾಗೂ ವಯಸ್ಕರಿಬ್ಬರಲ್ಲೂ ಹಲ್ಲಿನ ಕುಳಿಗಳನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪರಿಣಾಮವನ್ನು ಬೀರುತ್ತದೆ.[೧೦] ನೀರಿನ ಫ್ಲೂರೈಡೀಕರಣವು ಸುಮಾರು ೫೦-೬೦% ನಷ್ಟು ಬಾಲ್ಯದ ಹಲ್ಲಿನ ಕುಳಿಗಳು ಇಳಿಕೆಯಾಗುವಲ್ಲಿ ಮುಖ್ಯ ಪಾತ್ರವಹಿಸಿವೆ ಎಂದು ಹಳೆಯ ಅಧ್ಯಯನಗಳು ತೋರಿಸಿವೆ. ಇತರ ಆಕರಗಳಿಂದ ವಿಶೇಷವಾಗಿ, ಟೂತ್‌ಪೇಸ್ಟ್ ಮತ್ತು ಫ್ಲೂರೈಡೀಕರಿಸಿದ ಪ್ರದೇಶಗಳಲ್ಲಿ ತಯಾರಾದ ಆಹಾರ ಮತ್ತು ಪಾನೀಯಗಳ ಬೆಳಕಿನ ಪ್ರಭಾವ (ಹ್ಯಾಲೋ ಇಫೆಕ್ಟ್), ಮತ್ತು ಈ ಆಹಾರಪದಾರ್ಥಗಳನ್ನು ಫ್ಲೂರೈಡೀಕರಣಗೊಳಿಸದ ಪ್ರದೇಶಗಳಲ್ಲಿ ಬಳಸುವುದರಿಂದ ಹಲ್ಲಿನ ಕುಳಿಗಳಲ್ಲಿ ಕನಿಷ್ಟ ಇಳಿಕೆ (೧೮ - ೪೦%) ಯಾದುದನ್ನು ಇತ್ತೀಚೆಗಿನ ಅಧ್ಯಯನಗಳು ತೋರಿಸಿವೆ.[೨]

೨೦೦೦ನೇ ವರ್ಷದ ವ್ಯವ್ಯಸ್ಥಿತ ಪುನರ್‌ಪರಿಶೀಲನೆಯು ನೀರಿನ ಫ್ಲೂರೈಡೀಕರಣವು ದಂತಕುಳಿಗಳನ್ನು ಹೊಂದಿದ ಮಕ್ಕಳ ತಗ್ಗಿದ ಪ್ರಮಾಣದೊಂದಿಗೆ (ಸರಾಸರಿ ಇಳಿಕೆ ಪ್ರಮಾಣಗಳ ಮಧ್ಯದ ಮೌಲ್ಯ ೧೪.೬% ಮತ್ತು ವ್ಯಾಪ್ತಿ: ೫ - ೬೪%) ಮತ್ತು ಕಳೆದುಹೋದ, ಬೆಳೆಯದೇ ಇದ್ದ, ಮತ್ತು ತುಂಬಿಸಿದ ಹಾಲುಹಲ್ಲುಗಳ (ಪ್ರಾಥಮಿಕ ಹಲ್ಲುಗಳು) ಇಳಿಕೆ ಪ್ರಮಾಣ(ಸರಾಸರಿ ಇಳಿಕೆ ಪ್ರಮಾಣಗಳ ಮಧ್ಯದ ಮೌಲ್ಯವು ೨.೨೫ ಹಲ್ಲುಗಳಾಗಿದ್ದು, ವ್ಯಾಪ್ತಿ: ೦.೫ - ೪.೪ ಹಲ್ಲುಗಳು)[೧೨] ದೊಂದಿಗೆ ವ್ಯವಸ್ಥಿತ ಸಂಬಂಧವನ್ನು ಹೊಂದಿದೆ. ಸ್ಥೂಲವಾಗಿ ಇದು ೪೦% ಹಲ್ಲುಕುಳಿಗಳನ್ನು ತಡೆಹಿಡಿದುದಕ್ಕೆ ಸಮವಾಗಿದೆ.[೫೧] ಈ ಬಗ್ಗೆ ಪುರಾವೆಗಳು ಮಧ್ಯಮದರ್ಜೆಯ ಗುಣಮಟ್ಟವನ್ನು ಹೊಂದಿದ್ದು ಹೆಚ್ಚಿನ ಅಧ್ಯಯನಗಳು ಗಮನಿಸಲ್ಪಟ್ಟ ತಪ್ಪುಗಳನ್ನು ಕಡಿಮೆಗೊಳಿಸುವ, ಗೊಂದಲಕ್ಕೀಡಾದ ಅಂಶಗಳ ಮೇಲೆ ನಿಯಂತ್ರಣ ಸಾಧಿಸುವ, ವ್ಯತ್ಯಾಸಗಳ ಪ್ರಮಾಣವನ್ನು ಗುರುತಿಸುವ, ಅಥವಾ ಉಚಿತವಾದ ವಿಶ್ಲೇಷಣೆಯನ್ನು ಕೈಗೊಳ್ಳುವ ಪ್ರಯತ್ನವನ್ನೇ ಮಾಡಿಲ್ಲದಿರುವುದು ಪುನರ್‌ಪರಿಶೀಲನೆಗಳಿಂದ ಕಂಡುಬಂದಿದೆ. ನೈಸರ್ಗಿಕ ಮತ್ತು ಕೃತಕ ಫ್ಲೂರೈಡೀಕರಣಗಳ ನಡುವೆ ಪ್ರಧಾನ ವ್ಯತ್ಯಾಸಗಳೇನೂ ಕಂಡುಬಂದಿಲ್ಲವಾದರೂ, ಈ ವ್ಯತ್ಯಾಸಗಳ ಮೇಲೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲಾಗದಂತೆ ಸಾಕ್ಷ್ಯಗಳು ಅಸಮರ್ಪಕವಾಗಿವೆ.[೧೨] ಫ್ಲೂರೈಡ್ ಎಲ್ಲಾ ವಯಸ್ಸಿನ ಪ್ರೌಢರಲ್ಲೂ ಕೂಡಾ ದಂತಕುಳಿಗಳನ್ನು ತಡೆಯುತ್ತದೆ. ಪ್ರೌಢರ ಮೇಲೆ ಕೆಲವೇ ಅಧ್ಯಯನಗಳು ನಡೆದಿದ್ದರೂ, ವಯಸ್ಕರ ಮೇಲಿನ ನೀರಿನ ಫ್ಲೂರೈಡೀಕರಣದ ಮಾದರಿಯು ಫ್ಲೂರೈಡ್‌ಗಳ ಸ್ವ ಅಥವಾ ವೈದ್ಯಕೀಯ ಅನ್ವಯಗಳ ಅಧ್ಯಯನಗಳಿಗಿಂತ ಕೆಳಸ್ಥಾನದಲ್ಲಿದೆ. ೨೦೦೭ರ ಮೆಟಾ ಅನಾಲಿಸಿಸ್ ನೀರಿನ ಫ್ಲೂರೈಡೀಕರಣವು ವಯಸ್ಕರಲ್ಲಿ ೨೭% ಪ್ರಮಾಣದಲ್ಲಿ ದಂತಕುಳಿಗಳನ್ನು ತಡೆದಿದ್ದು (೯೫% ಕಾನ್ಫಿಡೆನ್ಸ್ ಇಂಟರ್ವಲ್(CI) ೧೯-೩೪%), ಇದು ಇತರ ಫ್ಲೂರೈಡೀಕರಣ ವಿಧಾನದಿಂದ ತಡೆಯಲ್ಪಟ್ಟ ಪ್ರಮಾಣದಷ್ಟೇ(೨೯% ಸರಾಸರಿ, ೯೫% CI: ೧೬–೪೨%) ಆಗಿದೆ ಎಂದು ತೋರಿಸಿಕೊಟ್ಟಿದೆ.[೫೨] ನೀರಿನ ಫ್ಲೂರೈಡೀಕರಣವು ಸ್ಥಳೀಯ ಜನಸಮುದಾಯದ ಸಮಗ್ರ ದಂತಕ್ಷಯವನ್ನು ತಗ್ಗಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂಬುದರ ಬಗ್ಗೆ ೨೦೦೨ರ ವ್ಯವಸ್ಥಿತ ಅಧ್ಯಯನವು ಬಲವಾದ ಸಾಕ್ಷ್ಯವನ್ನು ನೀಡಿದೆ.[೫೩]

ಯುರೋಪಿನ ಹಲವು ದೇಶಗಳು ನೀರಿನ ಫ್ಲೂರೈಡೀಕರಣದ ಬಳಕೆಯಿಲ್ಲದೆಯೇ ಹಲ್ಲುಕುಳಿಗಳಲ್ಲಿ ಗಮನಾರ್ಹ ಇಳಿಕೆಯನ್ನು ಕಂಡಿವೆ.[೪] ಉದಾಹರಣೆಗೆ, ಫಿನ್‌ಲ್ಯಾಂಡ್ ಮತ್ತು ಜರ್ಮನಿಗಳಲ್ಲಿ ನೀರಿನ ಫ್ಲೂರೈಡೀಕರಣವನ್ನು ನಿಲ್ಲಿಸಿದ ಮೇಲೆ ದಂತಕ್ಷಯದ ದರವು ಸ್ಥಿರವಾಯಿತು ಅಥವಾ ಇಳಿಯಲಾರಂಭಿಸಿತು. ಫ್ಲೂರೈಡೀಕರಣವು ಯು.ಎಸ್ ದೇಶಗಳಲ್ಲಿ ಪ್ರಯೋಜನಕಾರಿಯಾಗಬಲ್ಲುದು. ಯಾಕೆಂದರೆ, ಯುರೋಪಿನ ಹಲವು ದೇಶಗಳಂತೆ ಯುಎಸ್‌ನಲ್ಲಿ ಶಾಲಾ ಅಧಾರಿತ ಹಲ್ಲಿನ ಕಾಳಜಿಯಿಲ್ಲ. ಹಲವು ಮಕ್ಕಳು ಕ್ರಮವಾಗಿ ದಂತವೈದ್ಯರನ್ನು ಸಂಪರ್ಕಿಸುವುದೇ ಇಲ್ಲ ಮತ್ತು ಹೆಚ್ಚಿನ ಯುಎಸ್ ಮಕ್ಕಳಿಗೆ ಫ್ಲೂರೈಡ್ ಬಳಸಲು ನೀರಿನ ಫ್ಲೂರೈಡೀಕರಣವೇ ಪ್ರಾಥಮಿಕ ಆಕರವಾಗಿದೆ.[೧೬] ನೀರಿನ ಫ್ಲೂರೈಡೀಕರಣದ ಪರಿಣಾಮಕಾರಿತ್ವವು ಹವಾಮಾನದಿಂದ ತಡೆಯಲ್ಪಡುವ ಹಲ್ಲಿನ ಕಾಳಜಿಯಂತಹ ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುತ್ತದೆ.[೫೪]

ನೀರಿನ ಫ್ಲೂರೈಡೀಕರಣವು ಶ್ರೀಮಂತ ಮತ್ತು ಬಡ ಜನತೆಯ ಬಾಯಿಯ ಆರೋಗ್ಯದ ಅಸಮಾನತೆಯನ್ನೂ ಕಡಿಮೆಗೊಳಿಸುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸಿವೆ.[೪] ಆದರೆ, ಇದಕ್ಕೆ ಸಾಕ್ಷ್ಯಗಳು ಮಿತವಾಗಿವೆ. ಫ್ಲೂರೈಡ್ ದಂತಕ್ಷಯದ ವೃದ್ಧಿಯನ್ನು ನಿಧಾನಗೊಳಿಸುವುದರಿಂದ ದಂತ ಚಿಕಿತ್ಸೆಗೆ ಹೆಚ್ಚು ಕಾಲಾವಧಿಯನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ, ಮತ್ತು ಇದು ಹಲ್ಲಿನ ಎಡೆ ಮತ್ತು ಸೀಳುಗಳಲ್ಲಿ ಹೆಚ್ಚು ಕುಳಿಗಳುಂಟಾಗುವಂತೆ ಮಾಡುವುದರ ಮೂಲಕ ಚಿಕಿತ್ಸೆಯನ್ನು ಸರಳಗೊಳಿಸುತ್ತದೆ ಎಂಬ ದಂತಕಥೆಯಿದೆ ಆದರೆ ಇದಕ್ಕೆ ವೈಜ್ಞಾನಿಕ ಸಾಕ್ಷಿಗಳಿಲ್ಲ.[೫೫]

ಸುರಕ್ಷತೆ ಬದಲಾಯಿಸಿ

 
ವಿಷಯದ ಬಲ ಮೇಲ್ಭಾಗದ ಬಾಚಿಹಲ್ಲಿನಲ್ಲಿನ ತೀವ್ರವಲ್ಲದ ಹಂತದಲ್ಲಿನ ಬಿಳಿಯ ಗೀರಿನಂತೆ ಕಾಣುವ ಫ್ಲುರೊಸಿಸ್.

ಫ್ಲೂರೈಡ್‌ಗಳಿಂದ ಉಂಟಾಗುವ ದುಷ್ಪರಿಣಾಮಗಳು ಎಲ್ಲಾ ಮೂಲಗಳಿಂದ ತೆಗೆದುಕೊಂಡ ಒಟ್ಟು ಫ್ಲೂರೈಡ್ ಪ್ರಮಾಣವನ್ನು ಅವಲಂಬಿಸಿದೆ. ಶಿಫಾರಸ್ಸು ಹೊಂದಿದ ಸಾಮಾನ್ಯ ಫ್ಲೂರೈಡ್‌ ಪ್ರಮಾಣದಿಂದ ಉಂಟಾಗುವ ಒಂದೇ ಒಂದು ದುಷ್ಪರಿಣಾಮ ಎಂದರೆ, ಮಕ್ಕಳಲ್ಲಿ ಹಲ್ಲು ಬೆಳವಣಿಗೆಯಾಗುವ ಸಂದರ್ಭದಲ್ಲಿ ಹಲ್ಲಿನ ರೂಪ ಮತ್ತು ಆಕಾರಗಳನ್ನು ಬದಲಾಯಿಸುವ ಹಲ್ಲಿನ ಫ್ಲೋರೋಸಿಸ್.ತೀರಾ ಲಘುವಾದ ಈ ಪರಿಣಾಮವು ಸೌಂದರ್ಯದ ಮೇಲೆ ಅಥವಾ ಸಾರ್ವಜನಿಕ ಆರೋಗ್ಯದ ಮೇಲೆ ಯಾವುದೇ ವಾಸ್ತವ ಪರಿಣಾಮವನ್ನು ತೋರಿಸದು.[೧೧] ಇದಕ್ಕೆ ಒಳಗಾಗುವ ಅಪಾಯದ ಸಮಯವೆಂದರೆ ಒಂದರಿಂದ ನಾಲ್ಕು ವರ್ಷದೊಳಗಿನ ವಯಸ್ಸಿನಲ್ಲಿ ಆರಂಭಗೊಂಡು ಸುಮಾರು ಎಂಟು ವರ್ಷ ವಯಸ್ಸಿನಲ್ಲಿ ಕೊನೆಗೊಳ್ಳುವ ಸಮಯ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸುಮಾರು ೪೦% ಅಪಾಯಕ್ಕೆ ಕಾರಣವಾಗಿದೆ ಎಂದು ನಿರ್ಣಯಿಸಲ್ಪಟ್ಟ ಫ್ಲೂರೈಡೀಕರಿಸಿದ ನೀರಿನ ಜೊತೆಗೆ ಉಳಿದ ೬೦% ಅಪಾಯಕ್ಕೆ ಕಾರಣವಾದ ಇತರ ಮೂಲಗಳಾದ ಮುಖ್ಯವಾಗಿ ದಂತಮಂಜನಗಳಲ್ಲಿ ಇರುವ ಫ್ಲೋರೈಡ್‌ ಅಂಶಗಳನ್ನು ಪರೀಕ್ಷಿಸುವುದರಿಂದ ಫ್ಲೂರೋಸಿಸ್‌ನ್ನು ತಡೆಗಟ್ಟಬಹುದು.[೫೬] ನೈಸರ್ಗಿಕವಾಗಿ ಲೀಟರಿಗೆ ೦.೪ಮಿ.ಗ್ರಾಂ ಪ್ರಮಾಣದಲ್ಲಿ ಫ್ಲೂರೈಡೀಕರಣಗೊಂಡ ನೀರಿಗೆ ಹೋಲಿಸಿದರೆ, ಲೀಟರಿಗೆ ೧ಮಿ.ಗ್ರಾಂ ಪ್ರಮಾಣದಲ್ಲಿ ಫ್ಲೂರೈಡೀಕರಣಗೊಂಡ ನೀರು ಪ್ರತೀ ೬ ಜನರಲ್ಲೊಬ್ಬರಿಗೆ (೯೫% CI ೪–೨೧ ಜನರಿಗೆ) ಹೆಚ್ಚಿನ ಫ್ಲೂರೋಸಿಸ್‌ನ್ನು ಉಂಟುಮಾಡುತ್ತದೆ ಹಾಗೂ ೨೨ ಜನರಲ್ಲಿ ಒಬ್ಬರಿಗೆ (೯೫% CI ೧೩.೬–∞ ಜನರಿಗೆ) ತೀವ್ರತೆರನಾದ ಸೌಂದರ್ಯವನ್ನು ಬಾಧಿಸುವ (ಸೌಂದರ್ಯಕ್ಕೆ ಸಂಬಂಧಿಸಿದ) ಫ್ಲೋರೋಸಿಸ್ ಉಂಟಾಗಲು ಕಾರಣವಾಗುತ್ತದೆ ಎಂದು ಅಂದಾಜುಮಾಡಲಾಗಿದೆ. ಇಲ್ಲಿ ಸೌಂದರ್ಯವನ್ನು ಬಾಧಿಸುವ (ಸೌಂದರ್ಯಕ್ಕೆ ಸಂಬಂಧಿಸಿದ) ಎಂಬ ಪದವನ್ನು ೧೯೯೬ರಲ್ಲಿ ೧೪ ವರ್ಷ ವಯಸ್ಸಿನ ಬ್ರಿಟಿಷ್ ಜನತೆಯ ಮೇಲೆ ನಡೆಸಿದ ಅಧ್ಯಯನವು ಸೂಚಿಸಿದ ಪ್ರಮಾಣದ ಪ್ರಕಾರ ಹದಿಹರೆಯದವರಿಗೆ ಯಾವುದು ಸ್ವೀಕಾರಾರ್ಹವಾದುದಲ್ಲ ಎಂಬ ಆಧಾರದ ಮೇಲೆ ನಿರ್ದಿಷ್ಟ ಪ್ರಮಾಣಕ್ಕನುಸಾರವಾಗಿ ಬಳಸಲಾಗಿದೆ.[೧೨] ಹಲವು ಕೈಗಾರಿಕೀಕರಣಗೊಂಡ ದೇಶಗಳಲ್ಲಿ ಹೆಚ್ಚಾಗಿ ನುಂಗಲ್ಪಟ್ಟ ಟೂತ್‌ಪೇಸ್ಟ್‌ನಿಂದುಂಟಾದ ಫ್ಲೂರೈಡ್ ಪ್ರಮಾಣದ ಕಾರಣದಿಂದ ಫ್ಲೂರೈಡೀಕರಣಗೊಳ್ಳದ ಜನಸಮುದಾಯದಲ್ಲೂ ಫ್ಲೂರೋಸಿಸ್‌ನ ಹರಡುವಿಕೆಯು ವೃದ್ಧಿಯಾಗುತ್ತಿದೆ.[೪೭] ೨೦೦೯ರ ಕ್ರಮಬದ್ಧ ಪುನರ್‌ಪರಿಶೀಲನೆಯು ಸಿದ್ಧಪಡಿಸಿದ ಶಿಶುಆಹಾರದ ಸೇವನೆ ಅಥವಾ ಈ ಆಹಾರವನ್ನು ಪೂರ್ವರೂಪಕ್ಕೆ ತರಲು ಸೇರಿಸಿದ ನೀರಿನೊಂದಿಗೆ ಫ್ಲೂರೋಸಿಸ್ ಜೊತೆಗೂಡಿದ್ದು ಪ್ರಕಟಣೆಯಲ್ಲಿ ಉಂಟಾಗುವ ವ್ಯತ್ಯಾಸಗಳಿಂದ ಈ ಬಗ್ಗೆ ಪುರಾವೆಗಳು ವಿರೂಪಗೊಂಡಿವೆ ಮತ್ತು ಈ ಆಹಾರದ ಸೇವನೆಯಿಂದುಂಟಾಗುವ ಫ್ಲೂರೋಸಿಸ್‌ ಬಹಳ ದುರ್ಬಲವಾದುದು ಎಂದು ತೋರಿಸಿದೆ.[೫೭] ಯುಎಸ್‌ನ ಫ್ಲೂರೈಡೀಕರಣಗೊಂಡ ಮತ್ತು ಫ್ಲೂರೈಡೀಕರಣಗೊಳ್ಳದ ಪ್ರದೇಶಗಳೆರಡರ ಸಮುದಾಯಗಳಲ್ಲಿ ಮುಂದುವರೆದ ಫ್ಲೂರೋಸಿಸ್‌ನಿಂದಾಗಿ ದಂತಕ್ಷಯದಲ್ಲಿ ಕ್ಷೀಣತೆಯುಂಟಾಗಿದೆ. ಹಾಗೆಯೇ, ಸಿದ್ಧಪಡಿಸಿದ ಶಿಶು ಆಹಾರ, ಮಕ್ಕಳ ದಂತಮಂಜನ, ನೀರು ಮತ್ತು ಫ್ಲೂರೈಡ್ ಒದಗಿಸುವ ಸಾಮಾಗ್ರಿಗಳ ಪಟ್ಟಿಗಳ ಸಹಿತ ಹಲವು ವಿಧಾನದಲ್ಲಿ ಜಗತ್ತಿನಾದ್ಯಂತ ಫ್ಲೂರೈಡ್ ಅಂಶಗಳನ್ನು ದುರ್ಬಲಗೊಳಿಸಲಾಗಿದೆ.[೫೫]

