ಐಗೂಗಲ್ (ಈ ಹಿಂದೆ ಗೂಗಲ್ ಪರ್ಸನಲೈಸ್ಡ್ ಹೋಂಪೇಜ್ ಹಾಗು ಗೂಗಲ್ IG ಎಂದು ಪರಿಚಿತವಾಗಿತ್ತು.) ಇದು ಗೂಗಲ್ ನ ಒಂದು ಸೇವೆಯಾಗಿದ್ದು, ಗ್ರಾಹಕರ ಆದೇಶಾನುಸಾರ ತಯಾರಿಸಬಹುದಾದ ಅಜಾಕ್ಸ್ ನ್ನು ಆಧರಿಸಿದ ಆರಂಭಿಕಪುಟ ಅಥವಾ ಖಾಸಗಿ ವೆಬ್ ಪೋರ್ಟಲ್(ಇದು ನೆಟ್ ವೈಬ್ಸ್, ಪೇಜ್ ಫ್ಲೇಕ್ಸ್, ಮೈ ಯಾಹೂ!, ಹಾಗು ವಿಂಡೋಸ್ ಲೈವ್ ಪರ್ಸನಲೈಸ್ಡ್ ಎಕ್ಸ್ಪೀರಿಯನ್ಸ್ ಗಳ ಮಾದರಿಯನ್ನು ಹೋಲುತ್ತದೆ). ಗೂಗಲ್, ಈ ಸೇವೆಯನ್ನು ಮೊದಲ ಬಾರಿಗೆ ಮೇ 2005ರಲ್ಲಿ ಆರಂಭಿಸಿತು. ಇದರ ಲಕ್ಷಣಗಳಲ್ಲಿ ವೆಬ್ ಫೀಡ್ಸ್ (ಮಾಹಿತಿ)ಹಾಗು ಗೂಗಲ್ ಗ್ಯಾಜೆಟ್ಸ್(ಅನುಬಂಧ)ಗಳನ್ನು ಅಧಿಕಗೊಳಿಸುವ ಸಾಮರ್ಥ್ಯವೂ ಸೇರಿದೆ.(ಗೂಗಲ್ ಡೆಸ್ಕ್ ಟಾಪ್ ನ ಮೇಲೆ ಲಭ್ಯವಿರುವ ಲಕ್ಷಣಗಳ ಮಾದರಿ).[೧] ನಂತರ ಏಪ್ರಿಲ್ 30, 2007ರಲ್ಲಿ, ಗೂಗಲ್, "ಗೂಗಲ್ ಪರ್ಸನಲೈಸ್ಡ್ ಹೋಂಪೇಜ್" ನ್ನು "ಐಗೂಗಲ್" ಎಂದು ಮರುನಾಮಕರಣ ಮಾಡಿತು.[೧] As of 17 ಅಕ್ಟೋಬರ್  2007ಗೂಗಲ್ ಈ ಸೇವೆಯನ್ನು 42 ಭಾಷೆಗಳು ಹಾಗು 70ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಪ್ರಾದೇಶಿಕ ಹೆಸರುಗಳೊಂದಿಗೆ ಹಲವು ಸ್ಥಳೀಯ ರೂಪಾಂತರಗಳಲ್ಲಿ ಲಭ್ಯವಾಗುವಂತೆ ಮಾಡಿದೆ.[೨][೩] ಫೆಬ್ರವರಿ 2007ರಲ್ಲಿ, 7.1 ದಶಲಕ್ಷ ಜನರು ಐಗೂಗಲ್ ನ್ನು ಬಳಸಿದರು.[೪] ಏಪ್ರಿಲ್ 2008ರಲ್ಲಿ, ಗೂಗಲ್ ನ ಹೋಂಪೇಜ್ ಅನ್ನು ವೀಕ್ಷಿಸುವ 20%ನಷ್ಟು ಜನರು ಐಗೂಗಲ್ ನ್ನು ಬಳಸಿದ್ದಾರೆ.[೫]

iGoogle
ಅಭಿವೃದ್ಧಿಪಡಿಸಿದವರುGoogle
ಗಣಕಯಂತ್ರದಲ್ಲಿWeb browsers
ವಿಧWeb Gadgets
ಅಧೀಕೃತ ಜಾಲತಾಣwww.google.com/ig

ವಿಶಿಷ್ಟ ಲಕ್ಷಣಗಳು ಬದಲಾಯಿಸಿ

ಅನುಬಂಧಗಳು(ಗ್ಯಾಜೆಟ್‌‌ಗಳು) ಬದಲಾಯಿಸಿ

ಐಗೂಗಲ್ ಅನುಬಂಧಗಳು ಬಳಕೆದಾರರೊಂದಿಗೆ ಪಾರಸ್ಪರಿಕ ವಿನಿಮಯ ಪ್ರತಿಕ್ರಿಯೆ ನಡೆಸುವುದರ ಜೊತೆಗೆ ಗೂಗಲ್ ಗ್ಯಾಜೆಟ್ಸ್‌‌ APIನ್ನು ಬಳಸಿಕೊಳ್ಳುತ್ತವೆ. ಗೂಗಲ್ ಡೆಸ್ಕ್ ಟಾಪ್ ಗೆ ಅಭಿವೃದ್ಧಿಪಡಿಸಲಾದ ಕೆಲವು ಗ್ಯಾಜೆಟ್ಸ್‌‌ ಅನ್ನು ಐಗೂಗಲ್‌‌ನೊಳಗೂ ಸಹ ಬಳಕೆ ಮಾಡಬಹುದು. ಗೂಗಲ್ ಗ್ಯಾಜೆಟ್ಸ್ API ಸಾರ್ವಜನಿಕವಾಗಿದ್ದು, ಯಾವುದೇ ಅಗತ್ಯಕ್ಕೆ ಯಾರು ಬೇಕಾದರೂ ಒಂದು ಅನುಬಂಧವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.[೬] ಗೂಗಲ್ ಎಲ್ಲ ಬಳಕೆದಾರರಿಗೆ ವಿಶೇಷ ಅನುಬಂಧವನ್ನು ಸೃಷ್ಟಿಸುವ ಅವಕಾಶ ನೀಡುತ್ತದೆ, ಇದಕ್ಕೆ ಗ್ಯಾಜೆಟ್ಸ್‌‌ APIಗಳನ್ನು ಬಳಸುವ ಅಗತ್ಯವಿರುವುದಿಲ್ಲ. ಅನುಬಂಧಗಳನ್ನು ಸ್ನೇಹಿತರು ಹಾಗು ಕುಟುಂಬದವರೊಂದಿಗೆ ಹಂಚಿಕೊಳ್ಳಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ವಿಶೇಷ ಅನುಬಂಧಗಳನ್ನು, ಆನ್ಲೈನ್ ವಿಸರ್ಡ್ ನ್ನು ಬಳಸಿ ಸೃಷ್ಟಿಸಬಹುದು; ಹಾಗು ಇವುಗಳು ಈ ಕೆಳಕಂಡ ಮಾದರಿಗಳಲ್ಲಿ ಒಂದಕ್ಕೆ ಸೇರಿರಬೇಕು:

