ಕೇಟಿ ಪೆರಿ (ಜನ್ಮನಾಮ ಕ್ಯಾಥರಿನ್ ಎಲಿಝಬೆತ್ ಹಡ್ಸನ್ ; ಜನನ ಅಕ್ಟೋಬರ್ ೨೫, ೧೯೮೪) ಅಮೆರಿಕದ ಗೀತರಚನಕಾರ್ತಿ, ಗಾಯಕಿ ಮತ್ತು ನಟಿಯಾಗಿದ್ದಾರೆ. ಕ್ಯಾಲಿಫೋರ್ನಿಯಾದ ಸಾಂತಾ ಬಾರ್ಬರಾದಲ್ಲಿ ಜನಿಸಿ, ಕ್ರಿಶ್ಚಿಯನ್ ಪ್ಯಾಸ್ಟರ್ ಮಾತಾಪಿತೃಗಳ ಆಸರೆಯಲ್ಲಿ ಬೆಳೆದ ಪೆರಿ ಕೇವಲ ಗಾಸ್ಪೆಲ್ ಸಂಗೀತವನ್ನು ಮಾತ್ರ ಕೇಳುತ್ತಾ ಬೆಳೆದರು ಹಾಗೂ ಬಾಲ್ಯದಲ್ಲಿ ತನ್ನ ಸ್ಥಳೀಯ ಚರ್ಚ್ ನಲ್ಲಿ ಹಾಡುತ್ತಿದ್ದರು. ಪ್ರೌಢಶಾಲೆಯ ಫ್ರೆಷ್ ಮನ್ ವರ್ಷದಲ್ಲಿ (ಮೊದಲ ವರ್ಷದಲ್ಲಿ) GED ಸಂಪಾದಿಸಿ ಸಂಗೀತ ವೃತ್ತಿಜೀವನವನ್ನು ಹಿಂಬಾಲಿಸಿ ಹೊರಟರು. ಕೇಟಿ ಹಡ್ಸನ್ ಎಂಬ ಹೆಸರಿನಲ್ಲಿ ಅವರು ಸ್ವನಾಮ-ಸೀರ್ಷಿಕೆ ಹೊತ್ತ ಗಾಸ್ಪೆಲ್ ಆಲ್ಬಂ ಅನ್ನು ೨೦೦೧ ರಲ್ಲಿ ಬಿಡುಗಡೆ ಮಾಡಿದರ; ಆ ರೆಕಾರ್ಡ್ ನ ಲೇಬಲ್ ಮುಚ್ಚಲ್ಪಟ್ಟದ್ದರಿಂದ ಈ ಆಲ್ಬಂ ಅನ್ನು ವಿಫಲವೆಂದು ಪರಿಗಣಿಸಲಾಯಿತು. ಅವರು ನಂತರ ದ ಮ್ಯಾಟ್ರಿಕ್ಸ್ ಎಂಬ ನಿರ್ಮಾಪಕ ತಂಡದೊಡಗೂಡಿ ಒಂದು ಆಲ್ಬಂ ಅನ್ನು ಹೊರತಂದರು ಹಾಗೂ ೨೦೦೪-೫ ರಿಂದ ಏಕಗಾಯಕಿ ಆಲ್ಬಂನ ಬಹುವಂಶವನ್ನು ಮುಗಿಸಿದರು, ಆದರೆ ಈ ಎರಡೂ ರೆಕಾರ್ಡ್ ಗಳು ಲೋಕಾರ್ಪಣವಾಗಲಿಲ್ಲ.

Katy Perry
ಹಿನ್ನೆಲೆ ಮಾಹಿತಿ
ಜನ್ಮನಾಮKatheryn Elizabeth Hudson
ಸಂಗೀತ ಶೈಲಿPop, pop rock, dance-pop, electropop, europop, CCM (early)
ವೃತ್ತಿSinger-songwriter, actress
ವಾದ್ಯಗಳುVocals, guitar, piano
ಸಕ್ರಿಯ ವರ್ಷಗಳು೨೦೦೧–present
L‍abelsRed Hill, Island, Columbia, Capitol
ಅಧೀಕೃತ ಜಾಲತಾಣkatyperry.com

Katy Perry's signature

೨೦೦೭ರಲ್ಲಿ ಕ್ಯಾಪಿಟಲ್ ಮ್ಯೂಸಿಕ್ ಗ್ರೂಪ್ ನೊಡನೆ ಕರಾರಿಗೆ ಸಹಿ ಹಾಕಿದ ನಂತರ ಏಳು ವರ್ಷಗಳಲ್ಲಿನ ತಮ್ಮ ನಾಲ್ಕನೆಯ ರೆಕಾರ್ಡ್ ಲೇಬಲ್ ಅನ್ನು ಹೊರತಂದರು, ಸ್ಟೇಜ್ ಹೆಸರು (ಪ್ರದರ್ಶನ ನೀಡಲು ವೇದಿಕೆಗೆ ಬಂದಾಗ ಪರಿಚಯಿಸುವ ಹೆಸರು) ಕೇಟಿ ಪೆರಿ ಎಂದು ಬದಲಾವಣೆಗೊಂಡಿತು ಹಾಗೂ ಅವರು ತಮ್ಮ ಚೊಚ್ಚಲ ಅಂತರ್ಜಾಲ ಸಿಂಗಲ್ ಆದ "ಯೂ ಆರ್ ಸೋ ಗೇ" ಅನ್ನು ಆ ನವೆಂಬರ್ ನಲ್ಲಿ ಹೊರತಂದರು; ಈ ರೆಕಾರ್ಡ್ ಸಾರ್ವಜನಿಕರ ಗಮನ ಸೆಳೆಯಿತಾದರೂ ಶ್ರೇಷ್ಠ ಆಲ್ಬಂಗಳ ಪಟ್ಟಿ ಸೇರಲು ವಿಫಲವಾಯಿತು. ತಮ್ಮ ಎರಡನೆಯ ಸಿಂಗಲ್ ಆದ "ಐ ಕಿಸ್ಡ್ ಎ ಗರ್ಲ್" ೨೦೦೮ ರಲ್ಲಿ ಬಿಡುಗಡೆಯಾಗಿ, ಎಲ್ಲಾ ಅಂತರರಾಷ್ಟ್ರೀಯ ಶ್ರೇಷ್ಠ ಪಟ್ಟಿಗಳಲ್ಲೂ ಉಲ್ಲೇಖಿತವಾಗಿ, ಪೆರಿ ಜಗದ್ವಿಖ್ಯಾತರಾದರು. ಪೆರಿಯ ಮೊದಲ ಮುಖ್ಯವಾಹಿನಿಯ ಸ್ಟುಡಿಯೋ ಆಲ್ಬಂ ಆದ ಒನ್ ಆಪ್ ದ ಬಾಯ್ಸ್ ಅದೇ ವರ್ಷದಲ್ಲಿ ಅನತಿ ಕಾಲದಲ್ಲೇ ಬಿಡುಗಡೆಯಾಯಿತು ಹಾಗೂ ೨೦೦೮ ರಲ್ಲಿ ಅತಿ ಹೆಚ್ಚು ಮಾರಾಟವಾದ ಆಲ್ಬಂ ಗಳ ಪಟ್ಟಿಯಲ್ಲಿ ಮೂವತ್ಮೂರನೆಯ ಸ್ಥಾನವನ್ನು ಅಲಂಕರಿಸಿತು.[೧] ಆ ಆಲ್ಬಂಗೆ ಪ್ಲಾಟಿನಂ ಪ್ರಮಾಣಪತ್ರವನ್ನು ರೆಕಾರ್ಡಿಂಗ್ ಇಂಡಸ್ಟ್ರಿ ಅಸೋಸಿಯೇಷನ್ ಆಫ್ ಅಮೆರಿಕ ನೀಡಿತು, "ಐ ಕಿಸ್ಡ್ ದ ಗರ್ಲ್" ಮತ್ತು ಅವರ ೆರಡನೆಯ ಸಿಂಗಲ್ "ಹಾಟ್ ಎಂಡ್ ಕೋಲ್ಡ್d" ಎರಡೂ ಹಲವಾರು ಪ್ಲಾಟಿನಂ ಪ್ರಮಾಣಪತ್ರಗಳನ್ನು ಪಡೆದವು.. ಅವರ ಎರಡನೆಯ ವರ್ಷದಲ್ಲಿ ಬಿಡುಗಡೆಯಾದ ಸ್ಟುಡಿಯೋ ಆಲ್ಬಂಟೀನೇಜ್ ಡ್ರೀಂ ಆಗಸ್ಟ್ ೨೦೧೦ರಲ್ಲಿ ಬಿಡುಗಡೆ ಮಾಡಲಾಯಿತು ಹಾಗೂ ಬಿಲ್ ಬೋರ್ಡ್ ೨೦೦ ನ ಮೊದಲ ಕ್ರಮಾಂಕದಲ್ಲಿ ಚೊಚ್ಚಲ ಬಾರಿಯೇ ರಾರಾಜಿಸಿತು. ಈ ಆಲ್ಬಂನಲ್ಲಿ ಜನಪ್ರಿಯ ಸಿಂಗಲ್ಸ್ ಆದ "ಕ್ಯಾಲಿಫೋರ್ನಿಯಾ ಗರ್ಲ್ಸ್", "ಟೀನೇಜ್ ಡ್ರೀಂ", "ಫೈರ್ವರ್ಕ್" ಮತ್ತು"E.T." , ಹಾಡುಗಳಿದ್ದವು ಹಾಗೂ ಇವೆಲ್ಲವೂ ಬಿಲ್ ಬೋರ್ಡ್ ಹಾಟ್  ೧೦೦ ಪಟ್ಟಿಯ ಮೇಲ್ಪಂಕ್ತಿಯಲ್ಲಿ ರಾರಾಜಿಸಿದವು. ಟೀನೇಜ್ ಡ್ರೀಂT ಆಲ್ಬಂ ನಾಲ್ಕು ಅಥವಾ ಅದಕ್ಕಿಂತಲೂ ಹೆಚ್ಚು ಹಾಟ್ ೧೦೦ ಪ್ರಥಮ ಶ್ರೇಯಾಂಕದ ಹಾಡುಗಳನ್ನು ಹೊಂದಿದ್ದ ಒಂಬತ್ತು ಸರ್ವಕಾಲಿಕ ಆಲ್ಬಂ ಗಳ ಪೈಕಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.[೨]

ಪೆರಿಯನ್ನು ದ ಎಕ್ಸ್ ಫ್ಯಾಕ್ಟರ್ ಎಂಬ ಬ್ರಿಟಿಷ್ ಟೆಲಿವಿಷನ್ ಕಾರ್ಯಕ್ರಮದ ಏಳನೆಯ ಸರಣಿಯಲ್ಲಿ ಅತಿಥಿ ತೀರ್ಪುಗಾರ್ತಿ ಎಂಬ ಸ್ಥಾನ ನೀಡಿ ಗೌರವಿಸಿದರು; ಪರ್ರ್ ಎಂಬ ಹಡಸರಿನ ಸುಗಂಧವೊಂದನ್ನು ಬಿಡುಗಡೆ ಮಾಡಲಾಯಿತು; ಹಾಗೂ ೨೦೧೧ ರಲ್ಲಿ ತೆರೆ ಕಾಣಲಿರುವ ದ ಸ್ಮರ್ಫ್ಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೆರಿ ಟ್ರಾವೀ ಮೆಕಾಯ್ ರೊಡನೆ ಸುದೀರ್ಘಕಾಲ ಸಂಬಂಧ ಹೊಂದಿದ್ದರು; ಅವರು ರಸೆಲ್ ಬ್ರ್ಯಾಂಡ್ ರನ್ನು ೨೩ ಅಕ್ಟೋಬರ್ ೨೦೧೦ ರಂದು ವಿವಾಹವಾದರು[೩]

ಬಾಲ್ಯ ಮತ್ತು ಬದುಕು ಬದಲಾಯಿಸಿ

೧೯೮೪–೨೦೦೬: ಮೊದಲ ದಿನಗಳು ಮತ್ತು ವೃತ್ತಿಜೀವನದ ಆರಂಭ ಬದಲಾಯಿಸಿ

ಪೆರಿಯ ಜನ್ಮನಾಮ ಕ್ಯಾಥರಿನ್ ಎಲಿಝಬೆತ್ ಹಡ್ಸನ್ ; ಅವರು ಸಾಂತಾ ಬಾರ್ಬರಾ, ಕ್ಯಾಲಿಫೋರ್ನಿಯಾ[೪][೫] ದಲ್ಲಿ ಜನಿಸಿದರು. ಅವರ ತಂದೆ ಕೀತ್ ಒಬ್ಬ ವೆಸ್ಟ್ ಕೋಸ್ಟ್ ನಲ್ಲಿ ಏಜೆಂಟ್ ಆಗಿ ೧೯೬೦ ರ ದಶಕದಲ್ಲಿ ಕೆಲಸ ಮಾಡುತ್ತಿದ್ದರು,[೬] ಅವರ ತಾಯಿ ಮೇರಿ ಹಡ್ಸನ್ (ಜನ್ಮನಾಮ ಪೆರಿ), ಒಬ್ಬ ಮತ ಬೋಧಕಿ ಆಗಿದ್ದರು; ಅವರಯ ದಕ್ಷಿಣ ಕ್ಯಾಲಿಫೋರ್ನಿಯಾ ದಲ್ಲಿ ಬೆಳೆದು ದೊಡ್ಡವರಾದರು ಹಾಗೂ " ಝಿಂಬಾಬ್ವೆಯಲ್ಲಿ ಬಿರುಗಾಳಿಯೋಪಾದಿಯ ಮೊದಲ ವಿವಾಹವಾದರು".[೬] ಪೆರಿಯ ಪೂರ್ವಿಕರು ಜರ್ಮನ್, ಪೋರ್ಚುಗೀಸ್, ಐರಿಷ್ ಹಾಗೂ ಇಂಗ್ಲಿಷ್ ಮೂಲಗಳಿಂದ ಬಂದತಹವರಾಗಿದ್ದರು.[೭][೮] ಅವರು ಇಬ್ಬರು ಪ್ಯಾಸ್ಟರ್ ಗಳ ಎರಡನೆಯ ಶಿಶು.[೯] ಪೆರಿಗೆ ಒಬ್ಬ ಅಕ್ಕ ಮತ್ತು ಒಬ್ಬ ತಮ್ಮ ಇದ್ದಾರೆ.[೬] ಪೆರಿಯ ತಾಯಿಯ ಚಿಕ್ಕಮ್ಮ ಚಿತ್ರಕಥಾ ಲೇಖಕಿ ಎಲೇನರ್ ಪೆರಿ, ಚಿಕ್ಕಪ್ಪ ನಿರ್ದೇಶಕ ಫ್ರಾಂಕ್ ಪೆರಿ.[೬]

