ದೀನಾನಾಥ್ ಬಾತ್ರಾ ( ದಿನಾ ನಾಥ್ ಬಾತ್ರಾ ಎಂದು ಸಹ ಉಚ್ಚರಿಸಲಾಗುತ್ತದೆ) [೨] ಇವರು ಭಾರತೀಯ ಶಿಕ್ಷಣತಜ್ಞ ಮತ್ತು ಸಾಮಾಜಿಕ ಕಾರ್ಯಕರ್ತರು. ಶಿಕ್ಷಣ ಸುಧಾರಣೆಯಲ್ಲಿ ಮತ್ತು ಪಠ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಸಾಂಪ್ರದಾಯಿಕ ಭಾರತೀಯ ಮೌಲ್ಯಗಳನ್ನು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ರೂಪಿಸುವ ಗುರಿಯನ್ನು ಹೊಂದಿರುವ ವಿವಿಧ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಅರ್ ಎಸ್ ಎಸ್) ನಡೆಸುತ್ತಿರುವ ವಿದ್ಯಾ ಭಾರತಿಯ ಶಾಲಾಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದರು[೨]. ಇವರು ಶಿಕ್ಷಣ ಕಾರ್ಯಕರ್ತರ ಸಂಘಟನೆಗಳಾದ ಶಿಕ್ಷಾ ಬಚಾವೋ ಆಂದೋಲನ ಸಮಿತಿ ಮತ್ತು ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್ ಅನ್ನು ಸ್ಥಾಪಿಸಿದ್ದಾರೆ[೩] [೪] [೫].

ದೀನನಾಥ್ ಬಾತ್ರಾ
ಜನನ (1930-03-03) ೩ ಮಾರ್ಚ್ ೧೯೩೦ (ವಯಸ್ಸು ೯೪)[೧]
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಶಿಕ್ಷಣತಜ್ಞ,ಸಾಮಾಜಿಕ ಕಾರ್ಯಕರ್ತ

ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಹೆಚ್ಚು ಧನಾತ್ಮಕವಾಗಿ ಚಿತ್ರಿಸಲು ಶಾಲಾ ಪಠ್ಯಪುಸ್ತಕಗಳಲ್ಲಿ ಬದಲಾವಣೆಗಳನ್ನು ಪ್ರತಿಪಾದಿಸುವಲ್ಲಿ ಬಾತ್ರಾ ವಿಶೇಷವಾಗಿ ಶ್ರಮಿಸುತ್ತಿದ್ದಾರೆ. ಪಠ್ಯಕ್ರಮದಲ್ಲಿ ಪಾಶ್ಚಿಮಾತ್ಯ ದೃಷ್ಟಿಕೋನ ಪಕ್ಷಪಾತವಾಗುತ್ತದೆ ಎಂಬುದು ಇವರ ಅಭಿಪ್ರಾಯ. ಇವರು ಭಾರತದ ಶಿಕ್ಷಣವ್ಯವಸ್ತೆಯ ದೃಷ್ಟಿಕೋನವನ್ನು ಸರಿಪಡಿಸಲು ಪ್ರಯತ್ನಿಸಿತಿದ್ದಾರೆ. ಇವರು ಶಿಕ್ಷಣ ಮತ್ತು ಭಾರತೀಯ ಸಂಸ್ಕೃತಿಯ ಕುರಿತು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ[೬][೭][೮][೯][೧೦][೧೧]

ಇವರ ಪುಸ್ತಕ ಮತ್ತು ಅಭಿಪ್ರಾಯಗಳು ವಿವಾದಗಳನ್ನು ಮತ್ತು ಚರ್ಚೆಗಳನ್ನು ಹುಟ್ಟುಹಾಕಿವೆ. ವಿಶೇಷವಾಗಿ ಪಠ್ಯಪುಸ್ತಕಗಳ ವಿಷಯಕ್ಕೆ ಸಂಬಂಧಿಸಿದಂತೆ,

ದೀನಾನಾಥ್ ಬಾತ್ರಾ ಅವರು ಶಿಕ್ಷಣ ಸುಧಾರಣೆಯ ದೃಷ್ಟಿಕೋನವನ್ನು ಉತ್ತೇಜಿಸಲು ಸ್ಥಾಪಿಸಿದ ಶಿಕ್ಷಾ ಬಚಾವೋ ಆಂದೋಲನ ಸಮಿತಿ (SBAS) ನಂತಹ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅವರ ಪ್ರಯತ್ನಗಳು ಪ್ರಶಂಸೆ ಮತ್ತು ಟೀಕೆ ಎರಡನ್ನೂ ಗಳಿಸಿವೆ. ಇವರ ಬೆಂಬಲಿಗರು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ. ವಿಮರ್ಶಕರು ಶಿಕ್ಷಣ ವ್ಯವಸ್ಥೆಯ ಮೇಲೆ ನಿರ್ದಿಷ್ಟ ಸೈದ್ಧಾಂತಿಕ ಕಾರ್ಯಸೂಚಿಯನ್ನು ಹೇರುವ ಪ್ರಯತ್ನವೆಂದು ವಾದಿಸುತ್ತಾರೆ.

ಒಟ್ಟಾರೆಯಾಗಿ, ದೀನಾನಾಥ್ ಬಾತ್ರಾ ಅವರು ಭಾರತದಲ್ಲಿ ಶಿಕ್ಷಣ ಸುಧಾರಣೆಯ ಕುರಿತು ಪ್ರವಚನದಲ್ಲಿ ಪ್ರಮುಖ ವ್ಯಕ್ತಿಯಾಗಿ ಉಳಿದಿದ್ದಾರೆ, ವಿಶೇಷವಾಗಿ ಪಠ್ಯಕ್ರಮದಲ್ಲಿ ಸಾಂಸ್ಕೃತಿಕ ಮೌಲ್ಯಗಳ ಪಾತ್ರಕ್ಕೆ ಸಂಬಂಧಿಸಿದಂತೆ.

ವೈಯಕ್ತಿಕ ಜೀವನ ಬದಲಾಯಿಸಿ

ದೀನನಾಥ್ ಬಾತ್ರಾ ಅವರು ೧೯೩೨ ರಲ್ಲಿ ಪಂಜಾಬಿನ ಡೇರಾ ಗಾಜಿ ಖಾನ್‌ನ (ಈಗಿನ ಪಾಕಿಸ್ತಾನ )ಪಂಜಾಬಿ ಹಿಂದೂ ಕುಟುಂಬದಲ್ಲಿ ಜನಿಸಿದರು. ಇವರು ಭಾರತದ ಪಂಜಾಬ್‌ನ ಪಟಿಯಾಲ ಜಿಲ್ಲೆಯ ಡೇರಾ ಬಸ್ಸಿಯಲ್ಲಿ ದಯಾನಂದ ಆಂಗ್ಲೋ-ವೇದಿಕ್ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದರು. ೧೯೬೬ ರಲ್ಲಿ, ಅವರು ಅರ್ ಎಸ್ ಎಸ್ ಸ್ಥಾಪಿಸಿದ ಮೊದಲ ಶಾಲೆಯಾದ ಕುರುಕ್ಷೇತ್ರದ ಗೀತಾ ಹಿರಿಯ ಶಾಲೆಯ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡರು [೧೨]. ಇವರು ಒಬ್ಬ ಆರ್‌ಎಸ್‌ಎಸ್ ನ ಪ್ರಚಾರಕರು [೧೨].

ಕ್ರಿಯಾಶೀಲತೆ ಬದಲಾಯಿಸಿ

ವಿದ್ಯಾ ಭಾರತಿ ಬದಲಾಯಿಸಿ

ಅವರು ೧೯೯೦ ರಲ್ಲಿ ಆರ್‌ಎಸ್‌ಎಸ್ ಶಾಲೆಗಳ ನೆಟ್‌ವರ್ಕ್ ವಿದ್ಯಾಭಾರತಿಯ ಪೂರ್ಣ ಸಮಯದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು [೧೨] [೧೩] [೧೪].

ಸೋನಿಯಾ ಗಾಂಧಿಗೆ ನೋಟಿಸ್ ಬದಲಾಯಿಸಿ

೩೦ ಮೇ ೨೦೦೧ ರಂದು, ಬಾತ್ರಾ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರಿಗೆ ಕಾನೂನುಬದ್ಧ ನೋಟಿಸ್ ನೀಡಿದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ತನ್ನ ಸರ್ವಸದಸ್ಯ ಅಧಿವೇಶನದಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ ವಿದ್ಯಾಭಾರತಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಒಳಗೊಂಡಿದೆ ಎಂದು ಬಾತ್ರಾ ಅರೋಪಿಸಿದ್ದಾರೆ. ವಿದ್ಯಾಭಾರತಿ ಬಳಸಿರುವ ಪಠ್ಯಪುಸ್ತಕಗಳು ಅಲ್ಪಸಂಖ್ಯಾತರ ಬಗ್ಗೆ ನಕಾರಾತ್ಮಕ ವರ್ತನೆ ಮತ್ತು ಹಿಂಸೆಯನ್ನು ಉತ್ತೇಜಿಸುತ್ತದೆ, ಜಾತಿ ವ್ಯವಸ್ಥೆ, ಸತಿ ಮತ್ತು ಬಾಲ್ಯ ವಿವಾಹವನ್ನು ಭಾರತೀಯ ಸಂಸ್ಕೃತಿಯ ಭಾಗವೆಂದು ಸಮರ್ಥಿಸುತ್ತದೆ ಮತ್ತು ಮೂಢನಂಬಿಕೆಗಳು ಮತ್ತು ವೈಜ್ಞಾನಿಕ ಮನೋಭಾವಕ್ಕೆ ಪ್ರತಿಕೂಲವಾದ ಸಂಗತಿಗಳನ್ನು ಒಳಗೊಂಡಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ತನ್ನ ನಿರ್ಣಯದಲ್ಲಿ ಹೇಳಿತ್ತು[೨]