  • "ಫ್ರೇಮ್ಡ್ ಫೋಟೋ" - ಛಾಯಾಚಿತ್ರಗಳ ಸರಣಿಯನ್ನು ಪ್ರದರ್ಶಿಸುತ್ತದೆ.
  • "ಗೂಗಲ್ ಗ್ರಾಂ" – ಪ್ರತಿನಿತ್ಯದ ವಿಶೇಷ ಸಂದೇಶಗಳಿಗಾಗಿ ಸೃಷ್ಟಿಸಲಾಗಿರುತ್ತದೆ.
  • "ಡೈಲಿ ಮಿ" – ಬಳಕೆದಾರರ ಆ ಕ್ಷಣದ ಚಿತ್ತಸ್ಥಿತಿ ಹಾಗು ಭಾವನೆಗಳನ್ನು ಪ್ರದರ್ಶಿಸುತ್ತದೆ.
  • "ಫ್ರೀ ಫಾರ್ಮ್" – ತಮ್ಮ ಇಚ್ಛೆಯ ಮಾಹಿತಿ ಹಾಗು ಚಿತ್ರ ಪ್ರದಾನಕ್ಕೆ ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ.
  • "ಯೂಟ್ಯೂಬ್ ಚಾನೆಲ್" – ಯೂಟ್ಯೂಬ್ ಚಾನೆಲ್ ನ ದೃಶ್ಯಾವಳಿಗಳನ್ನು ಪ್ರದರ್ಶಿಸುತ್ತದೆ.
  • "ಪರ್ಸನಲ್ ಐಟಂಸ್" – ವಸ್ತುಗಳ ಪಟ್ಟಿಯನ್ನು ಸೃಷ್ಟಿಸಲು ಬಳಕೆದಾರನಿಗೆ ಅನುವು ಮಾಡಿಕೊಡುತ್ತದೆ.
  • "ಕೌಂಟ್ ಡೌನ್" – ಹಿನ್ನೆಣಿಕೆ ಕಾಲಮಾಪಕ.
  • "ಡೈಲಿ ಲಿಟರರಿ ಕೋಟ್" – ಮೋಡ್ ರೂಂ ಪ್ರೆಸ್ ಮುಂದಿಟ್ಟ ಸಾಹಿತ್ಯ-ಸಂಬಂಧಿ ಉಲ್ಲೇಖಗಳನ್ನು ಪ್ರದರ್ಶಿಸುತ್ತದೆ.

ಅಭಿವರ್ಧಕರು ರೂಪಿಸಿದ ಕೆಲವು ಅನುಬಂಧಗಳಲ್ಲಿ ಈ ಕೆಳಕಂಡವು ಸೇರಿವೆ:

  • "ಮೀಟಿಯೋ-ಸಿ": ಆಯ್ದ ಪ್ರದೇಶ(ಗಳು)ಗಳಿಗೆ ಆ ಕ್ಷಣದ ಹವಾಮಾನ ಹಾಗು ಹವಾಮಾನ ಮುನ್ಸೂಚನೆಯನ್ನು ಪ್ರದರ್ಶಿಸುತ್ತದೆ.
  • "ಇಬೇ": ಇಬೇಯಲ್ಲಿರುವ ವಿಷಯಗಳಿಗಾಗಿ ಹುಡುಕಾಟ ನಡೆಸುತ್ತದೆ.

ನಂತರ 2009ರ ಉದ್ದಕ್ಕೂ, ಐಗೂಗಲ್, ಹೋಂಪೇಜ್ ನ ಬದಿಯಲ್ಲಿ ಒಂದು ಸೈಡ್ ಬಾರನ್ನು ಬಿಡುಗಡೆ ಮಾಡಿತು, ಇದು ಐಗೂಗಲ್ ಪುಟಗಳು ಒಟ್ಟಾರೆ ಹೊರರೂಪವನ್ನೂ ಸಹ ಬದಲಾವಣೆ ಮಾಡಿತು. ಇದು ಜಿಮೇಲ್ ನ ಬಳಕೆದಾರರಿಗೆ gmail.comಗೆ ಹೋಗದೆ, ಮೇಲ್ಭಾಗದಲ್ಲಿ ಅಡ್ಡಡ್ಡಲಾದ ವ್ಯವಸ್ಥೆಯ ಬದಲು ಉದ್ದವಾಗಿ ಐಗೂಗಲ್ ಟ್ಯಾಬ್ ಗಳನ್ನು ವ್ಯವಸ್ಥೆಗೊಳಿಸುವ ಮೂಲಕ ತಮ್ಮ ಹೋಂಪೇಜ್ ನಿಂದ ಹರಟಲು ಅವಕಾಶ ಮಾಡಿಕೊಡುತ್ತದೆ. ಸೈಡ್ ಬಾರ್ ಲಕ್ಷಣಕ್ಕೆ ಈ ಸೇರ್ಪಡೆಯಿಂದಾಗಿ, ಐಗೂಗಲ್ ನ ಹಲವು ಬಳಕೆದಾರರಲ್ಲಿ ಅಸಮಾಧಾನ ಉಂಟಾಯಿತು. ಹಲವರು ಗೂಗಲ್ ಫೋರಮ್ ಗಳಲ್ಲಿ ತಮ್ಮ ಪ್ರತಿಕ್ರಿಯೆ ರೂಪವಾಗಿ ಅಭಿಪ್ರಾಯಗಳನ್ನು ನೀಡಿದರು. ಇದರಂತೆ ಪ್ರಸಕ್ತದಲ್ಲಿ ಜಾಲ ವಿನ್ಯಾಸದ ಬದಲಾವಣೆಯನ್ನು ಒಪ್ಪಿಕೊಳ್ಳದೆ ಬೇರೆ ಮಾರ್ಗವಿಲ್ಲ. "ನೀವೂ ಕೂಡ ಇದನ್ನು ಮೆಚ್ಚಬಹುದೆಂಬ" ಅನುಬಂಧವೂ ಸಹ ಇದೆ, ಇದರಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಸದೃಶ ಅನುಬಂಧಗಳನ್ನು ನೋಡಬಹುದು.