ಪೆರಿಯನ್ನ ತಮ್ಮ ಮಾತಾಪಿತೃಗಳ ' ಚರ್ಚ್[೯] ಗೆ ಸೇರಿಸಿಕೊಳ್ಳಲಾಯಿತು ಹಾಗೂ ಅವರ ಚರ್ಚ್ ನಲ್ಲಿ ಪೆರಿ ಒಂಬತ್ತನೆಯ ವಯಸ್ಸಿನಿಂದ ಹದಿನೇಳನೆಯ ವಯಸ್ಸಿನವರೆಗೆ ಹಾಡಿದರು.[೫][೧೦] ಅವರು ಗಾಸ್ಪೆಲ್ ಸಂಗೀತವನ್ನು ಕೇಳುತ್ತಲೇ ಬೆಳೆದರು,[೧೧] ಅವರ ತಾಯಿ "ಜಾತ್ಯತೀತ ಸಂಗೀತ" ಎಂದು ಕರೆಯುತ್ತಿದ್ದ ಇತರ ಸಂಗೀತಗಳನ್ನು ಕೇಳಲು ಬಿಡುತ್ತಿರಲಿಲ್ಲ,[೧೦][೧೨] ಹಾಗೂ ಕ್ರಿಶ್ಚಿಯನ್ ಶಾಲೆಗಳು ಮತ್ತು ಶಿಬಿರಗಳಲ್ಲಿ ಅಧ್ಯಯನ ಮಾಡಿದರು.[೯] ಸಾಂತಾ ಬಾರ್ಬರಾದಲ್ಲಿದ್ದ ವಿಶ್ರಾಮ ಕಟ್ಟಡವೊಂದರಲ್ಲಿ ಪೆರಿ ನೃತ್ಯ ಕಲಿತರು. ಅವರಿಗೆ ನುರಿತ ನೃತ್ಯಪಟುಗಳು ನೃತ್ಯಶಿಕ್ಷಣ ನೀಡಿದರು; ಶಿಕ್ಷಣವು ಸ್ವಿಂಗ್, ಲಿಂಡಿ ಹಾಪ್, ಮತ್ತು ಜಿಟರ್ಬಗ್ ಶೈಲಿಗಳನ್ನು ಒಳಗೊಂಡಿತ್ತು.[೧೩] ಅವರು ತಮ್ಮ GED ಯನ್ನು ಫ್ರೆಷ್ ಮನ್ ವರ್ಷವನ್ನು ಡೂಸ್ ಪ್ಯೂಬ್ಲಾಸ್ ಹೈ ಸ್ಕೂಲ್ ನಲ್ಲಿ ಮುಗಿಸಿದ ನಂತರ ಪಡೆದರು ಮತ್ತು ಸಂಗೀತದಲ್ಲಿ ಮುಂದುವರಿಯುವ ಹಂಬಲದಿಂದ ಶಾಲೆಯನ್ನು ಬಿಡಲು ನಿರ್ಧರಿಸಿದರು.[೧೪] ಪೆರಿ ಮೊದಲಿಗೆ ಹಾಡಲು ಆರಂಭಿಸಿದರು "ಏಕೆಂದರೆ ಅವರು ತನ್ನಕ್ಕ ಏನೇ ಮಾಡಿದರೂ ಅಂತೆಯೇ ಮಾಡುವಂತಹ ಬಾಲ್ಯಾವಸ್ಥೆಯಲ್ಲಿದ್ದರು."[೧೪] ಅವರ ಅಕ್ಕ ಕ್ಯಾಸೆಟ್ ಟೇಪ್ ಗಳೊಡನೆ ಅಭ್ಯಾಸ ಮಾಡುತ್ತಿದ್ದರು, ಅಕ್ಕ ಇಲ್ಲದ ಸಮಯಗಳಲ್ಲಿ ಪೆರಿ ತಾವೇ ಆ ಟೇಪುಗಳನ್ನು ತೆಗೆದುಕೊಂಡು ಅವನ್ನು ಕೇಳುತ್ತಾ ಅಭ್ಯಸಿಸುತ್ತಿದ್ದರು. ಅವರು ಹಾಡುಗಳನ್ನು ಮತ್ತೆ ಮತ್ತೆ ಹಾಡಿಕೊಳ್ಳುತ್ತಿದ್ದರು ಮತ್ತು ಅವುಗಳನ್ನು ತಮ್ಮ ಮಾತಾಪಿತೃಗಳ ಮುಂದೆ ಹಾಡುತ್ತಿದ್ದರು; ಅವರು ಪೆರಿಗೆ ಗಾಯನ ಶಿಕ್ಷಣ ಹೊಂದಲುಸಲಹೆ ನೀಡಿದರು. ಈ ಸದವಕಾಶವನ್ನು ಬಳಸಿಕೊಂಡ ಪೆರಿ ತಮ್ಮ ಒಂಬತ್ತನೆಯ ವಯಸ್ಸಿನಿಂದ ಹದಿನಾರನೆಯ ವಯಸ್ಸಿನವರೆಗೆ ಸಂಗೀತ ಕಲಿತರು. ಅವರು ನಂತರ ಸಾಂತಾ ಬಾರ್ಬರಾ ದಲ್ಲಿದ್ದ ಮ್ಯೂಸಿಕ್ ಆಕಾಡೆಮಿ ಆಫ್ ದ ವೆಸ್ಟ್ ಗೆ ಸೇರಿಕೊಂಡರು ಹಾಗೂ ಸ್ವಲ್ಪ ದಿನಗಳವರೆಗೆ ಇಟಾಲಿಯನ್ ಓಪ್ರಾ ದ ಶಿಕ್ಷಣ ಪಡೆದರು.[೧೪]

 
ಗಿಟಾರ್ ನುಡಿಸುತ್ತಿರುವ ಪೆರಿ; ಈ ವಾದ್ಯವನ್ನು ಅವರು ತಮ್ಮ ರೆಕಾರ್ಡ್ ಜೀವನವನ್ನು ಆರಂಭಿಸಿದ ಕಾಲದಲ್ಲೇ ನುಡಿಸಲು ಕಲಿತಿದ್ದರು.

ತಮ್ಮ ೧೫ ರ ಹರೆಯದಲ್ಲಿ ಪೆರಿಯ ಚರ್ಚ್ ಗಾಯನವು ಟೆನೆಸ್ಸೀಯ ನ್ಯಾಷ್ ವಿಲ್ಲಾದ ನುರಿತ ರಾಕ್ ಗಾಯಕರ ಗಮನ ಸೆಳೆಯಿತು ಹಾಗೂ ಅವರು ಪೆರಿಯ ಬರವಣಿಗೆಯು ಮತ್ತಷ್ಟು ಮೆರಗು ಗಳಿಸುವಂತಹ ಶಿಕ್ಷಣ ನೀಡಲು ಅವರನ್ನು ತಮ್ಮಲ್ಲಿಗೇ ಕರೆದುಕೊಂಡು ಬಂದರು.[೧೫] ನ್ಯಾಷ್ ವಿಲ್ಲಾ ದಲ್ಲಿ ಪೆರಿ ನಿದರ್ಶಕಗಳನ್ನು ರೆಕಾರ್ಡ್ ಮಾಡಲಾರಂಭಿಸಿದರುಹಾಗೂ ನುರಿತ ಹಳೆಯ ಕಂಟ್ರಿ ಮ್ಯೂಸಿಕ್ (ಜನಪದ ಸಂಗೀತ) ಸಂಗೀತಜ್ಞರಿಂದ ಗೀತರಚನೆ ಮತ್ತು ಗಿಟಾರ್ ವಾದನದ ಒಳಸುಳುಹುಗಳನ್ನು ಕಲಿತರು.[೧೦][೧೨] ಪೆರಿ ಕ್ರಿಶ್ಚಿಯನ್ ಮ್ಯೂಸಿಕ್ ಲೇಬಲ್ ಆದ ರೆಡ್ ಹಿಲ್ ನೊಡನೆ ಒಪ್ಪಂದಕ್ಕೆ ಸಹಿ ಹಾಕಿ, ಅದರ ಮೂಲಕ, ೧೫ ರ ಹರೆಯದಲ್ಲಿ ತಮ್ಮ ಮೊದಲ ಆಲ್ಬಂ ಅನ್ನು ರೆಕಾರ್ಡ್ ಮಾಡಿದರು.[೧೬] ಕೇಟಿ ಹಡ್ಸನ್ ಎಂಬ ಹೆಸರಿನಲ್ಲಿ ಪ್ರದರ್ಶನ ನೀಡುತ್ತಾ, ಅವರು ಸ್ವನಾಮ ಶೀರ್ಷಿಕೆ ಹೊತ್ತ ಗಾಸ್ಪೆಲ್-ರಾಕ್ ಆಲ್ಬಂ ಅನ್ನು ೨೦೦೧ ರಲ್ಲಿ ಬಿಡುಗಡೆ ಮಾಡಲಾಯಿತು.[೬][೧೫] ಆದರೆ, ಈ ಲೇಬಲ್ (ಕಂಪನಿ) ತನ್ನ ಕಾರ್ಯಚಟುವಟಿಕೆಗಳನ್ನು ೨೦೦೧ ರ ಕೊನೆಯಲ್ಲಿ ಸ್ಥಗಿತಗೊಳಿಸಿದ ಕಾರಣ ಈ ಆಲ್ಬಂ ವಿಫಲವಾಯಿತು[೧೬] ಅವರು ನಂತರ ತಮ್ಮ ಹೆಸರಿನ ಉತ್ತರಭಾಗವನ್ನು ಪೆರಿ ಎಂಬ ತಮ್ಮ ತಾಯಿಯ ವಿವಾಹಪೂರ್ವ ಹೆಸರಿಗೆ ಬದಲಾಯಿಸಿಕೊಂಡರು, ಏಕೆಂದರೆ "ಕೇಟಿ ಹಡ್ಸನ್" ಎಂಬುದು ಚಿತ್ರತಾರೆ ಕೇಟ್ ಹಡ್ಸನ್ ರ ಹೆಸರನ್ನು ಬಹಳ ಹೋಲುತ್ತಿತ್ತು.[೧೫][೧೭] ೧೭ ರ ಹರೆಯದಲ್ಲಿ ಪೆರಿ ಮನೆ ಬಿಟ್ಟು ಲಾಸ್ ಏಂಜಲೀಸ್ ಸೇರಿ, ಅಲ್ಲಿ ರೆಕಾರ್ಡಿಂಗ್ ಸಂಸ್ಥೆಯಾದ ಐಲ್ಯಾಂಡ್ ನಲ್ಲಿ ರೆಕಾರ್ಡ್ ಮಾಡಬೇಕಾಗಿದ್ದ ಆಲ್ಬಂ ಗಾಗಿ ಗ್ಲೆನ್ ಬಲ್ಲಾರ್ಡ್ ರೊಡನೆ ಕಾರ್ಯವೆಸಗಿದರು.[೧೮] ಈ ಆಲ್ಬಂ ೨೦೦೫ ರಲ್ಲಿ ಬಿಡುಗಡೆಗೆ ಸಿದ್ಧವಾಗಿತ್ತು,[೫][೧೫][೧೬] ಆದರೆ ಬಿಲ್ ಬೋರ್ಡ್ ಈ ಆಲ್ಬಂ ಸಹ ವಿಫಲವಾಯಿತೆಂದಿತು.[೧೬] ಐಲ್ಯಾಂಡ್ ಡೆಫ್ ಜ್ಯಾಮ್ ಮ್ಯೂಸಿಕ್ ಗ್ರೂಪ್I ಪೆರಿಯನ್ನು ತೊರೆಯಿತು.[೬] ಪೆರಿ ಮತ್ತು ಬಲ್ಲಾರ್ಡ್ ಒಟ್ಟಿಗೆ ಹೊರತಂದ ರೆಕಾರ್ಡ್ ಗಳೆಂದರೆ"ಬಾಕ್ಸ್", "ಡೈಮಂಡ್ಸ್", ಮತ್ತು "ಲಾಂಗ್ ಷಾಟ್"; ಇವುಗಳನ್ನು ಪೆರಿ ತಮ್ಮ ಅಧಿಕೃತ ಮೈಸ್ಪೇಸ್ ಪುಟದಲ್ಲಿ ಪ್ರಕಟಿಸಿದರು. ಬಲ್ಲಾರ್ಡ್ ರೊಡನೆ ರೆಕಾರ್ಡ್ ಮಾಡಿದ ಹಾಡುಗಳಲ್ಲಿ ಒಂದಾದ "ಸಿಂಪಲ್" ಅನ್ನು ದ ಸಿಸ್ಟರ್ಹುಡ್ ಆಪ್ ದ ಟ್ರಾವಲಿಂಗ್ ಪ್ಯಾಂಟ್ಸ್ ಎಂಬ ಚಲನಚಿತ್ರದಲ್ಲಿ ಧ್ವನಿಮುದ್ರಿಕೆಯಾಗಿ ಬಿಡುಗಡೆಯಾಯಿತು..[೧೯]

ಪೆರಿ ಕೊಲಂಬಿಯಾ ರೆಕಾರ್ಡ್ಸ್ ನೊಡನೆ ೨೦೦೪ ರಲ್ಲಿ ಕರಾರಿಗೆ ಸಹಿ ಹಾಕಿದರು. ಆದರೆ ಈ ಸಂಸ್ಥೆಯು ಪೆರಿಯ ದೃಷ್ಟಿಕೋನಕ್ಕೆ ಸಹಮತವಾಗಿರಲಿಲ್ಲ, ಪೆರಿಯನ್ನು "ಡ್ರೈವರ್ ನ ಸ್ಥಾನ"ದಲ್ಲಿ ಕೂರಿಸಲು ತಯಾರಿರಲಿಲ್ಲ..[೧೬] ಬದಲಿಗೆ, ಪೆರಿಯನ್ನುಒಂದು ಆಲ್ಬಂ ಹೊರತರಲು ಉದ್ಯುಕ್ತವಾಗಿದ್ದ ದ ಮ್ಯಾಟ್ರಿಕ್ಸ್ ಎಂಬ ರೆಕಾರ್ಡ್ ತಯಾರಿಕಾ ತಂಡದೊಡನೆ, ಅದರ ಸ್ತ್ರೀ ಕಂಠವಾಗಿ ಕಾರ್ಯದಲ್ಲಿ ತೊಡಗಿಸುವುದು ಕೊಲಂಬಿಯಾದ ಉದ್ದೇಶಗಳಲ್ಲಿ ಒಂದಾಗಿದ್ದಿತು. ಈ ಆಲ್ಬಂ ಹೊರತರುವುದನ್ನು ನಂತರ ಕೈಬಿಡಲಾಯಿತಾದರೂ,[೨೦] ಪೆರಿ ಸಂಗೀತ ಮಾಧ್ಯಮ(ಪತ್ರಿಕೆಗಳ)ದ ಗಮನ ಸೆಳೆದರು; ಅವರ ಊರ್ಧ್ವಮುಖಿ ಸಂಗೀತ ವೃತ್ತಿಜೀವನವನ್ನು ಗಮನಿಸಿದ ಬ್ಲೆಂಡರ್ ಮ್ಯಾಗಝೀನ್ ತನ್ನ ಅಕ್ಟೋಬರ್ ೨೦೦೪ ರ ಸಂಚಿಕೆಯಲ್ಲಿ ಅವರನ್ನು :ದ ನೆಕ್ಸ್ಟ್ ಬಿಗ್ ಥಿಂಗ್" ಎಂದು ಘೋಷಿಸಿತು.[೫][೧೬] ಯಾವುದೇ ಆಲ್ಬಂ ಯೋಜನೆಗಳು ಇಲ್ಲದಿದ್ದ ಸಂದರ್ಭದಲ್ಲಿ ಪೆರಿ ತಮ್ಮದೇ ಆದ ರೆಕಾರ್ಡಿಂಗ್ ಗಳನ್ನು ಮಾಡಿಕೊಳ್ಳತೊಡಗಿದರು. ಆದರೆ, ರೆಕಾರ್ಡಿಂಗ್ ಎಂಬತ್ತು ಪ್ರತಿಶತ ಮುಗಿದಿದ್ದಾಗ, ಕೊಲಂಬಿಯಾ ಅದನ್ನು ಪೂರ್ಣಗೊಳಿಸುವುದು ಬೇಡವೆಂದು ನಿರ್ಧರಿಸಿತು ಹಾಗೂ ಪೆರಿಯನ್ನು ಸಂಸ್ಥೆಯಿಂದ ಹೊರಹಾಕಿತು..[೧೬] ಮತ್ತೊಂದು ಸಂಸ್ಥೆಗಾಗಿ ಕಾಯುತ್ತಿರವ ಸಮಯದಲ್ಲಿ ಅವರು ಒಂದು ಖಾಸಗಿ A &R ಕಂಪನಿಯಾದ ಟ್ಯಾಕ್ಸಿ ಮ್ಯೂಸಿಕ್ ನಲ್ಲಿ ಕೆಲಸ ಮಾಡಿದರು. ೨೦೦೬ ರಲ್ಲಿ ಪೆರಿ P .O.D.ಯವರ ಸಿಂಗಲ್ ಆದ "ಗುಡ್ ಬೈ ಫಾರ್ ನೌ" ವಿಡಿಯೋದ ಕಡೆಯ ದೃಶ್ಯಗಳಲ್ಲಿ ಕಾಣಿಸಿಕೊಂಡರು.[೨೧] ಅವರು ಕಾರ್ಬನ್ ಲೀಫ್ ರವರ ವಿಡಿಯೋ "ಲರ್ನ್ ಟು ಫ್ಲೈ" ನಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡರು.

