ಗುಂಡಾಲ್ ಜಲಾಶಯವು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಇದು ಕೊಳ್ಳೇಗಾಲದಿಂದ ಸುಮಾರು ೧೪ ಕಿ.ಮೀ ದೂರದಲ್ಲಿದೆ. ಕೊಳ್ಳೇಗಾಲದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ೧೦ ಕಿ.ಮೀ ಕ್ರಮಿಸಿದ ನಂತರ ಬಲಕ್ಕೆ ತಿರುಗಿ ೪ ಕಿ.ಮೀ ಪ್ರಯಾಣ ಮಾಡಿದರೆ ಜಲಾಶಯವನ್ನು ತಲುಪಬಹುದು. ಇದು ಪೂರ್ವ ಘಟ್ಟಗಳ ಮಡಿಲಲ್ಲಿ ಇದೆ. ಇದನ್ನು ನೀರಾವರಿ ಯೋಜನೆಗಳಿಗಾಗಿ ನಿರ್ಮಿಸಲಾಯಿತು. ಈ ಜಲಾಶಯದಿಂದ ನೂರಾರು ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿದೆ.