ಚೊಗಚೆ (ಅಗಸೆ)
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
ಸೆಸ್ಬೇನಿಯಾ ಗ್ರಾಂಡಿಫ್ಲೋರ
Binomial name
ಸೆಸ್ಬೇನಿಯಾ ಗ್ರಾಂಡಿಫ್ಲೋರ
(L.) Poiret

ಚೊಗಚೆಅಥವಾ ಅಗಸೆ ಎಂದು ಕರೆಯಲಾಗುವ ಈ ಮರ ಸಣ್ಣಗಾತ್ರದ ಮರ.ಇದು ವೇಗವಾಗಿ ಬೆಳಯುವ ಮರ.ಇದುಫೇಬೇಸಿಕುಟುಂಬಕ್ಕೆ ಸೇರಿದ ಮರ. ಸೆಸ್ಬೇನಿಯಾ ಗ್ರಾಂಡಿಫ್ಲೋರಎನ್ನುವ ಹಸರು ಈ ಮರದ ಸಸ್ಯಶಾಸ್ತ್ರದ ಹೆಸರು.ಇದರ ಕಾಂಡ ನೆಟ್ಟಗಿರುತ್ತದೆ.ಎರಡು ವರ್ಷಗಳಲ್ಲಿ ಸುಮಾರು ೬ ಮೀ. ಬೆಳೆಯುತ್ತದೆ.

ಆವಾಸ ಬದಲಾಯಿಸಿ

ಇದರಮೂಲಸ್ಥಾನ ಉಷ್ಣವಲಯಎಶಿಯಪ್ರಾಂತ್ಯವು ಎಂದು ಭಾವಿಸಲಾಗುತ್ತದೆ.ಈ ಮರ ಭಾರತದೇಶ,ಮಲೇಸಿಯಾ, ಉತ್ತರ ಆಸ್ಟ್ರೇಲಿಯಾ, ಇಂಡೋನೇಶಿಯಾ,ಇನ್ನೂ ಪೀಲೆಪ್ಪೀನ್ಸು ದೇಶಗಳಲ್ಲಿ ವ್ಯಾಪಕವಾಗಿರುವ ಮರ ಆಗಿದೆ[೨]

ಮರ ಬದಲಾಯಿಸಿ

ಮರ ೩-೮ ಮೀ.ಗಳಸ್ಟು ಎತ್ತರ ಬೆಳಯುತ್ತದೆ.ಇದು ಶೀಘ್ರವಾಗಿ ಬೆಳಯುವ ಮರ. ಅಲ್ಪ ಸಂಖ್ಯೆಯ ಕೊಂಬೆಗಳನ್ನು ಹೊಂದಿರುತ್ತದೆ.ಎಲೆಗಳು ಗುಂಡಾಗಿ,ಸಕ್ರಮವಾಗಿ ಇರುತ್ತವೆ.ಹಸುರೆಲೆಗಳಿಂದ ಮತ್ತು ದೊಡ್ಡ ಹೂಗಳಿಂದ ಕೂಡಿದ ನೆತ್ತಿಯುಳ್ಳ ಈ ಮರ ಅಂದವಾದದ್ದು.ಎಲೆಗಳು ೧೦-೧೫ ಸೆಂ.ಮೀಮ್ ಉದ್ದವಾಗಿರುತ್ತವೆ.೧೦-೨೦ ಎಳೆ ಎಲೆಗಳು ಜೋಡಿಯಾಗಿರುತ್ತವೆ.ಹಿಮಸುರಿ ವಾತವರಣ ಇದ್ದರೆ ಈ ಮರ ಬೆಳಯುವುದಿಲ್ಲ.ಇದು ಉಷ್ಣವಲಯದ ಮರ.ಇದು ಹೆಚ್ಚು ಕಾಲ ಬಾಳುವ ಮರವಲ್ಲ.ಮೃದುವಾದ ಕಾಂಡವನ್ನು ಹೊಂದಿದ್ದೆ.ತೊಗಟೆ ಬೂದುಬಣ್ಣಲ್ಲಿ ಇರುತ್ತದೆ.