ಎನ್.ಸಿ.ಇ.ಅರ್.ಟಿ ವಿರುದ್ಧ ದಾವೆ ಬದಲಾಯಿಸಿ

೨೦೦೬ ರಲ್ಲಿ, ಬಾತ್ರಾ ಅವರು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್.ಸಿ.ಇ.ಅರ್.ಟಿ) ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿದರು. ಇದರಲ್ಲಿ ಅವರು ಮಾಧ್ಯಮಿಕ ಶಾಲೆಯ ಇತಿಹಾಸ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ವಿಷಯಗಳ ಬಗ್ಗೆ ೭೦ ಆಕ್ಷೇಪಣೆಗಳನ್ನು ಮಾಡಿದರು. ಇವುಗಳಲ್ಲಿ ಮುಖ್ಯವಾದವುಗಲಾವುದೆಂದರೆ

ಆಕ್ಷೇಪಣೆಗಳನ್ನು ಅಧ್ಯಯನ ಮಾಡಲು ಸಮಿತಿಯೊಂದನ್ನು ರಚಿಸುವಂತೆ ದೆಹಲಿ ಹೈಕೋರ್ಟ್ ಎನ್.ಸಿ.ಇ.ಅರ್.ಟಿ ಗೆ ಸೂಚಿಸಿತು. ಮೂರು ಸದಸ್ಯರ ಪೀಠ ಆಕ್ಷೇಪಿಸಲಾದ ೭೦ ವಿಷಯಗಳಲ್ಲಿ ೩೭ನ್ನುಆ ವರ್ಷದಿಂದ ಈಗಾಗಲೇ ಬದಲಾಯಿಸಲಾಗಿದೆ ಮತ್ತು ೨೯ ಬದಲಾಗದೆ ಉಳಿಯಬೇಕು ಹಾಗು ೪ ಅನ್ನು ಮಾರ್ಪಡಿಸಬೇಕು ಎಂದು ಸುಚಿಸಿತು. ಇಂಡೋ-ಆರ್ಯನ್ನರು ಗೋಮಾಂಸ ತಿನ್ನುತ್ತಾರೆ ಎಂಬ ಹೇಳಿಕೆಯನ್ನು ಮಾರ್ಪಡಿಸಲು ಸಮಿತಿಯು ನಿರಾಕರಿಸಿತು[೧೫].

ಲೈಂಗಿಕ ಶಿಕ್ಷಣಕ್ಕೆ ವಿರೋಧ ಬದಲಾಯಿಸಿ

೧೫ ಮೇ ೨೦೦೭ ರಂದು, ಬಾತ್ರಾ ಅವರ ಸಲಹೆಯ ಮೇರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವರು ಲೈಂಗಿಕ ಶಿಕ್ಷಣ ಭಾರತೀಯ ಮೌಲ್ಯಗಳಿಗೆ ವಿರುದ್ದವಾಗಿದೆ ಎಂಬ ಕಾರಣಕ್ಕಾಗಿ ರಾಜ್ಯದ ಪಠ್ಯಕ್ರಮದಿಂದ ತೆಗೆದುಹಾಕಿದರು. ಲೈಂಗಿಕ ಶಿಕ್ಷಣದ ಬದಲಾಗಿ ಯೋಗವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕೆಂದು ಬಾತ್ರಾ ಸಲಹೆ ಮಾಡಿದರು[೧೬]. ಇದನ್ನ ಎಸ್. ಆನಂದಿ ಟೀಕಿಸಿ ಲೈಂಗಿಕ ಶಿಕ್ಷಣವು ಮಕ್ಕಳ ಲೈಂಗಿಕ ದೌರ್ಜನ್ಯವನ್ನು ಎದುರಿಸಲು ಸಹಾಯಮಾಡುತ್ತದೆ ಮತ್ತು ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಪ್ರೋತ್ಸಾಹಿಸುವ ಮೂಲಕ ಎಚ್.ಐ.ವಿ/ಏಡ್ಸ್ ಹರಡುವಿಕೆಯನ್ನು ನಿಯಂತ್ರಿಸುತ್ತದೆ. ಮೂಲಭೂತವಾದಿ ಸಂಘಟನೆಗಳು ಲೈಂಗಿಕತೆಯನ್ನು ನಿಗ್ರಹಿಸಲು ಪ್ರಯತ್ನಿಸುತ್ತಿವೆ ಎಂದು ಟೀಕಿಸಿದರು [೧೭]. ವರ್ಷದ ನಂತರ ಶಿಕ್ಷಾ ಬಚಾವೋ ಆಂದೋಲನ ಸಮಿತಿಯಿಂದ, ಬಾತ್ರಾ ಪತ್ರವೊಂದನ್ನು ಬರೆದು "ಲೈಂಗಿಕ ಶಿಕ್ಷಣವು ವಿದ್ಯಾರ್ಥಿ ಶಿಕ್ಷಕರ ಸಂಬಂಧವನ್ನು ಪುರುಷ ಮತ್ತು ಮಹಿಳೆಯ ಸಂಬಂಧವಾಗಿ ಪರಿವರ್ತಿಸುತ್ತದೆ. ಮಹಿಳೆಯ ವಿನಮ್ರತೆಯನ್ನು ಉಲ್ಲಂಘಿಸಿದ ಆಧಾರದ ಮೇಲೆ ಪೋಷಕರು ಬೋಧಕರಿಗೆ ಕಾನೂನು ಕ್ರಮಗೊಳ್ಳಬಹುದಾಗಿದೆ" ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು[೧೮].

