ಗೋವಿಂದ ನಾರಾಯಣ

ನಾಗರೀಕ ಸೇವೆ, ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
(ಗೋವಿಂದ್ ನರಿನ್ ಇಂದ ಪುನರ್ನಿರ್ದೇಶಿತ)

ಗೋವಿಂದ ನಾರಾಯಣ ಕರ್ನಾಟಕದ ಎಂಟನೆಯ ರಾಜ್ಯಪಾಲರು , ಇವರ ಅವಧಿ ೨ ಆಗಸ್ಟ್ ೧೯೭೭ ರಿಂದ ೧೫ ಏಪ್ರಿಲ್ ೧೯೮೩ ವರೆಗೆ.ಇವರು ಮೂಲತಃ ಭಾರತೀಯ ನಾಗರಿಕ ಸೇವೆಯಲ್ಲಿದ್ದು,ನಿವೃತ್ತರಾದ ಬಳಿಕ ರಾಜ್ಯಪಾಲರಾಗಿ ಆಯ್ಕೆಯಾದವರು.

ಗೋವಿಂದ ನಾರಾಯಣ
Govind Narain (left), 1981

ಅಧಿಕಾರ ಅವಧಿ
2 August 1977 – 15 April 1983
ಪೂರ್ವಾಧಿಕಾರಿ Uma Shankar Dikshit
ಉತ್ತರಾಧಿಕಾರಿ A. N. Banerji
ವೈಯಕ್ತಿಕ ಮಾಹಿತಿ
ಜನನ (೧೯೧೬-೦೫-೦೫)೫ ಮೇ ೧೯೧೬
Mainpuri, British Raj
ಮರಣ 3 April 2012(2012-04-03) (aged 95)
New Delhi, India

ಅವರು ಮೈನ್ಪುರಿ, ಉತ್ತರ ಪ್ರದೇಶದಲ್ಲಿ ಒಂದು ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ಅವರು ಅಲಹಾಬಾದ್ ವಿಶ್ವವಿದ್ಯಾಲಯ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣವನ್ನು ಪಡೆದರು. ಅವರು ಹಿಂದೆ ಭಾರತದ ೧೨ನೇ ರಕ್ಷಣಾ ಕಾರ್ಯದರ್ಶಿಯಾಗಿ (೧೯೭೩- ೧೯೭೫), ಭಾರತದ ಗೃಹ ಕಾರ್ಯದರ್ಶಿಯಾಗಿ (೧೯೭೧- ೧೯೭೩) ಮತ್ತು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಯಾಗಿ (೧೯೫೮- ೧೯೬೧) ಸೇವೆ ಸಲ್ಲಿಸಿದ್ದಾರೆ.