ದೊಡ್ಡರಸಿನಕೆರೆ, ಮಂಡ್ಯ ಜಿಲ್ಲೆಮದ್ದೂರು ತಾಲ್ಲೂಕಿನ ಗ್ರಾಮ. ಇದು ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಿಂದ ಸುಮಾರು ೧ ಕಿ.ಮೀ. ದೂರದಲ್ಲಿದ್ದು, ೩ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಮಂಡ್ಯ ಜಿಲ್ಲಾಕೇಂದ್ರದಿಂದ ೧೬ ಮತ್ತು ಮದ್ದೂರು ತಾಲ್ಲೂಕು ಕೇಂದ್ರದಿಂದ ೧೨ ಕಿಲೋಮೀಟರ್ ಅಂತರದಲ್ಲಿದೆ.

ರಾಜ 'ದೊಡ್ಡರಸ'ನಿಂದ ನಿರ್ಮಾಣಗೊಂಡಿತೆಂದು ಹೇಳಲಾಗುವ ಈ ಊರಿನಲ್ಲಿ ಪ್ರಸ್ತುತ ೭೦೦೦ ಮತದಾರರಿದ್ದಾರೆ. ಇದು ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದು. ವ್ಯವಸಾಯೋದ್ದೇಶಕ್ಕಾಗಿ ೨ ಕೆರೆಗಳನ್ನು ಹೊಂದಿದೆ. 'ದೊಡ್ದರಸಿನಕೆರೆ ಗ್ರಾಮ ಪಂಚಾಯಿತಿ'ಯು ಸುತ್ತಲಿನ ಮುಟ್ಟನಹಳ್ಳಿ, ಕುರಿಕೆಂಪನದೊಡ್ಡಿ, ದೇವರಹಳ್ಳಿ, ಗೌಡಯ್ಯನದೊಡ್ಡಿ, ಹಾಗೂ ಚಿಕ್ಕಮರಿಗೌಡನದೊಡ್ಡಿ ಎಂಬ ೫ ಗ್ರಾಮಗಳನ್ನು ಒಳಗೊಳ್ಳುತ್ತದೆ.

ಕೃಷಿ ಬದಲಾಯಿಸಿ

ಗ್ರಾಮದ ಪ್ರಮುಖ ಬೆಳೆಗಳು ಕಬ್ಬು, ಬತ್ತ ಮತ್ತು ತರಕಾರಿ. ಉಪಕಸುಬುಗಳಾದ ಮೀನುಗಾರಿಕೆ ಮತ್ತು ಹೈನುಗಾರಿಕೆ ಕೂಡ ಪ್ರಮುಖವಾಗಿವೆ.

ಜನಸಂಖ್ಯೆ ಬದಲಾಯಿಸಿ

೨೦೧೧ರ ಜನಗಣತಿಯ ಪ್ರಕಾರ ಜನಸಂಖ್ಯೆ ೯೩೯೨ ಹೊಂದಿದ್ದು ೪೮೨೪ ಗಂಡಸರು ಹಾಗೂ ೪೫೬೮ ಹೆಂಗಸರು ವಾಸಿಸುತ್ತಿದ್ದಾರೆ.

ದೇವಾಲಯಗಳು ಬದಲಾಯಿಸಿ

ದೊಡ್ಡರಸಿನಕೆರೆ ಗ್ರಾಮವು ಸುಮಾರು ೨೦ ದೇವಾಲಯಗಳನ್ನು ಹೊಂದಿದ್ದು, ಅದರಲ್ಲಿ ಪ್ರಮುಖವಾದವು, ಏಳೂರಮ್ಮ, ಕಾಳಮ್ಮ, ಕ್ಯಾತಮ್ಮ, ಹಿರಿಯಮ್ಮ, ಸಣ್ಣಕ್ಕಿರಾಯ, ಚೋಳರ ಕಾಲದ ಪೂರ್ವಾಭಿಮುಖ ಪಿಳ್ಳೆ ಜುಟ್ಟುಳ ಹನುಮಂತರಾಯ, ಪೊeತಲಿಂಗೇಶ್ವರ. ಚೋಳರ ಕಾಲದ 'ಮಾಧವರಾಯ' ದೇವಾಲಯ ಶಿಥಿಲಾವಸ್ಥೆಯಲ್ಲಿದೆ.

ಹಬ್ಬಗಳು ಬದಲಾಯಿಸಿ

ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಯುವ 'ಸಿಡಿಹಬ್ಬ' ಪ್ರಮುಖವಾದುದು.

ಪ್ರಮುಖ ವ್ಯಕ್ತಿಗಳು ಬದಲಾಯಿಸಿ

  • ದೊಡ್ಡರಸಿನಕೆರೆ ತೋಟಶೆಟ್ಟಿ - ನಾಟಕಕಾರ
  • ಅಂಬರೀಷ್ - ನಟ, ರಾಜಕಾರಣಿ
  • ಡಿ. ಸಿ. ತಮ್ಮಣ್ಣ - ರಾಜಕಾರಣಿ