ರಾಮಾನುಜನ್ ಅವರ ಪ್ರಬಂಧದ ವಿರುದ್ಧ ಅರ್ಜಿ ಬದಲಾಯಿಸಿ

೨೦೦೮ ರಲ್ಲಿ, ಬಾತ್ರಾ ಅವರು ಶಿಕ್ಷಾ ಬಚಾವೋ ಆಂದೋಲನ ಸಮಿತಿ ಪರವಾಗಿ ದೆಹಲಿ ಹೈಕೋರ್ಟ್‌ಗೆ ಎಕೆ ರಾಮಾನುಜನ್ ರವರ ಪ್ರಬಂಧ "ಮೂರು ನೂರು ರಾಮಾಯಣಗಳು: ಐದು ಉದಾಹರಣೆಗಳು ಮತ್ತು ಅನುವಾದದ ಮೂರು ಚಿಂತನೆಗಳು" ಇದನ್ನು ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ಪಠ್ಯಕ್ರಮದಿಂದ ತೆಗೆದುಹಾಕಲು ಕೋರಿದರು[೧೩] [೧೯]. ಪ್ರಪಂಚದಾದ್ಯಂತ ಕಂಡುಬರುವ ರಾಮಾಯಣ ದ ವಿವಿಧ ಸ್ವರೂಪವನ್ನು ಈ ಪ್ರಬಂಧವು ಚರ್ಚಿಸುತ್ತದೆ[೧೯]. ಅರ್ಜಿಗೆ ಪ್ರತಿಕ್ರಿಯೆಯಾಗಿ, ವಿಶ್ವವಿದ್ಯಾಲಯವು ಪ್ರಬಂಧವನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ರಚಿಸಿತು. ಸಮಿತಿಯು ಇದರಲ್ಲಿ ವಿವಾದವೇನಿಲ್ಲಎಂದು ಭಾವಿಸಿತು[೧೯]. ಆದಾಗ್ಯೂ, ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯು ಪಠ್ಯಕ್ರಮದಿಂದ ಪ್ರಬಂಧವನ್ನು ತೆಗೆದುಹಾಕಲು ನಿರ್ಧರಿಸಿತು. ಇದು ಎಡ ಪಂಥೀಯ ವಿದ್ವಾಂಸರಿಂದ ವ್ಯಾಪಕವಾಗಿ ಟೀಕಿಸಲ್ಪಟ್ಟಿತು, ಆದರೆ ಶಿಕ್ಷಾ ಬಚಾವೋ ಆಂದೋಲನ ಸಮಿತಿಯ ಕೆಲವು ವಿಭಾಗದ ಶಿಕ್ಷಣತಜ್ಞರು ಇದನ್ನ ಸ್ವಾಗತಿಸದರು. [೧೯]

ಲೇಖಕರಿಗೆ ಕಾನೂನು ನೋಟಿಸ್ ಬದಲಾಯಿಸಿ

೩ ಮಾರ್ಚ್ ೨೦೧೦ ರಂದು, ಬಾತ್ರಾ ಅವರು ವೆಂಡಿ ಡೊನಿಗರ್, ಪೆಂಗ್ವಿನ್ ಗ್ರೂಪ್ ಯು.ಎಸ್.ಎ ಮತ್ತು ಪೆಂಗ್ವಿನ್ ಇಂಡಿಯಾ ಅಂಗಸಂಸ್ಥೆಗೆ ಕಾನೂನು ನೋಟಿಸ್ ಅನ್ನು ಕಳುಹಿಸಿದರು, ಡೋನಿಗರ್ ಅವರ ಪುಸ್ತಕದ ಮೇಲೆ ಹಲವಾರು ಆಕ್ಷೇಪಣೆಗಳನ್ನು ಮಾಡಿದರು[೨೦]. ೨೦೧೧ ರಲ್ಲಿ, ಬಾತ್ರಾ ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295A ಅಡಿಯಲ್ಲಿ ಡೋನಿಗರ್ ಮತ್ತು ಪೆಂಗ್ವಿನ್ ಪಬ್ಲಿಷಿಂಗ್ ವಿರುದ್ಧ ಮೊಕದ್ದಮೆ ಹೂಡಿದರು. ಈ ಸೆಕ್ಷನ್ ಧಾರ್ಮಿಕ ಸಮುದಾಯಗಳ ಭಾವನೆಗಳಿಗೆ ಧಕ್ಕೆ ಮಾಡುವ ಅಥವಾ ಅಪರಾಧ ಮಾಡುವ ಉದ್ದೇಶದಿಂದ ಶಿಕ್ಷೆ ವಿಧಿಸುತ್ತದೆ [೨೧]. ಫೆಬ್ರವರಿ ೨೦೧೪ ರಲ್ಲಿ, ಒಪ್ಪಂದದ ಪ್ರಕಾರ, ಪೆಂಗ್ವಿನ್ ಇಂಡಿಯಾ ಪುಸ್ತಕದ ಎಲ್ಲಾ ಮಾರಾಟವಾಗದ ಪ್ರತಿಗಳನ್ನು ಹಿಂತೆಗೆದುಕೊಂಡಿತು ಮತ್ತು ಅವುಗಳನ್ನು ನಾಶಮಾಡಿತು, ಇದು ಎಡಪಂಥೀಯರಿಂದ ತೀವ್ರ ಟೀಕೆಗೆ ಒಳಗಾಯಿತು[೨೨] [೨೩] [೨೪] [೨೫] [೨೬].