ಮೂಳೆ ಮುರಿತ(ಮುರಿದ ಎಲುಬು)ಗಳಾಗುವ ಅಪಾಯಗಳಲ್ಲಿ ಫ್ಲೂರೈಡೀಕರಣದ ಪ್ರಭಾವ ಬಹಳ ಕಡಿಮೆ. ಫ್ಲೂರೈಡೀಕರಣವಿಲ್ಲದೇ ಇರುವ ಅಥವಾ ಫ್ಲೂರೈಡೀಕರಣದ ಗರಿಷ್ಟ ಮಟ್ಟದಿಂದ ಸಣ್ಣ ಪ್ರಮಾಣದ ಮೂಳೆ ಮುರಿತವುಂಟಾಗಬಹುದು.[೧೧] ಸಾಮಾನ್ಯವಾಗಿ ಫ್ಲೂರೈಡೀಕರಣ ಮತ್ತು ಕಾನ್ಸರ್ ಅಥವಾ ಕಾನ್ಸರ್‌ನಿಂದಾಗುವ ಮರಣ ಮತ್ತು ನಿರ್ದಿಷ್ಟವಾಗಿ ಎಲುಬಿನ ಕಾನ್ಸರ್ ಮತ್ತು ಆಸ್ಟಿಯೋಸಾರ್ಕೋಮಗಳ ನಡುವೆ ಕೂಡಾ ಯಾವುದೇ ಸ್ಪಷ್ಟ ಸಂಬಂಧವಿಲ್ಲ.[೧೧][೧೨] ಇತರ ದುಷ್ಪರಿಣಾಮಗಳು ದೃಢವಾದ ನಿರ್ಣಯವನ್ನು ಸಾಧಿಸಲು ಸಾಕಷ್ಟು ಪುರಾವೆಗಳನ್ನೊದಗಿಸುವಲ್ಲಿ ಸೋತಿವೆ.[೧೨] ೧೯೯೭ರಲ್ಲಿ ಪ್ರಕಟಗೊಂಡ ಫಿನ್ನಿಶ್ ಅಧ್ಯಯನವು ವಾಸ್ತವವಾಗಿ ನೀರು ಫ್ಲೂರೈಡೀಕರಣಗೊಂಡಿದೆಯೇ ಎಂದು ಖಚಿತಪಡಿಸುವ ಮುನ್ನವೇ ಈ ನೀರು ಫ್ಲೂರೈಡೀಕರಣಗೊಂಡಿದೆ ಮತ್ತು ಇದರಿಂದ ಉಂಟಾಗುವ ವಿಭಿನ್ನರೂಪದ ಗುಣಲಕ್ಷಣಗಳ ಜೊತೆಗೆ ಹಲವಾರು ಮಾನಸಿಕ ಪರಿಣಾಮಗಳಿಗೂ ಸಹ ಇದು ಕಾರಣವಾಗುತ್ತದೆ ಎಂಬ ಭಯವನ್ನು ಮೂಡಿಸಿವೆ.[೧]

ನೀರಿನಲ್ಲಿ ಫ್ಲೂರೈಡ್ ನೈಸರ್ಗಿಕವಾಗಿ ಶಿಫಾರಸ್ಸುಗೊಂಡ ಮಟ್ಟಕ್ಕಿಂತ ಗರಿಷ್ಟ ಮಟ್ಟದ ಪ್ರಭಲತೆಯಲ್ಲಿ ಲಭ್ಯವಾಗಬಹುದು. ಇದು ಗಂಭೀರಸ್ವರೂಪದ ಹಲ್ಲಿನ ಫ್ಲೂರೋಸಿಸ್, ಅಸ್ಥಿಯ ಫ್ಲೂರೋಸಿಸ್ ಮತ್ತು ಎಲುಬುಗಳ ದುರ್ಬಲತೆ ಮೊದಲಾದ ಹಲವು ದೀರ್ಘಕಾಲ ಬಾಧಿಸುವ ರೋಗಗಳ ಜೊತೆಗೆ ಹಲವು ದುಷ್ಪರಿಣಾಮಗಳಿಗೂ ಕಾರಣವಾಗುತ್ತದೆ.[೪೬] ವಿಶ್ವ ಆರೋಗ್ಯ ಸಂಸ್ಥೆಯು ಫ್ಲೂರೋಸಿಸ್ ಉಂಟಾಗುವ ಸಾಧ್ಯತೆ ಕಡಿಮೆಗೊಳ್ಳಬಹುದಾದ ಫ್ಲೂರೈಡ್‌ನ ಗರಿಷ್ಟ ಮಟ್ಟದ ಮೌಲ್ಯವು ಪ್ರತೀ ಲೀಟರಿಗೆ ೧.೫ ಮಿ.ಗ್ರಾಂ ಎಂಬ ಸೂಚನೆಯ ಶಿಫಾರಸ್ಸು ನೀಡಿದೆ.[೫೮]

ಕೆಲವು ಅಪರೂಪದ ಸಂದರ್ಭಗಳಲ್ಲಿ ನೀರಿನ ಫ್ಲೂರೈಡೀಕರಣದ ಅಸಮರ್ಪಕ ನಿರ್ವಹಣೆಯು ಅಧಿಕ ಫ್ಲೂರೈಡೀಕರಣವನ್ನುಂಟು ಮಾಡಿ ಹೊಟ್ಟೆ ತೊಳಸುವಿಕೆ, ವಾಂತಿ ಮತ್ತು ಬೇಧಿ ಮೊದಲಾದ ಚಿಹ್ನೆಗಳಿಂದ ಕೂಡಿದ ತೀವ್ರಸ್ವರೂಪದ ಫ್ಲೂರೈಡ್ ವಿಷ ಸ್ಪೋಟಕ್ಕೆ ಕಾರಣವಾಗುತ್ತದೆ. ೧೯೯೧ ಮತ್ತು ೧೯೯೮ರ ನಡುವೆ ಫ್ಲೂರೈಡ್ ಪ್ರಭಲತೆಯು ಲೀಟರಿಗೆ ೨೨೦ಮಿ.ಗ್ರಾಂ ಗಳಷ್ಟು ಹೆಚ್ಚಿದ ಇಂತಹ ಮೂರು ಸ್ಪೋಟಗಳು ಯುಎಸ್‌ನಲ್ಲಿ ವರದಿಯಾಗಿವೆ . ೧೯೯೨ರಲ್ಲಿ ಅಲಸ್ಕದ ಸ್ಪೋಟದಲ್ಲಿ ೨೦೦ ಜನರು ಅನಾರೋಗ್ಯಪೀಡಿತರಾಗಿ ಓರ್ವ ವ್ಯಕ್ತಿ ಮರಣಹೊಂದಿದ್ದಾನೆ.[೫೯] ೨೦೧೦ರಲ್ಲಿ ಉತ್ತರ ಕೆರೊಲಿನಾದ ಅಶೆಬೊರೊದಲ್ಲಿ ಕೇವಲ ೯೦ ನಿಮಿಷಗಳ ಕಾಲಾವಧಿಯಲ್ಲಿ ಅಂದಾಜು ಸುಮಾರು ೬೦ ಗಾಲನ್‌ಗಳಷ್ಟು ಫ್ಲೂರೈಡ್‌ನ್ನು ಸರಬರಾಜು ಮಾಡುವ ನೀರಿಗೆ ಬಿಡುಗಡೆಗೊಳಿಸಲಾಗಿದೆ. ಈ ಪ್ರಮಾಣವನ್ನು ೨೪ ಗಂಟೆಗಳ ಕಾಲಾವಧಿಯಲ್ಲಿ ಬಿಡುಗಡೆಗೊಳಿಸಲು ಉದ್ದೇಶಿಸಲಾಗಿತ್ತು.[೬೦]

ನೀರಿಗೆ ಸೇರಿಸಲ್ಪಡುವ ಇತರ ಸಾಮಾನ್ಯ ವಸ್ತುಗಳಾದ ಕ್ಲೋರಿನ್, ಹೈಡ್ರೋಫ್ಲೂಸಿಲಿಸಿಕ್ ಆಸಿಡ್ ಮತ್ತು ಸೋಡಿಯಂ ಸಿಲಿಕೋಫ್ಲೂರೈಡ್‌ಗಳು ನೀರಿನ ಸಾರವನ್ನು (ಪಿಎಚ್ ಮೌಲ್ಯ) ತಗ್ಗಿಸಿ ತೀಕ್ಷ್ಣತೆಯನ್ನು(ಕೊರೆತ) ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸುತ್ತದೆ.[೬೧] ಆದರೆ ಈ ಸಮಸ್ಯೆಯನ್ನು ಸಾರತ್ವ (ಪಿಎಚ್ ಮೌಲ್ಯ) ಹೆಚ್ಚಿಸುವ ಮೂಲಕ ಸುಲಭವಾಗಿ ನಿರ್ವಹಿಸಬಹುದು. ಹೈಡ್ರೋಫ್ಲೂಸಿಲಿಸಿಕ್ ಆಸಿಡ್ ಮತ್ತು ಸೋಡಿಯಂ ಸಿಲಿಕೋಫ್ಲೂರೈಡ್‌ಗಳು ನೀರಿನಿಂದ ಸೀಸದ ಪ್ರಮಾಣವನ್ನು ಗ್ರಹಿಸುವ ಪ್ರಮಾಣವನ್ನು ಮನುಷ್ಯರಲ್ಲಿ ಹೆಚ್ಚಿಸಬಹುದೆಂಬ ಕಲ್ಪನೆಯು ರೂಢಿಯಲ್ಲಿದ್ದು ೨೦೦೭ರ ಅಂಕಿಅಂಶಗಳ ವಿಶ್ಲೇಷಣೆಯು ಈ ರಾಸಾಯನಿಕಗಳು ಮಕ್ಕಳ ರಕ್ತದಲ್ಲಿನ ಸೀಸದ ಪ್ರಭಲತೆಯನ್ನು ಹೆಚ್ಚಿಸುತ್ತವೆ ಎಂಬ ಊಹೆಯನ್ನು ಬೆಂಬಲಿಸಲಿಲ್ಲ.[೬೨] ಅತ್ಯಲ್ಪ ಪ್ರಮಾಣದ ಆರ್ಸೆನಿಕ್ ಮತ್ತು ಸೀಸದ ಅಂಶಗಳುಳ್ಳ ಫ್ಲೂರೈಡ್ ಸಂಯುಕ್ತಗಳನ್ನು ನೀರಿಗೆ ಸೇರಿಸಲಾಗುತ್ತದೆ ಆದರೆ, ಈ ಸಂಯುಕ್ತಗಳ ಇರುವಿಕೆಗೆ ಸಂಬಂಧಿಸಿದ ನಂಬಲರ್ಹ ಸಾಕ್ಷಿಗಳು ಇಲ್ಲ. ಇವು ಪ್ರಭಲತೆಯು ಅಳತೆಯ ಮಿತಿಗಿಂತಲೂ ಕೆಳಗಿನ ಪ್ರಮಾಣದ್ದಾಗಿದೆ.[೬೧]

ನೈಸರ್ಗಿನ ವಾತಾವರಣದಲ್ಲಿ ನೀರಿನ ಫ್ಲೂರೈಡೀಕರಣದ ಪ್ರಭಾವವನ್ನು ಪರೀಕ್ಷಿಸಲಾಗಿದ್ದು ಇದರಿಂದ ಯಾವುದೇ ದುಷ್ಪರಿಣಾಮಗಳು ಉಂಟಾಗಲಿಲ್ಲ. ಅಂತರ್ಜಲದಲ್ಲಿನ ಫ್ಲೂರೈಡ್ ಪ್ರಭಲತೆ ಮತ್ತು ನದಿಯ ಪ್ರವಾಹಗಳಲ್ಲಿ, ಹುಲ್ಲುಹಾಸು, ಉದ್ಯಾನವನ, ಮತ್ತು ಗಿಡಗಳು; ಫ್ಲೂರೈಡೀಕರಣ ಹೊಂದಿದ ನೀರಿರುವ ಪ್ರದೇಶದಲ್ಲಿ ಬೆಳೆದ ಸಸ್ಯಗಳ ಬಳಕೆ, ಗಾಳಿಯ ಹೊರಸೂಸುವಿಕೆ,ಮತ್ತು ಉಪಕರಣಗಳಿಂದುಂಟಾಗುವ ಶಬ್ಧ ಇವುಗಳಲ್ಲಿನ ಫ್ಲೋರೈಡ್ ಅಂಶವನ್ನು ಅಧ್ಯಯನ ನಡೆಸಲಾಗಿದೆ.[೬೧]

ಪರ್ಯಾಯಗಳು ಬದಲಾಯಿಸಿ

ಜನಸಮುದಾಯಗಳಿಗೆ[೧೧] ಫ್ಲೂರೈಡ್ ಸಿಗುವಂತೆ ಮಾಡುವ ಸಾಧನೆಗೆ ನೀರಿನ ಫ್ಲೂರೈಡೀಕರಣವು ಪರಿಣಾಮಕಾರಿ ಮಾಧ್ಯಮವಾದರೂ, ಇತರ ಫ್ಲೂರೈಡ್ ಚಿಕಿತ್ಸೆಗಳೂ ಕೂಡಾ ದಂತಕ್ಷಯವನ್ನು[೧೭] ತಡೆಯುವಲ್ಲಿ ದಕ್ಷ ಪ್ರಭಾವವನ್ನು ಬೀರುತ್ತವೆ. ಇವುಗಳೆಂದರೆ ಫ್ಲೋರೈಡ್ ದಂತಮಂಜನ, ಬಾಯಿತೊಳೆಯಲು ಬಳಸುವ ದ್ರವ (ಮೌತ್ ವಾಷ್), ಜೆಲ್ ಮತ್ತು ಮೆರುಗು ನೀಡುವ ದ್ರವ್ಯಗಳು[೬೩] (ವಾರ್ನಿಷ್) ಮತ್ತು ಉಪ್ಪು ಮತ್ತು ಹಾಲಿನ ಫ್ಲೂರೈಡೀಕರಣ.[೧೪] ಹಲ್ಲುಗಳನ್ನು ಸೀಲ್ ಮಾಡುವುದೂ ಕೂಡಾ ಉತ್ತಮ ಪರಿಣಾಮ ಬೀರಬಲ್ಲುದು.[೧೭] ಅಂದಾಜು ಸುಮಾರು ೩೩% ರಿಂದ ೮೬% ವ್ಯಾಪ್ತಿಯಲ್ಲಿ ದಂತದ ಕುಳಿಗಳನ್ನು ತಡೆಯುವ ಸಾಮರ್ಥ್ಯವು ಅಧ್ಯಯನದ ವಿಧಾನ ಮತ್ತು ಸೀಲ್ ಮಾಡಲು ಬಳಸಿದ ವಸ್ತುವಿನ ಅವಧಿಯನ್ನು ಅವಲಂಬಿಸಿದೆ.[೬೩]

 
ಫ್ಲೂರೈಡ್‌ ಟೂತ್‌ಪೇಸ್ಟ್‌ ಕುಳಿಯನ್ನು ಕಡಿಮೆಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಇದನ್ನು ಹೆಚ್ಚಾಗಿ ಬಳಸಲಾಗುತ್ತಿದೆ, ಆದರೆ ಬಡವರಲ್ಲಿ ಕಡಿಮೆ.[೧೪]

ಫ್ಲೂರೈಡ್ ಟೂತ್‌ಪೇಸ್ಟ್ ವಿಸ್ತೃತವಾಗಿ ಮತ್ತು ತರ್ಕಬದ್ಧವಾಗಿ ಮೌಲ್ಯಮಾಪನಗೊಂಡು ಬಳಸಲ್ಪಡುವ ಫ್ಲೂರೈಡ್ ಚಿಕಿತ್ಸೆಯಾಗಿದೆ.[೧೪] ೧೯೭೦ರ ಪೂರ್ವದಲ್ಲಿ ಆರಂಭಗೊಂಡ ಇದರ ಬಳಕೆಯು ಕೈಗಾರಿಕೀಕರಣಗೊಂಡ ದೇಶಗಳಲ್ಲಿ[೪] ದಂತಕ್ಷಯವು ಕಡಿಮೆಯಾಗಲು ಮುಖ್ಯ ಕಾರಣ ಎಂದು ಪರಿಗಣಿಸಲ್ಪಟ್ಟಿದೆ ಹಾಗೂ ದಂತಕ್ಷಯವು ಕ್ಷೀಣತೆಗೊಂಡ ದೇಶಗಳಲ್ಲಿ ಟೂತ್‌ಪೇಸ್ಟ್ ಏಕೈಕ ಅಂಶವಾಗಿರುವುದು ಕಂಡುಬಂದಿದೆ.[೬೪] ಮೂಲಭೂತ ವ್ಯವಸ್ಥೆಗಳ ಕೊರತೆಯಿರುವ ಕಾರಣದಿಂದ ನೀರು ಅಥವಾ ಉಪ್ಪಿನ ಫ್ಲೂರೈಡೀಕರಣವು ಕಷ್ಟಸಾಧ್ಯವಾದುದರಿಂದ ಕಡಿಮೆ ಆದಾಯವುಳ್ಳ ಹೆಚ್ಚಿನ ದೇಶಗಳಲ್ಲಿ ಟೂತ್‌ಪೇಸ್ಟ್ ಮಾತ್ರ ನಿಜವಾದ ಫ್ಲೂರೈಡ್‌ಯುಕ್ತ ಸಾಧನವಾಗಿದೆ.[೬೫] ಆದರೂ ಇದು ವ್ಯಕ್ತಿಯೊಬ್ಬನ ಮತ್ತು ಕುಟುಂಬವೊಂದರ ನಡವಳಿಕೆಯನ್ನು ಅವಲಂಭಿಸಿದ್ದು ಆರ್ಥಿಕವಾಗಿ[೧೪] ಹಿಂದುಳಿದ ವರ್ಗಗಳಲ್ಲಿ ಇದರ ಬಳಕೆಯು ಹೆಚ್ಚು ಇಷ್ಟಪಡದಿರುವ ವಿಚಾರವಾಗಿದೆ.[೬೫] ಹೊಸ ಶಾಶ್ವತ ಹಲ್ಲುಗಳಲ್ಲಿ ಫ್ಲೂರೈಡ್ ಟೂತ್‌ಪೇಸ್ಟ್ ಸುಮಾರು ೨೫% ಕುಳಿಗಳನ್ನು ತಡೆಯುತ್ತವೆ ಮತ್ತು ಗರಿಷ್ಟ ಮಟ್ಟದ ಫ್ಲೂರೈಡ್ ಪ್ರಭಲತೆಯನ್ನು ಬಳಸುವ ಮೂಲಕ ಅಥವಾ ಹಲ್ಲುಜ್ಜುವುದನ್ನು ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದರ ಮೂಲಕ ಇದರ ಪರಿಣಾಮಕಾರಿತ್ವವನ್ನು ವೃದ್ಧಿಗೊಳಿಸಲಾಗುತ್ತದೆ. ಫ್ಲೂರೈಡ್ ಬಾಯಿತೊಳೆಯುವ ದ್ರವ ಮತ್ತು ಜೆಲ್‌ಗಳು ಫ್ಲೂರೈಡ್ ಟೂತ್‌ಪೇಸ್ಟ್‌ನಷ್ಟೇ ಪರಿಣಾಮಕಾರಿಯಾಗಿದ್ದು ಫ್ಲೂರೈಡ್ ವಾರ್ನಿಷ್‌ಗಳು ಒಟ್ಟು ಹಲ್ಲುಕುಳಿಗಳ ಸುಮಾರು ೪೫% ಭಾಗದಷ್ಟು ಕುಳಿಗಳನ್ನು ತಡೆಯುತ್ತವೆ.[೬೩] ಹೋಲಿಸಿದರೆ, ಫ್ಲೂರೈಡ್‌ರಹಿತ ಟೂತ್‌ಪೇಸ್ಟ್ ಬಳಸಿ ಹಲ್ಲುಜ್ಜುವುದು ಹಲ್ಲುಕುಳಿಗಳ ಮೇಲೆ ಕಡಿಮೆ ಪರಿಣಾಮ ಬೀರುತ್ತವೆ.[೪೭]

