ಕನ್ನಡ ಪುಸ್ತಕ ಭಂಡಾರ

ನಾಡು - ನುಡಿ Archived 2021-01-21 ವೇಬ್ಯಾಕ್ ಮೆಷಿನ್ ನಲ್ಲಿ.ಯ ಬೆಳವಣಿಗೆಯಲ್ಲಿ ಪುಸ್ತಕಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಪುಸ್ತಕಗಳು ನಮ್ಮ ಸಹಪಾಠಿಗಳು , ಸಂಗಾತಿಗಳು. ಪುಸ್ತಕ ಸಂಸ್ಕೃತಿಗಿಂತ ಮಿಗಿಲಾದದ್ದು ಬೇರೊಂದಿಲ್ಲ ಆದ್ದರಿಂದ ಪುಸ್ತಕ ಓದುವ ಹವ್ಯಾಸ ಒಳ್ಳೆಯ ಬೆಳವಣಿಗೆಗೆ ಕಾರಣವಾಗುತ್ತದೆ. ಇದರಿಂದ ಉತ್ತಮ ಸಂಸ್ಕೃತಿಗೆ ನಾಂದಿ . ನಾಳಿನ ಅಭಿವೃದ್ಧಿಯ ಪ್ರೇರಕ.

’ನಹಿ ಜ್ಞಾನೇನ ಸದೃಶಂ’ ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ ಎಂಬುದು ಪ್ರಾಚೀನ ಗೀತಾಮೃತದ ಒಂದು ಅಣಿಮುತ್ತು. ಪ್ರಪಂಚದಲ್ಲಿ ಬೆಳವಣಿಗೆಗೆ ವಿಶೇಷ ಪ್ರಾಶಸ್ತ್ಯವುಂಟು. ಯಾವ ನಾಗರಿಕತೆ ಹಾಗೂ ಸಂಸ್ಕೃತಿ ಸಮೃದ್ಧವಾಗಿರುತ್ತದೆಯೋ ಅದು ಸರ್ವತೋಮುಖ ಬೆಳವಣಿಗೆಯನ್ನು ಹೊಂದಿ ಇತಿಹಾಸ ನಿರ್ಮಾಣ ಮಾಡಿರುವುದಕ್ಕೆ ಹಲವಾರು ದೃಷ್ಟಾಂತಗಳು ಪ್ರಪಂಚದಾದ್ಯಂತ ಕಾಣ ದೊರೆಯುತ್ತವೆ. ಜ್ಞಾನ ಬಹುಮುಖಿಯಾದುದು. ಅದು ಹಲವಾರು ದಿಕ್ಕುಗಳಲ್ಲಿ ಚಲನಶೀಲತೆಯನ್ನು ಪಡೆದು ಕೊಂಡಿರುತ್ತದೆ. ಜ್ಞಾನದ ಬೊಕ್ಕಸ ತುಂಬಿದಂತೆಲ್ಲ ಇನ್ನೂ ಆಳಕ್ಕೆ ಇಳಿಯುತ್ತಾ ಹೋಗುತ್ತದೆ. ಕುತೂಹಲ ಗರಿ ಕೆದರುವಂತೆ ಮಾಡುತ್ತದೆ.

’ನಮ್ಮೊಂದಿಗೆ ಪುಸ್ತಕಗಳಿದ್ದರೆ ನಾವೆಂದಿಗೂ ಒಬ್ಬಂಟಿಗರಾಗಿರುವುದಿಲ್ಲ ಎನ್ನುತ್ತಾರೆ - ಈ ದೇಶದ ಶ್ರೇಷ್ಠ ಶಿಕ್ಷಕರಲ್ಲಿ ಒಬ್ಬರಾದ ಡಾ. ಸರ್ವಪಲ್ಲಿ ರಾಧಕೃಷ್ಣನ್. ’ಒಂದು ಉತ್ತಮ ಗ್ರಂಥವನ್ನು ನಾಶಪಡಿಸುವುದೆಂದರೆ ಒಬ್ಬ ಸಜ್ಜನ ಮನುಷ್ಯನನ್ನೇ ಕೊಂದಂತೆ’ ಎನ್ನುತ್ತಾರೆ ಜಾನ್ ವಿಲ್ಟನ್.

ಆದರೆ ನಮ್ಮ ಕಣ್ಮುಂದೆ ಪುಸ್ತಕಗಳಿವೆ; ಕೊಳ್ಳುವ ವ್ಯವಸ್ಥೆ ಸರಿಯಾಗಿಲ್ಲ. ಒಂದೊಂದು ಪುಸ್ತಕವೂ ಒಂದೊಂದು ಪ್ರಬುದ್ದ ಮೆದುಳಿನ ಫಲ. ಅದನ್ನು ಸಾಯಿಸಬಾರದು ಎಂಬ ಪರಿಜ್ಞಾನ ನಮ್ಮ ಬಹುಸಂಖ್ಯೆ ಜನರಿಗೂ ಇಲ್ಲ; ಜನಪ್ರತಿನಿಧಿಗಳಿಂದ ಅಸ್ತಿತ್ವಕ್ಕೆ ಬಂದ ಸರ್ಕಾರಕ್ಕೂ ಇಲ್ಲ.

ನಮ್ಮ ಕನ್ನಡ ನಾಡು Archived 2021-01-21 ವೇಬ್ಯಾಕ್ ಮೆಷಿನ್ ನಲ್ಲಿ.