ಗಂಗೋತ್ರಿ ರಾಷ್ಟ್ರೀಯ ಉದ್ಯಾನ

ಗಂಗೋತ್ರಿ ರಾಷ್ಟ್ರೀಯ ಉದ್ಯಾನವು ಭಾರತಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ ಹಿಮಾಲಯದ ಮಡಿಲಲ್ಲಿರುವ ಒಂದು ರಾಷ್ಟ್ರೀಯ ಉದ್ಯಾನ. ಇದರ ಒಟ್ಟು ವಿಸ್ತೀರ್ಣ ಸುಮಾರು ೧೫೫೩ ಕಿ.ಮೀ. ಗಳಷ್ಟು. ಸೂಚಿಪರ್ಣ ಕಾಡುಗಳು, ವಿಶಾಲ ಹಸಿರು ಮಾಳಗಳು ಮತ್ತು ಹಿಮನದಿಗಳನ್ನೊಳಗೊಂಡಿರುವ ಗಂಗೋತ್ರಿ ರಾಷ್ಟ್ರೀಯ ಉದ್ಯಾನವು ಅದ್ಭುತ ಪ್ರಕೃತಿ ಸೌಂದರ್ಯದ ತಾಣ. ಇಲ್ಲಿನ ಕಾಡುಗಳು ಮುಖ್ಯವಾಗಿ ದೇವದಾರು, ಫರ್, ಓಕ್ ಮತ್ತು ರೋಡೋಡೆಂಡ್ರಾನ್ ಮರಗಳನ್ನು ಹೊಂದಿವೆ. ಈ ಉದ್ಯಾನ ಪ್ರದೇಶದಲ್ಲಿ ಇದುವರೆಗೆ ೧೫ ತಳಿಯ ಸಸ್ತನಿ ಮತ್ತು ೧೫೦ ಬಗೆಯ ಹಕ್ಕಿಗಳನ್ನು ಗುರುತಿಸಲಾಗಿದೆ. ಇವಗಳಲ್ಲಿ ಹಿಮಚಿರತೆ, ಕಸ್ತೂರಿಮೃಗಗಳು ವಿಶಿಷ್ಟವಾದವು. ಗಂಗೋತ್ರಿ ರಾಷ್ಟ್ರೀಯ ಉದ್ಯಾನಕ್ಕೆ ಡೆಹ್ರಾಡೂನ್ ಅತಿ ಸಮೀಪದ ರೈಲು ಮತ್ತು ವಿಮಾನ ನಿಲ್ದಾಣವಾಗಿದೆ.