ಕಟಾರ್‌ಮಲ್

ಭಾರತ ದೇಶದ ಗ್ರಾಮಗಳು

ಕಟಾರ್‌ಮಲ್ ಭಾರತದ ಉತ್ತರಾಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯ ಕುಮಾವ್ಞು ವಿಭಾಗದಲ್ಲಿರುವ ಒಂದು ದೂರದ ಹಳ್ಳಿ.

ಸೂರ್ಯ ದೇವಾಲಯ, ಕಟಾರ್‌ಮಲ್
ಕಟಾರ್‌ಮಲ್ ಸೂರ್ಯ ದೇವಾಲಯ ಸಂಕೀರ್ಣ

ಸೂರ್ಯ ದೇವಾಲಯ ಬದಲಾಯಿಸಿ

ಕಟಾರ್‌ಮ‌‌ಲ್ ತುಲನಾತ್ಮಕವಾಗಿ ಅಪರೂಪದ ಸೂರ್ಯ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಇದನ್ನು ಕ್ರಿ.ಶ. 9 ನೇ ಶತಮಾನದಲ್ಲಿ ಕತ್ಯೂರಿ ರಾಜರು ನಿರ್ಮಿಸಿದರು. [೧] ಒಬ್ಬ ಕತ್ಯೂರಿ ರಾಜನಾದ ಕಟಾರ್‌ಮಲ್ಲಾ ಈ ದೇವಾಲಯವನ್ನು ನಿರ್ಮಿಸಿದನು. ಇದು ಸೂರ್ಯನ ಮುಖ್ಯ ದೇವತೆಯ (ಇದನ್ನು ಬುರ್ಹಾದಿತಾ ಅಥವಾ ವೃದ್ಧಾಧಿತ್ಯ ಎಂದು ಕರೆಯಲಾಗುತ್ತದೆ) ಸುತ್ತ 44 ಸಣ್ಣ ದೇವಾಲಯಗಳನ್ನು ಹೊಂದಿದೆ.[೨] ಶಿವ-ಪಾರ್ವತಿ ಮತ್ತು ಲಕ್ಷ್ಮಿ-ನಾರಾಯಣರಂತಹ ಇತರ ದೇವತೆಗಳನ್ನೂ ಈ ದೇವಾಲಯ ಸಂಕೀರ್ಣದಲ್ಲಿ ಸ್ಥಾಪಿಸಲಾಗಿದೆ. 10 ನೇ ಶತಮಾನದ ಒಂದು ವಿಗ್ರಹವನ್ನು ಕಳವು ಮಾಡಿದ ನಂತರ ಕೆತ್ತಿದ ಮರದ ಬಾಗಿಲುಗಳು ಮತ್ತು ಫಲಕಗಳನ್ನು ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಸಾಗಿಸಲಾಯಿತು. ಗೋಡೆಗಳು ಮತ್ತು ಫಲಕಗಳ ಮೇಲೆ ಇತರ ಕೆತ್ತನೆಗಳನ್ನು ಹೊಂದಿರುವ ಈ ದೇವಾಲಯವನ್ನು 1958 ರ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಹಾಗೂ ಅವಶೇಷಗಳ ಕಾಯ್ದೆಯಡಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯದ ಸ್ಮಾರಕವೆಂದು ಘೋಷಿಸಲಾಯಿತು.

ಉಲ್ಲೇಖಗಳು ಬದಲಾಯಿಸಿ

  1. Sajwan, Venita (17 August 2002). "A lesser-known sun temple at Katarmal". The Tribune. Retrieved 8 July 2013.
  2. "Katarmal Sun temple,Almora". Nainital Tourism. Retrieved 9 July 2013.