ಕೆನೆ

ಹೈನು ಉತ್ಪನ್ನ

ಕೆನೆಯು ಸಮರಸೀಕರಣ ಮಾಡುವ ಮೊದಲು ಹಾಲಿನ ಮೇಲಿನಿಂದ ತೆಗೆಯಲಾದ ನೈಸರ್ಗಿಕ ಕೊಬ್ಬಿನ ಪದರವನ್ನು ಹೊಂದಿರುವ ಒಂದು ಕ್ಷೀರೋತ್ಪನ್ನ. ಏಕರೂಪವಾಗಿಸದ ಹಾಲಿನಲ್ಲಿ, ಕಡಿಮೆ ಸಾಂದ್ರವಾದ ಕೊಬ್ಬು ಅಂತಿಮವಾಗಿ ಮೇಲಕ್ಕೆ ಏರುವುದು. ಕೆನೆಯ ಕೈಗಾರಿಕಾ ಉತ್ಪಾದನೆಯಲ್ಲಿ, ಈ ಪ್ರಕ್ರಿಯೆಯನ್ನು "ವಿಭಾಜಕ"ಗಳೆಂದು ಕರೆಯಲ್ಪಡುವ ಅಪಕೇಂದ್ರಕಗಳನ್ನು ಬಳಸಿ ತ್ವರಿತಗೊಳಿಸಲಾಗುತ್ತದೆ. ಅನೇಕ ದೇಶಗಳಲ್ಲಿ, ಒಟ್ಟು ಕೊಬ್ಬಿನ ಅಂಶವನ್ನು ಆಧರಿಸಿ ಕೆನೆಯನ್ನು ಹಲವು ಶ್ರೇಣಿಗಳಲ್ಲಿ ಮಾರಾಟಮಾಡಲಾಗುತ್ತದೆ. ದೂರದ ಮಾರುಕಟ್ಟೆಗಳಿಗೆ ಸಾಗಣೆಗಾಗಿ ಕೆನೆಯನ್ನು ಪುಡಿಯಾಗುವಂತೆ ಒಣಗಿಸಬಹುದು, ಮತ್ತು ಸಂಪೂರಣಗೊಳಿಸಿದ ಕೊಬ್ಬಿನ ಹೆಚ್ಚಿನ ಪ್ರಮಾಣಗಳನ್ನು ಹೊಂದಿರುತ್ತದೆ.[೧]

ಏಕರೂಪವಾಗಿರದ ಹಾಲಿನ ಬಾಟಲಿ, ಮೇಲಿನ ಪದರವೇ ಕೆನೆ

ಉಲ್ಲೇಖಗಳು ಬದಲಾಯಿಸಿ

  1. "Nutrition for Everyone: Basics: Saturated Fat - DNPAO - CDC". www.cdc.gov. Archived from the original on 29 ಜನವರಿ 2014. Retrieved 16 ಜೂನ್ 2017. {{cite web}}: Unknown parameter |dead-url= ignored (help)
"https://kn.wikipedia.org/w/index.php?title=ಕೆನೆ&oldid=891401" ಇಂದ ಪಡೆಯಲ್ಪಟ್ಟಿದೆ