ಮುಂದಿನ ವರ್ಷದಲ್ಲಿ ಅವರು ಫ್ರಂಟ್‌ಲೈನ್ ಮ್ಯಾಗಜೀನ್‌ನ ಸಂಪಾದಕರಾದ ಎನ್. ರಾಮುರವರಿಗೆ ಶಾರ್ಟ್ ಕಟ್ ಟು ಹಿಂದೂ ರಾಷ್ಟ್ರ ಎಂಬ ಶೀರ್ಷಿಕೆಯ ಮುಖಪುಟ ಲೇಖನವನ್ನು ಮುದ್ರಿಸಿದ್ದಕ್ಕಾಗಿ ಕಾನೂನು ನೋಟಿಸ್ ಕಳುಹಿಸಿದರು[೧೩] [೨೭]. ಮಾರ್ಚ್ ೩,೨೦೧೪ ರಂದು, ಬಾತ್ರಾ ಅಲೆಫ್ ಬುಕ್ ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದರು, ವೆಂಡಿ ಡೊನಿಗರ್ ಅವರ ಮತ್ತೊಂದು ಪುಸ್ತಕ, ಆನ್ ಹಿಂದೂಯಿಸಂ ಅನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು [೨೮].

ಬಾತ್ರಾ  ಅವರು ಮೇ ೨೦೧೪ ರಲ್ಲಿ, ಶೈಕ್ಷಣಿಕ ಪ್ರಕಾಶಕರಾದ ಓರಿಯಂಟ್ ಬ್ಲ್ಯಾಕ್‌ಸ್ವಾನ್ ರವರಿಗೆ ಕಾನೂನು ನೋಟಿಸ್ ನೀಡಿದರು ಪುಸ್ತಕ ಕಮ್ಯುನಲಿಸಂ ಅಂಡ್ ಸೆಕ್ಷುಯಲ್ ವಯಲೆನ್ಸ: ಅಹಮದಾಬಾದ್ ಸಿನ್ಸ್ ೧೯೬೯ - ಲೇಖಕ ಮೇಘಾ ಕುಮಾರ್ ಎಂಬ ಪುಸ್ತಕವು ಆರ್‌ಎಸ್‌ಎಸ್‌ ನ ಹೆಸರು ಕೆಡಿಸುವ ಮತ್ತು ಅವಹೇಳನೆ ಮಾಡುತ್ತದೆ ಎಂದು ಬಾತ್ರಾ ಆಕ್ಶೇಪಿಸಿದ್ದರು[೨೯]. ಪ್ರಕಾಶಕರು ಈ ಪುಸ್ತಕ ಬಿಡುಗಡೆಯನ್ನು ತಡೆಹಿಡಿದರು. ಮುಂದುವರೆದು  ಪ್ರಕಾಶಕರು ತಮ್ಮ ಪ್ರಕಾಶನದಲ್ಲಿ ಪ್ರಕಟವಾಗುತ್ತಿದ್ದ ಮತ್ತೊಂದು ಪುಸ್ತಕ  ಪ್ಲಾಸಿ ಟು ಪಾರ್ಟಿಷನ್: ಎ ಹಿಸ್ಟರಿ ಆಫ್ ಮಾಡ್ರನ್ ಇಂಡಿಯ - ಲೇಖಕ ಶೇಖರ್ ಬಂಡೋಪಾಧ್ಯಾಯ ಪುಸ್ತಕವನ್ನು ಮೌಲ್ಯಮಾಪನ ಮಾಡುತ್ತೇವೆ ಎಂದು ವಿವರಿಸಿದರು[೩೦].

ಪಠ್ಯಪುಸ್ತಕ ಕರ್ತೃತ್ವ ಬದಲಾಯಿಸಿ

೩೦ ಜೂನ್ ೨೦೧೪ ರಂದು, ಗುಜರಾತ್‌ನ ಭಾರತೀಯ ಜನತಾ ಪಾರ್ಟಿ ಸರ್ಕಾರವು ತನ್ನ ಸುತ್ತೋಲೆಯಲ್ಲಿ ಬಾತ್ರಾ ಅವರು ಬರೆದ ಆರು ಪಠ್ಯ ಪುಸ್ತಕಗಳನ್ನು ರಾಜ್ಯ ಶಿಕ್ಷಣ ಪಠ್ಯಕ್ರಮದ ಪೂರಕ ಸಾಹಿತ್ಯವೆಂದು ಘೋಷಿಸಿತು[೩೧] [೩೨]. ಮೂಲತಃ ಹಿಂದಿಯಲ್ಲಿ ಬರೆಯಲ್ಪಟ್ಟ ಈ ಪುಸ್ತಕಗಳನ್ನು ಗುಜರಾತಿಗೆ ಅನುವಾದಿಸಲಾಗಿದೆ. ರಾಜ್ಯ ಶಿಕ್ಷಣ ಸಚಿವ ಭೂಪೇಂದ್ರಸಿನ್ಹ್ ಚುಡಾಸಮಾ ಅವರು ಈ ಪುಸ್ತಕಗಳು ಕಡ್ಡಾಯ ಎಂದು ಹೇಳಿದ್ದಾರೆ[೩೧] [೩೩]. ಗುಜರಾತ್‌ನ ನರೇಂದ್ರ ಮೋದಿ ಸರ್ಕಾರವ ಈ ಪುಸ್ತಕಗಳನ್ನು ಶಿಕ್ಷಣಕ್ಕೆ ಮೊದಲ ಬಾರಿಗೆ ಬಳಸಿತು ಎಂದು ಬಾತ್ರಾ ಸೂಚಿಸಿದ್ದಾರೆ[೩೪]. ಪುಸ್ತಕಗಳು ಮೋದಿಯವರ ಮುನ್ನುಡಿಯನ್ನು ಹೊಂದಿವೆ[೩೫].