೨೦೦೭–೦೯: ಒನ್ ಆಫ್ ದ ಬಾಯ್ಸ್ ಮತ್ತು MTV ಅನ್ ಪ್ಲಗ್ಡ್ ಬದಲಾಯಿಸಿ

೨೦೦೬ ರಲ್ಲಿ ಕೊಲಂಬಿಯಾದಿಂದ ವಜಾಗೊಳ್ಳುವ ಸಂದರ್ಭವೊದಗುತ್ತಿದ್ದಾಗ, ಆ ಕಂಪನಿಯ ಪ್ರಚಾರ ನಿರ್ದೇಶಕಿಯಾದ ಏಂಜೆಲಿಕಾ ಕಾಬ್-ಬೇಹರ್ ಬಹಳ ಉತ್ಸಾಹದಿಂದ ಪೆರಿಯನ್ನು ವರ್ಜಿನ್ ರೆಕಾರ್ಡ್ಸ್ ನ ಅಧ್ಯಕ್ಷರಾದ ಜೇಸನ್ ಫ್ಲಾಮ್ ಗೆ ಪರಿಚಯಿಸಿದರು.[೨೨]

ಆ ಸಮಯದಲ್ಲಿ ಫ್ಲಾಮ್ ಆ ಸಂಸ್ಥೆಯ ಸಂಪೂರ್ಣ ಅದೃಷ್ಟವನ್ನೇ ಬದಲಾಯಿಸುವ ಕೆಲಸಗಲಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು ಹಾಗೂ ಅವರ ಇತ್ತೀಚಿನ ಸಾಧನೆಗಳಿಗೆ ಕಳಶಪ್ರಾಯವಾಗಿ ಒಂದು ಜಾಗತಿಕ ಮಟ್ಟದ ಪಾಪ್ ಪ್ರದರ್ಶನವನ್ನು ಪ್ರಸ್ತುತಪಡಿಸಲು ಯೋಚಿಸುತ್ತಿದ್ದರು.[೨೨] ವರ್ಜಿನ್ ನ ಸಹ ನಿರ್ದೇಶಕರ ಮಿಶ್ರ ಪ್ರತಿಕ್ರಿಯೆಯ ನಡುವೆಯೂ, ಪೆರಿ ಆ ಯಶ ತರುವಂತಹ ತಾರೆ ಎಂದು ಫ್ಲಾಮ್ ಸಂಪೂರ್ಣವಾದ ವಿಶ್ವಾಸ ಹೊಂದಿದ್ದರು ಹಾಗೂ ೨೦೦೭ ರ ಆರಂಭದಲ್ಲಿ ಕೊಲಂಬಿಯಾದೊಡನೆ ನಡೆದ ಸುದೀರ್ಘ ಚರ್ಚೆಗಳ ಫಲವಾಗಿ ಕೇಟಿ ಪೆರಿ ನೂತನವಾಗಿ ಸೃಷ್ಟಿಸಲ್ಪಟ್ಟ ಕ್ಯಾಪಿಟಲ್ ಮ್ಯೂಸಿಕ್ ಗ್ರೂಪ್ ಎಂಬ ವರ್ಜಿನ್ ಮತ್ತು ಕ್ಯಾಪಿಟಲ್ ಸಂಯುಕ್ತತೆಯಿಂದುಂಟಾದ ಸಂಸ್ಥೆಯೊಡನೆ ಕಾರ್ಯಪರ ಕರಾರಿಗೆ ಸಹಿ ಹಾಕಿದರು. ಈ ಕರಾರಿನ ಒಂದು ಭಾಗವಾಗಿ ಈ ಸಂಸ್ಥೆಯು ಕೊಲಂಬಿಯಾದಲ್ಲಿ ಪೆರಿ ರೆಕಾರ್ಡ್ ಸಂಪೂರ್ಣಗೊಳಿಸಿಲ್ಲದಿದ್ದ ಆಲ್ಬಂ ನ ಮಾಸ್ಟರ್ ಕಾಪಿಯನ್ನು ಪಡೆಯಿತು; ಈ ಮಾಸ್ಟರ್ ಕಾಪಿಯೇ ಮುಂದೆ ಪೆರಿಯ ಅಧಿಕೃತ ಚೊಚ್ಚಲ ಮುಖ್ಯವಾಹಿನಿ ಆಲ್ಬಂ ಆದ ಒನ್ ಆಫ್ ದ ಬಾಯ್ಸ್ ನ ಪ್ರಮುಖ ಅಂಶವಾಯಿತು.[೨೨]

 
ಆಗಸ್ಟ್ 2008 ರಲ್ಲಿ ಕಾರ್ಯಕ್ರಮ ನೀಡುತ್ತಿರುವ ಪೆರಿ.

ಕೊಲಂಬಿಯಾ ರೆಕಾರ್ಡಿಂಗ್ ಗಳನ್ನು ನೋಡಿದ ಫ್ಲಾಮ್ "ಇವು ಬಹಳ ಶಕ್ತಿಯತವಾಗಿವೆ, ಆದರೆ ಜನಪ್ರಿಯತೆ ಗಳಿಸುವ ಒಂದೋ, ಎರಡೋ ಹಾಡುಗಳನ್ನು ಸೇರಿಸಿದರೆ ಯು.ಎಸ್. ಪಾಪ್ ರೇಡಿಯೋ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗುತ್ತದೆ" ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು; ತತ್ಕಾರಣ ಕರಾರಿಗೆ ಸಹಿ ಹಾಕಿದ ತಕ್ಷಣ ನಿರ್ದೇಶಕರು ಮಾಡಿದ ಮೊದಲ ಕೆಲಸವೆಂದರೆ ಪೆರಿ ಮತ್ತು ಲೇಖಕ-ನಿರ್ಮಾಪಕ ಡಾ. ಲ್ಯೂಕ್ ರನ್ನು ಜೊತೆಗೂಡಿ ಕೆಲಸ ಮಾಡುವಂತೆ ವ್ಯವಸ್ಥೆ ಮಾಡಿದುದು.[೨೨] ಈ ಜೋಡಿ ಒಟ್ಟಿಗೆ ಕಾರ್ಯನಿರತವಾದುದರ ಫಲವೇ "ಐ ಕಿಸ್ಡ್ ಎ ಗರ್ಲ್" ಮತ್ತು "ಹಾಟ್ ಎಂಡ್ ಕೋಲ್ಡ್". ಪೆರಿಗೆ ಒಂದು ವಿಶೇಷ ವ್ಯಕ್ತಿತ್ವವನ್ನು ಸ್ಥಾಪಿಸುವಂತಹುದು ವ್ಯವಸ್ಥಾಪಕರ ತಕ್ಷಣದ ಯೋಜನೆಯಾಗಿತ್ತು.[೧೬] ನವೆಂಬರ್ ೨೦೦೭ ರಲ್ಲಿ "ಯೂ ಆರ್ ಸೋ ಗೇ" ವಿಡಿಯೋ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಪೆರಿಯನ್ನು ಸಂಗೀತದ ಮಾರುಕಟ್ಟೆಗೆ ಪರಿಚಯಿಸುವ ಸಲುವಾಗಿ ಒಂದು ಪ್ರಚಾರಕಾರ್ಯವನ್ನೇ ಹಮ್ಮಿಕೊಳ್ಳಲಾಯಿತು. ಆನ್ ಲೈನ್ ಮಾತುಕತೆ ಮತ್ತು ಪೇಪರ್ ಗಳಲ್ಲಿ ಕಥೆಗಳನ್ನು ಸೃಷ್ಟಿಸುವ ಸಲುವಾಗಿ ಒಂದು ವಿದ್ಯುನ್ಮಾನದ EP ಯನ್ನು "ಯೂ ಆರ್ ಸೋ ಗೇ" ಯನ್ನು ಮುಂದಿಟ್ಟುಕೊಂಡು ಬಿಡುಗಡೆ ಮಾಡಲಾಯಿತು.[೯][೧೬][೨೩] ಈ ಹೆಜ್ಜೆಯು ಫಲಪ್ರದವಾಯಿತು ಹಾಗೂ ಇದರಿಂದ ಪೆರಿ ಮಡೋನಾ[೧೬] ರ ಗಮನವನ್ನು ಸೆಳೆಯುವುದು ಸಾಧ್ಯವಾಯಿತು; ಮಡೋನಾ ಪೆರಿಯ ಹೆಸರನ್ನು KISS FM ನಲ್ಲಿ ಉಲ್ಲೇಖಿಸಿದರು ಹಾಗೂ KRQನ ಅರಿಝೋನಾಜಾನ್ ಜೇ & ರಿಚ್ ಬೆಳಗಿನ ಕಾರ್ಯಕ್ರಮದಲ್ಲೂ ಉಲ್ಲೇಖವಾಯಿತು. ಮಾರ್ಚ್ ೧೦, ೨೦೦೮ ರಂದು ಅವರು ತಾವೇ ಪಾತ್ರವಾಗಿ ABC ಫ್ಯಾಮಿಲಿ ಟೆಲಿವಿಷನ್ ಧಾರವಾಹಿ ವೈಲ್ಡ್ ಫೈರ್ ನ "ಲೈಫ್ ಈಸ್ ಟೂ ಷಾರ್ಟ್" ಎಂಬ ಸಂಚಿಕೆಯಲ್ಲಿ ಕಾಣಿಸಿಕೊಂಡರು.[೨೪]

ಅವರ ಮುಂದಿನ ಹೆಚ್ಚೆ ಆಲ್ಬಂ ನ ಪ್ರಚಾರವಾಗಿದ್ದು, ಅದಕ್ಕಾಗಿ ಅವರು ಎರಡು ತಿಂಗಳ ಕಾಲ ರೇಡಿಯೋ ಸ್ಟೇಷನ್ ಗಳ ಪ್ರವಾಸ ಕೈಗೊಂಡರು. ಆ ಆಲ್ಬಂನ ಅಧಿಕೃತ ಪ್ರಮುಖ ಸಿಂಗಲ್ ಆದ "ಐ ಕಿಸ್ಡ್ ಎ ಗರ್ಲ್" ಅನ್ನು ಮೇ ೬ , ೨೦೦೮ ರಂದು ಬಿಡುಗಡೆ ಮಾಡಲಾಯಿತು. ಪೆರಿಯ A&R, ಕ್ರಿಸ್ ಅನೋಕುಟೆ, ಈ ಹಾಡು ಮತ್ತು ಹಾಡಿನಲ್ಲಿದ್ದ ವಿವಾದಾತ್ಮಕ ವಿಷಯವು ಸಂಸ್ಥೆಯಲ್ಲಿಯೇ ತೀವ್ರವಾದ ಪ್ರತಿರೋಧವನ್ನು ಎದುರಿಸಿತು, ಇದು ರೇಡಿಯೋದಲ್ಲಿ ಎಂದು ಪ್ರಸಾರವಾಗಲಾರದು ಎಂದು ಜನರು ಹೇಳಿದರು" ಎಂದು ಹಿಟ್ ಕ್ವಾರ್ಟ್ರರ್ಸ್ ಗೆ ಹೇಳಿದರು. "ನಾವು ಇದನ್ನು ಹೇಗೆ ಮಾರುವುದು? ಬೈಬಲ್ ಪ್ರದೇಶದಲ್ಲಿ ಇದನ್ನು ಹೇಗೆ ಪ್ರದರ್ಶಿಸುವುದು?'"ಎಂಬುದು ಪ್ರಮುಖವಾದ ಪ್ರಶ್ನೆಯಾಗಿತ್ತು.[೨೩][೨೩] ಜನಗಳು ಈ ರೆಕಾರ್ಡ್ ನಲ್ಲಿ ವಿಶ್ವಾಸ ಇಡುವಂತೆ ಜನರ ಮನವೊಲಿಸಲು ಸಂಸ್ಥೆಯ ರೇಡಿಯೋ ಪ್ರಚಾರಕರಲ್ಲೊಬ್ಬರ ಬೆಂಬಲವು ದೊರೆತರೆ ಮಾತ್ರ ಬಿಕ್ಕಟ್ಟು ಉಂಟಾಗದೆಂದು ಅನೋಕುಟೆ ಹೇಳಿದರು. ಇಲ್ಲವಾದರೆ ಪೆರಿಯನ್ನು ಮತ್ತೆ ಕೈಬಿಡಬೇಕಾಗುತ್ತಿತ್ತು. ಕ್ಯಾಪಿಟಲ್ ನ ಪ್ರಚಾರಾಂಗದ ಹಿರಿಯ ಉಪಾಧ್ಯಕ್ಷರಾದ ಡೆನಿಸ್ ರೀಸ್ ಈ ಮುಂದಾಲೋಚನೆಯನ್ನು ಮನಗಂಡರು ಹಾಗೂ ಈ ಸಿಂಗಲ್ ಅನ್ನು ರಾಷ್ಟ್ರೀಯ ರೇಡಿಯೋದಲ್ಲಿ ಪ್ರಸಾರಗೊಳಿಸುವುದಕ್ಕೆ ಸಹಾಯ ಮಾಡಿದರು. ಈ ಹಾಡನ್ನು ತೆಗೆದುಕೊಂಡು ಒಂದು ಕೈ ನೋಡಿಯೇ ಬಿಡಲು ಧೈರ್ಯ ಮಾಡಿದ ಮೊದಲ ರೇಡಿಯೋ ನ್ಯಾಷ್ ವಿಲ್ಲಾದ ದ ರಿವರ್. ಮೂರು ದಿನಗಳ ಕಾಲ ಈ ಹಾಡು ಪ್ರಸಾರವಾದ ನಂತರ ಅವರಿಗೆ ಉತ್ಸಾಹದ ಕರೆಗಳ ಮಹಾಪೂರವೇ ಬಂದೊದಗಿತು.[೨೩] ಈ ಹಾಡು ಜನಪ್ರಿಯತೆಯ ಪಟ್ಟಿಯಲ್ಲಿ ಮೇಲೇರಿದಂತೆ ಪೆರಿ ವಾರ್ಷಿಕ ವಾರ್ಪ್ಡ್ ಪ್ರವಾಸ ಸಂಗೀತೋತ್ಸವಕ್ಕೆ ಹೊರಟರು; ಈ ಉತ್ಸವವನ್ನು ಪೆರಿಯ ವ್ಯವಸ್ಥಾಪಕ ಸಂಸ್ಥೆಯೇ "ಪೆರಿಯು ಒಬ್ಬ ಒಳ್ಳೆಯ ಗಾಯಕಿ ಮತ್ತು ಅಭಿನೇತ್ರಿ ಹಾಗೂ ಕೇವಲ ಒಂದು ಯಶಸ್ಚಿ ಆಲ್ಬಂ ಗೆ ಸೀಮಿತವಾದವರಲ್ಲ"ಎಂಬುದನ್ನು ಜನತೆಗೆ ಮನದಟ್ಟು ಮಾಡಲು ಹಮ್ಮಿಕೊಳ್ಳುತ್ತಿದ್ದಿತು.[೧೬] ಈ ಸಿಂಗಲ್ ಆರ್ಥಿಕವಾಗಿಯೂ ಯಶಸ್ವಿಯಾಯಿತು ಹಾಗೂ ಬಿಲ್ ಬೋರ್ಡ್ ಹಾಟ್ ೧೦೦ ನಲ್ಲಿ ಏಳು ವಾರಗಳ ಕಾಲ ಮೊದಲ ಸ್ಥಾನದಲ್ಲಿದ್ದಿತು.[೧೬] ಅದು ನಂತರದ ದಿನಗಳಲ್ಲಿ ಪ್ರಮುಖ ಜಾಗತಿಕ ಯಶಸ್ಸನ್ನು ಪಡೆಯಿತು; ಅದು ೩೦ ದೇಶಗಳಲ್ಲಿ ಜನಪ್ರಿಯತೆಯ ಪಟ್ಟಿಯಲ್ಲಿ ಆಗ್ರಸ್ಥಾನ ಪಡೆಯಿತು. ಆ ದೇಶಗಳಲ್ಲಿ ಕೆಲವು ಪ್ರಮುಖವಾದುವೆಂದರೆ[೨೦] ಆಸ್ಟ್ರೇಲಿಯಾ, ಕೆನಡಾ ಮತ್ತು ಯುನೈಟೆಡ್ ಕಿಂಗ್ಡಂ.[೨೫] ಜೂನ್ ೧೨, ೨೦೦೮ ರಂದು ಪೆರಿ ಮತ್ತೆ ತಮ್ಮ ನಿಜನಾಮದಲ್ಲೇ ದೈನಿಕ ಓಪ್ರಾ ದ ಯಂಗ್ ಎಂಡ್ ದ ರೆಸ್ಟ್ ಲೆಸ್ ನಲ್ಲಿ ಕಾಣಿಸಿಕೊಂಡರು,[೨೪] ಹಾಗೂ ರೆಸ್ಟ್ ಲೆಸ್ ಸ್ಟೈಲ್ ಎಂಬ ಕಾದಂಬರಿ ಆಧಾರಿತ ಮ್ಯಾಗಝೀನ್ ನ ಜೂನ್ ೨೦೦೮ ರ ಸಂಚಿಕೆಯ ಮುಖಪುಟಕ್ಕಾಗಿ ಪೋಸ್ ನೀಡಿದರು.[೨೬]

 
ಸೆಪ್ಟೆಂಬರ್ 2008 ರಲ್ಲಿ ಬರ್ಲಿನ್ ನಲ್ಲಿ ನೇರ ಕಾರ್ಯಕ್ರಮ ನೀಡುತ್ತಿರುವ ಪೆರಿ.

