ನರಶಸ್ತ್ರಕ್ರಿಯೆ (ಅಥವಾ ನರವೈಜ್ಞಾನಿಕ ಶಸ್ತ್ರಕ್ರಿಯೆ ಯ ವೈದ್ಯಕೀಯ ವಿಶೇಷತೆಯಾಗಿದ್ದು, ನರಮಂಡಲದ ಯಾವುದೇ ಭಾಗಕ್ಕೆ ಉಂಟಾಗುವ ಅವ್ಯವಸ್ಥೆಗಳ ನಿವಾರಣೆ, ರೋಗಗುರುತಿಸುವಿಕೆ, ಚಿಕಿತ್ಸೆ ಮತ್ತು ಪುನಃಸ್ಥಾಪನೆಗೆ ಸಂಬಂಧಿಸಿದೆ. ಇವುಗಳಲ್ಲಿ ಮೆದುಳು, ಕಶೇರುಕ, ಬೆನ್ನುಹುರಿ, ಬಾಹ್ಯನರಮಂಡಲದ ನರಗಳು ಮತ್ತು ತಲೆಬುರುಡೆಯ ಹೊರಗಿನ ಸೆರೆಬ್ರೋವ್ಯಾಸ್ಕುಲರ್(ಮೆದುಳಿನ ರಕ್ತನಾಳಗಳು)ವ್ಯವಸ್ಥೆ ಸೇರಿದಂತೆ ನರಮಂಡಲ ವ್ಯವಸ್ಥೆಯ ಯಾವುದೇ ಭಾಗಕ್ಕೆ ಉಂಟುಮಾಡುವ ದುಷ್ಪರಿಣಾಮವಾಗಿದೆ.[೧][೨]

Neurosurgery
Occupation
Activity sectorsSurgery
Description
Education requiredDoctor of Medicine

ಶಿಕ್ಷಣ ಮತ್ತು ತರಬೇತಿ ಬದಲಾಯಿಸಿ

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಬದಲಾಯಿಸಿ

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನರಶಸ್ತ್ರಚಿಕಿತ್ಸಾ ತಜ್ಞ ಸಾಮಾನ್ಯವಾಗಿ ನಾಲ್ಕು ವರ್ಷಗಳ ಕಾಲೇಜು ಶಿಕ್ಷಣ, ನಾಲ್ಕುವರ್ಷಗಳ ವೈದ್ಯಕೀಯ ಶಾಲೆಯ ಶಿಕ್ಷಣ, ಮತ್ತು ಒಂದು ವರ್ಷದ ಅವಧಿಯ ಇಂಟರ್ನ್‌ಗಿರಿ ಪೂರ್ಣಗೊಳಿಸಬೇಕು. ಇದು ಸಾಮಾನ್ಯವಾಗಿ ಅವರ ರೆಸಿಡೆನ್ಸಿ(ತಜ್ಞ ವೈದ್ಯಕೀಯ ತರಬೇತಿಯ ಅವಧಿ)ಕಾರ್ಯಕ್ರಮ ಮತ್ತು ಐದರಿಂದ ಆರು ವರ್ಷಗಳ ನರಶಸ್ತ್ರಚಿಕಿತ್ಸೆ ರೆಸಿಡೆನ್ಸಿ(PGY-2-6)ಯೊಂದಿಗೆ ಸಂಬಂಧ ಹೊಂದಿದೆ.[೩] ಬಹುತೇಕ, ಆದರೆ ಎಲ್ಲವೂ ಒಳಗೊಂಡಿರದ ರೆಸಿಡೆನ್ಸಿ ಕಾರ್ಯಕ್ರಮಗಳು ಮೂಲ ವಿಜ್ಞಾನ ಅಥವಾ ಪ್ರಾಯೋಗಿಕ ಸಂಶೋಧನೆಯ ಕೆಲವು ಭಾಗವನ್ನು ಒಳಗೊಂಡಿದೆ. ನರಶಸ್ತ್ರಚಿಕಿತ್ಸಾ ತಜ್ಞರು ರೆಸಿಡೆನ್ಸಿ ಬಳಿಕ ಫೆಲೋಶಿಪ್‌ನಲ್ಲಿ ಅಥವಾ ಕೆಲವು ಪ್ರಕರಣಗಳಲ್ಲಿ ಹಿರಿಯ ರೆಸಿಡೆಂಟ್‌ನಂತೆ ಹೆಚ್ಚುವರಿ ತರಬೇತಿಯನ್ನು ಅನುಸರಿಸಬಹುದು. ಈ ಫೆಲೋಶಿಪ್‌ಗಳಲ್ಲಿ ಶಿಶುವೈದ್ಯಕ್ಕೆ ಸಂಬಂಧಿಸಿದ ನರಶಸ್ತ್ರಚಿಕಿತ್ಸೆ, ನ್ಯೂರೋಕ್ರಿಟಿಕಲ್ ಕೇರ್(ನರಮಂಡಲದ ಕಾಯಿಲೆಯ ಆರೈಕೆ), ಕ್ರಿಯಾತ್ಮಕ ಮತ್ತು ಸ್ಟಿರಿಯೊಟ್ಯಾಕ್ಟಿಕ್ ಶಸ್ತ್ರಚಿಕಿತ್ಸೆ(ಮೂರು ಆಯಾಮಗಳ ಸಹಯೋಜಕಗಳ ಬಳಕೆ),ಶಸ್ತ್ರಚಿಕಿತ್ಸೆಯ ನರಗ್ರಂಥಿವಿಜ್ಞಾನ, ನರರಕ್ತನಾಳ ಶಸ್ತ್ರಚಿಕಿತ್ಸೆ, ಹಸ್ತಕ್ಷೇಪದ ನರ ರೇಡಿಯಾಲಜಿ ಅಥವಾ ತಲೆಬುರುಡೆ ಆಧಾರಿತ ಶಸ್ತ್ರಚಿಕಿತ್ಸೆ.[೪] ನರಶಸ್ತ್ರಚಿಕಿತ್ಸೆ ತಜ್ಞರು ನರರೋಗ ಶಾಸ್ತ್ರ ಮತ್ತು ನರನೇತ್ರ ವಿಜ್ಞಾನದಲ್ಲಿ ಫೆಲೋಶಿಪ್ ತರಬೇತಿಯನ್ನು ಪಡೆಯಬಹುದು.

