ತಾಳಗುಂದ ಒಂದು ಚಿಕ್ಕ ಹಳ್ಳಿಯಾಗಿದ್ದು ಇದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿದೆ. ಹಿಂದೆ ಈ ಊರನ್ನು ಸ್ಥಾನಗುಂಡೂರು ಎಂದೂ ಕರೆಯಲಾಗುತ್ತಿತ್ತು ಎಂದು ಹೇಳುತ್ತಾರೆ. ತಾಳಗುಂದವು ಕನ್ನಡದ ಮೊದಲ ರಾಜವಂಶವಾದ ಕದಂಬರ ಕಾರಣದಿಂದ ಪ್ರಖ್ಯಾತಿಯನ್ನು ಹೊಂದಿದೆ.[೧]

ತಾಳಗುಂದ
ಹಳ್ಳಿ
ನಾಲ್ಕನೇ ಶತಮಾನದ ಪ್ರಣವೇಶ್ವರ ಮಂದಿರ
ನಾಲ್ಕನೇ ಶತಮಾನದ ಪ್ರಣವೇಶ್ವರ ಮಂದಿರ
Country ಭಾರತ
StateKarnataka
DistrictShimoga District
Languages
 • OfficialKannada
Time zoneUTC+5:30 (IST)
PIN
577 450
Telephone code08187
Vehicle registrationKA-14

ಇತಿಹಾಸ ಬದಲಾಯಿಸಿ

ತಾಳಗುಂದ ಹಿಂದೆ ಒಂದು ಅಗ್ರಹಾರ ಆಗಿದ್ದುದಾಗಿ ತಿಳಿದು ಬರುತ್ತದೆ. ಅಂತಹ ಒಂದು ಅಗ್ರಹಾರದಲ್ಲಿಯೇ ಕನ್ನಡದ ಮೊದಲ ರಾಜವಂಶ ಎಂದು ಹೇಳಲ್ಪಡುವ ಕದಂಬ ವಂಶಸ್ಥನಾದ ಮಯೂರವರ್ಮನು ಬೆಳೆಯುತ್ತಾನೆ. ಹಾಗೆಯೇ ಕರ್ನಾಟಕದಲ್ಲಿ ದೊರೆತ ಮೊದಲ ಸಂಸ್ಕೃತ ಶಾಸನ ಇಲ್ಲಿಯೇ ಸಿಕ್ಕಿರುವುದು.

ಈಗಿನದು ಬದಲಾಯಿಸಿ

ನಾಲ್ಕನೇ ಶತಮಾನದಲ್ಲಿ ಕಟ್ಟಿದ ಪ್ರಣವೇಶ್ವರ ಮಂದಿರ ಇನ್ನೂ ಇಲ್ಲಿ ಇದೆ. ತಾಳಗುಂದ ಕಂಬ ಎಂದೇ ಹೆಸರುವಾಸಿಯಾದ ಕಲ್ಲಿನ ದೊಡ್ಡ ಕಂಬವೂ ಇಲ್ಲಿದೆ. ೧೬ ಶತಮಾನದ ಕೆಳದಿ ಚೆನ್ನಮ್ಮನ ಕಾಲದ ಶಾಸನವೂ ಇಲ್ಲಿ ಪತ್ತೆಯಾಗಿದೆ.[೨]

 
Talagunda Pillar inscription (455-460 AD) at Talagunda

ವಿಶೇಷತೆ ಬದಲಾಯಿಸಿ

ಇಲ್ಲಿ ದೊರೆತಿರುವ ಕಲ್ಲಿನ ಶಾಸನವನ್ನು ಕನ್ನಡದ ಮೊತ್ತಮೊದಲ ಶಾಸನವೆಂದು ಭಾರತೀಯ ಪುರಾತತ್ವ ಇಲಾಖೆಯಿಂದ ಅಧಿಕೃತವಾಗಿ ಹೇಳಲಾಗಿದೆ.[೩]

ಉಲ್ಲೇಖಗಳು ಬದಲಾಯಿಸಿ

  1. Talagunda – A Kadamba Bastion Archived 2015-11-27 ವೇಬ್ಯಾಕ್ ಮೆಷಿನ್ ನಲ್ಲಿ. , by Saurabh on October 10, 2013, puratattva.in/
  2. ತಾಳಗುಂದದಲ್ಲಿ ಶಾಸನ ಪತ್ತೆ, ವಿಜಯ ಕರ್ನಾಟಕ, ೦೨ಫೆಬ್ರವರಿ೨೦೧೭
  3. KANNADA A CENTURY OLDER THAN BELIEVED, Bangalore Mirror Bureau | Jan 13, 2017

ಇವನ್ನೂ ನೋಡಿ ಬದಲಾಯಿಸಿ

"https://kn.wikipedia.org/w/index.php?title=ತಾಳಗುಂದ&oldid=1125284" ಇಂದ ಪಡೆಯಲ್ಪಟ್ಟಿದೆ