ಪುರಾತನ ಭಾರತದಲ್ಲಿ ಕಾರುಗಳನ್ನು ಆವಿಷ್ಕರಿಸಲಾಗಿದೆ ಎಂದು ಈ ಪುಸ್ತಕಗಳು ಪ್ರತಿಪಾದಿಸುತ್ತವೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮುಂತಾದ ದೇಶಗಳನ್ನು ಒಳಗೊಂಡಿರುವ ಅಖಂಡ ಭಾರತದ ಭೌಗೋಳಿಕ ನಕ್ಷೆಯನ್ನು ರಚಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಯಿತು [೩೬] . ಇದು ಇತಿಹಾಸಕಾರರಿಂದ ತೀವ್ರ ಟೀಕೆಗಳನ್ನು ಎದುರಿಸಿತು. ಪತ್ರಿಕಾ ಇತಿಹಾಸಕಾರರಾದ ರೊಮಿಲಾ ಥಾಪರ್ ಅವರು ಈ ಪುಸ್ತಕಗಳು "ಇತಿಹಾಸವಲ್ಲ, ಆದರೆ ಕಲ್ಪನೆ" ಎಂದು ಹೇಳಿದರು [೩೭]. ಇನ್ನೊಬ್ಬ ಇತಿಹಾಸಕಾರ ಇರ್ಫಾನ್ ಹಬೀಬ್ ಇದನ್ನು "ಹಾಸ್ಯಾಸ್ಪದ ಆದರೆ ಭಯಾನಕ" ಎಂದು ವಿವರಿಸಿದ್ದಾರೆ [೩೭]. ರಾಜಕೀಯ ಕಾರ್ಯಕ್ರಮದ ಭಾಗವಾಗಿ ಪುಸ್ತಕಗಳನ್ನು ಪರಿಚಯಿಸಲಾಗುತ್ತಿದೆ ಎಂದು ಅವರು ಹೇಳಿದರು. "ಇವರುಗಳಿಗೆ ಯಾವುದೇ ಪಾಂಡಿತ್ಯ ಅಥವ ಯಾವುದೇ ಸಾಧನೆ ಮಾಡಿದ ದಾಖಲೆ ಇದೆಯೇ" ಎಂದು ಕೇಳಿದರು[೩೭].

ಆಗಸ್ಟ್ ೧ ರಂದು, ವಡೋದರಾದ ಸ್ಥಳೀಯ ಕಾಂಗ್ರೆಸ್ ವಿಭಾಗವು ಪುಸ್ತಕಗಳ ಮುಖಪುಟಗಳನ್ನು ಸುಟ್ಟು ಪ್ರತಿಭಟಿಸಿತು. ಮುಖಪುಟದಲ್ಲಿ ಕೆಲವು ರಾಷ್ಟ್ರೀಯ ನಾಯಕರ ಚಿತ್ರಗಳಿದಿದ್ದರಿಂದ ಇದು ರಾಷ್ಟ್ರೀಯ ನಾಯಕರಿಗೆ ಮಾಡಿದ ಅವಮಾನ ಎಂದು ನಗರ ಬಿಜೆಪಿ ಘಟಕ ಬಣ್ಣಿಸಿತು[೩೮].

ಹರಿಯಾಣ ಶಿಕ್ಷಣ ಸಮಿತಿಗೆ ನೇಮಕಾತಿ ಬದಲಾಯಿಸಿ

೧೨ ನವೆಂಬರ್ ೨೦೧೪ ರಂದು, ಹೊಸದಾಗಿ ಚುನಾಯಿತವಾದ ಹರಿಯಾಣ ರಾಜ್ಯದ ಬಿಜೆಪಿ ಸರ್ಕಾರವು ಬಾತ್ರಾ ಅವರನ್ನು ಶಿಕ್ಷಣತಜ್ಞರ ಹೊಸ ಸಮಿತಿಗೆ ನೇಮಿಸುವುದಾಗಿ ಘೋಷಿಸಿತು. ಸಮಿತಿಯು ರಾಜ್ಯದ ನಿವೃತ್ತ ಶಿಕ್ಷಕರು ಮತ್ತು ಪ್ರಾಧ್ಯಾಪಕರನ್ನು ಒಳಗೊಂಡಿರುತ್ತದೆ [೩೯].