ವಿಷಯವಸ್ತುಗಳು ಬದಲಾಯಿಸಿ

ಚಿತ್ರ:Igooglee.jpg
ವಿಂಟರ್ ಸ್ಕೇಪ್ ವಿಷಯವಸ್ತುವಿನೊಂದಿಗೆ ಐಗೂಗಲ್

ಐಗೂಗಲ್ ನೊಂದಿಗೆ, ಬಳಕೆದಾರರು ತಮ್ಮ ಗೂಗಲ್ ಹೋಂಪೇಜ್ ಗಳಿಗೆ ವಿಶಿಷ್ಟ ವಿಷಯವಸ್ತುವನ್ನು ಆಯ್ದುಕೊಳ್ಳಬಹುದು: ಕೆಲವೊಂದು ವಿಷಯವಸ್ತುವನ್ನು ಸ್ವತಃ ಗೂಗಲ್ ವಿನ್ಯಾಸಗೊಳಿಸಿದೆ ಹಾಗು ಕೆಲವನ್ನು ಯೂಸರ್ ಬೇಸ್ (ಬಳಕೆದಾರರ ಮೂಲ)ನಿಂದ ಪಡೆದುಕೊಳ್ಳಲಾಗಿದೆ.

ಕಲಾವಿದರ ವಿಷಯವಸ್ತುಗಳು ಬದಲಾಯಿಸಿ

ಏಪ್ರಿಲ್ 2008ರಲ್ಲಿ, ಗೂಗಲ್, ವೃತ್ತಿಪರ ಕಲಾವಿದರ ವಿಷಯವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲು ಆರಂಭಿಸಿತು.[೭]