ಮನುಷ್ಯರ ಬಳಕೆಗಾಗಿ ಹೆಚ್ಚು ಉಪ್ಪನ್ನು ಫ್ಲೂರೈಡೀಕರಿಸಿದರೆ ಉಪ್ಪಿನ ಫ್ಲೂರೈಡೀಕರಣವು ನೀರಿನ ಫ್ಲೂರೈಡೀಕರಣದಷ್ಟೇ ಪರಿಣಾಮಕಾರಿಯಾಗಿರುತ್ತದೆ. ಫ್ಲೂರೈಡೀಕರಿಸಿದ ಮನೆಯಲ್ಲಿನ ಉಪ್ಪಿನ ಮೂಲಕವೂ, ಶಾಲೆಯಲ್ಲಿ ಮತ್ತು ಬೃಹತ್ ಅಡಿಗೆಮನೆಯಲ್ಲಿ ಊಟ ಮತ್ತು ಬ್ರೆಡ್‌ಗಳ ರೂಪದಲ್ಲಿ ಬಳಕೆದಾರರನ್ನು ತಲುಪುತ್ತದೆ. ಉದಾಹರಣೆಗೆ, ಜಮೈಕಾವು ಕೇವಲ ಒಂದೇ ಉಪ್ಪು ಉತ್ಪಾದಕರನ್ನು ಹೊಂದಿದೆ ಆದರೆ, ಸಂಕೀರ್ಣವಾದ ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆಯನ್ನು ಹೊಂದಿದ್ದು, ೧೯೮೭ರಲ್ಲಿ ಇದು ಎಲ್ಲಾ ಉಪ್ಪನ್ನು ಫ್ಲೂರೈಡೀಕರಿಸಲು ಆರಂಭಿಸಿ ಹಲ್ಲುಕುಳಿಗಳುಂಟಾಗುವ ಪ್ರಮಾಣದಲ್ಲಿ ಗಮನೀಯ ಇಳಿಕೆಯನ್ನು ಸಾಧಿಸಿತು. ಸಾರ್ವತ್ರಿಕ ಉಪ್ಪಿನ ಫ್ಲೂರೈಡಿಕರಣವು ಕೊಲಂಬಿಯ ಮತ್ತು ವಾಡ್‍ನ ಸ್ವಿಸ್ ಕಾಂಟನ್‌ಗಳಲ್ಲಿ ಕೂಡಾ ಕಾರ್ಯಗತಗೊಳಿಸಲ್ಪಟ್ಟಿದೆ. ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿ ಫ್ಲೂರೈಡೀಕರಿಸಿದ ಉಪ್ಪನ್ನು ವ್ಯಾಪಕವಾಗಿ ಮನೆಬಳಕೆಗೆ ಉಪಯೋಗಿಸಲಾಗುತ್ತಿದ್ದು ಫ್ಲೂರೈಡ್‌ಗಳ ಮೇಲೆ ಬಳಕೆದಾರರಿಗೆ ಆಯ್ಕೆಗಳನ್ನು ನೀಡುವ ಸಲುವಾಗಿ ಫ್ಲೋರೈಡೀಕರಣಗೊಳ್ಳದ ಉಪ್ಪು ಕೂಡಾ ಲಭ್ಯವಿವೆ. ಅಧ್ಯಯನಗಳು ಸೂಚಿಸಿದ ಪ್ರಶಸ್ತವಾದ ಫ್ಲೂರೈಡ್ ಪ್ರಭಲತೆಯು ಸುಮಾರು ೨೫೦ಮಿ.ಗ್ರಾಂ/ಕಿ.ಗ್ರಾಂಗಳಾಗಿದ್ದು ಉಪ್ಪಿನಲ್ಲಿ ದೊರೆಯುವ ಫ್ಲೂರೈಡ್ ಪ್ರಭಲತೆಯ ಕಿಲೋಗೆ ವ್ಯಾಪ್ತಿಯು ೯೦ ರಿಂದ ೩೫೦ಮಿ.ಗ್ರಾಂಗಳಾಗಿವೆ.[೧೪]

ಬಲ್ಗೇರಿಯಾದ ಕೆಲವು ಭಾಗಗಳಲ್ಲಿ, ಚಿಲಿ, ಪೆರು, ರಷ್ಯಾ, ಮಸೆಡೊನಿಯ, ಥೈಲ್ಯಾಂಡ್ ಮತ್ತು ಯುಕೆಗಳಲ್ಲಿ ಹಾಲಿನ ಫ್ಲೂರೈಡೀಕರಣವನ್ನು ಕಾರ್ಯಗತಗೊಳಿಸಲಾಗಿದೆ. ಸ್ಥಳಗಳ ಅಧಾರದ ಮೇಲೆ ಹಾಲಿಗೆ, ಮೊಸರಿಗೆ ಅಥವಾ ಹಾಲಿನಪುಡಿಗೆ ಫ್ಲೂರೈಡ್‌ನ್ನು ಸೇರಿಸಲಾಗುತ್ತದೆ. ಉದಾಹರಣೆಗೆ, ತಾಂತ್ರಿಕ ಕಾರಣಗಳಿಂದ ನೀರಿನ ಫ್ಲೂರೈಡೀಕರಣವನ್ನು ಕೈಗೊಳ್ಲಲು ಸಾಧ್ಯವಾಗದ ಚಿಲಿಯ ಗ್ರಾಮೀಣ ಪ್ರದೇಶಗಳಲ್ಲಿ ಹಾಲಿನಪುಡಿಯ ಫ್ಲೂರೈಡೀಕರಣವನ್ನು ಬಳಸಲಾಗುತ್ತದೆ.[೬೬] ಈ ಕಾರ್ಯಕ್ರಮಗಳು ಮಕ್ಕಳನ್ನೇ ಗುರಿಯಾಗಿಸಿವೆ ಮತ್ತು ಪ್ರೌಢರನ್ನು ಗುರಿಯಾಗಿಸಲೇ ಇಲ್ಲ ಅಥವಾ ಪ್ರೌಢರಿಗಾಗಿ ಅರ್ಹತೆಯನ್ನು ಪಡೆದಿಲ್ಲ.[೧೪] ೨೦೦೫ರ ಕ್ರಮಬದ್ಧ ಅಧ್ಯಯನವು ಅಭ್ಯಾಸವನ್ನು ಬೆಂಬಲಿಸಲು ಅವಶ್ಯವಿದ್ದಷ್ಟು ಸಾಕ್ಷ್ಯಗಳಿಲ್ಲದುದನ್ನು ಕಂಡುಕೊಂಡಿತಾದರೂ, ಇವು ಈ ಅಧ್ಯಯನಗಳು ಶಾಲಾಮಕ್ಕಳನ್ನು, ವಿಶೇಷವಾಗಿ ಅವರ ಶಾಶ್ವತ ಹಲ್ಲುಗಳಿಗೆ ಫ್ಲೂರೈಡೀಕರಿಸಿದ ಹಾಲು ಪ್ರಯೋಜನಕಾರಿಯಾಗಿವೆ ಎಂದು ಸೂಚಿಸಿದೆ ಎಂಬ ನಿರ್ಣಯಕ್ಕೆ ಬಂದುವು.[೬೭]

ದಂತಕ್ಷಯವನ್ನು ಹತೋಟಿಯಲ್ಲಿಡುವ ಇತರ ಸಾರ್ವಜನಿಕ ಆರೋಗ್ಯ ಸೂತ್ರಗಳಾದ ನಡವಳಿಕೆ ಮತ್ತು ಆಹಾರಾಭ್ಯಾಸವನ್ನು ಬದಲಿಸಲು ನೀಡಬೇಕಾದ ಶಿಕ್ಷಣ ಮನಮುಟ್ಟುವಂತಹ ಫಲಿತಾಂಶಗಳನ್ನು ಕಳೆದುಕೊಂಡಿವೆ.[೫೫] ಹಲ್ಲುಕುಳಿಗಳು ಅಭಿವೃದ್ಧಿಯಾಗುವ ಪ್ರಮಾಣವನ್ನು ತಗ್ಗಿಸುವ ಫ್ಲೂರೈಡ್ ಒಂದು ದಾಖಲಿಸಲ್ಪಟ್ಟ ಉತ್ತಮ ಪ್ರಭಾವ ಬೀರುವ ವಸ್ತುವಾದರೂ, ನೀರಿಗೆ ಕ್ಯಾಲ್ಸಿಯಂ‌ನ್ನು ಸೇರಿಸುವುದರಿಂದ ಇದು ಇನ್ನೂ ಹೆಚ್ಚಿನ ದಂತಕುಳಿಗಳನ್ನು ತಡೆಯಬಲ್ಲುದು.[೬೮] ದಂತಕ್ಷಯವನ್ನು ತಡೆಯಬಲ್ಲ ಇತರ ವಸ್ತುಗಳು ಆಂಟಿಬ್ಯಾಕ್ಟೀರಿಯಾಗಳಾದ ಕೋರ್‌ಹೆಕ್ಸಿಡಿನ್ ಮತ್ತು ಕ್ಸೈಲಿಟಾಲ್‌ನಂತಹ ಸಕ್ಕರೆಯ ಬದಲಿಗೆ ಬಳಸಬಹುದಾದ ವಸ್ತುಗಳನ್ನೊಳಗೊಂಡಿವೆ.[೬೩] ಕ್ಸೈಲಿಟಾಲ್ ಸಿಹಿಯಾದ ಜಗಿಯುವ ಅಂಟಾಗಿದ್ದು ದುಬಾರಿ ಬೆಲೆಯಾಗಿದ್ದಾಗಿಲ್ಲದೆ ಇದ್ದರೆ ಈ ಫ್ಲೂರೈಡ್‌ ಸಾಂಪ್ರದಾಯಿಕ ಚಿಕಿತ್ಸೆಗಳ ಬದಲಿಗೆ ಬಳಸಬಹುದಾದ ವಸ್ತುವಾಗಿದೆ ಎಂಬ ಶಿಫಾರಸ್ಸು ಪಡೆದಿದೆ.[೬೯] ಸೂಚಿಸಲ್ಪಟ್ಟ ಎರಡು ಪ್ರಯತ್ನಗಳಾದ ಬ್ಯಾಕ್ಟೀರಿಯದ ಪುನರ್‌ಸ್ಥಾನಪಲ್ಲಟನಾ ಚಿಕಿತ್ಸೆ (ಬ್ಯಾಕ್ಟೀರಿಯ ರಿಪ್ಲೇಸ್‌ಮೆಂಟ್ ಥೆರಪಿ - ಪ್ರೊಬಯೊಟಿಕ್) ಮತ್ತು ವಾಕ್ಸಿನ್‌ಗಳನ್ನು ಹೊತ್ತಿರುವ ಈ ವಿಧಾನಗಳು ರೊಗಿಗಳ ಕನಿಷ್ಟ ಕೋರಿಕೆಗಳು ಮಾತ್ರ ಬೇಕಾದ ನೀರಿನ ಫ್ಲೂರೈಡೀಕರಣದ ಪ್ರಯೋಜನಗಳನ್ನು ಹಂಚಿಕೊಳ್ಳುತ್ತದೆ.[೬೩] ಆದರೆ ಇದು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಧಿಸಲ್ಪಟ್ಟಿಲ್ಲ. ಇತರ ಪ್ರಯೋಗಾತ್ಮಕ ಪ್ರಯತ್ನಗಳು ಫ್ಲೂರೈಡೀಕರಿಸಿದ ಸಕ್ಕರೆ, ಪಾಲಿಫಿನೋಲ್‌ಗ‍ಳು ಮತ್ತು ಕೇಸಿನ್ ಫೋಸ್ಫೋಪೆಪ್ಟೈಡ್-ಅಮಾರ್ಫಸ್ ಕಾಲ್ಚಿಯಮ್ ಫಾಸ್ಪೇಟ್ ನಾನೋಕಾಂಪ್ಲೆಕ್ಸಸ್‌ಗಳನ್ನು ಒಳಗೊಂಡಿವೆ.[೭೦]

೨೦೦೭ರ ಆಸ್ಟ್ರೇಲಿಯಾದಲ್ಲಿ ನಡೆದ ಮರುಪರಿಶೀಲನೆಯು ಸಂಪೂರ್ಣ ಜನಸಮುದಾಯವನ್ನೇ ಫ್ಲೂರೈಡ್‌ನ ಹಲ್ಲುಕುಳಿಗಳನ್ನು ತಡೆಯುವ ಪ್ರಭಾವಕ್ಕೊಳಪಡಿಸಲು ನೀರಿನ ಫ್ಲೂರೈಡೀಕರಣವೇ ಅತ್ಯಂತ ಪರಿಣಾಮಾತ್ಮಕ ಮತ್ತು ಸಾಮಾಜಿಕವಾಗಿ ನ್ಯಾಯಸಮ್ಮತವಾದ ವಿಧಾನವಾಗಿದೆ ಎಂದು ನಿರ್ಣಯಿಸಿತು.[೧೧] ೨೦೦೨ರ ಯುಎಸ್‌ ಮರುಪರಿಶೀಲನೆಯು ಸುಮಾರು ೧೮ - ೫೦%ದಷ್ಟು ಹಲ್ಲುಕುಳಿಗಳನ್ನು ತಗ್ಗಿಸಿದ ಫ್ಲೂರೈಡ್‌ಗಳಿಗೆ ಹೋಲಿಸಿದರೆ, ಸೀಲೆಂಟ್‌ಗಳು (ಸೀಲು ಯಾ ಮೊಹರು ಮಾಡಲು ಬಳಸುವ ವಸ್ತು) ಒಟ್ಟು ಸುಮಾರು ೬೦%ಗಳಷ್ಟು ಹಲ್ಲುಕುಳಿಗಳನ್ನು ಕಡಿಮೆಮಾಡಿದೆ ಎಂದು ಅಭಿಪ್ರಾಯಪಟ್ಟಿದೆ.[೫೩] ೨೦೦೭ರಲ್ಲಿ ನಡೆದ ಇಟಲಿಯ ಮರುಪರಿಶೀಲನೆಯು ಹಲ್ಲುಕುಳಿಗಳು ಅಪರೂಪವಾಗಿರುವ ಕೈಗಾರಿಕೀಕರಣಗೊಂಡ ರಾಷ್ಟ್ರಗಳಲ್ಲಿ ನೀರಿನ ಫ್ಲೂರೈಡೀಕರಣವು ಅಗತ್ಯವಿರಲಿಕ್ಕಿಲ್ಲ ಎಂಬ ಸಲಹೆ ನೀಡಿದ್ದು, ಟೂತ್‌ಪೇಸ್ಟ್ ಮತ್ತು ಇತರ ಸ್ಥಳೀಕ ದ್ರವಗಳು (ಟಾಪಿಕಲ್ ಫ್ಲೂಯಿಡ್) ವಿಶ್ವದಾದ್ಯಂತ ಹಲ್ಲುಕುಳಿಗಳನ್ನು ತಡೆಗಟ್ಟಬಲ್ಲ ಉತ್ತಮ ಮಾರ್ಗವನ್ನು ತೋರಿಸಿವೆ ಎಂದು ನಿರ್ಧರಿಸಿದ್ದಾರೆ.[೪] ೨೦೦೪ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಮರುಪರಿಶೀಲನೆಯು ನೀರಿನ ಫ್ಲೂರೈಡೀಕರಣವು ಸಾಂಸ್ಕೃತಿಕವಾಗಿ ಸ್ವೀಕರಿಸಲ್ಪಟ್ಟಾಗ ಮತ್ತು ತಾಂತ್ರಿಕವಾಗಿ ಸುಗಮವಾದಾಗ ವಿಶೇಷವಾಗಿ ಅಪಾಯದಲ್ಲಿರುವ ಉಪಗುಂಪುಗಳ ದಂತಕ್ಷಯವನ್ನು ತಡೆಯುವಲ್ಲಿ ಮಹತ್ವವುಳ್ಳ ಪ್ರಯೋಜನಗಳನ್ನು ಹೊಂದಿದೆಯೆಂದು ಹೇಳಿವೆ.[೯]