ಎನ್.ಸಿ.ಇ.ಅರ್.ಟಿ ಪಠ್ಯಪುಸ್ತಕದ ಆಕ್ಷೇಪಣೆಗಳು ಬದಲಾಯಿಸಿ

ಜುಲೈ ೨೦೧೭ ರಲ್ಲಿ, ಅವರು ವಿವಿಧ ವಿಷಯಗಳ ಎನ್.ಸಿ.ಇ.ಅರ್.ಟಿ ಪಠ್ಯಪುಸ್ತಕಗಳ ವಿರುದ್ಧ ಆಕ್ಷೇಪಣೆಗಳ ಮತ್ತೊಂದು ಪಟ್ಟಿಯನ್ನು ಸಲ್ಲಿಸಿದರು [೪೦] [೪೧] [೩೬] [೪೨].

ಪ್ರಕಟಣೆಗಳು ಬದಲಾಯಿಸಿ

  • ದಿ ಎನಿಮಿಸ್ ಆಫ್ ಇಂಡಿಯನೈಷನ್:ದಿ ಚಿಲ್ಡ್ರನ್ ಆಫ್ ಮಾರ್ಕ್ಸ್, ಮೆಕಲೆ ಅಂಡ್ ಮದರಸ ,೨೦೦೧[೪೩]
  • ಭಾರತೀಯ ಶಿಕ್ಶಕಾ ಸ್ವರೂಪ್(ಹಿಂದಿ) ಪ್ರಭಾತ್ ಪ್ರಕಾಶನ ೨೦೧೪. ಪುಟ ೨೭೨ ISBN 9789350489826 [೧] [೪೪]