ಒನ್ ಆಫ್ ದ ಬಾಯ್ಸ್ ಜೂನ್ ೧೭, ೨೦೦೮ ರಂದು ಬಿಡುಗಡೆಯಾಯಿತು ಹಾಗೂ ಮಿಶ್ರ ಪ್ರತಿಕ್ರಿಯೆಯನ್ನ ಗಳಿಸಿತು.[೨೭] ಈ ಆಲ್ಬಂ ಬಿಲ್ ಬೋರ್ಡ್ ೨೦೦[೨೮] ನಲ್ಲಿ ಒಂಬತ್ತನೆಯ ಸ್ಥಾನ ಗಳಿಸಿತು ಹಾಗೂ ರೆಕಾರ್ಡಿಂಗ್ ಇಂಡಸ್ಟ್ರಿ ಅಸೋಸಿಯೇಷನ್ ಆಫ್ ಅಮೆರಿಕದಿಂದ ಪ್ಲಾಟನಂ ಎಂದು ಘೋಷಿತವಾಯಿತು.[೨೯] ಪೆರಿ ತಮ್ಮ ಎರಡನೆಯ ಸಿಂಗಲ್ ಆದ "ಹಾಟ್ ಎಂಡ್ ಕೋಲ್ಡ್" ಅನ್ನು ಬಿಡುಗಡೆ ಮಾಡಲಾಯಿತು. ಇದು ಜಗತ್ತಿನ ಡಝನ್ ಗಟ್ಟಲೆ ದೇಶಗಳಲ್ಲಿ ಮೂರನೆಯ ಸ್ಥಾನವನ್ನಲಂಕರಿಸಿದ ಎರಡನೆಯ ಸಿಂಗಲ್ ಆಯಿತು; ಯುನೈಟೆಡ್ ಸ್ಟೇಟ್ಸ್ ನಲ್ಲಿ ಅದು ಬಿಲ್ ಬೋರ್ಡ್ ಹಾಟ್ ೧೦೦[೧೬] ನ ಮೂರನೆಯ ಸ್ಥಾನ ಪಡೆಯಿತು, ಜರ್ಮನಿ, ಕೆನಡಾ ಮತ್ತು ಡೆನ್ಮಾರ್ಕ್ ನಲ್ಲಿ ಮೊದಲನೆಯ ಸ್ಥಾನಕ್ಕೇರಿತು. ಪೆರಿ ತನ್ನ ವಾರ್ಪ್ಡ್ ಪ್ರವಾಸದ ಪ್ರದರ್ಶನಗಳನ್ನು ಮುಗಿಸುತ್ತಿದ್ದಂತೆಯೇ ಯೂರೋಪ್ ಗೆ ಪ್ರಯಾಣ ಬೆಳೆಸಿದರು. ಅವರು ನಂತರ ತಮ್ಮ ಮೊದಲ ಶೀರ್ಷಿಕಾಕರ್ಷಕ ಪ್ರವಾಸವಾದ ಹೆಲೋ ಕೇಟಿ ಟೂರ್ ಅನ್ನು ಜನವರಿ ೨೦೦೯ ರಲ್ಲಿ ಪ್ರಾರಂಭಿಸಿದರು.[೧೬] "ಐ ಕಿಸ್ಡ್ ಎ ಗರ್ಲ್l" ನಿಂದ ಪೆರಿಯ ಹೆಸರು ಶ್ರೇಷ್ಠ ಸ್ತ್ರೀ ಪಾಪ್ ಗಾಯನ ಪ್ರದರ್ಶನ ಪ್ರಶಸ್ತಿಗಾಗಿ ೨೦೦೯ ರ ಗ್ರಾಮಿ ಅವಾರ್ಡ್ಸ್ ನಲ್ಲಿ ಸೂಚಿಸಲಾಯಿತು.[೩೦] ೨೦೦೮ ರ MTV ವಿಡಿಯೋ ಮ್ಯೂಸಿಕ್ ಅವಾರ್ಡ್ಸ್ ನಲ್ಲಿ ಪೆರಿಯ ಹೆಸರನ್ನು ೫ ವಿಭಾಗಗಳಲ್ಲಿ ಸೂಚಿಸಲಾಯಿತು, ಅವುಗಳಲ್ಲಿ ಶ್ರೇಷ್ಠ ನೂತನ ಕಲಾವಿದೆ ಮತ್ತು ಅತ್ಯುತ್ತಮ ವಿಡಿಯೋ ವಿಭಾಗಗಳು ಸೇರಿದ್ದವು; ಆದರೆ ಬ್ರಿಟ್ನಿ ಸ್ಪಿಯರ್ಸ್ ಅವನ್ನು ಗೆದ್ದುಕೊಂಡರು.[೩೧] ೨೦೦೮ MTV ಯೂರೋಪರ ಮ್ಯೂಸಿಕ್ ಅವಾರ್ಡ್ಸ್ ನಲ್ಲಿ ಅವರು ಸಹನಿರೂಪಕಿಯಾಗಿ ರೂಪಿಸಿದ್ದ ಅಂಕಕ್ಕಾಗಿ ಶ್ರೇಷ್ಠ ನೂತನ ಅಂಕ ಪ್ರಶಸ್ತಿ ಪಡೆದರು,[೩೨] ೨೦೦೯ ರ BRIT ಅವಾರ್ಡ್ಸ್ ನಲ್ಲಿ ಶ್ರೇಷ್ಠ ಅಂತಾರಾಷ್ಟ್ರೀಯ ಸ್ತ್ರೀ ಕಲಾವಿದೆ ಎಂಬ ಪ್ರಶಸ್ತಿ ಪಡೆದರು.[೩೩] ಫೆಬ್ರವರಿ ೯, ೨೦೦೯, "ಐ ಕಿಸ್ಡ್ ಎ ಗರ್ಲ್" ಮತ್ತು "ಹಾಟ್ ಎಂಡ್ ಕೋಲ್ಡ್" ಎರಡೂ ತ್ರಿಗುಣ ಪ್ಲಾಟಿನಂ ಎಂದು ರೆಕಾರ್ಡಿಂಗ್ ಇಂಡಸ್ಟ್ರಿ ಅಸೋಸಿಯೇಷನ್ ಆಫ್ ಅಮೆರಿಕ ಘೋಷಿಸಿತು; ಇದಕ್ಕೆ ಹಿನ್ನೆಲೆ ಇವೆರಡೂ ತಲಾ ಮೂರು ಮಿಲಯನ್ ಕಾಪಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದವು.[೩೪] ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತನ್ನ ೨೦೧೦ ರ ಆವೃತ್ತಿಯಲ್ಲಿ ಪೆರಿಯ ಸಾಧನೆಯನ್ನು "ಮಹಿಳಾ ಕಲಾವಿದೆಯೊಬ್ಬಳಿಂದ ಯುಎಸ್ ವಿದ್ಯುನ್ಮಾನ ಪಟ್ಟಿಯಲ್ಲಿ ಅತ್ಯಂತ ಉತ್ತಮವಾದ ಆರಂಭ" ಎಂದು ಉಲ್ಲೇಖಿಸಿತು; ಅವರ ಎರಡೂ ಸಿಂಗಲ್ ಗಳು ಎರಡು ಮಿಲಿಯನ್ ಗಳಿಗಿಂತಲು ಹೆಚ್ಚು ಮಾರಾಟವಾದುದರಿಂದ ಪೆರಿಗೆ ಈ ದಾಖಲೆ ಲಭ್ಯವಾಯಿತು.[೩೫]

ಪೆರಿ ಅಭಿನಯಿಸಿರುವ/ಹಾಡಿರುವ ದ ಮ್ಯಾಟ್ರಿಕ್ಸ್ ನ ಅದೇ ಹೆಸರಿನ ಚೊಚ್ಚಲ ಆಲ್ಬಂ, ತಂಡದ ಚಿಹ್ನೆಯಾದ ಲೆಟ್ಸ್ ಹಿಯರ್ ಇಟ್ ಮೂಲಕ, ಪೆರಿಯ ಏಕವ್ಯಕ್ತಿ ಪ್ರವಾಸದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಬಿಡುಗಡೆಯ ದಿನಾಂಕವನ್ನು ಘೋಷಿಸಿದಾಗ "ಐ ಕಿಸ್ಡ್ ಎ ಗರ್ಲ್" ಜನಪ್ರಿಯತೆಯ ಪಟ್ಟಿಯಲ್ಲಿ ಮೇಲಿದ್ದಿತು. ಮ್ಯಾಟ್ರಿಕ್ಸ್ ಸದಸ್ಯ ಲಾರೆನ್ ಕ್ರಿಸ್ಟಿ ಪೆರಿಗೆ ಈ ನಿರ್ದಾರದ ಬಗ್ಗೆ ತಿಳಿಸಿದರು, ಆದರೆ ಅವರು ಒನ್ ಆಫ್ ದ ಬಾಯ್ಸ್ ನ ನಾಲ್ಕನೆಯ ಸಿಂಗಲ್ ಅನ್ನು ರವಾನೆ ಮಾಡುವವರೆಗೆ ಈ ಬಿಡುಗಡೆಯನ್ನು ಮುಂದಕ್ಕೆ ತಳ್ಳಲು ಬಯಸಿದರು. ಈ ಮಾತುಕತೆಯ ನಂತರವೂ ದ ಮ್ಯಾಟ್ರಿಕ್ಸ್ ಅನ್ನು ಟ್ಯೂನ್ ಸ್ಟೋರ್ಸ್ ಮೂಲಕ ಜನವರಿ ೨೭, ೨೦೦೯ ರಂದು ಬಿಡುಗಡೆ ಮಾಡಲಾಯಿತು.[೩೬]

 
ಜೂನ್ 2009 ರಲ್ಲಿ ಕಾರ್ಯಕ್ರಮ ನೀಡುತ್ತಿರುವ ಪೆರಿ.

ಡಿಸೆಂಬರ್ ೨೦೦೮ ರಲ್ಲಿ ಪೆರಿ ತಾನು ಲಿಲಿ ಅಲೆನ್ ರ 'ಸಣಕಲ ಮಾದರಿ' ಎಂದು ನುಡಿದುದಕ್ಕೆ ಲಿಲಿ ಅಲೆನ್ ರ ಕ್ಷಮಾಪಣೆ ಕೇಳುತ್ತಾ, ಅದನ್ನು ತಾನು ಕೇವಲ ತಮಾಷೆಗೆಂದು ನುಡಿದದ್ದೆಂದು ಹೇಳಿದರು.[೩೭] ಅಲೆನ್ ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುತ್ತಾ, ಬ್ರಿಟಿಷ್ ರೇಡಿಯೋ ಸ್ಟೇಷನ್ ನವರೊಡನೆ "ಪೆರಿ ವಾಸ್ತವವಾಗಿ ನನ್ನ ಅಮೆರಿಕನ್ ಅವತರಣಿಕೆಯೇ ಎಂದು ನನಗೆ ತಿಳಿದಿದೆ, ಏಕೆಂದರೆ ಪೆರಿಯ ರೆಕಾರ್ಡಿಂಗ್ ಕಂಪನಿಗೆ ಪೆರಿಯಂತಹ ವಿವಾದಾತ್ಮಕ ಮತ್ತು 'ಕೂಕಿ' ವ್ಯಕ್ತಿ ಬೇಕಾಗಿದೆ" ಎಂದು ನುಡಿದರು.[೩೮]

ಮೇ ೧೬, ೨೦೦೯ ರಂದು ಪೆರಿ ಆಸ್ಟ್ರಿಯಾದ ವಿಯೆನ್ನಾದಲ್ಲಿ ನಡೆಯುವ ಲೈಫ್ ಬಾಲ್ ನ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಿದರು.[೩೯] ಜೂನ್ ೨೦೦೯ ರಲ್ಲಿ ಕೇಟಿ ಪೆರಿಯ ವಕೀಲರು ಆಸ್ಟ್ರೇಲಿಯಾದ ಫ್ಯಾಷನ್ ವಿನ್ಯಾಸಕಿ ಕೇಟೀ ಪೆರಿ ತಮ್ಮ ಲೌಂಜ್ ವೇರ್ (ಹಜಾರದಲ್ಲಿ ಬಳಸುವ ವಸ್ತುಗಳು) ಮಾರಾಟ ಮಾಡಲು ತಮ್ಮ ಹೆಸರನ್ನೇ ಲಾಂಛನವಾಗಿ ಬಳಸುವುದನ್ನು ವಿರೋಧಿಸಿದರು.[೪೦] ಮಾಧ್ಯಮದ ಕೆಲವು ವಾಹಿನಿಗಳು ಇದನ್ನು ದಾವೆ ಎಂದೇ ವರದಿ ಮಾಡಿದವಾದರೂ ಪೆರಿ ತಮ್ಮ ಬ್ಲಾಗ್ ನಲ್ಲಿ ಇದನ್ನು ಅಲ್ಲಗಳೆದರು.[೪೧] ವಿನ್ಯಾಸಕಿ ಕೇಟೀ ಪೆರಿ ಜುಲೈ ೧೦, ೨೦೦೯ ರಂದು IP ಆಸ್ಟ್ರೇಲಿಯಾದಲ್ಲಿ ನಡೆದ ಒಂದು ಹಿಯರಿಂಗ್ ನಂತರ ಗಾಯಕಿಯ ವಕೀಲರು ಕೇಸನ್ನು ಹಿಂದಕ್ಕೆ ತೆಗೆದುಕೊಂಡರು ಎಂದು ತಮ್ಮ ಬ್ಲಾಗ್ ನಲ್ಲಿ ಬರೆದರು.[೪೨] ೨೦೦೯ ರ ಬೇಸಿಗೆಯಲ್ಲಿ ಪೆರಿ ಗೆಟ್ ಹಿಮ್ ಟು ದ ಗ್ರೀಕ್ ಚಲನಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಅಭಿನಯಿಸಿದರು; ಚಿತ್ರದಲ್ಲಿ ತಮ್ಮ ಬಾವಿ ಪ್ರಿಯತಮ ರಸೆಲ್ ಬ್ರ್ಯಾಂಡ್ ರನ್ನು ಚುಂಬಿಸುವ ದೃಶ್ಯವು ಇದ್ದಿತು, ಆದರೆ ಅದನ್ನು ಕತ್ತರಿಸಲಾಯಿತು ಹಾಗೂ ಕಡೆಯದಾಗಿ ಆ ಚಿತ್ರದಲ್ಲಿ ಆ ದೃಶ್ಯ ನಾಪತ್ತೆಯಾಯಿತು. ಈ ವಿಚಾರವನ್ನು MTV ಯೊಂದಿಗೆ ಮಾತನಾಡುತ್ತಾ, ಪೆರಿ ತನ್ನ ಮಾದಕ ಪ್ರಣಯ ದೃಶ್ಯಗಳನ್ನು ವೀಕ್ಷಕರು ಕಂಡಿದ್ದಿದ್ದರೆ ಅವರ ನಿಜಾನುಭವವೂ ಸಪ್ಪೆಯೆನಿಸುತ್ತಿದ್ದುದರಿಂದ ಅದಕ್ಕೆ ಕತ್ತರಿ ಹಾಕಿದರೇನೋ ಎಂದು ನುಡಿದರು.[೪೩] ೨೦೦೯ ರಲ್ಲಿ ಪೆರಿ ಎರಡು ಸಿಂಗಲ್ ಗಳಲ್ಲಿ ಕಾಣಿಸಿಕೊಂಡರು; ಕೊಲರಾಡೋದಲ್ಲಿರುವ ಬ್ಯಾಂಡ್ ೩OH! ೩ನ ಹಾಡಾದ "ಸ್ಟಾರ್ ಸ್ಟ್ರಕ್"ನ ಮರುಸಂಕಲನ ಆಗಸ್ಟ್ ನಲ್ಲಿ (ಈ ಸಂಯುಕ್ತತೆಯ ಆಲೋಚನೆ ಆರಂಭವಾದುದು ೩OH! ಒಳಗೊಂಡಂತೆ ಪೆರಿ ಕೈಗೊಂಡ ಪ್ರವಾಸದ ನಂತರ೩;ಇದು ಬೆಂಗಾವಲಿನ ಪ್ರದರ್ಶನವಾಗಿತ್ತು). ಈ ಹಾಡನ್ನು ಐ ಟ್ಯೂನ್ಸ್ ನಲ್ಲಿ ಸೆಪ್ಟೆಂಬರ್ ೮, ೨೦೦೯ ರಂದು ಬಿಡುಗಡೆ ಮಾಡಲಾಯಿತು. "ಇಫ್ ವಿ ಎವರ್ ಮೀಟ್ ಎಗೇಯ್ನ್", ಎಂಬ ನಾಲ್ಕನೆಯ ಸಿಂಗಲ್ ಟಿಂಬಾಲ್ಯಾಂಡ್ ಸ ಆಲ್ಬಂ ಆದು ಷಾಕ್ ವ್ಯಾಲ್ಯೂ ವಿನಿಂದ ಕರ್ಷಿಸಿದ ಹಾಡಾಗಿದ್ದು, ಇದು ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲಾಯಿತು.[೪೪] ಅಕ್ಟೋಬರ್ ೨೦೦೯ ರಲ್ಲಿ MTV ಅನ್ ಪ್ಲಗ್ಡ್ ಪೆರಿ ತಮ್ಮ ಸಂಸ್ಥೆಯಲ್ಲಿ ಪ್ರದರ್ಶನ ನೀಡುವ ಕಲಾವಿದೆಯರಲ್ಲಿ ಒಬ್ಬರೆಂದೂ, ಪೆರಿ ಒಂದು ಚೈತನ್ಯಭರಿತ ಆಲ್ಬಂ ಅನ್ನು ಬಿಡುಗಡೆ ಮಾಡುತ್ತಿರುವರೆಂದು, ಅದರಲ್ಲಿ ಎರಡು ಹೊಸ ಟ್ರ್ಯಾಕ್ ಗಳಾದ "ಬ್ರಿಕ್ ಬೈ ಬ್ರಿಕ್" ಮತ್ತು ಫೌಂಟೆನ್ಸ್ ಆಫ್ ವೇಯ್ನ್ ಕವಚವುಳ್ಳ "ಹ್ಯಾಕೆನ್ಸಾಕ್" ಇರುವವೆಂದೂ ಹೇಳಿದರು.[೪೫] ಈ ಆಲ್ಬಂ ಅನ್ನು ನವೆಂಬರ್ ೧೭ ರಂದು ಬಿಡುಗಡೆ ಮಾಡಲಾಯಿತು ಹಾಗೂ ಇದರಲ್ಲಿ ಒಂದು CD ಮತ್ತು ಒಂದು DVD ಗಳಿವೆ.[೪೬]