ಪ್ರಾಯೋಗಿಕ ಐಗೂಗಲ್ ಬದಲಾಯಿಸಿ

ಗೂಗಲ್, ಐಗೂಗಲ್ ನ ಹೊಸ ರೂಪಾಂತರದ ಪರೀಕ್ಷಾ ಪ್ರಕ್ರಿಯೆಯನ್ನು 8 ಜುಲೈ 2008ರಲ್ಲಿ ಆರಂಭಿಸಿದೆಯೆಂದು ಪ್ರಕಟಿಸಿತು. ಇದು ಕೆಲವೊಂದು ಲಕ್ಷಣಗಳನ್ನು ಮಾರ್ಪಾಡು ಮಾಡಿತು, ಈ ಲಕ್ಷಣಗಳಲ್ಲಿ ಎಡಬದಿಯ ನ್ಯಾವಿಗೇಶನ್ ನಲ್ಲಿ ಟ್ಯಾಬ್ ಗಳ ಬದಲಾವಣೆ, ಚ್ಯಾಟ್(ಹರಟೆ)ನ ಕಾರ್ಯಸಾಧ್ಯತೆಯ ಸೇರ್ಪಡೆ, ಹಾಗು RSSಗಾಗಿ ಕ್ಯಾನ್ವಾಸ್-ಅವಲೋಕನಾ ಅನುಬಂಧ ಸೇರಿತ್ತು.[೮] ಈ ಪರೀಕ್ಷಾ ಪ್ರಕ್ರಿಯೆಗೆ ಬಳಕೆದಾರರನ್ನು ಆಯ್ದುಕೊಳ್ಳಲಾಯಿತು. ಜೊತೆಗೆ ಇವರು ಒಂದು ಸಂಕ್ಷಿಪ್ತ ವಿವರಣೆಗಾಗಿ ಒಂದು ಸಂವಹನ ಹಾಗು ಫೋರಮ್ ಗಳಿಗಾಗಿ ಮತ್ತಷ್ಟು ಸಂಪರ್ಕಗಳಿಗೆ ಲಾಗ್ ಇನ್ ಆದಾಗ ಇವರ ಬಗ್ಗೆ ತಿಳಿಯುತ್ತದೆ. ಚರ್ಚಾವೇದಿಕೆಗಳಲ್ಲಿ, ಪರೀಕ್ಷೆಯ ನಿಯಂತ್ರಿಸಲು ಯಾವುದೇ ಆಯ್ಕೆ ಇಲ್ಲವೆಂದು ವಿವರಿಸಲಾಯಿತು[by whom?]. ಇದಲ್ಲದೇ ಪರೀಕ್ಷೆಯು ಎಲ್ಲಿಯವರೆಗೂ ಮುಂದುವರೆಯಬಹುದೆಂಬುದಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಹಲವರು[quantify] ಹೊಸ ರೂಪಾಂತರ ಬಗೆಗಿನ ಹಾಗು ಆಯ್ಕೆ ಮಾಡಿಕೊಳ್ಳುವ ಅಸಾಮರ್ಥ್ಯದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.[೯] ಅಕ್ಟೋಬರ್ 16, 2008ರಲ್ಲಿ, ಗೂಗಲ್, ಐಗೂಗಲ್ ನ ಈ ಹೊಸ ರೂಪಾಂತರವನ್ನು ಬಿಡುಗಡೆ ಮಾಡುವುದಾಗಿ ಹಾಗು ತನ್ನ ಹಳೆಯ ಕ್ರಮವ್ಯವಸ್ಥೆಯನ್ನು ಕೊನೆಗೊಳಿಸುವುದಾಗಿ ಪ್ರಕಟಿಸಿತು. ಆರಂಭದಲ್ಲಿ ಈ ಬಿಡುಗಡೆಯು ನಿರಂತರ ಹರಟೆ (ಚಾಟ್‌‌) ಸಾಧನವನ್ನು ಒಳಗೊಂಡಿರಲಿಲ್ಲ. ಆದಾಗ್ಯೂ, ಇದು ಟ್ಯಾಬ್ ಗಳ ಬದಲಾಗಿ ಎಡಬದಿ ನ್ಯಾವಿಗೇಶನ್ ಹಾಗು ಸಾಧನಗಳ ನಿಯಂತ್ರಣದಲ್ಲಿ ಬದಲಾವಣೆಯನ್ನು ಒಳಗೊಂಡಿತ್ತು.[೧೦] ಓಪನ್ ಸೋಶಿಯಲ್ ನ ತಯಾರಿಕೆಯ ಉದ್ದೇಶವನ್ನು ಉಲ್ಲೇಖಿಸಲಾಗಿತ್ತು. ಜೊತೆಗೆ ಹೊಸ ಕ್ಯಾನ್ವಾಸ್ ಅವಲೋಕನವು ಅದರಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆಂದು ತಿಳಿಸಲಾಗಿತ್ತು.