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ ೧.೨ "Bharatiya Shiksha Ka Swaroop" (in Hindi). Prabhat Prakashan. Retrieved 14 November 2014.{{cite web}}: CS1 maint: unrecognized language (link)
  2. ೨.೦ ೨.೧ ೨.೨ "Vidya Bharati serves notice on Sonia". The Tribune. 2 June 2001. Retrieved 23 May 2014.
  3. "Under the BJP India will not become regressive". en:Rediff. 23 April 2014. Retrieved 23 May 2014.
  4. Madhok, Diksha. "What the government of Gujarat is encouraging children to read is dismaying". Quartz India (in ಇಂಗ್ಲಿಷ್). Retrieved 2019-12-21.
  5. Nelson, Dean (2014-07-28). "Top Indian educationalist accused of racism over portrayal of criminal 'negroes'". The Daily Telegraph (in ಬ್ರಿಟಿಷ್ ಇಂಗ್ಲಿಷ್). ISSN 0307-1235. Retrieved 2019-12-21.
  6. ಬಾತ್ರಾ, ದೀನಾನಾಥ್ (೨೦೧೧). Prerna- Deep- Veeravrat - Param Saamarthy, Atmavat Sarvabhuteshu, Maa Ka Aahvaan, Pooja Ho To Aisi (Set of 4 Volumes). VIDYA BHARATI SANSKRITI SHIKSHA SANSTHAN, KURUKSHETRA. ISBN 9788193088647.
  7. ಬಾತ್ರಾ, ದೀನಾನಾಥ್ (೨೦೧೭). हमारा लक्ष्य- Our Goal. VIDYA BHARATI SANSKRITI SHIKSHA SANSTHAN, KURUKSHETRA. ISBN 9789385256226.
  8. ಬಾತ್ರಾ, ದೀನಾನಾಥ್ (೨೦೦೬). प्रेरणादीप: वीरव्रतम् - परमं सामर्थ्यम् - A Collection of Life Incidences of Great Men (Part-1). SAMSKRITA BHARATI. ISBN 8187276282.
  9. ಬಾತ್ರಾ, ದೀನಾನಾಥ್ (೨೦೧೬). वीरव्रत परम् सामर्थ्य (सच्चे वीरों के सच्चे कारनामें) - Veeravrata Param Samarthya (True Deeds of True Heroes. DELHI: SURUCHI PRAKASHAN. ISBN 9789381500392.
  10. ಬಾತ್ರಾ, ದೀನಾನಾಥ್ (೨೦೧೬). माँ का आह्वान (भारत माँ के सपूत) - Sons of Mother India. DELHI: SURUCHI PRAKASHAN. ISBN 9789381500422.
  11. ಬಾತ್ರಾ, ದೀನಾನಾಥ್ (೨೦೧೬). पूजा हो तो ऐसी (प्रेरणाप्रद सत्य कथाएँ) - Pooja Ho To Aisi (Inspirational True Stories). DELHI: SURUCHI PRAKASHAN. ISBN 9789384414412.
  12. ೧೨.೦ ೧೨.೧ ೧೨.೨ Mukerji, Debashish (15 November 1998). "Vidya Bharati: In the RSS tradition". The Week. Archived from the original on 15 September 2014. Retrieved 14 September 2014.
  13. ೧೩.೦ ೧೩.೧ ೧೩.೨ "Dinanath Batra: Here comes the book police". Live Mint. 12 February 2014. Retrieved 23 May 2014.
  14. Bakaya, Akshay (21 April 2009). "India: RSS Schools and the Hindu Nationalist Education Project". South Asia Citizens Web. Retrieved 16 September 2014.
  15. "NCERT refuses to chop beef mention". The Times of India. 27 May 2006. Retrieved 23 May 2014.
  16. "Madhya Pradesh bans sex education". The Indian Express. 16 March 2007. Retrieved 23 May 2014.
  17. Anandhi, S. (18 August 2007). "Sex Education Conundrum". Economic & Political Weekly. 42 (33): 18–24 Aug. 2007. JSTOR 4419913.
  18. "Former HRD minister feels sex education corrupts kids". Hindustan Times. 15 July 2007. Archived from the original on 24 May 2014. Retrieved 23 May 2014.
  19. ೧೯.೦ ೧೯.೧ ೧೯.೨ ೧೯.೩ "The rule of unreason". Frontline. 18 November 2011. Retrieved 23 May 2014.
  20. "Your Approach Is That of a Woman Hungry of Sex". Outlook India. 11 February 2014. Archived from the original on 18 March 2014. Retrieved 23 May 2014.
  21. Kapur, Ratna (15 February 2014). "Totalising history, silencing dissent". The Hindu. Retrieved 15 February 2014.
  22. "Outcry as Penguin India pulps 'alternative' history of Hindus". The Guardian. 13 February 2014. Retrieved 28 June 2014.
  23. "Global Reach—Censorship". American Libraries. 45 (9/10): 17. 2014. ISSN 0002-9769. JSTOR 24603863.
  24. Williams, John (2014-02-16). "Author Resigned to Ill Fate of Book in India". The New York Times (in ಅಮೆರಿಕನ್ ಇಂಗ್ಲಿಷ್). ISSN 0362-4331. Retrieved 2019-06-03.
  25. "Children of Marx, Macaulay are defaming Hinduism: Dinanath Batra". Firstpost. Retrieved 2019-06-03.
  26. Bal, Hartosh Singh (December 2014). "Publishers failed to stand up to Dina Nath Batra in ways that matter. What will this mean for the future of debate in India?". The Caravan (in ಇಂಗ್ಲಿಷ್). Retrieved 2019-12-30.
  27. "Shortcut to Hindu Rashtra" (PDF). Frontline. 13 August 2010. Archived from the original (PDF) on 8 May 2013. Retrieved 23 May 2014.
  28. "Doniger's book on Hinduism put on hold". The Indian Express. 11 March 2014. Retrieved 23 May 2014.
  29. "It's Batra again: Book on sexual violence in Ahmedabad riots is 'set aside' by publisher". The Indian Express. 3 June 2014. Retrieved 28 June 2014.
  30. "Under pressure, publisher puts books under 'review'". The Times of India. 4 June 2014. Retrieved 28 June 2014.
  31. ೩೧.೦ ೩೧.೧ "Dinanath Batra's books are a must-read in Gujarat schools". The Hindu. 25 July 2014. Retrieved 28 July 2014.
  32. "Man who got Wendy Doniger pulped is made 'must reading' in Gujarat schools". The Indian Express (in Indian English). 2014-07-25. Retrieved 2019-06-03.
  33. "Dinanath Batra's books to become supplementary read in Gujarat schools". Business Standard. Retrieved 28 July 2014.
  34. "Preparing a blueprint to 'Indianise' education: Dinanath Batra". Firstpost. 1 August 2014. Retrieved 2014-11-14.
  35. "Test-Tubes in Hastinapur". Outlook India. 22 September 2014. Retrieved 28 September 2014.
  36. ೩೬.೦ ೩೬.೧ "RSS' Dina Nath Batra wants Tagore, Urdu words removed from NCERT textbooks". Hindustan Times (in ಇಂಗ್ಲಿಷ್). 2017-07-24. Retrieved 2019-06-03.
  37. ೩೭.೦ ೩೭.೧ ೩೭.೨ "Historians slam Dina Nath Batra books, call them 'fantasy'". Hindustan Times. 28 July 2014. Archived from the original on 29 July 2014. Retrieved 28 July 2014.
  38. "Cong burns Dinanath Batra's books". The Times of India. 2 August 2014. Retrieved 11 December 2014.
  39. "Dinanath Batra to guide Haryana on education". Hindustan Times. 12 November 2014. Archived from the original on 12 November 2014. Retrieved 14 November 2014.
  40. "Remove Riots, English and Urdu Words, and Praise of Mughals from Textbooks: Dinanath Batra". The Wire. Retrieved 2019-06-03.
  41. "RSS ideologue Dinanath Batra stokes another controversy, wants Urdu words removed from Gujarat textbooks". Firstpost. Retrieved 2019-06-03.
  42. "Dina Nath Batra again: He wants Tagore, Urdu words off school texts". The Indian Express (in Indian English). 2017-07-24. Retrieved 2019-06-03.
  43. Bipan Chandra; Aditya Mukherjee; Mridula Mukherjee (1 January 2008). India Since Independence. Penguin Books India. p. 731. ISBN 978-0-14-310409-4. Retrieved 24 May 2014.
  44. "Dinanath Batra targets foreign universities in new book". Deccan Chronicle. 28 October 2014. Retrieved 14 November 2014.

ಬಾಹ್ಯ ಕೊಂಡಿಗಳು ಬದಲಾಯಿಸಿ