ಆರ್ಥಿಕತೆ ಬದಲಾಯಿಸಿ

ಅಂದಾಜಿನ ಪ್ರಕಾರ ಫ್ಲೂರೈಡೀಕರಣದ ವೆಚ್ಚವು ಪ್ರತೀ ವರ್ಷಕ್ಕೆ, ಪ್ರತೀ ವ್ಯಕ್ತಿಗೆ ಸರಾಸರಿ ಸುಮಾರು $ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".{Inflation} - NaN check amount: 0.72 or year: 1999. ಗಳು (ವ್ಯಾಪ್ತಿ: $ ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".{Inflation} - NaN check amount: 0.17 or year: 1999. -$ ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".{Inflation} - NaN check amount: 7.62 or year: 1999. , ಈ ಪ್ಯಾರಾದಲ್ಲಿ ಸೂಚಿಸಿದ ಎಲ್ಲಾ ವೆಚ್ಚಗಳು ಯುಎಸ್‌ನಲ್ಲಿ ಮಾತ್ರ [೨] ಮತ್ತು ೨೦೨೪ ಡಾಲರ್‌ಗಳು ಹಿಂದಿನ ಅಂದಾಜಿನ ಹಣದುಬ್ಬರದಿಂದ ಸರಿಹೊಂದಿಸಲ್ಪಟ್ಟಿದೆ[೫]. ಬೃಹತ್ ನೀರಿನ ವ್ಯವಸ್ಥೆಯು ಕಡಿಮೆ ವೆಚ್ಚವನ್ನು ಹೊಂದಿದ್ದು, ನೀರಿನ ವ್ಯವಸ್ಥೆಯ ಮೇಲೆ ಫ್ಲೂರೈಡ್‌ನ್ನು ಒಳನುಗ್ಗಿಸಲು ಇರುವ ಒಟ್ಟು ಸ್ಥಾನಗಳು, ಒಳನುಗ್ಗಿಸುವ ಸಲಕರಣೆಯ ಮತ್ತು ನಿಯಂತ್ರಿಸುವ ಉಪಕರಣದ ಮಾದರಿ, ಫ್ಲೂರೈಡ್ ರಾಸಾಯನಿಕ ಮತ್ತು ಇದರ ಸಾಗಾಣಿಕೆ ಮತ್ತು ದಾಸ್ತಾನು ಮತ್ತು ಜಲಸ್ಥಾವರದಲ್ಲಿ ಪರಿಣಿತ ವ್ಯಕ್ತಿಯ ಲಭ್ಯತೆ ಈ ಎಲ್ಲಾ ಅಂಶಗಳೂ ಕೂಡಾ ಫ್ಲೂರೈಡೀಕರಣದ ಒಟ್ಟುವೆಚ್ಚದ ಮೇಲೆ ಪ್ರಭಾವ ಬೀರಿದೆ.[೨] ಸಂಪದ್ಭರಿತ ರಾಷ್ಟ್ರಗಳಲ್ಲಿ ಉಪ್ಪಿನ ಫ್ಲೂರೈಡೀಕರಣದ ಖರ್ಚು ಕೂಡಾ ನಗಣ್ಯವಾಗಿದ್ದು, ಮುಂದುವರೆಯುತ್ತಿರುವ ದೇಶಗಳಿಗೆ ಇದು ಫ್ಲೂರೈಡ್ ರಾಸಾಯನಿಕಗಳ ಆಮದು ಮಾಡಿಕೊಳ್ಳುವುದನ್ನು ತಡೆಹಿಡಿಯುವಷ್ಟು ದುಬಾರಿಯೆನಿಸಬಲ್ಲುದು.[೭೧] ಹೋಲಿಕೆಯ ಪ್ರಕಾರ, ಇತರ ಕಾರಣಗಳಿಂದ ತಮ್ಮ ಹಲ್ಲುಗಳನ್ನು ಬ್ರಷ್ ಮಾಡುವ ಜನರಿಗೆ ಏರಿಕೆಯ ಮೌಲ್ಯ ಸೊನ್ನೆಯಾಗಿರುವುದರ ಜೊತೆಗೆ, ಫ್ಲೂರೈಡ್ ಟೂತ್‌ಪೇಸ್ಟ್‌ನ ವೆಚ್ಚವು ಪ್ರತೀ ವರ್ಷಕ್ಕೆ ಪ್ರತೀ ವ್ಯಕ್ತಿಗೆ ಅಂದಾಜು ಮೊತ್ತ $ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".{Inflation} - NaN check amount: 6 or year: 1999.  -$ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".{Inflation} - NaN check amount: 12 or year: 1999.  ಮತ್ತು, ಹಲ್ಲಿನ ಸ್ವಚ್ಛತೆ ಹಾಗೂ ಫ್ಲೂರೈಡ್ ಮೆರುಗು ಮತ್ತು ಜೆಲ್‌ಗಳ ಬಳಕೆಯ ಒಟ್ಟು ವೆಚ್ಚ ಪ್ರತಿ ವರ್ಷಕ್ಕೆ, ಪ್ರತಿ ವ್ಯಕ್ತಿಗೆ ಅಂದಾಜು ಸುಮಾರು $ ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".{Inflation} - NaN check amount: 66 or year: 1999. . ಕನಿಷ್ಟ ಅಂದಾಜು ಪರಿಣಾಮಕಾರಿತ್ವ ಮತ್ತು ಗರಿಷ್ಟ ಅಂದಾಜು ನಿರ್ವಹಣಾ ವೆಚ್ಚಗಳ ಜೊತೆಗೆ, ಅತ್ಯಂತ ಕೆಟ್ಟ ಸಂದರ್ಭಗಳನ್ನೂ ಗಮನದಲ್ಲಿಟ್ಟುಕೊಂಡು ಸಣ್ಣ ನಗರಗಳಲ್ಲಿ ಸಂರಕ್ಷಿತ ಹಲ್ಲಿನ ಮೇಲ್ಮೈ ಸವೆತಕ್ಕೆ ತಗಲಿದ ಅಂದಾಜು ವೆಚ್ಚ ವರ್ಷಕ್ಕೆ $ ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".{Inflation} - NaN check amount: 11 or year: 1999. -$ ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".{Inflation} - NaN check amount: 17 or year: 1999. , ಇದು ಅದನ್ನು ಪುನರ್‌ಸ್ಥಾಪಿಸಲು ಭರಿಸಿದ ಅಂದಾಜು ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".{Inflation} - NaN check amount: 65 or year: 1999.  ವೆಚ್ಚಕ್ಕಿಂತ ಕಡಿಮೆಯಾಗಿದೆ [೨] ಮತ್ತು, ಅಂದಾಜು ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".{Inflation} - NaN check amount: 100.62 or year: 1995.  ಸವೆಯದಿಂದ ಪುನರ್ಸ್ಥಾಪಿಸಿದ ಹಲ್ಲಿನ ಮೇಲ್ಮೈಯ ನಿರ್ವಹಣೆಗೆ ತಗಲುವ ಖರ್ಚಿನ ಜೊತೆಗೆ, ಜೀವಿತಾವಧಿಯನ್ನು ಕಡಿಮೆ ಮಾಡುವ/ಕಳೆಯುವ ಕೊಳೆತ ಹಲ್ಲಿನ ಮೇಲ್ಮೈಯ ಸರಾಸರಿ ಅಂದಾಜುವೆಚ್ಚ $ [೨೭]. ಹೆಚ್ಚಾಗಿ ನುಂಗಿಹೋದ ಟೂತ್‌ಪೇಸ್ಟ್ ಮೂಲಕ ಸೇವಿಸಲ್ಪಟ್ಟ ಫ್ಲೂರೈಡ್‌ನಿಂದಾಗುವ ದಂತಕ್ಷಯದ ಚಿಕಿತ್ಸೆಗೆ ಕೈಗಾರಿಕೀಕರಣಗೊಂಡ ರಾಷ್ಟ್ರಗಳಲ್ಲಿ ಅದೆಷ್ಟು ಖರ್ಚಾಗುತ್ತದೆ ಎಂಬುದು ತಿಳಿದುಬಂದಿಲ್ಲ.[೪೭]

೧೯೮೯ರಲ್ಲಿ "ಹಲ್ಲುಕುಳಿಗಳನ್ನು ತಡೆಗಟ್ಟಲು ತಗಲುವ ಖರ್ಚು ಮತ್ತು ಅದರ ಪರಿಣಾಮಕಾರಿತ್ವ" (ಕಾಸ್ಟ್-ಇಫೆಕ್ಟಿವ್‌ನೆಸ್ ಆಫ್ ಕ್ಯಾವಿಟಿ ಪ್ರಿವೆನ್ಶನ್) ವಿಷಯದ ಮೇಲೆ ನಡೆದ ಕಾರ್ಯಾಗಾರವು ಖರ್ಚಿಗಿಂತ ಹೆಚ್ಚು ಹಣದ ಉಳಿತಾಯಕ್ಕೆ ಕಾರಣವಾಗುವ ನೀರಿನ ಫ್ಲೂರೈಡಿಕರಣವು ಕೆಲವೇ ಸಾರ್ವಜನಿಕ ಆರೋಗ್ಯ ಸೂತ್ರಗಳಲ್ಲಿ ಒಂದು ಎಂಬ ನಿರ್ಣಯಕ್ಕೆ ಬಂದಿದ್ದರೂ, ಖರ್ಚು-ಪರಿಣಾಮಕಾರಿತ್ವ ಸ್ವಲ್ಪ ಮೇಲ್‌ಸ್ಥರದ ಸಂಶೋಧನೆಗಳು ನಡೆದು ಈ ಬಗ್ಗೆ ದೃಢವಾದ ಮಾಹಿತಿಗಳು ದುರ್ಲಭವಾಯಿತು.[೨][೩೫] ಮಕ್ಕಳಲ್ಲಿ ಅಪಾಯದ ಸ್ಥಿತಿಯಲ್ಲಿರುವ ಹಲ್ಲಿಗೆ ಅಳವಡಿಸಿದರೆ ಮಾತ್ರ ಹಲ್ಲಿನ ಸೀಲೆಂಟ್‌ಗಳು ಲಾಭದಾಯಕವಾಗಿವೆ.[೩೦] ೨೦೦೨ರ ಯುಎಸ್‌ನಲ್ಲಿ ನಡೆದ ಮರುಪರಿಶೀಲನೆಯು ವರ್ಷವೊಂದಕ್ಕೆ ಪ್ರತಿ ವ್ಯಕ್ತಿಗೆ ೦.೪೭ಮೇಲ್ಮೈಗಳಿಗಿಂತಲೂ ವೇಗವಾಗಿ ಮೇಲ್ಮೈ ಕ್ಷಯಿಸುವ ವೇಗವನ್ನು ಹೊಂದಿದ ಸಂದರ್ಭದಲ್ಲಿ ಮೊದಲ ಶಾಶ್ವತ ದವಡೆಹಲ್ಲನ್ನು ಸೀಲ್ ಮಾಡುವುದು ಅಧಿಕ ವೆಚ್ಚದಿಂದ ರಕ್ಷಿಸಿದರೆ, ಒಟ್ಟು ದಂತಕ್ಷಯವು ವರ್ಷವೊಂದಕ್ಕೆ ಪ್ರತಿ ವ್ಯಕ್ತಿಗೆ ೦.೦೬ ಮೇಲ್ಮೈಗಳಿಗಿಂತ ಹೆಚ್ಚಿದ್ದಾಗ ನೀರಿನ ಫ್ಲೂರೈಡೀಕರಣವು ಖರ್ಚನ್ನು ಕಡಿಮೆಗೊಳಿಸುತ್ತದೆ.[೫೩] ಯುಎಸ್‌ನಲ್ಲಿ ಮಕ್ಕಳ ದಂತಕ್ಷಯವನ್ನು ತಗ್ಗಿಸುವಲ್ಲಿ ನೀರಿನ ಫ್ಲೂರೈಡೀಕರಣವು ಅತ್ಯಂತ ಲಾಭದಾಯಕ ವಿಧಾನವಾಗಿದೆ ಮತ್ತು ಎಲ್ಲಾ ದೇಶಗಳಲ್ಲಿ, ವಿಶೇಷವಾಗಿ ಸಾಮಾಜಿಕವಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಗುಂಪುಗಳಲ್ಲಿ ಹಲ್ಲುಕುಳಿಗಳ ವಿರುದ್ಧ ಹೋರಾಡಲು ನೀರಿನ ಫ್ಲೂರೈಡೀಕರಣವು ಅತ್ಯುತ್ತಮ ಸಾಧನವಾಗಿದೆ ಎಂದು ೨೦೦೮ರ ಮರುಪರಿಶೀಲನೆಯು ನಿರ್ಧರಿಸಿದೆ.[೫೫]

೧೯೭೪ - ೧೯೯೨ರ ನಡುವೆ ಯುಎಸ್‌ನಲ್ಲಿ ಲಭ್ಯವಾದ ದತ್ತಾಂಶಗಳು ಒಂದು ಸಮುದಾಯವನ್ನು ನೀರಿನ ಫ್ಲೂರೈಡೀಕರಣಕ್ಕೆ ಒಳಪಡಿಸಿದಾಗ ದಂತ ವೈದ್ಯಕೀಯ ತಂಡದಲ್ಲಿನ ಉದ್ಯೋಗಿಗಳ ಸಂಖ್ಯೆಯಲ್ಲಿ ಮತ್ತು ಒಟ್ಟು ಇರುವ ದಂತ ವೈದ್ಯಕೀಯ ತಂಡಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯು ಕಂಡುಬಂದಿದೆ ಎಂದು ತೋರಿಸಿದುವು. ಕೆಲವು ದಂತವೈದ್ಯರು ತೆರಳಿ ಅಲ್ಲಿ ತಜ್ಞವೈದ್ಯರಾಗಿ ಉಳಿಯುವ ಮೂಲಕ ಬೇಡಿಕೆಯ ತೀವ್ರತೆಗೆ ಸ್ಪಂದಿಸುತ್ತಾರೆ ಎಂದು ಈ ದತ್ತಾಂಶಗಳು ಸೂಚಿಸಿದೆ.[೭೨] ಫ್ಲೂರೈಡೀಕರಣಗೊಳ್ಳದ ಪ್ರದೇಶಗಳ ಮಕ್ಕಳಿಗಿಂತ ಫ್ಲೂರೈಡೀಕರಣಗೊಂಡ ಪ್ರದೇಶಗಳಲ್ಲಿ ಬೆಳೆಯುವ ೧೯೫೭-೧೯೬೪ ರ ನಡುವೆ ಜನಿಸಿದ ಯುಎಸ್‌ನ ಮಕ್ಕಳು ಪ್ರೌಢರಿಗೆ ಸಮನಾಗಿ ದಂತಕ್ಷಯಕ್ಕೆ ತುತ್ತಾಗಿದ್ದು, ಈ ಪರಿಣಾಮವು ಬಡಕುಟುಂಬದ ಹೆಣ್ಣುಮಕ್ಕಳಲ್ಲೇ ಹೆಚ್ಚು ಪ್ರಭಲವಾಗಿದೆ, ದೈಹಿಕವಾಗಿ ಹೆಚ್ಚು ಆಕರ್ಷಕ ಹಲ್ಲುಗಳನ್ನು ಹೊಂದಿರುವ ಸ್ತ್ರೀಯರ ಪರವಾದ ಉದ್ಯೋಗಿ ಮತ್ತು ಬಳಕೆದಾರರ ನಡುವಿನ ಬೇಧವೇ ಈ ಪರಿಣಾಮಕ್ಕೆ ಕಾರಣ ಎಂಬ ಊಹಾಪೋಹವನ್ನು ಪುಷ್ಟೀಕರಿಸಿತು.[೭೩]

ನೈತಿಕತೆ ಮತ್ತು ರಾಜಕೀಯತೆ ಬದಲಾಯಿಸಿ

ಚುಚ್ಚುಮದ್ದು ಹಾಕುವುದು ಮತ್ತು ಆಹಾರ ಸಾರವರ್ಧನೆಗಳಂತೆಯೇ, ಫ್ಲೂರೈಡೀಕರಣ ಕೂಡಾ ಸಾಮಾನ್ಯ ಜನರ ಹಿತ ಮತ್ತು ವೈಯಕ್ತಿಕ ಹಕ್ಕುಗಳನ್ನು ಉಲ್ಲಂಘಿಸುವುದರ ಮೂಲಕ ಸಂಘರ್ಷಣೆಯನ್ನುಂಟುಮಾಡಿದೆ.[೧೮] ವೈದ್ಯಕೀಯ ಮೇಲ್ವಿಚಾರಣೆ ಮತ್ತು ವೈದ್ಯಕೀಯ ಸಮ್ಮತಿ/ಅನುಮೋದನೆಯಿಲ್ಲದೇ ವೈದ್ಯಕೀಯ ಚಿಕಿತ್ಸೆ ನಡೆಯುವುದನ್ನು ತಡೆಯುವ ಮತ್ತು ಆ ಮೂಲಕ ಪರವಾನಿಗಿಯಿಲ್ಲದ ವೈದ್ಯಕೀಯ ಪದಾರ್ಥಗಳ ಬಳಕೆಯನ್ನು ತಡೆಯುವಂತಹ ನೈತಿಕ ಹಾಗೂ ಸರಕಾರೀ ಕಾನೂನುಗಳನ್ನು ಮುರಿಯುವ ವಿಧಾನವೆಂಬ ದೃಷ್ಟಿಯಿಂದ ಈ ಫ್ಲೂರೈಡೀಕರಣವನ್ನು ನೋಡಲಾಗುತ್ತಿದೆ.[೪] ಸ್ವಯಂರಕ್ಷಣೆ ಮಾಡಿಕೊಳ್ಳಲು ಅಸಮರ್ಥರಾದ ಜನತೆಗೆ ಹೆಚ್ಚಿನ ಪ್ರಯೋಜನ ನೀಡಬಲ್ಲ, ಹಲ್ಲು ನೋವು ಮತ್ತು ದಂತವೈದ್ಯ ಕಾರ್ಯಗಳಿಂದ ಜನರನ್ನು ಮುಕ್ತರನ್ನಾಗಿಸುವ, ನೈಸರ್ಗಿಕ ಫ್ಲೂರೈಡೀಕರಿಸಿದ ನೀರಿನ ಪ್ರಯೋಜನವನ್ನು ದ್ವಿಗುಣಗೊಳಿಸುವಲ್ಲಿ ನಡೆಸುವ ಸಾರ್ವಜನಿಕರ ಹಸ್ಥಕ್ಷೇಪವಿದು ಎಂಬ ದೃಷ್ಟಿಕೋನದಿಂದ ಕೂಡಾ ಫ್ಲೂರಿಡೀಕರಣವನ್ನು ನೋಡಲಾಗುತ್ತಿದೆ, ಮತ್ತು ಆ ಪ್ರದೇಶಗಳಲ್ಲಿ ಇಂತಹ ಚಿಕಿತ್ಸೆಗಳನ್ನು ತಡೆಯುವುದು ಅನೈತಿಕ ಎಂದು ಪರಿಗಣಿಸಲಾಗಿದೆ.[೭೪]

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಆರೋಗ್ಯ ಇಲಾಖೆಗಳು ಮತ್ತು ಪ್ರಪಂಚದಾದ್ಯಂತ ಇರುವ ದಂತವೈದ್ಯಕೀಯ ಒಕ್ಕೂಟಗಳೂ ಕೂಡಾ ನೀರಿನ ಫ್ಲೂರೈಡೀಕರಣದ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ದೃಢಪಡಿಸಿವೆ.[೪][೭೫] ಚುಚ್ಚುಮದ್ದು ಹಾಕಿಸುವುದು, ಕುಟುಂಬ ಯೋಜನೆ, ಧೂಮಪಾನದಿಂದುಂಟಾಗುವ ಅಪಾಯಗಳ ಗುರುತಿಸುವಿಕೆ ಇನ್ನಿತರ ಸಾಧನೆಗಳ ಜೊತೆಗೆ, ನೀರಿನ ಫ್ಲೂರೈಡೀಕರಣವು ೨೦ನೇ ಶತಮಾನದ [೭೬] ಸಾರ್ವಜನಿಕ ಆರೋಗ್ಯದ ಮಹತ್ತರ ಹತ್ತು ಸಾಧನೆಗಳಲ್ಲಿ ಒಂದು ಎಂದು ಆರೋಗ್ಯ ತಡೆ ಮತ್ತು ನಿಯಂತ್ರಣ ಕೇಂದ್ರಗಳು ಪಟ್ಟಿಮಾಡಿವೆ.[೧೫] ನೀರಿನ ಫ್ಲೂರೈಡೀಕರಣವನ್ನು ದೃಢಪಡಿದ ಇತರ ಸಂಸ್ಥೆಗಳು: ವಿಶ್ವ ಆರೋಗ್ಯ ಸಂಸ್ಥೆ (ವರ್ಲ್ಡ್ ಹೆಲ್ತ್ ಆರ್ಗನೈಸೇಶನ್)[೯][೨೮]. ಯುಎಸ್‌ನ ಸರ್ಜನ್ ಜನರಲ್,[೭೭] ಅಮೇರಿಕಾದ ಸಾರ್ವಜನಿಕ ಆರೋಗ್ಯ ಒಕ್ಕೂಟ (ಅಮೇರಿಕನ್ ಪಬ್ಲಿಕ್ ಹೆಲ್ತ್ ಅಸೋಸಿಯೇಶನ್),[೭೮] ಯುರೋಪಿನ ಮಕ್ಕಳ ದಂತವೈದ್ಯಕೀಯ ವಿಭಾಗ (ಯುರೋಪಿಯನ್ ಅಕಾಡಮಿ ಆಫ್ ಪೀಡಿಯಾಟ್ರಿಕ್ ಡೆಂಟಿಸ್ಟ್ರಿ),[೭೯] ಮತ್ತು ಆಸ್ಟ್ರೇಲಿಯಾ,[೮೦] ಕೆನಡಾ,[೮೧] ಮತ್ತು ಯುಎಸ್‌ನ ರಾಷ್ಟ್ರೀಯ ದಂತವೈದ್ಯಕೀಯ ಒಕ್ಕೂಟ (ನಾಷನಲ್ ಡೆಂಟಲ್ ಅಸೋಸಿಯೇಶನ್ ಆಫ್ ಆಸ್ಟ್ರೇಲಿಯ, ಕೆನಡ, ಯುಎಸ್‌).[೮೨]

ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಪ್ರಾಧಿಕಾರಗಳ ಬೆಂಬಲವಿದ್ದಾಗ್ಯೂ, ನೀರಿನ ಫ್ಲೂರೈಡೀಕರಣವನ್ನು ಬೆಳಕಿಗೆ ತರುವ ಪ್ರಯತ್ನಗಳು ಗಮನಾರ್ಹ ವಿರೋಧಕ್ಕೊಳಪಟ್ಟಿದೆ, ಈ ವಿರೋಧವು "ಹಲವು ಸಂದರ್ಭಗಳಲ್ಲಿ ಅಂತರ್ಜಾಲ ಮೂಲಗಳಿಂದ ಅಥವಾ ನೀರಿನ ಫ್ಲೂರೈಡೀಕರಣದ ಬಗ್ಗೆ ತಪ್ಪುದಾರಿಗೆಳೆಯುವಂತಹ ವಿಚಾರಗಳನ್ನೊಳಗೊಂಡು ಪ್ರಕಟಗೊಂಡ ಪುಸ್ತಕಗಳನ್ನು ಆಧರಿಸಲ್ಪಟ್ಟಿದೆ".[೨೦] ಫ್ಲೂರೈಡೀಕರಣದ ಪ್ರಾರಂಭವಾದ ಕ್ಷಣದಿಂದ ಪ್ರತಿಪಾದಕರು ವೈಜ್ಞಾನಿಕ ಆಶಾವಾದಕ್ಕಾಗಿ ಮತ್ತು ಪರಿಣಿತರ ಮೇಲಿನ ವಿಶ್ವಾಸಕ್ಕಾಗಿ ವಾದ ಮಾಡಿದರೆ, ವಿರೋಧಗಳು ಔಷಧ ಮತ್ತು ವಿಜ್ಞಾನಗಳ ಪರಿಣತಿ ಮತ್ತು ಕಷ್ಟದ ಬಗ್ಗೆ ಅವಿಶ್ವಾಸವನ್ನು ಮೂಡಿಸಿವೆ.[೮೩] ಈ ವಾಗ್ವಾದಗಳು ಫ್ಲೂರೈಡೀಕರಣದ ಪ್ರಯೋಜನಗಳು ಮತ್ತು ಈ ಪ್ರಯೋಜನಗಳಿಗೆ ಕಾರಣವಾದ ಸಾಕ್ಷ್ಯ, ಪುರಾವೆಗಳ ಬಲ, ಅಪಾಯಗಳನ್ನು ಗುರುತಿಸಲು ಉಂಟಾಗುವ ಕಷ್ಟ, ನೀರಿನ ಫ್ಲೂರೈಡೀಕರಣವು ಒಂದು ಔಷಧಿಯೇ ಎಂಬ ಬಗ್ಗೆ, ಮತ್ತು ಈ ಬಗ್ಗೆ ಸಾಮೂಹಿಕ ಹಸ್ಥಕ್ಷೇಪದಲ್ಲಿನ ನೈತಿಕರೆ ಇವೇ ಮೊದಲಾದ ವಿದ್ಯುಕ್ತ ವಿಚಾರಗಳನ್ನೊಳಗೊಂಡಿವೆ.[೧೯] ಯುಎಸ್‌ನ ಫ್ಲೂರೈಡೀಕರಣದ ವಿರೋಧಿಗಳು ೨೦೦೬ರ ರಾಷ್ಟ್ರೀಯ ಸಂಶೋಧನಾ ಮಂಡಳಿಯು (ನಾಷನಲ್ ರಿಸರ್ಚ್ ಕೌನ್ಸಿಲ್) ನೀರು ನೈಸರ್ಗಿಕವಾಗಿ ಗರಿಷ್ಟ ಮಟ್ಟದಲ್ಲಿ [೮೪] ಫ್ಲೂರೈಡೀಕರಣಗೊಳ್ಳುವುದರಲ್ಲಿ ಉಂಟಾಗುವ ಅಪಾಯಗಳ ಬಗ್ಗೆ ನೀಡಿದ ವರದಿ ಮತ್ತು ಈ ವರದಿಯು ಯುಎಸ್‌ನಲ್ಲಿ ಕುಡಿಯುವ ನೀರಿನಲ್ಲಿ ಇರಬೇಕಾದ ಗರಿಷ್ಟ ಫ್ಲೂರೈಡ್ ಮಟ್ಟವು ಲೀಟರಿಗೆ ೪ ಮಿ.ಗ್ರಾಂ ಎಂದು ನೀಡಿದ ಶಿಫಾರಸ್ಸಿನಿಂದ ಉತ್ಸಾಹಭರಿತರಾದರು.[೮೫] ಪ್ರತಿಭಟನಾ ಚಟುವಟಿಕೆಗಳು ವಾರ್ತಾಪತ್ರಿಕೆಗಳ ಲೇಖನಗಳನ್ನು, ರೇಡಿಯೋ ಪ್ರಸಾರವನ್ನು, ಮತ್ತು ಸಾರ್ವಜನಿಕ ಚರ್ಚಾಸ್ಥಳಗಳನ್ನೊಳಗೊಂಡಿವೆ. ವೈಜ್ಞಾನಿಕ ವಿಚಾರಗಳ ಬಗ್ಗೆ ವಿವರಿಸಲು ಮಾಧ್ಯಮ ವರದಿಗಾರರಲ್ಲಿ ಸಾಕಷ್ಟು ಬುದ್ಧಿಕೌಶಲ್ಯಗಳಿಲ್ಲದೇ ಇದ್ದು ಅವರು ವೈಜ್ಞಾನಿಕ ಹಿರಿಮೆ, ಯೋಗ್ಯತೆಯ ಬದಲಿಗೆ ಚರ್ಚಾಸ್ಪದ ವರದಿಯನ್ನು ಪ್ರಕಟಿಸಲು ಪ್ರಚೋದಿಸಲ್ಪಡುತ್ತಾರೆ. ಆರೋಗ್ಯ ಮಾಹಿತಿಗಾಗಿ ಸಾರ್ವಜನಿಕರಿಂದ ಬಹುವಾಗಿ ಅಂತರ್ಜಾಲ ನಿವೇಶನಗಳನ್ನು(ಇಂಟರ್‌ನೆಟ್ ವೆಬ್‌ಸೈಟ್‌ಗಳು) ಬಳಸ್ಪಡುತ್ತಿದೆ, ಫ್ಲೂರೈಡೀಕರಣಕ್ಕೆ ಸಂಬಂಧಿಸಿದ ನೈಜ ಮಾಹಿತಿಯ ಜೊತೆಗೆ ಫ್ಲೂರೈಡೀಕರಣದ ತಪ್ಪು ಮಾಹಿತಿಗಳನ್ನು ಹೊಂದಿದ ವಿಸ್ತೃತವಾದ ವರದಿಯನ್ನೊಳಗೊಂಡಿದೆ, ಹೆಚ್ಚಿನವರು ಫ್ಲೂರೈಡೀಕರಣವನ್ನು ವಿರೋಧಿಸುತ್ತಾರೆ. ಫ್ಲೂರೈಡೀಕರಣ ವಿರೋಧೀ ಕೃತಿಗಳು, ಲೇಖನಗಳು ಫ್ಲೂರೈಡ್‌ಗೆ ಒಳಪಡಿಸುವಿಕೆಯನ್ನು ಏಡ್ಸ್, ಅಲರ್ಜಿ, ಆಲ್ಝಮೀರ್‌ನ ಆರ್ಥ್ರೈಟಿಸ್, ಕಾನ್ಸರ್ ಮತ್ತು ಬುದ್ಧಿಶಕ್ತಿ ಕಡಿಮೆಯಾಗುವುದು, ಜೊತೆಗೆ ಜೀರ್ಣಾಂಗನಾಳ, ಮೂತ್ರಪಿಂಡ, ಪಿನಿಯಲ್ ಗ್ರಂಥಿ ಮತ್ತು ಥೈರಾಯಿಡ್ ಗ್ರಂಥಿಗಳನ್ನು ಬಾಧಿಸುವ ರೋಗಗಳನ್ನೊಳಗೊಂಡ ವಿಭಿನ್ನ ಪರಿಣಾಮಗಳೊಡನೆ ದಂತಕತೆಯ ರೂಪದಲ್ಲಿ ಸಂಬಂಧ ಕಲ್ಪಿಸಿವೆ.[೨೦]

 
ಫ್ಲೂರೈಡೀಕರಣವು ಕಮ್ಯುನಿಸ್ಟರ ಪಿತೂರಿ ಎಂದು ಆಪಾದಿಸುವ ಕೀಪ್ ಅಮೇರಿಕಾ ಕಮಿಟಿಯ 1955ರ ಜಾಹಿರಾತು ವಿವರಣೆ.

ಫ್ಲೂರೈಡೀಕರಣವನ್ನೊಳಗೊಂಡ ಒಳಸಂಚಿನ ಗುಪ್ತ ತತ್ವಗಳು ಸಾಮಾನ್ಯವಾಗಿದ್ದು, ಇದು ಯುಎಸ್‌ನ ಅಣು ಬಾಂಬು ಕಾರ್ಯಚಟುವಟಿಕೆಯನ್ನು ಮೊಕದ್ದಮೆಯಿಂದ ರಕ್ಷಿಸಲು ಪ್ರೇರಣೆ ನೀಡಿದ್ದರ ಬಗ್ಗೆ ಸಮರ್ಥನೆಗಳನ್ನು, (ಡಾ| ಸ್ಟ್ರೇಂಜ್‌ಲವ್ ಚಿತ್ರದಲ್ಲಿನ ವಿಡಂಬನೆಯಂತೆ) ಇದೊಂದು ಕಮ್ಯುನಿಸ್ಟ್‌ನ ಅಥವಾ ಜಗತ್ತನ್ನೇ ಆಳಲು ಹೊಸ ಜಗತ್ತು ಆದೇಶಿಸಿದ ಒಂದು ಭಾಗವಾಗಿದೆ ಎಂದೂ, ಇದು ಅಧಿಕಾರ ಸ್ಥಾನದಲ್ಲಿರುವವರಿಗೆ ಜನರನ್ನು ಶರಣಾಗತರಾಗುವಂತೆ ಮಾಡಲು ಜರ್ಮನಿಯ ಕೆಮಿಕಲ್ ಕಂಪನಿಯಿಂದ ಮೊದಲು ಅನ್ವೇಷಿಸಲ್ಪಟ್ಟಿದೆ ಎಂದೂ, ತೆರೆಮರೆಯ ಹಿಂದೆ ಇದು ಸಕ್ಕರೆಯುಕ್ತ ಆಹಾರಗಳ ಅಥವಾ ಫಾಸ್ಫೇಟ್ ಗೊಬ್ಬರ ಅಥವಾ ಅಲ್ಯುಮಿನಿಯಂ ಕೈಗಾರಿಕೆಗಳ ಬೆಳವಣಿಗೆಗೆ ಕಾರಣವಾಗಿದೆಯೆಂದೂ, ಅಥವಾ, ಬಡಜನರಿಗೆ ಹಲ್ಲಿನ ಕಾಳಜಿಯನ್ನೊದಗಿಸಲು ಸಾಧ್ಯವಿಲ್ಲದೇ ಅನುಭವಿಸಿದ ಸೋಲನ್ನು ಮುಚ್ಚಲು ಹಾಕಿದ ಹೊಗೆಯ ತೆರೆಯೆಂದೂ ಇವು ಹೇಳಿವೆ.[೨೦] ಇಂತಹ ಒಂದು ತತ್ವವು ಫ್ಲೂರೈಡೀಕರಣವು ಸಾರ್ವಜನಿಕ ಸಂಬಂಧಗಳ ರೂಸ್ ಆಯೋಜಿಸಿದ ಫ್ಲೋರೈಡ್ ಮಲಿನಕಾರಿ ಸಂಸ್ಥೆಗಳಾದ ಅಲುಮಿನಿಯಂ ತಯಾರಕ ಅಲ್ಕೊಅ ಮತ್ತು ಮನ್ಹಟ್ಟನ್ ಪ್ರಾಜೆಕ್ಟ್, ಜೊತೆಗೆ, ಸಂಚುಗಾರ ಉದ್ಯಮಿಗಳಾದ ಆಂಡ್ರ್ಯೂ ಮೆಲ್ಲನ್ ಮತ್ತು ಮೆಲ್ಲನ್ ಶಿಕ್ಷಣಸಂಸ್ಥೆಯ ಸಂಶೋಧಕ ಗೆರಾಲ್ಡ್ ಜೆ. ಕಾಕ್ಸ್, ಸಿನ್ಸಿನ್ನಟಿ ವಿಶ್ವವಿದ್ಯಾನಿಲಯದ ಕೆಟ್ಟರಿಂಗ್ ಲ್ಯಾಬೋರೇಟರಿ, ಫೆಡರಲ್ ಸೆಕ್ಯುರಿಟಿ ಏಜೆನ್ಸಿಯ ಆಡಳಿತಗಾರ ಆಸ್ಕರ್ ಆರ್. ಇವಿಂಗ್ ಮತ್ತು ಸಾರ್ವಜನಿಕ ಸಂಪರ್ಕ ಚತುರ ಎಡ್ವರ್ಡ್ ಬರ್ನಾಯ್ಸ್ ಇವರ ಪ್ರಾಯೋಜಕತ್ವದಲ್ಲಿ ನಡೆದ ಸಾರ್ವಜನಿಕ ಸಂಪರ್ಕ/ಸಂಬಂಧಗಳನ್ನು ಮುರಿಯುವ ಷಡ್ಯಂತ್ರ ಎಂದು ಹೇಳಿದೆ.[೮೬] ನಿರ್ಧಿಷ್ಟ ಫ್ಲೂರೈಡೀಕರಣ ವಿರೋಧೀ ವಾದಸರಣಿಗಳು ಆಯಾ ಸಮಯದ ಸ್ವಭಾವಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ.[೮೭]

ಫ್ಲೂರೈಡೀಕರಣದ ವಿರೋದಿಗಳು ಕೆಲವು ಸಂಶೊಧಕರನ್ನು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ವೃತ್ತಿಪರರನ್ನು, ಪರ್ಯಾಯ ವೈದ್ಯವೃತ್ತಿಪರರಾದ ಬೆನ್ನೆಲುಬು ಚಿಕಿತ್ಸಕ, ಆರೋಗ್ಯಕರ ಆಹಾರ ತಯಾರಿಕೆಯಲ್ಲಿ ತೊಡಗಿಕೊಂಡಿರುವವರು, ಕೆಲವು ಧಾರ್ಮಿಕ ಪ್ರತಿಭಟನಕಾರರು, ಹೆಚ್ಚಾಗಿ ಯುಎಸ್‌ನಲ್ಲಿರುವ ಕ್ರೈಸ್ತ ವಿಜ್ಞಾನಿಗಳು ಮತ್ತು ಕೆಲವು ಸಂದರ್ಭದಲ್ಲಿ ಬಳಕೆದಾರರ ಗುಂಪು ಮತ್ತು ಪರಿಸರವಾದಿಗಳನ್ನೊಳಗೊಂಡಿರುತ್ತದೆ.[೮೮] ಸುಸಂಘಟಿತ ರಾಜಕೀಯ ಪ್ರತಿರೋಧವು ಬಲಪಂಥೀಯ ತಂಡಗಳಾದ ಜಾನ್ ಬರ್ಚ್ ಸೊಸೈಟಿ,[೮೯] ಸ್ವಾತಂತ್ರವಾದಿಗಳಿಂದ ಹಾಗೂ ಎಡಪಂಥೀಯ ಬಣಗಳಾದ ಯು.ಕೆ ಮತ್ತು ನ್ಯೂಜಿಲ್ಯಾಂಡ್‌ನ ಗ್ರೀನ್ ಪಕ್ಷಗಳಿಂದ ಬಂದಿವೆ.[೯೦][೯೧] ಹೆಚ್ಚಿನ ಜನರು ದಂತ ಕ್ಷಯವನ್ನು ತಡೆಯಲು ಫ್ಲೂರೈಡೀಕರಣವನ್ನು ಕೈಗೊಳ್ಳಲಾಗುತ್ತಿದೆ ಅಥವಾ ನೈಸರ್ಗಿಕ ಅಥವಾ ಬಾಟಲ್‌ಗಳಲ್ಲಿ ತುಂಬಿದ ನೀರು ಫ್ಲೂರೈಡ್‌ನ್ನು ಹೊಂದಿರುತ್ತವೆ ಎಂಬ ವಿಚಾರವನ್ನೇ ತಿಳಿದಿರುವುದಿಲ್ಲ. ಸಾಮಾನ್ಯ ಜನತೆ ಫ್ಲೂರೈಡೀಕರಣದ ಬಗ್ಗೆ ನಿರ್ಧಿಷ್ಟ ನಿಲುವನ್ನು ಹೊಂದಿಲ್ಲದೇ ಇರುವುದರಿಂದ ಇದರ ಬಗ್ಗೆ ಹೆಚ್ಚಿನ ಲಾಬಿ ಮಾಡಲಾಗದಿರುವುದನ್ನು ಕಾಣಬಹುದಾಗಿದೆ.[೯೨] ಫ್ಲೂರೈಡೀಕರಣ ಕುರಿತಾದ ಚರ್ಚೆಯು ಎರಡು ಚಿಕ್ಕ ವಿರೋಧೀ ಗುಂಪುಗಳ ನಡುವೆ ನಡೆವ ಫ್ಲೂರೈಡೀಕರಣದ ಪರ ಮತ್ತು ವಿರುದ್ದದ ಪರಸ್ಪರ ವಾದವನ್ನು ಪ್ರತಿಬಿಂಬಿಸಬಹುದು. ೨೦೦೯ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಸಮೀಕ್ಷೆಯ ಪ್ರಕಾರ, ಫ್ಲೂರೈಡೀಕರಣವನ್ನು ೭೦% ಜನತೆ ಬೆಂಬಲಿಸಿ ೧೫% ಜನತೆ ವಿರೋಧಿಸಿದರು, ವಿರೋಧಿಸಿದವರು "ಅಸ್ಪಷ್ಟ ಪ್ರಯೋಜನ"ಗಳ ಮೇಲೆ ತೀವ್ರ ಅಸಮಾಧಾನಕ್ಕೆ ಗುರಿಯಾದುದು ಕಂಡುಬಂದಿದೆ.[೯೩] ೨೦೦೩ರಲ್ಲಿ ಯುರೋಪಿನ ೧೬ ರಾಷ್ಟ್ರಗಳಲ್ಲಿನ ಕೇಂದ್ರೀಕೃತ ತಂಡಗಳ ಮೇಲೆ ನಡೆದ ಅಧ್ಯಯನವು ಫ್ರಾನ್ಸ್, ಜರ್ಮನಿ ಮತ್ತು ಯುಕೆಯನ್ನೊಳಗೊಂಡ ಬಹುತೇಕ ರಾಷ್ಟ್ರಗಳ ಕೇಂದ್ರೀಕೃತ ತಂಡಗಳ ಹೆಚ್ಚಿನ ಸದಸ್ಯರಿಂದ ಫ್ಲೂರೈಡೀಕರಣವು ವಿರೋಧಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ.[೯೨] ೧೯೯೯ರಲ್ಲಿ ಯುಕೆಯಲ್ಲಿನ ಶೆಫೀಲ್ಡ್‌ನಲ್ಲಿ ನಡೆದ ಸಮೀಕ್ಷೆಯ ಪ್ರಕಾರ, ನಗರಗಳಲ್ಲಿ ೬೨% ಜನತೆಯು ಫ್ಲೂರೈಡೀಕರಣದತ್ತ ಒಲವು ತೋರಿದರೆ, ವಿರೋಧಿಸಿದ ೩೧% ಜನರು ಬೆಂಬಲಿಸಿದ ಜನರಿಗಿಂತ ಹೆಚ್ಚಿನ ವೇಗದಲ್ಲಿ ತಮ್ಮ ಆಯ್ಕೆಯ ಪ್ರತಿಕ್ರಿಯೆಯನ್ನು ತೋರ್ಪಡಿಸಿದರು.[೯೪] ೨೦೦೭ರ ಸ್ಕಾಟಿಶ್ ಜೈವಿಕ ನೀತಿಶಾಸ್ತ್ರ ಪರಿಷತ್ತು ನೀಡಿದ ವರದಿಯು ನೀರಿನ ಫ್ಲೂರೈಡೀಕರಣದ ಪರವಾದ ಮತ್ತು ವಿರುದ್ದವಾದ ಉತ್ತಮ ಸಾಕ್ಷಿ ಪುರಾವೆಗಳ ಕೊರತೆಯಿರುವುದರಿಂದ ಸ್ಥಳೀಯ ಮತ್ತು ಪ್ರಾದೇಶಿಕ ಪ್ರಜಾಪ್ರಭುತ್ವದ ವಿಧಿವಿಧಾನಗಳು ಫ್ಲೂರೈಡೀಕರಣದ ಅಗತ್ಯವನ್ನು ನಿರ್ಧರಿಸಲು ಸಮರ್ಪಕ ಅಂಶಗಳಾಗಿವೆ.[೯೫] ಯುಎಸ್‌ನಲ್ಲಿ ಪ್ರತೀ ವರ್ಷ, ಫ್ಲೂರೈಡೀಕರಣಪರ ಮತ್ತು ವಿರೋಧಿಗಳು ಜನಮತಸಂಗ್ರಹ ಅಥವಾ ಇತರ ಸಾರ್ವಜನಿಕ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಹೆಚ್ಚಿನವುಗಳಲ್ಲಿ ಫ್ಲೂರೈಡೀಕರಣವು ತಿರಸ್ಕೃತಗೊಂಡಿವೆ.[೮೮] ಯುಎಸ್‌ನಲ್ಲಿ ಈ ತಿರಸ್ಕಾರವು ಜನಾಭಿಪ್ರಾಯಗಳಿಂದ ನಿರ್ಧಾರವನ್ನು ಕೈಗೊಂಡಾಗ ಉಂಟಾದರೆ, ಯುರೋಪಿನಲ್ಲಿ ಫ್ಲೂರೈಡೀಕರಣದ ವಿರುದ್ಧದ ನಿರ್ಧಾರವು ಆಡಳಿತಾತ್ಮಕವಾಗಿ ಕೈಗೊಳ್ಳಲ್ಪಡುತ್ತದೆ.[೯೬] ಖಂಡನೆಗಳು ಯಾವುದೇ ವಿಧದಲ್ಲಿ ಒಪ್ಪಿಕೊಳ್ಳುವಂತೆ ಮಾಡುವಷ್ಟು ದುರ್ಬಲವಾಗಿಲ್ಲ ಅಥವಾ ಆಶೆಯನ್ನು ಹೊಂದಿಲ್ಲ.[೮೮]