೨೦೧೦ ರಿಂದ ಇಂದಿನವರೆಗೆ: ಟೀನೇಜ್ ಡ್ರೀಮ್ ಬದಲಾಯಿಸಿ

ಜೂನ್ ೨೮ , ೨೦೧೦ ರಂದು ಬ್ರಿಟಿಷ್ ಟೆಲಿವಿಸನ್ ಷೋ ನ ಕಾರ್ಯಕ್ರಮವಾದ ದ ಎಕ್ಸ್ ಫ್ಯಾಕ್ಟರ್ ನ ಏಳನೆಯ ಸರಣಿಯ ಡ್ಯುಬ್ಲಿನ್ ಆಡಿಷನ್ ಹಂತದಲ್ಲಿ ಪೆರಿ ಗೌರವ ತೀರ್ಪುಗಾರರಾಗಿ ಸೈಮನ್ ಕೊವೆಲ್, ಚೆರಿಲ್ ಕೋಲ್ ಮತ್ತು ಲೂಯಿಸ್ ವಾಲ್ಷ್ ರೊಡನೆ ಕಾಣಿಸಿಕೊಂಡರು.[೪೭] (ನಂತರ ಇದನ್ನು ಆಗಸ್ಟ್t ೨೮ ರಂದು ಪ್ರಸಾರ ಮಾಡಲಾಯಿತು). ಡನ್ನೀ ಮಿನೋಗ್ ಬಾಣಂತನದ ರಜೆಯಲ್ಲಿದ್ದಾಗ ತೀರ್ಪುಗಾರರ ಪಾತ್ರವನ್ನು ತುಂಬಲು ಆಯ್ಕೆಯಾದ ಹಲವಾರು ತಾರೆಯರ ಪೈಕಿ ಪೆರಿ ಸಹ ಒಬ್ಬರಾಗಿದ್ದರು. ಪೆರಿ ನಂತರ ಈ ಕಾರ್ಯಕ್ರಮಕ್ಕೆ ಅಕ್ಟೋಬರ್ ೧೭ ರಂದು ಮರಳಿಬಂದು ಫೈರ್ವರ್ಕ್ಸ್ ಪ್ರದರ್ಶನದಲ್ಲಿ ಭಾಗವಹಿಸಿದರು. ಪೆರಿಯ ಎರಡನೆಯ ಮುಖ್ಯವಾಹಿನಿ ಸ್ಟುಡಿಯೋ ಆಲ್ಬಂ ನ ಶೀರ್ಷಿಕೆ ಟೀನೇಜ್ ಡ್ರೀಮ್ಸ್ ; ಇದು ಆಗಸ್ಟ್ ೨೦೧೦ ರಲ್ಲಿ ಬಿಡುಗಡೆ ಮಾಡಲಾಯಿತು. ಇದರಿಂದ ಹೊರಬಂದ ಮೊದಲ ಸಿಂಗಲ್ ಆಲ್ಬಂ ನ ಹೆಸರು "ಕ್ಯಾಲಿಫೋರ್ನಿಯಾ ಗರ್ಲ್ಸ್". ಈ ಸಿಂಗಲ್ ಬಿಲ್ ಬೋರ್ಡ್ ಹಾಟ್ ೧೦೦ ನ ಶಿಖರವನ್ನೇ ಮಟ್ಟಿತು ಹಾಗೂ ೧೯೬೭ ರಲ್ಲಿ ಬಿಡುಗಡೆಗೊಂಡ ಓಡ್ ಬಿಲ್ಲೀ ಜೋ ಎಂಬ ಬಾಬ್ಬೀ ಜೆಂಟ್ರಿ ಯವರ ಸಿಂಗಲ್ ಗಿಂತಲೂ ಹೆಚ್ಚಿನ ವೇಗದಲ್ಲಿ ಔನ್ನತ್ಯಕ್ಕೇರುತ್ತಿದ್ದ ಕ್ಯಾಪಿಟಲ್ ರೆಕಾರ್ಡ್ಸ್ ಕಲಾವಿದರ ಸಿಂಗಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು..[೪೮] ಟೀನೇಜ್ ಡ್ರೀಮ್ಸ್ ನ ಮೇಲ್ಕವಚದ ಮೇಲಿನ ಕಲಾಕೃತಿಯು ವಿಲ್ ಕಾಟನ್ ರಚಿಸಿದ ಕಲಾಕೃತಿಯಾಗಿದೆ; ಇದರಲ್ಲಿ ಪೆರಿ ಹತ್ತಿಯ ಕ್ಯಾಂಡಿಯ ಮೇಲೆ ಬೆತ್ತಲೆ ಮಲಗಿರುವುದನ್ನು ಚಿತ್ರಿಸಲಾಗಿದೆ; ಇದು ಪೆರಿ "ಕ್ಯಾಲಿಫೋರ್ನಿಯಾ ಗರ್ಲ್ಸ್" ಗಾಗಿ ತಯಾರಿಸಿದ ವೀಡಿಯೋದಲ್ಲಿನ ಪೆರಿಯ ದೃಶ್ಯಗಳನ್ನು ಹೋಲುತ್ತದೆ.[೪೯] ಈ ಆಲ್ಬಂ ನ ನೈಜ ಆವೃತ್ತಿಯ ಕೈಪಿಡಿಯು, ಕಾಟನ್ ಕ್ಯಾಂಡಿಯ ವಿಚಾರವನ್ನೇ ಮುಂದುವರಿಸಿದಂತೆ, ಕಾಟನ್ ಕ್ಯಾಂಡಿಯ ವಾಸನೆಯನ್ನೇ ಹೊಂದಿದೆ.[೫೦] ಈ ಆಲ್ಬಂನ ಎರಡನೆಯ ಸಿಂಗಲ್ "ಟೀನೇಜ್ ಡ್ರೀಮ್" ಅನ್ನು ಜುಲೈ ೨೦೧೦ ರಲ್ಲಿ ಬಿಡುಗಡೆ ಮಾಡಲಾಯಿತು.[೫೧] "ಫೈರ್ ವರ್ಕ್" ಈ ಆಲ್ಬಂನ ಮೂರನೆಯ ಸಿಂಗಲ್.

ಸೆಪ್ಟೆಂಬರ್ ೧೨, ೨೦೧೦ ರಂದು ಕೇಟಿ ಪೆರಿ ೨೦೧೦ ರ MTV ವಿಡಿಯೋ ಮ್ಯೂಸಿಕ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು[೫೨] ಅವರ ಹೆಸರನ್ನು ಎರಡು ಪ್ರಶಸ್ತಿಗಳಿಗೆ ಸೂಚಿಸಲಾಗಿತ್ತು ಹಾಗೂ ಅವರಿಗೆ ನಿಕ್ ಮಿನಾಜ್j ರೊಡನೆ "ಶ್ರೇಷ್ಠ ಪುರುಷ ವಿಡಿಯೋ '" ಪ್ರಶಸ್ತಿಯನ್ನು ಎಮಿನೆಮ್ ಗಾಗಿ ನೀಡಲಾಯಿತು. ಸೆಪ್ಟೆಂಬರ್ ೧೪ ರಂದು ಅವರು ತಾವು ಓದಿದ ಪ್ರೌಧಶಾಲೆಗೆಯಾದ ಡೂಸ್ ಪ್ಯುಬೋಸ್ ಸ್ಕೂಲ್ ಗೆ ಮರಳಿ ಶಾಲಾಮಕ್ಕಳಿಗಾಗಿ ಒಂದು ಸಣ್ಣ ಕಾರ್ಯಕ್ರಮವನ್ನು ನೀಡಿದರು.[೫೩][೫೪] ಪೆರಿ ""ಹಾಟ್ ಎಂಡ್ ಕೋಲ್ಡ್"" ಅನ್ನು ಸಿಸಾಮೆ ಸ್ಟ್ರೀಟ್ ನ ಎಲ್ಮೋರೊಡನೆ ಪ್ರದರ್ಶಿಸಿದರು; ಇದು ಸಿಸಾಮೆ ಸ್ಟ್ರೀಟ್ ನ ನಲವತ್ತೊಂದನೆಯ ವರ್ಷದ ಮೊದಲ ಕಾರ್ಯಕ್ರಮವಾಗಿ ಸೆಪ್ಟೆಂಬರ್ ೨೭, ೨೦೧೦ ರಂದು ಮಕ್ಕಳ ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ಪ್ರಸಾರವಾಗಬೇಕಿತ್ತು. ಆದರೆ, ಪ್ರಸಾರಕ್ಕೆ ನಾಲ್ಕು ದಿನಗಳ ಮೊದಲು, ಸಿಸಾಮೆ ವರ್ಕ್ ಷಾಪ್ "ಕೇಟಿ ಪೆರಿಯವರ ಗಾಯನ ವಿಡಿಯೋದ ಬಗ್ಗೆ ನಮಗೆ ಬಂದಿರುವ ಅಭಿಪ್ರಾಯಗಳ ಆಧಾರದ ಮೇರೆಗೆ... ಶಾಲಾಪೂರ್ವ ಮಕ್ಕಳಿಗೆಂದೇ ಇರುವ ಸಿಸಾಮೆ ಸ್ಟ್ರೀಟ್ ಕಾರ್ಯಕ್ರಮದ ಪ್ರಸಾರದಲ್ಲಿ ಈ ಭಾಗವನ್ನು ಪ್ರಸಾರ ಮಾಡುವುದಿಲ್ಲವೆಂದು ತೀರ್ಮಾನ ಕೈಗೊಂಡಿದ್ದೇವೆ. ಕೇಟಿ ಪೆರಿಯ ಅಭಿಮಾನಿಗಳು ಈಗಲೂ ಆ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ನೋಡಬಹುದು." ಎಂದು ಘೋಷಿಸಿದರು[೫೫] ಪೆರಿ ತೊಟ್ಟ ಉಡುಪು ವಕ್ಷೋಜಗಳನ್ನು ಬಹಳವೇ ತೋರಿಸುವಂತಿದ್ದುದರಿಂದ ಆ ವಿಷಯದ ಬಗ್ಗೆ ಮಕ್ಕಳ ಮಾತಾಪಿತೃಗಳು ದೂರು ನೀಡಿದುದೇ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಪೆರಿ ಫೈರ್ ವರ್ಕ್ ಗಾಗಿ ಬುಡಾಪೆಸ್ಟ್ ನಲ್ಲಿ ಸೆಪ್ಟೆಂಬರ್ ೨೦೧೦ ರಲ್ಲಿ ವಿಡಿಯೋ ಚಿತ್ರೀಕರಿಸಿದರು ನಟರಿಗಾಗಿ ನೀಡಿದ ಒಂದು ಮುಕ್ತ ಕರೆಯು ಹಿಂದೆಂದೂ ಕಾಣದಂತಹ ಸಂಖ್ಯೆಯಾದ ೩೮,೦೦೦ ಅರ್ಜಿದಾರರನ್ನು ಆಕರ್ಷಿಸಿತು.[೫೬] ಅವರು ನಂತರ ಅಕ್ಟೋಬರ್ ಒಂದರಂದು ಬುಡಾಪೆಸ್ಟ್ ನಲ್ಲಿ ಒಂದು ಕಚೇರಿಯನ್ನು ನೀಡಿದರು; ಇದು ಅವರು ಮಧ್ಯ ಮತ್ತು ಪೂರ್ವ ಯೂರೋಪ್ ನಲ್ಲಿ ನೀಡಿದ ಮೊದಲ ಕಚೇರಿಯಾಗಿತ್ತು.. ಪೆರಿ ತಾವೇ ತಯಾರಿಸಿದ ಒಂದು ಪರಿಮಳವನ್ನು ಈ ಶಿಶಿರದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ - ಆ ಸುಗಂಧದ ಹೆಸರು "ಪರ್ರ್". ಅದು ಒಂದು ಬೆಕ್ಕನಾಕಾರದ ಬಾಟಲ್ ನಲ್ಲಿ ಬರುತ್ತದೆ ಹಾಗೂ ನಾರ್ಡ್ ಸ್ಟಾರ್ಮ್ ಅಂಗಡಿಗಳ ಮೂಲಕ ಲಭ್ಯವಿರುತ್ತದೆ.[೫೭][೫೮]ಟೀನೇಜ್ ಡ್ರೀಮ್ ಪೆರಿಯನ್ನು ೨೦೧೧ ರ ಗ್ರ್ಯಾಮಿ ಅವಾರ್ಡ್ಸ್ ನಲ್ಲಿ ನಾಲ್ಕು ಪ್ರಶಸ್ತಿಗಳಿಗೆ ಪೆರಿಯ ನಾಮನಿರ್ದೇಶನವಾಗುವ ಮಟ್ಟಕ್ಕೆ ಕೊಂಡೊಯ್ದಿತು : ವರ್ಷದ ಅತ್ಯುತ್ತಮ ಆಲ್ಬಂ, ಅತ್ಯುತ್ತಮ ಪಾಪ್ ಗಾಯನದ ಆಲ್ಬಂ, "ಟೀನೇಜ್ ಡ್ರೀಮ್" ಗಾಗಿ ಅತ್ಯುತ್ತಮ ಮಹಿಳಾ ಪಾಪ್ ಗಾಯನ ಪ್ರದರ್ಶನ, ಮತ್ತು "ಕ್ಯಾಲಿಫೋರ್ನಿಯಾ ಗರ್ಲ್ಸ್" ಗಾಗಿ ಗಾಯಕರೊಂದಿಗೆ ಶ್ರೇಷ್ಠ ಪಾಪ್ ಸಂಯೋಜನೆ ಗ್ರ್ಯಾಮೀಸ್ ನಂತರ ಕೇಟಿ ಪೆರಿ ತಮ್ಮ "ಟೀನೇಜ್ ಡ್ರೀಮ್" ಆಲ್ಬಂ ನಿಂದ ನಾಲ್ಕನೆಯ ಸಿಂಗಲ್ ಅನ್ನು ಬಿಡುಗಡೆ ಮಾಡಲಾಯಿತು. , ಅದೇ "E.T." ಈ ಸಿಂಗಲ್ ಮರುಸಂಕಲಿತ ಆವೃತ್ತಿಯಾಗಿದ್ದು ಇದರಲ್ಲಿ ಕಾನ್ಯೆ ವೆಸ್ಟ್ ಭಾಗವಹಿಸಿದ್ದರು. E.T.ಗಾಗಿ ಸಂಗೀತ ವಿಡಿಯೋ ವನ್ನು ಫ್ಲೋರಿಯಾ ಸಿಜಿಸ್ಮೊಂಡಿ ನಿರ್ದೇಶಿಸಿದರು ಹಾಗೂ ಇದರಲ್ಲಿ ಷಾನ್ ರಾಸ್ ಪ್ರಮುಖ ಪ್ರೀತಿಯ ಆಸಕ್ತರಾಗಿ ನಟಿಸಿದ್ದರು. '

ಸಂಗೀತ ಶೈಲಿ ಮತ್ತು ಚಿಂತನೆಗಳು ಬದಲಾಯಿಸಿ

 
2009 ರಲ್ಲಿ ಕಾರ್ಯಕ್ರಮ ನೀಡುತ್ತಿರುವ ಪೆರಿ.