[೧೧] "ಬಳಕೆದಾರರ ಒಂದು ವಾಚಿಕ ಗುಂಪು" ಬದಲಾವಣೆಗಳಿಂದ ಅತೃಪ್ತವಾಗಿದೆಯೆಂದು ಇನ್ಫಾರ್ಮೇಶನ್ ವೀಕ್ [೧೨] ವರದಿ ಮಾಡಿತು. ಹಲವು ಬಳಕೆದಾರರಿಗೆ ತಮ್ಮ ಮೇಲೆ ಹೇರಲಾಗಿದ್ದ ಬದಲಾವಣೆಗಳ ಅಗತ್ಯವಿರಲಿಲ್ಲವೆಂದೂ, ಜೊತೆಗೆ ಈ ಸಾರ್ವತ್ರಿಕ ಸಮಸ್ಯೆಯು ಸೇವೆಯನ್ನು ಒದಗಿಸುವವರ ನಿಯಂತ್ರಣದಡಿ ಸಾಫ್ಟ್ವೇರ್ ನ್ನು ಮಸುಕುಗೊಳಿಸುತ್ತದೆಂದು ಸೂಚಿಸಿತು. ಮೂಲ ಟ್ಯಾಬ್ ವಿನ್ಯಾಸವನ್ನು ಮತ್ತೆ ಬಳಕೆಗೆ ತರುವ ಪರ್ಯಾಯ ವಿಧಾನ, "? gl=all"ನ್ನು ಐಗೂಗಲ್ URLನ ಕೊನೆಯಲ್ಲಿ ಸೇರಿಸುವ ಮೂಲಕ ಕಂಡುಕೊಳ್ಳಲಾಯಿತು. ಹೀಗೆ 4 ಜೂನ್ 2009ರಲ್ಲಿ, ಈ ತಾತ್ಕಾಲಿಕ ಪರ್ಯಾಯ ವಿಧಾನವನ್ನು ತೆಗೆದುಹಾಕಲಾಯಿತು. ಕೆಲ ದಿನಗಳೊಳಗೇ, ಮತ್ತೊಂದು ಪರ್ಯಾಯ ವಿಧಾನವನ್ನು ಪತ್ತೆ ಹಚ್ಚಲಾಯಿತು. URLನ್ನು ಬದಲಾಯಿಸಿ, ಅದು "?hl=all" ನಿಂದ ಕೊನೆಗೊಳ್ಳುವಂತೆ ಮಾಡಲಾಯಿತು, ಇದರಿಂದ ಮೂಲ ಟ್ಯಾಬ್ ವಿನ್ಯಾಸವು ಮತ್ತೆ ಜಾರಿಗೆ ಬಂದಿತು; ಜೊತೆಗೆ "ನಕ್ಷೆಗಳು" ಹಾಗು "ಅಧಿಕ"ಲಕ್ಷಣಗಳನ್ನು ಒಳಗೊಂಡಂತೆ ಹೋಂಪೇಜ್ ನ ಮೇಲ್ಭಾಗದಲ್ಲಿ ಕಾಣೆಯಾಗಿದ್ದ ಕೆಲವೊಂದು ಸಂಪರ್ಕಗಳು ಮತ್ತೆ ಕಂಡುಬಂದವು. ಈ ಪರ್ಯಾಯ ವಿಧಾನವನ್ನು ಮತ್ತೊಮ್ಮೆ ನವೆಂಬರ್ 18, 2009ರಲ್ಲಿ ತೆಗೆದುಹಾಕಲಾಯಿತು. ಇದು ಬಳಕೆದಾರರ ಆಯ್ಕೆಯ ಬಗ್ಗೆ UK ಹಾಗು ವಿಶ್ವವ್ಯಾಪಿಯಾಗಿದ್ದ ವಿವಾದಕ್ಕೆ ತಕ್ಷಣದ ಪರಿಹಾರಕ್ಕೆ ದಾರಿ ಮಾಡಿಕೊಟ್ಟಿತು. ಆಗ USನ ಬಳಕೆದಾರರ ಮೇಲೆ ಹೇರಲಾಗಿದ್ದ ಹೊಸ ವಿನ್ಯಾಸದಿಂದ ಅಸಂತುಷ್ಟರಾಗಿದ್ದ ಹಲವರು ಪರ್ಯಾಯ ವಿಧಾನಗಳು ಕಾರ್ಯನಿರ್ವಹಿಸುತ್ತಿದ್ದ UK ಗೂಗಲ್ ಜಾಲಕ್ಕೆ ಬದಲಾವಣೆ ಮಾಡಿಕೊಂಡಿದ್ದರು. ಕೆಲವೇ ಗಂಟೆಗಳಲ್ಲಿ, ಸಹಾಯ ವೇದಿಕೆಯಲ್ಲಿ ಮೇಲಿಂದಮೇಲೆ ಕೇಳಲಾದ ಪ್ರಶ್ನೆಯೆಂದರೆ ಹಳೆ ವಿನ್ಯಾಸವನ್ನು ಮತ್ತೆ ಬಳಕೆಗೆ ತರುವುದು ಹೇಗೆ, ಜೊತೆಗೆ ಇದರ ಪರಿಣಾಮವಾಗಿ ಗೂಗಲ್ ಉತ್ಪನ್ನ ಸಲಹಾ ಪುಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಲಕ್ಷಣಗಳ ಬಗ್ಗೆ ಸೂಚನೆಗಳು ಬಂದಿದ್ದವು. ಇತರ ಪರಿಹಾರಗಳು ಆಗ ಚಾಲ್ತಿಗೆ ಬಂದವು, ಈ ಪರಿಹಾರಗಳಿಗೆ ಗ್ರೀಸ್ ಮಂಕಿ ಲಿಪಿಗಳು ಅಥವಾ ಬುಕ್ ಮಾರ್ಕ್ಲೆಟ್ ಗಳನ್ನು ಸೇರಿಸುವ ಅಗತ್ಯವಿತ್ತು.[೧೩]

