ಚಿರಂಜೀವಿ ಸರ್ಜಾ

ಚಿತ್ರನಟ

ಚಿರಂಜೀವಿ ಸರ್ಜಾ (೧೭ನೇ ಅಕ್ಟೋಬರ್ ೧೯೮೪ - ೭ನೇ ಜೂನ್ ೨೦೨೦) ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ ಭಾರತೀಯ ಚಲನಚಿತ್ರ ನಟ. ಅವರು ನಟ ಧ್ರುವ ಸರ್ಜಾ ಅವರ ಸಹೋದರ, ನಟ ಅರ್ಜುನ್ ಸರ್ಜಾ ಅವರ ಸೋದರಳಿಯ ಮತ್ತು ಹಿರಿಯ ಕನ್ನಡ ನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ.

ಚಿರಂಜೀವಿ ಸರ್ಜಾ
Born
ಚಿರಂಜೀವಿ ಸರ್ಜಾ

೧೭ನೇ ಅಕ್ಟೋಬರ್ ೧೯೮೪
Died೭ನೇ ಜೂನ್ ೨೦೨೦
Other namesಚಿರು
Occupationನಟ
Years active೨೦೦೬ ರಿಂದ ೨೦೨೦
Spouseಮೇಘನಾ ರಾಜ್‌
Relativesಶಕ್ತಿಪ್ರಸಾದ್ (ಅಜ್ಜ)
ಅರ್ಜುನ್ ಸರ್ಜಾ (ಸೋದರ ಮಾವ)
ಧ್ರುವ ಸರ್ಜಾ (ತಮ್ಮ)

ಜೀವನ ಬದಲಾಯಿಸಿ

ಇವರು ಹುಟ್ಟಿದ್ದುಬೆಂಗಳೂರಿನಲ್ಲಿ. ತಮ್ಮ ಬಾಲ್ಯ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕರ ಫ್ರೌಡ ಶಾಲೆಯಲ್ಲಿ ಪೂರ್ಣಗೊಳಿಸಿದರು. ೨೦೦೯ ರಲ್ಲಿ ಬಿಡುಗಡೆಯಾದ "ವಾಯುಪುತ್ರ" ಎಂಬ ಕನ್ನಡ ಚಲನಚಿತ್ರದ ಮೂಲಕ ನಾಯಕ ನಟನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದಕ್ಕೂ ಮುನ್ನ ಸುಮಾರು ೪ ವರ್ಷಗಳ ಕಾಲ ತನ್ನ ಸೋದರಮಾವ ಅರ್ಜುನ್ ಸರ್ಜಾರವರ ಸಹಾಯಕ ನಿರ್ದೇಶಕರಾಗಿ ಕೆಲಸವನ್ನು ಮಾಡಿದ್ದರು.

ವೈಯಕ್ತಿಕ ಜೀವನ ಬದಲಾಯಿಸಿ

ಇವರು ಅಕ್ಟೋಬರ್ ೨೦೧೭ ರಲ್ಲಿ ನಟಿ ಮೇಘನಾ ರಾಜ್‌ ಜೊತೆ ನಿಶ್ಚಿತಾರ್ಥ ವನ್ನು ಮಾಡಿಕೊಂಡರು. ಇದಾದ ನಂತರ ಇವರು ೨ ಮೇ ೨೦೧೮ ರಲ್ಲಿ ಮದುವೆ ಮಾಡಿಕೊಂಡರು.[೧]

ಮರಣ ಬದಲಾಯಿಸಿ

ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಜೂನ್ ೦೭, ೨೦೨೦ ರಂದು ಹೃದಯಾಘಾತದಿಂದ ಮರಣ ಹೊಂದಿದರು.[೨]. ಅವರಿಗೆ ೩೬ ವರ್ಷ ವಯಸ್ಸಾಗಿತ್ತು.

ಚಲನಚಿತ್ರಗಳು ಬದಲಾಯಿಸಿ

ವರ್ಷಗಳು ಚಿತ್ರಗಳು ಪಾತ್ರಗಳು ಟಿಪ್ಪಣಿಗಳು
೨೦೦೯ ವಾಯುಪುತ್ರ ಬಾಲು ಅತ್ಯುತ್ತಮ ನಟನಾಗಿ ಚಲನಚಿತ್ರ ಪ್ರಶಸ್ತಿ

(ಪುರುಷ)

[೩]
೨೦೧೦ ಗಂಡೆದೆ ಕೃಷ್ಣ
ಚಿರು ಚಿರು
೨೦೧೧ ದಂಡಂ ದಶಗುಣಂ ಸೂರ್ಯ ಐಪಿಎಸ್
ಕೆಂಪೇಗೌಡ ರಾಮ್ ಅತಿಥಿ ಪಾತ್ರ
೨೦೧೩ ವರದನಾಯಕ ಹರಿ
ವಿಜ಼ಲ್ ರಾಮ್
೨೦೧೪ ಚಂದ್ರಲೇಖ ಚಂದು
ಅಜಿತ್ ಅಜಿತ್
೨೦೧೫ ರುದ್ರತಾಂಡವ ಶಿವರಾಜ್ [೪]
ಆಟಗಾರ ಮೃತ್ಯುಂಜಯ
ರಾಮಲೀಲಾ ರಾಮ್
೨೦೧೭ ಆಕೆ ಅರ್ಜುನ್/ಶಿವ
ಭರ್ಜರಿ ಸೈನಿಕ ಅತಿಥಿ ಪಾತ್ರ
೨೦೧೮ ಸಂಹಾರ ಶ್ರೀ ಶೈಲ
ಸಿಜ಼ರ್ ಸಿಜ಼ರ್
ಅಮ್ಮ ಐ ಲವ್ ಯು ಸಿದ್ದಾರ್ಥ [೫]
೨೦೧೯ ಸಿಂಗ ಸಿಂಗ
೨೦೨೦ ಖಾಕಿ ಚಿರು
ಆದ್ಯಾ ಆದಿತ್ಯ ಶಂಕರ್
ಶಿವಾರ್ಜುನ ಶಿವ
೨೦೨೧ ರಣಂ
೨೦೨೩ ರಾಜಮಾರ್ತಾಂಡ ರಾಜ
ನಿರ್ಧರಿಸಬೇಕಿದೆ ಏಪ್ರಿಲ್ 
ಕ್ಷ‍ತ್ರಿಯ 
  ಇನ್ನೂ ಬಿಡುಗಡೆಯಾಗದ ಚಿತ್ರ

ಉಲ್ಲೇಖ ಬದಲಾಯಿಸಿ

  1. "ಚಿರಂಜೀವಿ ಮೇಘನಾ ರಾಜ್ ಮದುವೆ". Indian Express.
  2. "ನಟ ಚಿರಂಜೀವಿ ಸರ್ಜಾ ಸಾವು". Vijayakarnataka.com.
  3. https://www.thehindu.com/todays-paper/tp-features/tp-metroplus/the-bona-fide-actor/article22460333.ece
  4. https://www.imdb.com/name/nm5699216/bio?ref_=nm_ov_bio_sm
  5. Amma I love you review this Chiranjeevi Sarja movie‌ is‌ decent watch