ವಿಶ್ವದಾದ್ಯಂತ ಬಳಕೆ ಬದಲಾಯಿಸಿ

 
ನೈಸರ್ಗಿಕ ಮತ್ತು ಕೃತಕ ಫೋರೈಡಯುಕ್ತ ನೀರನ್ನು ಬಳಸುವ ಶೇಕಡಾವಾರು ಜನಸಂಖ್ಯೆ .[೨೩][307][308][309][310][311][312][313]

ನೀರಿನ ಫ್ಲೂರೈಡೀಕರಣದ ವೈಜ್ಞಾನಿಕತೆ ಮತ್ತು ಅದರ ಅಭ್ಯಾಸವು ಪ್ರಧಾನವಾಗಿ ಅಮೇರಿಕಾದ ಸ್ವಾಯತ್ತತೆ ಹೊಂದಿರುವಂತಹುದು.[೯೭] ಹಲವು ದೇಶಗಳಲ್ಲಿ ಹಾಗೂ ಅರ್ಜೆಂಟೈನಾ, ಆಸ್ಟ್ರೇಲಿಯ, ಬ್ರಜಿಲ್, ಕೆನಡ, ಚಿಲಿ, ಕೊಲಂಬಿಯ, ಹಾಂಗ್ ಕಾಂಗ್, ಐರ್ಲ್ಯಾಂಡ್, ಇಸ್ರೇಲ್, ಕೊರಿಯ, ಮಲೇಶಿಯ, ನ್ಯೂಜಿಲ್ಯಾಂಡ್, ಪಿಲಿಪ್ಪೈನ್‌ಗಳು, ಸಿಂಗಾಪುರ, ಸ್ಪೈನ್, ಯು.ಕೆ ಮತ್ತು ವಿಯಟ್ನಾಂ‌ಗಳನ್ನೊಳಗೊಂಡ ಯುಎಸ್‌‍ನ ಹೊರಗಿನ ಭೂಪ್ರದೇಶಗಳಲ್ಲಿ ಇದನ್ನು ವಿಭಿನ್ನ ಕೋನಗಳಲ್ಲಿ ಬೆಳಕಿಗೆ ತರಲಾಗಿದೆ. ಕನಿಷ್ಟಪಕ್ಷ, ವಿಶ್ವದ ೫೦ ಮಿಲಿಯ ಜನರು ಶಿಫಾರಸ್ಸು ಪಡೆದ ಫ್ಲೂರೈಡ್ ಮಟ್ಟ ಹೊಂದಿದ ನೈಸರ್ಗಿಕವಾಗಿ ಫ್ಲೂರೈಡೀಕರಿಸಿದ ನೀರನ್ನು ಪಡೆಯುತ್ತಾರೆ. ಇದರ ಜೊತೆಗೆ, ಪಶ್ಚಿಮ ಯುರೋಪಿನಲ್ಲಿ ಅಂದಾಜು ಸುಮಾರು ೧೨ ಮಿಲಿಯ ಜನರು, ಯುಎಸ್‌‍ನಲ್ಲಿ ಸುಮಾರು ೧೭೧ ಮಿಲಿಯ ಜನರು (ಯುಎಸ್‌ಜನಸಂಖ್ಯೆಯ ೬೧.೫% ಭಾಗ [೯೮]) ಮತ್ತು ಪ್ರಪಂಚದಾದ್ಯಂತ ೩೫೫ ಮಿಲಿಯ ಜನರು ಕೃತಕವಾಗಿ ಪ್ಲೂರೈಡೀಕರಿಸಿದ ನೀರನ್ನು ಪಡೆಯುತ್ತಾರೆ.[೨೩]

ಇನ್ನೂ ಹೆಚ್ಚಾಗಿ, ಜಗತ್ತಿನಾದ್ಯಂತ ೫೦ ಮಿಲಿಯ ಜನರಾದರೂ ಅನುಕೂಲಕರ ಫ್ಲೂರೈಡ್ ಮಟ್ಟ ಹೊಂದಿದ ನೈಸರ್ಗಿಕವಾಗಿ ಫ್ಲೂರೈಡೀಕರಿಸಿದ ನೀರನ್ನು ಪಡೆಯುತ್ತಾರೆ, ನಿಜವಾದ ಸಂಖ್ಯೆಯು ತಿಳಿದುಬಂದಿಲ್ಲವಾದರೂ ಇದು ಈ ಸಂಖ್ಯೆಗಿಂತ ಹೆಚ್ಚಾಗಿರುವಂತೆ ತೋರುತ್ತದೆ. ಅರ್ಜೆಂಟೈನಾ, ಫ್ರಾನ್ಸ್, ಗೆಬಾನ್, ಲಿಬ್ಯಾ, ಮೆಕ್ಸಿಕೋ, ಸೆನೆಗಲ್, ಶ್ರೀಲಂಕಾ, ಟಂಜಾನಿಯ, ಯುಎಸ್, ಮತ್ತು ಜಿಂಬಾವ್ವೆಗಳನ್ನೊಳಗೊಂಡ ಹಲವು ದೇಶಗಳಲ್ಲಿ ನೈಸರ್ಗಿಕವಾಗಿ ಫ್ಲೂರೈಡೀಕರಿಸಿದ ನೀರನ್ನು ಉಪಯೋಗಿಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ, ಗಮನೀಯವಾಗಿ, ಆಫ್ರಿಕ, ಚೀನ ಮತ್ತು ಭಾರತದಲ್ಲಿ ನೈಸರ್ಗಿಕವಾಗಿ ಫ್ಲೂರೈಡೀಕರಿಸಿದ ನೀರಿನಲ್ಲಿನ ಪ್ಲೂರೈಡ್ ಪ್ರಮಾಣವು ಶಿಫಾರಸ್ಸು ಪಡೆದ ಪ್ರಮಾಣದ ಮಿತಿಯನ್ನು ದಾಟಿದ್ದು, ಚೀನಾದಲ್ಲಿ ಅಂದಾಜು ಸುಮಾರು ೨೦೦ ಮಿಲಿಯ ಜನರು ಶಿಫಾರಸ್ಸುಗೊಂಡ ಮಟ್ಟದಲ್ಲಿ ಅಧವಾ ಅದಕ್ಕಿಂತ ಮೇಲಿನ ಮಟ್ಟದಲ್ಲಿ ಫ್ಲೂರೈಡೀಕರಣಗೊಂಡ ನೀರನ್ನು ಬಳಸುತ್ತಾರೆ.[೨೩]

ಫಿನ್‌ಲ್ಯಾಂಡ್, ಜರ್ಮನಿ, ಜಪಾನ್, ನೆದರ್‌ಲ್ಯಾಂಡ್‌ಗಳು, ಸ್ವೀಡನ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ಗಳನ್ನೊಳಗೊಂಡ ಕೆಲವು ರಾಷ್ಟ್ರಗಳ ಜನಸಮುದಾಯಗಳು ನೀರಿನ ಫ್ಲೂರೈಡೀಕರಣವನ್ನು ನಿಲ್ಲಿಸಿದ್ದಾರೆ.[೧೯] ಈ ಬದಲಾವಣೆಯು ಪ್ರತೀಭಾರಿ ಕಾರಣ ನೀರಿನ ಫ್ಲೂರೈಡೀಕರಣದ ರಾಜಕೀಯ ವಿರೋಧತೆಯಿಂದ ಪ್ರೋತ್ಸಾಹಿಸಲ್ಪಟ್ಟಿದೆ. ಆದರೆ, ಕೆಲವೊಮ್ಮೆ, ನೀರಿನ ಫ್ಲೂರೈಡೀಕರಣದ ಅಗತ್ಯವು ಇತರ ಪರ್ಯಾಯ ಯೋಜನೆಗಳಿಂದಲೂ ನಿರ್ವಹಿಸಲ್ಪಡುತ್ತದೆ. ಫ್ಲೂರೈಡ್‌ಗಳನ್ನು ವಿಭಿನ್ನ ರೂಪಗಳಲ್ಲಿ ಬಳಸುವುದು ಯುರೋಪಿನೆಲ್ಲೆಡೆ ದಂತಕ್ಷಯದ ತಡೆಗಟ್ಟುವಿಕೆಗೆ ತಳಹದಿಯಾಗಿದೆ. ಉದಾಹರಣೆಗೆ, ಪ್ರಾನ್ಸ್, ಜರ್ಮನಿ ಮತ್ತು ಇತರ ಯುರೋಪ್ ರಾಷ್ಟ್ರಗಳು ಫ್ಲೂರೈಡೀಕರಿಸಿದ ಉಪ್ಪನ್ನು ಬಳಸುತ್ತವೆ.[೨೩]

ಇತಿಹಾಸ ಬದಲಾಯಿಸಿ

 
ಫ್ರೆಡ್ರಿಕ್ ಮ್ಯಾಕ್‌ಕೆಯ ಜಿ‍ವಿ ಬ್ಲಾಕ್(ಎಡಭಾಗ), ಐಸಾಕ್ ಬರ್ಟನ್ ಮತ್ತು ಎಫ್‍‌ವೈ ವಿಲ್ಸನ್‌ರ ಕೊಲರಾಡೊ ಬೂದುಬಣ್ಣವನ್ನು ಅಧ್ಯಯನ ಮಾಡುತ್ತಿರುವ 1909ರ ಛಾಯಾಚಿತ್ರ.[೯೯]

ಫ್ಲೂರೈಡ್ ಮತ್ತು ಹಲ್ಲಿನ ಸಂಬಂಧಗಳ ಅಧ್ಯಯನ ೧೯ನೇ ಶತಮಾನದಿಂದಲೇ ನಡೆದಿತ್ತು. ೧೮೫೦ರ ವೇಳೆಗೆ, ಪರೀಕ್ಷಕರು ಫ್ಲೂರೈಡ್ ಹಲ್ಲು, ಮೂಳೆ ಮತ್ತು ಕುಡಿಯುವ ನೀರಿನಲ್ಲಿ ವಿಭಿನ್ನ ಪ್ರಭಲತೆಗಳಲ್ಲಿ ಲಭ್ಯವಾಗುತ್ತವೆ ಎಂದು ಪ್ರಮಾಣೀಕರಿಸಿದ್ದಾರೆ. ೧೯೦೦ರ ವೇಳೆಗೆ ಅವರು ಫ್ಲೋರೈಡ್ ದಂತಕ್ಷಯದಿಂದ ರಕ್ಷಣೆಯನ್ನು ಒದಗಿಸುತ್ತದೆ ಎಂದು ಊಹಿಸಿದ್ದರು ಮತ್ತು ಅವರು ಫ್ಲೂರೈಡ್‌ನ್ನು ಅಹಾರ ಪದಾರ್ಥಗಳೊಂದಿಗೆ ಪೂರಕವಾಗಿ ಕೊಟ್ಟಾಗ ಕಾರಣ ತಿಳಿಯದ ಕಲೆಗಳುಳ್ಳ ಹಲ್ಲಿನ ಇನಾಮಲ್‌ನ್ನು (ಈಗ ಇದು ಹಲ್ಲಿನ ಫ್ಲೂರೋಸಿಸ್ ಎಂದು ಕರೆಯಲ್ಪಡುತ್ತದೆ) ಗಮನಿಸಿದರು.[೧೦೦]

ನೀರಿನ ಫ್ಲೂರೈಡೀಕರಣದ ಚರಿತ್ರೆಯನ್ನು ಮೂರು ಅವಧಿಗಳಾಗಿ ವಿಭಾಗಿಸಲಾಗಿದೆ. ಮೊದಲನೆಯದು c. 1901–1933 ಕೊಲೊರಾಡೋ ಬ್ರೌನ್ ಸ್ಟೈನ್ ಎಂದು ಕರೆಯಲ್ಪಡುವ ಹಲ್ಲಿನ ಇನಾಮಲ್‌ನಲ್ಲಿ ಚುಕ್ಕೆಯಂತಹ ಕಲೆಗಳುಂಟಾಗುವ ಸ್ಥಿತಿಗೆ ಕಾರಣವನ್ನು ಕಂಡುಹಿಡಿಯುವ ಸಂಶೋಧನೆ. ಎರಡನೆಯದು (c. ೧೯೩೩-೧೯೪೫) ಫ್ಲೋರೈಡ್ ಪ್ರಭಲತೆ, ಫ್ಲೂರೋಸಿಸ್ ಮತ್ತು ದಂತಕ್ಷಯಗಳ ನಡುವಣ ಸಂಬಂಧದ ಮೇಲೆ ಕೇಂದ್ರೀಕೃತಗೊಂಡು ಮಿತವಾದ ಫ್ಲೋರೈಡ್ ಮಟ್ಟವು ಹಲ್ಲುಕುಳಿಗಳನ್ನು ತಡೆಯುತ್ತವೆ ಎಂದು ದೃಢಪಡಿಸಿದೆ. ಮೂರನೆಯ ಅವಧಿಯು ೧೯೪೫ ರಿಂದ ಆರಂಭಗೊಂಡು ಸಾರ್ವಜನಿಕರಿಗೆ ಸರಬರಾಜು ಮಾಡುವ ನೀರಿನಲ್ಲಿ ಫ್ಲೂರೈಡ್‌ನ್ನು ಸೇರಿಸುವುದರ ಮೇಲೆ ಕೇಂದ್ರೀಕೃತಗೊಂಡಿತ್ತು.[೨೨]

ಯುಎಸ್‌ನಲ್ಲಿದ್ದ ನೀರಿನ ಫ್ಲೂರೈಡೀಕರಣದ ಪತಿಷ್ಟಾನವು ದಂತವೈದ್ಯ ಫ್ರೆಡ್ರಿಕ್ ಮೆಖ್ಖೆಯ ಸಂಶೋಧನೆಯಾಗಿದೆ. ಮೆಖ್ಖೆಯು ಕುಳಿರಹಿತ ಹಲ್ಲಿನ ಇನಾಮಲ್‌ನಲ್ಲಿ ಚುಕ್ಕೆಯಂತಹ ಕಲೆಗಳುಂಟುಮಾಡುವ ಕೊಲೊರಾಡೋ ಬ್ರೌನ್ ಸ್ಟೈನ್ ಎಂದು ನಂತರ ಕರೆಯಲ್ಪಟ್ಟ ರೋಗಸ್ಥಿತಿಗೆ ಕಾರಣವನ್ನು ಪರೀಕ್ಷಿಸುತ್ತ ಮೂವತ್ತು ವರ್ಷಗಳನ್ನು ಕಳೆದನು. ಜಿ.ವಿ ಬ್ಲಾಕ್ ಮತ್ತು ಇತರ ಸಂಶೋಧಕರೊಂದಿಗೆ ಅವನು ಇದಕ್ಕೆ ಕಾರಣ ಫ್ಲೂರೈಡ್ ಎಂದು ದೃಢಪಡಿಸಿದನು.[೧೦೧] ಕಲೆಗಳು ಮತ್ತು ದಂತಕ್ಷಯದ ಕೊರತೆ ಯ ನಡುವಣ ಅಂಕಿಅಂಶಗಳ ಸಂಯೋಜನೆಯ ಮೊದಲನೆಯ ವರದಿಯು ೧೯೨೫ ರಲ್ಲಿ ಯು.ಕೆಯ ವಿಜ್ಞಾನಿ ನೋರ್ಮನ್ ಐನ್ಸ್‌ವರ್ತ್‌ಯಿಂದ ತಯಾರಿಸಲ್ಪಟ್ಟಿತು. ೧೯೩೧ರಲ್ಲಿ ಅಲ್ಕೊಅದ ರಾಸಾಯನ ಶಾಸ್ತ್ರಜ್ಞ ಎಚ್.ವಿ.ಚರ್ಚಿಲ್ ಅಲ್ಲ್ಯುಮಿನಿಯಂ ಮತ್ತು ಕಲೆಗಳುಂಟಾಗುವಿಕೆಯ ನಡುವಿನ ಸಂಭಾವ್ಯ ಕೊಂಡಿಯ ಬಗ್ಗೆ ಪ್ರಯೋಗ ಕೈಗೊಂಡು, ಕಲೆಗಳನ್ನುಂಟುಮಾಡುವ ನೀರನ್ನು ಪರೀಕ್ಷಿಸಿ ಫ್ಲೂರೈಡ್ ಸಾಧಾರಣ ಅಂಶ ಎಂದು ಕಂಡುಕೊಂಡನು.[೧೦೨]

 
ಹೆಚ್. ಟೆಂಡ್ಲೆ ಡೀನ್ 1931ರಲ್ಲಿ ಫ್ಲೊರೈಡ್‌ನಿಂದಾಗುವ ಹಾನಿಯನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ್ದರು, ಆದರೆ 1950ರಲ್ಲಿ ಸಣ್ಣ ಪ್ರಮಾಣದ ಕುಳಿಯನ್ನು ತಡೆಯುವ ಪರಿಣಾಮವನ್ನು ಸಾಬೀತುಪಡಿಸಿದರು.[೭೬]

೧೯೩೦ ಮತ್ತು ೧೯೪೦ರ ಪೂರ್ವದಲ್ಲಿ ಯು.ಎಸ್. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಎಚ್. ಟ್ರೆಂಡ್ಲಿ ಡೀನ್ ಮತ್ತು ಆತನ ಸಹೋದ್ಯೋಗಿಗಳು ಸುಮಾರು ೧ಮಿ.ಗ್ರಾಂ/ಲೀ. ನಷ್ಟು ಫ್ಲೂರೈಡ್ ಪ್ರಭಲತೆಯಿಂದ ಉಷ್ಣವಾತಾವರಣದಲ್ಲಿ ಹಲ್ಲುಕುಳಿಗಳು ಗಣನೀಯಪ್ರಮಾಣದಲ್ಲಿ ಕಡಿಮೆಯಾಗಿ, ಇದು ವೈದ್ಯಕೀಯ ಮತ್ತು ಸೌಂದರ್ಯಕ್ಕೆ ಸಂಬಂಧಪಟ್ಟಂತೆ ಹೆಚ್ಚೇನೂ ಬಾಧಿಸಿದ ಫ್ಲೂರೋಸಿಸ್‌ನ್ನು ಕೂಡಾ ವೃದ್ಧಿಗೊಳಿಸಿದೆ ಎಂದು ದೃಢಪಡಿಸುವ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ಹಲವು ಅಧ್ಯಯನಗಳನ್ನು ಪ್ರಕಟಿಸಿದರು. ಇತರ ಅಧ್ಯಯನಗಳು ಸುಮಾರು ೮ ಮಿ.ಗ್ರಾಂ/ಲೀ ನಷ್ಟು ಗರಿಷ್ಟ ಪ್ರಮಾಣದಲ್ಲಿ ಬಳಸುವ ಪ್ರದೇಶಗಳಲ್ಲಿಯೂ ಸಹ ಫ್ಲೋರೈಡ್‌ ಗಣನೀಯ ಪ್ರಮಾಣದ ಯಾವುದೇ ದುಷ್ಪರಿಣಾಮಗಳನ್ನು ಬೀರುವುದಿಲ್ಲ ಎಂದು ತೋರಿಸಿವೆ.[೧೦೩] ಫ್ಲೋರೈಡ್‌‌ನ್ನು ಸೇರಿಸುವುದು ಹಲ್ಲುಕುಳಿಗಳನ್ನು ತಡೆಯುತ್ತವೆ ಎಂಬ ಊಹೆಯನ್ನು ಪರೀಕ್ಷಿಸಲು ಡೀನ್ ಮತ್ತು ಆತನ ಸಹೋದ್ಯೋಗಿಗಳು ೧೯೪೫ರ ಜನವರಿ ೨೫ರಂದು ಗ್ರಾಂಡ್ ರಾಪಿಡ್ಸ್, ಮಿಷಿಗನ್‌ಗಳಲ್ಲಿ ನೀರನ್ನು ಫ್ಲೂರೈಡೀಕರಿಸಿ ನಿಯಂತ್ರಣಕ್ಕೊಳಪಟ್ಟ ಪ್ರಯೋಗವನ್ನು ಆರಂಭಿಸಿದರು. ಇದರ ಫಲಿತಾಂಶವು ೧೯೫೦ ರಲ್ಲಿ ಪ್ರಕಟಗೊಂಡು ಹಲ್ಲುಕುಳಿಗಳಲ್ಲಿ ಪ್ರಯೋಜನಾತ್ಮಕ ಇಳಿಕೆಯನ್ನು ತೋರಿಸಿತು.[೨೧][೧೦೪] ದಂತ ಕ್ಷಯದಲ್ಲಿನ ಪ್ರಯೋಜನಾತ್ಮಕ ಇಳಿಕೆಯು ಕೆನಡದ ಬ್ರಾಂಟ್‌ಫೋರ್ಡ್ -ಸರ್ನಿಯ-ಸ್ಟ್ರಾಟ್‌ಫೋರ್ಡ್ ಅಧ್ಯಯನ(೧೯೪೫-೧೯೬೨), ನೆದರ್‌ಲ್ಯಾಂಡ್‌ಗಳ ಟೀಲ್-ಕ್ಯುಲೆಂಬೋರ್ಗ್ ಅಧ್ಯಯನ (೧೯೫೩-೧೯೬೯), ನ್ಯೂ ಜಿಲ್ಯಾಂಡ್‌ನ ಹೇಸ್ಟಿಂಗ್ಸ್ ಅಧ್ಯಯನ (೧೯೫೪-೧೯೭೦), ಮತ್ತು ಯು.ಕೆ. ಯ ಡಿಪಾರ್ಟ್‌ಮೆಂಟ್ ಆಫ್ ಹೆಲ್ತ್ ಅಧ್ಯಯನಗಳೇ (೧೯೫೫–೧೯೬೦).[೧೦೨] ಮೊದಲಾದ ಯುಎಸ್‌ನ ಹೊರಪ್ರದೇಶಗಳಲ್ಲಿ ನಡೆದ ಹಳೆಯ ಪ್ರಮುಖ ಅಧ್ಯಯನಗಳಲ್ಲಿ ವರದಿಯಾಗಿದೆ. ಇಂದಿನ ದಿನದ ಜೀವನಮಟ್ಟದಲ್ಲಿ, ಈ ಅಧ್ಯಯನಗಳ ಜೊತೆಗೆ ಇತರ ಪ್ರಾಮುಖ್ಯ ಅಧ್ಯಯನಗಳೂ ಸಹ ಪರಿಷ್ಕರಿಸದೇ ಉಳಿದಿದ್ದರೂ, ದೊಡ್ಡಪ್ರಮಾಣದ ಹಲ್ಲುಕುಳಿಗಳ ಇಳಿಕೆಯು ಫ್ಲೂರೈಡೀಕರಣದ ಪ್ರಯೋಜನಗಳನ್ನು ಸಾರ್ವಜನಿಕ ಆರೋಗ್ಯ ವೃತ್ತಿನಿರತರಿಗೆ ಮನಗಾಣಿಸಿವೆ.[೧೬]