UK ಯಲ್ಲಿ ಬದಲಾಯಿಸಿ

UK (ಬ್ರಿಟನ್)ನಲ್ಲಿ ವಿದ್ಯಾರ್ಥಿಗಳು GCSE ಯಲ್ಲಿ A*- C ದರ್ಜೆಗಳನ್ನು ಸಂಪಾದಿಸಬೇಕು(ಪ್ರೌಢ ಶಿಕ್ಷಣದ ಸಾಮಾನ್ಯ ಪ್ರಮಾಣಪತ್ರ)ನಂತರ ಅವರು ರಸಾಯನಶಾಸ್ತ್ರದಲ್ಲಿ A ಮಟ್ಟಗಳಲ್ಲಿ A*- C ಕೂಡ ಕನಿಷ್ಠ ಒಂದು ಇತರೆ ವಿಜ್ಞಾನ ಅಥವಾ ಗಣಿತದೊಂದಿಗೆ ಸಾಧಿಸಬೇಕು. ಅಲ್ಲದೇ UKCAT(UK ಕ್ಲಿನಿಕಲ್ ಆಪ್ಟಿಟ್ಯೂಡ್ ಟೆಸ್ಟ್)ಅಥವಾ BMAT(ಬಯೋಮೆಡಿಕಲ್ ಅಡ್ಮಿಶನ್ಸ್ ಟೆಸ್ಟ್)ಕೆಲವು ವೈದ್ಯಕೀಯ ಶಾಲೆಗಳಿಗೆ ಪ್ರವೇಶ ಪಡೆಯಲು ಬಳಸಬಹುದು. ವಿದ್ಯಾರ್ಥಿಗಳು 5ವರ್ಷಗಳ ಕಾಲ ವೈದ್ಯಕೀಯವನ್ನು ಅಭ್ಯಾಸಮಾಡಬೇಕು ಮತ್ತು MBBSವಿದ್ಯಾರ್ಹತೆಯನ್ನು ಸಾಧಿಸಬೇಕು(ಬ್ಯಾಚುಲರ್ ಆಫ್ ಮೆಡಿಸನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ) ನಂತರ ವಿದ್ಯಾರ್ಥಿ ಸಾಮಾನ್ಯವಾಗಿ 2ವರ್ಷಗಳ ಕಾಲಾವಧಿಯ ಫೌಂಡೇಶನ್ ತರಬೇತಿ ನಿರ್ವಹಿಸಬೇಕು. ಇದು ಆಸ್ಪತ್ರೆ ಅಥವಾ ಪ್ರಾಯೋಗಿಕ ಪರಿಸ್ಥಿತಿಯಲ್ಲಿ ವೇತನದ ತರಬೇತಿ ಉದ್ಯೋಗವಾಗಿದ್ದು, ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ವ್ಯಾಪ್ತಿಯ ವೈದ್ಯಕೀಯ ವಿಶೇಷತೆಗಳನ್ನು ಒಳಗೊಂಡಿದೆ. ನಂತರ ವಿದ್ಯಾರ್ಥಿಗಳು ನರಶಸ್ತ್ರಚಿಕಿತ್ಸೆ ಮಾರ್ಗಕ್ಕೆ ಪ್ರವೇಶಿಸುತ್ತಾರೆ. ಇತರ ಶಸ್ತ್ರಚಿಕಿತ್ಸೆ ವಿಶೇಷತೆಗಳಿಗೆ ಭಿನ್ನವಾಗಿ, ಇದು ತನ್ನದೇ ಸ್ವತಂತ್ರ ತರಬೇತಿ ಮಾರ್ಗವನ್ನು ಹೊಂದಿದ್ದು, ಕನ್ಸಲ್ಟೆಂಟ್ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಸಾಧ್ಯವಾಗುವ ಮುಂಚೆ ಸುಮಾರು 8 ವರ್ಷಗಳನ್ನು ತೆಗೆದುಕೊಳ್ಳುತ್ತದೆ(ST1-8)[೫]