ಪೆರಿಯದು ಕಾಂಟ್ರಾ ಆಲ್ಟೋ ಮಟ್ಟದ ಕಂಠ.[೫೯] ಅವರ ಕಂಠದ ಸೀಮಿತತೆಯು ಕಡಿಮೆಯದ್ದಾದ್ದರಿಂದ ನೇರವಾಗಿ ಜನರ ಮುಂದೆ ಹಾಡುವಾಗ, ತಮ್ಮ ದನಿ ಪರಿಪೂರ್ಣವಾಗಿರುವ ಸಲುವಾಗಿ, ತಮ್ಮ ಹಲವಾರು ಹಾಡುಗಳ ಕೀಗಳನ್ನು ಕೆಳಸ್ತರದಲ್ಲಿರಿಸಿಕೊಳ್ಳುತ್ತಾರೆ. ಪೆರಿಯ ಮೇಲೆ ಸಂಗೀತದ ಕ್ಷೇತ್ರದಲ್ಲಿ ಪ್ರಭಾವ ಬೀರಿದವರಲ್ಲಿ ಕೆಲವರೆಂದರೆ ಅಲಾನಿಸ್ ಮಾರಿಸೆಟೆ,[೧೧][೨೦] ಪಾಪ್ ರಾಕ್ಗಾಯಕರಾದ ಸಿಂಡಿ ಲಾಪರ್, ಪ್ಯಾಟ್ ಬೆನಟಾರ್, ಜೊವಾನ್ ಜೆಫ್, ಷಿರ್ಲೀ ಮ್ಯಾನ್ಸನ್,[೬೦] ಮತ್ತು ಪ್ರೆಡ್ಡೀ ಮರ್ಕ್ಯುರಿ,[೧೦] ಎಂಬ ಬ್ರಿಟಿಷ್ ತಂಡ ಕ್ವೀನ್ ನ ದಿವಂಗತ ಮುಂದಾಳು. ಗಾಸ್ಪೆಲ್ ಸಂಗೀತವನ್ನು ಕೇಳುತ್ತಲೇ ಬೆಳೆದ ಪೆರಿಗೆ ಹಾಡುಗಳನ್ನು ರೆಕಾರ್ಡ್ ಮಾಡಲು ತೊಡಗಿದಾಗ ಯಾವ ಗಾಯಕರ ಪರಿಚಯವೂ ಇರಲಿಲ್ಲ.[೧೦] ಅವರು ಯಾರೊಂದಿಗೆ ಸೇರಿ ಕೆಲಸ ಮಾಡಲು ಬಯಸುವರೆಂದು ನಿರ್ಮಾಪಕರು ಕೇಳಿದಾಗ ಪೆರಿಗೆ ಏನನ್ನೂ ಹೇಳಲು ತೋಚಲಿಲ್ಲ. ಆ ರಾತ್ರಿ ಅವರ ತಾಯಿಯೊಡನೆ ಪೆರಿ ಒಂದು ಹೊಟೆಲ್ ಗೆ ಹೋದರು. ಒಳಗೆ ಅವರು VH೧ ಚಾನೆಲ್ ಅನ್ನು ಆನ್ ಮಾಡಿದರು ಮತ್ತು ನಿರ್ಮಾಪಕ ಗ್ಲೆನ್ ಬಲ್ಲಾರ್ಡ್ ಮಾರಿಸೆಟೆಯ ಬಗ್ಗೆ ಮಾರನಾಡುತ್ತಿರುವುದನ್ನು ವೀಕ್ಷಿಸಿದರು;[೧೦] ಬಲ್ಲಾರ್ಡ್ ಮಾರಿಸೆಟೆಯ ಜ್ಯಾಗೆಡ್ ಲಿಟಲ್ ಪಿಲ್ ನ ನಿರ್ಮಾಪಕರಾಗಿದ್ದರು; ಆ ಆಲ್ಬಂ ಪೆರಿಯ ಮೇಲೆ "ಅಗಾಧ ಪ್ರಭಾವ" ಬೀರಿತು.[೧೫] ಅವರು ತಮ್ಮ ಮೊದಲ ಸಂಯೋಜಕರೊಡನೆ ತಾನು ಬಲ್ಲಾರ್ಡ್ ರೊಡನೆ ಕೆಲಸ ಮಾಡಲು ಬಯಸುವುದಾಗಿ ತಿಳಿಸಿದರು. ಆ ನಿರ್ಮಾಪಕರು ಇವರಿಬ್ಬರ ಭೇಟಿಯನ್ನು ಲಾಸ್ ಏಂಜಲೀಸ್ ನಲ್ಲಿ ಏರ್ಪಡಿಸಿದರು. ಪೆರಿ ಅವರಿಗೆ ಒಂದು ಹಾಡನ್ನು ನೀಡಿದರು ಹಾಗೂ ಮರುದಿನವೇ ಪೆರಿಗೆ ಕರೆ ಬಂದಿತು. ಬಲ್ಲಾಡ್ ಪೆರಿಯನ್ನ ಕೆಲವು ವರ್ಷಗಳ ವರೆಗೆ ಅಭಿವೃದ್ಧಿಗೊಳಿಸಿದರು.[೧೦]

"ಯಾರೋ ಈ ಹಾಡುಗಳನ್ನು ಒಂದು ವಿಧದಲ್ಲಿ ಬರೆದುಕೊಟ್ಟರು ಹಾಗೂ ನಾನು ಅಂದಿನಿಂದಲೂ ಅದನ್ನು ಬಳಸುತ್ತಾ ಬಂದಿದ್ದೇನೆ" ಎನ್ನುವುದು ಪೆರಿ ತಮ್ಮ ಸಂಗೀತವನ್ನು ವರ್ಣಿಸುವ ಪರಿ.[೧೦] ಪೆರಿಯ ಪ್ರಕಾರ ಅವರು "೧೫ ರಿಂದ ೨೩ ವಯಸ್ಸಿನ ಅವಧಿಯಲ್ಲಿ ಹಳ ಬದಲು" ಆದರು.[೯] ಅವರ ಮೊದಲ ಆಲ್ಬಂ ಗಾಸ್ಪೆಲ್ ಸಂಗೀತದ ಬಗ್ಗೆ ಇದೆ.[೯][೧೬] ಸಂಗೀತದ ಬಗ್ಗೆ ಅವರ ದೃಷ್ಟಿಕೋನವು " ಕೊಂಚ ಮುಚ್ಚಿಟ್ಟದ್ದು ಮತ್ತು ಬಹಳ ಕಟ್ಟುನಿಟ್ಟಾದುದು" ಹಾಗೂ ಅವರು ಮಾಡಿದುದೆಲ್ಲವೂ ಚರ್ಚ್-ಸಂಬಂಧಿತವಾದುದು ಎಂದು ಪೆರಿ ಹೇಳಿದರು.[೯] ಅವರ ಎರಡನೆಯ ಆಲ್ಬಂ ಒನ್ ಆಫ್ ದ ಬಾಯ್ಸ್ , ಅನ್ನು :ಜಾತ್ಯತೀತ" ಮತ್ತು "ರಾಕ್" ಎಂದು ವರ್ಣಿಸಲಾಗುತ್ತದೆ ಹಾಗೂಅವರ ಧಾರ್ಮಿಕ ಸಂಗೀತದ ಬೇರುಗಳಿಂದ ಹೊರತಾದುದಾಗಿ ಕಂಡುಬರುತ್ತದೆ.[೬೧] ತಮ್ಮ ಮುಂದಿನ ಆಲ್ಬಂ ಗೆ ಪೆರಿ ಹೆಚ್ಚು ಪಾಪ್ ಹಾಡುಗಳನ್ನು ರೆಕಾರ್ಡ್ ಮಾಡುವ ನಿರೀಕ್ಷೆ ಹೊಂದಿದ್ದಾರೆ.[೧೩][೬೨]

ಪೆರಿ ತಮ್ಮ ಯೋಜನೆಗಳಲ್ಲಿ ಕಲಾತ್ಮಕವಾತಿ ತೊಡಗಿಕೊಳ್ಳುತ್ತಾರೆ, ವಿಶೇಷತಃ ಬರವಣಿಗೆಯ ಕಾರ್ಯದಲ್ಲಿ. ಅವರು ಗಿಟಾರ್ ನುಡಿಸಬಲ್ಲವರಾದ್ದರಿಂದ ಅವರು ಮನೆಯಲ್ಲಿ ಹಾಡುಗಳನ್ನು ಬರೆಯಲಾರಂಭಿಸುತ್ತಾರೆ ಮತ್ತು ನಿರ್ಮಾಪಕರ ಮುಂದೆ ಅದನ್ನು ಪ್ರಸ್ತುತ ಪಡಿಸುತ್ತಾರೆ. ಪೆರಿ ಸಾಮಾನ್ಯವಾಗಿ ತಮ್ಮ ಜೀವನದ ನಿರ್ದಿಷ್ಟ ಕ್ಷಣಗಳಿಂದ ಪ್ರೇರಿತರಾಗುತ್ತಾರೆ. ಭಗ್ನಹೃದಯದ ಬಗ್ಗೆ ಹಾಡುಗಳನ್ನು ಬರೆಯುವುದು ಅವರಿಗೆ ಸುಲಭವೆಂದು ಪೆರಿ ಹೇಳುತ್ತಾರೆ.[೧೦] ಒನ್ ಆಫ್ ದ ಬಾಯ್ಸ್ ನಲ್ಲಿರುವ ಹಾಡುಗಳ ಪೈಕಿ ಬಹುಪಾಲು ಆಲೋಚನೆಗಳು ಭಗ್ನಹೃದಯದ ಬಗ್ಗೆ, ಹದಿಹರೆಯದ ಸಾಹಸದ ಬಗ್ಗೆ ಮತ್ತು "ಶೌಚಾಲಯಗಳೊಳಗೆ ವಾಂತಿ ಮಾಡುವುದರ" ಬಗ್ಗೆಯೇ ಇವೆ. ಇವೆ.[೧೫] ಪೆರಿಯ ತಾಯಿ ಡೈಲಿ ಮೇಯ್ಲ್ ಎಂಬ ರಿಟಿಷ್ ಪತ್ರಿಕೆಯೊಂದರೊಡನೆ ಮಾತನಾಡುತ್ತಾ ತನಗೆ ತನ್ನ ಮಗಳ ಸಂಗೀತ ಇಷ್ಟವಾಗುವುದಿಲ್ಲ, ಅದು :ನಾಚಿಕೆಗೇಡು ಮತ್ತು ಅಸಹ್ಯವಾದುದು" ಎಂದು ಹೇಳಿದರೆಂದು ಹೇಳಲಾಗುತ್ತದೆ.[೯][೬೩] ಪೆರಿ ಅವರ ತಾಯಿ ಹೇಳಿದುದನ್ನು ಪತ್ರಿಕೆಯು ತಪ್ಪಾಗಿ ವರದಿ ಮಾಡಿದೆ ಎಂದರು ಹಾಗೂ MTV ಗೆ ಅದು ಸುಳ್ಳು ಸುದ್ದಿ ಎಂದು ಹೇಳಿದರು.[೬೩] ಅವರ ಹಾಡುಗಳಾದ "ಯೂ ಆರ್ ಸೋ ಗುಡ್" ಮತ್ತು ""ಐ ಕಿಸ್ಡ್ ಎ ಗರ್ಲ್" " ಧಾರ್ಮಿಕ ಮತ್ತು ಸಲಿಂಗಿ ವಿಭಾಗಗಳೆರಡರಿಂದಲೂ ನಕಾರಾತ್ಮಕವಾದ ಪ್ರತಿಕ್ರಿಯೆಗಳನ್ನು ಪಡೆಯಿತು.[೬೩] ಈ ಹಾಡುಗಳನ್ನು ಕ್ರಮವಾಗಿ ಸಲಿಂಗಭೀತಿಯುಂಟು ಮಾಡುವಂತಹವೆಂದೂ, ಸಲಿಂಗರತಿಯನ್ನು ಪ್ರಚೋದಿಸುತ್ತವೆಂದೂ "ಲೆಝ್ ಪ್ಲಾಯ್ಟೇಷನಲ್" (ಸ್ತ್ರೀಯರ ಸಲಿಂಗರತಿಯ ದುರ್ಬಳಕೆ) ಎಂದೂ ಬಣ್ದಿಸಲಾಗಿದೆ.[೯] MTV ಪೆರಿಯು "ಉಭಯ-ಕುತೂಹಲ" ವನ್ನು ರೆಕಾರ್ಡ್ ಗಳನ್ನು ಮಾರುವ ಉಪಾಯವಾಗಿ ಬಳಸುತ್ತಾರೆ ಎಂದು ಸೂಚಿಸುವ ಟೀಕೆಗಳಿವೆ ಎಂದು ಹೇಳಿತು.[೬೩] ಪೆರಿ "ಯೂ ಆರ್ ಸೋ ಗೇ" ಸುತ್ತ ಇದ್ದ ವಿವಾದದ ಬಗ್ಗೆ ಇಂತೆಂದರು: "ಅದು ನಕಾರಾತ್ಮಕ ಅರ್ಥ ಸೂಚಿಸುವಂತಹುದಲ್ಲ. 'ಯೂ ಆರ್ ಸೋ ಗೇ,' ಎಂದರೆ, 'ಯೂ ಆರ್ ಸೋ ಲೇಮ್,' ಎಂದು ಹೇಳದಂತಲ್ಲ, ಅದರೆ ವಸ್ತುಸ್ಥಿತಿ ಏನೆಂದರೆ ಈ ಹುಡುಗ ಸಲಿಂಗಿಯಾಗಬೇಕಾಗಿತ್ತು. ಇದು ಹೇಗೆ ಅಪಾರ್ಥಕ್ಕೋ, ಮತ್ತೊಂದಕ್ಕೋ ಎಡೆ ಕೊಡುತ್ತದೆ ಎಂಬುದು ನನಗೆ ಅರ್ಥವಾಗುತ್ತದೆ ... ಅದು ಯಾರನ್ನೇ ರೂಢಿಬದ್ಧಗೊಳಿಸಲು ಮಾಡಿದ ಯತ್ನವಲ್ಲ, ನಾನು ನನ್ನ ಮಾಜಿ ಗೆಳೆಯರ ಬಗ್ಗೆ ಮಾತನಾಡುತ್ತಿದ್ದೆ" ಎಂದರು[೬೪]

ಸಾರ್ವಜನಿಕ ಪ್ರತೀಕ ಬದಲಾಯಿಸಿ

 
ಜುಲೈ 2009 ರಲ್ಲಿ ಕಾರ್ಯಕ್ರಮ ನೀಡುತ್ತಿರುವ ಪೆರಿ.

ಪೆರಿ ತಮ್ಮ ಅಸಾಂಪ್ರದಾಯಿಕ ಶೈಲಿಯ ವಸ್ತ್ರಧಾರಣೆಗೆ ಹೆಸರುವಾಸಿಯಾಗಿದ್ದಾರೆ.[೧೩] ಅದು ಸಾಮಾನ್ಯವಾಗಿ ತಮಾಷೆಯಾಗಿರುತ್ತದೆ, ಗಾಢವರ್ಣದ್ದಾಗಿರುತ್ತದೆ ಹಾಗೂ ವಿಭಿನ್ನ ದಶಕಗಳನ್ನು ನೆನೆಸುವಂತಿರುತ್ತದೆ ಮತ್ತು ಅವರು ಸಾಮಾನ್ಯವಾಗಿ ಹಣ್ಣಿನಾಕಾರದ ಉಪಕರಣಗಳನ್ನು ಬಳಸುತ್ತಾರೆ, ಪ್ರಮುಖವಾಗಿ ಕಲ್ಲಂಗಡಿ ಆಕಾರದ ಸಾಧನಗಳನ್ನು ತಮ್ಮ ಉಡುಪುಗಳ ಅಂಗವಾಗಿ ಬಳಸುತ್ತಾರೆ.[೬೦] ನೃತ್ಯವನ್ನು ಬಾಲ್ಯದಲ್ಲೇ ಕಲಿತಿದ್ದುದರಿಂದ ಅವರು ತಮ್ಮದೇ ಆದ ನೃತ್ಯಶೈಲಿಯನ್ನು ಹೊಂದುವುದರ ಬಗ್ಗೆ ಕನಸು ಕಾಣುತ್ತಿದ್ದರು. ಪೆರಿ ಕಲಾವಿದೆಯಾಗಿ ಬದಲಾಗಲು ಆರಂಭವಾದುದು ಫ್ಯಾಷನ್ ನಿಂದ; ಲೋಲಿಟಾ ಕಾದಂಬರಿಯನ್ನು ೧೯೯೭ ರ ಚಲನಚಿತ್ರಕ್ಕೆ ಅಳವಡಿಸಲ್ಪಟ್ಟ ಚಿತ್ರದಲ್ಲಿ ಅಮೆರಿಕದ ಚಿತ್ರತಾರೆ ಡೊಮಿನಿಕ್ ಸ್ವೇಯ್ನ್ ನ ಚಿತ್ರಣವು ಈಕೆಗೆ ಪ್ರೇರಣೆಯಾಯಿತು.[೧೫] ಅವರು ತಮ್ಮ ಫ್ಯಾಷನ್ ಶೈಲಿಯನ್ನು "ವಿಭಿನ್ನ ವಸ್ತುಗಳನ್ನೊಳಗೊಂಡ ಒಂಂದಿನಿತು ಕಷಾಯ" ಎಂದು ವರ್ಣಿಸುತ್ತಾರೆ.[೧೩] ಪೆರಿಯ ಶೈಲವಿನ್ಆಸಕರಾದ ಜಾನಿ ವುಜೆಕ್ ಅವರು ಮೊದಲ ಬಾರಿ ಪೆರಿಯನ್ನು ಭೇಟಿಯಾದಾಗ ಪೆರಿ ಹೊಂದಿದ್ದ ಶೈಲಿಯನ್ನು "ಬಹಳ ವರ್ಣಮಯ ಮತ್ತು ಪ್ರಾಚೀನ" ಎಂದು ವರ್ಣಿಸುತ್ತಾರೆ..[೬೫] ಅವರ ಫ್ಯಾಷನ್ ವಿನ್ಯಾಸಕರ ಗಮನ ಸೆಳೆದಿದೆ.[೯][೬೦] ಜೂನ್ ೨೦೦೮ ರಲ್ಲಿ ಪೆರಿ ಸ್ವಿಚ್ ಬ್ಲೇಡ್ ಹಿಡಿದು ನಿಂತಿರುವ ಪ್ರಚಾರಾತ್ಮಕ ಚಿತ್ರವು ಟೀಕೆಗೆ ಗುರಿಯಾಯಿತು.[೬೬] ಈ ಚಿತ್ರವನ್ನು ಪೆರಿಗೆ "ಉನ್ಮಾದಕರ, ಹೆಚ್ಚು ಗಡುಸಿನ ವ್ಯಕ್ತಿತ್ವ"ವನ್ನು ನೀಡಲೆಂದು ಮಾತ್ರ ಬಳಸಲಾಯಿತೆಂದು ಸಮಝಾಯಿಷಿ ನೀಡಲಾಯಿತು.[೬೬] ತನ್ನತ್ತ ಬಂದ ಟೀಕೆಗಳನ್ನು ಪೆರಿ ಲೇವಡಿಯಿಂದ ನೋಡಿದರು ಹಾಗೂ ನಂತರದ ದಿನಗಳಲ್ಲಿ ಬ್ಲೇಡ್ ಬದಲು ಚಮಚ ಹಿಡಿದು ಪೋಸ್ ನೀಡಿದರು.[೬೭] ಅವರು FHM ಮ್ಯಾಗಝೀನ್ ನ ೧೦೦ ಬಹಳ ಸೆಕ್ಷಿಯಾದ ಮಹಿಳೆಯರು ಜನಾಭಿಪ್ರಾಯದಲ್ಲಿ ಎರಡು ಬಾರಿ ಕಾಣಿಸಿಕೊಂಡಿದ್ದಾರೆ ಹಾಗೂ #೨೩ ಅನ್ನು ೨೦೦೯ ರಲ್ಲೂ, #೩೭ ಅನ್ನು ೨೦೧೦ ರಲ್ಲೂ ಪಡೆದಿದ್ದಾರೆ.[೬೮]

