thumb[ಶಾಶ್ವತವಾಗಿ ಮಡಿದ ಕೊಂಡಿ]

ಕಾಂತ ಮಸೂರ ಎಲೆಕ್ಟ್ರಾನ್ ದೂಲಗಳನ್ನು ಅಭಿಸರಿಸಲು (ಕನ್ವರ್ಜ್) ಉಪಯೋಗಿಸುವ ಕಾಂತಕ್ಷೇತ್ರ (ಮ್ಯಾಗ್ನೆಟಿಕ್ ಲೆನ್ಸ್). ಬೆಳಕಿನ ಕಿರಣಗಳನ್ನು ಗಾಜಿನ ಮಸೂರ ಬಾಗಿಸಿ ಅಭಿಸರಿಸುವ ರೀತಿಯಲ್ಲಿ ಇದು ಎಲೆಕ್ಟ್ರಾನುಗಳನ್ನು ಬಾಗಿಸಿ ಅಭಿಸರಿಸುತ್ತದೆ.

294x294px[ಶಾಶ್ವತವಾಗಿ ಮಡಿದ ಕೊಂಡಿ]
294x294px[ಶಾಶ್ವತವಾಗಿ ಮಡಿದ ಕೊಂಡಿ]
ಮಯೆರ್-ಲೀಬ್ನಿಟ್ಜ್[ಶಾಶ್ವತವಾಗಿ ಮಡಿದ ಕೊಂಡಿ] ಪ್ರಯೋಗಾಲಯದಲ್ಲಿ ಮ್ಯೂನಿಕ್ ಲೆನ್ಸ್ (ಕ್ವಾಡ್ರುಪೋಲ್ ಮ್ಯಾಗ್ನೆಟ್) ನ ಉಪ ಪ್ರಕಾರ


ಚಿತ್ರ 1ರಲ್ಲಿ ತೋರಿಸಿರುವಂಥ ಒಂದು ಸುರುಳಿಯ ಮೂಲಕ ವಿದ್ಯುತ್ತನ್ನು ಹರಿಸಿದರೆ ಅದರ ಅಕ್ಷನೇರದಲ್ಲಿ ಕಾಂತಕ್ಷೇತ್ರ (ಚುಕ್ಕಿಗೆರೆ) ಉಂಟಾಗುತ್ತದೆ. ಈಗ ಇದರ ಅಕ್ಷನೇರದಲ್ಲಿ ಎಲೆಕ್ಟ್ರಾನುಗಳ ಒಂದು ಅಪಸರಣ ದೊಲವನ್ನು ಕಳುಹಿಸಿದರೆ ಎಲೆಕ್ಟ್ರಾನುಗಳು ಮುಂದೆ ಸ್ವಲ್ಪ ದೂರದಲ್ಲಿ ಅಭಿಸರಿಸುತ್ತವೆ. [೧]

ಚಿತ್ರ (2)ರಲ್ಲಿ ತೋರಿಸಿರುವಂತೆ ಸ್ವಲ್ಪ ತೆರಪು ಉಳ್ಳ ಮಿದು ಕಬ್ಬಿಣ ಕವಚದಲ್ಲಿ ಒಂದು ಸುರುಳಿಯನ್ನು ಸುತ್ತಿ ಅದರಲ್ಲಿ ವಿದ್ಯುತ್ತನ್ನು ಹರಿಸಿದರೆ ಅಲ್ಲಿ ಉಂಟಾಗುವ ಕಾಂತಕ್ಷೇತ್ರ (ಚುಕ್ಕಿಗೆರೆ) ಕಾಂತ ಮಸೂರದಂತೆ ವರ್ತಿಸುತ್ತದೆ.[೨]

ಕಾಂತ ಮಸೂರಗಳನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಿಗಳಲ್ಲಿ ಮತ್ತು ಹೆಚ್ಚು ವೋಲ್ಟೇಜಿನ ಕ್ಯಾಥೋಡ್ ಕಿರಣ ಕವಾಟಗಳಲ್ಲಿ ಉಪಯೋಗಿಸುತ್ತಾರೆ. ಕಾಂತ ಮಸೂರ ಉಂಟುಮಾಡುವ ಬಿಂಬ ಬಾಗಿರುತ್ತದೆ. ಈ ಬಾಗುವಿಕೆ ಕಾಂತಕ್ಷೇತ್ರವನ್ನವಲಂಬಿಸಿರುವುದು.

ಉಲ್ಲೇಖಗಳು ಬದಲಾಯಿಸಿ

  1. https://en.wikipedia.org/wiki/Magnetic_lens
  2. Hafner B., 2008, Introductory Transmission Electron Microscopy Primer, Characterization Facility, University of Minnesota - "Reference"