ನರಶಸ್ತ್ರಚಿಕಿತ್ಸೆ ವಿಧಾನಗಳು ಬದಲಾಯಿಸಿ

ನ್ಯೂರೊರೇಡಿಯಾಲಜಿ ವಿಧಾನಗಳನ್ನು ಆಧುನಿಕ ನರಶಸ್ತ್ರಚಿಕಿತ್ಸೆಯಲ್ಲಿ ರೋಗಗುರುತಿಸುವಿಕೆ ಮತ್ತು ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಕಂಪ್ಯೂಟರ್ ನೆರವಿನ ಚಿತ್ರದ ಕಂಪ್ಯೂಟೆಡ್ ತಲಲೇಖನ (CT),ಕಾಂತೀಯ ಅನುರಣನ ಚಿತ್ರ(MRI), ಪಾಸಿಟ್ರಾನ್ ಉತ್ಸರ್ಜನ ತಲಲೇಖನ(PET), ಮ್ಯಾಗ್ನೆಟೊಎನ್ಸೆಫಾಲೊಗ್ರಫಿ(MEG)(ಕಾಂತೀಯ ಕ್ಷೇತ್ರ ದಾಖಲಿಸುವ ಮೂಲಕ ಮಿದುಳಿನ ಚಟುವಟಿಕೆ ಮಾಪನ) ಮತ್ತು ಸ್ಟೀರಿಯೊಟ್ಯಾಕ್ಟಿಕ್ ಶಸ್ತ್ರಚಿಕಿತ್ಸೆಯ ಬೆಳವಣಿಗೆ. ಕೆಲವು ನರಶಸ್ತ್ರಚಿಕಿತ್ಸೆ ವಿಧಾನಗಳು MRI ಮತ್ತು ಕ್ರಿಯಾತ್ಮಕ MRI ಬಳಕೆಯು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಒಳಗೊಂಡಿರುತ್ತದೆ.

ನರವಿಜ್ಞಾನದ ಶಸ್ತ್ರಚಿಕಿತ್ಸೆಯಲ್ಲಿ ಮೈಕ್ರೋಸರ್ಜರಿಯನ್ನು ಅನೇಕ ಅಂಶಗಳಲ್ಲಿ ಬಳಸಿಕೊಳ್ಳಲಾಗುತ್ತದೆ. EC-IC ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುವಾಗ ಸೂಕ್ಷ್ಮರಕ್ತನಾಳಗಳ ಸಂಪರ್ಕ ಕಲ್ಪಿಸುವಿಕೆ ಅಗತ್ಯವಿರುತ್ತದೆ. ಸೂಕ್ಷ್ಮದರ್ಶಕವನ್ನು ಬಳಸಿಕೊಂಡು ನಾಳವ್ಯಾಕೋಚ(ಧಮನಿಯ ಊತ) ಕ್ಲಿಪ್ಪಿಂಗ್ ನಿರ್ವಹಿಸಲಾಗುತ್ತದೆ. ಕನಿಷ್ಠ ಛೇದನದ ಬೆನ್ನೆಲುಬು ಶಸ್ತ್ರಚಿಕಿತ್ಸೆಯಲ್ಲಿ ಈ ತಂತ್ರಗಳನ್ನು ಅವಲಂಬಿಸಲಾಗುತ್ತದೆ. ಮೈಕ್ರೋಡಿಸೆಕ್ಟಮಿ, ಲ್ಯಾಮಿನೆಕ್ಟಮಿ ವಿಧಾನಗಳು ಮತ್ತು ಕೃತಕ ಡಿಸ್ಕ್‌ಗಳು ಮೈಕ್ರೊಸರ್ಜರಿ ಮೇಲೆ ಅವಲಂಬಿತವಾಗಿದೆ. [೬]

