ಖಾಖರಾ ಗುಜರಾತಿ ಮತ್ತು ರಾಜಸ್ಥಾನಿ ಪಾಕಪದ್ಧತಿಗಳಲ್ಲಿ, ವಿಶೇಷವಾಗಿ ಜೈನರಲ್ಲಿ, ಸಾಮಾನ್ಯವಾಗಿರುವ ಒಂದು ತೆಳ್ಳನೆಯ ಗರಿಗರಿ ಖಾದ್ಯ. ಇದನ್ನು ಮಡಿಕೆ ಕಾಳು, ಗೋಧಿ ಹಿಟ್ಟು ಮತ್ತು ಎಣ್ಣೆಯಿಂದ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಬೆಳಿಗ್ಗೆಯ ತಿಂಡಿಯಲ್ಲಿ ಬಡಿಸಲಾಗುತ್ತದೆ. ಖಾಖರಾಗಳನ್ನು ಒಂದೊಂದಾಗಿ ಕೈಯಲ್ಲಿ ತಯಾರಿಸಿ ಸುಡಲಾಗುತ್ತದೆ. ಇದು ಒಂದು ಕುರುಕಲು ಮತ್ತು ಆರೋಗ್ಯಕರ ಖಾದ್ಯವಾಗಿದೆ. ಇದನ್ನು ಖಾರದ ಉಪ್ಪಿನಕಾಯಿಗಳು ಮತ್ತು ಸಿಹಿ ಚಟ್ನಿಗಳೊಂದಿಗೆ ಆನಂದಿಸಬಹುದು.

ಖಾಖರಾ
ಮೂಲ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಗುಜರಾತ್, ರಾಜಸ್ಥಾನ
ವಿವರಗಳು
ಮುಖ್ಯ ಘಟಕಾಂಶ(ಗಳು)ಮಡಿಕೆ ಕಾಳು, ಗೋಧಿ ಹಿಟ್ಟು

ವೈವಿಧ್ಯಗಳು ಬದಲಾಯಿಸಿ

ಖಾಖರಾವನ್ನು ಹಲವಾರು ವಿಧಗಳಲ್ಲಿ ತಯಾರಿಸಲಾಗುತ್ತದೆ, ಉದಾಹರಣೆಗೆ ಮೇಥಿ (ಮೆಂತ್ಯ), ಜೀರಾ (ಜೀರಿಗೆ), ಬಾಜ್ರಿ, ಪುದೀನಾ, ಬೆಳ್ಳುಳ್ಳಿ, ಅಜವಾನ, ಇತ್ಯಾದಿ.[೧] ಮುಂಗಡಿ ಖಾಖರಾದ ಒಂದು ಸಿಹಿ ಬಗೆಯಾಗಿದೆ.

ತಯಾರಿಕೆ ಬದಲಾಯಿಸಿ

 
ಶೇಂಗಾ ಚಟ್ನಿಪುಡಿಯೊಂದಿಗೆ ಖಾಖರಾ

ತಯಾರಿಕೆಯ ವಿಧಾನದಲ್ಲಿ ಭಿನ್ನತೆಗಳಿವೆ, ಆದರೆ ಸಾಮಾನ್ಯವಾಗಿ ಈ ಕೆಳಗಿನ ವಿಧಾನವನ್ನು ಪಾಲಿಸಲಾಗುತ್ತದೆ. ಗೋಧಿ ಹಿಟ್ಟು (ಮತ್ತು/ಅಥವಾ ಮೈದಾ), ಉಪ್ಪು ಮತ್ತು ಮಸಾಲೆಯನ್ನು ಮಿಶ್ರಣಮಾಡಲಾಗುತ್ತದೆ. ಎಣ್ಣೆ, ನೀರು ಅಥವಾ ಹಾಲನ್ನು ಸೇರಿಸಿ ಮೃದು ಕಣಕವಾಗಿ ನಾದಲಾಗುತ್ತದೆ. ಈ ಕಣಕದಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಲಟ್ಟಿಸಲಾಗುತ್ತದೆ. ಇವನ್ನು ನಂತರ ಸಣ್ಣ ಉರಿ ಮೇಲೆ ಬೇಯಿಸಲಾಗುತ್ತದೆ. ಬೇಯಿಸುವಾಗ ಕಟ್ಟಿಗೆಯ ಒತ್ತು ಸಾಧನದಿಂದ ಒತ್ತಲಾಗುತ್ತದೆ. ಹೀಗೆ ಗರಿಗರಿ ಮತ್ತು ತಿಳಿ ಕಂದು ಬಣ್ಣ ಬರುವವರೆಗೆ ಬೇಯಿಸಲಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. "Snack Attack". Retrieved 5 October 2014.
"https://kn.wikipedia.org/w/index.php?title=ಖಾಖರಾ&oldid=832261" ಇಂದ ಪಡೆಯಲ್ಪಟ್ಟಿದೆ