ವೈಯಕ್ತಿಕ ಜೀವನ ಬದಲಾಯಿಸಿ

ಪೆರಿ ಜಿಮ್ ತರಗತಿಯ ಶೂರರು ಎನಿಸಿಕೊಂಡ ಫ್ರಂಟ್ಮನ್ ಟ್ರಾವೀ ಮೆಕಾಯ್y ರೊಡನೆ ಸಂಧಿಸುತ್ತಿದ್ದರು; ಅವರನ್ನು ಪೆರಿಯ ನ್ಯೂ ಯಾರ್ಕ್ ನ ರೆಕಾರ್ಡಿಂಗ್ ಸ್ಟುಡಿಯೋ[೧೭] ದಲ್ಲಿ ಆಗೊಮ್ಮೆ, ಈಗೊಮ್ಮೆ ಎಂದೇ ಹಲವಾರು ವರ್ಷಗಳ ಕಾಲ ಭೇಟಿಯಾದರು. ಪೆರಿ ಮತ್ತು ಮೆಇಆಯ್ ೨೦೦೮ ರಲ್ಲಿ ದೂರ ಸರಿದರು.[೬೯]

ಪೆರಿ ಬ್ರಿಟಿಷ್ ಹಾಸ್ಯಗಾರ ರಸೆಲ್ ಬ್ರ್ಯಾಂಡ್ ರನ್ನು ಮೊದಲ ಬಾರಿಗೆ ೨೦೦೮ ರ ಬೇಸಿಗೆಯಲ್ಲಿ[೭೦] ಪೆರಿ ಬ್ರ್ಯಾಂಡ್ ರ ಚಿತ್ರವಾದ ಗೆಟ್ ಹಿಮ್ ಟು ದ ಗ್ರೀಕ್ ನಲ್ಲಿ ಒಂದು ಸಣ್ಣ ಪಾತ್ರವನ್ನು ಮಾಡುವ ಸಂದರ್ಭದಲ್ಲಿ ಭೇಟಿಯಾದರು. ಸೆಪ್ಟೆಂಬರ್ ೨೦೦೯ ರಲ್ಲಿ ಮತ್ತೆ ಭೇಟಿಯಾದ ನಂತರ ಇಬ್ಬರೂ ಡೇಟಿಂಗ್ ಅರಂಭಿಸಿದರು[೭೧]; ಇವರು ಎರಡನೆಯ ಬಾರಿ ಭೇಟಿಯಾದುದುMTV ವಿಡಿಯೋ ಮ್ಯೂಸಿಕ್ ಅವಾರ್ಡ್ಸ್ ಸಂದರ್ಭದಲ್ಲಿ . ಅಲ್ಲಿ ಅತಿಥೇಯರಾಗಿದ್ದ ಬ್ರ್ಯಾಂಡ್ "ಕೇಟಿ ಪೆರಿ ಯಾವುದೇ ಪ್ರಶಸ್ತಿ ಗೆಲ್ಲಲಿಲ್ಲ ಹಾಗೂ ಅವರು ನಾನು ಇಳಿದುಕೊಂಡಿರುವ ಹೊಟೆಲ್ ನಲ್ಲೇ ತಂಗಿದ್ದಾರೆ, ಆದ್ದರಿಂದ ಅವರಿಗೆ ಅಳಲು ಒಂದು ಭುಜ ಬೇಕಿದೆ. ಒಂದು ರೀತಿಯಲ್ಲಿ, ಈ ರಾತ್ರಿಯ ನಿಜವಾದ ಜಯಶಾಲಿ ನಾನೇ" ಎಂದರು. ಈರ್ವರೂr ೨೦೦೯ ರಲ್ಲಿ ಭಾರತದಲ್ಲಿ ರಜೆಯ ದಿನಗಳನ್ನು ಕಳೆಯುತ್ತಿದ್ದಾಗ ನಿಶ್ಚಿತಾರ್ಥವನ್ನು ಮಾಡಿಕೊಂಡರು.[೭೨][೭೩][೭೪] ಜುಲೈ ೨೦೧೦ ರ ಯೂಟ್ಯೂಬ್ ಸಂದರ್ಶನದಲ್ಲಿ ಪೆರಿ ಬ್ರ್ಯಾಂಡ್ "ಪರಿಪೂರ್ಣ" ತಂದೆಯಾಗುವರು ಎಂದು ಹೇಳಿದರು.[೭೫] ಬ್ರ್ಯಾಂಡ್ ರನ್ನು ಲಗ್ನವಾದನಂತರ ತಾನು ಉಭಯ ಬ್ರಿಟಿಷ್ ಪೌರತ್ವವನ್ನು ಹೊಂದಲು ಯೋಚಿಸಿರುವುದಾಗಿ ಪೆರಿ ಹೇಳಿದರು. "ನಾನು ಮಾಡುವ ಮೊಟ್ಟ ಮೊದಲ ಕೆಲಸಗಳಲ್ಲಿ ಒಂದೆಂದರೆ ಉಭಯ ಪೌರತ್ವಕ್ಕೆ ಅರ್ಜಿ ಸಲ್ಲಿಸುವುದು. ಅದರ ಬಗ್ಗೆ ನಾನೊಂದು ಪರೀಕ್ಷೆಗೆ ಒಳಗಾಗಬೇಕೋ ಇಲ್ಲವೋ ಎಂಬುದು ತಿಳಿದಿಲ್ಲ, ಏಕೆಂದರೆ ಅದರ ಬಗ್ಗೆ ಗಮನ ನೀಡಲು ನನಗೆ ಪುರುಸೊತ್ತಿಲ್ಲ. ಆದರೆ ಇಂಗ್ಲೆಂಡ್ ನನಗೆ ಎರಡನೆಯ ಮನೆಯಿದ್ದಂತೆ" ಎಂದರು ಪೆರಿ.[೭೬] ಪೆರಿ ಮತ್ತು ಬ್ರ್ಯಾಂಡ್ ಅಕ್ಟೋಬರ್ ೨೩, ೨೦೧೦ ರಂದು ಸಾಂಪ್ರದಾಯಿಕ ಹಿಂದೂ ಪದ್ಧತಿ ಯ ಪ್ರಕಾರ ರತ್ನಾಂಭೋರ್ ಹುಲಿ ಸಂರಕ್ಷಣಾ ವನದ ಬಳಿ, ಭಾರತದ ರಾಜಾಸ್ತಾನದಲ್ಲಿ, ಬ್ರ್ಯಾಂಡ್ 'ನನ್ನನ್ನು ವರಿಸುವೆಯಾ?' ಎಂದು ಕೇಳಿದ್ದ ಸ್ಥಳದಲ್ಲೇ ಮದುವೆಯಾದರು.[೭೭][೭೮]

ಧ್ವನಿಮುದ್ರಿಕೆ ಪಟ್ಟಿ ಬದಲಾಯಿಸಿ

  • ಕೇಟಿ ಹಡ್ಸನ್ (೨೦೦೧)
  • ಒನ್ ಆಫ್ ದ ಬಾಯ್ಸ್ (೨೦೦೮)
  • ಟೀನೇಜ್ ಡ್ರೀಂ (೨೦೧೦)

ಪ್ರವಾಸಗಳು ಬದಲಾಯಿಸಿ

  • ಹೆಲ್ಲೋ ಕೇಟಿ ಪ್ರವಾಸ (೨೦೦೯)
  • ಕ್ಯಾಲಿಫೋರ್ನಿಯಾ ಡ್ರೀಮ್ಸ್ ಪ್ರವಾಸ (೨೦೧೧)

ಚಿತ್ರಲೋಕ ಬದಲಾಯಿಸಿ

ದೂರದರ್ಶನ ಬದಲಾಯಿಸಿ

ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
2008 Young and the Restless, TheThe Young and the Restless ಸ್ವಯಂ ಆಕೆಯೇ ಪಾತ್ರ ಸಂಚಿಕೆ ೮೯೧೪
ವೈಲ್ಡ್ ಫೈರ್ ಸ್ವಯಂ ಆಕೆಯೇ ಪಾತ್ರ "ಲೈಫ್ ಈಸ್ ಟೂ ಷಾರ್ಟ್" (ಋತು ೪, ಸಂಚಿಕೆ ೮)
೨೦೧೦ ಅಮೆರಿಕನ್‌ ಐಡಲ್‌ ಗೆಸ್ಟ್ ಜಡ್ಜ್ (ಋತು ೬, ಭಾಗ ೧)
ದಿ ಎಕ್ಸ್-ಫ್ಯಾಕ್ಟರ್ ಅತಿಥಿ ನ್ಯಾಯಾಧೀಶ "ಸರಣಿ ೭, ಸಂಚಿಕೆ ೨"
ಸೆಸೇಮ್ ಸ್ಟ್ರೀಟ್ ಸ್ವಯಂ ಆಕೆಯೇ ಪಾತ್ರ ಆನ್ ಲೈನ್ ವಿಶೇಷ ಸಂಚಿಕೆ (ವೀಕ್ಷಕರ ವಿವಾದದ ಕಾರಣದಿಂದ ಟಿಲಿವಿಷನ್ ನಲ್ಲಿ ಬಿತ್ತರಿಸಿದ ಸಂಚಿಕೆಯಿಂದ ತೆಗೆದುಹಾಕಲ್ಪಟ್ಟದ್ದು)
ದಿ ಸಿಂಪ್ಸನ್ಸ್ ಸ್ವಯಂ ಆಕೆಯೇ ಪಾತ್ರ ೧ ಕಂತು, "ದ ಫೈಟ್ ಬಿಫೋರ್ ಕ್ರಿಸ್ ಮಸ್"
೨೦೧೧ ಹೌ ಐ ಮೆಟ್ ಯುವರ್ ಮದರ್ ಹನಿ ೧ ಕಂತು, "ಓಹ್ ಹನಿ"

ಚಲನಚಿತ್ರಗಳು ಬದಲಾಯಿಸಿ

ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
೨೦೧೦ ಗೆಟ್ ಹಿಮ್ ಟು ದ ಗ್ರೀಕ್ ಸ್ವಯಂ ಆಕೆಯೇ ಪಾತ್ರ ಅಳಿಸಲ್ಪಟ್ಟ ದೃಶ್ಯ
ಮನ್ನಣೆ ರಹಿತ
೨೦೧೧ Smurfs, TheThe Smurfs ಸ್ಮರ್ಫೆಟ್ಟೆ ಧ್ವನಿ ನೀಡಿಕೆ