ನರಶಸ್ತ್ರಚಿಕಿತ್ಸೆ ತಜ್ಞರು ಕನಿಷ್ಠ ಛೇದನ ಅಂತರ್ದರ್ಶಕೀಯ ಶಸ್ತ್ರಚಿಕಿತ್ಸೆಯನ್ನು ಬಳಸಿಕೊಳ್ಳುತ್ತಾರೆ. ಅಂತರ್ದರ್ಶಕೀಯ ಎಂಡೊನೇಸಲ್ ಶಸ್ತ್ರಚಿಕಿತ್ಸೆಯ ತಂತ್ರಗಳನ್ನು ಪಿಟ್ಯೂಟರಿ ಊತ,ಕ್ರಾನಿಯೊಫ್ಯಾರೈಂಜಿಯೊಮಾಸ್(ಪಿಟ್ಯುಟರಿ ಗ್ರಂಥಿಯಿಂದ ಹುಟ್ಟುವ ಮೆದುಳಿನ ಊತ),ಕಾರ್ಡೊಮಾಗಳು ಮತ್ತು ಬೆನ್ನೆಲುಬಿನ ದ್ರವದ ಸೋರಿಕೆಯ ದುರಸ್ತಿಗೆ ಬಳಸಲಾಗುತ್ತದೆ. ಕುಕ್ಷೀಯ ಅಂತರ್ದರ್ಶನವನ್ನು ಕಲಿಲ ಕೋಶಗಳಲ್ಲಿ ಮತ್ತು ಮೆದುಳಿನ ಪರೆಂಕಿಮ ಕೋಶಗಳಿಗೆ ಬಳಸಲಾಗುತ್ತದೆ. ಅಂತರ್ದರ್ಶೀಯ ತಂತ್ರಗಳನ್ನು ಹೆಮಾಟೋಮ(ರಕ್ತನಾಳದಿಂದ ರಕ್ತ ಹೊರಹರಿಯುವಿಕೆ ಮತ್ತು ಟ್ರಿಗೇಮಿನಲ್ ನ್ಯೂರಾಲ್ಜಿಯ(ಮುಖದಲ್ಲಿ ನೋವು)ಗಳ ನಿವಾರಣೆಗೆ ನೆರವಾಗಲು ಬಳಸಬಹುದು. ತಲೆಚಿಪ್ಪಿನ ಮುಖದ ಅವ್ಯವಸ್ಥೆಗಳು ಮತ್ತು ಬೆನ್ನುಮೂಳೆಯ ದ್ರವದ ಪರಿಚಲನೆಯಲ್ಲಿ ತೊಂದರೆಗೆ ನರಶಸ್ತ್ರಚಿಕಿತ್ಸಕರು ದುರಸ್ತಿ ಮಾಡುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ತಜ್ಞರು ಮಾಡುತ್ತಾರೆ. ಮೆದುಳಿನ ವಿರೂಪತೆ, ಕ್ರಾನಿಯೊಸೈನೊಸ್ಟೊಸಿಸ್(ತಲೆಬುರುಡೆಯ ಸಂಧು ಬೆಸುಗೆ) ಮತ್ತು ಸಿರಿಂಜೊಮೈಲಿಯ(ಮಿದುಳುಬಳ್ಳಿಯ ಕಾಯಿಲೆ) ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದನ್ನು ಕ್ರಾನಿಯೊಪ್ಲಾಸ್ಟಿ(ತಲೆಬುರುಡೆಯ ದೋಷ ಸರಿಪಡಿಸುವುದು)ಎನ್ನಲಾಗುತ್ತದೆ.

ನರಶಸ್ತ್ರಚಿಕಿತ್ಸೆ ತಜ್ಞರು ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಸರ್ಜರಿಯಲ್ಲಿ ಗಡ್ಡೆ ಮತ್ತು AVM ಚಿಕಿತ್ಸೆಗೆ ವಿಕಿರಣ ಗ್ರಂಥಿಶಾಸ್ತ್ರಜ್ಞರೊಂದಿಗೆ ಒಳಗೊಂಡಿರುತ್ತಾರೆ. ರೇಡಿಯೊ ಸರ್ಜರಿ ವಿಧಾನಗಳಾದ ಗಾಮಾ ನೈಫ್ ಮತ್ತು ಸೈಬರ್‌ನೈಫ್ ಮುಂತಾದವನ್ನು ಬಳಸಲಾಗುತ್ತದೆ.[೭]

ನರಶಸ್ತ್ರ ಚಿಕಿತ್ಸೆ ತಜ್ಞರು ಎಂಡೊವ್ಯಾಸ್ಕುಲರ್(ರಕ್ತನಾಳದೊಳಕ್ಕೆ ತೂರುನಳಿಕೆ ಅಳವಡಿಸುವುದು)ಚಿತ್ರ ನಿರ್ದೇಶಿತ ವಿಧಾನಗಳನ್ನು ಎನೆಯುರಿಸಂ(ರಕ್ತದಿಂದ ತುಂಬಿದ ಚೀಲ)ಗಳು, AVMಗಳು, ಶೀರ್ಷಧಮನಿಯ ಅತಿಸಂಕೋಚನ,ಪಾರ್ಶ್ವವಾಯು ಮತ್ತು ಬೆನ್ನುಮೂಳೆ ವಿರೂಪಗಳು ಮತ್ತು ರಕ್ತನಾಳ ಸಂಕೋಚನಗಳಿಗೆ ಬಳಸಲು ಆರಂಭಿಸಿದ್ದಾರೆ. ಅಲ್ಲದೇ ನಾಳರಹಿತ ವಿಧಾನಗಳಾದ ವರ್ಟೊಪ್ಲಾಸ್ಟಿ ಮತ್ತು ಕೈಫೊಪ್ಲಾಸ್ಟಿ ವಿಧಾನಗಳನ್ನು ನರಶಸ್ತ್ರಚಿಕಿತ್ಸೆ ತಜ್ಞರು ಬಳಸುತ್ತಾರೆ. ಆಂಜಿಯೊಪ್ಲಾಸ್ಟಿ(ರಕ್ತನಾಳ ಸರಿಪಡಿಸುವಿಕೆ),ಸ್ಟೆಂಟಿಂಗ್(ನಳಿಕೆಯನ್ನು ತೂರಿಸುವುದು) ರಕ್ತಹೆಪ್ಪುಗಟ್ಟುವುದನ್ನು ಸರಿಪಡಿಸುವುದು, ಎಂಬಾಲೈಜೇಷನ್(ದಮನಿಬಂಧ) ಮತ್ತು ಆಂಜಿಯೊಗ್ರಫಿ(ರಕ್ತನಾಳಗಳ ಎಕ್ಸರೆ) ತಂತ್ರಗಳನ್ನು ಬಳಸಿಕೊಳ್ಳುವುದು.[೮]

ಪರಿಸ್ಥಿತಿಗಳು ಬದಲಾಯಿಸಿ

ನರಶಸ್ತ್ರಚಿಕಿತ್ಸೆ ತಜ್ಞರು ಚಿಕಿತ್ಸೆ ನೀಡುವ ಇತರ ಪರಿಸ್ಥಿತಿಗಳು:

