ನಾಗಲಿಂಗ ಪುಷ್ಪ
ನಾಗಲಿಂಗ ಪುಷ್ಪ ,
Conservation status
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಕೌರೌಪಿಟ(Couroupita)
ಪ್ರಜಾತಿ:
C. guianensis
Binomial name
ಕೌರೌಪಿಟ ಜಿಯನೆಂನ್ಸಿಸ್(Couroupita guianensis)

ನಾಗಲಿಂಗ ಪುಷ್ಪ ಮರ (Cannon-Ball Tree)ಹೆಸರೇ ಸೂಚಿಸುವಂತೆ ನಾಗಲಿಂಗಾಕಾರದ ಹೂ ಬಿಡುವ ಮರ.ಇದು ದಕ್ಷಿಣ ಅಮೇರಿಕ ಹಾಗೂ ಕೆರೆಬಿಯನ್ ಪ್ರದೇಶದ ಮರ. ಭಾರತದಲ್ಲಿ ಅಲಂಕಾರಕ್ಕಾಗಿ ತಂದು ಬೆಳೆಸಿರುತ್ತಾರೆ. ತಮಿಳುಭಾಷೆಯಲ್ಲಿ ಇದಕ್ಕೆ 'ಶಿವಲಿಂಗ ಪುಷ್ಪ' ಎಂದೂ ತೆಲುಗುಭಾಷೆಯಲ್ಲಿ 'ಮಲ್ಲಿಕಾರ್ಜುನ ಪುಷ್ಪ' ಎಂಬ ಹೆಸರೂ ಇದೆ.

ಸಸ್ಯಶಾಸ್ತ್ರೀಯ ವರ್ಗೀಕರಣ ಬದಲಾಯಿಸಿ

ಇದು ಲೆಸಿತಿಡೇಸಿ (Lecythidaceace)ಕುಟುಂಬಕ್ಕೆ ಸೇರಿದ್ದು,ಕೌರೌಪಿಟ ಜಿಯನೆಂನ್ಸಿಸ್(Couroupita guianensis)ಎಂಬ ಸಸ್ಯಶಾಸ್ತ್ರೀಯ ಹೆಸರಿದೆ.

ಸಸ್ಯದ ಗುಣಲಕ್ಷಣಗಳು ಬದಲಾಯಿಸಿ

ಇದು ಮಧ್ಯಮಗಾತ್ರದ ಮರ.ವಿಶೇಷವಾದ ಬೀಳಲುಗಳಲ್ಲಿ ಆಕರ್ಷಕವಾದ ಹೂ ಬಿಡುತ್ತದೆ. ದೊಡ್ಡಗಾತ್ರದ ಕಾಯಿ ಕಾಂಡಕ್ಕೆ ತಾಗಿದಂತಿರುತ್ತದೆ.

 
ನಾಗಲಿಂಗ ಪುಷ್ಪ, ಹೂ ಮತ್ತು ಕಾಯಿ
 
Couroupita guianensis

ಉಪಯೋಗಗಳು ಬದಲಾಯಿಸಿ

ಇದನ್ನು ಅಲಂಕಾರಕ್ಕೆ ಸಸ್ಯೋದ್ಯಾನವನಗಳಲ್ಲಿ ಬೆಳೆಸುತ್ತಾರೆ.ಭಾರತದಲ್ಲಿ ಹಲವಾರು ಶಿವ ದೇವಾಲಯಗಳ ಬಳಿ ನೆಟ್ಟು ಬೆಳೆಸಿದ್ದಾರೆ. ಇದರ ಕಾಯಿಯನ್ನು ಪಶು ಆಹಾರವಾಗಿ ಕೆಲವು ಕಡೆಗಳಲ್ಲಿ ಉಪಯೋಗಿಸುವ ಬಗ್ಗೆ ಉಲ್ಲೇಖವಿದೆ.