೧೯೫೧ರ ವೇಳೆಗೆ ಫ್ಲೂರೈಡೀಕರಣವು ಯುಎಸ್ ಸಾರ್ವಜನಿಕ ಆರೋಗ್ಯ ಸೇವೆಗಳ ಅಧಿಕೃತ ಕಾರ್ಯನೀತಿಯಾಯಿತು ಅಲ್ಲದೆ ೧೯೬೦ರ ವೇಳೆಗೆ, ನೀರಿನ ಫ್ಲೂರೈಡೀಕರಣವು ಯುಎಸ್ ನಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟು ಇದು ಸುಮಾರು ೫೦ ಮಿಲಿಯ ಜನರನ್ನೂ ತಲುಪಿತು. ಇನ್ನೂ ಕೆಲವು ದೇಶಗಳಲ್ಲಿ, ವಿನ್ಯಾಸವು ಒಂದೇ ತೆರನಾಗಿದೆ.[೧೦೩] ೨೦೦೬ರ ವೇಳೆಗೆ, ೬೯.೨%ರಷ್ಟು ಯುಎಸ್‌ ಜನರು ಸಾರ್ವಜನಿಕ ನೀರಿನ ವ್ಯವಸ್ಥೆಯಿಂದ ಫ್ಲೋರಿಡ್‌ಯುಕ್ತ ನೀರನ್ನು ಬಳಸುತ್ತಾರೆ, ಒಟ್ಟು ೬೧.೫%ರಷ್ಟು ಯುಎಸ್ ಜನಸಂಖ್ಯೆಗೆ ಸಮನಾಗುತ್ತದೆ; ೩.೦%ರಷ್ಟು ನೈಸರ್ಗಿಕ ಫ್ಲೋರಡನ್ನು ಹೊಂದಿರುವ ನೀರನ್ನು ಪೂರೈಕೆ ಮಾಡುತ್ತಾರೆ.[೯೮] ಇತರೇ ದೇಶಗಳಲ್ಲೂ ಇದೇ ಮಾದರಿಯಲ್ಲಿದೆ. ಪ್ರಪಂಚದಲ್ಲೇ ಪ್ರತೀವ್ಯಕ್ತಿಯ ಸಕ್ಕರೆಯ ಬಳಕೆಯಿಂದ ಮುಂಚೂಣಿಯಲ್ಲಿರುವ ಮತ್ತು ವಿಶ್ವದಲ್ಲೇ ಅತ್ಯಂತ ಕೆಟ್ಟ ಹಲ್ಲುಗಳನ್ನು ಹೊಂದಿರುವ ನ್ಯೂಜಿಲ್ಯಾಂಡ್ ಕೂಡಾ ೧೯೫೩ ರಲ್ಲಿ ಫ್ಲೂರೈಡೀಕರಣವನ್ನು ಆರಂಭಿಸಿತು ಹಾಗೂ ವೇಗದ ನೀರಿನ ಸರಬರಾಜಿನಿಂದ ೧೯೬೮ರ ವೇಳೆಗೆ ಇದು ಅಲ್ಲಿನ ಜನಸಂಖ್ಯೆಯ ಸುಮಾರು ೬೫% ಜನರಿಂದ ಬಳಸಲ್ಪಟ್ಟಿತು.[೧೦೫] ೧೯೭೪ ರಲ್ಲಿ ಆರಂಭಗೊಂಡ ಸಂಯುಕ್ತಸಂಸ್ಥಾನಗಳ ಕಾನೂನುಗಳಿಂದ ನಿಯಂತ್ರಿಸಲ್ಪಟ್ಟ ಬ್ರಜಿಲ್‌ನಲ್ಲಿ೧೯೫೩ರಲ್ಲಿ ಫ್ಲೂರೈಡೀಕರಣವು ಪ್ರಾರಂಭವಾಯಿತು ಮತ್ತು ೨೦೦೪ರ ಸುಮಾರಿಗೆ ಇದು ಅಲ್ಲಿನ ಒಟ್ಟು ಜನಸಂಖ್ಯೆಯ ೭೧% ಜನರಿಂದ ಬಳಸಲ್ಪಟ್ಟಿತು.[೧೦೬] ಐರ್ಲ್ಯಾಂಡ್ ಗಣರಾಜ್ಯದಲ್ಲಿ ಫ್ಲೂರೈಡೀಕರಣವು ೧೯೬೦ರಲ್ಲಿ ಕಾನೂನಿನ ಚೌಕಟ್ಟಿಗೊಳಪಟ್ಟಿತು ಮತ್ತು ಸಂವಿಧಾನಾತ್ಮಕ ಸವಾಲಿನ ನಂತರ, ಡಬ್ಲಿನ್ ಮತ್ತು ಕೋರ್ಕ್ ಬೆಗನ್‌ನ ಎರಡು ಪ್ರಮುಖ ನಗರಗಳು ೧೯೬೪ರಲ್ಲಿ ಇದನ್ನು ಆರಂಭಿಸಿತು.[೧೦೨] ಹಾಗೂ, ಫ್ಲೂರೈಡೀಕರಣವು ಎಲ್ಲಾ ಗಾತ್ರದ ನೀರು ಸರಬರಾಜು ವ್ಯವಸ್ಥೆಗಳಿಗೆ ಅಗತ್ಯವಾಯಿತು. ೧೯೯೬ರ ವೇಳೆಗೆ ಇದು ಒಟ್ಟು ಜನಸಂಖ್ಯೆಯ ಸುಮಾರು ೬೬% ಜನರನ್ನು ತಲುಪಿತು.[೨೩] ಇತರ ಪ್ರದೇಶಗಳಲ್ಲಿ ಫ್ಲೂರೈಡೀಕರಣವು ಉಪಯೋಗಿಸಲ್ಪಟ್ಟರೂ ನಂತರದಲ್ಲಿ ಇದನ್ನು ಕೈಬಿಡಲಾಯಿತು. ಕ್ಯುಪಿಯೋ, ಫಿನ್‌ಲ್ಯಾಂಡ್‌ಗಳಲ್ಲಿ ಫ್ಲೂರೈಡೀಕರಣವು ಹಲವು ದಶಕಗಳಿಂದಲೂ ಉಪಯೋಗಿಸಲ್ಪಟ್ಟು ನಂತರದಲ್ಲಿ, ಶಾಲಾ ವೈದ್ಯಕೀಯ ಸೇವೆಗಳು ಅಗತ್ಯವಿರುವ ಫ್ಲೂರೈಡ್ ಪ್ರಮಾಣಗಳನ್ನು ಒದಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದುದರಿಂದ ಹಲ್ಲುಕುಳಿಗಳು ಕಡಿಮೆಯಾದುದರಿಂದ ಸ್ಥಗಿತಗೊಂಡಿತು. ಹಾಗೆಯೇ, ಬಸ್ಲೆ, ಸ್ವಿಟ್ಜರ್‌ಲ್ಯಾಂಡ್‌ಗಳಲ್ಲಿ ನೀರಿನ ಫ್ಲೂರೈಡೀಕರಣದ ಸ್ಥಾನವನ್ನು ಉಪ್ಪಿನ ಫ್ಲೂರೈಡೀಕರಣವು ಆಕ್ರಮಿಸಿಕೊಂಡಿತು.[೧೦೨]

ಮೆಖ್ಕೆಯ ಸಾಧನೆಗಳು ಹಲ್ಲು ಮೊಳೆಯುವ ಮುನ್ನವೇ ಫ್ಲೂರೋಸಿಸ್ ಉಂಟಾಗುತ್ತದೆ ಎಂದು ದೃಢಪಡಿಸಿವೆ. ಪ್ಲೂರೈಡ್‌ನಿಂದುಂಟಾಗುವ ನಹಲ್ಲುಕುಳಿಗಳ ರಕ್ಷಣೆಯೂ ಕೂಡಾ ಹಲ್ಲು ಬೆಳೆಯುವ ಪೂರ್ವದಲ್ಲೇ ನಡೆಯುತ್ತವೆ ಎಂದು ಡೀನ್ ಮತ್ತು ಅವನ ಸಹೋದ್ಯೋಗಿಗಳು ಊಹಿಸಿದ್ದರು. ಮತ್ತು, ಈ ತಪ್ಪು ಊಹೆಯು ಕೆಲವು ವರ್ಷಗಳವರೆಗೆ ಜನರಿಂದ ಅಂಗೀಕರಿಸಲ್ಪಟ್ಟಿತ್ತು. ೨೦೦೦ದ ವೇಳೆಗೆ, ದೇಹದ ನಿರ್ಧರಿತ ಒಂದು ಭಾಗಕ್ಕೆ ಮಾತ್ರ ಪರಿಣಾಮ ಬೀರಬಲ್ಲ ಫ್ಲೂರೈಡ್‌ಗಳ ಪ್ರಭಾವಗಳು (ನೀರು ಮತ್ತು ಟೂತ್‌ಪೇಸ್ಟ್‌ಗಳೆರಡರಲ್ಲೂ) ಸರಿಯಾಗಿ ಅರ್ಥೈಸಿಕೊಳ್ಳಲ್ಪಟ್ಟರೂ, ಬಾಯಿಯಲ್ಲಿನ ಸ್ಥಿರ ಹಾಗೂ ಕೆಳಮಟ್ಟದ ಫ್ಲೂರೈಡ್‌ ಅಂಶಗಳು ಹಲ್ಲುಕುಳಿಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಪ್ರಸಿದ್ಧವಾಯಿತು.[೧೬]