  • ಮೃದ್ವಸ್ಥಿ ತಟ್ಟೆ ಜಾರುವುದು
  • ಸರ್ವಿಕಲ್ ಸ್ಪೈನಲ್ ಸ್ಟೆನೊಸಿಸ್(ಕುತ್ತಿಗೆಯ ಬೆನ್ನುಮೂಳೆಯ ಸಂಕೋಚನ) ಮತ್ತು ಲಂಬಾರ್ ಸ್ಪೈನಲ್ ಸ್ಟೆನೋಸಿಸ್(ಬೆನ್ನಿನ ಕೆಳಭಾಗದ ಸಂಕೋಚನ)
  • ಜಲಮಸ್ತಿಷ್ಟ ರೋಗ (ತಲೆ ಬುರುಡೆಯಲ್ಲಿ ನೀರು ತುಂಬಿ ಹಣೆ ಉಬ್ಬಾಗುವುದು)
  • ತಲೆಗೆ ಆಘಾತ (ಮೆದುಳು ರಕ್ತಸ್ರಾವ, ತಲೆಬುರುಡೆ ಮುರಿಯುವುದು ಮುಂತಾದವು)
  • ಬೆನ್ನುಹುರಿ ಆಘಾತ
  • ಬಾಹ್ಯ ನರಮಂಡಲದ ಆಘಾತಕಾರಿ ಗಾಯಗಳು.
  • ಸೋಂಕುಗಳು
  • ಬೆನ್ನುಮೂಳೆ, ಬೆನ್ನುಹುರಿ ಮತ್ತು ಬಾಹ್ಯ ನರಮಂಡಲದ ಊತಗಳು
  • ಸಬ್‌ಅರಾಕ್‌‌ನಾಯ್ಡ್ ಹೆಮೊರೇಗ್ (ಮೆದುಳಿನ ತೆಳು ಒಳಪೊರೆಯ ರಕ್ತಸ್ರಾವ),ಒಳಪರೆಂಕಿಮ,ಒಳಕುಕ್ಷೀಯ ರಕ್ತಸ್ರಾವ ಮುಂತಾದ ಮೇಲ್ಮಿದುಳಿನ ರಕ್ತಸ್ರಾವಗಳು.
  • ಕೆಲವು ರೂಪಗಳ ಔಷಧಿ ನಿರೋಧಕ ಅಪಸ್ಮಾರ
  • ಕೆಲವು ರೂಪಗಳ ಚಲನೆ ದೋಷಗಳು(ಮುಂದುವರಿದ ಪಾರ್ಕಿನ್‌ಸನ್ಸ್ ಕಾಯಿಲೆ, ಕೋರಿಯ– ಇದು ವಿಶೇಷವಾಗಿ ಅಭಿವೃದ್ಧಿಪಡಿಸಿದ ಕನಿಷ್ಠ ಛೇದನದ ಸ್ಟೀರಿಯೊಟ್ಯಾಕ್ಟಿಕ್ ತಂತ್ರಗಳು(ಕ್ರಿಯಾತ್ಮಕ, ಸ್ಟಿರಿಯೊಟ್ಯಾಕ್ಟಿಕ್ ನರಶಸ್ತ್ರಚಿಕಿತ್ಸೆ) ಉದಾಹರಣೆಗೆ ಅಬ್ಲೇಟಿವ್ ಸರ್ಜರಿ(ಅಂಗಚ್ಛೇದನ ಶಸ್ತ್ರಚಿಕಿತ್ಸೆ) ಮತ್ತು ಆಳವಾದ ಮೆದುಳಿನ ಉದ್ದೀಪನ ಶಸ್ತ್ರಚಿಕಿತ್ಸೆಗಳನ್ನು ಒಳಗೊಂಡಿದೆ.
  • ಕ್ಯಾನ್ಸರ್‌ ಅಥವಾ ಆಘಾತದ ರೋಗಿಗಳ ಪರಿಹರಿಸಲಾಗದ ನೋವು ಮತ್ತು ತಲೆಬುರುಡೆಯ/ಬಾಹ್ಯ ನರಮಂಡಲದ ನೋವು.
  • ಕೆಲವು ಪರಿಹರಿಸಲಾಗದ ಮಾನಸಿಕ ರೋಗಗಳ ರೂಪಗಳು
  • ಮೆದುಳು ಮತ್ತು ಬೆನ್ನುಹುರಿಯ ರಕ್ತನಾಳಗಳ ವಿರೂಪಗಳು(ಅವು ಅಪಧಮನಿ, ಅಭಿದಮನಿ ನಡುವೆ ಅಪಸಾಮಾನ್ಯ ಸಂಪರ್ಕ, ಕ್ಯಾವೆರ್ನಸ್ ಆಂಜಿಯೊಮಾ(ಕೇಂದ್ರನರಮಂಡಲದ ರಕ್ತನಾಳ ಅವ್ಯವಸ್ಥೆ), ಕ್ಯಾಪಿಲ್ಲರಿ ಟೆಲಾಂಜೆಕ್ಟಾಸಿಯಾಸ್.
  • ಪೆರಿಫೆರಲ್ ನ್ಯೂರೋಪತೀಸ್(ಬಾಹ್ಯನರಮಂಡಲದ ನರಗಳಿಗೆ ಹಾನಿ), ಉದಾಹರಣೆಗೆ ಕಾರ್ಪಲ್ ಟನಲ್ ಲಕ್ಷಣ ಮತ್ತು ಮುಂದೋಳಿನ ಒಳಎಲುಬಿನ ನ್ಯೂರೋಪತಿ.
  • ಮೊಯಾಮೊಯಾ ರೋಗ