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ಬದಲಾಯಿಸಿ

ಉಲ್ಲೇಖಗಳು‌‌ ಬದಲಾಯಿಸಿ

  1. "Top 50 Global Best Selling Albums for 2008" (PDF). International Federation of the Phonographic Industry. Archived from the original (PDF) on ಏಪ್ರಿಲ್ 7, 2009. Retrieved ಜೂನ್ 16, 2010.
  2. "ವೀಕ್ಲಿ ಚಾರ್ಟ್ ನೋಟ್ಸ್: ಕೇಟಿ ಪೆರಿ, ಜೆನಿಫರ್ ಲೋಪೆಝ್, ಟಾಮಿ ಷಾ" ಮಾರ್ಚ್ ೩೧, ೨೦೧೧, Billboard.com
  3. "Katy Perry, Russell Brand Wed in Elaborate Indian Ceremony". US Weekly. ಅಕ್ಟೋಬರ್ 23, 2010.
  4. "ಕ್ಯಾಲಿಫೋರ್ನಿಯಾ ಬರ್ತ್ ಇಂಡೆಕ್ಸ್". Archived from the original on ಜನವರಿ 18, 2010. Retrieved ಮೇ 12, 2011.{{cite web}}: CS1 maint: bot: original URL status unknown (link)
  5. ೫.೦ ೫.೧ ೫.೨ ೫.೩ Duerden, Nick (2004). "The Next Big Thing! Katy Perry". Blender. Archived from the original on ನವೆಂಬರ್ 10, 2008. Retrieved ಜೂನ್ 19, 2008. {{cite web}}: Unknown parameter |month= ignored (help)
  6. ೬.೦ ೬.೧ ೬.೨ ೬.೩ ೬.೪ ೬.೫ Rob, Sheffield (ಸೆಪ್ಟೆಂಬರ್ 24, 2008). "Girl on Girl: Katy Perry". Blender. Archived from the original on ಮಾರ್ಚ್ 12, 2009. Retrieved ಫೆಬ್ರವರಿ 13, 2009.
  7. "ಕೇಟಿ ಪೆರಿ ಹ್ಯಾಸ ಐರಿಷ್ ಆನ್ಸಿಸ್ಟ್ರಿ ಇನ್ ಗಾಲವೇ?" ೨೬ ಏಪ್ರಿಲ್ ೨೦೧೧, RTE.ie
  8. http://www.huffingtonpost.com/megan-smolenyak-smolenyak/katy-perry_b_852334.html
  9. ೯.೦೦ ೯.೦೧ ೯.೦೨ ೯.೦೩ ೯.೦೪ ೯.೦೫ ೯.೦೬ ೯.೦೭ ೯.೦೮ ೯.೦೯ Graff, Gary (ಫೆಬ್ರವರಿ 21, 2009). "Interview: Katy Perry —Hot N Bold". The Scotsman. Retrieved ಫೆಬ್ರವರಿ 28, 2009.
  10. ೧೦.೦ ೧೦.೧ ೧೦.೨ ೧೦.೩ ೧೦.೪ ೧೦.೫ ೧೦.೬ ೧೦.೭ ೧೦.೮ "Katy Perry". TheStarScoop.com. Archived from the original on ಏಪ್ರಿಲ್ 19, 2010. Retrieved ಫೆಬ್ರವರಿ 28, 2009.
  11. ೧೧.೦ ೧೧.೧ Scaggs, Austin (ಆಗಸ್ಟ್ 21, 2008). "Q&A: Katy Perry". Rolling Stone. Archived from the original on ಆಗಸ್ಟ್ 22, 2008. Retrieved ಡಿಸೆಂಬರ್ 10, 2008. {{cite news}}: Unknown parameter |deadurl= ignored (help)
  12. ೧೨.೦ ೧೨.೧ Montgomery, James (ಜೂನ್ 24, 2008). "Katy Perry Dishes On Her 'Long And Winding Road' From Singing Gospel To Kissing Girls". MTV. Retrieved ಫೆಬ್ರವರಿ 15, 2009.
  13. ೧೩.೦ ೧೩.೧ ೧೩.೨ ೧೩.೩ "Find Out What Influences Katy Perry's Cute Style!". Seventeen. ಫೆಬ್ರವರಿ 5, 2009. Retrieved ಫೆಬ್ರವರಿ 28, 2009.
  14. ೧೪.೦ ೧೪.೧ ೧೪.೨ Panda, Priya. "Katy Perry Wants to Draw on Your Face". Toonage. Archived from the original on ಮಾರ್ಚ್ 16, 2009. Retrieved ಫೆಬ್ರವರಿ 22, 2009.
  15. ೧೫.೦ ೧೫.೧ ೧೫.೨ ೧೫.೩ ೧೫.೪ ೧೫.೫ ೧೫.೬ Harris, Sophie (ಆಗಸ್ಟ್ 30, 2008). "Katy Perry on the risqué business of I Kissed a Girl". The Times. London. Retrieved ಮಾರ್ಚ್ 2, 2009.
  16. ೧೬.೦೦ ೧೬.೦೧ ೧೬.೦೨ ೧೬.೦೩ ೧೬.೦೪ ೧೬.೦೫ ೧೬.೦೬ ೧೬.೦೭ ೧೬.೦೮ ೧೬.೦೯ ೧೬.೧೦ ೧೬.೧೧ ೧೬.೧೨ ೧೬.೧೩ ೧೬.೧೪ Harding, Cortney (ಫೆಬ್ರವರಿ 11, 2009). "Katy Perry: Single Lady". Billboard. Nielsen Business Media, Inc. Archived from the original on ಮಾರ್ಚ್ 17, 2010. Retrieved ಫೆಬ್ರವರಿ 13, 2009.
  17. ೧೭.೦ ೧೭.೧ Sumner, Bonnie (ಅಕ್ಟೋಬರ್ 26, 2008). "Katy Perry: Girl trouble". Sunday Star Times. Retrieved ಫೆಬ್ರವರಿ 28, 2009.
  18. Greenblatt, Leah (ಮೇ 30, 2008). "'Kiss' Me, Katy". Entertainment Weekly accessdate=August 5, 2009. Archived from the original on ಅಕ್ಟೋಬರ್ 21, 2012. Retrieved ಮೇ 12, 2011. {{cite web}}: Missing pipe in: |work= (help)
  19. "The Sisterhood Of The Traveling Pants —Music From The Motion Picture". Sony BMG Music Entertainment. Archived from the original on ಮಾರ್ಚ್ 17, 2009. Retrieved ಮಾರ್ಚ್ 6, 2009.
  20. ೨೦.೦ ೨೦.೧ ೨೦.೨ Leahey, Andrew. "Katy Perry: Biography". Allmusic. Retrieved February ೧೩, ೨೦೦೯. {{cite web}}: Check date values in: |accessdate= (help); Unknown parameter |coauthors= ignored (|author= suggested) (help)
  21. Farias, Andree. "P.O.D.: Testify". Christianity Today. Archived from the original on ಸೆಪ್ಟೆಂಬರ್ 7, 2009. Retrieved ಫೆಬ್ರವರಿ 15, 2009.
  22. ೨೨.೦ ೨೨.೧ ೨೨.೨ ೨೨.೩ "Correction to the interview with Chris Anokute". HitQuarters. ಜನವರಿ 21, 2011. Retrieved ಜನವರಿ 21, 2011.
  23. ೨೩.೦ ೨೩.೧ ೨೩.೨ ೨೩.೩ "Interview With Chris Anokute". HitQuarters. ಅಕ್ಟೋಬರ್ 18, 2010. Retrieved ಅಕ್ಟೋಬರ್ 25, 2010.
  24. ೨೪.೦ ೨೪.೧ De Leon, Kris (ಜೂನ್ 5, 2008). "Katy Perry Guest Stars on 'The Young and the Restless'". buddytv.com. Retrieved ಮಾರ್ಚ್ 6, 2009.
  25. "Katy Perry — I Kissed A Girl". αCharts.us. Retrieved ಮಾರ್ಚ್ 6, 2009.
  26. "Katy Perry — The Chic Chanteuse — Part 1". Restless Style. ಜೂನ್ 12, 2008. Archived from the original on ಫೆಬ್ರವರಿ 11, 2009. Retrieved ಮಾರ್ಚ್ 6, 2009.
  27. "One Of The Boys". Metacritic. Archived from the original on ಫೆಬ್ರವರಿ 27, 2009. Retrieved ಮಾರ್ಚ್ 6, 2009.
  28. "Artist Chart History — Katy Perry". Billboard. Nielsen Business Media, Inc. Archived from the original on ಜೂನ್ 8, 2008. Retrieved ಮಾರ್ಚ್ 2, 2009.
  29. "Gold and Platinum". Recording Industry Association of America. Retrieved ಫೆಬ್ರವರಿ 13, 2009.
  30. Harris, Chris (ಡಿಸೆಂಬರ್ 4, 2008). "Lil Wayne, Coldplay Lead Grammy Nominations". MTV. Retrieved ಫೆಬ್ರವರಿ 15, 2009.
  31. Vena, Jocelyn (ಸೆಪ್ಟೆಂಬರ್ 3, 2008). "Katy Perry's VMA-Nominated 'I Kissed A Girl' Clip Tries Not To Be Too Sexy". MTV. Retrieved ಫೆಬ್ರವರಿ 15, 2009.
  32. Kaufman, Gil (ನವೆಂಬರ್ 7, 2008). "Americans Katy Perry, Britney Spears, Kanye West, 30 Seconds To Mars Dominate 2008 MTV EMAs". MTV. Retrieved ಫೆಬ್ರವರಿ 16, 2009.
  33. Paine, Andre (ಫೆಬ್ರವರಿ 18, 2009). "Duffy Triumphs With Three BRIT Awards". Billboard. Nielsen Business Media, Inc. Retrieved ಫೆಬ್ರವರಿ 19, 2009.
  34. "Gold and Platinum". Recording Industry Association of America. Archived from the original on ಜನವರಿ 18, 2010. Retrieved ಫೆಬ್ರವರಿ 20, 2009. {{cite web}}: Unknown parameter |deadurl= ignored (help)
  35. "Oasis, Coldplay & Take That enter Guinness World Records 2010 Book" (Press release). Guinness World Records. Archived from the original on ಜುಲೈ 11, 2011. Retrieved ಜನವರಿ 16, 2011.
  36. Kaufman, Gil (ಜನವರಿ 27, 2009). "The Matrix Drop Long-Lost Album Featuring Katy Perry". MTV. Retrieved ಫೆಬ್ರವರಿ 15, 2009.
  37. "Katy Perry apologises to Lily Allen for 'fat' comment". NME. UK. ಡಿಸೆಂಬರ್ 9, 2008. Retrieved ಫೆಬ್ರವರಿ 15, 2009.
  38. "Lily with Lucio". capitalradio.co.uk. ಡಿಸೆಂಬರ್ 2, 2008. Archived from the original on ಫೆಬ್ರವರಿ 20, 2009. Retrieved ಫೆಬ್ರವರಿ 15, 2009.
  39. "Oh Vienna! Katy Perry dons mermaid chic for a charity bash in Austria". Dailymail.co.uk. ಮೇ 18, 2009. Retrieved ನವೆಂಬರ್ 9, 2010.
  40. ಸಿಡ್ನಿ ಫ್ಯಾಷನ್ ಡಿಸೈನರ್ ಡಿಫೆಂಡ್ಸ್ ಬಿಸಿನೆಸ್ ಎಗೇನೆಸ್ಟ್ ಪಾಪ್ ಸ್ಟಾರ್ ಕೀಟಿ ಪೆರಿ Archived February 13, 2010[Date mismatch], ವೇಬ್ಯಾಕ್ ಮೆಷಿನ್ ನಲ್ಲಿ., smartcompany.com.au, ಜೂನ್ ೧೬, ೨೦೦೯. ಪುಶ್ಚೇತನ ಜುಲೈ ೫, ೨೦೦೯.
  41. ಕೇಟಿ ಪೆರಿ ನಾಟ್ ಸ್ಯೂಯಿಂಗ್ ಫ್ಯಾಷನ್ ಡಿಸೈನರ್ ಕೇಟೀ ಪೆರಿ Archived July 28, 2009[Date mismatch], ವೇಬ್ಯಾಕ್ ಮೆಷಿನ್ ನಲ್ಲಿ. ಲೈಮ್ ಲೈಫ್, ಜೂನ್ ೧೯, ೨೦೦೯. ೨೦೦೯ರ ಜೂನ್‌ ೨೦ರಂದು ಮರುಸಂಪಾದಿಸಲಾಯಿತು.
  42. ಇಟ್ಡ್ ಆಲ್ ಓವರ್!!! Archived November 24, 2009[Date mismatch], ವೇಬ್ಯಾಕ್ ಮೆಷಿನ್ ನಲ್ಲಿ., ವಸ್ತ್ರವಿನ್ಯಾಸಕಾರ್ತಿ ಕೇಟೀ ಪೆರಿಯ ಬ್ಲಾಗ್ ಒಕ್ಕಣಿಕೆ. ಪುನಶ್ಚೇತನ ಜುಲೈ ೧೮, ೨೦೦೯[ಮಡಿದ ಕೊಂಡಿ]
  43. "Katy Perry Explains Why She Was Cut From 'Get Him To The Greek'". MTV. ಜೂನ್ 5, 2010. Retrieved ಸೆಪ್ಟೆಂಬರ್ 19, 2010.
  44. "MediaPlayer". kiisfm.com.
  45. "Katy Perry's MTV UnpluggedAlbum". MTV.
  46. "Amazon: MTV Unplugged [Live] CD/DVD". Amazon.com.
  47. "Katy Perry lands X Factor judging role". The Sun. ಜೂನ್ 12, 2010. Retrieved ಅಕ್ಟೋಬರ್ 24, 2010.
  48. Montgomery, James (ಜೂನ್ 9, 2010). "Katy Perry's 'California Gurls' Makes History In Rise To #1". MTV.com. MTV Networks.
  49. "Katy Perry Unveils Semi-Nude 'Teenage Dream' Album Cover". Billboard. ಸೆಪ್ಟೆಂಬರ್ 14, 2010.
  50. Dinh, James (ಜುಲೈ 21, 2010). "Katy Perry Wears Only Cotton Candy On Teenage Dream Cover". MTV.
  51. Greenblatt, Leah (ಜುಲೈ 22, 2010). "Katy Perry's new single 'Teenage Dream' hits the web". Entertainment Weekly.
  52. "Katy Perry has well and truly got her claws into Russell Brand". OK!. ಸೆಪ್ಟೆಂಬರ್ 13, 2010. Archived from the original on ಅಕ್ಟೋಬರ್ 11, 2011. Retrieved ಮೇ 12, 2011.
  53. "Katy Perry to Appear in After School Special". TMZ.com. ಸೆಪ್ಟೆಂಬರ್ 14, 2010.
  54. "Katy Perry Rocks Concert At Her Old High School". MTV. ಸೆಪ್ಟೆಂಬರ್ 15, 2010.
  55. "Is Katy Perry Too Sexy For Sesame Street?". The Wall Street Journal. ಸೆಪ್ಟೆಂಬರ್ 23, 2010. Archived from the original on ಫೆಬ್ರವರಿ 18, 2012. Retrieved ಮೇ 12, 2011.
  56. "ಕೇಟಿ ಪೆರೀಸ್ ವಿಡಿಯೋ ಮೇಡ್ ಇನ್ ಬುಡಾಪೆಸ್ಟ್, Xpatlop, 7 ಅಕ್ಟೋಬರ್ 2010
  57. "Katy Perry To Launch Perfume". [[MTV}]] UK. ಜುಲೈ 23, 2010.
  58. Koenig, Gillian (ಜುಲೈ 22, 2010). "Katy Perry's 'Purr'-fect New Perfume Launch". People. Time Inc.
  59. Leong, Cheryl (ನವೆಂಬರ್ 3, 2008). "Katy Perry: One of the Boys". MTV Asia. Archived from the original on ಆಗಸ್ಟ್ 17, 2010. Retrieved ಫೆಬ್ರವರಿ 13, 2009. (ಲೇಖಾಲಯಕ್ಕೆ ಕಳುಹಿಸಿದ್ದು ೨೨ ಮಾರ್ಚ್ ೨೦೦೯ at [೧])
  60. ೬೦.೦ ೬೦.೧ ೬೦.೨ Vesilind, Emili (ಜೂನ್ 15, 2008). "Singer Katy Perry has the fashion world abuzz". Los Angeles Times. Retrieved ಫೆಬ್ರವರಿ 13, 2009.
  61. Graff, Gary (ಫೆಬ್ರವರಿ 21, 2009). "nterview: Katy Perry — Hot N Bold". The Scotsman. Archived from the original on ಮಾರ್ಚ್ 7, 2009. Retrieved ಫೆಬ್ರವರಿ 28, 2009.
  62. "Katy Perry: No Sex Would Kill Me". OK!. ಫೆಬ್ರವರಿ 6, 2009. Retrieved ಫೆಬ್ರವರಿ 28, 2009.
  63. ೬೩.೦ ೬೩.೧ ೬೩.೨ ೬೩.೩ Vena, Jocelyn (ಆಗಸ್ಟ್ 20, 2008). "Katy Perry Responds To Rumors Of Parents' Criticism: 'They Love And Support Me'". MTV. Retrieved ಫೆಬ್ರವರಿ 16, 2009.
  64. "Katy Perry: The New Gay Interview". TheNewGay.net. ಜೂನ್ 10, 2008. Retrieved ಫೆಬ್ರವರಿ 15, 2009.
  65. Tibbetts, Tammy (ಅಕ್ಟೋಬರ್ 8, 2008). "Katy Perry's Style Secrets". Cosmogirl. Archived from the original on ಮಾರ್ಚ್ 5, 2009. Retrieved ಫೆಬ್ರವರಿ 28, 2009.
  66. ೬೬.೦ ೬೬.೧ "Pop star Katy Perry under fire for posing with a knife". The Times. London. ಅಕ್ಟೋಬರ್ 22, 2008. Retrieved ಡಿಸೆಂಬರ್ 5, 2008.
  67. Khan, Urmee (ಅಕ್ಟೋಬರ್ 27, 2008). "Katy Perry, the singer mocks knife picture by posing with a spoon". The Daily Telegraph. London. Archived from the original on ಮಾರ್ಚ್ 23, 2010. Retrieved ಜೂನ್ 20, 2010.
  68. "Katy Perry at FHM Magazine". Archived from the original on ಮೇ 11, 2011. Retrieved ಮೇ 12, 2011. {{cite web}}: Cite has empty unknown parameter: |3= (help)
  69. Laudadio, Marisa (ಜನವರಿ 2, 2009). "Katy Perry & Travis McCoy Break Up". People. Retrieved ಫೆಬ್ರವರಿ 13, 2009.
  70. "Re What Does Katy Perry See In Russell Brand". Wn.com. Retrieved ನವೆಂಬರ್ 9, 2010.
  71. Ziegbe, Mawuse (ಸೆಪ್ಟೆಂಬರ್ 4, 2010). "Katy Perry, Russell Brand's Love Story Began At The VMAs – Music, Celebrity, Artist News". MTV. Retrieved ನವೆಂಬರ್ 9, 2010.
  72. Clench, James (ಅಕ್ಟೋಬರ್ 3, 2009). "Brand new lovers". Thesun.co.uk. Archived from the original on ಅಕ್ಟೋಬರ್ 18, 2014. Retrieved ನವೆಂಬರ್ 9, 2010.
  73. "Russell Brand proposes to his American girlfriend Katy Perry". Hello Magazine. ಜನವರಿ 6, 2010. Retrieved ಜನವರಿ 6, 2010.
  74. "Katy Perry And Russell Brand: A Timeline Of Their Love". MTV. ಜನವರಿ 6, 2010. Retrieved ಸೆಪ್ಟೆಂಬರ್ 1, 2010.
  75. "Katy Perry Calls Russell Brand the 'Perfect' Partner in YouTube Interview". Billboard.
  76. "Katy Perry looks plastic fantastic in latex as Teenage Dream tops album chart | Mail Online". The Daily Mail. London. ಸೆಪ್ಟೆಂಬರ್ 7, 2010. Retrieved ಸೆಪ್ಟೆಂಬರ್ 14, 2010.
  77. "News – Katy Perry, Russell Brand Wed in Elaborate Indian Ceremony – Celebrity News". UsMagazine.com. Retrieved ನವೆಂಬರ್ 9, 2010.
  78. Prithwish Ganguly, TNN, Oct 26, 2010, 12.00am IST (ಅಕ್ಟೋಬರ್ 26, 2010). "Katy affirms Brand loyalty – The Times of India". Timesofindia.indiatimes.com. Retrieved ನವೆಂಬರ್ 9, 2010.{{cite web}}: CS1 maint: multiple names: authors list (link) CS1 maint: numeric names: authors list (link)

ಬಾಹ್ಯ ಕೊಂಡಿಗಳು‌‌ ಬದಲಾಯಿಸಿ

 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
ಪೂರ್ವಾಧಿಕಾರಿ
Snoop Dogg
MTV Europe Music Awards host
2008–09
ಉತ್ತರಾಧಿಕಾರಿ
Eva Longoria

ಟೆಂಪ್ಲೇಟು:Katy Perry

  1. REDIRECT Template:The X Factor (UK)