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ ೧.೨ Lamberg M, Hausen H, Vartiainen T. Symptoms experienced during periods of actual and supposed water fluoridation. Community Dent Oral Epidemiol. 1997;25(4):291–5. doi:10.1111/j.1600-0528.1997.tb00942.x. PMID 9332806.
  2. ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ ೨.೮ Centers for Disease Control and Prevention. Recommendations for using fluoride to prevent and control dental caries in the United States. MMWR Recomm Rep. 2001;50(RR-14):1–42. PMID 11521913. Lay summary: CDC, 2007-08-09.
  3. ಚೆಂಗ್ ಕೆಕೆ, ಚಾಲ್ಮರ್ಸ್ I, ಶೆಲ್ಡೊ, ಬ್ರಿಟೀಷ್ ಮೆಡಿಕಲ್ ಜರ್ನಲ್‌, ಆ‍ಯ್‌ಡಿಂಗ್ ಫೋರೈಡ್ ಟು ವಾಟರ್ ಸಪ್ಲೈಸ್, ೧೦-೬-'೦೭ http://www.bmj.com/cgi/content/extract[ಶಾಶ್ವತವಾಗಿ ಮಡಿದ ಕೊಂಡಿ]
  4. ೪.೦೦ ೪.೦೧ ೪.೦೨ ೪.೦೩ ೪.೦೪ ೪.೦೫ ೪.೦೬ ೪.೦೭ ೪.೦೮ ೪.೦೯ ೪.೧೦ Pizzo G, Piscopo MR, Pizzo I, Giuliana G. Community water fluoridation and caries prevention: a critical review. Clin Oral Investig. 2007;11(3):189–93. doi:10.1007/s00784-007-0111-6. PMID 17333303.
  5. ೫.೦ ೫.೧ Consumer Price Index (estimate) 1800–2014. Federal Reserve Bank of Minneapolis. Retrieved February 27, 2014.
  6. ೬.೦ ೬.೧ Taricska JR, Wang LK, Hung YT, Li KH. Fluoridation and defluoridation. In: Wang LK, Hung YT, Shammas NK, editors. Advanced Physicochemical Treatment Processes. Humana Press; 2006. (Handbook of Environmental Engineering 4). doi:10.1007/978-1-59745-029-4_9. ISBN 978-1-59745-029-4. p. 293–315.
  7. ೭.೦ ೭.೧ WHO Expert Committee on Oral Health Status and Fluoride Use. Fluorides and oral health [PDF]. 1994.
  8. ೮.೦ ೮.೧ ೮.೨ Hobson WL, Knochel ML, Byington CL, Young PC, Hoff CJ, Buchi KF. Bottled, filtered, and tap water use in Latino and non-Latino children. Arch Pediatr Adolesc Med. 2007;161(5):457–61. doi:10.1001/archpedi.161.5.457. PMID 17485621.
  9. ೯.೦ ೯.೧ ೯.೨ ೯.೩ ೯.೪ Petersen PE, Lennon MA. Effective use of fluorides for the prevention of dental caries in the 21st century: the WHO approach [PDF]. Community Dent Oral Epidemiol. 2004;32(5):319–21. doi:10.1111/j.1600-0528.2004.00175.x. PMID 15341615.
  10. ೧೦.೦ ೧೦.೧ Parnell C, Whelton H, O'Mullane D. Water fluoridation. Eur Arch Paediatr Dent. 2009;10(3):141–8. PMID 19772843.
  11. ೧೧.೦ ೧೧.೧ ೧೧.೨ ೧೧.೩ ೧೧.೪ ೧೧.೫ ೧೧.೬ ೧೧.೭ ೧೧.೮ National Health and Medical Research Council (Australia). A systematic review of the efficacy and safety of fluoridation [PDF]. 2007 [Retrieved 2009-10-13]. ISBN 1864964154. ಸಾರಾಂಶ: Yeung CA. A systematic review of the efficacy and safety of fluoridation. Evid Based Dent. 2008;9(2):39–43. doi:10.1038/sj.ebd.6400578. PMID 18584000. Lay summary: NHMRC, 2007.
  12. ೧೨.೦ ೧೨.೧ ೧೨.೨ ೧೨.೩ ೧೨.೪ ೧೨.೫ ೧೨.೬ McDonagh M, Whiting P, Bradley M et al. A systematic review of public water fluoridation [PDF]; 2000. ವರದಿ ಮಾಡಿದ ವೆಬ್‌ಸೈಟ್: NHS Centre for Reviews and Dissemination. Fluoridation of drinking water: a systematic review of its efficacy and safety; 2000 [Retrieved 2009-05-26]. ಲೇಖಕರ ಸಾರಾಂಶ: McDonagh MS, Whiting PF, Wilson PM et al.. Systematic review of water fluoridation [PDF]. BMJ. 2000;321(7265):855–9. doi:10.1136/bmj.321.7265.855. PMID 11021861. PMC 27492. ಲೇಖಕರ ವ್ಯಾಖ್ಯಾನ: Treasure ET, Chestnutt IG, Whiting P, McDonagh M, Wilson P, Kleijnen J. The York review—a systematic review of public water fluoridation: a commentary. Br Dent J. 2002;192(9):495–7. doi:10.1038/sj.bdj.4801410 (inactive 2010-09-13) . PMID 12047121.
  13. ೧೩.೦ ೧೩.೧ ೧೩.೨ ೧೩.೩ ೧೩.೪ Fawell J, Bailey K, Chilton J, Dahi E, Fewtrell L, Magara Y. Fluoride in Drinking-water [PDF]. World Health Organization; 2006. ISBN 92-4-156319-2. Environmental occurrence, geochemistry and exposure. p. 5–27.
  14. ೧೪.೦ ೧೪.೧ ೧೪.೨ ೧೪.೩ ೧೪.೪ ೧೪.೫ ೧೪.೬ Jones S, Burt BA, Petersen PE, Lennon MA. The effective use of fluorides in public health. Bull World Health Organ. 2005;83(9):670–6. doi:10.1590/S0042-96862005000900012 (inactive 2010-10-16) . PMID 16211158. PMC 2626340.
  15. ೧೫.೦ ೧೫.೧ CDC. Ten great public health achievements—United States, 1900–1999. MMWR Morb Mortal Wkly Rep. 1999;48(12):241–3. PMID 10220250. ಮರುಸಂಪಾದಿಸಲಾಗಿದೆ: JAMA. 1999;281(16):1481. doi:10.1001/jama.281.16.1481. PMID 10227303.
  16. ೧೬.೦ ೧೬.೧ ೧೬.೨ ೧೬.೩ Burt BA, Tomar SL. Changing the face of America: water fluoridation and oral health. In: Ward JW, Warren C. Silent Victories: The History and Practice of Public Health in Twentieth-century America. Oxford University Press; 2007. ISBN 0-19-515069-4. p. 307–22.
  17. ೧೭.೦ ೧೭.೧ ೧೭.೨ ೧೭.೩ ೧೭.೪ Selwitz RH, Ismail AI, Pitts NB. Dental caries. Lancet. 2007;369(9555):51–9. doi:10.1016/S0140-6736(07)60031-2. PMID 17208642.
  18. ೧೮.೦ ೧೮.೧ ನೈತಿಕತೆ
  19. ೧೯.೦ ೧೯.೧ ೧೯.೨ Cheng KK, Chalmers I, Sheldon TA. Adding fluoride to water supplies [PDF]. BMJ. 2007 [archived 2016-03-03; Retrieved 2010-11-24];335(7622):699–702. doi:10.1136/bmj.39318.562951.BE. PMID 17916854. PMC 2001050.
  20. ೨೦.೦ ೨೦.೧ ೨೦.೨ ೨೦.೩ Armfield JM. When public action undermines public health: a critical examination of antifluoridationist literature. Aust New Zealand Health Policy. 2007 [archived 2008-06-17; Retrieved 2010-11-24];4:25. doi:10.1186/1743-8462-4-25. PMID 18067684. PMC 2222595.
  21. ೨೧.೦ ೨೧.೧ National Institute of Dental and Craniofacial Research. The story of fluoridation; 2008-12-20 [Retrieved 2010-02-06].
  22. ೨೨.೦ ೨೨.೧ Ripa LW. A half-century of community water fluoridation in the United States: review and commentary [PDF]. J Public Health Dent. 1993 [archived 2013-01-17; Retrieved 2010-11-24];53(1):17–44. doi:10.1111/j.1752-7325.1993.tb02666.x. PMID 8474047.
  23. ೨೩.೦ ೨೩.೧ ೨೩.೨ ೨೩.೩ ೨೩.೪ ೨೩.೫ The British Fluoridation Society; The UK Public Health Association; The British Dental Association; The Faculty of Public Health. One in a Million: The facts about water fluoridation. 2nd ed. Manchester: British Fluoridation Society; 2004. ISBN 095476840X. The extent of water fluoridation [PDF]. p. 55–80. Archived 2008-11-22 ವೇಬ್ಯಾಕ್ ಮೆಷಿನ್ ನಲ್ಲಿ. "ಆರ್ಕೈವ್ ನಕಲು". Archived from the original on 2008-11-22. Retrieved 2021-08-10.
  24. Gibson-Moore H. Water fluoridation for some—should it be for all?. Nutr Bull. 2009;34(3):291–5. doi:10.1111/j.1467-3010.2009.01762.x.
  25. Hudson K, Stockard J, Ramberg Z. The impact of socioeconomic status and race-ethnicity on dental health. Sociol Perspect. 2007;50(1):7–25. doi:10.1525/sop.2007.50.1.7.
  26. Vargas CM, Ronzio CR. Disparities in early childhood caries. BMC Oral Health. 2006;6(Suppl 1):S3. doi:10.1186/1472-6831-6-S1-S3. PMID 16934120. PMC 2147596.
  27. ೨೭.೦ ೨೭.೧ Griffin SO, Jones K, Tomar SL. An economic evaluation of community water fluoridation [PDF]. J Public Health Dent. 2001;61(2):78–86. doi:10.1111/j.1752-7325.2001.tb03370.x. PMID 11474918.
  28. ೨೮.೦ ೨೮.೧ Petersen PE. World Health Organization global policy for improvement of oral health—World Health Assembly 2007 [PDF]. Int Dent J. 2008 [archived 2014-11-13; Retrieved 2010-11-24];58(3):115–21. doi:10.1922/IDJ_1930Petersen07 (inactive 2010-09-13) . PMID 18630105.
  29. Horowitz HS. Decision-making for national programs of community fluoride use. Community Dent Oral Epidemiol. 2000;28(5):321–9. doi:10.1034/j.1600-0528.2000.028005321.x. PMID 11014508.
  30. ೩೦.೦ ೩೦.೧ ೩೦.೨ ೩೦.೩ ೩೦.೪ Reeves TG. Centers for Disease Control. Water fluoridation: a manual for engineers and technicians [PDF]; 1986 [archived 2008-10-07; Retrieved 2008-12-10].
  31. ೩೧.೦ ೩೧.೧ ೩೧.೨ Lauer WC. Water Fluoridation Principles and Practices. 5th ed. Vol. M4. American Water Works Association; 2004. (Manual of Water Supply Practices). ISBN 1-58321-311-2. History, theory, and chemicals. p. 1–14.
  32. Nicholson JW, Czarnecka B. Fluoride in dentistry and dental restoratives. In: Tressaud A, Haufe G, editors. Fluorine and Health. Elsevier; 2008. ISBN 978-0-444-53086-8. p. 333–78.
  33. Division of Oral Health, National Center for Prevention Services, CDC. Fluoridation census 1992 [PDF]. 1993 [Retrieved 2008-12-29].
  34. Centers for Disease Control and Prevention. Engineering and administrative recommendations for water fluoridation, 1995. MMWR Recomm Rep. 1995;44(RR-13):1–40. PMID 7565542.
  35. ೩೫.೦ ೩೫.೧ Bailey W, Barker L, Duchon K, Maas W. Populations receiving optimally fluoridated public drinking water—United States, 1992–2006. MMWR Morb Mortal Wkly Rep. 2008;57(27):737–41. PMID 18614991.
  36. Ozsvath DL. Fluoride and environmental health: a review. Rev Environ Sci Biotechnol. 2009;8(1):59–79. doi:10.1007/s11157-008-9136-9.
  37. Lalumandier JA, Ayers LW. Fluoride and bacterial content of bottled water vs tap water. Arch Fam Med. 2000;9(3):246–50. doi:10.1001/archfami.9.3.246. PMID 10728111.
  38. Grec RHdC, de Moura PG, Pessan JP, Ramires I, Costa B, Buzalaf MAR. Fluoride concentration in bottled water on the market in the municipality of São Paulo. Rev Saúde Pública. 2008;42(1):154–7. doi:10.1590/S0034-89102008000100022. PMID 18200355.
  39. ೩೯.೦ ೩೯.೧ ೩೯.೨ ೩೯.೩ Featherstone JD. Dental caries: a dynamic disease process. Aust Dent J. 2008;53(3):286–91. doi:10.1111/j.1834-7819.2008.00064.x. PMID 18782377.
  40. ೪೦.೦ ೪೦.೧ Cury JA, Tenuta LM. How to maintain a cariostatic fluoride concentration in the oral environment. Adv Dent Res. 2008 [archived 2009-06-03; Retrieved 2010-11-24];20(1):13–6. doi:10.1177/154407370802000104. PMID 18694871.
  41. Aoba T, Fejerskov O. Dental fluorosis: chemistry and biology. Crit Rev Oral Biol Med. 2002;13(2):155–70. doi:10.1177/154411130201300206. PMID 12097358.
  42. Hellwig E, Lennon AM. Systemic versus topical fluoride [PDF]. Caries Res. 2004;38(3):258–62. doi:10.1159/000077764. PMID 15153698.
  43. Tinanoff N. Uses of fluoride. In: Berg JH, Slayton RL, editors. Early Childhood Oral Health. Wiley-Blackwell; 2009. ISBN 978-0-8138-2416-1. p. 92–109.
  44. Koo H. Strategies to enhance the biological effects of fluoride on dental biofilms. Adv Dent Res. 2008 [archived 2009-06-03; Retrieved 2010-11-24];20(1):17–21. doi:10.1177/154407370802000105. PMID 18694872.
  45. Marquis RE, Clock SA, Mota-Meira M. Fluoride and organic weak acids as modulators of microbial physiology. FEMS Microbiol Rev. 2003;26(5):493–510. doi:10.1016/S0168-6445(02)00143-2. PMID 12586392.
  46. ೪೬.೦ ೪೬.೧ Fawell J, Bailey K, Chilton J, Dahi E, Fewtrell L, Magara Y. Fluoride in Drinking-water [PDF]. World Health Organization; 2006. ISBN 92-4-156319-2. Human health effects. p. 29–36.
  47. ೪೭.೦ ೪೭.೧ ೪೭.೨ ೪೭.೩ Sheiham A. Dietary effects on dental diseases [PDF]. Public Health Nutr. 2001;4(2B):569–91. doi:10.1079/PHN2001142. PMID 11683551.
  48. Institute of Medicine. Dietary Reference Intakes for Calcium, Phosphorus, Magnesium, Vitamin D, and Fluoride. National Academy Press; 1997. ISBN 0-309-06350-7. Fluoride. p. 288–313.
  49. Olivares M, Uauy R. Nutrients in Drinking Water. World Health Organization; 2005. ISBN 92-4-159398-9. Essential nutrients in drinking water [PDF]. p. 41–60."ಆರ್ಕೈವ್ ನಕಲು" (PDF). Archived from the original (PDF) on 2009-10-18. Retrieved 2022-10-22."ಆರ್ಕೈವ್ ನಕಲು" (PDF). Archived from the original on 2009-10-18. Retrieved 2022-10-22.{{cite web}}: CS1 maint: bot: original URL status unknown (link)
  50. Jones PJ, Varady KA. Are functional foods redefining nutritional requirements? [PDF]. Appl Physiol Nutr Metab. 2008;33(1):118–23. doi:10.1139/H07-134. PMID 18347661.
  51. Worthington H, Clarkson J. The evidence base for topical fluorides. Community Dent Health. 2003;20(2):74–6. PMID 12914024.
  52. Griffin SO, Regnier E, Griffin PM, Huntley V. Effectiveness of fluoride in preventing caries in adults. J Dent Res. 2007 [archived 2010-04-19; Retrieved 2010-11-24];86(5):410–5. doi:10.1177/154405910708600504. PMID 17452559. ಸಾರಾಂಶ: Yeung CA. Fluoride prevents caries among adults of all ages. Evid Based Dent. 2007;8(3):72–3. doi:10.1038/sj.ebd.6400506. PMID 17891121.
  53. ೫೩.೦ ೫೩.೧ ೫೩.೨ Truman BI, Gooch BF, Sulemana I et al.. Reviews of evidence on interventions to prevent dental caries, oral and pharyngeal cancers, and sports-related craniofacial injuries [PDF]. Am J Prev Med. 2002 [archived 2016-04-18; Retrieved 2010-11-24];23(1 Suppl):21–54. doi:10.1016/S0749-3797(02)00449-X. PMID 12091093.
  54. Hausen HW. Fluoridation, fractures, and teeth. BMJ. 2000;321(7265):844–5. doi:10.1136/bmj.321.7265.844. PMID 11021844.
  55. ೫೫.೦ ೫೫.೧ ೫೫.೨ ೫೫.೩ Kumar JV. Is water fluoridation still necessary?. Adv Dent Res. 2008 [archived 2009-06-04; Retrieved 2010-11-24];20(1):8–12. doi:10.1177/154407370802000103. PMID 18694870.
  56. Alvarez JA, Rezende KMPC, Marocho SMS, Alves FBT, Celiberti P, Ciamponi AL. Dental fluorosis: exposure, prevention and management [PDF]. Med Oral Patol Oral Cir Bucal. 2009;14(2):E103–7. PMID 19179949.
  57. Hujoel PP, Zina LG, Moimaz SAS, Cunha-Cruz J. Infant formula and enamel fluorosis: a systematic review. J Am Dent Assoc. 2009;140(7):841–54. PMID 19571048.
  58. Fawell J, Bailey K, Chilton J, Dahi E, Fewtrell L, Magara Y. Fluoride in Drinking-water [PDF]. World Health Organization; 2006. ISBN 92-4-156319-2. Guidelines and standards. p. 37–9.
  59. Balbus JM, Lang ME. Is the water safe for my baby?. Pediatr Clin North Am. 2001;48(5):1129–52, viii. doi:10.1016/S0031-3955(05)70365-5. PMID 11579665.
  60. Asheboro notifies residents of over-fluoridation of water. 2010-06-29 [archived 2010-07-04; Retrieved 2010-11-24]. Fox 8.
  61. ೬೧.೦ ೬೧.೧ ೬೧.೨ Pollick HF. Water fluoridation and the environment: current perspective in the United States [PDF]. Int J Occup Environ Health. 2004;10(3):343–50. PMID 15473093.
  62. Macek MD, Matte TD, Sinks T, Malvitz DM. Blood lead concentrations in children and method of water fluoridation in the United States, 1988–1994. Environ Health Perspect. 2006;114(1):130–4. doi:10.1289/ehp.8319. PMID 16393670. PMC 1332668.[ಶಾಶ್ವತವಾಗಿ ಮಡಿದ ಕೊಂಡಿ]
  63. ೬೩.೦ ೬೩.೧ ೬೩.೨ ೬೩.೩ ೬೩.೪ Anusavice KJ. Present and future approaches for the control of caries. J Dent Educ. 2005;69(5):538–54. PMID 15897335.[ಶಾಶ್ವತವಾಗಿ ಮಡಿದ ಕೊಂಡಿ]
  64. Milgrom P, Reisine S. Oral health in the United States: the post-fluoride generation. Annu Rev Public Health. 2000;21:403–36. doi:10.1146/annurev.publhealth.21.1.403. PMID 10884959.
  65. ೬೫.೦ ೬೫.೧ Goldman AS, Yee R, Holmgren CJ, Benzian H. Global affordability of fluoride toothpaste. Global Health. 2008;4:7. doi:10.1186/1744-8603-4-7. PMID 18554382. PMC 2443131.
  66. Bánóczy J, Rugg-Gunn AJ. Milk—a vehicle for fluorides: a review [PDF]. Rev Clin Pesq Odontol. 2006 [archived 2009-02-13; Retrieved 2009-01-03];2(5–6):415–26.
  67. Yeung CA, Hitchings JL, Macfarlane TV, Threlfall AG, Tickle M, Glenny AM. Fluoridated milk for preventing dental caries. Cochrane Database Syst Rev. 2005;(3):CD003876. doi:10.1002/14651858.CD003876.pub2. PMID 16034911.
  68. Bruvo M, Ekstrand K, Arvin E et al.. Optimal drinking water composition for caries control in populations. J Dent Res. 2008;87(4):340–3. doi:10.1177/154405910808700407. PMID 18362315.
  69. Zero DT. Are sugar substitutes also anticariogenic?. J Am Dent Assoc. 2008 [archived 2012-07-10; Retrieved 2010-11-24];139(Suppl 2):9S–10S. PMID 18460675.
  70. Whelton H. Beyond water fluoridation; the emergence of functional foods for oral health. Community Dent Health. 2009;26(4):194–5. doi:10.1922/CDH_2611Whelton02. PMID 20088215.
  71. Marthaler TM, Petersen PE. Salt fluoridation—an alternative in automatic prevention of dental caries [PDF]. Int Dent J. 2005;55(6):351–8. PMID 16379137.
  72. Ho K, Neidell M. Equilibrium effects of public goods: the impact of community water fluoridation on dentists [PDF]. 2009 [archived 2012-10-23; Retrieved 2009-10-13].
  73. Glied S, Neidell M. The economic value of teeth [PDF]. 2008 [archived 2010-06-25; Retrieved 2009-10-13].
  74. The British Fluoridation Society; The UK Public Health Association; The British Dental Association; The Faculty of Public Health. One in a Million: The facts about water fluoridation. 2nd ed. Manchester: British Fluoridation Society; 2004. ISBN 095476840X. The ethics of water fluoridation [PDF]. p. 88–92. Archived 2008-11-22 ವೇಬ್ಯಾಕ್ ಮೆಷಿನ್ ನಲ್ಲಿ. "ಆರ್ಕೈವ್ ನಕಲು". Archived from the original on 2008-11-22. Retrieved 2021-08-10.
  75. ADA Council on Access, Prevention and Interprofessional Relations. American Dental Association. National and international organizations that recognize the public health benefits of community water fluoridation for preventing dental decay; 2005 [archived 2008-06-07; Retrieved 2008-12-22].
  76. ೭೬.೦ ೭೬.೧ Division of Oral Health, National Center for Chronic Disease Prevention and Health Promotion, CDC. Achievements in public health, 1900–1999: Fluoridation of drinking water to prevent dental caries. MMWR Morb Mortal Wkly Rep. 1999;48(41):933–40. ಹೆಚ್. ಟ್ರೆಂಡ್ಲೆ ಡೀನ್, ಡಿಡಿಎಸ್‌. ನ್ನು ಹೊಂದಿದೆ ಮರುಸಂಪಾದಿಸಲಾಗಿದೆ: JAMA. 2000;283(10):1283–6. doi:10.1001/jama.283.10.1283. PMID 10714718.
  77. Carmona RH. U.S. Public Health Service. Surgeon General's statement on community water fluoridation [PDF]; 2004-07-28 [Retrieved 2008-12-22].
  78. American Public Health Association. Community water fluoridation in the United States; 2008 [archived 2011-03-12; Retrieved 2009-03-09].
  79. European Academy Of Paediatric Dentistry. Guidelines on the use of fluoride in children: an EAPD policy document [PDF]. Eur Arch Paediatr Dent. 2009;10(3):129–35. PMID 19772841.[ಶಾಶ್ವತವಾಗಿ ಮಡಿದ ಕೊಂಡಿ]
  80. Australian Dental Association. Community oral health promotion: fluoride use [PDF]; 2005 [archived 2009-09-18; Retrieved 2009-10-13].
  81. Canadian Dental Association. CDA position on use of fluorides in caries prevention [PDF]; 2008 [Retrieved 2009-01-15].
  82. ADA Council on Access, Prevention and Interprofessional Relations. American Dental Association. Fluoridation facts [PDF]; 2005 [archived 2008-07-23; Retrieved 2008-12-22].
  83. Carstairs C, Elder R. Expertise, health, and popular opinion: debating water fluoridation, 1945–80. Can Hist Rev. 2008;89(3):345–71. doi:10.3138/chr.89.3.345.
  84. Fagin D. Second thoughts about fluoride. Sci Am. 2008;298(1):74–81. doi:10.1038/scientificamerican0108-74. PMID 18225698.
  85. National Research Council. Fluoride in Drinking Water: A Scientific Review of EPA's Standards. Washington, DC: National Academies Press; 2006. ISBN 0-309-10128-X. Lay summary: NRC, 2006.
  86. Freeze RA, Lehr JH. The Fluoride Wars: How a Modest Public Health Measure Became America's Longest-Running Political Melodrama. Wiley; 2009. ISBN 978-0-470-44833-5. Fluorophobia. p. 127–69.
  87. Newbrun E. The fluoridation war: a scientific dispute or a religious argument?. J Public Health Dent. 1996;56(5 Spec No):246–52. doi:10.1111/j.1752-7325.1996.tb02447.x. PMID 9034969.
  88. ೮೮.೦ ೮೮.೧ ೮೮.೨ Reilly GA. The task is a political one: the promotion of fluoridation. In: Ward JW, Warren C. Silent Victories: The History and Practice of Public Health in Twentieth-century America. Oxford University Press; 2007. ISBN 0-19-515069-4. p. 323–42.
  89. Libertarian Party. Consumer protection [Retrieved June 28, 2010].
  90. Nordlinger J. Water fights: believe it or not, the fluoridation war still rages—with a twist you may like. Natl Rev. 2003-06-30.[ಶಾಶ್ವತವಾಗಿ ಮಡಿದ ಕೊಂಡಿ]
  91. The Fluoride Wars. ISBN 0470448334. Fluoride and health. p. 219–54.
  92. ೯೨.೦ ೯೨.೧ Griffin M, Shickle D, Moran N. European citizens' opinions on water fluoridation. Community Dent Oral Epidemiol. 2008;36(2):95–102. doi:10.1111/j.1600-0528.2007.00373.x. PMID 18333872.
  93. Armfield JM, Akers HF. Risk perception and water fluoridation support and opposition in Australia. J Public Health Dent. 2009;70(1):58–66. doi:10.1111/j.1752-7325.2009.00144.x. PMID 19694932.
  94. Dixon S, Shackley P. Estimating the benefits of community water fluoridation using the willingness-to-pay technique: results of a pilot study. Community Dent Oral Epidemiol. 1999;27(2):124–9. doi:10.1111/j.1600-0528.1999.tb02001.x. PMID 10226722.
  95. Calman K. Beyond the 'nanny state': stewardship and public health. Public Health. 2009;123(1):e6–e10. doi:10.1016/j.puhe.2008.10.025. PMID 19135693. Lay summary: Nuffield Council on Bioethics, 2007-11-13.
  96. Martin B. The sociology of the fluoridation controversy: a reexamination. Sociol Q. 1989;30(1):59–76. doi:10.1111/j.1533-8525.1989.tb01511.x.
  97. Sellers C. The artificial nature of fluoridated water: between nations, knowledge, and material flows. Osiris. 2004;19:182–200. doi:10.1086/649401. PMID 15478274.
  98. ೯೮.೦ ೯೮.೧ Division of Oral Health, National Center for Chronic Disease Prevention and Health Promotion, CDC. Water fluoridation statistics for 2006; 2008-09-17 [Retrieved 2008-12-22].
  99. [323]
  100. Cox GJ. Fluorine and dental caries. In: Toverud G, Finn SB, Cox GJ, Bodecker CF, Shaw JH, editors. A Survey of the Literature of Dental Caries. Washington, DC: National Academy of Sciences—National Research Council; 1952. Publication 225. OCLC 14681626. p. 325–414.
  101. ಕಂದು ಬಣ್ಣದ ಕಲರಾಡೊ:
  102. ೧೦೨.೦ ೧೦೨.೧ ೧೦೨.೨ ೧೦೨.೩ Mullen J. History of water fluoridation. Br Dent J. 2005;199(7s):1–4. doi:10.1038/sj.bdj.4812863. PMID 16215546.
  103. ೧೦೩.೦ ೧೦೩.೧ Lennon MA. One in a million: the first community trial of water fluoridation. Bull World Health Organ. 2006;84(9):759–60. doi:10.1590/S0042-96862006000900020 (inactive 2010-09-13) . PMID 17128347. PMC 2627472.
  104. Dean HT, Arnold FA, Jay P, Knutson JW. Studies on mass control of dental caries through fluoridation of the public water supply. Public Health Rep. 1950;65(43):1403–8. PMID 14781280.
  105. Akers HF. Collaboration, vision and reality: water fluoridation in New Zealand (1952–1968) [PDF]. N Z Dent J. 2008;104(4):127–33. PMID 19180863.
  106. Buzalaf MA, de Almeida BS, Olympio KPK, da S Cardoso VE, de CS Peres SH. Enamel fluorosis prevalence after a 7-year interruption in water fluoridation in Jaú, São Paulo, Brazil. J Public Health Dent. 2004;64(4):205–8. doi:10.1111/j.1752-7325.2004.tb02754.x. PMID 15562942.

ಬಾಹ್ಯ ಕೊಂಡಿಗಳು ಬದಲಾಯಿಸಿ

  • Fluoridation ಓಪನ್ ಡೈರೆಕ್ಟರಿ ಪ್ರಾಜೆಕ್ಟ್