ಇವನ್ನೂ ಗಮನಿಸಿ ಬದಲಾಯಿಸಿ

  • ಹಾರ್ವೆ ಕಶಿಂಗ್– ನರಶಸ್ತ್ರಚಿಕಿತ್ಸೆಯ ಜನಕ ಎಂದು ಕರೆಯಲಾಗುತ್ತದೆ.
  • ವಾಲ್ಟರ್ ಡ್ಯಾಂಟಿ– ನರಶಸ್ತ್ರಚಿಕಿತ್ಸೆಯ ಸಂಸ್ಥಾಪಕ ಜನಕ ಎಂದು ಹೆಸರಾಗಿದ್ದಾರೆ.
  • ಗಾಜಿ ಯಸಾರ್ಗಿಲ್– ಸೂಕ್ಷ್ಮ ನರಶಸ್ತ್ರಚಿಕಿತ್ಸೆಯ ಜನಕ ಎಂದು ಹೆಸರಾಗಿದ್ದಾರೆ.
  • ವೈಲ್ಡರ್ ಪೆನ್‌ಫೀಲ್ಡ್ – ನರಶಸ್ತ್ರಚಿಕಿತ್ಸೆಯ ಸಂಸ್ಥಾಪಕ ಜನಕರಲ್ಲಿ ಒಬ್ಬರು ಮತ್ತು ಅಪಸ್ಮಾರ ನರಶಸ್ತ್ರಚಿಕಿತ್ಸೆಯ ಪ್ರವರ್ತಕ ಎಂದು ಹೆಸರಾಗಿದ್ದಾರೆ.
  • ಕೆವಿನ್ J. ಟ್ರೇಸಿ– ನರಶಸ್ತ್ರಚಿಕಿತ್ಸೆ ತಜ್ಞ ಮತ್ತು ಪ್ರತಿರಕ್ಷಾ ಶಾಸ್ತ್ರಜ್ಞದಿ ಫೈನ್‌ಸ್ಟೈನ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ರೀಸರ್ಚ್ ಅಧ್ಯಕ್ಷ.
  • ಆಂಟನ್ ಐಸೆಲ್ಸ್‌ಬರ್ಗ್ – ಸ್ವತಂತ್ರ ಬೋಧನಾಶಾಖೆಯಲ್ಲಿ ಸಂಸ್ಥಾಪಿತ ನರಶಸ್ತ್ರಚಿಕಿತ್ಸಕ
  • ಲಾರ್ಸ್ ಲೆಕ್ಸೆಲ್– ಗಾಮಾ ನೈಫ್ ಅಭಿವೃದ್ಧಿಪಡಿಸಿದ ಸ್ವೀಡನ್ ನರಶಸ್ತ್ರಚಿಕಿತ್ಸಕ
  • ಬೆಂಜಮಿನ್ ಕಾರ್ಸನ್– ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆ ಪ್ರಖ್ಯಾತ ಮಕ್ಕಳ ನರಶಸ್ತ್ರಚಿಕಿತ್ಸಕ , ಹೆಮಿಸ್ಪೆರೆಕ್ಟಮಿಯ ಪ್ರವರ್ತಕ, ಮತ್ತು

ತಲೆಯಲ್ಲಿ ಕೂಡಿಕೊಂಡ ಸಯಾಮಿ ಅವಳಿಗಳನ್ನು ಪ್ರತ್ಯೇಕಿಸುವಲ್ಲಿ ಪ್ರವರ್ತಕರು.