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ Mills, Elinor (2007-05-01). "Welcome to iGoogle". ZDNet Australia. Archived from the original on 2010-02-14. Retrieved 2009-09-28. The search giant is renaming and adding new features to Google Personalized Home Page [...] iGoogle, as it will be called in a few hours, was the fastest growing product at the company last year [...]
  2. Gray, Jessica (10/18/2007). "iGoogle in 42 languages". Retrieved 2008-03-19. {{cite web}}: Check date values in: |date= (help)
  3. "Google Web Search Help Center". Archived from the original on 2007-03-12. Retrieved 2007-06-17.
  4. 4/11
  5. Quittner, Josh (April 30, 2008). "Google's Art of War — With Facebook". Time. Archived from the original on ಫೆಬ್ರವರಿ 10, 2011. Retrieved ಫೆಬ್ರವರಿ 18, 2011.
  6. Liedtke, Michael (April 30, 2007). "Google dubs personal home page 'iGoogle'". MSNBC. Archived from the original on 2007-12-25. Retrieved 2008-07-25.
  7. "ಐಗೂಗಲ್ ಕಲಾವಿದರ ವಿಷಯಗಳು". Archived from the original on 2009-10-28. Retrieved 2011-02-18.
  8. "ಪ್ರಯೋಗಾತ್ಮಕ ಐಗೂಗಲ್ ಲಕ್ಷಣಗಳು". Archived from the original on 2008-12-12. Retrieved 2011-02-18.
  9. Williams, Chris (1 September 2008), iGoogle personalises personal pages on other people's behalf, The Register
  10. The New iGoogle, Publicly Launched, Thursday, October 16, 2008 {{citation}}: Check date values in: |date= (help)
  11. Quist, Jake (October 16, 2008), Big Canvas, Big Opportunity, iGoogle Developer Blog
  12. Claburn, Thomas (October 17, 2008). "iGoogle Users iRate About Portal's Changes". InformationWeek. Archived from the original on 2008-11-03. Retrieved 2008-12-16.
  13. Get Rid of Left Navigation in iGoogle, Thursday, October 16, 2008, archived from the original on ನವೆಂಬರ್ 22, 2009, retrieved ಫೆಬ್ರವರಿ 18, 2011 {{citation}}: Check date values in: |date= (help)

ಬಾಹ್ಯ ಕೊಂಡಿಗಳು ಬದಲಾಯಿಸಿ

[] [zh:ಐಗೂಗಲ್]

"https://kn.wikipedia.org/w/index.php?title=ಐಗೂಗಲ್&oldid=1084256" ಇಂದ ಪಡೆಯಲ್ಪಟ್ಟಿದೆ