ಸಾಮಾನ್ಯ ವಾಗಿ ವಾಡಿಕೆಯಲ್ಲಿ ಪಂಚಮ ವೇದ ಎನನುತ್ತಾರೆ. ಹಾಗಾದರೆ ಈ ಐದನೇಯ ವೇದ ಯಾವುದು?

ಪ್ರತಿಕ್ರಿಯೆ ಬದಲಾಯಿಸಿ

ಪಂಚಮ ವೇದವೆಂದು ವೇದವ್ಯಾಸ ರಚಿತ ಮಹಾಭಾರತಕ್ಕೆ ಹೇಳುತ್ತಾರೆ. ಇತಿಹಾಸಗಳೆಂದು ಕರೆಯಲ್ಪಡುವ ರಾಮಾಯಣ ಮಹಾಭಾರತಗಳೆರಡನ್ನೂ ಸೇರಿಸಿ ಕೆಲವರು ಪಂಚಮವೇದಗಳೆಂದು ಹೇಳುತ್ತಾರೆ. ಕನ್ನಡ ವರ ಕವಿ ಕುಮಾರವ್ಯಾಸನು ಮಹಾಭಾರತವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸುವಾಗ ಪೀಠಿಕೆಯಲ್ಲಿ "ಪಂಚಮ ಶ್ರುತಿಯನೊರೆವೆನು" ಎಂದಿದ್ದಾನೆ. (ಶ್ರುತಿಯನು+ಒರೆವೆನು ;ಶ್ರೀಮತ್ + ಆಗಮ ಕುಲ-ವೇದಗಳು)

ತಿಳಿಯ ಹೇಳುವೆ ಕೃಷ್ಣಕಥೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ |
ಹಲವು ಜನ್ಮದ ಪಾಪರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ ||
ನೆಲೆಗೆ=ಭೂಮಿಗೆ ಭೂಮಿಯ ಜನರಿಗೆ
ಶ್ರುತಿ ಎಂದರೆ ವೇದ (ಶೃತಿ ಅಲ್ಲ; ಶೃತಿ ಎಂದರೆ ರಾಗದಲ್ಲಿ ಒಂದು ಮಟ್ಟ ಧ್ವನಿಯ ಎತ್ತರ ಸ, ರಿ ಗ, ಮ, ಇವುಮಟ್ಟ)

Bschandrasgr ೧೮:೪೪, ೩ ಫೆಬ್ರುವರಿ ೨೦೧೪ (UTC) -ಸದಸ್ಯ:Bschandrasgr/ಪರಿಚಯ -ಬಿ.ಎಸ್.ಚಂದ್ರಶೇಖರBschandrasgr

ಮರುತ್- ಮಾರತ ಬದಲಾಯಿಸಿ

  • ಮರುತ್ ದೇವತೆ ಮಾರುತ ಮರುತ್‍ನಿಂದ ಹುಟ್ಟಿದ ಗಾಳಿ - ಸಪ್ತ ಮಾರುತಗಳು. ತಿದ್ದಿರುವುದು ತಪ್ಪು - ಮೊದಲಿದನ್ನು ಉಳಿಸಿ. Bschandrasgr (ಚರ್ಚೆ) ೧೪:೧೧, ೮ ನವೆಂಬರ್ ೨೦೧೯ (UTC)
Return to "ವೇದ" page.