  • ಜಾನ್ R. ಆಡ್ಲರ್ –ಸ್ಟಾನ್‌ಫೋರ್ಡ್ ಯೂನಿವರ್ಸಿಟಿ ಸೈಬರ್‌ನೈಫ್ ಆವಿಷ್ಕರಿಸಿದ ನರಶಸ್ತ್ರಚಿಕಿತ್ಸಕ.
  • ಫ್ರಾನ್ಸಸ್ K.ಕಾನ್ಲಿ – ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಪ್ರವರ್ತಕ ಮಹಿಳಾ ನರಶಸ್ತ್ರಚಿಕಿತ್ಸಕಿ.
  • ವರ್ಜಿನಿಯ ಮೈಕ್ಸನರ್ - ಮಕ್ಕಳ ನರಶಸ್ತ್ರಚಿಕಿತ್ಸೆತಜ್ಞ ಮೆಲ್ಬೋರ್ನ್ ರಾಯಲ್ ಚಿಲ್ಡ್ರನ್ಸ್ ಹಾಸ್ಪಿಟಲ್. ಕೂಡಿಕೊಂಡ ಬಾಂಗ್ಲಾದೇಶ ಅವಳಿಗಳಾದ ತ್ರಿಷ್ಣಾ ಮತ್ತು ಕೃಷ್ಣರನ್ನು ಪ್ರತ್ಯೇಕಿಸುವಲ್ಲಿ ಮುಖ್ಯವಾಗಿ ಹೆಸರು ಪಡೆದಿದ್ದಾರೆ.
  • ಕೀತ್ ಬ್ಲಾಕ್ - ವಿಶ್ವ ವಿಖ್ಯಾತ ನರಶಸ್ತ್ರಚಿಕಿತ್ಸೆತಜ್ಞ ಸಿಡಾರ್ಸ್-ಸಿನಾಯ್ ಮೆಡಿಕಲ್ ಸೆಂಟರ್‌ನಲ್ಲಿ ಮೆದುಳಿನ ಗಡ್ಡೆಗಳಿಗೆ ಚಿಕಿತ್ಸೆ ನೀಡುವಲ್ಲಿ ತಜ್ಞತೆ ಮತ್ತು

ಮೆದುಳಿಗೆ ಕ್ಯಾನ್ಸರ್ ಔಷಧಿಗಳ ರವಾನೆಗೆ ಅವಕಾಶ ನೀಡಲು BBB (ರಕ್ತ-ಮೆದುಳು ತಡೆ)ಯ ಆಯ್ದ ರಂಧ್ರವನ್ನು ಮಾಡುವಲ್ಲಿ ಪ್ರವರ್ತಕ.

  • ಸಿಡ್ ವಾಟ್ಕಿನ್ಸ್– ವಿಶ್ವ ವಿಖ್ಯಾತ ನರಶಸ್ತ್ರಚಿಕಿತ್ಸೆತಜ್ಞ ಫಾರ್ಮುಲಾ ಒನ್ ಸೇಫ್ಟಿ ಮತ್ತು ಮೆಡಿಕಲ್ ಡೆಲಿಗೇಟ್(ರೇಸ್ ಡಾಕ್ಟರ್)
  • ಜಾಕ್ವೆಸ್ ಬ್ರಾಟ್ಚಿ – ಪ್ರಖ್ಯಾತ ಬೆಲ್ಜಿಯನ್ ನರಶಸ್ತ್ರಚಿಕಿತ್ಸೆತಜ್ಞ
  • ಹೆನ್ರಿ ಮಾರ್ಶ್ – ಪ್ರಖ್ಯಾತ ಇಂಗ್ಲೀಷ್ ನರಶಸ್ತ್ರಚಿಕಿತ್ಸೆತಜ್ಞ
  • ಬ್ರಿಯಾನ್ ಆಂಡ್ರಿವ್ಸ್ (ವೈದ್ಯ) – ಹೆಸರಾಂತ ಅಮೆರಿಕನ್ ನರಶಸ್ತ್ರಚಿಕಿತ್ಸೆತಜ್ಞ
  • ನರವೈಜ್ಞಾನಿಕ ಶಸ್ತ್ರಚಿಕಿತ್ಸೆ ತಜ್ಞರ ಸಮಾವೇಶ

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2012-11-05. Retrieved 2011-03-22.
  2. "ಆರ್ಕೈವ್ ನಕಲು". Archived from the original on 2011-08-31. Retrieved 2011-03-22.
  3. "ಆರ್ಕೈವ್ ನಕಲು". Archived from the original on 2012-07-24. Retrieved 2011-03-22.
  4. "ಆರ್ಕೈವ್ ನಕಲು". Archived from the original on 2010-06-21. Retrieved 2011-03-22.
  5. "The society of british neurological surgeons". Archived from the original on 2012-03-11. Retrieved 11/03/2011. {{cite web}}: Check date values in: |accessdate= (help)
  6. http://www.neurosurgery.org/cybermuseum/microneurohall/arhoton.html[ಶಾಶ್ವತವಾಗಿ ಮಡಿದ ಕೊಂಡಿ]
  7. "ಆರ್ಕೈವ್ ನಕಲು". Archived from the original on 2012-08-14. Retrieved 2011-03-22.
  8. "ಆರ್ಕೈವ್ ನಕಲು". Archived from the original on 2010-06-02. Retrieved 2011-03-22.
  1. REDIRECT Template:Neuro procedures