ಹೂವುಗಳು ಬೆಳ್ಳಗೆ ಅಥವಾ ಕೆಂಪಾಗಿ ಇರುತ್ತವೆ.೨-೪ ಹುವ್ವುಗಳು ಗೊಂಚೆಲಾಗಿ ಬೆಳಯುತ್ತವೆ.೭.೫-೧೦.೦ ಸೆಂ.ಮೀ. ಉದ್ದವಾಗಿರುತ್ತವೆ. ಸಾಮಾನ್ಯವಾಗಿ ಇದು ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ಹೂ ಬಿಡುತ್ತದೆ. ಹೂವಿನ ರಚನೆ ಬಣ್ಣ ಮತ್ತು ಮಕರಂದ-ಇವೆಲ್ಲ ಚಿಟ್ಟೆಗಳಿಂದ ಅನ್ಯಪರಾಗಸ್ಪರ್ಶಕ್ಕೆ ಅನುಕೂಲಿಸುವಂತೆ ಮಾರ್ಪಟ್ಟು ವೈಶಿಷ್ಟ್ಯಪುರ್ಣವಾಗಿವೆ. ಕಾಯಿ ಚಪ್ಪಟವಾಗಿರುತ್ತದೆ.ಹಸಿರುಬಣ್ನದಲ್ಲಿರುತ್ತದೆ.ಬೀಜಗಳು೩-೮ ಮಿ.ಮೀ ಪರಿಮಾಣದಲ್ಲಿ ಇರುತ್ತವೆ.ಕಾಯಿ ೬೦ ಸೆಂ,ಮೀ ಉದ್ದದ ವರೆಗೆ ಬೆಳಯುತ್ತದೆ.ಒಂದು ಕಾಯಿನಲ್ಲಿ ೫೦ ವರೆಗೆ ಬೀಜಗಳು ಇರುತ್ತವೆ.ಹಿಂದುವುರು ಈ ಹೂವುಗಳ್ಳನು ಪವಿತ್ರವಾಗಿ ಭಾವಿಸುತ್ತಾರೆ. ಹೂವುಗಳನ್ನು ಶಿವಪೂಜೆಯಲ್ಲಿ ಉಪಯೋಗಿಸುತ್ತಾರೆ.

ಉಪಯೋಗಗಳು ಬದಲಾಯಿಸಿ

ಇದರ ಹೂವು, ಚಿಗುರೆಲೆ ಮತ್ತು ಕಾಯಿಗಳನ್ನು ತರಕಾರಿಯ ಹಾಗೆ ಉಪಯೋಗಿಸುತ್ತಾರೆ. ಇದರ ಎಲೆ, ತೊಗಟೆ ಮತ್ತು ಹೂವಿನ ರಸವನ್ನು ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಚೇಗು ಬಿಳುಪು, ಹಗುರ ಮತ್ತು ಮೃದು.ಇದರ ಕಾಂಡವನ್ನು ತಾತ್ಕಾಲಿಕ ಗುಡಿಸಿಲಿನ ಕಂಬವಾಗಿ ಉಪಯೋಗಿಸುತ್ತಾರೆ. ಈ ಮರವನ್ನು ತೋಟಗಳಲ್ಲಿ ಎಲೆಯಬಳ್ಳಿ ಹಬ್ಬಿಸುವ ಸಲುವಾಗಿ ಬೆಳೆಸುತ್ತಾರೆ. ಎಲೆಯನ್ನು ದನಗಳಿಗೆ ಮೇವಾಗಿ ಉಪಯೋಗಿಸುತ್ತಾರೆ. ಇದರ ದಾರುವನ್ನು ಸೌದೆಯಾಗಿ ಉಪಯೋಗಿಸುತ್ತಾರೆ. ವೀಳೆಯದೆಲೆ ತೋಟಗಳಲ್ಲಿ ಆಸರೆ ಮರವಾಗಿ ಈ ಮರ ವನ್ನು ಬೆಳಸುವುದುಂಟು. ಅಗಸೆ ಹೂವು ವಿರೇಚಕ. ತುಪ್ಪದಲ್ಲಿ ಕರಿದ ಹೂಗಳು ಶ್ವೇತಪದರದ ರೋಗ ಹೊಓದಿರುವ ಹೆಂಗಸರಿಗೆ ಒಳ್ಳೆಯದು.[೩]

ಹೊರಗಿನ ಕೊಂಡಿಗಳು ಬದಲಾಯಿಸಿ

ಚಿತ್ರಶಾಲೆ ಬದಲಾಯಿಸಿ

ಉಲ್ಲೇಖನಗಳು ಬದಲಾಯಿಸಿ

  1. Prajapti, Purohit, Sharma, Kumar , A Handbook of medicinal plants, Agro Bios (India), Edition Ist 2003, Page.473
  2. "Meet the plant-Sesbania grandiflora". ntbg.org. Archived from the original on 2013-06-24. Retrieved 2013-11-22.
  3. "ರೈತರಿಗೆ ಬೇಕಾಗುವ ಕೆಲವು ಪ್ರಮುಖ ಮರಗಳು, ಅಗಸೆ (ಚೊಗಚೆ)". kanaja.in. Retrieved 2013-11-22.[ಶಾಶ್ವತವಾಗಿ ಮಡಿದ ಕೊಂಡಿ]
"https://kn.wikipedia.org/w/index.php?title=ಚೊಗಚೆ&oldid=1055117" ಇಂದ ಪಡೆಯಲ್ಪಟ್ಟಿದೆ